Breaking News

ಬೆಳಗಾವಿ

ಅಂತಿಮವಾಗಿ ಬೆಳಗಾವಿಯಿಂದ ಇಬ್ಬರಿಗೆ ಮಾತ್ರ ಸ್ಥಾನ ನೀಡಿದಂತಾಗಿದೆ.

ಬೆಳಗಾವಿ – ಯಡಿಯೂರಪ್ಪ ಸಚಿವಸಂಪುಟದಲ್ಲಿ ಉಪಮುಖ್ಯಮಂತ್ರಿ ಸೇರಿ ನಾಲ್ಕು ಸಚಿವಸ್ಥಾನ ಪಡೆದಿದ್ದ ಬೆಳಗಾವಿ ಬೊಮ್ಮಾಯಿ ಸಂಪುಟದಲ್ಲಿ ಕೇವಲ 2 ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಗಿದೆ. ಯಡಿಯೂರಪ್ಪ ಸಂಪುಟದಲ್ಲಿ ಕೊನೆಯ ಕ್ಷಣದಲ್ಲಿ ಸ್ಥಾನ ಪಡೆದಿದ್ದ ಉಮೇಶ ಕತ್ತಿ ಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಜೊತೆಗೆ ಯಡಿಯೂರಪ್ಪ ಸಂಪುಟದಲ್ಲಿ ಆರಂಭದಿಂದಲೂ ಸ್ಥಾನ ಪಡೆದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಹಲವು ಕ್ರಾಂತಿಕಾರಕ ಯೋಜನೆಗಳನ್ನು ರೂಪಿಸಿದ್ದ ಶಶಿಕಲಾ ಜೊಲ್ಲೆ ಕೂಡ ಮತ್ತೆ ಸ್ಥಾನ ಪಡೆದಿದ್ದಾರೆ. ಜೊಲ್ಲೆ ದಂಪತಿ …

Read More »

ನನಗೆ ಕಾಲ್ ಬಂದಿಲ್ಲ‌ ಸಚಿವ ಸ್ಥಾನ ಸಿಗದಿದ್ದರೆ ಬಂಡಾಯ : ಆನಂದ ಮಾಮನಿ

ಬೆಳಗಾವಿ- ಇಂದು ಮುಖ್ಯಮಂತ್ರಿ ಬೊಮ್ಮಾಯಿ ಅವರ ಕ್ಯಾಬಿನೆಟ್ ರಚನೆ ಆಗಲಿದೆ.ನನಗೆ ಕಾಲ್ ಬಂದಿಲ್ಲ‌.ಈ ಕುರಿತು ಬಿ ಎಸ್ ವೈ ಜೊತೆ ಮಾತನಾಡುವೆ,ಸಚಿವ ಸ್ಥಾನ ಸಿಗದಿದ್ದರೆ ಡೆಪ್ಯುಟಿ ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ಕೊಡುವೆ ಎಂದು ಬೆಳಗಾವಿ ಜಿಲ್ಲೆಯ ಸವದತ್ತಿ ಶಾಸಕ ಆನಂದ ಮಾಮನಿ ಹೇಳಿದ್ದಾರೆ. ಹೊಸ ಮುಖ್ಯಮಂತ್ರಿಯ ಹೊಸ ಕ್ಯಾಬಿನೆಟ್ ಗೆ ಬೆಳಗಾವಿ ಜಿಲ್ಲೆಯಿಂದಲೇ ಬಂಡಾಯ ಶುರುವಾಗಿದೆ.ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಸಚಿವರ ಪಟ್ಟಿಯೊಂದಿಗೆ ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿದ್ದು ಪತ್ರಿಕಾಗೋಷ್ಢಿ ನಡೆಸಿ,ಇಂದು …

Read More »

ಡಾ||ವಿಜಯಸಂಕೇಶ್ವರ ಅವರ ಸಾಧನೆ ಆಧರಿಸಿದ ಈ ಚಿತ್ರಕ್ಕೆ “ವಿಜಯಾನಂದ” ಎಂಬ ಶೀರ್ಷಿಕೆ.

