Breaking News

ಬೆಳಗಾವಿ

ಬೆಳಗಾವಿನಗರದ ಜೀವನಾಡಿ ರಕ್ಕಸಕೊಪ್ಪ ಡ್ಯಾಂ ಭರ್ತಿ

ಬೆಳಗಾವಿ: ಮಹಾರಾಷ್ಟ್ರದ ಪಶ್ಚಿಮಘಟ್ಟ ಪ್ರದೇಶದಲ್ಲಿ (Maharashtra Western hills) ಧಾರಾಕಾರ ಮಳೆ (Rainfall) ಮುಂದುವರಿದಿದ್ದು, ಬೆಳಗಾವಿ ಜಿಲ್ಲೆಯ ನದಿಗಳು (Belagavi Rivers) ಮೈದುಂಬಿ ಹರಿಯುತ್ತಿವೆ. ಬೆಳಗಾವಿ ಜಿಲ್ಲೆಯ ಮಲಪ್ರಭಾ (Malaprabha), ಘಟಪ್ರಭಾ (Ghataprabha), ಮಾರ್ಕಂಡೇಯ (Markandeya) ನದಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ‌.‌ ಇದೇ ರೀತಿ ಇನ್ನೂ ಹದಿನೈದು ದಿನಗಳ ಕಾಲ ಮಳೆ ಮುಂದುವರಿದರೆ ನದಿಪಾತ್ರದ ಗ್ರಾಮಗಳಲ್ಲಿ ಪ್ರವಾಹ ಭೀತಿ ಉಂಟಾಗಲಿದೆ. ಸದ್ಯ ಪಶ್ಚಿಮಘಟ್ಟ ಪ್ರದೇಶದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು …

Read More »

ಸಿ.ಎಂ. ಆಯ್ಕೆ ಚುನಾವಣೆ ಮುಗಿದ ಮೇಲೆ ನೋಡೋಣ ನಾನು ಆ ರೇಸ್‍ನಲ್ಲಿ ಇಲ್ಲ

ಮುಖ್ಯಮಂತ್ರಿ ಆಯ್ಕೆ ಚುನಾವಣೆ ಮುಗಿದ ಮೇಲೆ ನೋಡೋಣ, ಸದ್ಯಕ್ಕೆ ನಾನು ಸಿಎಂ ರೇಸ್‍ನಲ್ಲಿ ಇಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ. ಹಾರೂಗೇರಿ ಪಟ್ಟಣದಲ್ಲಿ ಕಾಂಗ್ರೆಸ್ ಪಕ್ಷದ ಬೃಹತ್ ಸೈಕಲ್ ಜಾಥಾ ಸಮಾರೋಪ ಸಮಾವೇಶದಲ್ಲಿ ಭಾಗಿಯಾಗಲು ಆಗಮಿಸಿದ್ದ ವೇಳೆ ಸಿದ್ದರಾಮಯ್ಯ ಸಿಎಂ ಆಗುವ ಇಂಗಿತ ವಿಚಾರಕ್ಕೆ ಮಾಧ್ಯಮಗಳ ಜೊತೆಗೆ ಮಾತನಾಡಿದ ಸತೀಶ ಜಾರಕಿಹೊಳಿ ಚುನಾವಣೆ ಆದ ಮೇಲೆ ಮುಖ್ಯಮಂತ್ರಿಗಳ ಆಯ್ಕೆ ಆಗುತ್ತದೆ. ಸಧ್ಯಕ್ಕೆ ನಾನು ಸಿಎಂ ರೇಸ್‍ನಲ್ಲಿ ಇಲ್ಲ …

Read More »

ಕಮತನೂರ ಗೇಟ ಬಳಿ ದಾಳಿ ಮಾಡಿ 18.30 ಲಕ್ಷ ರೂಪಾಯಿ ಮೌಲ್ಯದ 280 ಬಾಕ್ಸ ಮದ್ಯವನ್ನು ವಶಕ್ಕೆ ಪಡೆದುಕೊಂಡ ಅಬಕಾರಿ ಅಧಿಕಾರಿಗಳು

