Breaking News

ಬೆಳಗಾವಿ

ಮೂಡಲಗಿ ತಾಲೂಕಿನ ಶಿವಾಪೂರ(ಹ) ಗ್ರಾಮದ ಅಡವಿ ಸಿದ್ದೇಶ್ವರ ಮಠದ ಅಡವಿ ಸಿದ್ದರಾಮ ಸ್ವಾಮೀಜಿಯವರ ನಡೆಯ ಕುರಿತು ಭಕ್ತರಲ್ಲಿ ಉಂಟಾಗಿದ್ದ ಗೊಂದಲವು ಸುಖಾಂತ್ಯ ಕಂಡಿದೆ.

ಗೋಕಾಕ: ಮೂಡಲಗಿ ತಾಲೂಕಿನ ಶಿವಾಪೂರ(ಹ) ಗ್ರಾಮದ ಅಡವಿ ಸಿದ್ದೇಶ್ವರ ಮಠದ ಅಡವಿ ಸಿದ್ದರಾಮ ಸ್ವಾಮೀಜಿಯವರ ನಡೆಯ ಕುರಿತು ಭಕ್ತರಲ್ಲಿ ಉಂಟಾಗಿದ್ದ ಗೊಂದಲವು ಸುಖಾಂತ್ಯ ಕಂಡಿದೆ. ನಗರದ ಶೂನ್ಯ ಸಂಪಾದನ ಮಠದಲ್ಲಿ ಗುರುವಾರ ಸಂಜೆ ನಾನಾ ಶ್ರೀಗಳೊಂದಿಗೆ ಕ್ಷೇತ್ರದ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಶಿವಾಪೂರ (ಹ) ದ ಅಡವಿ ಸಿದ್ದೇಶ್ವರ ಶ್ರೀಗಳ ತಪ್ಪು ಕಾಣದಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಮಠದಲ್ಲಿಯೇ ಮುಂದುವರಿಯಲು ಅಡವಿಸಿದ್ದರಾಮ ಸ್ವಾಮೀಜಿಗೆ ಅವಕಾಶ …

Read More »

ಬಳ್ಳಾರಿ‌‌ ನಾಲಾ ಅವಾಂತರ, ಗೆಣಸು ಕೊಯ್ಲಿಗೆ ರೈತರ ಹರಸಾಹಸ

ಬೆಳಗಾವಿ: ಇಲ್ಲಿನ ಬಳ್ಳಾರಿ ನಾಲೆ ಉಕ್ಕಿ ಹರಿಯುತ್ತಿದ್ದು, ಜಮೀನುಗಳಿಗೆ ನೀರು ನುಗ್ಗಿ ಬೆಳೆಗಳನ್ನು ಆಹುತಿ ಪಡೆದುಕೊಳ್ಳುತ್ತಿದೆ. ಹಾಗಾಗಿ, ಗೆಣಸು ಕಟಾವು ಮಾಡಲು ರೈತರು ಹರಸಾಹಸಪಡುತ್ತಿದ್ದಾರೆ. ಇದನ್ನು ಹಾಗೇ ಬಿಟ್ಟರೆ ಹಾಕಿದ ಬಂಡವಾಳ ಕೂಡ ಕೈ ಸೇರುವುದಿಲ್ಲ ಎಂಬ ಆತಂಕ ವ್ಯಕ್ತಪಡಿಸಿದ್ದಾರೆ. ಬೆಳಗಾವಿ ನಗರದ ಹೊರ ವಲಯದಲ್ಲಿ ಹರಿಯುವ ಬಳ್ಳಾರಿ ನಾಲೆ ಇಲ್ಲಿನ ರೈತರಿಗೆ ಶಾಪವಾಗಿ ಪರಿಣಮಿಸಿದೆ. ಆರಂಭದಲ್ಲಿ ಈ ಭಾಗದ ರೈತರಿಗೆ ವರದಾನವಾಗಿತ್ತು. ಕಳೆದ ಹತ್ತು ವರ್ಷಗಳಿಂದ ಹೂಳು ತುಂಬಿಕೊಂಡು ಪ್ರತೀ …

Read More »

