ಬೆಂಗಳೂರು: ಡ್ರೀಮ್ ಸ್ಪೋರ್ಟ್ಸ್ ಫೌಂಡೇಶನ್ ಸಂಸ್ಥೆಯು ‘ಬ್ಯಾಕ್ ಆನ್ ಟ್ರ್ಯಾಕ್’ ಕಾರ್ಯಕ್ರಮದಡಿ ಕೋವಿಡ್ ನಿಂದ ತೊಂದರೆಗೀಡಾದ 3500 ಕ್ಕೂ ಹೆಚ್ಚು ಭಾರತೀಯ ಕ್ರೀಡಾ ವೃತ್ತಿಪರರಿಗೆ ನೆರವು ನೀಡುತ್ತಿದೆ. ಇದರಲ್ಲಿ ಕರ್ನಾಟಕದ ಕ್ರೀಡಾಳುಗಳು ಸಹ ಸೇರಿದ್ದಾರೆ. ಈ ಸಾಂಕ್ರಾಮಿಕ ಸಮಯದಲ್ಲಿ 29 ಕ್ರೀಡೆಗಳ 3,500 ಕ್ಕೂ ಹೆಚ್ಚು ಕ್ರೀಡಾ ವೃತ್ತಿಪರರಿಗೆ ಸಹಾಯ ಮಾಡಿದೆ. ಈ 3,500 ಫಲಾನುಭವಿಗಳಲ್ಲಿ 3,300 ಪ್ರಸ್ತುತ ಮತ್ತು ನಿವೃತ್ತ ಕ್ರೀಡಾಪಟುಗಳು, 100 ಕ್ಕೂ ಹೆಚ್ಚು ತರಬೇತುದಾರರು, ಮತ್ತು …
Read More »ದೂರವಾಣಿ ಕದ್ದಾಲಿಕೆ ಆರೋಪ ಸಂಕಷ್ಟ; ಬಿಜೆಪಿ ಶಾಸಕ ಅರವಿಂದ ಬೆಲ್ಲದ್ಗೆ ಶೇಷಾದ್ರಿಪುರಂ ಎಸಿಪಿ ನೋಟಿಸ್
ಬೆಂಗಳೂರು: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ನಿಟ್ಟಿನಲ್ಲಿ ಸಕ್ರಿಯವಾಗಿದ್ದ ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದ ಬಿಜೆಪಿ ಶಾಸಕ ಅರವಿಂದ ಬೆಲ್ಲದ್ ಅವರು ದಿಢೀರನೆ ದೂರವಾಣಿ ಕದ್ದಾಲಿಕೆ ಆರೋಪ ಮಾಡಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಮಧ್ಯೆ, ದೂರವಾಣಿ ಕದ್ದಾಲಿಕೆ ಆರೋಪ ಪ್ರಕರಣವನ್ನು ವಾಪಸ್ ತೆಗೆದುಕೊಳ್ಳುವ ಬಗ್ಗೆಯೂ ಆಲೋಚನೆ ನಡೆಸಿದ್ದಾರೆ. ಆದರೆ ಪ್ರಕರಣ ರಾಜಕೀಯವಾಗಿ ಸೂಕ್ಷವಾಗಿರುವುದರಿಂದ ತನಿಖಾ ಸಂಸ್ಥೆಗಳು ಪ್ರಕರಣಕ್ಕೆ ತಾರ್ಕಿಕ ಅಂತ್ಯ ಕಂಡುಕೊಳ್ಳಲು ನಿರ್ಧರಿಸಿವೆ. ಈ ನಿಟ್ಟಿನಲ್ಲಿ ಇಂದು ಬೆಳಗ್ಗೆ 11 ಗಂಟೆಗೆ ವಿಚಾರಣೆಗೆ …
