Breaking News

ಬೆಳಗಾವಿ

ಗೋಕಾಕ ಹಿಲ್ ಗಾರ್ಡನ್ ಕಚೇರಿಯಲ್ಲಿ 72ನೇ ಗಣರಾಜೋತ್ಸವ ಆಚರಣೆ

ಗೋಕಾಕ್ : ಪಟ್ಟಣದ ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಅವರ ಹಿಲ್ ಗಾರ್ಡನ್ ಕಚೇರಿಯಲ್ಲಿ 72ನೇ ಗಣರಾಜೋತ್ಸವವನ್ನು ಅದ್ಧೂರಿಯಾಗಿ ಇಂದು ಆಚರಿಸಲಾಯಿತು. ಈ ಸಂದರ್ಭದಲ್ಲಿ ವಿಠ್ಠಲ ಪರಸಣ್ಣವರ, ವಿವೇಕ ಜತ್ತಿ, ಪಾಡು ರಂಗಸೂಭೆ,ಪ್ರಕಾಶ ಬಸಾಪುರ , ಸುರೇಶ್ ಸೇರಿದಂತೆ ಇತರರು ಇದ್ದರು.

Read More »

ಬೆಳಗಾಂ ಶುಗರ್ಸ ಪ್ರೈ ಲಿ , ಆವರಣದಲ್ಲಿ 72ನೇ ಗಣರಾಜ್ಯೋತ್ಸವ ದಿನಾಚರಣೆ

ಬೆಳಗಾವಿ : ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ ಒಡೆತನದ ಬೆಳಗಾಂ ಶುಗರ್ಸ ಪ್ರೈ ಲಿ , ಆವರಣದಲ್ಲಿ 72ನೇ ಗಣರಾಜ್ಯೋತ್ಸವ ದಿನಾಚರಣೆಯನ್ನು ಇಂದು ಅದ್ದೂರಿಯಾಗಿ ಆಚರಿಸಿದರು. ಪ್ರಸಕ್ತ 2020-21 ಕಬ್ಬು ನುರಿಸುವ ಹಂಗಾಮಿನಲ್ಲಿ ಕಾರ್ಖಾನೆಗೆ ಹೆಚ್ಚು ಕಬ್ಬನ್ನು ಸಾರಿಗೆ ಮಾಡಿದ ಮುಕ್ತೆದಾರರಾದ ಕಾಶಿನಾಥ ನಿಂಗಪ್ಪಾ ಕರಗುಪ್ಪಿ ಹಾಗೂ ಫಕೀರಪ್ಪಾ ರುದ್ರಪ್ಪಾ ಕುರಬರ ಅವರು ಧ್ವಜಾರೋಹಣ ನೆರವೇರಿಸಿದರು. ಸಂಸ್ಥೆಯ ವ್ಯವಸ್ಥಾಪಕ ನಿರ್ದೆಶಕ ಸಿದ್ದಾರ್ಥ ವಾಡೆನ್ನವರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಮಾತನಾಡಿ, …

Read More »

ಪ್ರತಿಭಟನಾ ನಿರತ ರೈತರ ಮೇಲಿನ ಹಲ್ಲೆ ಖಂಡನೀಯ : ಅಶೋಕ ಪೂಜಾರಿ

ಗೋಕಾಕ : ಕೇಂದ್ರ ಸರ್ಕಾರದ ಕೃಷಿ ಮಸೂದೆ ಜಾರಿಯನ್ನು ಸುಪ್ರೀಂ ಕೋರ್ಟ್ ತಡೆದಿದೆ . ಜತೆಗೆ ಪ್ರತಿಭಟನೆ ಜನಸಾಮಾನ್ಯರ ಹಕ್ಕು ಅದನ್ನು ಮೊಟಕುಗೊಳಿಸಬಾರದು ಎಂದು ಮಹತ್ವದ ನಿರ್ದೇಶನವನ್ನು ನೀಡಿದೆ. ಇದರ ಹೊರತಾಗಿಯೂ ಸಹ ಕೇಂದ್ರ ಸರ್ಕಾರ ಮಸೂದೆಯನ್ನು ತರಲು ಹೊರಟಿದೆ ಎಂದು ಜೆಡಿಎಸ್ ಮುಖಂಡ ಅಶೋಕ ಪೂಜಾರಿ ಕಿಡಿ ಕಾರಿದರು. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೃಷಿ ಮಸೂದೆಯನ್ನು ವಿರೋಧಿ ದೇಶದಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ಕೇಂದ್ರ ಸರ್ಕಾರ …

