Breaking News

ಬೆಳಗಾವಿ

ಉತ್ತಮ ನಟ, ನಟಿ ಯಾರು? ಶಿವಣ್ಣ, ರಕ್ಷಿತ್ ಶೆಟ್ಟಿಗೆ ದಾದಾ ಸಾಹೇಬ್ ಫಾಲ್ಕೆ ಸೌತ್ ಪ್ರಶಸ್ತಿ

ನವದೆಹಲಿ: ಹೊಸ ವರ್ಷದ ಸಂಭ್ರಮದ ನಡುವೆ 2020ನೇ ಸಾಲಿನ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ದಕ್ಷಿಣ (ಸೌತ್) ಪ್ರಶಸ್ತಿ ಶನಿವಾರ(ಜನವರಿ 02) ಘೋಷಣೆಯಾಗಿದ್ದು, ಕನ್ನಡ ಚಿತ್ರರಂಗದ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್, ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣಗೆ ಈ ಪ್ರಶಸ್ತಿ ಲಭಿಸಿದೆ. ತಮಿಳು, ಮಲಯಾಳಂ, ತೆಲುಗು ಹಾಗೂ ಕನ್ನಡ ಸೇರಿದಂತೆ ನಾಲ್ಕು ಚಿತ್ರರಂಗದಲ್ಲಿನ ಪ್ರತಿಭಾವಂತ ನಟರನ್ನು ಗುರುತಿಸಿ ಈ ಫೌಂಡೇಶನ್ ಪ್ರಶಸ್ತಿಗೆ ಆಯ್ಕೆ ಮಾಡುತ್ತಿದೆ ಎಂದು ವರದಿ ತಿಳಿಸಿದೆ. ಈ ಬಾರಿ …

Read More »

ರೈತರ ಆದಾಯ ದ್ವಿಗುಣಕ್ಕೆ ಮೋದಿ ಸರ್ಕಾರದಿಂದ ಸಹಕಾರ : B.S.Y.

ಬೆಂಗಳೂರು, ಜ.2- ರೈತರ ಆದಾಯವನ್ನು ದ್ವಿಗುಣಗೊಳಿಸುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಆಶಯವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಪೂರಕ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದು ತಿಳಿಸಿದರು. ಇಂದು ಬಾಗಲಕೋಟೆ ತೋಟಗಾರಿಕಾ ವಿಶ್ವವಿದ್ಯಾಲಯ ಹಮ್ಮಿಕೊಂಡಿರುವ ತೋಟಗಾರಿಕಾ ಮೇಳವನ್ನು ಆನ್ ಲೈನ್ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದರು. ಸಿಎಫ್‍ಟಿಆರ್‍ಐ ಹಾಗೂ ಭಾರತೀಯ ತೋಟಗಾರಿಕಾ ಸಂಸ್ಥೆಯ ಸಹಭಾಗಿತ್ವದೊಂದಿಗೆ ತೋಟಗಾರಿಕಾ ಉತ್ಪನ್ನಗಳ ಮೌಲ್ಯವರ್ಧನೆ,  ಸಂಸ್ಕರಣೆ, ದಾಸ್ತಾನು ಮತ್ತು ಪ್ಯಾಕೇಜಿಂಗ್ ಗಳ …

Read More »

ಬೆಳಗಾವಿ ಗ್ರಾಮೀಣ ಕ್ಷೇತ್ರದ ಗ್ರಾಪಂ ಸದಸ್ಯರಿಂದ ಗೋಕಾಕ ಸಾಹುಕಾರರ ಭೇಟಿ

ಗೋಕಾಕ: ಬೆಳಗಾವಿ ಗ್ರಾಮೀಣ ಕ್ಷೇತ್ರದ ಗ್ರಾಮ ಪಂಚಾಯಿತಿಗಳಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಜಯಭೇರಿ ಬಾರಿಸಿರುವ ಬಿಜೆಪಿಯ ವೀರ ಸೇನಾನಿಗಳು ಶನಿವಾರ ಮುಂಜಾನೆ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರನ್ನು ಭೇಟಿಯಾಗುವ ಮೂಲಕ ಬಿಜೆಪಿಯ ಶಕ್ತಿ ಪದರ್ಶನ ನಡೆಸಿದರು. ಗೋಕಾಕನ ಗೃಹ ಕಚೇರಿಯಲ್ಲಿ ಗ್ರಾಮ ಪಂಚಾಯಿತಿ ನೂತನ ಸದಸ್ಯರು ಬಂದು ಸಚಿವ ರಮೇಶ ಜಾರಕಿಹೊಳಿ ಅವರ ಆಶೀರ್ವಾದ ಪಡೆದರು. ಗ್ರಾಮೀಣ ಭಾಗದಲ್ಲಿ ಬಿಜೆಪಿ ಮತ್ತಷ್ಟು ಬಲಗೊಂಡಿದೆ ಎಂದು ಸಚಿವರಿಗೆ ಮನವರಿಕೆ …