ಬೆಳಗಾವಿ ಹಿಂಡಲಗಾ ಜೈಲಿನಲ್ಲಿ ಮಾದಕ ವಸ್ತು ವಿರೋಧಿ ದಿನಾಚರಣೆ ; ಜಾಗೃತಿ ನಿರ್ಮಾಣ

ಬೆಳಗಾವಿ ಹಿಂಡಲಗಾ ಜೈಲಿನಲ್ಲಿ ಮಾದಕ ವಸ್ತು ವಿರೋಧಿ ದಿನಾಚರಣೆ ; ಜಾಗೃತಿ ನಿರ್ಮಾಣ ಅಂ.ರಾ. ಮಾದಕ ದ್ರವ್ಯ ಸೇವನೆ, ಸಾಗಾಣಿಕೆ ವಿರೋಧಿ ದಿನಾಚರಣೆ ಬೆಳಗಾವಿ ಹಿಂಡಲಗಾ ಕಾರಾಗೃಹದಲ್ಲಿ ಆಯೋಜನೆ ಬೆಳಗಾವಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸಹಯೋಗ ಕಾನೂನು ಸೇವಾ ಪ್ರಾಧಿಕಾರದ ಸಂದೀಪ ಪಾಟೀಲರಿಂದ ಉದ್ಘಾಟನೆ ಬೆಳಗಾವಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಇತರೆ ಸಂಘಟನೆಗಳ ಸಂಯುಕ್ತ ಸಂಯೋಜನೆಯಲ್ಲಿ ಅಂತರರಾಷ್ಟ್ರೀಯ ಮಾದಕ ದ್ರವ್ಯ ಸೇವನೆ ಹಾಗೂ ಅಕ್ರಮ ಸಾಗಾಣಿಕೆ …

Read More »

ತುಂಬಿ ಹರಿಯುತ್ತಿರುವ ಹಾಲಾತ್ರಿ ಹಳ್ಳದಲ್ಲಿ ಥಾರ್ ದಾಟಿಸಿದ ಚಾಲಕ

ಬೆಳಗಾವಿ : ಮಹಾರಾಷ್ಟ್ರದ ಪಶ್ಚಿಮಘಟ್ಟ ಪ್ರದೇಶದಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆ ಖಾನಾಪುರದ ನದಿ, ಹಳ್ಳ-ಕೊಳ್ಳಗಳು ಉಕ್ಕಿ ಹರಿಯುತ್ತಿವೆ. ಇದರ ನಡುವೆಯೂ ಒಬ್ಬ ಚಾಲಕ ಹರಿಯುವ ನೀರಿನಲ್ಲೇ ವಾಹನ ದಾಟಿಸಿ, ದುಸ್ಸಾಹಸ ಪ್ರದರ್ಶಿಸಿರುವ ವಿಡಿಯೋ ವೈರಲ್ ಆಗಿದೆ. ಬೆಳಗಾವಿ, ಖಾನಾಪುರ, ಹೆಮ್ಮಡಗಾ-ಅನಮೋಡ ಮಾರ್ಗವಾಗಿ ಗೋವಾ ಸಂಪರ್ಕಿಸುವ ರಸ್ತೆಯಲ್ಲಿರುವ ಹಾಲಾತ್ರಿ ಹಳ್ಳ ತುಂಬಿ‌ ಹರಿಯುತ್ತಿದೆ. ಹಳ್ಳದ ಸೇತುವೆಯ ಮೇಲೆ ಅಪಾರ ಪ್ರಮಾಣದ ನೀರು ಹರಿಯುತ್ತಿದೆ. ಈ ರಸ್ತೆಯಲ್ಲಿ ಸಂಚಾರ ಸಂಪೂರ್ಣ ಬಂದ್ ಮಾಡಲಾಗಿದೆ. …

Read More »

ಪಂಢರಪುರದತ್ತ ಹೊರಟಿರುವ ಪಾದಯಾತ್ರಿಗಳು

ಬೆಳಗಾವಿ: ವಾರಕರಿಗಳ ನೇತೃತ್ವದಲ್ಲಿ ತಾಳ ಹಾಕುತ್ತಾ, ತಂಬೂರಿ-ಭಜನೆ ಬಾರಿಸುತ್ತಾ, ವೀಣೆ ನುಡಿಸುತ್ತಾ, ಅಭಂಗಗಳ ಮೂಲಕ ವಿಠ್ಠಲನ ನಾಮ ಸ್ಮರಿಸುತ್ತಾ, ತಲೆಯ ಮೇಲೆ ತುಳಸಿ ಹೊತ್ತು, ಕೈಯಲ್ಲಿ ವಿಠಲನ ಧ್ವಜ ಹಿಡಿದು ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಪಂಢರಪುರದತ್ತ ಭಕ್ತರ ಪಾದಯಾತ್ರೆ ಹೊರಟಿದೆ. ಸುರಿಯುತ್ತಿರುವ ಮಳೆಯನ್ನು ಲೆಕ್ಕಿಸದೇ ಭಕ್ತವರ್ಗ ತಮ್ಮ ಭಕ್ತಿ ಪರಾಕಾಷ್ಠೆ ಮೆರೆದಿದ್ದಾರೆ. ಹೌದು, ಈ ಎಲ್ಲ ದೃಶ್ಯ ಕಂಡು ಬಂದಿದ್ದು, ಬೆಳಗಾವಿ ರಾಣಿ ಚನ್ನಮ್ಮ ವೃತ್ತದಲ್ಲಿ. ಬೆಳಗಾವಿ ತಾಲೂಕಿನ ಸುಳಗಾ (ಯಳ್ಳೂರ) …

