ಬೆಳಗಾವಿ: ನಾಗಾಲ್ಯಾಂಡ್ನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟ ಜಿಲ್ಲೆಯ ಯೋಧನ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು. ಸಾವಿರಾರು ಜನರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಬೆಳಗಾವಿ ತಾಲೂಕಿನ ನಿಂಗ್ಯಾನಟ್ಟಿ ಗ್ರಾಮದ ಯೋಧ ರವಿ ತಳವಾರ (35) ಅವರ ಪಾರ್ಥಿವ ಶರೀರ ಶನಿವಾರ ಸ್ವಗ್ರಾಮಕ್ಕೆ ಆಗಮಿಸಿತು. ಈ ವೇಳೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಅಂತ್ಯಕ್ರಿಯೆಗೂ ಮುನ್ನ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಬಳಿಕ ತೆರೆದ ವಾಹನದಲ್ಲಿ ಮೆರವಣಿಗೆ ನಡೆಸಲಾಯಿತು. …
Read More »ಫೆಬ್ರುವರಿ ತಿಂಗಳಲ್ಲಿ ಕರಗಾಂವ ಏತ ನೀರಾವರಿ ಯೋಜನಗೆ ಚಾಲನೆ:ಶಾಸಕ ದುರ್ಯೋಧನ ಐಹೊಳೆ
ಫೆಬ್ರುವರಿ ತಿಂಗಳಲ್ಲಿ ಕರಗಾಂವ ಏತ ನೀರಾವರಿ ಯೋಜನಗೆ ಚಾಲನೆ:ಶಾಸಕ ದುರ್ಯೋಧನ ಐಹೊಳೆ ಚಿಕ್ಕೋಡಿ:ಸಹಸ್ರಾರು ಎಕರೆ ಜಮೀನು ಹಸಿರಾಗಲಿರುವ ಕರಗಾಂವ ಏತ ನೀರಾವರಿ ಯೋಜನೆಗೆ ಫೆಬ್ರುವರಿ ತಿಂಗಳಲ್ಲಿ ಭೂಮಿಪೂಜೆ ನೆರವೇರಿಸಲಾಗುವುದು. 100 ಕೋಟಿ ರೂ.ಮೊತ್ತದಲ್ಲಿ ಮೊದಲ ಹಂತದ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲು ಸಕಲ ಸಿದ್ಧತೆ ನಡೆದಿದೆ” ಎಂದು ರಾಯಬಾಗ ಶಾಸಕ ದುರ್ಯೋಧನ ಐಹೊಳೆ ಹೇಳಿದರು. ಚಿಕ್ಕೋಡಿ ತಾಲೂಕಿನ ಕರೋಶಿ ಗ್ರಾಮದಲ್ಲಿ 2 ಕೋಟಿ ರೂ. ಮೊತ್ತದ ರಸ್ತೆ ಸುಧಾರಣಾ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ …
Read More »ಕಠಿಣ ಪರಿಶ್ರಮದಿಂದ ಯಶಸ್ಸು ಸಾಧ್ಯ – IAS ಅಧಿಕಾರಿ ದಿನೇಶಕುಮಾರ ಮೀನಾ.
