ಗೋಕಾಕ : ನಾಳೆ ಬೆಳಿಗ್ಗೆ 8.00 ಗಂಟೆಗೆ ಗ್ರಾಮ ಪಂಚಾಯತ ಚುನಾವಣೆಯ ಮತ ಎಣಿಕೆ ಕಾರ್ಯ ಪ್ರಾರಂಭವಾಗುವುದು. Covid ಇರುವ ಕಾರಣ ಅಭ್ಯರ್ಥಿ ಅಥವಾ ಏಜೆಂಟ್ ಒಬ್ಬರಿಗೆ ಮಾತ್ರ ಒಳಗೆ ಅವಕಾಶ ಇದೆ. ಎಣಿಕೆ ಕೊಠಡಿಯ ಒಳಗೆ ಮೊಬೈಲ್, ನೀರಿನ ಬಾಟಲ್, ಯಾವುದೇ ದ್ರವ ವಸ್ತು, ಗುಟ್ಕಾ, ಪಾನ, ಸಿಗರೇಟ್ , ಕಡ್ಡಿ ಪೊಟ್ಟಣ, ಬ್ಲೇಡ್ ಅಥವಾ ಹರಿತವಾದ ವಸ್ತು, ಇತ್ಯಾದಿಗಳಿಗೆ ಅವಕಾಶ ಇರುವುದಿಲ್ಲ. ಸಂಪೂರ್ಣ ನಿಷೇಧ ಇರುತ್ತದೆ ಮತ್ತು …
Read More »ನಾಳೆ ಅಬ್ಯರ್ಥಿಗಳ ನಡೆ ಮತ ಎಣಿಕೆಯ ಕಡೆ, ಆದರೆ…….?
ಗ್ರಾಮ ಪಂಚಾಯತ ಚುನಾವಣೆ ಮುಗಿದಿದೆ.ಮತ ಎಣಿಕೆ ಮಾತ್ರ ಬಾಕಿ ಇದೆ .ನಾಳೆ ಪಲಿತಾಂಶ ಹೊರಬಿಳಲಿದೆ.ಫಲಿತಾಂಶ ಹೊರಬಿದ್ದ ಕೂಡಲೆ ಸೋಲು ಗೆಲುವು ತಿಳಿಯುತ್ತದೆ.ಆದರೆ ಸೋಲು – ಗೆಲುವು ಇದ್ದದೇ. ನಾವೆಲ್ಲರೂ ಯೊಚಿಸಬೇಕಾದ ವಿಷಯ ಕೂಡ ಅದೆ ಎನೆಂದರೆ ಸೋಲುವವರು ಗೆಲ್ಲೂವವರೂ ನಮ್ಮದೆ ಊರಿನವರು,ನಮ್ಮದೆ ಗ್ರಾಮದವರೂ ಆದಕಾರಣ ಗೆದ್ದವರೂ ಸೊತವರ ಮನಸ್ಸನ್ನು ನೋವಿಸುವಂತಹ,ಹಿಯ್ಯಾಳಿಸುವಂತಹ ಕಾರ್ಯಕ್ಕೆ ಯಾರು ಇಳಿಯಬಾರದು.ಎಕೆಂದರೆ ಗ್ರಾಮ ಪಂಚಾಯತ ಚುನಾವಣೆಯೂ ಯಾವುದೆ ಜಾತಿ – ಧರ್ಮ ಅಥವಾ ವರ್ಗಕ್ಕೆ ಸಂಬಂದಿಸಿದಲ್ಲ.ಈ ಚುನಾವಣೆಯು …
Read More »ಬಿಜೆಪಿಯವರು 7 ವರ್ಷದಲ್ಲೇ ಮಾರಿದ್ರು: ಶಾಸಕ ಸತೀಶ ಜಾರಕಿಹೊಳಿ ವಾಗ್ದಾಳಿ ಕಾಂಗ್ರೆಸ್ ಏನು ಮಾಡದಿದ್ರೆ ಸಂಸ್ಥೆಗಳನ್ನು ಹೇಗೆ ಮಾರಾಟ ಮಾಡುತಿದ್ರು?