Read More »

ಯಮಕನಮರಡಿ ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಗುಂಡಿನ ದಾಳಿ ಕೇಸ್: ಆರೋಪಿ ಬಂಧನ ಪ್ರೀತಿಯ ವಿಚಾರಕ್ಕೆ ಗುಂಡಿನ ದಾಳಿ ಮಾಡಿದ ಆರೋಪಿ!

ಬೆಳಗಾವಿ: ಯಮಕನಮರಡಿಯಲ್ಲಿ ಡಿ. 16 ರಂದು ಕಾಂಗ್ರೆಸ ಕಾರ್ಯಕರ್ತರನ ಗುಂಡು ಹಾರಿಸಿದ ಪ್ರಕರಣ ಆರೋಪಿಯನ್ನು ಶುಕ್ರವಾರ ಪೊಲೀಸರು ಬಂಧಿಸಿದ್ದಾರೆ. ಗಣಪತಿ ಗಲ್ಲಿಯ ವಿನಾಯಕ ಹೊರಕೇರಿ ಬಂಧಿತ ಆರೋಪಿ. ಗ್ರಾಮ ಪಂಚಾಯಿತಿ ಚುನಾವಣೆ ಪ್ರಚಾರ ಮಾಡಿ ಗ್ರಾಮದ ಬಸದಿ ಕಟ್ಟೆ ಮೇಲೆ ಕುಳಿತುಕೊಂಡಿದ್ದ ವೇಳೆ ಭರಮಾ ದೂಪದಾಳಿ ಎಂಬ ಕಾಂಗ್ರೆಸ್ ಕಾರ್ಯಕರ್ತನ ಮೇಲೆ ವಿನಾಯಕ ಗುಂಡಿನ ದಾಳಿ ನಡೆಸಿದ್ದ.   ಈ ಸಂಬಂಧ ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆರೋಪಿಯನ್ನು …

Read More »

ಗೋಕಾಕ: ನಗರದ ಉಪ್ಪಾರ ಓಣಿಯ ಶ್ರೀ ಬಲಬೀಮ ದೇವರ ಕಾರ್ತಿಕೋತ್ಸವ

      ಗೋಕಾಕ: ನಗರದ ಉಪ್ಪಾರ ಓಣಿಯ ಶ್ರೀ ಬಲಬೀಮ ದೇವರ ಕಾರ್ತಿಕೋತ್ಸವ ದಿ. 2 ರಂದು ವಿಜೃಂಭಣೆಯಿಂದ ಜರುಗಲಿದೆ. ಮುಂಜಾನೆ 7.15 ಗಂಟೆಗೆ ಅಭಿಷೇಕ ಮತ್ತು ಪೂಜಾ ಕಾರ್ಯಕ್ರಮ, ಮಧ್ಯಾಹ್ನ 12.30 ಗಂಟೆಗೆ ಮಹಾಪ್ರಸಾದ, 7.25 ಗಂಟೆಗೆ ಮದ್ದು ಹಾರಿಸುವ ಕಾರ್ಯಕ್ರಮ ಜರುಗಲಿದೆ ಎಂದು ಕಮೀಟಿಯವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Read More »

ಕೌಜಲಗಿ ಅಶೋಕ ವಸಂತ ಉದ್ದಪ್ಪನವರ ಅವರು ಸತತವಾಗಿ 6ನೇ ಬಾರಿಗೆ ಹಾಗೂ ಮಕ್ತುಮ್‍ಸಾಬ ದಸ್ತಗೀರಸಾಬ ಖಾಜಿ ಅವರು 5ನೇ ಬಾರಿಗೆ ಜಯಭೇರಿ

