Breaking News

ಬೆಂಗಳೂರು ಗ್ರಾಮಾಂತರ

ಚಿತ್ರಮಂದಿರ, ಮಾಲ್ ಓಪನ್ ಗೆ ಸಿಎಂ ನೇತೃತ್ವದಲ್ಲಿ ಅನ್ಲಾಕ್ 3.0 ಬಗ್ಗೆ ಮಹತ್ವದ ಸಭೆ

ಬೆಂಗಳೂರು: ರಾಜ್ಯದಲ್ಲಿ ಮತ್ತಷ್ಟು ಅನ್ಲಾಕ್ ಮಾಡುವ ಕುರಿತಂತೆ ಕೋವಿಡ್ ಉಸ್ತುವಾರಿ ಸಚಿವರು ಮತ್ತು ಅಧಿಕಾರಿಗಳೊಂದಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದು ಸಭೆ ನಡೆಸಲಿದ್ದಾರೆ. ಸಂಜೆ 5.30 ಕ್ಕೆ ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕಾವೇರಿಯಲ್ಲಿ ನಡೆಯಲಿರುವ ಸಭೆಯಲ್ಲಿ ಮೂರನೇ ಹಂತದ ಪ್ರಕ್ರಿಯೆ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ. ಅನ್ಲಾಕ್ ಬಳಿಕ ರಾಜ್ಯದಲ್ಲಿ ವಿವಿಧ ಚಟುವಟಿಕೆಗಳು ಆರಂಭವಾಗಿದೆ‌. ಇದರ ಮುಂದುವರೆದ ಭಾಗವಾಗಿ ಮತ್ತಷ್ಟು ಚಟುವಟಿಕೆಗಳಿಗೆ ಅವಕಾಶ ನೀಡಲಾಗುವುದು. ಬಾರ್ ಅಂಡ್ ರೆಸ್ಟೋರೆಂಟ್, ಸ್ವಿಮ್ಮಿಂಗ್ ಪೂಲ್, …

Read More »

ಮಾನಕ್ಕೆ ಹಾನಿ ವರದಿ ಪ್ರಕಟಿಸದಂತೆ ಕೇಂದ್ರ ಸಚಿವ ಡಿವಿಎಸ್‌ ತಡೆಯಾಜ್ಞೆ

ಬೆಂಗಳೂರು: ತಮ್ಮ ಮಾನಕ್ಕೆ ಹಾನಿ ತರುವ ಯಾವುದೇ ಸುದ್ದಿಯನ್ನು ಪ್ರಕಟಿಸಬಾರದು ಎಂದು ಮಾಧ್ಯಮಗಳ ವಿರುದ್ಧ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಅವರು ಬೆಂಗಳೂರು ಸಿಟಿ ಸಿವಿಲ್‌ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ. ಇದು ಈಗ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಈ ಹಿಂದೆ ಬಿಜೆಪಿಯ ರಮೇಶ ಜಾರಕಿಹೊಳಿ ವಿರುದ್ಧ ಸಿ.ಡಿ ಬಿಡುಗಡೆ ಮಾಡಿದ್ದರಿಂದ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. ಅದರ ಬೆನ್ನಲ್ಲೇ ಹಲವು ಸಚಿವರು ತಮ್ಮ ವಿರುದ್ಧ ಸಿ.ಡಿ ಬಿಡುಗಡೆ …

Read More »

ಶ್ರೀರಾಮುಲು ಪಿಎ ಬಗ್ಗೆ, ವಿಜಯೇಂದ್ರ ಬಗ್ಗೆ ಮಾತಾಡೋದು ನನ್ನ ಲೆವೆಲ್ ಅಲ್ಲ: ಡಿಕೆ ಶಿವಕುಮಾರ್

ಬೆಂಗಳೂರು: ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಹೆಸರು ಬಳಸಿ ಹಲವರಿಗೆ ವಂಚನೆ ಎಸಗಿದ್ದ ಆರೋಪದ ಮೇಲೆ ಸಚಿವ ಶ್ರೀರಾಮುಲು ಪಿಎ ರಾಜಣ್ಣರನ್ನು ಸಿಸಿಬಿ ಪೊಲೀಸರು ರಾತ್ರಿಯಿಡೀ ವಿಚಾರಣೆ ನಡೆಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ ಅವರು ಶ್ರೀರಾಮುಲು, ವಿಜಯೇಂದ್ರ ವಿಚಾರವಾಗಿ ನಾನು ಮಾತಾಡೋದು ನನ್ನ ಲೆವೆಲ್​ ಅಲ್ಲ. ಪಿಎಗಳ ವ್ಯವಹಾರಕ್ಕೆ ನಾನು ಮಧ್ಯ ಪ್ರವೇಶ ಮಾಡೊಲ್ಲ. ಅದರ ಬಗ್ಗೆ ನಾನು ಕಾಮೆಂಟ್ ಕೂಡಾ ಮಾಡೊಲ್ಲ. …

Read More »

ರಾಜ್ಯದಲ್ಲೂ ಪ್ರವಾಸಿ ಥೀಮ್‌ಪಾರ್ಕ್‌

ಬೆಂಗಳೂರು: ಒಡಿಶಾದ ಕೊನಾರ್ಕ್‌ ಸೂರ್ಯ ದೇಗುಲದಲ್ಲಿ ಇರುವ ಥೀಮ್‌ ಪಾರ್ಕ್‌ ಮಾದರಿಯಲ್ಲಿ ರಾಜ್ಯದ ಪ್ರಮುಖ ಪ್ರವಾಸಿ ಮತ್ತು ಐತಿಹಾಸಿಕ ತಾಣಗಳಲ್ಲಿ ಥೀಮ್‌ ಪಾರ್ಕ್‌ ಸ್ಥಾಪಿಸುವ ಇರಾದೆ ರಾಜ್ಯ ಸರಕಾರಕ್ಕೆ ಇದೆ. ಮೊದಲ ಹಂತದಲ್ಲಿ ಹಂಪಿಯ 200 ಎಕರೆ ಪ್ರದೇಶ ದಲ್ಲಿ ಥೀಮ್‌ ಪಾರ್ಕ್‌ ಸ್ಥಾಪನೆಯಾಗಲಿದೆ. ಅದರಲ್ಲಿ ವಿಜಯನಗರ ಸಾಮ್ರಾಜ್ಯದ ಗತವೈಭವ ಕುರಿತು ಡಿಜಿಟಲ್‌ ಸ್ಪರ್ಶದೊಂದಿಗೆ ಕಿರುಚಿತ್ರ ಪ್ರದರ್ಶಿಸಲು ಉದ್ದೇಶಿಸಲಾಗಿದೆ. ಸಮೀಪದಲ್ಲೇ ಆಂಜನೇಯನ ಜನ್ಮಸ್ಥಳ ಎಂದು ಪ್ರತೀತಿ ಇರುವ ಅಂಜನಾದ್ರಿ ಬೆಟ್ಟವೂ ಇರುವುದರಿಂದ …

Read More »

ಅಪ್ಪ-ಅಮ್ಮ ಇಲ್ಲದ ಕಾಂಗ್ರೆಸ್ ಪಕ್ಷದಲ್ಲಿ ಜಾತಿಗೊಬ್ಬ ಮುಖ್ಯಮಂತ್ರಿ: ಈಶ್ವರಪ್ಪ ಲೇವಡಿ

ಬೆಂಗಳೂರು: ಕಾಂಗ್ರೆಸ್‍ನಲ್ಲಿ ಜಾತಿಗೊಬ್ಬರಂತೆ ಐವರು ಮುಖ್ಯಮಂತ್ರಿಗಳನ್ನು ಘೋಷಣೆ ಮಾಡಿಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷ ಈ ಮಟ್ಟಕ್ಕೆ ಇಳಿಯಬಾರದಿತ್ತು’ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಲೇವಡಿ ಮಾಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ‘ಮುಂದಿನ ಮುಖ್ಯಮಂತ್ರಿ ಹೇಳಿಕೆ ಬಗ್ಗೆ ಬೆಂಬಲಿಗ ಶಾಸಕರ ಬಾಯಿ ಮುಚ್ಚಿಸಲು ಸಿದ್ದರಾಮಯ್ಯ ಮುಂದಾಗಿಲ್ಲ. ಡಿ.ಕೆ. ಶಿವಕುಮಾರ್‌ ಕೂಡಾ ಯಾರ ಬಾಯಿಯನ್ನೂ ಮುಚ್ಚಿಸಿಲ್ಲ. ಎಂ.ಬಿ. ಪಾಟೀಲ ನಾನು ಸನ್ಯಾಸಿ ಅಲ್ಲ ಅಂತಿದ್ದಾರೆ. ದಲಿತ ಮುಖ್ಯಮಂತ್ರಿ ಎಂದು ಜಿ. ಪರಮೇಶ್ವರ, ನಾನೂ ಮುಖ್ಯಮಂತ್ರಿ ಅಭ್ಯರ್ಥಿ …