ಗೋಕಾಕ: ಕಾಂಗ್ರೆಸ್ ಪಕ್ಷ 70 ವರ್ಷಗಳ ಕಾಲ ನಿರಂತರ ಶ್ರಮಪಟ್ಟು ಅಭಿವೃದ್ದಿಗೊಳಿಸಿದ ದೇಶವನ್ನು ಬಿಜೆಪಿಯವರು ಕೇವಲ 7 ವರ್ಷದಲ್ಲಿ ಮಾರಾಟ ಮಾಡಿದ್ದಾರೆ ಅಂತಾ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ವಾಗ್ದಾಳಿ ನಡೆಸಿದರು. ಇಲ್ಲಿನ ಹಿಲ್ ಗಾರ್ಡನ್ ನಲ್ಲಿ ಸೋಮವಾರ ನಡೆದ ಕಾಂಗ್ರೆಸ್ 136 ವರ್ಷದ ಸಂಸ್ಥಾಪನಾ ದಿನಾಚರಣೆ ಹಾಗೂ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣ, ಪೆಟ್ರೋಲಿಯಂ, ಬಿಎಸ್ಎನ್ ಎಲ್ ಎಲ್ಲವನ್ನು ಕಾಂಗ್ರೆಸ್ ನವರು 70ವರ್ಷಗಳ …
Read More »ಗೋಕಾಕ: ಜ.6 ರಂದು ತೆರಿಗೆ ಸಂದಾಯ ಮಾಡದ 21 ವಾಹನಗಳ ಹರಾಜು!!
ಗೋಕಾಕ: ಕರ್ನಾಟಕ ಮೋಟಾರು ವಾಹನ ತೆರಿಗೆ ಕಾಯ್ದೆಯ ಪ್ರಕಾರ ತೆರಿಗೆ ಸಂದಾಯ ಮಾಡದಿರುವ ಕಾರಣ ಮುಟ್ಟುಗೋಲು ಹಾಕಿಕೊಂಡಿರುವ 21 ವಾಹನಗಳನ್ನು ಜ. 6 ರಂದು ಮುಂಜಾನೆ 10.30 ಘಂಟೆಗೆ ನಗರದ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಆವರಣದಲ್ಲಿ ಬಹಿರಂಗು ಹರಾಜು ಮಾಡಲಾಗುವುದು ಸಾರಿಗೆ ಅಧಿಕಾರಿ ಟಿ.ಜೆ.ಹೇಮಾವತಿ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿರುವ ಅವರು, ಬಾಕಿ ಇರುವ ತೆರಿಗೆ ಸಂದಾಯ ಮಾಡಿ ವಾಹನವನ್ನು ತಮ್ಮ ಸ್ವಾಧೀನಕ್ಕೆ ತೆಗೆದುಕೊಳ್ಳುಲು …
Read More »ಶಿಕ್ಷಕರ ಸಂಘದಿಂದ ನಾಗಪ್ಪ ಶೇಖರಗೋಳ ಅವರಿಗೆ ಸತ್ಕಾರ
ಗೋಕಾಕ: ಶಿಕ್ಷಕರು ತಮ್ಮ ಕರ್ತವ್ಯದ ಜೊತೆಗೆ ಸಂಘದ ಪ್ರಗತಿಗೂ ಶ್ರಮಿಸಿ, ಶಿಕ್ಷಕರ ಸಂಘವನ್ನು ಮಾದರಿ ಸಂಘವನ್ನಾಗಿ ರೂಪಿಸಲು ಅರಭಾವಿ ಶಾಸಕರ ಆಪ್ತ ಸಹಾಯಕ ನಾಗಪ್ಪ ಶೇಖರಗೋಳ ಹೇಳಿದರು. ಶನಿವಾರದಂದು ನಗರದ ಎನ್‍ಎಸ್‍ಎಫ್ ಅತಿಥಿ ಗೃಹದಲ್ಲಿ ಮೂಡಲಗಿ ವಲಯದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು ನೀಡಿದ ಸತ್ಕಾರ ಸ್ವೀಕರಿಸಿ ಮಾತನಾಡಿದ ಅವರು, ಶಿಕ್ಷಕರು ರಾಷ್ಟ್ರದ ಶಿಲ್ಪಿಗಳಾಗಿದ್ದು, ಸಮಾಜವನ್ನು ಬದಲಿಸುವ ಶಕ್ತಿ ಶಿಕ್ಷಕರಿಗಿದೆ ಎಂದು ತಿಳಿಸಿದರು. ನೂತನವಾಗಿ ಸಂಘಕ್ಕೆ ಆಯ್ಕೆಯಾದ ಪದಾಧಿಕಾರಿಗಳು …
Read More »FDA, SDA ಅಬ್ಯರ್ಥಿಗಳ ಆದೇಶಕ್ಕೆ ಒಪ್ಪಿಗೆ ಸೂಚಿಸಲು ಅಬ್ಯರ್ಥಿಗಳಿಂದ ಸಚಿವರಿಗೆ ಮನವಿ
FDA, SDA ಅಬ್ಯರ್ಥಿಗಳ ಆದೇಶಕ್ಕೆ ಒಪ್ಪಿಗೆ ಸೂಚಿಸಲು ಅಬ್ಯರ್ಥಿಗಳಿಂದ ಸಚಿವರಿಗೆ ಮನವಿ 2017 ನೇ ಸಾಲಿನ ಎಸ್.ಡಿ.ಎ.ಹಾಗೂ ಎಫ್, ಡಿ,ಎ ಹುದ್ದೆಗಳಿಗೆ ನೇಮಕಾತಿ ಆದೇಶ ನೀಡಲು ಆರ್ಥಿಕ ಇಲಾಖೆಗೆ ಒಪ್ಪಿಗೆ ಸೂಚಿಸುವಂತೆ ಸಚಿವ ರಮೇಶ ಜಾರಕಿಹೊಳಿ ಅವರಿಗೆ SDA ಹಾಗೂ FDA ಅಭ್ಯರ್ಥಿಗಳು ಮನವಿ ಮಾಡಿಕೊಂಡರು. 2017 ನೇ ಸಾಲಿನ SDA ಹಾಗೂ FDA ಪರೀಕ್ಷೆಯಲ್ಲಿ ಆಯ್ಕೆಗೊಂಡು ನಿಯಮಾನುಸಾರ ಎಲ್ಲ ಮೂಲ ದಾಖಲಾತಿ ಪರಿಶೀಲನೆ ಪ್ರಕ್ರಿಯೆ ಮುಗಿದಿದ್ದು, ಹಾಗೂ ಆರ್ಥಿಕ …
Read More »ಕೊಣ್ಣೂರಲ್ಲಿ ಪೋಲಿಸ ಇಲಾಖೆಯಿಂದ ಅಪರಾದ ತಡೆ ಕಾರ್ಯಕ್ರಮ
ಬೆಳಗಾವಿ ಜಿಲ್ಲೆಯಲ್ಲಿ ಅಪರಾದ ಮಾಸಾಚಾರಣೆ ತಡೆ ನಿಮಿತ್ಯವಾಗಿ ಗೋಕಾಕ ತಾಲೂಕಿನ ಕೊಣ್ಣೂರ ಉಪ ಪೋಲಿಸ್ ಠಾಣಾವತಿಯಿಂದ ASI ಟಿ,ಎಸ್,ದಳವಾಯಿ, ನೇತೃತ್ವದಲ್ಲಿ ಪೋಲಿಸ್ ಸಿಬ್ಬಂದಿಗಳಾದ ದುಂಡೇಶ ಅಂತರಗಟ್ಟಿ, ಸಂಜೀವ ಮಾನೆಪ್ಪಗೋಳ, ಮಹೇಶ ಕಾಂಬಳೆ ಹಾಗೂ ಸರದಾರ ಹಸರಂಗಿಯವರು ಉಪಸ್ಥಿತರಿದ್ದು ಸಾರ್ವಜನಿಕರಿಗೆ ಅಪರಾದ ಮಾಡುವುದರಿಂದ ಎನೆನು ಹಾನಿಯಾಗುತ್ತದೆ ಎಂದು ತಿಳುವಳಿಕೆ ನೀಡಿದರು, ಅದರಂತೆ ಕೊರಾನಾದ ಬಗ್ಗೆ ಎಲ್ಲರೂ ಮಾಸ್ಕ್ ದರಿಸಿ ,ಸಾಮಾಜಿಕ ಅಂತರ ಕಾಯ್ದುಕೊಳ್ಳಲು ತಿಳಿಸಿದರು.