ಗೋವಾ ರಾಜ್ಯದಿಂದ ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದ್ದ ವಿವಿಧ ಕಂಪನಿಯ 18.30 ಲಕ್ಷ ರೂಪಾಯಿ ಮೌಲ್ಯದ ಸಾರಾಯಿಯನ್ನು ಚಿಕ್ಕೋಡಿ ವಲಯದ ಅಬಕಾರಿ ಅಧಿಕಾರಿಗಳು ಲಾರಿ ಸಮೇತ ವಶಪಡಿಸಿಕೊಂಡಿದ್ದಾರೆ. ಹೌದು ಗೋವಾ ರಾಜ್ಯದಿಂದ ಅಂಬೋಲಿ ಮಾರ್ಗವಾಗಿ ಐಚರ್ ಲಾರಿಯೊಂದರಲ್ಲಿ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ವೇಳೆ ಹುಕ್ಕೇರಿ ತಾಲೂಕಿನ ಕಮತನೂರ ಗೇಟ ಬಳಿ ದಾಳಿ ಮಾಡಿದ ಅಬಕಾರಿ ಅಧಿಕಾರಿಗಳು 18.30 ಲಕ್ಷ ರೂಪಾಯಿ ಮೌಲ್ಯದ 280 ಬಾಕ್ಸ ಮದ್ಯವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಅಕ್ರಮ ಸಾರಾಯಿ …

Read More »

ಜನರು ಆಶೀರ್ವಾದ ಮಾಡಿದಾಗ ಮಾತ್ರ ಮುಖ್ಯಮಂತ್ರಿಯಾಗಲು ಸಾಧ್ಯ. ಎಲ್ಲರಿಗೂ ಮುಖ್ಯಮಂತ್ರಿ ಆಗುವ ಆಸೆ ಇರುತ್ತದೆ : ಮಾಧುಸ್ವಾಮಿ

ಅಥಣಿ (ಬೆಳಗಾವಿ): ಎಲ್ಲರಿಗೂ ಸಿಎಂ ಆಗೋಕೆ ಆಸೆ ಇರುತ್ತದೆ. ಸಿದ್ದರಾಮಯ್ಯ ಅವರಿಗೂ ಆಸೆಯಿದೆ. ಜನರು ಆಶೀರ್ವಾದ ಮಾಡಿದಾಗ ಮಾತ್ರ ಮುಖ್ಯಮಂತ್ರಿ ಆಗುವುದಕ್ಕೆ ಸಾಧ್ಯ. ಈಗಾಗಲೇ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾರೆ, ಇನ್ನೊಮ್ಮೆ ಸಿಎಂ ಆಗ್ಬೇಕು ಅಂತ ಆಸೆ ವ್ಯಕ್ತಪಡಿಸುತ್ತಿದ್ದಾರೆ. ಇದಕ್ಕೆ ಜನರು ತೀರ್ಮಾನ ಮಾಡಬೇಕೆಂದು ಎಂದು ಚಿಕ್ಕ ನೀರಾವರಿ ಹಾಗೂ ಕಾನೂನು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ ಮಾಧುಸ್ವಾಮಿ ಹೇಳಿದರು.   ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಬಾಡಗಿ ಗ್ರಾಮದಲ್ಲಿ ಕೆರೆ ತುಂಬಿಸುವ …

Read More »

ಹಿಡಕಲ್‌ ಡ್ಯಾಮ್‌ನಲ್ಲಿ ಅಂಗಡಿ ಇಟ್ಟುಕೊಂಡಿದ್ದ ವ್ಯಕ್ತಿಯೊಬ್ಬನನ್ನು ಅಕ್ಕ-ಪಕ್ಕದ ಮನೆಯವರೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ

ಬೆಳಗಾವಿ: ಹುಕ್ಕೇರಿ ತಾಲೂಕಿನ ಹಿಡಕಲ್‌ ಡ್ಯಾಮ್‌ನಲ್ಲಿ ಇಂದು ವ್ಯಕ್ತಿಯೊಬ್ಬರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಡ್ಯಾಮ್‌ನಲ್ಲಿ ದಿನಸಿ ಅಂಗಡಿ ಇಟ್ಟುಕೊಂಡಿದ್ದ ಪರಶುರಾಮ ಹಲಕರ್ಣಿ (32) ಕೊಲೆಯಾದವರು. ಗ್ರಾಮದ ಆಂಜನೇಯ ಮಂದಿರದ ಹತ್ತಿರ ಮಾರಕಾಸ್ತ್ರಗಳಿಂದ ದಾಳಿ ಮಾಡಿದ ಮೂವರು ದುಷ್ಕರ್ಮಿಗಳು, ಕೊಚ್ಚಿ ಕೊಲೆ ಮಾಡಿದ್ದಾರೆ. ಕೊಲೆ ನಡೆದ ಕೆಲವು ಗಂಟೆಗಳ ನಂತರ ಆರೋಪಿ ಬಸವರಾಜ ಗಲಾಟೆ (30) ಎನ್ನುವವರನ್ನು ಪೊಲೀಸರು ಬಂಧಿಸಿದ್ದಾರೆ. ಇದಾದ ಕೆಲ ಹೊತ್ತಿನಲ್ಲೇ ಇನ್ನಿಬ್ಬರು ಆರೋಪಿಗಳಾದ ಮಂಜು ಪುಟಜಾನೆ (24) …

