ಗೋಕಾಕ: ಕರ್ನಾಟಕ ಸರಕಾರದ ನೂತನ ಸಚಿವ ಸಂಪುಟದಲ್ಲಿ ಸಂಪುಟ ದರ್ಜೆಯ ಸಚಿವರಾಗಿ ಗುರುವಾರದಂದು ಪ್ರಮಾಣ ವಚನ ಸ್ವೀಕರಿಸಿದ ನೂತನ ಸಚಿವ ರಮೇಶ ಜಾರಕಿಹೊಳಿ ಅವರು ರವಿವಾರದಂದು ಗೋಕಾಕ ನಗರಕ್ಕೆ ಆಗಮಿಸಲಿದ್ದಾರೆ. ರವಿವಾರದಂದು ಮುಂಜಾನೆ 10.30ಕ್ಕೆ ಹೆಲಿಕಾಪ್ಟರ್ ಮುಖಾಂತರ ಬೆಂಗಳೂರಿನಿಂದ ಗೋಕಾಕ ನಗಕ್ಕೆ ಆಗಮಿಸುವ ಸಚಿವ ರಮೇಶ ಜಾರಕಿಹೊಳಿ ಅವರು, ಹ್ಯಾಲಲಿಪ್ಯಾಡ್ನಿಂದ ನಗರದ ಶ್ರೀ ಲಕ್ಷ್ಮೀ ದೇವಸ್ಥಾನಕ್ಕೆ ಪೂಜೆ ಸಲ್ಲಿಸಿ, ಕ್ಷೇತ್ರದ ಮತದಾರರು, ಅಭಿಮಾನಿಗಳು ಹಾಗೂ ಕಾರ್ಯಕರ್ತರು ಹಮ್ಮಿಕೊಂಡಿರುವ ಸತ್ಕಾರ ಸಮಾರಂಭಕ್ಕೆ …
Read More »ನಗರದಲ್ಲಿ ಸಾಂಸ್ಕೃತಿಕ ಹಬ್ಬದ ಕಳೆ ಕಟ್ಟಿದೆ
ಗೋಕಾಕ: ನಗರದಲ್ಲಿ ಸಾಂಸ್ಕೃತಿಕ ಹಬ್ಬದ ಕಳೆ ಕಟ್ಟಿದೆ. ಬೆಂಗಳೂರು ಅರಮನೆ ತಲೆ ಎತ್ತಿ ನಿಂತಿದ್ದು, ಸಾಂಸ್ಕೃತಿಕ ಅಭಿಮಾನಿಗಳಿಗೆ ಕೈ ಬೀಸಿ ಕರೆಯುತ್ತಿದೆ. ಇಲ್ಲಿನ ಮಹರ್ಷಿ ವಾಲ್ಮೀಕಿ ಕ್ರೀಡಾಂಗಣದಲ್ಲಿ ಫೆ. 8 ಮತ್ತು 9 ರಂದು ಸತೀಶ ಜಾರಕಿಹೊಳಿ ಪೌಂಡೇಶನ್ ಪ್ರಾಯೋಜಕತ್ವದಲ್ಲಿ 19 ನೇ ಸತೀಶ ಶುಗರ್ಸ್ ಅವಾರ್ಡ್ಸ್ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ಸ್ಪರ್ಧಾರ್ಥಿಗಳಿಗಾಗಿ ಬೆಂಗಳೂರು ಅರಮನೆ ಮಾದರಿ ವೇದಿಕೆ ಕಂಗೊಳಿಸುತ್ತಿದ್ದೆ. ಪ್ರತಿ ವರ್ಷ ಹೊಸತನದಿಂದ ವೇದಿಕೆ ಸಿದ್ದಗೊಳಿಸುವ ಸತೀಶ ಶುಗರ್ಸ್ …
Read More »10 ಮಂದಿ ಸಚಿವರಿಗೆ ಸಿಎಂ ಯಡಿಯೂರಪ್ಪ ಸಲಹೆ ಖಾತೆಗಳ ಬಗ್ಗೆ ಮಾಧ್ಯಮಗಳ ಮುಂದೆ ಬೇಡಿಕೆ ಇಡಬೇಡಿ. ಹೈಕಮಾಂಡ್ ಜೊತೆ ಚರ್ಚಿಸಿ ಖಾತೆಗಳನ್ನು ಅಂತಿಮ
