ಬೆಳಗಾವಿ: ರಸ್ತೆ ಬದಿ ಹಾಗೂ ತೋಟದ ಮನೆಗಳ ಬಳಿ ನಿಲ್ಲಿಸಿದ್ದ ಟ್ರ್ಯಾಕ್ಟರ್ ಟ್ರೇಲರ್‌ಗಳ ಡಿಸ್ಕ್ ಸಮೇತ ಚಕ್ರಗಳನ್ನು ಕದಿಯುತ್ತಿದ್ದ ಆರೋಪದ ಮೇಲೆ ಏಳು ಮಂದಿಯನ್ನು ಶುಕ್ರವಾರ ಬಂಧಿಸಿರುವ ಖಡಕಲಾಟ ಠಾಣೆ ಪೊಲೀಸರು, ಅವರಿಂದ ₹ 8.61 ಲಕ್ಷ ಮೌಲ್ಯದ ಸಾಮಗ್ರಿಗಳನ್ನು ವಶಕ್ಕೆ ಪಡೆದಿದ್ದಾರೆ. ನಿಪ್ಪಾಣಿ ತಾಲ್ಲೂಕು ಗಳತಗಾದ ಮಾರುತಿ ಠೊಣ್ಣೆ, ಮಹಾದೇವ ಮಾಕಾಳೆ, ಬಾಬು ಡಾಲೆ, ಶಿವಾನಂದ ಗಜಬರ, ಖಾನಾಪುರ ತಾಲ್ಲೂಕು ಕಕ್ಕೇರಿಯ ಸಂಜು ಅಂಬಡಗಟ್ಟಿ ಶ್ರಾವಣ ಹುಲಮನಿ ಹಾಗೂ ಘಷ್ಟೊಳಿ …
Read More »ಬೆಳಗಾವಿ ಜಿಲ್ಲಾ ಮಧ್ಯವರ್ತಿ ಬ್ಯಾಂಕ್D.C.C. ಚುನಾವಣೆ ಮುಹೂರ್ತ ಫಿಕ್ಸ್
ಬೆಳಗಾವಿ: ರಾಜ್ಯ ರಾಜಕಾರಣವನ್ನೇ ಅಲ್ಲಾಡಿಸಿರುವ ಬೆಳಗಾವಿ ಪಿಎಲ್ ಡಿ ಬ್ಯಾಂಕ್ ಚುನಾವಣೆಯ ನೆನಪು ಮಾಸುವ ಮುನ್ನವೇ ಕರ್ನಾಟಕ ರಾಜ್ಯ ರಾಜಕಾರಣವನ್ನೇ ಅಲ್ಲಾಡಿಸುವಷ್ಟು ಪ್ರಬಲವಾಗಿರುವ ಬೆಳಗಾವಿ ಜಿಲ್ಲಾ ಮಧ್ಯವರ್ತಿ ಬ್ಯಾಂಕ್ (ಡಿಸಿಸಿ) ಚುನಾವಣೆ ಮುಹೂರ್ತ ಫಿಕ್ಸ್ ಆಗಿದೆ.ನವೆಂಬರ್ 6ರಂದು ಬೆಳಗಾವಿ ಜಿಲ್ಲಾ ಮಧ್ಯವರ್ತಿ ಬ್ಯಾಂಕ್ ಚುನಾವಣೆ ನಡೆಯಲಿದೆ. ಆಗಸ್ಟ್ ತಿಂಗಳಲ್ಲಿ ನಡೆಯಬೇಕಿದ್ದ ಚುನಾವಣೆಯನ್ನು ಕೊರೋನಾ ಹಿನ್ನೆಲೆಯಲ್ಲಿ ಮುಂದೂಡಲಾಗಿತ್ತು. ಮಾಜಿ ಸಂಸದ ರಮೇಶ ಕತ್ತಿ ಹಾಲಿ ಅಧ್ಯಕ್ಷರು. ಅವರು ಮತ್ತೊಮ್ಮೆ ಬ್ಯಾಂಕ್ ಮೇಲೆ ಹಿಡಿತ …
Read More »ಹೈಕಮಾಂಡ್ ಒಪ್ಪಿಗೆ ಸೂಚಿಸದ್ರೇ.. ದೆಹಲಿಯಿಂದ ಹಿಂದುರಿಗಿದ ನಂತ್ರ ಸಂಪುಟ ಪುನರ್ ರಚನಯಾಗಲಿದೆ: ಲಕ್ಷ್ಮಣ್ ಸವದಿ,
