Breaking News

ಬೆಳಗಾವಿ

ಬಂಗಾರಕ್ಕೆ ಕನ್ನ ಹಾಕಿದ್ದ ಡಿ.ವೈ.ಎಸ್ ಪಿ ಜಾವೇದ ಮತ್ತು ಸಹಚರರಿಗೆ ಸಿಕ್ತು ರಾತ್ರೋರಾತ್ರಿ ವರ್ಗಾವಣೆ ಶಿಕ್ಷೆ : ಇಷ್ಟೆಲ್ಲಾ ಬೇಕಿತ್ತಾ

ಗೋಕಾಕ:ಬಂಗಾರಕ್ಕೆ ಕನ್ನ ಹಾಕಿದ್ದ ಡಿ.ವೈ.ಎಸ್ ಪಿ ಜಾವೇದ ಮತ್ತು ಸಹಚರರಿಗೆ ಸಿಕ್ತು ರಾತ್ರೋರಾತ್ರಿ ವರ್ಗಾವಣೆ ಶಿಕ್ಷೆ : ಇಷ್ಟೆಲ್ಲಾ ಬೇಕಿತ್ತಾ ಸಾಬಾ ಗೋಕಾಕ ಡಿ.ವೈ.ಎಸ್.ಪಿ ಯಾಗಿ ಬಂದಿದ್ದ ವಿಜಯಪುರ ಜಿಲ್ಲೆಯ ಶೆಗುಣಶಿ ಗ್ರಾಮದ ಜಾವೇದ ಇನಾಂದಾರ ತಮ್ಮ ಸ್ವ- ಗ್ರಾಮ ದಲ್ಲಿ ತನಗಾದ ಅವಮಾನಗಳನ್ನು ಗೆದ್ದು ಡಿ.ವೈ.ಎಸ್‌.ಪಿ ಹುದ್ದೆಗೆ ಏರಿ ಗ್ರಾಮದ ಜನರ ಹುಬ್ಬೇರಿಸಿದರು ಇವರ ಈ ಡಿಟ್ಟ ಕ್ರಮದಿಂದ ಅವರಿಗೆ ಅವಮಾನ ಮಾಡಿದ ಗ್ರಾಮದ ಜನರಿಂದಲೇ ಸತ್ಕಾರ ಮಾಡಿಸಿಕೊಂಡು …

Read More »

ಬೆಳಗಾವಿಯಲ್ಲಿ ಮಕ್ಕಳ ಲಸಿಕೆ ಪ್ರಯೋಗ

ಬೆಳಗಾವಿ: ಕೋವಿಡ್ ಮೂರನೇ ಅಲೆ ಬಗ್ಗೆ ಚರ್ಚೆಯಾಗುತ್ತಿರುವ ಬೆನ್ನಲ್ಲೇ ಹದಿನೆಂಟಕ್ಕಿಂತ ಕಡಿಮೆ ಪ್ರಾಯದ ಮಕ್ಕಳಿಗೂ ಲಸಿಕೆ ನೀಡುವ ಸಂಬಂಧ ಪ್ರಯೋಗಗಳಿಗೆ ವೇಗ ದೊರೆತಿದೆ. ಝೈಡಸ್‌ ಕ್ಯಾಡಿಲಾ ಕಂಪೆನಿ ಅಭಿವೃದ್ಧಿಪಡಿಸುತ್ತಿರುವ ಝೈಕೋವ್‌-ಡಿ ಮೂರು ಹಂತದ ವೈದ್ಯ ಕೀಯ ಪ್ರಯೋಗ (ಕ್ಲಿನಿಕಲ್‌ ಟ್ರಯಲ್ಸ್‌) ನಲ್ಲಿ ರಾಜ್ಯದ 1,500ಕ್ಕೂ ಹೆಚ್ಚು ಮಕ್ಕಳು ಭಾಗಿಯಾಗಿದ್ದಾರೆ. ವಿಶೇಷವೆಂದರೆ ವಯಸ್ಕರಿಗೆ ಪ್ರಸ್ತುತ ನೀಡಲಾಗುತ್ತಿರುವ ಕೊವ್ಯಾಕ್ಸಿನ್‌ ಹಾಗೂ ಕೊವಿಶೀಲ್ಡ್‌ 2 ಡೋಸ್‌ಗಳಿದ್ದರೆ, ಮಕ್ಕಳಿಗೆ ಪ್ರಯೋಗ ಮಾಡುತ್ತಿರುವ ಈ ಲಸಿಕೆ ಮೂರು …

Read More »

ಬೆಳಗಾವಿಯಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಮತ್ತು ಸಾವಿನ ಸಂಖ್ಯೆ ಹೆಚ್ಚುತ್ತಲೇ ಸಾಗಿದೆ.

