ಬಾಗಲಕೋಟೆ: ಜಿಲ್ಲೆಯಲ್ಲಿ ನಿರಂತರವಾಗಿ ಸುರಿದ ಮಳೆಯಿಂದಾಗಿ ಬತ್ತಿದ್ದ ಕೊಳವೆ ಬಾವಿಗಳು ಮರು ಜೀವ ಪಡೆದುಕೊಳ್ಳುತ್ತಿವೆ. 10 ವರ್ಷಗಳಿಂದ ಬತ್ತಿದ್ದ ಕೊಳವೆ ಬಾವಿಗಳಲ್ಲಿ ನೀರು ಉಕ್ಕುತ್ತಿದೆ. ಬಾಗಲಕೋಟೆ ಜಿಲ್ಲೆಯಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದೆ. ಭಾರಿ ಮಳೆಯಿಂದಾಗಿ ಕೆರೆಗಳು ತುಂಬಿವೆ. ರಸ್ತೆಗಳಲ್ಲಿ ನೀರು ನಿಂತಿದೆ. ಇದರ ಜೊತೆಗೆ ಜಿಲ್ಲೆಯ ಹಲವೆಡೆ ಹಲವು ವರ್ಷಗಳಿಂದ ಬತ್ತಿ ಹೋಗಿದ್ದ ಕೊಳವೆ ಬಾವಿಗಳಲ್ಲಿ ನೀರು ಹರಿಯುತ್ತಿದೆ. ಚಿಮ್ಮಡ, ರಬಕವಿಯ ಬ್ರಹ್ಮಾನಂದ ನಗರದಲ್ಲಿನ ವಿಜಯ ಹೂಗಾರ ಮನೆಯ ಬೋರ್‌ವೆಲ್‌ನಲ್ಲಿ …
Read More »ಆ ಜೋಡೆತ್ತುಗಳನ್ನು 8 ಲಕ್ಷಕ್ಕೆ ಮಾರಿದ್ದರು, ಮತ್ತೆ 17 ಲಕ್ಷ ಕೊಟ್ಟು ಖರೀದಿಸಿದರು! ಏನಿದರ ವಿಶೇಷ?
ಬಾಗಲಕೋಟೆ: ಒಂದಲ್ಲ ಎರಡಲ್ಲ ಬರೊಬ್ಬರಿ 17 ಲಕ್ಷಕ್ಕೆ ಜೋಡೆತ್ತುಗಳು ಮಾರಾಟವಾಗಿರುವ ಘಟನೆ ನಡೆದಿದೆ. ಜಿಲ್ಲೆಯ ರಬಕವಿಬನಹಟ್ಟಿ ತಾಲ್ಲೂಕಿನ ನಂದಗಾಂವ ಗ್ರಾಮದಲ್ಲಿ ಇಂತಹ ದಾಖಲೆಯ ಅಪರೂಪದ ವ್ಯಾಪಾರ ನಡೆದಿದೆ. ಗ್ರಾಮದ ಸಂಗಪ್ಪ ಮುಗಳಖೋಡ ಎಂಬುವವರ ಜೋಡೆತ್ತುಗಳು 17 ಲಕ್ಷಕ್ಕೆ ಮಾರಾಟವಾಗಿವೆ. ಮಲ್ಲಪ್ಪ ಬೋರಡ್ಡಿ ಈ ಎತ್ತುಗಳನ್ನು ಖರೀದಿಸಿದ್ದಾರೆ. ಈ ಹಿಂದೆ ಇದೇ ಮಲ್ಲಪ್ಪ ಬೋರಡ್ಡಿಯವರಿಂದ ಇದೇ ಎತ್ತುಗಳನ್ನು ಸಂಗಪ್ಪ ಎಂಟು ಲಕ್ಷಕ್ಕೆ ಖರೀದಿ ಮಾಡಿದ್ದರು. ಈ ಜೋಡೆತ್ತುಗಳು ವಿವಿಧ ಕಡೆ ತೆರೆಬಂಡಿ ಸ್ಪರ್ಧೆಯಲ್ಲಿ …
Read More »ಮಹಿಳೆಯೊಬ್ಬರು ಮಾಸ್ಕ್ ಹಾಕದ ಕಾರಣಕ್ಕೆ ದಂಡ ವಿಧಿಸುತ್ತಿದ್ದಾಗ ಮಾಜಿ ಕಾರ್ಪೋರೇಟರ್ ಆಕ್ಷೇಪಿಸಿದಕ್ಕೆ ಪೊಲೀಸರು ಲಾಠಿಯಿಂದ ಕಾಲು ಮುರಿದಿದೆ