ಹುಬ್ಬಳ್ಳಿ – ಆದರ್ಶ ಉದ್ಯಮಿ, ಪದ್ಮಶ್ರೀ ಪ್ರಶಸ್ತಿ ವಿಜೇತ ಡಾ. ವಿಜಯ ಸಂಕೇಶ್ವರ ಅವರ ಜಾವನ ಮತ್ತು ಸಾಧನೆ ಕುರಿತು ಚಲನಚಿತ್ರವೊಂದು ಸಿದ್ಧವಾಗುತ್ತಿದೆ. ಸಾರಿಗೆ ಕ್ಷೇತ್ರ, ಪತ್ರಿಕೋದ್ಯಮ, ಮಾಧ್ಯಮ ಹಾಗು ಹಲವಾರು ವಿಭಾಗಗಳಲ್ಲಿ ಪರಿಣತಿ ಹೊಂದಿರುವ ಪ್ರತಿಷ್ಠಿತ ವಿ ಆರ್ ಎಲ್ ಸಮೂಹ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಹಾಗು ಪ್ರೊಮೋಟರ್ ಆದ ಡಾ. ವಿಜಯ ಸಂಕೇಶ್ವರರ ಪುತ್ರರಾದ ಆನಂದ ಸಂಕೇಶ್ವರ ಅವರು ಇದೀಗ  ವಿ ಆರ್ ಎಲ್ ಮೀಡಿಯಾ ಸಂಸ್ಥೆಯ …

Read More »

ಅಂತರಾಷ್ಟ್ರೀಯ ಕಬಡ್ಡಿ ಪಂದ್ಯಾವಳಿಗೆ ಆಯ್ಕೆಯಾದ ಕ್ರೀಡಾಪಟುಗಳಿಗೆ ಧನಸಹಾಯ ಒದಗಿಸಿದ ಪ್ರಿಯಾಂಕಾ ಜಾರಕಿಹೊಳಿ

    ಗೋಕಾಕ: ನೇಪಾಳದಲ್ಲಿ ಅಗಸ್ಟ್ 10 ರಂದು ನಡೆಯಲಿರುವ 19 ವರ್ಷದೊಳಗಿನ ಇಂಡೋ-ನೇಪಾಳ ಅಂತರಾಷ್ಟ್ರೀಯ ಕಬಡ್ಡಿ ಪಂದ್ಯಾವಳಿಯಲ್ಲಿ ದೇಶವನ್ನು ಪ್ರತಿನಿಧಿಸಲು ಹೊರಟಿರುವ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಮೆಳವಂಕಿ ಗ್ರಾಮದ ಸಿದ್ದಪ್ಪ ಹಂಜಿ ಹಾಗೂ ತಪಸಿ ಗ್ರಾಮದ ಮಲ್ಲಪ್ಪ ನಾಯಕ ಎಂಬ ವಿದ್ಯಾರ್ಥಿಗಳಿಗೆ ಕಾಂಗ್ರೆಸ್ ಯುವ ನಾಯಕಿ ಪ್ರಿಯಾಂಕಾ ಜಾರಕಿಹೊಳಿ ಅವರು ಪ್ರವೇಶ ಶುಲ್ಕ ಹಾಗೂ ಪ್ರಯಾಣ ಖರ್ಚುನ್ನು ನೀಡಿ ಸಹಾಯ ಒದಗಿಸಿದರು.   ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ …

Read More »

ಪ್ರೀತಿ ನಿರಾಕರಿಸಿದಳು ಎಂಬ ಕಾರಣಕ್ಕೆ ಯುವಕನೊಬ್ಬ 10ನೇ ತರಗತಿ ವಿದ್ಯಾರ್ಥಿನಿಯನ್ನೇ ಚಾಕುವಿನಿಂದ ಇರಿದ

