Breaking News

ಬೆಳಗಾವಿ

ರಾಜ್ಯ ಪೊಲೀಸ್‌ ಇಲಾಖೆಯಿಂದ ಕೊಡಮಾಡುವ ಡಿಜಿ ಮತ್ತು ಐಜಿಪಿ ಪ್ರಶಸ್ತಿಗೆ ಬೆಳಗಾವಿಯ ಒಂಬತ್ತು ಅಧಿಕಾರಿಗಳು ಆಯ್ಕೆಯಾಗುವ ಮೂಲಕ ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾರೆ.

ಬೆಳಗಾವಿ : ರಾಜ್ಯ ಪೊಲೀಸ್‌ ಇಲಾಖೆಯಿಂದ ಕೊಡಮಾಡುವ ಡಿಜಿ ಮತ್ತು ಐಜಿಪಿ ಪ್ರಶಸ್ತಿಗೆ ಬೆಳಗಾವಿಯ ಒಂಬತ್ತು ಅಧಿಕಾರಿಗಳು ಆಯ್ಕೆಯಾಗುವ ಮೂಲಕ ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾರೆ. ಬೆಳಗಾವಿ ಉತ್ತರ ವಲಯ ಐಜಿಪಿ ಚೇತನ್ ಸಿಂಗ್ ರಾಥೋರ್‌, ನಗರ ಪೊಲೀಸ್ ಆಯುಕ್ತ, ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಹೆಚ್ಚುವರಿ ಎಸ್ಪಿ ಶ್ರುತಿ ಎನ್.ಎಸ್, ಬೆಳಗಾವಿ ನಗರ ಸಿಇಎನ್‌ ಠಾಣೆ ಸಿಪಿಐ ಬಿ.ಆರ್ ಗಡ್ಡೆಕರ್, ನಿಪ್ಪಾಣಿ ಠಾಣೆ ಸಿಪಿಐ ಬಾಳಪ್ಪ ತಳವಾರ. ಕೆಎಸ್‌ಆರ್ಪಿ ಸ್ಪೆಷಲ್ ಆರ್ಪಿಐ …

Read More »

ಅಂಗವಿಕಲರಿಗೆ ಮೋಟಾರ್ ಸೈಕಲ್ ವಿತರಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ

ಗೋಕಾಕ – ಅಂಗವಿಕಲರಿಗೆ ಸರಕಾರವು ಹಲವಾರು ಯೋಜನೆಗಳನ್ನು ರೂಪಿಸಿದ್ದು, ಅಂಥ ಯೋಜನೆಗಳನ್ನು ಸದ್ಭಳಕೆ ಮಾಡಿಕೊಂಡು ಸಮಾಜದ ಮುಖ್ಯ ವಾಹಿನಿಗೆ ಬರುವಂತೆ ಅರಭಾವಿ ಶಾಸಕ ಮತ್ತು ಬೇಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು. ಗುರುವಾರದಂದು ನಗರದ ತಮ್ಮ ಗೃಹ ಕಚೇರಿಯ ಆವರಣದಲ್ಲಿ ಅಂಗವಿಕಲ ಫಲಾನುಭವಿಗಳಿಗೆ ದ್ವಿಚಕ್ರ ವಾಹನ (ಹೀರೋ ಸ್ಕೂಟಿ) ಗಳನ್ನು ವಿತರಿಸಿ ಅವರು ಮಾತನಾಡಿದರು. ಅಂಗವಿಕಲರು ಸಹ ಸಮಾಜದ ಮುಖ್ಯ ವಾಹಿನಿಗೆ ಬರಬೇಕು. ಸ್ವಾವಲಂಬಿ ಬದುಕು ಸಾಗಿಸಬೇಕು. ಅದಕ್ಕಾಗಿ ಸರಕಾರವು …

Read More »

ಬೇಸಿಗೆ ಕಾಲದಲ್ಲಿ ಜನ ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿನ ತೊಂದರೆ ಆಗದಂತೆ ಪರಿಸ್ಥಿತಿಯನ್ನು ನಿಭಾಯಿಸಿ