ವಿಜಯಪುರ: ಮಾಜಿ ಮಹಾನಗರ ಪಾಲಿಕೆ ಬಿಜೆಪಿ ಕಾರ್ಪೊರೆಟರ್ ಮೇಲೆ ಪೊಲಿಸರು ದೌರ್ಜನ್ಯ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ವಿಜಯಪುರ ಮಹಾನಗರ ಪಾಲಿಕೆ ಮಾಜಿ ಸದಸ್ಯ ಪ್ರಕಾಶ ಮಿರ್ಜಿ ಪೊಲಿಸರ ವಿರುದ್ದ ಆರೋಪ ಮಾಡಿದ್ದಾರೆ. ವಿಜಯಪುರ ನಗರ ಗಾಂಧಿಚೌಕ್ ಹಾಗೂ ಸಂಚಾರಿ ಠಾಣೆಯ ಎ.ಎಸ್.ಐ. ಹಾಗೂ ಹೆಡ್ ಕಾನ್ಸಟೇಬಲ್ ನಿಂದ ಭಾನುವಾರ ಸಂಜೆ ತಮ್ಮ ಮೇಲೆ ಹಲ್ಲೆ ನಡೆಸಿ ಕಾಲು ಮುರಿದಿದ್ದಾರೆ ಎಂದು ಪ್ರಕಾಶ ಮಿರ್ಜಿ ಆರೋಪಿಸಿದ್ದಾರೆ. ಮಹಿಳೆಯೊಬ್ಬರು ಮಾಸ್ಕ್ ಹಾಕದ ಕಾರಣಕ್ಕೆ …
Read More »ಭಾರತ್ ಬಂದ್‍ಗೆ ಬಾಗಲಕೋಟೆಯಲ್ಲಿ ನೀರಸ ಪ್ರತಿಕ್ರಿಯೆ
ಬಾಗಲಕೋಟೆ: ಭೂ ಸುಧಾರಣ ಕಾಯ್ದೆ ಹಾಗೂ ಎಪಿಎಂಸಿ ಕೃಷಿ ಮಸೂದೆ ವಿರೋಧಿಸಿ ಭಾರತ್ ಬಂದ್‍ಗೆ ಕರೆ ನೀಡಿದ್ದು, ಬಾಗಲಕೋಟೆಯಲ್ಲಿ ಭಾರತ್ ಬಂದ್‍ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಬಾಗಲಕೋಟೆಯಲ್ಲಿ ಜನಜೀವನ ಯಥಾ ಸ್ಥಿತಿಯಲ್ಲಿದೆ. ರೈತ ಸಂಘ, ಹಸಿರು ಸೇನೆ ಕಾರ್ಯಕರ್ತರು ಸೇರಿದಂತೆ 10 ಕ್ಕೂ ಹೆಚ್ಚು ಸಂಘಟನೆಗಳಿಂದ ಇಂದಿನ ಬಂದ್‍ಗೆ ಕೇವಲ ನೈತಿಕ ಬೆಂಬಲ ಸೂಚಿಸಲಾಗುತ್ತಿದೆ. ಇಳಕಲ್ ಹಾಗೂ ಜಮಖಂಡಿ ರೈತರಿಂದ ಇಂದು 10 ಗಂಟೆಗೆ ಪ್ರತಿಭಟನೆ ನಡೆಸಲಿದ್ದು, ಅಂಗಡಿಮುಂಗಟ್ಟು ತೆರೆದಿದ್ದು, …
Read More »ಡಿಸಿಎಂ ಕಾರಜೋಳ ನಿರಾಸಕ್ತಿ; ಕಾರ್ಖಾನೆ ಉಳಿವಿಗಾಗಿ ಬೀದಿಗಿಳಿದ ರೈತರು
ಬಾಗಲಕೋಟೆ: ಮುಧೋಳದ ರೈತರ ರನ್ನ ಸಹಕಾರಿ ಸಕ್ಕರೆ ಕಾರ್ಖಾನೆ ಉಳಿಸುವಂತೆ ಒತ್ತಾಯಿಸಿ ಕೊನೆಗೂ ರೈತರು ಬೀದಿಗಿಳಿದಿದ್ದಾರೆ. ಮುಧೋಳದಿಂದ ಬಾಗಲಕೋಟೆವರೆಗೂ ಪಾದಯಾತ್ರೆ ಕೂಡ ಆರಂಭಿಸಿದ್ದಾರೆ. ರೈತರ ರನ್ನ ಸಹಕಾರಿ ಸಕ್ಕರೆ ಕಾರ್ಖಾನೆ ತೀವ್ರ ಆರ್ಥಿಕ ಸಂಕಷ್ಟದಿಂದ ಬಳಲುತ್ತಿದ್ದು, ರೈತರ ಬಾಕಿ ಹಣ ಪಾವತಿಗಾಗಿ ಈಗಾಗಲೇ ಜಿಲ್ಲಾಡಳಿತ ೪೦ ಕೋಟಿ ರೂ.