Read More »

ಸಚಿವ ರಾಮುಲು ಪಿಎ ರಾಜಣ್ಣ ಅರೆಸ್ಟ್

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಪುತ್ರ ವಿಜಯೇಂದ್ರ ಹೆಸರೇಳಿಕೊಂಡು ಹಣ ವಸೂಲಿ ಆರೋಪದಲ್ಲಿ ಸಚಿವ ಶ್ರೀರಾಮುಲು ಪಿಎ ಅರೆಸ್ಟ್ ಆಗಿದ್ದಾರೆ. ಸ್ವತಃ ವಿಜಯೇಂದ್ರ ದೂರು ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ಶ್ರೀರಾಮುಲು ಮನೆಯಲ್ಲೇ ಆರೋಪಿ ರಾಜಣ್ಣನನ್ನ ವಶಕ್ಕೆ ಪಡೆದಿದ್ದಾರೆ. ಕೆಲಸ ಕೊಡಿಸ್ತೀನಿ, ವರ್ಗಾವಣೆ ಮಾಡಿಸ್ತೀನಿ ಅಂತ ಕೋಟ್ಯಂತರ ರೂಪಾಯಿ ಹಣ ವಸೂಲಿ ಮಾಡಿರೋ ಆರೋಪ ಕೇಳಿ ಬಂದಿದೆ. ರಾಜಣ್ಣ 8 ವರ್ಷದಿಂದ ರಾಮುಲು ಬಳಿ ಕೆಲಸ ಮಾಡ್ತಿದ್ದಾರೆ. ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ …

Read More »

ಕೈ ಹಿಡಿದ ಪತ್ನಿಯನ್ನೇ ವೇಶ್ಯೆಯನ್ನಾಗಿ ಬಿಂಬಿಸಲು ಟೆಕ್ಕಿ ಪತಿ ಕುತಂತ್ರ

ಬೆಂಗಳೂರು: ಟೆಕ್ಕಿಯೊಬ್ಬ ಕೈ ಹಿಡಿದ ಪತ್ನಿಗೆ ಹಿಂಸೆ ನೀಡಲು ಆತ ಕಂಡುಕೊಂಡ ದಾರಿ ಕೇಳಿದ್ರೆ ಹಿಡಿಶಾಪ ಹಾಕ್ತೀರಿ. ಪತ್ನಿಯನ್ನ ವೇಶ್ಯೆ ಎಂದು ಬಿಂಬಿಸಲು ಅವಳ ಹೆಸರಿನಲ್ಲಿ ನಕಲಿ ಫೇಸ್​ಬುಕ್ ಖಾತೆ ತೆರೆದು ಅವಳ ಮೊಬೈಲ್ ನಂಬರ್ ಅನ್ನೂ ಹಾಕಿದ್ದ. ಹಲವು ಮೊಬೈಲ್​ ನಂಬರ್​ಗಳಿಂದ ಪತ್ನಿಗೆ ಅಶ್ಲೀಲ ಸಂದೇಶ ಕಳಿಸಿದ್ದ. ಸಾವಿರಕ್ಕೂ ಹೆಚ್ಚಿನ ಇ-ಮೇಲ್ ಸಂದೇಶಗಳನ್ನು ಕಳುಹಿಸಿ ಅಸಭ್ಯವಾಗಿ ಕಮೆಂಟ್ ಮಾಡಿ ಮಾನಸಿಕವಾಗಿ ಚಿತ್ರಹಿಂಸೆ ಕೊಟ್ಟಿದ್ದ 29 ವರ್ಷದ ಯುವಕ ಸ್ಟೋರಿ …

Read More »

ಕಳ್ಳತನ ಮಾಡುವಾಗ ಮೊಬೈಲ್ ಬಳಸದ ಚಾಣಾಕ್ಷ

ಬೆಂಗಳೂರು: ಈತನ ಲವ್ವು ತನ್ನ ಲೈಫನ್ನೆ ಬದಲಿಸಿತ್ತು. ಪ್ರೀತಿಸೋದಳನ್ನ ರಾಯಲಾಗಿ ನೋಡಿಕೊಳ್ಳಬೇಕೆಂಬ ಆಸೆ ಮತ್ತು ನೆಪವೇ ಈತ ಅಫೆನ್ಸ್​ಗಳ ಮೇಲೆ ಅಫೆನ್ಸ್ ಮಾಡೋದಕ್ಕೆ ಕಾರಣವಾಯ್ತು. ಒಂದು ಬಾರಿ ಕಳ್ಳ ಎನಿಸಿಕೊಂಡವನು ಅದೇ ಚಟವಾಗಿದ್ದರಿಂದ ತನ್ನೀಡಿ ಜೀವನವನ್ನೇ ಕಳ್ಳತನಕ್ಕೆ ಮುಡಿಪಿಟ್ಟಿದ್ದ ಅಂತಹ ಕಳ್ಳನನ್ನ ಸಿಸಿಬಿ ಹೆಡೆಮುರಿ ಕಟ್ಟಿದೆ. ಬರೋಬ್ಬರಿ 80 ಲಕ್ಷ ಮೌಲ್ಯದ ಒಂದೂವರೆ ಕೆ.ಜಿ ಚಿನ್ನವನ್ನ ಈ ಕುಖ್ಯಾತ ಅಂತರ್ ರಾಜ್ಯ ಕಳ್ಳನಿಂದ ಸಿಸಿಬಿ ಅಧಿಕಾರಿಗಳು ರಿಕವರಿ ಮಾಡಿಕೊಂಡಿದ್ದಾರೆ. 2014 …

Read More »

ಬೆಸ್ಕಾಂನಲ್ಲಿ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ

  ಬೆಂಗಳೂರು ವಿದ್ಯುತ್‌ ಸರಬರಾಜು ಕಂಪನಿ ನಿಯಮಿತ (ಬೆಸ್ಕಾ) ಖಾಲಿ ಇರುವ ಹುದ್ದೆಯ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತರು ಅರ್ಜಿ ಸಲ್ಲಿಸಬಹುದು. ಹುದ್ದೆ: ಕಂಪನಿ ಸೆಕ್ರೆಟರಿ ಸ್ಥಳ: ಬೆಂಗಳೂರು ವಿದ್ಯಾರ್ಹತೆ: ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಯು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು. ವಯೋಮಿತಿ: ಗರಿಷ್ಠ 40 ವರ್ಷ. ಅರ್ಜಿ ಸಲ್ಲಿಕೆ ವಿಧಾನ: ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿಯನ್ನು ಜನರಲ್‌ ಮ್ಯಾನೇಜರ್‌, ಬೆಸ್ಕಾಂ ಕಾರ್ಪೊರೇಟ್ ಆಫೀಸ್‌, ಕೆಆರ್‌ ಸರ್ಕಲ್‌, ಬೆಂಗಳೂರು …

Read More »

ಏಳು ಐಎಎಸ್ ಅಧಿಕಾರಿಗಳ ವರ್ಗಾವಣೆ : ರಾಜ್ಯ ಸರ್ಕಾರದ ಆದೇಶ

ಬೆಂಗಳೂರು: ರಾಜ್ಯ ಸರ್ಕಾರ ಏಳು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಅಜಯ್ ನಾಗಭೂಷಣ್- ನಗರಾಭಿವೃದ್ದಿ ಇಲಾಖೆ ಕಾರ್ಯದರ್ಶಿ, ಸಿ.ಶಿಖಾ- ಆಯುಕ್ತರು, ವಾಣಿಜ್ಯ ತೆರಿಗೆ ಇಲಾಖೆ, ಸಲ್ಮಾ ಫಾಹಿಮಾ- ಹೆಚ್ಚುವರಿ ಕಾರ್ಯದರ್ಶಿ, ಮೂಲ ಸೌಕರ್ಯ ಇಲಾಖೆ, ಕಣಗವಲ್ಲಿ- ಪರೀಕ್ಷಾ ನಿಯಂತ್ರಕರು. ಕೆಪಿಎಸ್ ಸಿ, ರಘುನಂದನ ಮೂರ್ತಿ- ಆಯುಕ್ತರು( ಜಾರಿ) ವಾಣಿಜ್ಯ ತೆರಿಗೆ ಇಲಾಖೆ,ಅರ್ಚನಾ ಎಂ,ಎಸ್.- ಸದಸ್ಯರು. ಕೆ ಎ ಟಿ. ರಮ್ಯಾ ಎಸ್- ಕಾರ್ಯಕಾರಿ ನಿರ್ದೇಶಕರು, ಕರ್ನಾಟಕ ಪರೀಕ್ಷಾ …

Read More »