ಹುಕ್ಕೇರಿ : ಕಠಿಣ ಪರಿಶ್ರಮದಿಂದ ಯಶಸ್ಸು ಸಾಧ್ಯ – IAS ಅಧಿಕಾರಿ ದಿನೇಶಕುಮಾರ ಮೀನಾ. ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ವಿದ್ಯಾಭ್ಯಾಸ ಮಾಡಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ಪ್ರೋಭೆಷನರಿ IAS ಅಧಿಕಾರಿ ಖಾನಾಪುರ ತಾಲೂಕಾ ಪಂಚಾಯತ ಇಓ ದೀನೇಶಕುಮಾರ ಮೀನಾ ಹೇಳಿದರು. ಅವರು ಗುರುವಾರ ಸಾಯಂಕಾಲ ಹುಕ್ಕೇರಿ ತಾಲೂಕಿನ ಸಂಕೇಶ್ವರ ನಗರದ ಎ ಬಿ ಪಾಟೀಲ ಪಬ್ಲಿಕ್ ಶಾಲೆಯ ಉಡಾನ 2025 ರ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. …
Read More »ಗುಂಡಿನ ದಾಳಿಗೊಳಗಾದ ಕಾರು, ಉದ್ಯಮಿ ಪ್ರಪುಲ್ ಬಾಲಕೃಷ್ಣ ಪಾಟೀಲ
ಬೆಳಗಾವಿ: ಕಾರಿನಲ್ಲಿ ಹೋಗುತ್ತಿದ್ದ ಉದ್ಯಮಿ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ಮಾಡಿರುವ ಘಟನೆ ಬೆಳಗಾವಿಯ ಗಣೇಶಪುರದ ಹಿಂದು ನಗರದ ರಸ್ತೆಯಲ್ಲಿ ಗುರುವಾರ ತಡರಾತ್ರಿ ನಡೆದಿದೆ. ರಿಯಲ್ ಎಸ್ಟೇಟ್ ಉದ್ಯಮಿ, ಶಾಹುನ ನಗರದ ನಿವಾಸಿ ಪ್ರಪುಲ್ ಬಾಲಕೃಷ್ಣ ಪಾಟೀಲ (30) ಎಂಬವರ ಮೇಲೆ ದುಷ್ಕರ್ಮಿಗಳು ದಾಳಿ ಮಾಡಿದ್ದಾರೆ. ಕಾರಿನ ಗ್ಲಾಸ್ಗೆ ಗುಂಡು ತಗುಲಿದ್ದು, ಅದೃಷ್ಟವಶಾತ್ ಪ್ರಪುಲ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರಿನ ಗಾಜು ಪ್ರಪುಲ್ ಅವರ ತಲೆ, ಮುಖಕ್ಕೆ ಸಿಡಿದು ಗಾಯವಾಗಿದೆ. …
Read More »ಭೀಕರ ರಸ್ತೆ ಅಪಘಾತ.. ಬೆಳಗಾವಿ ಯೋಧ ರವಿ ಯಲ್ಲಪ್ಪ ಹುತಾತ್ಮ
ಬೆಳಗಾವಿ: ನಾಗಾಲ್ಯಾಂಡ್ನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಸೇನಾ ವಾಹನ ಕಂದಕಕ್ಕೆ ಉರುಳಿ ಬಿದ್ದಿದೆ. ಸೇನಾ ವಾಹನದಿಂದ ಯೋಧರು ಕೆಳಗೆ ಜಿಗಿದಿದ್ದು, ಯೋಧರ ಮೇಲೆಯೇ ವಾಹನ ಪಲ್ಟಿಯಾಗಿದೆ. ಸೇನಾ ವಾಹನದ ಈ ದುರಂತದಲ್ಲಿ ಬೆಳಗಾವಿ ಯೋಧ ರವಿ ಯಲ್ಲಪ್ಪ ತಳವಾರ (35) ಹುತಾತ್ಮರಾಗಿದ್ದಾರೆ. ರವಿ ಯಲ್ಲಪ್ಪ ತಳವಾರ ಅವರು ಬೆಳಗಾವಿ ತಾಲೂಕಿನ ನಿಂಗ್ಯಾನಟ್ಟಿ ಗ್ರಾಮದವರು. ರವಿ ಯಲ್ಲಪ್ಪ ತಳವಾರ ಅವರಿದ್ದ ಸೇನಾ ವಾಹನ ರಸ್ತೆ ಮಾರ್ಗವಾಗಿ ಹೊರಟಿದ್ದಾಗ …
Read More »ಹಿರಿಯ ಪತ್ರಕರ್ತ ಶಹೀದ್ ಧಾರವಾಡಕರ್ ವಿಧಿವಶ
ಗೋಕಾಕ; ಗೋಕಾಕ ನಿವಾಸಿಯಾಗಿರುವ ಹಿರಿಯ ಪತ್ರಕರ್ತರಾದ ಶಹೀದ್ ಧಾರವಾಡಕರ್ (80) ಶುಕ್ರವಾರ ವಿಧಿವಶರಾಗಿದ್ದಾರೆ. ದಿ.ಶಹೀದ್ ಧಾರವಾಡಕರ್ ಅವರು, 1970 ರ ದಶಕದಲ್ಲಿ ಕಮ್ಯೂನಿಷ್ಟೆ ಚಳುವಳಿ ಹಾಗೂ ಸಮದರ್ಶಿ ಪತ್ರಿಕೆ ಮೂಲಕ ನಾಡಿನಾದ್ಯಂತ ಹೆಸರುವಾಸಿಯಾದರು. ಬಹುದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ದಿ.ಶಹೀದ್ ಧಾರವಾಡಕರ್ ಅವರು, ಇಂದು ಬೆಳಗಿನ ಜಾವ ಇಹಲೋಕ ತಳ್ಳಿಸಿದ್ದಾರೆ. ಮೃತರು, ಪತ್ನಿ, ಪುತ್ರರು, ಪುತ್ರಿಯರು ಹಾಗೂ ಅಪಾರ ಬಂಧು-ಬಳಗದವರನ್ನು ಅಗಲಿದ್ದಾರೆ.