ಬೆಂಗಳೂರು: ಪ್ರಮಾಣ ವಚನ ಸ್ವೀಕರಿಸಿದ ನೂತನ 10 ಮಂದಿ ಸಚಿವರಿಗೆ ಸಿಎಂ ಯಡಿಯೂರಪ್ಪ ಸಲಹೆಗಳನ್ನು ನೀಡಿದ್ದಾರೆ. ನೂತನ ಸಚಿವರ ಜೊತೆ ಸಂಪುಟ ಕೊಠಡಿಯಲ್ಲಿ ಸಭೆ ನಡೆಸಿದ ಯಡಿಯೂರಪ್ಪ ಆರಂಭದಲ್ಲಿ ಅಭಿನಂದನೆ ತಿಳಿಸಿ ಸರ್ಕಾರ ಮತ್ತು ಪಕ್ಷದಲ್ಲಿ ಯಾವ ರೀತಿ ಇರಬೇಕೆಂಬ ಬಗ್ಗೆ ಸಿಎಂ ಪಾಠ ಮಾಡಿದ್ದಾರೆ. ನಿಮ್ಮನ್ನು ಮಂತ್ರಿ ಮಾಡುತ್ತೇನೆ ಎಂದು ಹೇಳಿದ ಭರವಸೆಯನ್ನು ಈಡೇರಿಸಿದ್ದೇನೆ. ಆದರೆ ಖಾತೆಗಾಗಿ ನೀವು ಸ್ವಲ್ಪ ಕಾಯಬೇಕು. ಖಾತೆಗಳ ಬಗ್ಗೆ ಮಾಧ್ಯಮಗಳ ಮುಂದೆ ಬೇಡಿಕೆ ಇಡಬೇಡಿ. …
Read More »: ಉಪಚುನಾವಣೆಯಲ್ಲಿ ಗೆದ್ದ 11 ಶಾಸಕರ ಪೈಕಿ ಮಹೇಶ್ ಕುಮಟಳ್ಳಿಯವರನ್ನು ಹೊರತುಪಡಿಸಿ ಉಳಿದ 10 ಶಾಸಕರು ಇಂದು ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಬೆಂಗಳೂರು: ಉಪಚುನಾವಣೆಯಲ್ಲಿ ಗೆದ್ದ 11 ಶಾಸಕರ ಪೈಕಿ ಮಹೇಶ್ ಕುಮಟಳ್ಳಿಯವರನ್ನು ಹೊರತುಪಡಿಸಿ ಉಳಿದ 10 ಶಾಸಕರು ಇಂದು ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇದರ ಬೆನ್ನಲ್ಲೇ ಅಸಮಾಧಾನ ವ್ಯಕ್ತಪಡಿಸಿರುವ ಕುಮಟಳ್ಳಿ ಪಕ್ಷದ ನಿರ್ಧಾರದಿಂದ ಬೇಸರವವಾಗಿದೆ. ಆದರೆ, ಅವರ ನಿರ್ಧಾರಕ್ಕೆ ಬದ್ಧನಾಗಿರುತ್ತೇನೆ ಎಂದಿದ್ದಾರೆ. ನನಗೆ ಮಂತ್ರಿಸ್ಥಾನ ತಪ್ಪಲು ಕಾರನ ಏನಿರಬಹುದು ಎಂಬಿತ್ಯಾದಿ ವಿವರವನ್ನು ಯಡಿಯೂರಪ್ಪನವರ ಭೇಟಿ ನಂತರ ತಿಳಿಸುತ್ತೇನೆ. ಮಂತ್ರಿ ಸ್ಥಾನ ನೀಡುವುದಾಗಿ ಮಾತು ಕೊಟ್ಟಿದ್ದ ಯಡಿಯೂರಪ್ಪ ಕೈ ಬಿಟ್ಟಿದ್ದಾರೆ. ಮಂತ್ರಿ …
Read More »ಕೇಂದ್ರ ಬಜೆಟ್ ನಲ್ಲಿ ಬೆಳಗಾವಿ-ಧಾರವಾಡ ರೈಲು ಯೋಜನೆಗೆ ಅಸ್ತು