ಬೆಳಗಾವಿ – ಬೆಳಗಾವಿಯಲ್ಲಿ ಕೊರೋನಾ ಓಟ ನಿಲ್ಲುತ್ತಿಲ್ಲ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಮತ್ತು ಸಾವಿನ ಸಂಖ್ಯೆ ಹೆಚ್ಚುತ್ತಲೇ ಸಾಗಿದೆ. ಬುಧವಾರ ಜಿಲ್ಲೆಯಲ್ಲಿ 2234 ಜನರಿಗೆ ಸೋಂಕು ಪತ್ತೆಯಾಗುವ ಮೂಲಕ ಹಳೆಯ ದಾಖಲೆಗಳನ್ನೆಲ್ಲ ಮುರಿದಿದೆ. ಇದೇ ವೇಳೆ ಒಂದೇ ದಿನ 11 ಜನರು ಸಾವಿಗೀಡಾಗಿದ್ದಾರೆ ಎಂದು ಅಧಿಕೃತವಾಗಿ ಪ್ರಕಟಿಸಲಾಗಿದೆ. ರಾಜ್ಯದಲ್ಲಿ ಒಟ್ಟೂ 34281 ಜನರಿಗೆ ಬುಧವಾರ ಸೋಂಕು ಪತ್ತೆಯಾಗಿದೆ. 49953 ಜನರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 468 ಜನರು ಸಾವಿಗೀಡಾಗಿದ್ದಾರೆ. ಪಾಸಿಟಿವಿಟಿ …

Read More »

ಮಕ್ಕಳ ಮೇಲೆ ಅಪ್ಪಳಿಸಬಹುದಾದ ಕೊರೋನಾ 3ನೇ ಅಲೆ: ಕೆಎಲ್ಇ ಆಸ್ಪತ್ರೆಯಲ್ಲಿ ಸಕಲ ಸಿದ್ಧತೆ

ಬೆಳಗಾವಿ – ಜಗತ್ತಿನಾದ್ಯಂತ ವಿಶೇಷವಾಗಿ ಭಾರತವನ್ನು ತಲ್ಲಣಗೊಳಿಸಿರುವ ಕೊರೊನಾ ವೈರಸ್ ಕೋವಿಡ್ -೧೯ ಸಾಂಕ್ರಾಮಿಕ ರೋಗದ ತುರ್ತು ಸಂದರ್ಭದಲ್ಲಿ ಕೆಎಲ್‌ಇ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ ಆಂಡ್ ರಿಸರ್ಚ್, ಡೀಮ್ಡ್ ವಿಶ್ವವಿದ್ಯಾಲಯ, ಜೆಎನ್ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಇವುಗಳ ಸಂಯುಕ್ತಾಶ್ರಯದಲ್ಲಿ ಈ ಭಾಗದ ಜನರಿಗೆ ಸಕಲ ಸೇವೆ ನೀಡಲು ಬದ್ದವಾಗಿದ್ದು, ಗರ್ಭಿಣಿ ಮತ್ತು ಮಕ್ಕಳ ಆರೈಕೆಗಾಗಿ ೪೦ ಹಾಸಿಗೆಗಳನ್ನು ಮೀಸಲಿಟ್ಟು ಚಿಕಿತೆಗ್ಸೆ …

Read More »

ಪ್ರತಿ ನಿಮಿಷಕ್ಕೆ ಸುಮಾರು ೧೫೦೦ಲೀಟರ್ ಆಮ್ಲಜನಕ ತಯಾರಾಗಿ ಸರಬರಾಜು ಮಾಡುವ ವಿಶೇಷ ಘಟಬೆಳಗಾವಿ ಜಿಲ್ಲಾ ಆಸ್ಪತ್ರೆಯಲ್ಲಿಕ