ಗೋಕಾಕ – ಪ್ರಸಕ್ತ ಬೇಸಿಗೆ ಕಾಲದಲ್ಲಿ ಜನ ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿನ ತೊಂದರೆ ಆಗದಂತೆ ಪರಿಸ್ಥಿತಿಯನ್ನು ನಿಭಾಯಿಸಿ. ಜೂನ್ , ಜುಲೈ ತಿಂಗಳಲ್ಲಿ ಮಳೆಗಾಲ ಬರುತ್ತಿರುವುದರಿಂದ ಈಗಲೇ ಅಗತ್ಯವಿರುವ ಎಲ್ಲಾ ಏರ್ಪಾಡುಗಳನ್ನು ಮಾಡಿಕೊಳ್ಳಲು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಗುರುವಾರದಂದು ಸಂಜೆ ಇಲ್ಲಿಯ ಎನ್ ಎಸ್ ಎಫ್ ಕಚೇರಿಯಲ್ಲಿ ಕರೆದ ಗೋಕಾಕ ಮತ್ತು ಮೂಡಲಗಿ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ …

Read More »

ಕರ್ನಲ್ ಸೋಫಿಯಾ ಖುರೇಶಿ ಅವರ ಮಾವನ ಮನೆ ಧ್ವಂಸ ಕುರಿತು ಸುಳ್ಳು ಸುದ್ದಿ ಹರಡಿದ ಕಿಡಿಗೇಡಿಗಳ ವಿರುದ್ಧ ಎಫ್​ಐಆರ್

ಬೆಳಗಾವಿ: ಗೋಕಾಕ್ ತಾಲೂಕಿನ ಕೊಣ್ಣೂರ ಗ್ರಾಮದಲ್ಲಿರುವ ಕರ್ನಲ್ ಸೋಫಿಯಾ ಖುರೇಶಿ ಅವರ ಮಾವನ ಮನೆ ಧ್ವಂಸಗೊಳಿಸಿದ್ದಾಗಿ ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಸುಳ್ಳು ಪೋಸ್ಟ್ ಹಾಕಿದ ಕಿಡಿಗೇಡಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಬೆಳಗಾವಿ ಜಿಲ್ಲಾ ಸಿಇಎನ್ ಠಾಣೆಯಲ್ಲಿ ಸ್ವಯಂಪ್ರೇರಿತ ದೂರನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ಅನೀಸ್ ಉದ್ದೀನ್, ಖುಬಾನಿ, ದ್ರುಮ್ಮಿ (Anis Uddin, Khubaani, Drummi) ಎಕ್ಸ್ ಖಾತೆ ಹೋಲ್ಡರ್ ವಿರುದ್ಧ ಪ್ರಕರಣ ದಾಖಲಾಗಿದೆ. ಆರ್‌ಎಸ್ಎಸ್‌ ಕಾರ್ಯಕರ್ತರಿಂದ ಕರ್ನಲ್ ಸೋಫಿಯಾ ಖುರೇಶಿ ಮನೆ …

Read More »

ಕ್ರಿಕೆಟ್ ಬಾಲ್ ಕಿರಿಕ್…ಶಿಕ್ಷಕನ ಮೇಲೆ ಬೀಯರ್ ಬಾಟಲ್ ಗ್ಲಾಸ್ ನಿಂದಲೇ ಹಲ್ಲೆ..!!!

ಕ್ರಿಕೆಟ್ ಬಾಲ್ ಕಿರಿಕ್…ಶಿಕ್ಷಕನ ಮೇಲೆ ಬೀಯರ್ ಬಾಟಲ್ ಗ್ಲಾಸ್ ನಿಂದಲೇ ಹಲ್ಲೆ..!!! ಯುವಕ ಹಲ್ಲೆ ಮಾಡುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ…. ಕ್ರಿಕೆಟ್ ಬಾಲ್ ವಿಚಾರವಾಗಿ ನಡೆದಿದ್ದ ವಾಗ್ವಾದದಲ್ಲಿ ಯುವಕನೋರ್ವ ಶಿಕ್ಷಕನ ಮೇಲೆ ಬಿಯರ್ ಬಾಟಲಿಯಿಂದ ಹಲ್ಲೆ ಮಾಡಿ ಗಾಯಗೊಳಿಸಿದ ಘಟನೆ ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಸಾವಳಗಿ ಗ್ರಾಮದಲ್ಲಿ ನಡೆದಿ

Read More »