Read More »ವಿದ್ಯಾರ್ಥಿಗಳಿಗೆ ಕೊರೊನಾ ಲಸಿಕೆ ನೀಡಿದ ಬಳಿಕವೇ ಹಂತ ಹಂತವಾಗಿ ಶಾಲೆ-ಕಾಲೇಜು ಆರಂಭ
ಬೆಂಗಳೂರು: ವಿದ್ಯಾರ್ಥಿಗಳಿಗೆ ಕೊರೊನಾ ಲಸಿಕೆ ನೀಡಿದ ಬಳಿಕವೇ ಹಂತ ಹಂತವಾಗಿ ಶಾಲೆ-ಕಾಲೇಜುಗಳನ್ನು ಆರಂಭಿಸಲಾಗುವುದು ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ಮಾಹಿತಿ ನೀಡಿದ್ದಾರೆ. ಕೋವಿಡ್ ಲಸಿಕೆ ಕೊಟ್ಟ ಬಳಿಕವೇ ಮೊದಲ ಹಂತದಲ್ಲಿ ಕಾಲೇಜು ಹಾಗೂ ನಂತರ ಹಂತದಲ್ಲಿ ಶಾಲೆಗಳನ್ನು ಆರಂಭಿಸಲಾಗುವುದು. ಈ ಬಗ್ಗೆ ಪೋಷಕರಿಗಾಗಲಿ, ವಿದ್ಯಾರ್ಥಿಗಳಿಗಾಗಲಿ ಯಾವುದೇ ಗೊಂದಲ, ಆತಂಕ ಬೇಡ ಎಂದು ಸ್ಪಷ್ಟಪಶಿದ್ದಾರೆ. ತಾಂತ್ರಿಕ ಸಲಹಾ ಸಮಿತಿ ಸಲಹೆಯಂತೆಯೇ ಲಸಿಕೆ ನೀಡಿದ ಬಳಿಕವೇ ಶಾಲೆ ಆರಂಭಕ್ಕೆ ನಿರ್ಧರಿಸಲಾಗಿದೆ ಎಂದು ಟ್ವಿಟರ್ …
Read More »ರಾಜಧಾನಿಯಲ್ಲಿ ರೌಡಿಗಳ ಸದ್ದಡಗಿಸಲು ಪೊಲೀಸರ ಬುಲೆಟ್ ಗಳು ಸದ್ದು ಮಾಡುತ್ತಿವೆ.
ಬೆಂಗಳೂರು, ಜೂನ್.24: ರಾಜಧಾನಿಯಲ್ಲಿ ರೌಡಿಗಳ ಸದ್ದಡಗಿಸಲು ಪೊಲೀಸರ ಬುಲೆಟ್ ಗಳು ಸದ್ದು ಮಾಡುತ್ತಿವೆ. ಭೂಗತ ಪಾತಕಿ ರಶೀದ್ ಮಲ್ಬಾರಿಯ ಸಹಚರನ ಹತ್ಯೆ ಮಾಡಿದ್ದ ರೌಡಿ ಶೀಟರ್ ಕಾಲಿಗೆ ಗುಂಡು ಹಾರಿಸಿ ಬಂಧಿಸುವಲ್ಲಿ ಗೋವಿಂದಪುರ ಪೊಲೀಸರು ಯಶಸ್ವಿಯಾಗಿದ್ದಾರೆ. ಮೊಹಮದ್ ಸಲೀಂ ಗುಂಡೇಟು ತಿಂದ ಆರೊಪಿ. ಭೂಗತ ಪಾತಕಿ ರಶೀದ್ ಮಲ್ಬಾರಿ ಸಹಚರ ಕಲೀಂ ಆಲಿ ಮಹಿಳೆ ಜತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ. ಈ ವಿಚಾರ ತಿಳಿದ ಮಮಹದ್ ಸಲೀಂ ಕೆಲ ದಿನಗಳ …
Read More »ಗಾಳಿಪಟದ ದಾರ ಕುತ್ತಿಗೆಗೆ ಉರುಳು: ತಪ್ಪಿಸಿಕೊಳ್ಳಲು ಹೋದ ಬೈಕ್ ಸವಾರನ ಬೆರಳುಗಳು ಕಟ್!
