ಬೆಳಗಾವಿ: ‘ಕಿತ್ತೂರು ರಾಣಿ ಚನ್ನಮ್ಮನ ಸಲುವಾಗಿ ಯಾವುದೇ ಮೂಢನಂಬಿಕೆ ನನಗೆ ಅಡ್ಡಬರುವುದಿಲ್ಲ. ಚನ್ನಮ್ಮನ ಸಲುವಾಗಿ ಅಧಿಕಾರ ಹೋದರೆ ಬಹಳ ಸಂತೋಷಪಡುತ್ತೇನೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಜಿಲ್ಲೆಯ ಕಿತ್ತೂರಿನಲ್ಲಿ ಕಿತ್ತೂರು ಉತ್ಸವಕ್ಕೆ ಚಾಲನೆ ನೀಡಿದ ನಂತರ ಪತ್ರಕರ್ತರೊಂದಿಗೆ ಅವರು ಮಾತನಾಡಿದರು. ‘ಕಿತ್ತೂರಿಗೆ ಬಂದ ಮುಖ್ಯಮಂತ್ರಿ ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ಮೌಢ್ಯಕ್ಕೆ ಸಡ್ಡು ಹೊಡೆದಿದ್ದೀರಿ’ ಎಂಬ ಪ್ರಶ್ನೆಗೆ, ‘ಚಾಮರಾಜನಗರಕ್ಕೆ ಹೋಗಬೇಡ ಎಂದಿದ್ದರು ಹೋಗಿದ್ದೆ. ಕಿತ್ತೂರಿಗೆ ಬರಬೇಡ ಎಂದಿದ್ದರು ಬಂದಿದ್ದೇನೆ. ಹಿಂದೆ ಕಾಕತಾಳೀಯವಾಗಿ …
Read More »ಕಿತ್ತೂರು ಉತ್ಸವದಲ್ಲಿ ವೈವಿಧ್ಯಮಯ ಕಾರ್ಯಕ್ರಮ
ಬೆಳಗಾವಿ: ವೀರರಾಣಿ ಕಿತ್ತೂರ ರಾಣಿ ಚೆನ್ನಮ್ಮನ ಸೈನ್ಯದ ವಿಜಯೋತ್ಸವದ ಸವಿ ನೆನಪಿಗಾಗಿ ಆಚರಿಸಲ್ಪಡುವ ಕಿತ್ತೂರ ಉತ್ಸವಕ್ಕೆ ಈಗ ಬೆಳ್ಳಿ ಹಬ್ಬದ ಸಂಭ್ರಮ. ಕೊರೊನಾದ ಸಂಕಷ್ಟದ ಸಮಯದಲ್ಲೂ ಎರಡು ದಿನಗಳ ಕಾಲ ಉತ್ಸವವನ್ನು ಸಂಭ್ರಮ ಹಾಗೂ ಅರ್ಥಪೂರ್ಣವಾಗಿ ಆಚರಿಸಲು ಎಲ್ಲ ಸಿದ್ಧತೆಗಳು ನಡೆದಿವೆ. ಉತ್ಸವದಲ್ಲಿ ವಿವಿಧ ವೈವಿಧ್ಯಮಯ ಕಾರ್ಯಕ್ರಮಗಳನ್ನು ಜನರ ಮನತಣಿಸಲಿವೆ. ಸೋಮವಾರ ಬೆಳಗಾವಿಯಲ್ಲಿ ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕಿತ್ತೂರು ಶಾಸಕ ಮಹಾಂತೇಶ ದೊಡ್ಡಗೌಡರ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ …
Read More »ಕಿತ್ತೂರು ಉತ್ಸವಕ್ಕೆ ಸಿಗಲಿ ರಾಜ್ಯಮಟ್ಟದ ಮಾನ್ಯತೆ
ಬೆಳಗಾವಿ: ಸತತವಾಗಿ ಕಾಡುತ್ತಲೇ ಇರುವ ಕೊರೊನಾ ಹಾವಳಿ ನಡುವೆ ಐತಿಹಾಸಿಕ ಕಿತ್ತೂರು ಉತ್ಸವಕ್ಕೆ ಇಡೀ ಕಿತ್ತೂರು ಸಂಸ್ಥಾನ ಸಜ್ಜಾಗಿದ್ದು, ಜಿಲ್ಲಾಡಳಿತ ಕೊರೊನಾ ಮಾರ್ಗಸೂಚಿ ಅನ್ವಯ ಎರಡು ದಿನಗಳ ಉತ್ಸವದ ಅರ್ಥಪೂರ್ಣ ಆಚರಣೆಗೆ ಎಲ್ಲ ಸಿದ್ಧತೆ ಮಾಡಿಕೊಂಡಿದೆ. ಉತ್ಸವದ ಈ ಬಾರಿಯ ವಿಶೇಷ ಆಕರ್ಷಣೆ ಎಂದರೆ ಬಹಳ ವರ್ಷಗಳ ನಂತರ ಮುಖ್ಯಮಂತ್ರಿಗಳು ಉತ್ಸವದ ಉದ್ಘಾಟನೆಗೆ ಬರುತ್ತಿದ್ದಾರೆ. ಉತ್ಸವಕ್ಕೆ ಬಂದರೆ ಅಧಿಕಾರ ಹೋಗುತ್ತದೆ ಎಂಬ ಮೂಢ ನಂಬಿಕೆ ಮಾತುಗಳಿಗೆ ಕಿವಿಗೊಡದೆ ಸಿಎಂ ಬಸವರಾಜ ಬೊಮ್ಮಾಯಿ ಉತ್ಸವದ …