ಸಂತಿಬಸ್ತವಾಡದಲ್ಲಿ ಶಾಂತಿ ಸಭೆ ನಡೆಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ಸಂತಿಬಸ್ತವಾಡದಲ್ಲಿ ಶಾಂತಿ ಸಭೆ ನಡೆಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಬೆಳಗಾವಿ:ಸೋಮವಾರ ಅಹಿತಕರ ಘಟನೆ ನಡೆದ ಹಿನ್ನೆಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಮಂಗಳವಾರ ಸಂಜೆ ಸಂತಿಬಸ್ತವಾಡ ಗ್ರಾಮಕ್ಕೆ ಭೇಟಿ ನೀಡಿ, ಶಾಂತಿ ಸಭೆ ನಡೆಸಿದರು. ಬೆಂಗಳೂರಿನಿಂದ ಆಗಮಿಸಿದ ಸಚಿವರು, ವಿಮಾನ ನಿಲ್ದಾಣದಿಂದ ನೇರವಾಗಿ ಗ್ರಾಮಕ್ಕೆ ತೆರಳಿ, ಘಟನೆಯ ಮಾಹಿತಿ ಪಡೆದು ಶಾಂತಿ ಸಭೆ ನಡೆಸಿದರು. ಶಾಂತಿಯಿಂದ ಇರುವಂತೆ ಗ್ರಾಮಸ್ಥರಲ್ಲಿ ಸಚಿವರು ಮನವಿ ಮಾಡಿದರು. ಜೊತೆಗೆ …

Read More »

ದಲಿತ ಯುವಕನ ಮೇಲೆ ರಾಡ್’ನಿಂದ ಹಲ್ಲೆ…ಭೀಕರ ಹಲ್ಲೆಯ ದೃಶ್ಯ ಮೊಬೈಲ್’ನಲ್ಲಿ ಸೆರೆ.

ಬೆಳಗಾವಿ: ಓಕಳಿಯಲ್ಲಿ ದಲಿತ ಮಹಿಳೆಯರ ಮೇಲೆ ನೀರು ಎರಚಿದ್ದನ್ನ ಪ್ರಶ್ನಿಸಿದಕ್ಕೆ ಹಲ್ಲೆ ದಲಿತ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಕುನ್ನಾಳ ಗ್ರಾಮದಲ್ಲಿ ನಡೆದಿದೆ. ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಕುನ್ನಾಳ ಗ್ರಾಮದಲ್ಲಿ ಹನುಮಂತ ದೇವರ ಓಕಳಿಯಲ್ಲಿ ದಲಿತ ಮಹಿಳೆಯರ ಮೇಲೆ ಒತ್ತಾಯಪೂರ್ವಕ ನೀರು ಎರಚಲಾಗಿದೆ. ಇದನ್ನ ಪ್ರಶ್ನಿಸಿದಕುನ್ನಾಳ ಗ್ರಾಮದ ಲಕ್ಷ್ಮಣ್ ಮಾದರ ಮತ್ತು ಮೂವರು ಮಹಿಳೆಯರ ಮೇಲೆ ಹಲ್ಲೆ ನಡೆಸುವುದಲ್ಲದೆ. ಕಬ್ಬಿನ …

Read More »

ಮಳೆಗಾಲ ಪ್ರಾರಂಭವಾಗುತ್ತಿರುವುದರಿಂದ ಸೋಳ್ಳೆಗಳಿಂದ ಉತ್ಪನ್ನವಾಗುವ ಮಲೇರಿಯಾ, ಡೆಂಗ್ಯೂ, ಚಿಕನ್ ಗುನ್ಯಾ ರೋಗಗಳು ಹರಡದಂತೆ ಕ್ರಮವಹಿಸಿ : ಜಿಪಂ ಸಿಇಒ ರಾಹುಲ್ ಶಿಂಧೆ.