ಬೆಂಗಳೂರು: ಆಡುಗೋಡಿ ಸಂಚಾರ ಠಾಣೆ ಬಳಿಯ ರಸ್ತೆಯಲ್ಲಿ ದ್ವಿಚಕ್ರವಾಹನದಲ್ಲಿ ಹೋಗುತ್ತಿದ್ದ ಸವಾರರೊಬ್ಬರ ಕತ್ತಿಗೆ ಗಾಳಿಪಟದ ದಾರ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದು, ದಾರವನ್ನು ಬಿಡಿಸಲು ಹೋಗಿ 2 ಬೆರಳನ್ನು ಕಳೆದುಕೊಳ್ಳುವ ಸ್ಥಿತಿಯಲ್ಲಿದ್ದಾರೆ. ವ್ಯಕ್ತಿಯೊಬ್ಬರು ಬುಧವಾರ ಆಡುಗೋಡಿ ಸಮೀಪದ ಪಂಜಾಬ್ ನ್ಯಾಷನಲ್ ಬ್ಯಾಂಕ್ ಕಡೆಗೆ ದ್ವಿಚಕ್ರವಾಹನದಲ್ಲಿ ಹೋಗುತ್ತಿದ್ದರು. ಆಡುಗೋಡಿ ಸಂಚಾರ ಠಾಣೆ ಮುಂಭಾಗದ ರಸ್ತೆಯಲ್ಲಿ ಏಕಾಏಕಿ ಗಾಳಿಪಟದ ದಾರ ಆ ವ್ಯಕ್ತಿಯ ಕತ್ತಿಗೆ ಸಿಕ್ಕಿಹಾಕಿಕೊಂಡಿತ್ತು. ಪರಿಣಾಮ ಕತ್ತಿನ ಭಾಗಕ್ಕೆ ಗಾಯವಾಗಿ ರಕ್ತಸ್ರಾವ ಉಂಟಾಗಿದೆ. …
Read More »ಸಿದ್ದಾಮಯ್ಯಗೆ ಕಾಂಗ್ರೆಸ್ ಹೈಕಮಾಂಡ್ ಬುಲಾವ್!
ಬೆಂಗಳೂರು : ಸಿಎಂ ಸ್ಥಾನಕ್ಕಾಗಿ ರಾಜ್ಯ ಕಾಂಗ್ರೆಸ್ ನಲ್ಲಿ ಕಿತ್ತಾಟವಾಡಿ ಜನರ ನಡುವೆ ನಗೆಪಾಟಲಿಗೀಡಾಗುವ ನಾಯಕರ ವಿರುದ್ಧ ಮುಲಾಜಿಲ್ಲದೆ ಕ್ರಮ ಜರುಗಿಸುವಂತೆ ಕಾಂಗ್ರೆಸ್ ಹೈಕಮಾಂಡ್ ಸೂಚನೆ ನೀಡಿದ್ದು, ಹಾಗೆ ವಿರೋಧ ಪಕ್ಷದ ನಾಯಕ ಸಿದ್ದಾಮಯ್ಯಗೆ ದೆಹಲಿಗೆ ಬರುವಂತೆ ಹೈಕಮಾಂಡ್ ಬುಲಾವ್ ನೀಡಿದೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ದೆಹಲಿಗೆ ಹೋಗಿ ರಾಹುಲ್ ಗಾಂಧಿ ಭೇಟಿ ಮಾಡಿ ಚರ್ಚೆ ನಡೆಸಿ ಬಂದ ನಂತ್ರ ಹೈಕಮಾಂಡ್ ಸಿದ್ದರಾಮಯ್ಯ(Siddaramaiah) ಅವರ ಜೊತೆ ದೂರವಾಣಿಯಲ್ಲಿ ಮಾತನಾಡಿದ್ದು, …
Read More »ಬಿಗ್ಬಾಸ್ ಮನೆ ಒಳಗೆ ಬರ್ತಿದ್ದಂತೆ ಫೈಟ್ ಶುರು ಮಾಡಿದ ದಿವ್ಯಾ ಉರುಡುಗ ಹಾಗೂ ದಿವ್ಯಾ ಸುರೇಶ್!