Read More »ಈ ಬಾರಿ ಕಿತ್ತೂರು ಉತ್ಸವದ complete details
ಬೆಳಗಾವಿ : ಕಿತ್ತೂರು ರಾಣಿ ಚನ್ನಮ್ಮ ಉತ್ಸವವು ಅ.೨೩ ಹಾಗೂ ೨೪ ರಂದು ಜರುಗಲಿದೆ. ಈ ಬಾರಿ ಕಿತ್ತೂರು ಉತ್ಸವದ (೨೫ ವರ್ಷ) ಬೆಳ್ಳಿ ಹಬ್ಬವನ್ನು ಆಚರಿಸಲಾಗುತ್ತಿದೆ. ಜಿಲ್ಲಾ ಆಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಕಿತ್ತೂರಿನ ಕೋಟೆ ಆವರಣದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಅ.೨೩ ರಂದು ಕಿತ್ತೂರಿನ ಕೋಟೆ ಆವರಣದಲ್ಲಿ ಸಾಯಂಕಾಲ ೭ ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ …
Read More »ಥ್ರೋ ಬಾಲ್ ಪಂದ್ಯಾವಳಿಯಲ್ಲಿ ಕರ್ನಾಟಕದ ತಂಡವನ್ನು ಪ್ರತಿನಿಧಿಸಲಿದ್ದಾನೆ
ಗೋಕಾಕ: ತಾಲೂಕಿನ ಖನಗಾಂವ ಗ್ರಾಮದ ಸರಕಾರಿ ಆದರ್ಶ ವಿದ್ಯಾಲಯದ ವಿದ್ಯಾರ್ಥಿ ಮಹಾಂತಯ್ಯ ಮಲ್ಲಿಕಾರ್ಜುನ ಮಠದ ಇವರು ಇದೆ ತಿಂಗಳು 29ರಂದು ಹರಿಯಾಣ ರಾಜ್ಯದಲ್ಲಿ ನಡೆಯಲಿರುವ ರಾಷ್ಟ್ರ ಮಟ್ಟದ ಥ್ರೋ ಬಾಲ್ ಪಂದ್ಯಾವಳಿಯಲ್ಲಿ ಕರ್ನಾಟಕದ ತಂಡವನ್ನು ಪ್ರತಿನಿಧಿಸಲಿದ್ದಾನೆ. ವಿದ್ಯಾರ್ಥಿಯ ಈ ಸಾಧನೆಯನ್ನು ಶಾಸಕರಾದ ರಮೇಶ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ, ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ, ಶಿಕ್ಷಣ ಇಲಾಖೆ ಉಪನಿರ್ದೇಶಕ ಜಿ ಬಿ ಮನ್ನಿಕೇರಿ, ಡಿಪಿಇಒ ಸಾಂಗಲಿ, ಕ್ಷೇತ್ರ ಶಿಕ್ಷಣಾಧಿಕಾರಿ ಜಿ ಬಿ …
Read More »90ಲಕ್ಷ ರೂಗಳ ವೆಚ್ಚದಲ್ಲಿ ನಿರ್ಮಿಸಲಾದ 15ಪ್ರೌಢ ಶಾಲಾ ಕೋಠಡಿಗಳನ್ನು ಪೂಜೆ ಸಲ್ಲಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ರಮೇಶ ಜಾರಕಿಹೊಳಿ
ಗೋಕಾಕ: ಕೊರೋನಾ ಆಘಾತದಿಂದ ಸಹಜ ಸ್ಥಿತಿಯತ್ತ ಶಾಲೆಗಳು ಪ್ರಾರಂಭವಾಗುತ್ತಿದ್ದು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಆಸಕ್ತಿ ಹಾಗೂ ಕಠೀಣ ಪರಿಶ್ರಮದಿಂದ ಶೈಕ್ಷಣಿಕವಾಗಿ ಪ್ರಗತಿಸಾಧಿಸುವಂತೆ ಶಾಸಕ ರಮೇಶ ಜಾರಕಿಹೊಳಿ ಹೇಳಿದರು. ಅವರು, ಶುಕ್ರವಾರದಂದು