ಗೋಕಾಕ: ತಾಲೂಕಿನ ಕೌಜಲಗಿ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಕೌಜಲಗಿ ಅರ್ಬನ್ ಬ್ಯಾಂಕಿನ ಅಧ್ಯಕ್ಷ ಹಾಗೂ ಜಿ.ಪಂ ಮಾಜಿ ಸದಸ್ಯ ಡಾ. ರಾಜೇಂದ್ರ ಸಣ್ಣಕ್ಕಿ ಅವರ ಗುಂಪಿನ ಗ್ರಾ. ಪಂ ಮಾಜಿ ಅಧ್ಯಕ್ಷರಾದ     ಅಶೋಕ ವಸಂತ ಉದ್ದಪ್ಪನವರ ಅವರು ಸತತವಾಗಿ 6ನೇ ಬಾರಿಗೆ ಹಾಗೂ ಮಕ್ತುಮ್‍ಸಾಬ ದಸ್ತಗೀರಸಾಬ ಖಾಜಿ ಅವರು 5ನೇ ಬಾರಿಗೆ ಜಯಭೇರಿ ಬಾರಿಸುವ ಮೂಲಕ ಗೆಲುವಿನ ನಾಗಾಲೋಟವನ್ನು ಮುಂದುವರೆಸಿದ್ದಾರೆ.

Read More »

ಸುಮಾರು.50.00000 ಲಕ್ಷ ರೂಪಾಯಿಗಳ ಅನುದಾನದ ಅಡಿಯಲ್ಲಿ. ಸನ್ಮಾನ ಶ್ರೀ ಬಾಲಚಂದ್ರ ಜಾರಕಿಹೊಳಿ

ಮೂಡಲಗಿ.ತಾಲೂಕಿನ ವಡೇರಹಟ್ಟಿ ಗ್ರಾಮದಲ್ಲಿ ಇಂದು SCP&TSP ಯೋಜನೆಯಡಿಯಲ್ಲಿ ವಡೇರಹಟ್ಟಿ ಮುಖ್ಯ ರಸ್ತೆಯಿಂದ TO ಪಾಂಡು ಮನ್ನಿಕೇರಿ ತೋಟದವರಗೆ.   ಸುಮಾರು.50.00000 ಲಕ್ಷ ರೂಪಾಯಿಗಳ ಅನುದಾನದ ಅಡಿಯಲ್ಲಿ. ಸನ್ಮಾನ ಶ್ರೀ ಬಾಲಚಂದ್ರ ಜಾರಕಿಹೊಳಿ ಶಾಸಕರು ಅರಬಾಂವಿ ಮತ್ತು ಸನ್ಮಾನ ಶ್ರೀ ಸತೀಶ್ ಜಾರಕಿಹೊಳಿ ಶಾಸಕರು ಯಮಕನಮರಡಿ ನಿದರ್ಶನ ಮೇರೆಗೆ ಆಪ್ತ ಸಹಾಯಕ ರಾದ ದಾಸಪ್ಪ ನಾಯ್ಕಿ.ಇವರಿಂದ ರಸ್ತೆ ಕಾಮಗಾರಿಗೆ ಪೂಜೆಯ ಮಾಡುವ ಮುಖಾಂತರ ಚಾಲನೆ ನೀಡಿದರು. ಇದೆ ಸಮಯದಲ್ಲಿ ಊರಿನ ಪ್ರಮುಖರಾದ. …

Read More »