ಬೆಂಗಳೂರು: ಕರೊನಾ ಕಾರಣದಿಂದಾಗಿ ಮಧ್ಯಂತರದಲ್ಲೇ ನಿಲ್ಲಿಸಲಾಗಿದ್ದ ಬಿಗ್ಬಾಸ್ ಇದೀಗ ಮತ್ತೊಮ್ಮೆ ಸೆಕೆಂಡ್ ಇನ್ನಿಂಗ್ಸ್ ಮೂಲಕ ವೀಕ್ಷಕರ ಮುಂದೆ ಬರಲು ಸಿದ್ಧವಾಗಿದೆ. ಈಗಾಗಲೇ ಎಲ್ಲ ಸ್ಪರ್ಧಾಳುಗಳು ಮನೆ ತಲುಪಿದ್ದು ಕಲರ್ಸ್ ಕನ್ನಡ ವಾಹಿನಿ ಅದರ ವಿಟಿಯನ್ನೂ ತೋರಿಸಿದೆ. ಆದರೆ ಒಂದು ವಿಟಿಯಲ್ಲಿ ದಿವ್ಯಾ ಸುರೇಶ್ ಹಾಗೂ ದಿವ್ಯಾ ಉರುಡುಗ ಹೊಡೆದಾಡಿಕೊಳ್ಳುತ್ತಿರುವ ದೃಶ್ಯವಿದ್ದು ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಈ ಹಿಂದೆ ಬಿಗ್ಬಾಸ್ ನೋಡಿದಾಗ ದಿವ್ಯಾ ಉರುಡುಗ ಹಾಗೂ ದಿವ್ಯಾ ಸುರೇಶ್ ಸ್ನೇಹಿತರಂತೆಯೇ ಕಾಣಿಸಿಕೊಂಡಿದ್ದಾರೆ. …
Read More »ಮರ ಸ್ಥಳಾಂತರದ ವಿವರ ನೀಡಲು ಸೂಚನೆ
ಬೆಂಗಳೂರು: ಮೆಟ್ರೊ ರೈಲು ಮಾರ್ಗದ ಕಾಮಗಾರಿಗಾಗಿ ಮರಗಳನ್ನು ಸ್ಥಳಾಂತರಿಸಲು ಉದ್ದೇಶಿಸಿರುವ ನಿರ್ದಿಷ್ಟ ಸ್ಥಳದ ವಿವರ ಸಲ್ಲಿಸುವಂತೆ ಮರಗಳ ತಜ್ಞರ ಸಮಿತಿಗೆ (ಟಿಇಸಿ) ಹೈಕೋರ್ಟ್ ನಿರ್ದೇಶನ ನೀಡಿದೆ. ಟಿಇಸಿ ಕಾರ್ಯನಿರ್ವಹಣೆ ಬಗ್ಗೆ ಮಾರ್ಗಸೂಚಿ ರೂಪಿಸುವಂತೆ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ ಸೂಚನೆ ನೀಡಿತು. ‘ಮರಗಳು ಇರುವ ಜಾಗದಿಂದ ಸಮೀಪದ ಸ್ಥಳಗಳನ್ನು ಗುರುತಿಸಿ ಅಂದೇ ಸ್ಥಳಾಂತರ ಮಾಡಬೇಕಾಗುತ್ತದೆ. ನಿರ್ದಿಷ್ಟ ಜಾಗವನ್ನು ಟಿಇಸಿ ಅಂತಿಮಗೊಳಿಸಿದ ಬಳಿಕವೇ ಸ್ಥಳಾಂತರ ಮಾಡಬೇಕು’ ಎಂದು …
Read More »ತಿಹಾರ್ ಜೈಲಿನಲ್ಲಿ ನೆರವಿಗೆ ನಿಂತವನ ಕೈಬಿಡದ ಕಾಂಗ್ರೆಸ್ ನಾಯಕ; ಡಿ.ಕೆ. ಶಿವಕುಮಾರ್