ಬೆಳಗಾವಿ: ಬೆಳಗಾವಿ-ಧಾರವಾಡ ನಡುವೆ ನೇರ ರೈಲು ಓಡಿಸಬೇಕು ಎನ್ನುವ ಹಲವು ದಶಕಗಳ ಬೇಡಿಕೆ ಸಾಕಾರಗೊಳ್ಳುವ ಕಾಲ ಈಗ ಕೂಡಿ ಬಂದಿದೆ. ಸೋಮವಾರ ಲೋಕಸಭೆಯಲ್ಲಿ ಮಂಡಿಸಿದ ಕೇಂದ್ರ ಬಜೆಟ್ ನಲ್ಲಿ ಹಣಕಾಸು ಸಚಿವೆ ನಿಮ೯ಲಾ ಸೀತಾರಾಮನ್ ಅವರು ಈ ಯೋಜನೆಗಾಗಿ ರೂ.988 ಕೋಟಿ ಅನುದಾನವನ್ನು ನೀಡಲು ಒಪ್ಪಿಗೆ ಸೂಚಿಸಿದ್ದು, ಈ ಮೂಲಕ ಬೆಳಗಾವಿ ಮತ್ತು ಧಾರವಾಡ ಜಿಲ್ಲೆಯ ಜನರ ಹಲವಾರು ವಷ೯ಗಳ ಕನಸು ನನಸಾಗಲು ಹಸಿರು ನಿಶಾನೆ ತೋರಿದ್ದಾರೆ. ತಿಂಗಳ ಹಿಂದಷ್ಟೇ ನೈರುತ್ಯ …
Read More »ಸಂಪುಟ ದರ್ಜೆಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ 10 ‘ಅರ್ಹ’ ಶಾಸಕರು
ಬೆಂಗಳೂರು,ಫೆ.6 – ಅಂತೂ ಇಂತೂ ಬಹುನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆ ನಡೆದಿದ್ದು, ಮೂಲ ಹಾಗೂ ವಲಸಿಗರ ಸಂಘರ್ಷದ ನಡುವೆಯೂ ಉಪಚುನಾವಣೆಯಲ್ಲಿ ಗೆದ್ದಿದ್ದ 10 ಮಂದಿ ಶಾಸಕರು ಸಂಪುಟ ದರ್ಜೆಯ ಸಚಿವರಾಗಿ ಇಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ರಾಜಭವನದ ಗಾಜಿನ ಮನೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಕಾರ್ಯಾಂಗದ ಮುಖ್ಯಸ್ಥರಾಗಿರುವ ರಾಜ್ಯಪಾಲ ವಿ.ಆರ್.ವಾಲಾ ಅವರು ನೂತನ ಸಚಿವರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಕಳೆದ ಡಿಸೆಂಬರ್ನಲ್ಲಿ ನಡೆದ ಉಪಚುನಾವಣೆಯಲ್ಲಿ ಗೆದ್ದಿದ್ದ 10 ಶಾಸಕರು ಇಂದು …
Read More »ಆಟಕ್ಕುಂಟು-ಲೆಕ್ಕಕ್ಕಿಲ್ಲ ಇದೇನು ವಿಪರ್ಯಾಸವೇ? ಕಟು ಸತ್ಯವೇ? ಈಗ ಸ್ಪಷ್ಟ ಹೇಳುವುದಿಷ್ಟೇ. ಕಾಲಾಯ ತಸ್ಮೈಯ್ ನಮಃ. :ಆನಂದ್ ಮಾಮನಿ
