Breaking News

ಗೋಕಾಕ

ಸುಮಾರು 5 ಗಂಟೆಗೂ ಹೆಚ್ಚು ಸಮಯ ಕೊರೋನಾ ಸೋಂಕಿತನ ಮೃತ ದೇಹವನ್ನು ಹೊರಗಿಟ್ಟು ಗೋಕಾಕ ಸರ್ಕಾರಿ ಆಸ್ಪತ್ರೆ   ನಿರ್ಲಕ್ಷ

ಗೋಕಾಕ: ಸುಮಾರು 5 ಗಂಟೆಗೂ ಹೆಚ್ಚು ಸಮಯ ಕೊರೋನಾ ಸೋಂಕಿತನ ಮೃತ ದೇಹವನ್ನು ಹೊರಗಿಟ್ಟು ಗೋಕಾಕ ಸರ್ಕಾರಿ ಆಸ್ಪತ್ರೆ   ನಿರ್ಲಕ್ಷ ತೋರಿದ್ದಾರೆ. ಗೋಕಾಕದಲ್ಲಿ ಇದು  ಮತ್ತೊಂದು ಹೃದಯ ಕಳುಕುವ ಘಟನೆಯಾಗಿದ್ದು,  ಎರಡು ದಿನಗಳ ಹಿಂದೆ ಗೋಕಾಕ ಸರಕಾರಿ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿ ಮೃತಪಟ್ಟಿದ್ದಾನೆ. ಮೃತ ವ್ಯಕ್ತಿ ಮೂಡಲಗಿ ಪುರಸಭೆಯ ಸಿಬ್ಬಂದಿಯಾಗಿದ್ದು ಮೃತ ದೇಹವನ್ನು  ಹೊರಗಡೆ ಇಟ್ಟಿದ್ದಾರೆ. ಮೃತ ದೇಹವನ್ನು ಬೇಗನೆ ಅಂತ್ಯ ಸಂಸ್ಕಾರ ಮಾಡದೆ ಬೇಕಾಬಿಟ್ಟಿಯಾಗಿ ಮುಂಜಾನೆ …

Read More »

ಕೊರೊನಾ ಮಹಾಮಾರಿಗೆ ಬಲಿಯಾದ ವ್ಯಕ್ತಿಗಳ ಅಂತಿಮ ಸಂಸ್ಕಾರವನ್ನು ಅವರ ಧರ್ಮದ ವಿಧಿ ವಿಧಾನಗಳಂತೆ ನೆರೆವೇರಿಸಿದರು.

ಗೋಕಾಕ: ನಗರದ ಅಂಬಿಗೇರ ಗಲ್ಲಿಯ ನಿವೃತ ಮುಖ್ಯೋಪಾದ್ಯರೊಬ್ಬರು ಕೊರೊನಾ ಮಹಾಮಾರಿಗೆ ಗುರುವಾರ ಬಲಿಯಾಗಿದ್ದು ,ಅವರ ಅಂತ್ಯ ಸಂಸ್ಕಾರವನ್ನು ನಗರಸಭೆ ಸಿಬ್ಬಂದ್ದಿ ಮತ್ತು  ಪಾಪ್ಯೂಲರ್ ಫ್ರಂಟ್ ಆಫ್ ಇಂಡಿಯಾ ಕಾರ್ಯಕರ್ತರು ನೆರೆವೇರಿಸಿದರು. ಕೊರೊನಾ ಮಹಾಮಾರಿಗೆ ಬಲಿಯಾದ ಮುಖ್ಯೋಪಾದ್ಯಯರ ಅಂತಿಮ ಸಂಸ್ಕಾರವನ್ನು ಅವರ ಧರ್ಮದ ವಿಧಿ ವಿಧಾನಗಳಂತೆ  ನೆರೆವೇರಿಸಿದರು. ಪಿಏಫ್ಐ ಕಾರ್ಯಕರ್ತರು ಸ್ವಯಂ ಪ್ರೇರಣೆಯಿಂದ ಮುಖ್ಯೋಪಾದ್ಯಯವರ ಅಂತ್ಯ ಸಂಸ್ಕಾರ ನೆರೆವೇರಿಸಲು ನಗರಸಭೆ ಸಿಬ್ಬಂದ್ದಿಯೊಂದಿಗೆ ಮುಂದೆ ಬಂದು ಅಂತ್ಯ ಸಂಸ್ಕಾರ ಮಾಡಿರುವುದರಿಂದ ಪಿಎಫ್ಐ ಕಾರ್ಯಕರ್ತರು …