ನಗರದ ಸರಕಾರಿ ಪದವಿಪೂರ್ವ ಮಹಾವಿದ್ಯಾಲಯದ ಆವರಣದಲ್ಲಿ ರಾಷ್ಟ್ರೀಯ ಮಾಧ್ಯಮಿಕ ಸರ್ವಶಿಕ್ಷಣ ಅಭಿಯಾನದಲ್ಲಿ 90ಲಕ್ಷ ರೂಗಳ ವೆಚ್ಚದಲ್ಲಿ ನಿರ್ಮಿಸಲಾದ 15ಪ್ರೌಢ ಶಾಲಾ ಕೋಠಡಿಗಳನ್ನು ಪೂಜೆ ಸಲ್ಲಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳು ಶಾಲೆಗಳಲ್ಲಿ ಕೊರೋನಾ ವೈರಸ್ ನಿಯಂತ್ರಣ ನಿರ್ದೇಶನಗಳನ್ನು …
Read More »ಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರ ಹಠಾತ್ ಬದಲಾವಣೆ, ಸಂಜಯ ಬೆಳಗಾಂವ್ಕರ್ ನೂತನ ಅಧ್ಯಕ್ಷ
ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನು ಬದಲಾವಣೆ ಮಾಡಲಾಗಿದೆ. ಗೂಳಪ್ಪ ಹೊಸಮನಿ ಅವರನ್ನು ಅಧ್ಯಕ್ಷಸ್ಥಾನದಿಂದ ಕಿತ್ತು ಹಾಕಲಾಗಿದ್ದು, ಸಂಜಯ ಬೆಳಗಾಂವ್ಕರ್ ನೂತನ ಅಧ್ಯಕ್ಷರಾಗಿದ್ದಾರೆ. ಮುಂದಿನ 3 ವರ್ಷಗಳವರೆಗೆ ಸಂಜಯ ಬೆಳಗಾಂವ್ಕರ್ ಬುಡಾ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ. ಗೂಳಪ್ಪ ಹೊಸಮನಿ ಅವರ ಬಗ್ಗೆ ಬೆಳಗಾವಿಯ ಬಿಜೆಪಿಯ ಇಬ್ಬರು ಶಾಸಕರೂ ತೀವ್ರ ಅಸಮಾಧಾನ ಹೊಂದಿದ್ದರು. ಇದೀಗ ಅಧ್ಯಕ್ಷರನ್ನು ಬದಲಾವಣೆ ಮಾಡಲಾಗಿದ್ದು, ಹೊಸ ಅಧ್ಯಕ್ಷರು ಯಾವ ರೀತಿಯಲ್ಲಿ ಕಾರ್ಯನಿರ್ವಹಣೆ ಮಾಡಲಿದ್ದಾರೆ ಕಾದು ನೋಡಬೇಕಿದೆ.
Read More »ಸೌಭಾಗ್ಯ ಲಕ್ಷ್ಮಿ ಶುಗರ್ಸ್ ನಲ್ಲಿ ವಾಲ್ಮೀಕಿ ಜಯಂತಿ ಆಚರಣೆ
ಸೌಭಾಗ್ಯ ಲಕ್ಷ್ಮಿ ಶುಗರ್ಸ್ ನಲ್ಲಿ ವಾಲ್ಮೀಕಿ ಜಯಂತಿ ಆಚರಣೆ ಗೋಕಾಕ:ನಾಡಿನಾದ್ಯಂತ ವಾಲ್ಮೀಕಿ ಜಯಂತಿ ಆಚರಣೆ ನಡೀತಿದೆ ಇಂದು ಶ್ರೀ ಸಂತೋಷ್ ಜಾರಕಿಹೊಳಿ ಅವರ ನೇತೃತ್ವದಲ್ಲಿ ಇರುವ ಶ್ರೀ ಸೌಭಾಗ್ಯ ಲಕ್ಷ್ಮಿ ಶುಗರ್ಸ್ ನಲ್ಲಿ ಕೂಡ ಸಿಬ್ಬಂದಿ ವರ್ಗ ಹಾಗೂ ಸಾಹುಕಾರರು ಸೇರಿ ವಾಲ್ಮೀಕಿ ಜಯಂತಿ ಆಚರಣೆ ಯನ್ನ ಅತ್ಯಂತ ಸರಳ ರೀತಿಯಲ್ಲಿ ಮಾಡಲಾಯಿತು ಈ ಒಂದು ಸಂಧರ್ಭದಲ್ಲಿ ಕಾರ್ಖಾನೆಯ ಸಿಬ್ಬಂದಿ ಹಾಗೂ ಶ್ರೀ ಸಂತೋಷ್ ಜಾರಕಿಹೊಳಿ ಅವರು …
Read More »ಬೆಳಗಾವಿಗೆ ಆಗಮಿಸಿದ ಕಿತ್ತೂರು ಉತ್ಸವದ ವೀರಜ್ಯೋತಿಗೆ ಸ್ವಾಗತ ಕೋರಿ, ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಲಾಯಿತು.