ಬೆಂಗಳೂರು, ಫೆ.4- ಆಟಕ್ಕುಂಟು-ಲೆಕ್ಕಕ್ಕಿಲ್ಲ ಇದೇನು ವಿಪರ್ಯಾಸವೇ? ಕಟು ಸತ್ಯವೇ? ಈಗ ಸ್ಪಷ್ಟ ಹೇಳುವುದಿಷ್ಟೇ. ಕಾಲಾಯ ತಸ್ಮೈಯ್ ನಮಃ. ಬೆಳಗಾವಿ ಜಿಲ್ಲೆ ಸವದತ್ತಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಆನಂದ್ ಮಾಮನಿ ಮಾಡಿರುವ ಟ್ವೀಟ್ ಇದು. ಪಕ್ಷದ ನಿಷ್ಠಾವಂತರನ್ನು ಕಡೆಗಣಿಸಿ ಕೆಲವರಿಗೆ ಮಣೆ ಹಾಕುತ್ತಿರುವುದಕ್ಕೆ ಅಸಮಾಧಾನ ವ್ಯಕ್ತವಾಗುತ್ತಿದೆ.mla# ಇದೇ ಸಂದರ್ಭದಲ್ಲಿ ಆನಂದ್ ಮಾಮನಿ ಮಾಡಿರುವ ಈ ಟ್ವೀಟ್ ಸಾಕಷ್ಟು ಗೂಡಾರ್ಥವನ್ನು ನೀಡಿದೆ. ಸಾಮಾನ್ಯವಾಗಿ ಎಂದೂ ಬಹಿರಂಗವಾಗಿ ಮಾತನಾಡದೆ ಪಕ್ಷದ ಚೌಕಟ್ಟಿನಲ್ಲೇ ಇರುವ ಆನಂದ್ …
Read More »ಬಿಜೆಪಿ ಎಂಪಿಗಳಿಗೆ ಕೇಂದ್ರ ಸರ್ಕಾರದಲ್ಲಿ ಮಾತನಾಡುವ ಧಮ್ ಇಲ್ಲ ಎಂದು ಮಾಜಿ ಗೃಹ ಸಚಿವ, ಕಾಂಗ್ರೆಸ್ ನಾಯಕ ರಾಮಲಿಂಗಾರೆಡ್ಡಿ
ಬಂಗಾರಪೇಟೆ, ಫೆ.4- ದೇಶದಲ್ಲಿ ಕೇಂದ್ರ ಸರ್ಕಾರ ಸರಿಯಾಗಿ ಬೆಂಬಲ ನೀಡುತ್ತಿಲ್ಲ. ಬಿಜೆಪಿ ಎಂಪಿಗಳಿಗೆ ಕೇಂದ್ರ ಸರ್ಕಾರದಲ್ಲಿ ಮಾತನಾಡುವ ಧಮ್ ಇಲ್ಲ ಎಂದು ಮಾಜಿ ಗೃಹ ಸಚಿವ, ಕಾಂಗ್ರೆಸ್ ನಾಯಕ ರಾಮಲಿಂಗಾರೆಡ್ಡಿ ಟೀಕಿಸಿದರು. ಕಾಮಸಮುದ್ರಂನಲ್ಲಿ ನೂತನವಾಗಿ ನಿರ್ಮಾಣ ಮಾಡಿರುವ ಗಂಗಮ್ಮ ದೇವಸ್ಥಾನಕ್ಕೆ ಭೇಟಿ ನೀಡುವ ಮುಂಚೆ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಸಕ್ತ ಕೇಂದ್ರ ಬಡ್ಜೆಟ್ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿ ಬಿಜೆಪಿ ಸದಸ್ಯರ ವಿರುದ್ದ ಅಸಮಧಾನ ಹೊರಹಾಕಿದರು. ರಾಜ್ಯದಲ್ಲಿ 25 ಅಭ್ಯರ್ಥಿಗಳನ್ನು …
Read More »ಯಡಿಯೂರಪಪ್ಪಾ ಜಿ ಯವರ ಮಹತ್ವಾಕಾಂಕ್ಷೆ ಭಾಗ್ಯಲಕ್ಷೀ ಯೋಜನೆಯ ಮೂರು ಫಲಾನುಭವಿಗಳಿಗೆ ಭಾಗ್ಯಲಕ್ಷೀ ಬಾಂಡ್ ವಿತರಿಸಿದರು.