ಕಷ್ಟದ ದಿನಗಳಲ್ಲಿ ಕೈಚಾಚಿದವರನ್ನು, ಸಹಾಯ ಮಾಡಿದವರನ್ನು ಮರೆಯಲು ಸಾಧ್ಯವೇ? ಸೆರೆಯಾಗಿದ್ದ ಹಕ್ಕಿಯು ಬಿಡುಗಡೆಯಾಗುತ್ತಿದ್ದಂತೆಯೇ ಪಂಜರದಲ್ಲಿ ಜೊತೆಯಾಗಿದ್ದ ಮತ್ತೊಂದು ಹಕ್ಕಿಯತ್ತ ಸುಳಿಯುತ್ತದೆಯೇ? ಇಲ್ಲ. ಆದರೆ, ಒಡಲ ನೋವನ್ನು ಆಲಿಸಿದ, ಕಷ್ಟದ ಘಟನೆಗಳ ಕೇಳುಗನಾದ, ಸ್ಪಂದಿಸಿ, ಸಂತೈಸಿದ ವ್ಯಕ್ತಿ ಸೆರೆಯಲ್ಲಿದ್ದಾಗ, ಹೃದಯವಂತನಾದವನು ಮತ್ತೆ ಧಾವಿಸದೇ ಇರನು. ಹಾಗೆ ಧಾವಿಸಿ, ವ್ಯಕ್ತಿಯ ಕಷ್ಟಕ್ಕೆ ಸ್ಪಂದಿಸಿದವರು ರಾಜ್ಯದ ನಾಯಕರಲ್ಲೊಬ್ಬರು. ಅಕ್ರಮ ಹಣ ವರ್ಗಾವಣೆ ಆರೋಪ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ಡಿ.ಕೆ ಶಿವಕುಮಾರ್ ತಿಹಾರ್ ಜೈಲು ಸೇರಿದ್ರು.ಬರೋಬ್ಬರಿ …
Read More »ಮಾನನಷ್ಟ ಮೊಕದ್ದಮೆಯಲ್ಲಿ ದೇವೇಗೌಡರಿಗೆ ಹಿನ್ನಡೆ: 2 ಕೋಟಿ ಪರಿಹಾರ ಕಟ್ಟಿಕೊಡಲು ಕೋರ್ಟ್ ಆದೇಶ
ಬೆಂಗಳೂರು: ನಂದಿ ಇನ್ಫ್ರಾ ಸ್ಟ್ರಕ್ಚರ್ ಕಾರಿಡಾರ್ (Nandi Infrastructure Corridor Enterprises – NICE) ಕಂಪನಿಯ ವಿರುದ್ಧ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮಾಡಿದ್ದ ಆರೋಪವನ್ನು ಸಾಬೀತುಪಡಿಸುವಲ್ಲಿ ವಿಫಲರಾಗಿದ್ದಾರೆ. ಹೀಗಾಗಿ ನೈಸ್ ಕಂಪನಿಗೆ ₹ 2 ಕೋಟಿ ಪರಿಹಾರ ಕಟ್ಟಿಕೊಡಬೇಕು ಎಂದು ಬೆಂಗಳೂರು ಸಿಟಿ ಸಿವಿಲ್ ಕೋರ್ಟ್ ಆದೇಶ ಮಾಡಿದೆ. ದೇವೇಗೌಡರ ವಿರುದ್ಧ ನೈಸ್ ಕಂಪನಿಯು ಮಾನನಷ್ಟ ದಾವೆ ಹೂಡಿತ್ತು. ಖಾಸಗಿ ವಾಹಿನಿಗೆ ನೀಡಿದ್ದ ಸಂದರ್ಶನದಲ್ಲಿ ದೇವೇಗೌಡರು ನೈಸ್ ಸಂಸ್ಥೆಯ ಗೌರವಕ್ಕೆ …
Read More »