Read More »

ಬೆಳಗಾವಿ, ಖಾನಾಪುರ, ಕಿತ್ತೂರು ಶಾಲಾ ಕಾಲೇಜುಗಳಿಗೆ ಗುರುವಾರವೂ ರಜೆ ಘೋಷಣೆ

ಬೆಳಗಾವಿ: ಬೆಳಗಾವಿ ಜಿಲ್ಲೆಯಲ್ಲಿ ಮಹಾಮಳೆ ಬುಧವಾರವೂ ಮುಂದುವರೆದಿರುವ ಹಿನ್ನೆಲೆಯಲ್ಲಿ ಜೂನ್ 26ರಂದು ಗುರುವಾರ ಬೆಳಗಾವಿ, ಖಾನಾಪುರ ಮತ್ತು ಕಿತ್ತೂರು ತಾಲೂಕಿನ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಹೌದು, ಕಳೆದ ಮೂರು ದಿನಗಳಿಂದ ಬೆಳಗಾವಿಯಲ್ಲಿ ಬಿಟ್ಟು ಬಿಡದೇ ಮಳೆ ಸುರಿಯುತ್ತಿದೆ. ಹಾಗಾಗಿ, ಬುಧವಾರ ಎರಡು ತಾಲೂಕಿನ ಶಾಲಾ – ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಮಳೆ ಆರ್ಭಟ ಇನ್ನೂ ಜೋರಾಗಿದ್ದರಿಂದ ಜಿಲ್ಲೆಯ ಮೂರು ತಾಲೂಕುಗಳ ಅಂಗನವಾಡಿ ಕೇಂದ್ರಗಳು, ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಪ್ರಾಥಮಿಕ …

Read More »

ಯಮಕನಮರಡಿ ಮತಕ್ಷೇತ್ರದಲ್ಲಿ ಬರುವ ಅಲದಾಳ ಗ್ರಾಮದ 2 ನೂತನ ಕೂಠಡಿ

ಇವತ್ತು ಕರ್ನಾಟಕ ಸರ್ಕಾರ ಲೋಕೋಪಯೋಗಿ ಇಲಾಖೆ ಸಚಿವರು ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಸತೀಶ್ ಅಣ್ಣಾ ಜಾರಕಿಹೊಳಿ ಅವರ ಲೋಕೋಪಯೋಗಿ ಇಲಾಖೆ ಅನುದಾನದಲ್ಲಿ ಸಚಿವರ ಸೂಚನೆ ಮೇರೆಗೆ ಕರ್ನಾಟಕ ಪ್ರದೇಶ್ ಕಾಂಗ್ರೆಸ್ ಸಮಿತಿಯ ರಾಜ್ಯ ಯುವ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ರಾಹುಲ ಅಣ್ಣಾ ಜಾರಕಿಹೊಳಿ* ಅವರು ಯಮಕನಮರಡಿ ಮತಕ್ಷೇತ್ರದಲ್ಲಿ ಬರುವ ಅಲದಾಳ ಗ್ರಾಮದ 2 ನೂತನ ಕೂಠಡಿ ಒಟ್ಟು 36 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ಸರ್ಕಾರಿ ಹಿರಿಯ …

Read More »