Read More »ರೊಕ್ಕ ಕೊಟ್ಟರ ಹೆಂಡ್ತಿ ಆಗ್ತಾರ, ಕೈ ಕೊಟ್ಟ ಓಡಿ ಹೋಗ್ತಾರ ;ಸಿಂಗಲ್ಸ್ ಹುಡುಗರೇ ಹುಷಾರ್….!
ಬೆಳಗಾವಿ – ಹೆಣ್ಣು ಮಕ್ಕಳ ಮಾರಾಟ ಆಯ್ತು,ಹನಿ ಟ್ರ್ಯಾಪ್ ಗೋಳಾಟ ಆಯ್ತು ಈಗ ಹೊಸದೊಂದ ಆಟ ಶುರುವಾಗಿದೆ ಇದು ಮದ್ಯ ವಯಸ್ಸಿನ ಔಟ್ ಡೇಟೆಡ್ ಹುಡುಗರಿಗೆ ಕಾಟವಾಗಿದೆ ಈ ಕಹಾನಿ ಕೇಳಿದ್ರೆ ನಿಜವಾಗಲೂ ಜಗತ್ತಿನ ಮತ್ತೊಂದು ವಿಸ್ಮಯದ ದರ್ಶನವಾದಂತಾಗುತ್ತದೆ. ನೀವು ಯಾದಿ ಮೇ ಶಾದಿ ಬಗ್ಗೆ ಕೇಳಿದ್ದೀರಾ ನೋಡಿದ್ದೀರಾ,ಅರೇಂಜ್ ಮ್ಯಾರೇಜ್, ಲವ್ ಮ್ಯಾರೇಜ್ ಗಳನ್ನೂ ಸಹ ನೋಡಿದ್ದೀರಾ ಆದ್ರೆ ಈಗ ವೀಕ್ಲಿ ಮ್ಯಾರೇಜ್ ಜಮಾನಾ ಶುರುವಾಗಿದೆ, ಇದರ ಹೆಸರು …
Read More »ವಿದ್ಯಾರ್ಥಿಗಳಿಗೆ ಲ್ಯಾಪ್ ಟ್ಯಾಪ್ ವಿತರಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ
ಗೋಕಾಕ್ – ವಿದ್ಯಾರ್ಥಿಗಳ ಶೈಕ್ಷಣಿಕ ಅನುಕೂಲಕ್ಕಾಗಿ ಲ್ಯಾಪ್ ಟ್ಯಾಪ್ಗಳನ್ನು ನೀಡಲಾಗುತ್ತಿದ್ದು, ಇದನ್ನು ಸದ್ಭಳಕೆ ಮಾಡಿಕೊಳ್ಳಬೇಕೆಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ವಿಧ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಇಲ್ಲಿಯ ಎನ್ ಎಸ್ ಎಫ್ ಕಾರ್ಯಾಲಯದಲ್ಲಿ ಅರಭಾವಿ ಪಟ್ಟಣ ಪಂಚಾಯತ್ ಸಮಿತಿಯಿಂದ ಉನ್ನತ ವ್ಯಾಸಂಗ ಮಾಡುತ್ತಿರುವ ಮೆಡಿಕಲ್ ಮತ್ತು ಇಂಜನಿಯರಿಂಗ್ ವಿಧ್ಯಾರ್ಥಿಗಳಿಗೆ ಲ್ಯಾಪ್ ಟ್ಯಾಪ್ ವಿತರಿಸಿ ಮಾತನಾಡಿದ ಅವರು, ಸರ್ಕಾರದ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಅವರು ತಿಳಿಸಿದರು. ನಗರೋತ್ಥಾನ ಯೋಜನೆಯಡಿ ೪ ರ ಹಂತದಲ್ಲಿ …
Read More »ಹುಕ್ಕೇರಿ ನಗರದಲ್ಲಿ ಅಂಬೇಡ್ಕರ ಪ್ರತಿಮೆ ಅನಾವರಣಕ್ಕೆ ಸಿದ್ದತೆ.