ದೇಶದ ಎಲ್ಲಾ ರಾಜ್ಯಗಳಲ್ಲೂ ನಾಳೆಯಿಂದ ಕೊರೊನಾ ಲಸಿಕೆ ಡ್ರೈ ರನ್ ಆರಂಭ

ಬೆಂಗಳೂರು: ದೇಶದ ಎಲ್ಲಾ ರಾಜ್ಯಗಳಲ್ಲೂ ನಾಳೆಯಿಂದ ಕೊರೊನಾ ಲಸಿಕೆ ಡ್ರೈ ರನ್ ಆರಂಭವಾಗಲಿದ್ದು, ಬೆಳಗಾವಿ ಸೇರಿದಂತೆ ರಾಜ್ಯದ 5 ಜಿಲ್ಲೆಗಳಲ್ಲಿ ಲಸಿಕೆ ತಾಲೀನು ಆರಂಭವಾಗಲಿದೆ. ಬೆಂಗಳೂರಿನಲ್ಲಿ ಮಾತನಾಡಿದ ಆರೋಗ್ಯ ಸಚಿವ ಡಾ.ಸುಧಾಕರ್, ಬೆಳಗಾವಿ, ಬೆಂಗಳೂರು, ಮೈಸೂರು, ಶಿವಮೊಗ್ಗ ಹಾಗೂ ಕಲಬುರ್ಗಿಯಲ್ಲಿ ನಾಳೆಯಿಂದ ಕೊರೊನಾ ಲಸಿಗೆ ಡ್ರೈ ರನ್ ಆರಂಭವಾಗಲಿದೆ. ಬೆಂಗಳೂರಿನಲ್ಲಿ ವೀದ್ಯಾಪೀಠ, ಕಾಮಾಕ್ಷಿಪಾಳ್ಯ, ಆನೇಕಲ್ ನಲ್ಲಿ ಡ್ರೈ ರನ್ ಆರಂಭವಾಗಲಿದೆ ಎಂದರು. ಈ ನಡುವೆ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವಧನ್ ಕೂಡ  …

Read More »

ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ

ಗೋಕಾಕ: ಜಲ ಸಂಪನ್ಮೂಲ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರು ದಿ. 1 ರಿಂದ 5ರವರೆಗೆ ಬೆಳಗಾವಿ ಜಿಲ್ಲೆ ಹಾಗೂ ಮಹಾರಾಷ್ಟ್ರದಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ದಿ. 1 ರಂದು ಮಧ್ಯಾಹ್ನ 2.30 ಗಂಟೆಗೆ ಗುವಾಹಟಿಯಿಂದ ವಿಶೇಷ ವಿಮಾನದ ಮೂಲಕ ಬೆಳಗಾವಿಗೆ ಆಗಮಿಸಿ ಅಲ್ಲಿಂದ ರಸ್ತೆ ಮೂಲಕ ಗೋಕಾಕ ಆಗಮಿಸಿ ವಾಸ್ತವ್ಯ ಮಾಡುವರು. ದಿ. 2 ರಂದು ಮುಂಜಾನೆ 11.15 ಗಂಟೆಗೆ ತಾಲೂಕಿನ ಕೊಣ್ಣೂರ ಪುರಸಭೆ ವ್ಯಾಪ್ತಿಯಲ್ಲಿ …

Read More »

ಮೃತ ಕುಟುಂಬಸ್ಥರಿಗೆ ಧನ ಸಹಾಯ ಮಾಡಿ ಮಾನವಿಯತೆ ಮೆರೆದ ಶಾಸಕ ಸತೀಶ ಜಾರಕಿಹೊಳಿ

    ಎರಡು ತಿಂಗಳ‌ ಹಿಂದೆ ಹುಕ್ಕೇರಿ ತಾಲೂಕಿನ ಪಾಶ್ಚಾಪುರ ಗ್ರಾಮದಲ್ಲಿ ಹೊಲದಲ್ಲಿ ಸೊಯಾಬಿನ್ ರಾಶಿ ಮಾಡುವಾಗ ಮಶಿನಿನಲ್ಲಿ ಸೀರೆ ಸಿಲುಕಿ ಮರಣ ಹೊಂದಿದ್ದ ಪಾಶ್ಚಾಪುರದಲ್ಲಿರುವ ಮೃತ ಯಮನವ್ವ ದುಂಡಪ್ಪ ಉಪ್ಪಾರ ಇವರ ಮನೆಗೆ ಕೆಪಿಸಿಸಿ ಕಾರ್ಯಾದಕ್ಷ ಸತೀಶ ಜಾರಕಿಹೊಳಿಯವರ ಪುತ್ರ ರಾಹುಲ ಹಾಗೂ ಪುತ್ರಿ ಪ್ರಿಯಾಂಕಾ ಜಾರಕಿಹೊಳಿಯವರು ಮೃತ ಕುಟುಂಬದ ಸದಸ್ಯರಿಗೆ ಧನ ಸಹಾಯ ಮಾಡಿದರು. ಸಂದರ್ಭದಲ್ಲಿ ಸ್ಥಳಿಯ ಕಾಂಗ್ರೇಸ್ ಮುಖಂಡರಾದ ಅಬ್ದುಲ್ ಗಣಿ ದರ್ಗಾ ಮಾತನಾಡಿ ಇವತ್ತಿನ …

Read More »