Breaking News

ಗೋಕಾಕ

ಯೂ ಟ್ಯೂಬ್ ಚಾನೆಲ್‍ವೊಂದರಿಂದ ಭಗೀರಥ ಸಮಾಜಕ್ಕೆ ನಿಂದನೆ : ತಪ್ಪಿತಸ್ಥರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಿ – ಅಧಿಕಾರಿಗಳಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಸೂಚನೆ

ನಾಳೆ ಗುರುವಾರದಂದು ನಡೆಯಲಿರುವ ಭಗೀರಥ ಸಮಾಜದ ಪ್ರತಿಭಟನೆಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ ಬಾಲಚಂದ್ರ ಜಾರಕಿಹೊಳಿ ಗೋಕಾಕ : ಹಿಂದುಳಿದ ವರ್ಗಕ್ಕೆ ಸೇರಿದ ಸಮುದಾಯಕ್ಕೆ ಅವಹೇಳನಕಾರಿಯಾಗಿ ಕಮೆಂಟ್ ಮಾಡಿರುವ ಯೂ ಟ್ಯೂಬ್ ಸಂಪಾದಕನೋರ್ವನ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಆ ಘಟನೆಗೂ ನನಗೂ ಯಾವುದೇ ಸಂಬಂಧವಿಲ್ಲವೆಂದು ಕೆಎಂಎಫ್ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದ್ದಾರೆ. ಘಟಪ್ರಭಾದ ಯೂ ಟ್ಯೂಬ್ ಚಾನೇಲ್‍ನ ಸಂಪಾದಕರು ಸುದ್ಧಿ ವಿಮರ್ಶೆ ಮಾಡುವಾಗ …

Read More »

ಗೋಕಾಕದ ಉದ್ಯಮಿ ರಾಜು ಝಂವರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತು ಇಬ್ಬರುನ್ನು ಬಂಧಿಸಲಾಗಿದೆ,

ಗೋಕಾಕ:  ಗೋಕಾಕದ ಉದ್ಯಮಿ ರಾಜು ಝಂವರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತು ಇಬ್ಬರುನ್ನು ಬಂಧಿಸಲಾಗಿದೆ, ಬಂಧಿತರ ಸಂಖ್ಯೆ 5ಕ್ಕೇರಿದೆ. ಗೋಕಾಕ ಮೋಮಿನ್ ಗಲ್ಲಿಯ ವೆಲ್ಡಿಂಗ್ ವರ್ಕ ಮಾಡುವ 24 ವರ್ಷದ ಮೋಯಿನ್ ಪಟೇಲ್ ಮತ್ತು ಲಕ್ಕಡ ಗಲ್ಲಿಯ ಟೈಲ್ಸ್ ಕೆಲಸ ಮಾಡುವ 21 ವರ್ಷದ ಅಬುತಾಲ್ ಮೊಹ್ಮದ್ ಹನೀಫ್ ಮುಲ್ಲಾ ಬಂಧಿತರು. ಇವರಿಬ್ಬರೂ ಈಗಾಗಲೆ ಬಂಧಿತರಾಗಿರುವ ಶಫತ್ ಟ್ರಾಸ್ಗರ್ ನ ಗೆಳೆಯರು. ಇವರೆಲ್ಲರೂ ಸೇರಿ ಯೋಗಿ ಕೊಳ್ಳದಲ್ಲಿ ಕೊಲೆ ಮಾಡಿದ್ದಾರೆ. …

Read More »