ಗಳ ಸಕ್ಕರೆಯನ್ನು ಮಾರಾಟ ಮಾಡಿ ಹಣ ಪಾವತಿಸುವ ವ್ಯವಸ್ಥೆ ಮಾಡಿಕೊಂಡಿದೆ. ತಾಂತ್ರಿಕ ಕಾರಣಗಳಿಂದ ಇದುವರೆಗೂ ಬಾಕಿ ಹಣ ಪಾವತಿ ಆಗಿಲ್ಲ. ಯಾವುದೇ ಕಾರಣಕ್ಕೂ …
Read More »ಎಇಇ .ಕೆ.ಡಿ ಕರಮಳ್ಳಿ , ಲಂಚ ಸ್ವೀಕರಿಸುತ್ತಿರುವ ಸಮಯದಲ್ಲಿ ಎಸಿಬಿ ಅಧಿಕಾರಿಗಳ ಬಲೆಗೆ
ಬದಾಮಿ: ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗದ ಎಇಇ .ಕೆ.ಡಿ ಕರಮಳ್ಳಿ , ಲಂಚ ಸ್ವೀಕರಿಸುತ್ತಿರುವ ಸಮಯದಲ್ಲಿ ಎಸಿಬಿ ಅಧಿಕಾರಿಗಳ ದಾಳಿ ಬಲೆಗೆ ಬಿದ್ದಿದ್ದಾರೆ. 2018-19 ನೇ ಸಾಲಿನಲ್ಲಿ ಬಾದಾಮಿ ತಾಲೂಕಿನ ಕಾತರಕಿ ಗ್ರಾಮ ಪಂಚಾಯತಿಯ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕೈಕೊಳ್ಳಲಾದ ಕಾಮಗಾರಿಗಳಿಗೆ ಸರಬರಾಜು ಮಾಡಿದ ಕಚ್ಚಾವಸ್ತುಗಳು ಸಂಭಂಧಿಸಿದ ವೋಚರ್ ಮತ್ತು ಅಳತೆ ಪುಸ್ತಕಗಳನ್ನು ನೀಡಲು ಗುತ್ತಿಗೆದಾರರಿಗೆ 60 ಸಾವಿರ ಲಂಚದ ಬೇಡಿಕೆ ಇಟ್ಟಿದ್ದರು. …
Read More »2.71 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಡಿಸಿಎಂ ಗೋವಿಂದ ಕಾರಜೋಳ ಶಂಕುಸ್ಥಾಪನೆ
ಬೆಂಗಳೂರು : ಮುಧೋಳ್ ತಾಲ್ಲೂಕಿನ 2.71 ಕೋಟಿ ರೂ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಉಪಮುಖ್ಯಮಂತ್ರಿ ಗೋವಿಂದ ಎಂ ಕಾರಜೋಳ ಅವರು ಶಂಕುಸ್ಥಾಪನೆ ನೆರವೇರಿಸಿದರು. ಮುಧೋಳ ತಾಲ್ಲೂಕಿನ ಸೊರಗಾಂವ ಗ್ರಾಮದ ಪರಿಶಿಷ್ಟ ಜಾತಿ ಕಾಲೋನಿಯಲ್ಲಿ 15ಲಕ್ಷ ರೂ. ವೆಚ್ಚದ ಸಿಸಿ ರಸ್ತೆ, ಹಲಗಲಿ ಗ್ರಾಮದಲ್ಲಿ 1.40 ಕೋಟಿ ರೂ ವೆಚ್ಚದ ಕಾಗವಾಡ- ಕಲಾದಗಿ ರಾಜ್ಯ ಹೆದ್ದಾರಿ ಕಾಮಗಾರಿ, ಮಾಚಕನೂರು ಗ್ರಾಮದ ಪರಿಶಿಷ್ಟ ಜಾತಿ ಕಾಲೋನಿಯಲ್ಲಿ 63ಲಕ್ಷ ರೂ ವೆಚ್ಚದ ಮೂಲಭೂತ ಸೌಕರ್ಯಗಳ …