ಬೆಳಗಾವಿ: ಉಪ ಮುಖ್ಯಮಂತ್ರಿ ಲಕ್ಷ್ಮಣ್ ಸವದಿ, ಸಚಿವ ಸಂಪುಟ ವಿಸ್ತರಣೆ ಬಗ್ಗೆ ಬೆಳಗಾವಿಯಲ್ಲಿ ಸುಳಿವು ಬಿಟ್ಟುಕೊಟ್ಟಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಕ್ಕೆ ಬರಬೇಕಿರುವ ಹೆಚ್ಚುವರಿ ಅನುದಾನ ಬಿಡುಗಡೆ ಸಂಬಂಧ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮ್ ಅವರನ್ನು ಭೇಟಿಯಾಗಲಿದ್ದಾರೆ. ಜೊತೆಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಜೊತೆಗೂ ಸಮಾಲೋಚನೆ ನಡೆಸಲಿದ್ದಾರ. ಬಿಜೆಪಿ ರಾಷ್ಟ್ರೀಯ ನಾಯಕರನ್ನು ಭೇಟಿಯಾಗಿ ಮಂತ್ರಿ ಮಂಡಲ ವಿಸ್ತರಣೆ ಹಾಗೂ ಪುನರ್ ವಿಂಗಡಣೆ ಕುರಿತಂತೆ ಸಮಾಲೋಚನೆ ನಡೆಸಲಿದ್ದಾರೆ. ಒಂದು …
Read More »ಚಾಲಕನ ನಿಯಂತ್ರಣ ತಪ್ಪಿ ಬೈಕ್‍ಗೆ ಡಿಕ್ಕಿ ಹೊಡೆದು ಅಂಬುಲೆನ್ಸ್………
ಚಿಕ್ಕೋಡಿ/ಬೆಳಗಾವಿ: ಚಾಲಕನ ನಿಯಂತ್ರಣ ತಪ್ಪಿ ಬೈಕ್‍ಗೆ ಡಿಕ್ಕಿ ಹೊಡೆದು ಅಂಬುಲೆನ್ಸ್ ಪಲ್ಟಿಯಾಗಿದ್ದು, ಬೈಕ್ ಹಿಂಬದಿ ಸವಾರ ಹಾಗೂ ಅಂಬುಲೆನ್ಸ್‍ನಲ್ಲಿದ್ದ ಕೊರೊನಾ ಸೋಂಕಿತ ವ್ಯಕ್ತಿ ಸಾವನ್ನಪ್ಪಿದ್ದಾರೆ.ಬೆಳಗಾವಿ ಜಿಲ್ಲೆಯ ಹುಕ್ಕೇರಿ ಹೊರವಲಯದ ಬೆಲ್ಲದ ಬಾಗೇವಾಡಿ ರಸ್ತೆಯಲ್ಲಿ ಅಪಘಾತ ಸಂಭವಿಸಿದೆ. ಅಥಣಿ ಖಾಸಗಿ ಆಸ್ಪತ್ರೆಯಿಂದ ಬೆಳಗಾವಿಗೆ ಹೊರಟಿದ್ದ ಅಂಬುಲೆನ್ಸ್ ಪಲ್ಟಿಯಾಗಿದೆ. ಚಾಲಕನ ನಿಯಂತ್ರಣ ತಪ್ಪಿ ಬೈಕ್‍ಗೆ ಡಿಕ್ಕಿ ಹೊಡೆದು ಅಂಬುಲೆನ್ಸ್ ಪಲ್ಟಿಯಾಗಿದ್ದು, ಅಂಬುಲೆನ್ಸ್ ನಲ್ಲಿದ್ದ ಕೊರೊನಾ ಸೋಂಕಿತ ವ್ಯಕ್ತಿ ಹಾಗೂ ಬೈಕ್ ಹಿಂಬದಿ ಸವಾರ …
Read More »ಗೋಕಾಕ ತಾಲ್ಲೂಕಿನ ಹಿರೇನಂದಿ ಹಾಗೂ ಚಿಕ್ಕನಂದಿ ಗ್ರಾಮಪಂಚಾಯತಿಯಲ್ಲಿ ರಾಷ್ಟ್ರೀಯ ಪೋಷಣ ಅಭಿಯಾನ ಮಾಸಾಚಾರಣೆ ಮಾಡಿದರು.