Read More »

ಘಟಪ್ರಭಾದಲ್ಲಿ ಮುಂದಿನ ಬಾರಿ ರಾಷ್ಟ್ರೀಯ ನಾಯಕರಿಂದ ಧ್ವಜಾರೋಹಣ: ಸತೀಶ ಜಾರಕಿಹೊಳಿ

ಘಟಪ್ರಭಾ: ಪಟ್ಟಣದ ಡಾ.ಎನ್.ಎಸ್. ಹರ್ಡೀಕರ್ ಸೇವಾದಳ ತರಬೇತಿ ಕೇಂದ್ರದಲ್ಲಿ ಮುಂದಿನ ಬಾರಿ ಗಣರಾಜ್ಯೋತ್ಸವಕ್ಕೆ ರಾಷ್ಟ್ರೀಯ ನಾಯಕರನ್ನು ಕರೆಸಿ ಧ್ವಜಾರೋಹಣ ನೆರವೇರಿಸಲಾಗುವುದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ತಿಳಿಸಿದರು. ಮಂಗಳವಾರ ಧ್ವಜಾರೋಹಣದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೇವಾದಳ ತರಬೇತಿ ಕೇಂದ್ರದಲ್ಲಿ ರಾಷ್ಟ್ರೀಯ ದಿನಗಳು ಸೇರಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇನ್ನೂ ವಿಭಿನ್ನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು. “ಸ್ವಾತಂತ್ರ್ಯ ಹೋರಾಟದಲ್ಲಿ ಹರ್ಡೀಕರ್ ಅವರ ನೇತೃತ್ವದಲ್ಲಿ ಸೇವಾದಳದ …

Read More »

11 ನೇ ರಾಷ್ಟೀಯ ಮತದಾರ ದಿನದ್ ಅಂಗವಾಗಿ ಬೆಳಗಾವಿ ಜಿಲ್ಲಾಡಳಿತದಿಂದ ಜಾಥಾ ಕಾರ್ಯಕ್ರಮ.

   ಬೆಳಗಾವಿ :ಜಿಲ್ಲಾಡಳಿತದಿಂದ 11 ನೇ ರಾಷ್ಟ್ರೀಯ ಮತದಾರರ ದಿನದ ಅಂಗವಾಗಿ ನಮ್ಮ ಮತದಾರರನ್ನು ಅಧಿಕಾರಯುಕ್ತ,ಜಾಗರೂಕ, ಸುರಕ್ಷಿತ,ಮತ್ತು ಮಾಹಿತಿಯುಕ್ತರನ್ನಾಗಿ ಮಾಡುವ ಸಂದೇಶವನ್ನು ಇಟ್ಟುಕೊಂಡು ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಯಿಂದ ಜಿಲ್ಲಾ ಪಂಚಾಯತ್ ಕಚೇರಿ ವರೆಗೆ ಜಾಥಾ ನಡೆಯಿತು ನಂತರ ಜಿಲ್ಲಾ ಸಭಾಂಗಣದಲ್ಲಿ ಕಾರ್ಯಕ್ರಮ ಜರುಗಿತು. ಬೆಳಗಾವಿ ಜಿಲ್ಲಾಡಳಿತದಿಂದ 11 ನೇ ರಾಷ್ಟ್ರೀಯ ಮತದಾರರ ದಿನದ ಅಂಗವಾಗಿ ನಮ್ಮ ಮತದಾರರನ್ನು ಅಧಿಕಾರಯುಕ್ತ,ಜಾಗರೂಕ, ಸುರಕ್ಷಿತ,ಮತ್ತು ಮಾಹಿತಿಯುಕ್ತರನ್ನಾಗಿ ಮಾಡುವ ಸಂದೇಶವನ್ನು ಇಟ್ಟುಕೊಂಡು ಬೆಳಗಾವಿ ಜಿಲ್ಲಾಧಿಕಾರಿ ಅವರು …

Read More »

ಇಡೀ ಕ್ಷೇತ್ರ ನನ್ನ ಕುಟುಂಬ, ನನ್ನ ಮನೆ ಎನ್ನುವ ಕಲ್ಪನೆಯಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದ ಲಕ್ಷ್ಮಿ ಹೆಬ್ಬಾಳಕರ್