ಗೋಕಾಕ ಉದ್ಯಿಮಿ ಕೊಲೆ ಪ್ರಕರಣ ಭೇದಿಸಿದ ಎಲ್ಲ ಅಧಿಕಾರಿಗಳನ್ನು ಹೊಗಳಿದ ಎಸ್ಪಿ ಪಾಟೀಲ

ಗೋಕಾಕ: ಈಚೆಗೆ ಕೊಲೆಯಾದ ನಗರದ ಸಗಟು ವ್ಯಾಪಾರಿ ಶವ ಗುರುವಾರ ರಾತ್ರಿ ಪತ್ತೆಯಾಗಿದೆ. ತಾಲ್ಲೂಕಿನ ಪಂಚನಾಯಕನ ಹಟ್ಟಿ ಗ್ರಾಮದ ಹೊರವಲಯದಲ್ಲಿ, ಮಾರ್ಕಂಡೇಯ ನದಿ ಕಾಲುವೆಯಲ್ಲಿ ಶವ ಕೊಳೆತ ಸ್ಥಿತಿಯಲ್ಲಿ ಸಿಕ್ಕಿದೆ. ನಗರದ ಹಿಲ್‌ ಗಾರ್ಡನ್‌ ರಸ್ತೆಯ ನಿವಾಸಿ ರಾಜು ಝಂವರ (53) ಅವರನ್ನು ಫೆ.10ರಂದು ಅಪಹರಿಸಿ ಕೊಲೆ ಮಾಡಲಾಗಿತ್ತು. ಶವವನ್ನು ಗೋಕಾಕ ಫಾಲ್ಸ್‌ ಕಾಲುವೆಯಲ್ಲಿ ಎಸೆದಿದ್ದಾಗಿ ಆರೋಪಿಗಳು ಹೇಳಿಕೆ ನೀಡಿದ್ದರು. ಪೊಲೀಸ್‌, ಅಗ್ನಿಶಾಮಕ ಸಿಬ್ಬಂದಿ ಸೇರಿ 350 ಮಂದಿಯ ತಂಡ ಶವಕ್ಕಾಗಿ …

Read More »

ಕೊನೆಯದಾಗಿ ಸ್ವೀಕರಿಸಿದ್ದ ಕರೆ ಆಧರಿಸಿ ಆರೋಪಿತರನ್ನುಬಂಧಿಸಿದ್ ಪೊಲೀಸರು

ಗೋಕಾಕ: ಇಲ್ಲಿನ ಉದ್ಯಮಿ ರಾಜು ಝಂವರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ವೈದ್ಯರು ಸೇರಿದಂತೆ ಮೂವರು ಆರೋಪಿತರನ್ನು ಸ್ಥಳೀಯ ಪೊಲೀಸರು ಬಂಧಿಸಿದ್ದಾರೆ. ಪ್ರಥಮ ಆರೋಪಿ ಗೋಕಾಕ ಚನ್ನಮ್ಮನಗರ ನಿವಾಸಿ ಸಚಿನ್ ಶಂಕರ್ ಶಿರಗಾವೆ(36), ಎರಡನೇ ಆರೋಪಿ ಸಿಟಿ ಆಸ್ಪತ್ರೆ ವೈದ್ಯ, ಹುಕ್ಕೇರಿ ತಾಲೂಕು ಶಿರಢಾಣ ಸಮೂಲದ  ಡಾ. ಶಿವಾನಂದ ಕಾಡಗೌಡ ಪಾಟೀಲ (28) ಹಾಗೂ ರೆಫ್ರಿಜರೇಟರ್ ರಿಪೇರಿ ಕೆಲಸ ಮಾಡಿಕೊಂಡಿದ್ದ ಶಾಪಥ್ ಇರ್ಷಾದ್ ತ್ರಾಸಗರ(25) ಬಂಧಿತರು. ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿಂತೆ ಉಂಟಾಗಿದ್ದ …

Read More »

ಕುಂದರಗಿ ಮಹಾಲಕ್ಷ್ಮಿ ಜಾತ್ರೆಗೆ ಭೇಟಿ ನೀಡಿ ಆಶೀರ್ವಾದ ಪಡೆದ ವಿಧಾನ ಪರಿಷತ್ ಸದಸ್ಯರಾದಲಖನ ಜಾರಕಿಹೊಳಿ

ಗೋಕಾಕ: ಗೋಕಾಕ ತಾಲೂಕಿನ ಕುಂದರಗಿ ಗ್ರಾಮದ ಮಹಾಲಕ್ಷ್ಮಿ ದೇವಿ ಜಾತ್ರೆಗೆ ವಿಧಾನ ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ ಭೇಟಿ ನೀಡಿದ್ದಾರೆ.   ಜಾತ್ರೆಯ ಸಂಭ್ರಮ ಜಿಲ್ಲೆ ಯಾದ್ಯಂತ ಸುಮಾರ ಕಡೆ ಗ್ರಾಮ ದೇವಿಯ ಜಾತ್ರೆಗಳು ನಡಿತಿವೆ. ಲಖನ ಜಾರಕಿಹೊಳಿ ಅವರು ಭೇಟಿ ನೀಡಿ ದೇವಿಯ ಆಶೀರ್ವಾದ ಪಡೆದು ದೇವರ ಕೃಪೆಗೆ ಪಾತ್ರ ರಾಗಿದ್ದಾರೆ. ಗ್ರಾಮದ ವಿಶೇಷ ಕುಂದು ಕೊರತೆಗಳ ಹಾಗೂ ದೇವಿಯ ಜಾತ್ರೆಗೆ ಬೇಕಾಗುವು ವ್ಯವಸ್ಥೆ ಬಗ್ಗೆ ಗಮನ ಹರಿಸಿ …