Read More »

ಕಾಂಗ್ರೆಸ್ ಅಭಿವೃದ್ಧಿ ಕೆಲಸಗಳೇ ಮುಂದಿನ ಚುನಾವಣೆಯಲ್ಲಿ ವರದಾನ: ಶಾಸಕಿ ಲಕ್ಷ್ಮೀ ಹೆಬ್ಬಾಳಕರ

ಕುಡಚಿ: ಕಳೆದ ಅವಧಿಯಲ್ಲಿ ಕಾಂಗ್ರೆಸ್ ಸರ್ಕಾರ ಉತ್ತಮ ಆಡಳಿತ ನೀಡುವುದರ ಜೊತೆಗೆ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿದೆ, ಈ ಅಭಿವೃದ್ಧಿ ಕೆಲಸಗಳೇ ಮುಂಬರಲಿರುವ ವಿಧಾನಸಭಾ ಚುನಾವಣೆಗೆ ವರದಾನವಾಗಲಿವೆ ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಹೇಳಿದರು.       ಅವರು ಕುಡಚಿ ವಿಧಾನಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಮತ್ತು ಪಕ್ಷದ ಸಂಘಟನೆಯ ಹಿತ ದೃಷ್ಟಿಯಿಂದ 6 ದಿನಗಳ ಕಾಲ ಹಮ್ಮಿಕೊಳ್ಳಲಾಗಿದ್ದ ಬೃಹತ್ ಸೈಕಲ್ ಜಾಥಾದ ಕೊನೆಯ …

Read More »

ಹಡಪದ ಅಪ್ಪಣ್ಣ ಜಯಂತಿ ಅಂಗವಾಗಿ ಜರುಗಿದ ಮೆರವಣಿಗೆ ಜಾಥಾಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಚಾಲನೆ ನೀಡಿದರು.

ಮೂಡಲಗಿ : ಹಡಪದ ಅಪ್ಪಣ್ಣನವರು 12ನೇ ಶತಮಾನದಲ್ಲಿ ಬಸವಣ್ಣನವರ ಅನುಯಾಯಿಯಾಗಿ ಸಮಾಜ ಸುಧಾರಣೆಗೆ ಶ್ರಮಿಸಿದ ಮಹಾನ್ ಪುರುಷರಾಗಿದ್ದರು ಎಂದು ಕೆಎಂಎಫ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ತಿಳಿಸಿದರು. ಪಟ್ಟಣದಲ್ಲಿ ಮೂಡಲಗಿ ತಾಲೂಕಾ ಹಡಪದ ಅಪ್ಪಣ್ಣ ಸಮಾಜ ಸಮಗ್ರ ಅಭಿವೃದ್ಧಿ ಸಂಘವು ಏರ್ಪಡಿಸಿದ್ದ ಹಡಪದ ಅಪ್ಪಣ್ಣನವರ ಜಯಂತಿ ಉತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಹಡಪದ ಅಪ್ಪಣ್ಣನವರ ವಚನಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಹೇಳಿದರು. ಹಡಪದ ಅಪ್ಪಣ್ಣನವರು …

Read More »