ಬೆಳಗಾವಿ: ಪ್ರೀತಿ ನಿರಾಕರಿಸಿದಳು ಎಂಬ ಕಾರಣಕ್ಕೆ ಯುವಕನೊಬ್ಬ 10ನೇ ತರಗತಿ ವಿದ್ಯಾರ್ಥಿನಿಯನ್ನೇ ಚಾಕುವಿನಿಂದ ಇರಿದು ಕೊಂದಿರುವ ಘಟನೆ ಬೆಳಗಾವಿಯ ರಾಯಭಾಗದಲ್ಲಿ ನಡೆದಿದೆ. ಆರೋಪಿ ಅಮೀರ್ ದಾರ್ ಎಂಬಾತ ಈ ಕೃತ್ಯವೆಸಗಿದ್ದಾನೆ. ಆರೋಪಿ ಯುವತಿಗೆ ತನ್ನನ್ನು ಪ್ರೀತಿಸುವಂತೆ ಬಲವಂತ ಮಾಡಿ ಪೀಡಿಸುತ್ತಿದ್ದ. ಯುವತಿ ನಿರಾಕರಿಸಿದ್ದಾಳೆ. ಟ್ಯೂಷನ್ ಮುಗಿಸಿ ಶಿಕ್ಷಕರ ಮನೆಯಿಂದ ವಾಪಸ್ ಅಗುತ್ತಿದ್ದ ವಿದ್ಯಾರ್ಥಿನಿಯನ್ನು ಯುವಕ ಚಾಕುವಿನಿಂದ ಇರಿದು ಹತ್ಯೆಗೈದಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.

Read More »

ಯಾವ ಸ್ಥಾನ ನೀಡಿದ್ರೂ ನಿಭಾಯಿಸುವೆ-ಮಹೇಶ್​ ಕುಮಟಳ್ಳಿ

ಬೆಳಗಾವಿ: ಯಾವುದೇ ಸ್ಥಾನ ನೀಡಿದರೂ ನಾನು ನಿಭಾಯಿಸುವೆ. ಮಂತ್ರಿಗಿರಿಗಾಗಿ ಯಾವುದೇ ಲಾಭಿ ಮಾಡಲ್ಲ. ಪಕ್ಷದ ವರಿಷ್ಠರ ನಿರ್ಧಾರಕ್ಕೆ ನಾನು ಬದ್ಧ ಎಂದು ಅಥಣಿ ಶಾಸಕ ಮಹೇಶ್​ ಕುಮಟಳ್ಳಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶೀಘ್ರದಲ್ಲೇ ಅಥಣಿ ತಾಲೂಕಿನ ಪ್ರವಾಹ ಸಂತ್ರಸ್ತರ ಎಲ್ಲ ಸಮಸ್ಯೆಗಳನ್ನೂ ಬಗೆಹರಿಸಲಾಗುವುದು. ಗ್ರಾಮಗಳ ಸ್ಥಳಾಂತರಕ್ಕೆ ಜಮೀನಿನ ಕೊರತೆ ಇದೆ. ಅದಕ್ಕಾಗಿ ಪುನರ್ವಸತಿ ಕಾರ್ಯ ವಿಳಂಬವಾಗುತ್ತಿದೆ. ಶೀಘ್ರದಲ್ಲೇ ವಿಶೇಷ ಪ್ರಕರಣದಡಿ ನೆರೆ ಸಂತ್ರಸ್ತರ ಸಮಸ್ಯೆಗಳನ್ನು …

Read More »