ಗೋಕಾಕ್ ತಾಲ್ಲೂಕಿನ ಮಮದಾಪುರ ವಲಯದಿಂದ ಇಂದು ಗ್ರಾಮ ಪಂಚಾಯಿತಿ ಯಲ್ಲಿ ನಗರದ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೆರಿ ಇವರ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಪೋಷಣ ಅಭಿಯಾನ ಕಾರ್ಯಕ್ರಮದಡಿ ಪೋಷಣ ರಥ ಕಾರ್ಯಕ್ರಮ ಆಚರಿಸಲಾಯಿತು. ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಅನಿಲ ಕಾಂಬಳೆ ಮತ್ತು ಮಮದಾಪುರ ವಲಯದ ಮೇಲ್ವಿಚಾರಕಿರಾದ N y ವಡ್ಡರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಪೋಷಣ ಅಭಿಯಾನ ಯೋಜನೆ ಅತ್ಯಂತ ಪ್ರಮುಖವಾದ ಯೋಜನೆಯಾಗಿದೆ. ಮಕ್ಕಳ ಬೆಳವಣಿಗೆಗೆ ಮತ್ತು ಏಳಿಗೆಗೆ …
Read More »ನಮ್ಮಗೆ ವೀರಶೈವ ಲಿಂಗಾಯತ ಜಾತಿ ಪ್ರಮಾಣ ಪತ್ರ ಬೇಡಾ ಲಿಂಗಾಯತ ಪ್ರಮಾಣ ಪತ್ರ ನೀಡಿ ಎಂದು ತಹಸೀಲ್ದಾರ್ ಮೂಲಕ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.