ಹದಿನಾಳ ನಿಪ್ಪಾಣಿ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಹದಿನಾಳ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆ ಅಪೆಂಡಿಕ್ಸ-ಇ ಗ್ರಾಮ ಪರಿಮಿತಿ ಯೋಜನೆಯಡಿ ಹದಿನಾಳ ಅಪ್ಪಾಚಿವಾಡಿಯಿಂದ ರಾ.ಹೆ -4 ಕೂಡು ರಸ್ತೆ ಕಿ.ಮೀ ನಂ.1 20 ರಿಂದ 2.50 ವರೆಗೆ ಹಾಗೂ ಭಾವೇಶ್ವರಿ ಮಂದಿರದಿಂದ ನಾಗನಾಥವಾಡಿ ವರೆಗೆ ಸುಮಾರು 1 ಕೋಟಿ 92 ಲಕ್ಷ ರೂಗಳ ಮೊತ್ತದಲ್ಲಿ ರಸ್ತೆ ಅಗಲೀಕರಣ ಹಾಗೂ ಸುಧಾರಣೆಗೆ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ …
Read More »ನಿಷ್ಠಾವಂತರಾಗಿ ದುಡಿದು ಸಾಕಷ್ಟು ಬಾರಿ ಶಾಸಕರಾದರೂ ಲೆಕ್ಕಕ್ಕಿಲ್ಲ :ಆನಂದ್ ಮಾಮನಿ
ಸವದತ್ತಿ: ಫೆ.6ರಂದು ರಾಜ್ಯ ಸಚಿವ ಸಂಪುಟಗೆ ಮುಹೂರ್ತ ಫಿಕ್ಸ್ ಆಗಿದ್ದು, ಈಗಾಗಲೇ ಬಿಜೆಪಿ ಶಾಸಕರು ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ. ಸವದತ್ತಿ ಶಾಸಕ ಆನಂದ್ ಮಾಮನಿ, ಹೊಸದಾಗಿ ಪಕ್ಷ ಸೇರಿ ಮಂತ್ರಿಯಾಗುವವರೆದುರಿಗೆ, ಪಕ್ಷಕ್ಕೆ ಅಡಿಪಾಯ ಹಾಕಿ, ಕಟ್ಟಿ, ನಿಷ್ಠಾವಂತರಾಗಿ ದುಡಿದು ಸಾಕಷ್ಟು ಬಾರಿ ಶಾಸಕರಾದರೂ ಲೆಕ್ಕಕ್ಕಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಸರಣಿ ಟ್ವೀಟ್ ಮೂಲಕ ಒಂದು ರೀತಿಯಲ್ಲಿ ಬಂಡಾಯದ ಬಾವುಟ ಹಾರಿಸಿರುವ ಆನಂದ್ ಮಾಮನಿ, ಬಿಜೆಪಿ ಮೇಲಿಟ್ಟಿರುವ ಕ್ಷೇತ್ರದ ಜನತೆಯ …
Read More »