Read More »

ಇಂದು ಹಾಪ್ ಸೆಂಚುರಿ ಬಾರಿಸಿದ ಕೊರೋನಾ: ನಗರದ ಒಂದೇ ಕುಟುಂಬದ ಹತ್ತು ಜನರಿಗೆ ತಗುಲಿದ ಸೋಂಕು

ಗೋಕಾಕ: ಗೋಕಾಕ ತಾಲೂಕಿನಲ್ಲಿ ಮಾರಣಾಂತಿಕ ಕೊರೋನಾ ಸೋಂಕು ಪ್ರಥಮ ಬಾರಿಗೆ ಹಾಪ್ ಸೆಂಚುರಿ ಬಾರಿಸಿದ್ದು ಒಂದೇ ಕುಟುಂಬದ 10 ಜನರಿಗೆ ಕೊರೋನಾ ಧೃಡಪಟ್ಟಿದೆ ಎಂದು ತಾಲೂಕಾ ಆರೋಗ್ಯ ಅಧಿಕಾರಿ ಜಗದೀಶ ಜಿಂಗಿ ಮಾಹಿತಿ ನೀಡಿದ್ದಾರೆ.   ಗೋಕಾಕ ತಾಲೂಕಿನಲ್ಲಿ ಇಂದು ಒಟ್ಟು 57 ಪ್ರಕರಣಗಳು ವರದಿಯಾಗಿದ್ದು ಗೋಕಾಕ ನಗರದಲ್ಲಿಯೆ 24 ಸೋಂಕಿತರು ಪತ್ತೆಯಾಗಿದ್ದಾರೆ. ನಗರದ ವಿದ್ಯಾನಗರದ ಒಂದೇ ಕುಟುಂಬದ 10 ಜನರಿಗೆ ಕೊರೋನಾ ತಗುಲಿದ್ದು ಆತಂಕ ಹೆಚ್ಚಿಸಿದೆ. ಉಳಿದಂತೆ ಗೋಕಾಕ …

Read More »

ಶೀಘ್ರದಲ್ಲಿಯೇ ಗೋಕಾಕ-ಮೂಡಲಗಿ ತಾಲೂಕುಗಳಲ್ಲಿ ಕೇಂದ್ರಿಕೃತ ಆಮ್ಲಜನಕ ಪೂರೈಕೆಯ ಘಟಕ ಆರಂಭ : ಬಾಲಚಂದ್ರ ಜಾರಕಿಹೊಳಿ