ಬೆಳಗಾವಿಯಲ್ಲೊಂದು ಡೆಡ್ಲಿ ಮರ್ಡರ್​.. ಕೇವಲ 2000 ರೂಪಾಯಿಗೇ ವೃದ್ಧನ ಹೆಣ

ಬೆಳಗಾವಿ: ದುಡಿದ 2000 ರೂಪಾಯಿಯನ್ನು ಕೊಡಲಿಲ್ಲ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬನನ್ನು ಬ್ಲೇಡ್​ ನಿಂದ ಕುಯ್ದು ಕೊಲೆ ಮಾಡಿದ ಘಟನೆ ಜಿಲ್ಲೆಯಲ್ಲಿ ವರದಿಯಾಗಿದೆ. ಕೊಲೆಯಾದ ವ್ಯಕ್ತಿಯ ಹೆಸರು ಮಹಾದೇವ್ ಜಾಧವ. ವಯಸ್ಸು 55ವರ್ಷ. ಬೆಳಗಾವಿಯ ವಡಗಾಂವ ನಿವಾಸಿ. ಕಳೆದ ಹಲವು ವರ್ಷಗಳಿಂದ‌ ಗಾರೆ ಕೆಲಸ ಮಾಡಿಕೊಂಡಿದ್ದ ಇತ. ಇವತ್ತು ವಡಗಾಂವನ ಯಳ್ಳೂರು ರಸ್ತೆಯಲ್ಲಿ ಹೆಣವಾಗಿ ಬಿದ್ದಿದ್ದಾನೆ. ಹಾಡು ಹಗಲೇ ಜನ ಓಡಾಡುತ್ತಿರುವ ರಸ್ತೆಯಲ್ಲಿಯೇ ಕತ್ತು ಕೊಯ್ದು ಮಹಾದೇವ್​ನನ್ನು ಭೀಕರವಾಗಿ ಕೊಲೆ ಮಾಡಲಾಗಿತ್ತು. …

Read More »

ಗೋಕಾಕ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ತಹಶೀಲದಾರ ಕಾರ್ಯಾಲಯದಲ್ಲಿ ರೈತ ಮುಖಂಡರು ತಹಶೀಲದಾರ ಪ್ರಕಾಶ ಹೊಳೆಪ್ಪಗೋಳ ಘೇರಾವು ಹಾಕಿ ನಂತರ ಸಭೆ ನಡೆಸುತ್ತಿರುವುದು.

ಗೋಕಾಕ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ತಹಶೀಲದಾರ ಕಾರ್ಯಾಲಯದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯದರ್ಶಿ ಭೀಮಶಿ ಗದಾಡಿ ಅವರ ನೇತ್ರತ್ವದಲ್ಲಿ ರೈತ ಮುಖಂಡರು ತಹಶೀಲದಾರ ಪ್ರಕಾಶ ಹೊಳೆಪ್ಪಗೋಳ ಘೇರಾವು ಹಾಕಿ ನಂತರ ಸಭೆ ನಡೆಸಿದರು. ಕಳೆದ 2019ನೇ ಸಾಲಿನಲ್ಲಿ ಪ್ರವಾಹ ಹಾಗೂ ಮಳೆಯಿಂದ ಹಾನಿಯಾದ ಮನೆಗಳಿಗೆ ಇನ್ನೂವರೆಗೂ ಪರಿಹಾರ ದೊರಕಿಲ್ಲವಲ್ಲದೇ ಸರ್ವೆ ಮಾಡುವಲ್ಲಿ ಅಧಿಕಾರಿಗಳು ತಾರ್ಯತ್ಯಮ ಮಾಡಿದ್ದಾರೆಂದು ಆರೋಪಿಸಿದರು. ಕಲಾರಕೊಪ್ಪ, ಮೆಳವಂಕಿ ಗ್ರಾಮದಲ್ಲಿ ಮೂರು ಸಲ ಸರ್ವೆ ಕಾರ್ಯವನ್ನು …

Read More »

ನಗ್ನ ವಿಡಿಯೋ ಮೂಲಕ ಬ್ಲ್ಯಾಕ್ ಮೇಲ್ ಬೆಳಗಾವಿಯಲ್ಲಿ ಹೆಚ್ಚಿದ ಸೈಬರ್ ವಂಚನೆ;