Read More »

ಸಂತೋಷ್ ಅಣ್ಣಾ ಜಾರಕಿಹೊಳಿ ಅವರ ಸೌಭಾಗ್ಯ ಲಕ್ಷ್ಮಿ ಶುಗರ್ಸ್ ನಿಂದ ಈ ವರ್ಷದ ಕ್ಯಾಲೆಂಡರ್ ವಿತರಣೆ

: ಗೋಕಾಕ: ಗೋಕಾಕ ಶ್ರೀ ಸಂತೋಷ್ ಅಣ್ಣಾ ಜಾರಕಿಹೊಳಿ ಅವರ್ ಒಡೆತನದ ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಡಿಂದ ಹೊಸ ವರ್ಷದ ಕ್ಯಾಲೆಂಡರ್ ವಿತರಣೆ ಮಾಡಿದ್ದಾರೆ.  ಪ್ರತಿ ವರ್ಷ ದಂತೆ ಈ ವರ್ಷವೂ ಕೂಡ ಟೇಬಲ್ ಕ್ಯಾಲೆಂಡರ್, ಡೈರಿ ಕೂಡ ಎಲ್ಲ ವಿವಿಧ ಗ್ರಾಮ ಪಂಚಾಯತಿ ಗಳಿಗೆ, KSRTC ಕಚೇರಿ ಗಳಿಗೆ, ತಹಸೀಲ್ದಾರ ಆಫೀಸ್ ಗಳನ್ನ್ ಸೇರಿ ನಗರದ ಹಾಗೂ ಗೋಕಾಕ ನ ವಿವಿಧ ಗ್ರಾಮ ಗಳಲ್ಲಿ ವಿತರಣೆ ಮಾಡಿದ್ದಾರೆ.

Read More »

ಬಿಜೆಪಿ ಆಡಳಿತಕ್ಕೆ ಬೇಸತ್ತು ಯುವಕರು ಕಾಂಗ್ರೆಸ್‌ ಸೇರ್ಪಡೆ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ

  ಗೋಕಾಕ: ಕೇಂದ್ರ, ರಾಜ್ಯ ಬಿಜೆಪಿ ಸರ್ಕಾರದ ಆಡಳಿತಕ್ಕೆ ಬೇಸತ್ತು ಯುವಕರು ಕಾಂಗ್ರೆಸ್‌ ಸೇರ್ಪಡೆಯಾಗುತ್ತಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್‌ ಜಾರಕಿಹೊಳಿ ಅವರು ಹೇಳಿದರು.   ನಗರದ ಹಿಲ್ ಗಾರ್ಡನ್ ಕಚೇರಿಯಲ್ಲಿ ಕಾಂಗ್ರೆಸ್‌ ಮುಖಂಡಾರದ ಸುಭಾಷ್ ಗಿರಗೌಡ, ಭರತೇಶ ವೀರಭದ್ರನವರ, ಮಲ್ಲಪ್ಪ ರುದ್ರಗೌಡ, ಸುನಿಲ್ ರಾಠೋಡ, ಟಿಪ್ಪುಸುಲ್ತಾನನ ಮುಲ್ಲಾ, ಶಿವಾನಂದ ಬಸಪ್ಪ ಮಾಳಗಿ, ಪರುಶುರಾಮ ಜಾಮುನಿ ಅವರ ನೇತೃತ್ವದಲ್ಲಿ ಯಮಕನಮರಡಿ ಮತಕ್ಷೇತ್ರದ ಉಳ್ಳಾಗಡ್ಡಿ ಖಾನಾಪುರ, ಕುರಣಿ, ಕಟಾಂಬಳೆ ಗ್ರಾಮದ …

Read More »