ದೂಧಗಂಗಾ ನದಿಯಲ್ಲಿ ಮೀನು ಹಿಡಿಯಲು ಹೋದ ವ್ಯಕ್ತಿ ನದಿಯಲ್ಲಿ ಮುಳುಗಿ ವ್ಯಕ್ತಿ ಸಾವು

ನಿಪ್ಪಾಣಿ (ಬೆಳಗಾವಿ): ಜಿಲ್ಲೆಯ ನಿಪ್ಪಾಣಿ ತಾಲ್ಲೂಕಿನ ಮಾಂದೂರು ಗ್ರಾಮದ ಬಳಿ ದೂಧಗಂಗಾ ನದಿಯಲ್ಲಿ ಮೀನು ಹಿಡಿಯಲು ಹೋದ ವ್ಯಕ್ತಿಯೊಬ್ಬರು ಶನಿವಾರ ನದಿಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಮಾಂದೂರಿನ ನಿವಾಸಿ ಶಿವಾಜಿ ಕೊರವಿ (54) ಮೃತಪಟ್ಟವರು. ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಮಳೆ ಮುಂದುವರಿದಿದ್ದು, ಗ್ರಾಮದ ಹೊರವಲಯದಲ್ಲಿ ದೂಧಗಂಗಾ ನದಿ ಧುಮ್ಮಿಕ್ಕುತ್ತಿದೆ. ಶನಿವಾರ ಬೆಳಿಗ್ಗೆ ಮೀನು ಹಿಡಿಯಲು ನದಿಗೆ ಇಳಿದಿದ್ದ ಶಿವಾಜಿ ನೋಡನೋಡುತ್ತಿದ್ದಂತೆ ನೀರಿನ ಸೆಳವಿಗೆ ಸಿಕ್ಕು ತೇಲಿಹೋದರು ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಹಾಗೂ …

Read More »

ರಕ್ಕಸಕೊಪ್ಪ ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಭರ್ತಿಗೆ ನಾಲ್ಕೇ ಅಡಿ ಬಾಕಿ

ಬೆಳಗಾವಿ: ಪಶ್ಚಿಮಘಟ್ಟ ಪ್ರದೇಶದಲ್ಲಿ ಕಳೆದೊಂದು ವಾರದಿಂದ ಸುರಿಯುತ್ತಿರುವ ಉತ್ತಮ ಮಳೆಯಿಂದಾಗಿ ಮಾರ್ಕಂಡೇಯ ನದಿ ಉಕ್ಕಿ ಹರಿಯುತ್ತಿದ್ದು, ತಾಲ್ಲೂಕಿನ ರಕ್ಕಸಕೊಪ್ಪ ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಹರಿದುಬರುತ್ತಿದೆ. ಭರ್ತಿಗೆ ಕೇವಲ ನಾಲ್ಕೇ ಅಡಿ ಬಾಕಿ ಇದೆ.   2,475 ಅಡಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿರುವ ಜಲಾಶಯದಲ್ಲಿ ಶುಕ್ರವಾರದ ಬೆಳಿಗ್ಗೆವರೆಗೆ 2,471 ಅಡಿ ನೀರು ಸಂಗ್ರಹವಾಗಿದೆ. ‘ಪ್ರತಿವರ್ಷ ಜುಲೈ ಅಂತ್ಯಕ್ಕೆ ಭರ್ತಿಯಾಗುತ್ತಿತ್ತು. ಆದರೆ, ಖಾನಾಪುರ, ಬೆಳಗಾವಿ ತಾಲ್ಲೂಕು ಹಾಗೂ ಮಹಾರಾಷ್ಟ್ರದಲ್ಲಿ ಬಿಟ್ಟುಬಿಡದೆ ಮಳೆಯಾಗುತ್ತಿರುವುದರಿಂದ …

Read More »

ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಸಾಕಷ್ಟು ಅವಾಂತರಗಳು ಜಿಲ್ಲೆಗೆ ಬರದೇ, ಎಲ್ಲೋ ಕುಳಿತ ಉಸ್ತುವಾರಿ ಸಚಿವ: ಸತೀಶ ಜಾರಕಿಹೊಳಿ

ಬೆಳಗಾವಿ: ‘ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಸಾಕಷ್ಟು ಅವಾಂತರಗಳು ಉಂಟಾಗುತ್ತಿವೆ. ಪ್ರವಾಹ ಪರಿಸ್ಥಿತಿ ಎದುರಾಗುವ ಸಾಧ್ಯತೆ ಇದೆ. ಇಷ್ಟಾದರೂ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಗೆ ಬರದೇ, ಎಲ್ಲೋ ಕುಳಿತು ಮಾತನಾಡುತ್ತಿದ್ದಾರೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ ಕಿಡಿ ಕಾರಿದರು.   ‘ಗಡಿ ಜಿಲ್ಲೆಯಲ್ಲಿ ಬಿಟ್ಟೂಬಿಡದೆ ಮಳೆ ಸುರಿಯುತ್ತಿದೆ. ಈಗಾಗಲೇ ಶಾಲೆ, ಮನೆಗಳ ಕಟ್ಟಡಗಳೂ ಕುಸಿದಿವೆ. ಜೀವ ಹಾನಿಯಾಗಿದೆ. ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿಲ್ಲ. ಜಿಲ್ಲಾ ಉಸ್ತುವಾರಿ ವಹಿಸಿಕೊಂಡ ಗೋವಿಂದ ಕಾರಜೋಳ …

Read More »