: ಸೈಬರ್‌ ವಂಚಕರು ಫೇಸ್ ಬುಕ್ ನಲ್ಲಿ ಯುವತಿಯರ ಹೆಸರಲ್ಲಿ ಫ್ರೆಂಡ್ ರಿಕ್ವೆಷ್ಟಗಳನ್ನು ಸಾರ್ವಜನಿಕರಿಗೆ ಕಳುಹಿಸಿ ಬಳಿಕ ನಗ್ನ ವಿಡಿಯೋ ಕರೆಗಳನ್ನು ಮಾಡಿ ಬ್ಲ್ಯಾಕ್ ಮೇಲ್ ಮಾಡುತ್ತಿರುವ ಪ್ರಕರಣ ಕುಂದಾನಗರಿ ಬೆಳಗಾವಿಯಲ್ಲೂ ಬೆಳಕಿಗೆ ಬಂದಿದೆ. ಫೇಸ್ ಬುಕ್ ನಲ್ಲಿ ಯುವತಿಯರ ರೂಪದಲ್ಲಿ ವಂಚಕರು ಫ್ರೆಂಡ್ಸ್ ರಿಕ್ವೆಸ್ಟ್ ಕಳುಹಿಸಿ ಸಾರ್ವಜನಿಕರ ಸಂಪರ್ಕ ಸಾಧಿಸುತ್ತಾರೆ. ರಿಕ್ವೆಸ್ಟ್ ಸ್ವೀಕರಿಸಿದ ನಂತರ ಅವರೊಂದಿಗೆ ಫೇಸ್‌ಬುಕ್ ಮೆಸೆಂಜರ್‌ನಲ್ಲಿ ಚಾಟ್ ಮಾಡಿ ಅವರ ವ್ಯಾಟ್ಸ್‌ಅಪ್ ನಂಬರ್ ಪಡೆದುಕೊಳ್ಳುತ್ತಾರೆ. ನಂತರ …

Read More »

ಕಾಗವಾಡ, ಕುಗನೊಳ್ಳಿ ಚೆಕ್ ಪೋಸ್ಟ್​​​ಗಳಿಗೆ ಜಿಲ್ಲಾಧಿಕಾರಿ, ಎಸ್‌ಪಿ ಭೇಟಿ

ಚಿಕ್ಕೋಡಿ : ಮಹಾರಾಷ್ಟ್ರದಿಂದ ಬೆಳಗಾವಿ‌ ಮೂಲಕ ರಾಜ್ಯದ ಗಡಿ ಪ್ರವೇಶಿಸುವ ಪ್ರಯಾಣಿಕರು ಕೋವಿಡ್ ನೆಗೆಟಿವ್ ವರದಿ ಹೊಂದಿರುವುದು ಕಡ್ಡಾಯಗೊಳಿಸಲಾಗಿದೆ. ಆದ್ದರಿಂದ ಸರಕಾರದ ಮಾರ್ಗಸೂಚಿ ಪ್ರಕಾರ ನೆಗೆಟಿವ್ ವರದಿ ಹೊಂದಿದವರಿಗೆ ಮಾತ್ರ ರಾಜ್ಯದೊಳಗೆ ಪ್ರಯಾಣಕ್ಕೆ ಅವಕಾಶ ನೀಡಬೇಕು ಎಂದು ಜಿಲ್ಲಾಧಿಕಾರಿ ಎಂ ಜಿ ಹಿರೇಮಠ ಸೂಚನೆ ನೀಡಿದ್ದಾರೆ. ಜಿಲ್ಲೆಯ ಕುಗನೊಳ್ಳಿ ಹಾಗೂ ಕಾಗವಾಡ ಚೆಕ್ ಪೋಸ್ಟ್​​​ಗಳಿಗೆ ಜಿಲ್ಲಾಧಿಕಾರಿ ಭಾನುವಾರ ಭೇಟಿ ನೀಡಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಅಲ್ಲಿ ನಿಯೋಜಿತ ಅಧಿಕಾರಿಗಳು ಹಾಗೂ …

Read More »