ಬೆಳಗಾವಿಗೆ ಆಗಮಿಸಿದ ಕಿತ್ತೂರು ಉತ್ಸವದ ವೀರಜ್ಯೋತಿಗೆ ಸ್ವಾಗತ ಕೋರಿ, ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಲಾಯಿತು. ಅಕ್ಟೋಬರ್ 23 ಮತ್ತು 24ರಂದು ಎರಡು ದಿನಗಳ ಕಿತ್ತೂರು ಉತ್ಸವ ನಡೆಯುವ ಹಿನ್ನೆಲೆಯಲ್ಲಿ ಖಾನಾಪುರದಿಂದ ಆಗಮಿಸಿದ ವೀರಜ್ಯೋತಿಯನ್ನು ಬೆಳಗಾವಿಯಲ್ಲಿ ಅತ್ಯಂತ ಅದ್ಧೂರಿಯಾಗಿ ಬರಮಾಡಿಕೊಳ್ಳಲಾಯಿತು. ವೀರಜ್ಯೋತಿಯನ್ನು ಬೆಳಗಾವಿಯ ಕಿತ್ತೂರು ರಾಣಿ ಚನ್ನಮ್ಮಾಜಿ ವೃತ್ತದಲ್ಲಿ ಸಕಲ ವಾಧ್ಯ ಮೇಳಗಳೊಂದಿಗೆ ಜಿಲ್ಲಾಡಳಿತ ವತಿಯಿಂದ ಬರಮಾಡಿಕೊಳ್ಳಲಾಯಿತು. 25ನೇ ವರ್ಷದ ಉತ್ಸವ ಬೆಳ್ಳಿಹಬ್ಬವನ್ನು ನಾವು ಆಚರಿಸುತ್ತಿದ್ದೇವೆ. ಮುಖ್ಯಮಂತ್ರಿಗಳು ಕೂಡ ಕಾರ್ಯಕ್ರಮಕ್ಕೆ ಬರುತ್ತಿದ್ದಾರೆ. …
Read More »ಸೌಭಾಗ್ಯ ಲಕ್ಷ್ಮಿ ಶುಗರ್ಸ್ ನಲ್ಲಿ ಮೋದಲ್ನೆಯ ಸಕ್ಕರೆ ಉತ್ಪಾದನೆ ಪೂಜೆ ಸಲ್ಲಿಸಿದ ಶ್ರೀಮತಿ ಅಂಬಿಕಾ ಸಂತೋಷ ಜಾರಕಿಹೊಳಿ ಹಾಗೂ ಛೋಟಾ ಸಾಹುಕಾರ
ಗೋಕಾಕ ;ಸೌಭಾಗ್ಯ ಲಕ್ಷ್ಮೀ ಶುಗರ್ಸ್ ಈ ವರ್ಷದ ಸಕ್ಕರೆ ಉತ್ಪಾದನೆ ಪ್ರಾರಂಭ ವಾಗಿದೆ ಹೌದು ಶ್ರೀ ಸಂತೋಷ್ ಜಾರಕಿಹೊಳಿ ಅವರ್ ನೇತೃತ್ವದ ಈ ಒಂದು ಕಾರ್ಖಾನೆ ಮೊನ್ನೆ ಯಷ್ಟೇ ಕಬ್ಬು ನೂರಿಸಲು ಪ್ರಾರಂಭ ಮಾಡಿತ್ತು ಇಂದು ಸಕ್ಕರೆ ಆಗಿ ಹೊರ ಹೊಮ್ಮಿದೆ .ಇಂದು ಈ ವರ್ಷದ ಮೊದಲನೆಯ ಸಕ್ಕರೆ ಉತ್ಪಾದನೆ ಯಾಗಿದ್ದು ಶ್ರೀಮತಿ ಅಂಬಿಕಾ ಸಂತೋಷ್ ಜಾರಕಿಹೊಳಿ ಹಾಗೂ ಸುಪುತ್ರ ಶ್ರೀ ಸೂರ್ಯ …
Read More »