Read More »ಅವಸಾನದ ಅಂಚಿನಲ್ಲಿನ 5 ಸರ್ಕಾರಿ ಶಾಲೆಗಳನ್ನ ದತ್ತು ಪಡೆದ ಸಚಿವ ರಮೇಶ್ ಜಾರಕಿಹೊಳಿ
ಬೆಳಗಾವಿ : ಗೋಕಾಕ್ ತಾಲ್ಲೂಕಿನ ಮಮದಾಪುರ ಗ್ರಾಮದಲ್ಲಿರುವ ಸರ್ಕಾರಿ ಕನ್ನಡ ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆ ಸೇರಿ ಒಟ್ಟು ಐದು ಶಾಲೆಗಳನ್ನು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರು ದತ್ತು ಪಡೆದು, ಮಾನವೀಯತೆ ಮೆರೆದಿದ್ದಾರೆ. ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಗೋಕಾಕ್ ತಾಲ್ಲೂಕಿನಲ್ಲಿರುವ ಖನಗಾಂವ ಗ್ರಾಮದ ಕನ್ನಡ ಪ್ರಾಥಮಿಕ ಶಾಲೆ, ಮಮದಾಪೂರದ ಸರಕಾರಿ ಮಾದರಿ ಗಂಡು ಮಕ್ಕಳ ಶಾಲೆ, ಅಂಕಲಗಿಯ ಕನ್ನಡ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆ, ಧುಪಧಾಳದ …
Read More »ಅಸಲಿ-ನಕಲಿ ದೇಶಭಕ್ತರು ಯಾರು ಎಂಬುದ್ದನ್ನು ಜನರು ತೀರ್ಮಾನ ಮಾಡುತ್ತಾರೆ: ಸತೀಶ್ ಜಾರಕಿಹೊಳಿ
ಗೋಕಾಕ: ಇತಿಹಾಸದಲ್ಲಿ ಬಹಳಷ್ಟು ಘಟನೆಗಳು ನಡೆದಿವೆ. ಬಿಜೆಪಿ ಪಕ್ಷವು ದೇಶದ ಇತಿಹಾಸವನ್ನು ತಿರುಚುವ ಮೂಲಕ ಜನರನ್ನು ದಾರಿ ತಪ್ಪಿ ಸುತ್ತಿದೆ. ದೇಶದಲ್ಲಿರುವ ಪ್ರತಿಯೊಂದು ಸಮುದಾಯವು ಸಮಾನತೆ ಹಾಗೂ ಪ್ರೀತಿಯಿಂದ ಬಾಳುತ್ತಿದೆ. ಆದರೆ ಬಿಜೆಪಿಯು ಜಾತಿ ಜಾತಿಗಳ ಮಧ್ಯೆ ಜಗಳ ಹಚ್ಚಿ ದೇಶದಲ್ಲಿನ ಶಾಂತಿ ಕದಡಲು ಮುಂದಾಗಿದೆ ಎಂದು ಬಿಜೆಪಿ ವಿರುದ್ಧ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ವಾಗ್ದಾಳಿ ನಡೆಸಿದ್ದಾರೆ. ಗೋಕಾಕನ ತಮ್ಮ ಹಿಲ್ ಗಾರ್ಡನ್ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, …
Read More »ಗ್ರಾಮ ಪಂಚಾಯತಿಗಳ ಚುನಾವಣೆಯ ಮತಗಳ ಏಣಿಕೆ ಕಾರ್ಯ ದಿ. 30 ರಂದು ನಗರದ ಸರ್ಕಾರಿ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಜರುಗಲಿದ್ದು
ಗೋಕಾಕ: ಕಳೆದ ದಿ.22 ರಂದು ನಡೆದ ಗ್ರಾಮ ಪಂಚಾಯತಿಗಳ ಚುನಾವಣೆಯ ಮತಗಳ ಏಣಿಕೆ ಕಾರ್ಯ ದಿ. 30 ರಂದು ನಗರದ ಸರ್ಕಾರಿ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಜರುಗಲಿದ್ದು ಅದರ ನಿಮಿತ್ಯವಾಗಿ ಶುಕ್ರವಾರದಂದು ಸರ್ಕಾರಿ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಮತ ಏಣಿಕೆ ಕಾರ್ಯಕ್ಕೆ ನಿಯೋಜಿಸಿರುವ ಏಣಿಕೆ ಮೇಲ್ವಿಚಾರಕರಿಗೆ ಹಾಗೂ ಸಿಬ್ಬಂದಿಗೆ ಒಂದು ದಿನದ ತರಬೇತಿಥಿಟಿಜಿಟಿu ತಹಶೀಲದಾರ ಪ್ರಕಾಶ ಹೊಳೆಪ್ಪಗೋಳ ಅವರ ಅಧ್ಯಕ್ಷತೆಯಲ್ಲಿ ನೀಡಲಾಯಿತು. ನಂತರ ಪತ್ರಿಕೆಯೊಂದಿಗೆ ಮಾತನಾಡಿದ ತಹಶೀಲದಾರ ಪ್ರಕಾಶ ಹೊಳೆಪ್ಪಗೋಳ ಅವರು, ದಿ. …
Read More »