ಬೆಳಗಾವಿ ​- ಬೆಕ್ಕಿನಕೇರಿ ಗ್ರಾಮದ ​​ಗವಳಿ ಗಲ್ಲಿಯಲ್ಲಿ ಸುಮಾರು ಏಳು ಲಕ್ಷ ರೂ​.​ಗಳ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆಯ ನಿರ್ಮಾಣದ ಕಾಮಗಾರಿಗಳಿಗೆ​ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಸೋಮವಾರ​ ಅಧಿಕೃತವಾಗಿ ಚಾಲನೆಯನ್ನು ನೀ​ಡಿದರು​​. ಬೆಳಗಾವಿ ಗ್ರಾಮೀಣ ಕ್ಷೇತ್ರದ ​ಪ್ರತಿ ಊರಿನಲ್ಲಿ ಒಂದಿಲ್ಲೊಂದು ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿವೆ. ಕಲವೆಡೆ ಪೂರ್ಣಗೊಂಡಿದ್ದರೆ ಇನ್ನು ಕಲವೆಡೆ ವಿವಿಧ ಹಂತಗಳಲ್ಲಿವೆ. ಜಾತಿ, ಪಕ್ಷ, ಭಾಷೆ ಯಾವುದೇ ಭೇದವಿಲ್ಲದೆ ನಿರಂತರವಾಗಿ ಅಭಿವೃದ್ಧಿಯೆಡೆಗೆ ಕ್ಷೇತ್ರವನ್ನು ಕೊಂಡೊಯ್ಯುತ್ತಿದ್ದೇನೆ. ಅಭಿವೃದ್ಧಿ ಜನರ ಹಕ್ಕು. ಅದರಿಂದ ಯಾರೂ ವಂಚಿತರಾಗಬಾರದು …

Read More »

ಬೆಳಗಾವಿ ಮತ್ತು ನಾಸಿಕ್ ನಡುವೆ ತಡೆರಹಿತ ವಿಮಾನಯಾನಗಳನ್ನು ಪ್ರಾರಂಭಿಸಿದ ಸ್ಟಾರ್ ಏರ್

ಬೆಳಗಾವಿ –   ಸ್ಟಾರ್ ಏರ್ ತನ್ನ ಎರಡನೇ ವಾರ್ಷಿಕೋತ್ಸವದಂದು ಬೆಳಗಾವಿ ಮತ್ತು ನಾಸಿಕ್ ನಡುವೆ ತಡೆರಹಿತ ವಿಮಾನಯಾನಗಳನ್ನು ಪ್ರಾರಂಭಿಸಿದೆ. ಭಾರತದ ಪ್ರಮುಖ ಪ್ರಾದೇಶಿಕ ವಿಮಾನಯಾನ ಸಂಸ್ಥೆಯಾದ ಸ್ಟಾರ್ ಏರ್, 2021 ಜನವರಿ 25 ರಿಂದ ಬೆಳಗಾವಿ ಮತ್ತು ನಾಸಿಕ್ ನಡುವೆ ನೇರ ವಿಮಾನ ಸೇವೆಗಳನ್ನು ಪ್ರಾರಂಭಿಸುವ ಮೂಲಕ ಪ್ರಾದೇಶಿಕ ಸಂಪರ್ಕ ಯೋಜನೆ ಉಡಾನ್ ಅಡಿಯಲ್ಲಿ ತನ್ನ ಕಾರ್ಯಾಚರಣೆಯನ್ನು ವಿಸ್ತರಿಸಲು ಯೋಜಿಸಿದೆ. ಸ್ಟಾರ್ ಏರ್ ಎರಡು ವರ್ಷಗಳ ಹಿಂದೆ ಈ ದಿನದಂದು …

Read More »