ಬೆಳಗಾವಿ ಜಿಲ್ಲಾ ಆಸ್ಪತ್ರೆಯಲ್ಲಿ ಒಟ್ಟು ೧೦೪೦ ರಷ್ಟು ಹಾಸಿಗೆಗಳಿದ್ದು, ಅದರಲ್ಲಿ ೮೨೨ ಆಮ್ಲಜನಕ ೭೬ ವೆಂಟಿಲೇಟರ್ ೩೫ ಎಚ್‌ಎಪ್‌ಎನ್‌ಸಿ ಹಾಸಿಗೆಗಳು. ಪ್ರಸ್ತುತ ಇಲ್ಲಿ ೧೩ಕೆಎಲ್ ಸಾಮರ್ಥ್ಯದ ಆಮ್ಲಜನಕ ತಯಾರಿಕಾ ಘಟಕ ಇದ್ದು, ಇದು ಈಗಿನ ಪರಿಸ್ಥಿತಿಗೆ ಸಮರ್ಪಕವಾಗುತ್ತಿಲ್ಲ. ಇದನ್ನು ಗಮನಿಸಿ, ಶಾಸಕ ಅಭಯ ಪಾಟೀಲ ಹೆಚ್ಚುವರಿಯಾಗಿ ಆಮ್ಲಜನಕ ಘಟಕದ ಸ್ಥಾಪನೆಗೆ ಅನುಮತಿ ನೀಡುವಂತೆ  ಮುಖ್ಯಮಂತ್ರಿಗಳಿಗೆ ವಿನಂತಿಸಿದ್ದರು. ಕೂಡಲೇ ಸ್ಪಂದಿಸಿದ ಮುಖ್ಯಮಂತ್ರಿಗಳು ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಸುಮಾರು ೨.೮೫ ಕೋಟಿ …

Read More »

ಕೊರೊನಾ ವಿಶೇಷ ಪ್ಯಾಕೇಜ್​ ಗೆ ರಾಜ್ಯ ರೈತ ಸಂಘದ ಆಕ್ರೋಶ

ಕೊರೊನಾ ಲಾಕ್​ಡೌನ್​ ಸಂದರ್ಭದಲ್ಲಿ ಜೀವನ ನಿರ್ವಹಣೆಗಾಗಿ ರಾಜ್ಯ ಸರ್ಕಾರ ಘೋಷಣೆ ಮಾಡಿರುವ ವಿಶೇಷ ಆರ್ಥಿಕ ಪ್ಯಾಕೇಜ್​ ಬಗ್ಗೆ ರಾಜ್ಯ ರೈತ ಸಂಘ ಅಸಮಾಧಾನ ಹೊರಹಾಕಿದೆ. ಮೈಸೂರಿನಲ್ಲಿ ಈ ವಿಚಾರವಾಗಿ ಮಾತನಾಡಿದ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಈ ಆರ್ಥಿಕ ಪ್ಯಾಕೇಜ್​ ಮೂಲಕ ಸಿಎಂ ಯಡಿಯೂರಪ್ಪ ಬಡವರ ಕಣ್ಣೊರೆಸುವ ತಂತ್ರ ಮಾಡಿದ್ದಾರೆ ಎಂದು ಹೇಳಿದ್ರು. ಜನಸಾಮಾನ್ಯರಿಗೆ ಅನುಕೂಲವಾಗುವಂತಹ ಯಾವುದೇ ಅಂಶ ಈ ಪ್ಯಾಕೇಜ್​ನಲ್ಲಿಲ್ಲ. ಯಡಿಯೂರಪ್ಪ ಘೋಷಣೆ ಮಾಡಿದ ಈ …

Read More »

ತ್ಯಾಜ್ಯ ವಿಲೇವಾರಿಗೆ ನಿರ್ಲಕ್ಷ್ಯ

ಎಂ.ಕೆ. ಹುಬ್ಬಳ್ಳಿ : ಇಲ್ಲಿ ತ್ಯಾಜ್ಯ ವಿಲೇವಾರಿಗೆ ನಿರ್ಲಕ್ಷ್ಯ ವಹಿಸಿರುವುದು ನಿವಾಸಿಗಳಿಗೆ ತೊಂದರೆಯಾಗಿ ಪರಿಣಮಿಸಿದೆ. ತ್ಯಾಜ್ಯ ವಿಲೇವಾರಿ ಘಟಕ ಇಲ್ಲದಿರುವುದೂ ತೊಡಕಾಗಿದೆ. ಹೆದ್ದಾರಿ ಪ್ರಾಧಿಕಾರದ ವ್ಯಾಪ್ತಿಗೆ ಒಳಪಡುವ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಪಕ್ಕದ ಚರಂಡಿಗಳು ಕಸದಿಂದ ತುಂಬಿವೆ. ಅದರಿಂದ ಹೊರಸೂಸುತ್ತಿರುವ ದುರ್ನಾತ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಬೆಳಗಾವಿಯಿಂದ ಧಾರವಾಡ ಕಡೆಯ 1, 2, 3 ಮತ್ತು 4ನೇ ವಾರ್ಡ್‌ಗೆ ಒಳಪಡುವ ಗಾಂಧಿ ನಗರ, ಬಸವ ನಗರ, ಚನ್ನಮ್ಮ …

Read More »