ಮೂಡಲಗಿ | ಅವರಾದಿ ಸೇತುವೆ ಜಲಾವೃತ: ಸಂಪರ್ಕ ಸ್ಥಗಿತ

ಮೂಡಲಗಿ | ಅವರಾದಿ ಸೇತುವೆ ಜಲಾವೃತ: ಸಂಪರ್ಕ ಸ್ಥಗಿತ ಮೂಡಲಗಿ: ಪಶ್ಚಿಮಘಟ್ಟ ಹಾಗೂ ಬೆಳಗಾವಿ ಜಿಲ್ಲೆಯಲ್ಲಿ ಬಿಡುವು ಇಲ್ಲದೆ ಮಳೆಯಾಗುತ್ತಿರುವುದರಿಂದ ಘಟಪ್ರಭಾ ನದಿಗೆ ಒಳಹರಿವು ಹೆಚ್ಚಾಗಿದೆ. ತಾಲ್ಲೂಕಿನ ಅವರಾದಿ ಬಳಿಯ ಘಟಪ್ರಭಾ ನದಿಗೆ ಇರುವ ಬ್ರಿಡ್ಜ್‌ ಕಂ ಬ್ಯಾರೆಜ್‌ ಬುಧವಾರ ಮಧ್ಯಾಹ್ನ ಜಲಾವೃತಗೊಂಡು ಹಲವು ಗ್ರಾಮಗಳ ಸಂಪರ್ಕ ಸ್ಥಗಿತಗೊಂಡಿದೆ. ನದಿಯ ನೀರಿನ ಮಟ್ಟವು ಇನ್ನು ಏರಿಕೆಯಾಗುವ ಸಂಭವವಿದ್ದು ಮೂಡಲಗಿ ಸುಣಧೋಳಿ ಸಂಪರ್ಕ ಇರುವ ಸುಣಧೋಳಿ ಸೇತುವೆ, ವಡೇರಹಟ್ಟಿ ಸೇತುವೆ, ಕಮಲದಿನ್ನಿ …

Read More »

ಮಹಿಳೆಯನ್ನು ಪುಸಲಾಯಿಸಿ ಬಂಗಾರದ ಸರ ಕದ್ದ ಹಾಗೂ ಬಸ್ ನಲ್ಲಿದ್ದ ಬ್ಯಾಗ ಎಗರಿಸಿದ್ದ ಕಳ್ಳರ ಬಂಧನ

ಮಹಿಳೆಯನ್ನು ಪುಸಲಾಯಿಸಿ ಬಂಗಾರದ ಸರ ಕದ್ದ ಹಾಗೂ ಬಸ್ ನಲ್ಲಿದ್ದ ಬ್ಯಾಗ ಎಗರಿಸಿದ್ದ ಕಳ್ಳರ ಬಂಧನ ಮಹಿಳೆಯನ್ನು ಪುಸಲಾಯಿಸಿ ಬಂಗಾರದ ಸರ ಕದ್ದಿದ್ದ ಹಾಗೂ ಬಸ್ ನಲ್ಲಿ ಪ್ರಯಾಣಿಸುವಾಗ ಬ್ಯಾಗ್ ಎಗರಿಸಿದ್ದ ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ಕಳ್ಳರನ್ನು ಹಾರೂಗೇರಿ ಪೊಲೀಸರು ಬಂಧಿಸಿ ಬಂಗಾರ ವಶಪಡಿಸಿಕೊಂಡಿದ್ದಾರೆ ಬೆಳಗಾವಿ ಶಹಪುರ್ ನಿವಾಸಿ ಪದ್ಮಾವತಿ ರಾಜೇಂದ್ರ ಕುಡಚಿ ಹಾರೋಗೇರಿ ಕ್ರಾಸ್ ನಿಂದ ಮಿರಜಕ್ಕೆ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಅವರ ಬ್ಯಾಗಿನಲ್ಲಿಟ್ಟಿದ್ದ 3.60.000 ಬೆಲೆಬಾಳುವ …

Read More »

ಕಾಕತಿ ಪೊಲೀಸರ ಮಿಂಚಿನ ದಾಳಿ….. ಗಾಂಜಾ ಮಾರಾಟಗಾರರ ಬಂಧನ….

ಕಾಕತಿ ಪೊಲೀಸರಿಂದ ಮಾದಕ ವಸ್ತು ವಿರುದ್ಧ ಮಿಂಚಿನ ದಾಳಿ ಹೊನಗಾ ಕೈಗಾರಿಕಾ ಪ್ರದೇಶದಿಂದ ಇಬ್ಬರು ಆರೋಪಿಗಳ ಬಂಧನ ಪಿಎಸ್ಐ ಸುರೇಶ್ ಸಿಂಗಿ ನೇತೃತ್ವದಲ್ಲಿ ದಾಳಿ ಬಂಧಿತರಿಂದ 25000 ರೂ. ಮೌಲ್ಯದ ಗಾಂಜಾ ಜಪ್ತ ಬೆಳಗಾವಿಯ ಕಾಕತಿ ಪೋಲೀಸರು ಮಿಂಚಿನ ದಾಳಿ ನಡೆಸಿ ಇಬ್ಬರು ಗಾಂಜಾ ಮಾರಾಟಗಾರರನ್ನು ಬಂಧಿಸಿ ಗಾಂಜಾ ವಶಪಡಿಸಿಕೊಂಡಿದ್ದಾರೆ ಹೊನಗಾ ಕೈಗಾರಿಕಾ ಪ್ರದೇಶದಲ್ಲಿ ಅಕ್ರಮವಾಗಿ ಮಾದಕ ವಸ್ತು ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಪಡೆದು ಪಿಎಸ್ಐ ಸುರೇಶ ಸಿಂಗಿ …

Read More »