ಹುಕ್ಕೇರಿ : ಹುಕ್ಕೇರಿ ನಗರದಲ್ಲಿ ಅಂಬೇಡ್ಕರ ಪ್ರತಿಮೆ ಅನಾವರಣಕ್ಕೆ ಸಿದ್ದತೆ. ಹುಕ್ಕೇರಿ ನಗರದಲ್ಲಿ ಬಹುದಿನಗಳ ಬೇಡಿಕೆಯಾದ ಡಾ, ಬಾಬಾಸಾಹೇಬ ಅಂಬೇಡ್ಕರ್ ರವರ ಕಂಚಿನ ಪ್ರತಿಮೆ ಅನಾವರಣಕ್ಕೆ ಸಕಲ ಸಿದ್ದತೆಗಳು ನಡೆದಿವೆ. ತಾಲೂಕಿನ ದಲಿತ ಮುಖಂಡರಾದ ಮಲ್ಲಿಕಾರ್ಜುನ ರಾಶಿಂಗೆ ಮತ್ತು ಸುರೇಶ ತಳವಾರ ನೇತ್ರತ್ವದಲ್ಲಿ ವಿವಿಧ ದಲಿತ ಸಂಘಟನೆಗಳ ಮುಖಂಡರು ಸಭೆ ಜರುಗಿಸಿ ಕಾರ್ಯಕ್ರಮದ ರೂಪ ರೇಷೆಗಳನ್ನು ಸಿದ್ದಪಡಿಸಿ ಮಾದ್ಯಮ ಗಳೊಂದಿಗೆ ಮಾತನಾಡಿದ ದೀಲಿಪ ಹೋಸಮನಿ ಹುಕ್ಕೇರಿ ತಾಲೂಕಿನಲ್ಲಿ ಡಾ, ಬಾಬಾಸಾಹೇಬ …
Read More »ಖಾನಾಪುರ ತಹಶೀಲ್ದಾರ್ ಮನೆ ಹಾಗೂ ಕಚೇರಿ ಮೇಲೆ ಲೋಕಾಯುಕ್ತ ದಾಳಿ
ಖಾನಾಪುರ ತಹಶೀಲ್ದಾರ್ ಮನೆ ಹಾಗೂ ಕಚೇರಿ ಮೇಲೆ ಲೋಕಾಯುಕ್ತ ದಾಳಿ ಪ್ರಕಾಶ ಗಾಯಕವಾಡ ಅವರ ಬೆಳಗಾವಿಯ ಗಣೇಶಪುರ ಬಳಿಯ ಮನೆ ನಿಪ್ಪಾಣಿಯಲ್ಲಿರುವ ಮನೆ ಹಾಗೂ ಖಾನಾಪುರ ಕಚೇರಿ ಮೇಲೆ ದಾಳಿ ಅಧಿಕಾರಿಗಳ ದಾಳಿ ಬೆಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳನ್ನು ಕಂಡು ದಂಗಾದ ತಹಶಿಲ್ದಾರ್ ಗಾಯಕವಾಡ ಬೆಳಗಾವಿ ಎಸ್ಪಿ ಹಣಮಂತರಾಯ್ ನೇತೃತ್ವದಲ್ಲಿ ದಾಖಲೆಗಳ ಪರಿಶೀಲನೆ ಲೋಕಾಯುಕ್ತ ಡಿವೈಎಸ್ಪಿ ಪುಷ್ಪಲತಾ, ಪಿಐ ನಿರಂಜನ್ ಪಾಟೀಲ ಸಾಥ್
Read More »