ಗೋಕಾಕ: ನಗರದ ಉಪ್ಪಾರ ಓಣಿಯಲ್ಲಿ ಮಹರ್ಷಿ ಶ್ರೀ ಭಗೀರಥ ಜಯಂತಿಯನ್ನು ಶ್ರೀ ಭಗೀರಥ ಮಹಾರಾಜರ ಭಾವಚಿತ್ರಕ್ಕೆ ಪೂಜೆಯನ್ನು ಸಲ್ಲಿಸುವ ಮೂಲಕ ಸರಳವಾಗಿ ಆಚರಿಸಲಾಯಿತು

ಗೋಕಾಕ: ನಗರದ ಉಪ್ಪಾರ ಓಣಿಯ ಶ್ರೀ ಯಲ್ಲಮ್ಮದೇವಿ ದೇವಸ್ಥಾನದ ಆವರಣದಲ್ಲಿ ಮಹರ್ಷಿ ಶ್ರೀ ಭಗೀರಥ ಜಯಂತಿಯನ್ನು ಶ್ರೀ ಭಗೀರಥ ಮಹಾರಾಜರ ಭಾವಚಿತ್ರಕ್ಕೆ ಪೂಜೆಯನ್ನು ಸಲ್ಲಿಸುವ ಮೂಲಕ ಸರಳವಾಗಿ ಆಚರಿಸಲಾಯಿತು.     ಈ ಸಂದರ್ಭದಲ್ಲಿ ಉಪ್ಪಾರ ಸಮಾಜದ ಉಪಾಧ್ಯಕ್ಷ ಎಲ್.ಎನ್.ಬೂದಿಗೊಪ್ಪ, ಮುಖಂಡರಾದ ಮಾಯಪ್ಪ ತಹಶೀಲದಾರ, ಅಡಿವೆಪ್ಪ ಕಿತ್ತೂರ, ಸದಾಶಿವ ಗುದಗಗೋಳ, ಶಂಕರ ಧರೆನ್ನವರ, ವಿಷ್ಣು ಲಾತೂರ, ಕುಶಾಲ ಗುಡೆನ್ನವರ, ಕರೆಪ್ಪ ಬಡೆಪ್ಪಗೋಳ, ಮಾರುತಿ ಜಡೆನ್ನವರ, ಜಗದೀಶ ಶಿಂಗಳಾಪೂರ, ಪರಶುರಾಮ ಖಾನಪ್ಪನವರ, …

Read More »

ಅಭಯ ಪಾಟೀಲ, ಅನಿಲ ಬೆನಕೆಯಿಂದ ಸ್ಥಳ ಪರಿಶೀಲನೆ

ಬೆಳಗಾವಿ – ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ ಇವರ ವಿನಂತಿ ಮೇರೆಗೆ ಎಲ್ & ಟಿ ಕಂಪನಿಯವರು ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆ ಆವರಣದಲ್ಲಿ ಆಕ್ಸಿಜನ್ ಘಟಕ ಸ್ಥಾಪಿಸಲು ಮುಂದಾಗಿದ್ದಾರೆ. ಅಭಯ ಪಾಟೀಲ ಹಾಗೂ ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ  ಆನಿಲ ಬೆನಕೆ ಇಂದು ಎಲ್ & ಟಿ ಕಂಪನಿಯ ಅಧಿಕಾರಿಗಳು ಮತ್ತು ಇತರ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ಮಾಡಿದರು. ಈ ಆಕ್ಷಿಜನ್ ಘಟಕ  ಸ್ಥಾಪನೆಯಾದಲ್ಲಿ ಸುಮಾರು 50 …

Read More »

ಖ್ಯಾತ ಗುತ್ತಿಗೆದಾರ, ಬೆಳಗಾವಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ.ಎಲ್.ಕುಲಕರ್ಣಿ ಕೊರೋನಾಕ್ಕೆ ಬಲಿ

ಬೆಳಗಾವಿ – ಖ್ಯಾತ ಗುತ್ತಿಗೆದಾರ, ಬೆಳಗಾವಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ.ಎಲ್.ಕುಲಕರ್ಣಿ ಕೊರೋನಾಕ್ಕೆ ಬಲಿಯಾಗಿದ್ದಾರೆ. ಅವರಿಗೆ 60 ವರ್ಷ ವಯಸ್ಸಾಗಿತ್ತು. ಕಳೆದ 15 ದಿನದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಇಂದು ಕೊನೋಯುಸಿರೆಳೆದರು. ಹನುಮಾನ್ ನಗರ ನಿವಾಸಿಯಾಗಿದ್ದ ಅವರಿಗೆ ತಂದೆ, ತಾಯಿ, ಪತ್ನಿ, ಮಗ, ಮಗಳು ಇದ್ದಾರೆ.

Read More »