ಗೋಕಾಕ : ಕೊರೊನಾ ಸೋಂಕಿನ ರೋಗಿಗಳು ಆಕ್ಸಿಜನ್ ಕೊರತೆಯಿಂದ ಸಾವನ್ನಪ್ಪುತ್ತಿರುವದರಿಂದ ಇದನ್ನು ಹೋಗಲಾಡಿಸಲು ಗೋಕಾಕ ಮತ್ತು ಮೂಡಲಗಿ ತಾಲೂಕುಗಳಲ್ಲಿ ಕೇಂದ್ರೀಕೃತ ಆಮ್ಲಜನಕ ಪೂರೈಕೆಯ ಘಟಕವನ್ನು ಪ್ರಾರಂಭಿಸುವುದಾಗಿ ಕರ್ನಾಟಕ ಹಾಲು ಮಹಾಮಂಡಳಿ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ. ಕಿಟ್‍ಗಳನ್ನು ಹಸ್ತಾಂತರಿಸುವ ಮುನ್ನ ಅಧಿಕಾರಿಗಳೊಂದಿಗೆ ಬೆಂಗಳೂರಿನಿಂದ ದೂರವಾಣಿ ಮೂಲಕ ಮಾತನಾಡಿದ ಬಾಲಚಂದ್ರ ಜಾರಕಿಹೊಳಿ ಅವರು, ಕೊರೊನಾ ರೋಗಿಗಳಿಗೆ ಸಮರ್ಪಕ ಆಕ್ಸಿಜನ್ ವ್ಯವಸ್ಥೆ ಇಲ್ಲದ್ದರಿಂದ ಸಾವನ್ನಪ್ಪುತ್ತಿದ್ದಾರೆ. ಆದ್ದರಿಂದ ಗೋಕಾಕ ಮತ್ತು ಮೂಡಲಗಿ …

Read More »

ಗೋಕಾಕ ತಾಲೂಕಿನಲ್ಲಿ ಕೊರೋನಾದ ಅಲೆ ಜೋರಾಗಿದೆ

ಗೋಕಾಕ: ನಿನ್ನೇ ಸಂಜೆ ಮತ್ತು ಇವತ್ತು ಸೇರಿ   ಕೊರೋನಾ ಒಟ್ಟು 19 ಜನರಿಗೆ ತಗುಲಿದೆ. ಸೋಮವಾರ ಸಂಜೆ ಯಿಂದ   ಮಂಗಳವಾರ ಮುಂಜಾನೆವರೆಗೆ 19 ಜನರಿಗೆ ಕೊರೋನಾ ಸೋಂಕು ದೃಡಪಟ್ಟಿದೆ. ನಗರದ ಹೆರಿಗೆ ತಜ್ಞರೊಬ್ಬರು ಮತ್ತು ಆಸ್ಪತ್ರೆ ಗ್ರೂಪ್ ಡಿ  ಸೇರಿದಂತೆ 9 ಜನರಿಗೆ , ಚಿಕ್ಕನಂದಿ -2 , ಕೌಜಲಗಿ -1 , ಕುಲಗೋಡ -1, ಮಮದಾಪೂರ -1, ರಾಜಾಪೂರ – 1, ಘಟಪ್ರಭಾ -1, ನಲ್ಲಾನಟ್ಟಿ – 2, …

Read More »

ಕೋವಿಡ್ 19 ನಿಯಂತ್ರಣಕ್ಕಾಗಿ ಹಗಲಿರುಳುದುಡಿಯುತ್ತಿರುವ ವೈದ್ಯರು ಹಾಗೂ ಸಿಬ್ಬಂದಿಯವರ ರಕ್ಷಣೆ ಕೋರಿ ಮನವಿ

ಗೋಕಾಕ : ಬೆಳಗಾವಿ ಬಿಮ್ಸ್ ನಲ್ಲಿ 22/07/2020 ರಂದು ಆಂಬುಲೆನ್ಸ್ ಸುಟ್ಟಿರುವದು ಮತ್ತು ಆಸ್ಪತ್ರೆಗೆ ನುಗ್ಗಿ ಸಿಬ್ಬಂದಿಗಳ ಮೇಲೆ ಹಲ್ಲೆ ನಡದಿದೆ. ಕೋವಿಡ್ 19 ನಿಯಂತ್ರಣಕ್ಕಾಗಿ ಹಗಲಿರುಳು ತಮ್ಮ ಪ್ರಾಣವನ್ನು ಪಣಕ್ಕೆ ಇಟ್ಟು ದುಡಿಯುತ್ತಿರುವ ವೈದ್ಯರು ಹಾಗೂ ಸಿಬ್ಬಂದಿಯವರ ರಕ್ಷಣೆ ಭರವಸೆ ನೀಡಬೇಕು. ಇಂತಹ ಘಟನೆ ಗೋಕಾಕದಲ್ಲಿ ನಡೆಯದಂತೆ ರಕ್ಷಣೆ ನೀಡಬೇಕು ಎಂದು ಇಂದು ಗೋಕಾಕ ತಾಲೂಕಿನ ಕ.ರಾ.ಸ.ನೌ.ಸಂಘ ಹಾಗೂ ಆರೋಗ್ಯ ಇಲಾಖೆಯ ಎಲ್ಲ ವಿವಿಧ ವ್ರುಂದ ಸಂಘಗಳ ವತಿಯಿಂದ …