ಅಲ ಮಹದಿ ಟ್ರೋಫಿ ವಿಜೇತರಾದ ಗೋಕಾಕ ಫುಟ್ಬಾಲ್ ಕ್ಲಬ್ ತಂಡ

ಗೋಕಾಕ: ಬೆಳಗಾವಿಯ ಅನಗೊಳ ಪ್ರದೇಶದಲ್ಲಿ ಅಲ ಮಹದಿ ಟ್ರೋಫಿ ಎಂಬ ಫುಟ್ ಬಾಲ್ ಪಂದ್ಯ ದವರು ಆಯೋಜನೆ ಮಾಡಿದ್ದ ಟೂರ್ನಮೆಂಟ್ ನಲ್ಲಿ ಗೋಕಾಕ ತಂಡ ವಿಜೇತರಾ ಗಿದ್ದಾರೆ U22 ಫೂಟ ಬಾಲ ಟೂರ್ನಮೆಂಟ್ ನಲ್ಲಿ ಗೋಕಾಕ ತಂಡ ವಿಜೇತರಾಗಿ ಮೊದಲನೆಯ ಬಾರಿಗೆ ಈ ಒಂದು ಟ್ರೋಫಿ ತನ್ನ ಮಡಿಲಿಗೆ ಗೋಕಾಕ ತಂಡ ಸೇರ್ಪಡೆ ಮಾಡಿಕೊಂಡಿದೆ . ಇದರ ನಾಯಕತ್ವ ವಹಿಸಿದಿ ಅರ್ಯನ ಸಾಯ ನ್ನವರ ಅವರು ತಮ್ಮ ತಂಡದ ಬಗ್ಗೆ …

Read More »

ಸಂತೋಷ ಜಾರಕಿಹೊಳಿ ಅವರ “ಶ್ರೇಷ್ಠ ಫೌಂಡೇಶನ್” ವತಿಯಿಂದ ಅನ್ನದಾಸೋಹ ಕಾರ್ಯಕ್ರಮ ಸವದತ್ತಿ ತಾಲೂಕಿನ ಸೊಪ್ಪಡ್ಲ ಗ್ರಾಮದಲ್ಲಿ

ಶ್ರೇಷ್ಠ ಫೌಂಡೇಶನ್ ವತಿಯಿಂದ ಅನ್ನಸಂತರ್ಪಣೆ ಕಾರ್ಯಕ್ರಮ ಸವದತ್ತಿ : ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಚೇರಮನ್ ರಾದ ಸಂತೋಷ ಜಾರಕಿಹೊಳಿ ಅವರ “ಶ್ರೇಷ್ಠ ಫೌಂಡೇಶನ್” ವತಿಯಿಂದ ಅನ್ನದಾಸೋಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.   ಪ್ರತಿ ಶನಿವಾರ ಶ್ರೇಷ್ಠ ಫೌಂಡೇಶನ್ ವತಿಯಿಂದ ವಿವಿಧ ಕಡೆಗಳಲ್ಲಿ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಸಂತೋಷ ಜಾರಕಿಹೊಳಿ ಅವರು ಹಮ್ಮಿಕೊಂಡಿದ್ದು ಈ ಶನಿವಾರ ಸವದತ್ತಿ ತಾಲೂಕಿನ ಸೊಪ್ಪಡ್ಲ ಗ್ರಾಮದಲ್ಲಿ ಶ್ರೀ ಲಕ್ಷ್ಮೀ ದೇವಿ ದೇವಸ್ಥಾನದ ಆವರಣದಲ್ಲಿ ಅನ್ನ ಸಂತರ್ಪಣೆ ಹಮ್ಮಿಕೊಂಡಿದ್ದರು. …

Read More »

ಬಿಡಿಸಿಸಿ ಬ್ಯಾಂಕಿನಿಂದ ಪಿಕೆಪಿಎಸ್ ಗಳಿಗೆ ಹೆಚ್ಚಿನ ಪತ್ತು ಮಂಜೂರು- ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ*

    *ಗೋಕಾಕ*: ಬಿಡಿಸಿಸಿ ಬ್ಯಾಂಕಿನಿಂದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಪತ್ತಗಳನ್ನು ಮಂಜೂರು ಮಾಡಿಸಲಾಗುತ್ತಿದ್ದು, ರೈತರ ಆರ್ಥಿಕಾಭಿವೃದ್ಧಿಗೆ ಬ್ಯಾಂಕಿನಿಂದ ಹಲವು ಸೌಲಭ್ಯಗಳನ್ನು ನೀಡಲಾಗುತ್ತಿದೆ ಎಂದು ಕೆ.ಎಮ್.ಎಫ್ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು ಇತ್ತಿಚೇಗೆ ತಾಲೂಕಿನ ಕಳ್ಳಿಗುದ್ದಿ ಗ್ರಾಮದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನವಾಗಿ ನಿರ್ಮಿಸಿದ ಎರಡನೇ ಮಹಡಿ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು, ರೈತರ ಅಭಿವೃದ್ಧಿಯಲ್ಲಿ ಪ್ರಾಥಮಿಕ …

Read More »