ಗೊಕಾಕದಲ್ಲಿ ಲಿಂಗಾಯತ ಸಮುದಾಯಕ್ಕೆ ವೀರಶೈವ ಲಿಂಗಾಯತ ಪ್ರಮಾಣ ಪತ್ರ ನೀಡುವುದನ್ನು ವಿರೋದಿಸಿ ಶೂನ್ಯ ಸಂಪಾದನಮಠದ ಸ್ವಾಮಿಗಳಾದ ಪೀಠಾದಿಪತಿಗಳಾದ ಶ್ರೀ ಮುರುಘರಾಜೇಂದ್ರ ಇವರ ನೇತೃತ್ವದಲ್ಲಿ ಗೋಕಾಕದ ಬಸವೇಶ್ವರ ವೃತ್ತದಿಂದ ಪಾದಯಾತ್ರೆ ಮಾಡುವ ಮೂಲಕ ತೆರಳಿ ತಹಸಿಲ್ದಾರರಿಗೆ ಮನವಿ ನೀಡಿ ಸನ್ 2002 ರವರೆಗೆ ಕಂದಾಯ ಇಲಾಖೆಯಿಂದ ಲಿಂಗಾಯತ ಜಾತಿ ಪ್ರಮಾಣ ಪತ್ರ ನೀಡುತಿದ್ದರು, ಆದರೆ ಕೆಲವು ಮಠಾದಿಶರ ಒತ್ತಾಯಕ್ಕೆ ಮಣಿದು ಸರಕಾರ ವೀರಶೈವ ಎಂಬ ಪದವನ್ನು ಸೇರಿಸಿ ಲಿಂಗಾಯತ ಸಮುದಾಯಕ್ಕೆ …
Read More »ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ತಾಯಿ-ಮಗ
ಬೆಳಗಾವಿ : ತಾಯಿ, ಮಗ ಇಬ್ಬರೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಬೆಳಗಾವಿ ತಾಲೂಕಿನ ಹಲಗಾ ಗ್ರಾಮದಲ್ಲಿ ಇಂದು(ಗುರುವಾರ) ನಡೆದಿದೆ. ತಾಯಿ ಭಾರತಿ ಗರಾಣಿ(36), ಮಗ ಪ್ರಜ್ವಲ್(15) ಎಂಬುವರೇ ನೇಣಿಗೆ ಶರಣಾದ ದುರ್ದೈವಿಗಳಾಗಿದ್ದಾರೆ. ಭಾರತಿ ಗರಾಣಿ ಅವರು ಹಲಗಾ ಗ್ರಾಮದಲ್ಲಿ ಬೇಕರಿಯೊಂದನ್ನ ನಡೆಸುತ್ತಿದ್ದರು ಎಂದು ತಿಳಿದು ಬಂದಿದೆ. ಬಿಬಿಎಂಪಿ ಕ್ಯಾಂಟೀನ್‌ನಲ್ಲಿ ತೀವ್ರ ನಷ್ಟ: ಮಾಲೀಕ ಆತ್ಮಹತ್ಯೆ ತಾಯಿ, ಮಗನ ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ …
Read More »ಶಿವಮೊಗ್ಗಕ್ಕೆ ಸೀಮಿತವಾಗಿರುವ ಮುಖ್ಯಮಂತ್ರಿ: ಕತ್ತಿ ಕಿಡಿ
ಬೆಳಗಾವಿ: ‘ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಅಖಂಡ ಕರ್ನಾಟಕದ ಬಗ್ಗೆ ಚಿಂತಿಸುತ್ತಿಲ್ಲ. ಕೇವಲ ಶಿವಮೊಗ್ಗ ಜಿಲ್ಲೆಗಷ್ಟೇ ಸೀಮಿತವಾಗಿದ್ದಾರೆ. ಉತ್ತರ ಕರ್ನಾಟಕದ ಅಭಿವೃದ್ಧಿ ಯೋಜನೆಗಳ ಬಗ್ಗೆ ಗಮನಕೊಡುತ್ತಿಲ್ಲ’ ಎಂದು ಹುಕ್ಕೇರಿ ಬಿಜೆಪಿ ಶಾಸಕ ಉಮೇಶ ಕತ್ತಿ ಕಿಡಿಕಾರಿದರು. ಗುರುವಾರ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು, ‘ಮುಖ್ಯಮಂತ್ರಿ ರಾಜ್ಯದ ಸಮಗ್ರ ಅಭಿವೃದ್ಧಿ ಬಗ್ಗೆ ಚಿಂತಿಸುತ್ತಿಲ್ಲ. ಇದರಿಂದ ಬಹಳ ನೋವಾಗಿದೆ. ಉತ್ತರ ಕರ್ನಾಟಕದ ಅಭಿವೃದ್ಧಿ ನನಗೆ ಮುಖ್ಯ. ಇದೆಲ್ಲವನ್ನೂ ಕೇಳಬೇಕೋ, ಬೇಡವೋ? ಕೂಗಾಟ ಮಾಡಬೇಕೋ, ಬೇಡವೋ?’ ಎಂದು …
Read More »ಅಥಣಿಯಲ್ಲಿ ಹಾಸು ಹೊಕ್ಕಾಗಿರುವ ಶರಣ ಸಂಸ್ಕೃತಿ: ಶಿವಬಸವ ಸ್ವಾಮೀಜಿ
ಅಥಣಿ: ‘ಇಲ್ಲಿ ಶರಣ ಸಂಸ್ಕೃತಿ ಹಾಸುಹೊಕ್ಕಾಗಿದೆ. ಹೊರಗಿನಿಂದ ಬಂದವರೆಲ್ಲರನ್ನೂ ತಮ್ಮವರೆಂದು ಪ್ರೀತಿ, ವಿಶ್ವಾಸ ಕೊಟ್ಟು ಜಾತಿ, ಮತವೆನ್ನದೆ ಎಲ್ಲರನ್ನೂ ಅಪ್ಪಿಕೊಳ್ಳುವ ಗುಣ ಈ ಮಣ್ಣಿನದಾಗಿದೆ’ ಎಂದು ಗಚ್ಚಿನ ಮಠದ ಶಿವಬಸವ ಸ್ವಾಮೀಜಿ ಹೇಳಿದರು. ಶೆಟ್ಟರ ಮಠದ ಮರುಳಸಿದ್ಧ ಸ್ವಾಮೀಜಿ ಅವರ 128ನೇ ಪುಣ್ಯಾರಾಧನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ‘ಭಾರತೀಯ ಆಹಾರ ಪದ್ಧತಿಯಲ್ಲಿ ದಿವ್ಯ ಔಷಧಿಗಳಿವೆ. ಆದಾಗ್ಯೂ ಎಲ್ಲರೂ ಮುನ್ನೆಚ್ಚರಿಕೆ ಕ್ರಮ ಅನುಸರಿಸಿ ಸೋಂಕಿನಿಂದ ದೂರವಿರಬೇಕು’ ಎಂದು ಸಲಹೆ ನೀಡಿದರು. …
Read More »ವಿಶ್ವಕರ್ಮ ಸಮುದಾಯ ಸಾಮಾಜಿಕ, ಆರ್ಥಿಕವಾಗಿ ಬೆಳೆಯಬೇಕು: ಸತೀಶ ಜಾರಕಿಹೊಳಿ.
ವಿಶ್ವಕರ್ಮ ಸಮುದಾಯ ಸಾಮಾಜಿಕ, ಆರ್ಥಿಕವಾಗಿ ಬೆಳೆಯಬೇಕು: ಸತೀಶ ಜಾರಕಿಹೊಳಿ ಬೆಳಗಾವಿ: ವಿಶ್ವಕರ್ಮ ಸಮುದಾಯದವರು ಸಾಮಾಜಿಕವಾಗಿ, ರಾಜಕೀಯವಾಗಿ ಮುಂದೆ ಬರಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ ಹೇಳಿ್ದರು. ಸಮೀಪದ ಹೊನಗಾ ಗ್ರಾಮದಲ್ಲಿ ಹಮ್ಮಿಕೊಂಡ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಯಾವುದೇ ಸಮುದಾಯ ಬೆಳೆಯಲು ಶಿಕ್ಷಣ ಪ್ರಾಮುಖ್ಯತೆ ವಹಿಸುತ್ತಿದೆ. ಹೀಗಾಗಿ ಮಕ್ಕಳನ್ನು ಶೈಕ್ಷಣಿಕವಾಗಿ ಬೆಳೆಸಬೇಕು ಎಂದ ಅವರು ಸಾಮಾಜಿಕ,ಆರ್ಥಿಕ ಮತ್ತು ರಾಜಕೀಯವಾಗಿ ಮುಂದೆ ಬರಬೇಕು ಎಂದರು. ಸಮುದಾಯದ …
Read More »