Read More »

ನ್ಯಾಯವಾದಿಗಳ ಪಿರ್ಯಾದಿ ತೆಗೆದುಕೊಳ್ಳದ ಪೋಲಿಸ್ ಅಧಿಕಾರಿ….?

    ಕೆಲವು ದಿನಗಳ ಹಿಂದೆ ಹಿಂದು ದೇವರು ಬಗ್ಗೆ ಕೋಮು ಗಲಭೆ ಉಂಟು ಮಾಡುವ ಉದ್ದೇಶದಿಂದ ಹೇಳಿಕೆ ನೀಡಿರುವ ಮಾಜಿ ಸಚಿವ ಮುರಗೇಶ ನಿರಾಣಿಯವರ ವಿರುದ್ದ ಪಿರ್ಯಾದಿ ಕೊಡಲು ಹೋದಾಗ ಸ್ಥಳಿಯ ನಗರ ಪಿಎಸ್ಐ ಯವರು ತೆಗೆದುಕೊಳ್ಳುತ್ತಿಲ್ಲವೆಂದು ಗೋಕಾಕ ನಗರದ ನ್ಯಾಯವಾದಿಗಳಾದ ಬಸವರಾಜ ಕಾಪಸಿ ಇವರು ಪತ್ರಿಕಗೊಷ್ಟಿಯಲ್ಲಿ ಪೋಲಿಸ ಇಲಾಖೆಯ ವಿರುದ್ದ ತಮ್ಮ ಅಸಹಾಕತೆ ತೋರಿದ್ದಾರೆ. ಗೋಕಾಕನಲ್ಲಿ ಪಿ,ಎಸ್,ಐ, ಅಮ್ಮಿನಬಾವಿ ಇವರು ಮೂರ್ನಾಲ್ಕು ದಿನಗಳಿಂದ ನ್ಯಾವಾದಿಗಳು ಮುರಗೇಶ ನಿರಾಣಿ …

Read More »

ಶೀಘ್ರವೇ ನೀರಾವರಿ ಕಾಮಗಾರಿಗಳು ಆರಂಭ

ಗೋಕಾಕ: ನೀರಾವರಿ ಹಾಗೂ ರಸ್ತೆ ಕಾಮಗಾರಿಗೆ ಹೆಚ್ಚಿನ ಮಹತ್ವ ನೀಡಿ ಕಾರ್ಯ ಮಾಡಲಾಗುತ್ತಿದ್ದು, ಇಡೀ ಗೋಕಾಕ ಮತಕ್ಷೇತ್ರವನ್ನು ಸಂಪೂರ್ಣ ನೀರಾವರಿ ಮಾಡುವ ಗುರಿ ಹೊಂದಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹೇಳಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಲೋಕೋಪಯೋಗಿ ಇಲಾಖೆಯಿಂದ ಅಲ್ಪಸಂಖ್ಯಾತರ ಕಾಲೋನಿಗಳ ಅಭಿವೃದ್ಧಿಗಾಗಿ 6 ಕೋಟಿ, ಸಣ್ಣ ನೀರಾವರಿ ಇಲಾಖೆಯಿಂದ ಬಾಂದಾರ- ಕಮ್‌- ಸೇತುವೆಗಳನ್ನು ನಿರ್ಮಿಸಲು 14.80 ಕೋಟಿ ರೂ. ಕಾಮಗಾರಿಗಳು …

Read More »

ಕೊರಾನಾ ವಿರುದ್ದ ಹೋರಾಡಲು ಗೋಕಾಕದಲ್ಲಿಟಾಸ್ಕ್ ಪೋರ್ಸ್ ಸಭೆ ನಡೆಯಿತು.