ಬೆಳಗಾವಿ : ನಗರದ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಜರುಗಿದ ಆರೋಗ್ಯ ಇಲಾಖೆಯ “ರಾಷ್ಟ್ರೀಯ ಆರೋಗ್ಯ ಅಭಿಯಾನ ಕಾರ್ಯಕ್ರಮ”ಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮಳೆಗಾಲ ಪ್ರಾರಂಭವಾಗುತ್ತಿರುವುದರಿಂದ ಸೋಳ್ಳೆಗಳಿಂದ ಉತ್ಪನ್ನವಾಗುವ ಮಲೇರಿಯಾ, ಡೆಂಗ್ಯೂ, ಚಿಕನ್ ಗುನ್ಯಾ ರೋಗಗಳು ಹರಡದಂತೆ ಕ್ರಮಕೈಗೊಳ್ಳಲು ಪಂಚಾಯತರಾಜ್ ಇಲಾಖೆ ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು. ಮಧುಮೇಹ(ಸಕ್ಕರೆ), ರಕ್ತದೊತ್ತಡ(ಬಿ.ಪಿ) ಖಾಯಿಲೆಗಳಿಗೆ ‘ಗೃಹ ಆರೋಗ್ಯ’ ಕಾರ್ಯಕ್ರಮದಡಿಯಲ್ಲಿ ಜಿಲ್ಲೆಯಲ್ಲಿ ಔಷಧಿಗಳ ದಾಸ್ತಾನು ಇದ್ದು ಈ ಕಾರ್ಯಕ್ರಮದಲ್ಲಿ …

Read More »

ಸಿಡಿಲು ಬಡಿದು ಇಬ್ಬರು ಸಾವು

ಕಾರವಾರ(ಉತ್ತರ ಕನ್ನಡ): ಸಿಡಿಲು ಬಡಿದು ಎರಡು ಮನೆಗಳಿಗೆ ಹಾನಿಯಾಗಿದ್ದು, ಅದೃಷ್ಟವಶಾತ್ ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಅಂಕೋಲಾ ತಾಲೂಕಿನ ಹಾರವಾಡದಲ್ಲಿ ಮಂಗಳವಾರ ಮುಂಜಾನೆ ನಡೆದಿದೆ. ಅಂಕೋಲಾ ಹಾರವಾಡದ ಗಾಬಿತವಾಡದಲ್ಲಿ ವಿಠ್ಠಲ ಸೀತಾರಾಮ ನಾಯ್ಕ ಮತ್ತು ಗೀತಾ ನಾರಾಯಣ ಖಾರ್ವಿ ಎಂಬುವರ ಮನೆಗಳಿಗೆ ಹಾನಿಯಾಗಿದೆ. ಮುಂಜಾನೆ ಮನೆಯಲ್ಲಿ ಕೆಲವರು ಎದ್ದು ಕೆಲಸದಲ್ಲಿ ತೊಡಗಿದ್ದ ವೇಳೆ ಇದ್ದಕ್ಕಿದ್ದಂತೆ ಕಣ್ಣೆದುರೇ ಮಿಂಚು ಹಾದು ಹೋಗಿದೆ. ಬಳಿಕ ಇಡೀ ಮನೆ ಹೊಗೆಯಿಂದ ತುಂಬಿಕೊಂಡಿತ್ತು. ಸಿಡಿಲು ಬಡಿತದಿಂದ ಮನೆಯ …

Read More »

ಹುಬ್ಬಳ್ಳಿ- ಹೈದರಾಬಾದ್ ನಡುವೆ “ಐರಾವತ” ವೋಲ್ವೊ

ಹುಬ್ಬಳ್ಳಿ: ಜಿಲ್ಲೆಯಿಂದ ಹೈದರಾಬಾದ್​​​ಗೆ ಹೋಗಿ ಬರುವ ಸಾರ್ವಜನಿಕ ಪ್ರಯಾಣಿಕರಿಗೆ ಮತ್ತಷ್ಟು ಆರಾಮದಾಯಕ ಸಾರಿಗೆ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಹುಬ್ಬಳ್ಳಿ ಹಾಗೂ ಹೈದರಾಬಾದ್ ನಡುವೆ ಐರಾವತ ವೋಲ್ವೊ ಎಸಿ ಬಸ್ ಸಂಚಾರವನ್ನು ಆರಂಭಿಸಲಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ತಿಳಿಸಿದ್ದಾರೆ. ಗೋಕುಲ ರಸ್ತೆ ಬಸ್ ನಿಲ್ದಾಣದಲ್ಲಿ ಅಧಿಕಾರಿಗಳು, ಸಾರ್ವಜನಿಕರ ಸಮಕ್ಷಮದಲ್ಲಿ ಬಸ್​​​ಗೆ ಪೂಜೆ ಸಲ್ಲಿಸಿ ನೂತನ ಮಾರ್ಗಕ್ಕೆ ಶುಭ ಹಾರೈಸಿ ಮಾತನಾಡಿದ ಅವರು, ವಾಣಿಜ್ಯ, …

Read More »