ಮಾರ್ಚ್ ನಂತರ ಶಾಸಕ ಮಹೇಶ್ ಕುಮಠಳ್ಳಿ ಸಚಿವರಾಗ್ತಾರೆ : ಸಚಿವ ರಮೇಶ್ ಜಾರಕಿಹೊಳಿ

ಬೆಳಗಾವಿ : ರಾಜ್ಯದಲ್ಲಿ ಖಾತೆ ಕ್ಯಾತೆ ಬೆನ್ನಲ್ಲೆ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ತಮ್ಮ ಪರಮ ಆಪ್ತ ಶಾಸಕ ಮಹೇಶ್ ಕುಮಠಳ್ಳಿ ಕುರಿತು ರಾಜಕೀಯ ಭವಿಷ್ಯ ನುಡಿದ್ದಿದ್ದು, ಮಾರ್ಚ್ ಬಳಿಕ ಅವರು ಕೂಡ ಸಚಿವರಾಗ್ತಾರೆ ಎಂದು ಹೇಳಿದ್ದಾರೆ. ಅಥಣಿ ಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬರುವ ಮಾರ್ಚ್ ಬಳಿಕ ಮಹೇಶ್ ಕುಮಟಳ್ಳಿಗೂ ಸಚಿವ ಸ್ಥಾನ ಸಿಗಲಿದೆ ಎಂದು ಭವಿಷ್ಯ ನುಡಿದಿದ್ದು, ಈ ವಿಚಾರವಾಗಿ ಶಿಷ್ಯನಿಗೆ ಸಚಿವ ಸ್ಥಾನ ಕೊಡಿಸಲು ತಲೆ …

Read More »

ಜಲಜೀವನ ಮಿಷನ್ ಕಾಮಗಾರಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಚಾಲನೆ ಧರ್ಮಟ್ಟಿ-ಪಟಗುಂದಿ ಗ್ರಾಮದಲ್ಲಿ 2.36 ಕೋಟಿ ರೂ. ವೆಚ್ಚದ ಕಾಮಗಾರಿ

ಮೂಡಲಗಿ : ತಮ್ಮ-ತಮ್ಮಲ್ಲಿಯ ವೈಯಕ್ತಿ ಮನಸ್ತಾಪಗಳನ್ನು ಮರೆತು ಗ್ರಾಮದ ಅಭಿವೃದ್ಧಿಗೆ ಒಂದಾಗಿ ಶ್ರಮಿಸುವಂತೆ ಶಾಸಕ ಮತ್ತು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು. ತಾಲೂಕಿನ ಧರ್ಮಟ್ಟಿ-ಪಟಗುಂದಿ ಗ್ರಾಮದಲ್ಲಿ ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಯಿಂದ 2.36 ಕೋಟಿ ರೂ. ವೆಚ್ಚದಲ್ಲಿ ಜಲಜೀವನ ಮಿಷನ್ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಒಂದಾಗಿ ದುಡಿದರೆ ಮಾತ್ರ ಗ್ರಾಮಾಭಿವೃದ್ಧಿ ಸಾಧ್ಯ ಎಂದು ಅವರು ಹೇಳಿದರು. ಧರ್ಮಟ್ಟಿ-ಪಟಗುಂದಿ ಗ್ರಾಮದ ಮನೆ-ಮನೆಗೆ ಗಂಗೆ …

Read More »

ಖೀಳೆಗಾಂವ್ ಬಸವೇಶ್ವರ ಏತ ನೀರಾವರಿ ಕಾಮಗಾರಿ ಪರಿಶೀಲಿಸಿದ ಸಚಿವ ರಮೇಶ್ ಜಾರಕಿಹೊಳಿ‌

ಅಥಣಿ: ತಾಲೂಕಿನ ಖಿಳೇಗಾವ ಬಸವೇಶ್ವರ (ಕೆಂಪವಾಡ) ಏತ ನೀರಾವರಿ ಯೋಜನೆಯ ಕಾಮಗಾರಿಗಳನ್ನು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಪರಿಶೀಲನೆ ನಡೆಸಿದರು. ನಾಪುರದ ಮುಖ್ಯ ಜಾಕ್ ವೆಲ್ ಗೆ ಭೇಟಿನೀಡಿ ಕಾಮಗಾರಿಯನ್ನು ಪರಿಶೀಲಿಸಿದ ಸಚಿವರು, ಆದಷ್ಟು ಶೀಘ್ರದಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಬಳಿಕ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನೆ ನಡೆಸಿದರು. ಕೈಮಗ್ಗ ಮತ್ತು ಜವಳಿ ಹಾಗೂ ಅಲ್ಪಸಂಖ್ಯಾತ ಕಲ್ಯಾಣ ಸಚಿವ ಶ್ರೀಮಂತ ಪಾಟೀಲ್, ಅಥಣಿ ಶಾಸಕ ಮಹೇಶ ಕುಮಟಳ್ಳಿ ಮತ್ತು …

Read More »