ಗೋಕಾಕ: ಕೊರಾನಾ ವಿರುದ್ದ ಹೋರಾಡಲು ಗೋಕಾಕದಲ್ಲಿ ನಗರಸಭೆ ಸದಸ್ಯೆ ಲಕ್ಷ್ಮಿ ಬಸವರಾಜ ದೇಶನೂರ ಇವರ ನೇತೃತ್ವದಲ್ಲಿ ಟಾಸ್ಕ್ ಪೋರ್ಸ್ ಸಭೆ ನಡೆಯಿತು. ನಗರಸಭೆಯ ಟಾಸ್ಕ ಪೋರ್ಸ ಅಧಿಕಾರಿಯಾದ ಎಂ,ಎಚ್,ಗಜಾಕೋಶ ಇವರು ಮಾತನಾಡಿ, ಜಿಲ್ಲಾಧಿಕಾರಿಗಳ ಆದೇಶದಂತೆ ಹಲವು ಇಲಾಖೆ ಮತ್ತು ಸ್ಥಳಿಯ ಸದಸ್ಯರನ್ನು ಒಳಗೊಂಡು ಟಾಸ್ಕ್ ಪೊರ್ಸ ರಚನೆಯಾಗಿರುತ್ತದೆ. ಇದರ ಉದ್ದೇಶ ಕೊರಾನಾ ರೋಗ ಹರಡದಂತೆ ರೋಗದ ವಿರುದ್ದ ಹೊರಾಟ ಮಾಡುವುದು ಹೊರತು ರೋಗಿಯ ವಿರುದ್ದ ಅಲ್ಲ. ಅದಕ್ಕಾಗಿ ಯಾರು ಕೊರಾನಾಗೆ …

Read More »

ಮಾನವ ಬಂಧುತ್ವ ವೇದಿಕೆ ಮೂಲಕ ಯಶಸ್ವಿಯಾಗಿ ಬಸವ ಪಂಚಮಿ ಆಚರಣೆ.

ಗೋಕಾಕ: ಮಾನವ ಬಂಧುತ್ವ ವೇದಿಕೆ ಮೂಲಕ ರಾಜ್ಯಾದ್ಯಂತ ನಮ್ಮ ಬೆಂಬಲಿಗರು ಯಶಸ್ವಿಯಾಗಿ ಬಸವ ಪಂಚಮಿ ಆಚರಿಸುತ್ತಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು. ನಗರದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾಗರ ಪಂಚಮಿಯಂದು ಪ್ರತಿ ಬಸವ ಪಂಚಮಿಯಾಗಿ ಆಚರಿಸಲಾಗುತ್ತಿದೆ. ಹಾವುಗಳು ಎಂದು ಹಾಲು ಕುಡಿಯುವುದಿಲ್ಲ. ಮೂಢನಂಬಿಕೆ ಆಚರಿಸುವ ಬದಲು ಅದೇ ಹಾಲನ್ನು ಬಡ ಮಕ್ಕಳಿಗೆ, ಹಾಸ್ಟೆಲ್ ವಿದ್ಯಾರ್ಥಿಗಳಿಗೆ ನೀಡುಲು ಅಭಿಯಾನ ಆರಂಭಿಸಿದ್ದೇವೆ. ರಾಜ್ಯಾದ್ಯಂತ ಯಶಸ್ವಿಯಾಗಿ ಆಚರಿಸಲಾಗುತ್ತಿದೆ ಎಂದು ಹೇಳಿದ್ರು.

Read More »