Read More »ನಟಿ ರಾಗಿಣಿ ಯಾರು ಅಂತಾ ನನಗೆ ಗೊತ್ತಿಲ್ಲ. :ಗೋವಿಂದ ಕಾರಜೋಳ
ಬಾಗಲಕೋಟೆ: ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ನಟಿ ರಾಗಿಣಿ ಯಾರು ಅಂತಾ ನನಗೆ ಗೊತ್ತಿಲ್ಲ. ಯಾರೇ ತಪ್ಪು ಮಾಡಿದ್ದರು ಅಂತವರ ಮೇಲೆ ಸರ್ಕಾರ ಕಠಿಣ ಕ್ರಮ ಜರುಗಿಸಲಿದೆ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದ್ದಾರೆ. ಅಂಬೇಡ್ಕರ್ ಭವನದಲ್ಲಿ ಶಿಕ್ಷಕರ ದಿನಾಚರಣೆ ಸಮಾರಂಭದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜಕಾರಣಿ, ಅಧಿಕಾರಿಗಳ ಮಕ್ಕಳೇ ಯಾರೇ ಆಗಿದ್ರೂ ದೇಶದ ಕಾನೂನು ಎಲ್ಲರಿಗೂ ಒಂದೇ. ಡ್ರಗ್ಸ್ ಹಗರಣದಲ್ಲಿ ಭಾಗಿಯಾಗಿರುವವ ತನಿಖೆ ನಡೆಯುತ್ತಿದೆ.ತನಿಖೆ ಮುಗಿಯುವವರೆಗೆ …
Read More »ನಮ್ಮ ಹೀರೋ ಮಾಡಿದ, ಹೀರೊಯಿನ್ ಮಾಡಿದ್ರು ಅಂತ ಮುಂದೆ ಫಾಲೋ ಮಾಡಿದ್ರೆ ಗತಿಯೇನು: ನಟಿ, ರಾಜಕಾರಣಿ ತಾರಾ
ಬೆಂಗಳೂರು: ನಮ್ಮನ್ನ ಅನುಸರಿಸುವವರು ಇದ್ದಾರೆ. ಹೀಗಾಗಿ ನಮ್ಮ ಹೀರೋ ಮಾಡಿದ, ಹೀರೊಯಿನ್ ಮಾಡಿದ್ರು ಅಂತ ಮುಂದೆ ಫಾಲೋ ಮಾಡಿದ್ರೆ ಗತಿಯೇನು ಎಂದು ನಟಿ, ರಾಜಕಾರಣಿ ತಾರಾ ಪ್ರಶ್ನಿಸಿದ್ದಾರೆ.ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಸ್ಯಾಂಡಲ್ ವುಡ್ ಡ್ರಗ್ಸ್ ವಿಚಾರಕ್ಕೆ ಪ್ರತಿಕ್ರಿಯಿಸಿ, ಕನ್ನಡ ಚಿತ್ರರಂಗಕ್ಕೆ ಯಾವುದೇ ದುರ್ನಾತ ಬಡಿಯದಿರಲಿ ಅಂತ ದೇವರಿಗೆ ನಮಸ್ಕಾರ ಮಾಡಿದೆ. ನಾನು ಸಿಎಂಗೆ ಇಂದು ಸಲಹೆ ನೀಡುವೆ. ನಾವೆಲ್ಲರೂ ಎಲ್ಲ ಬೆಳವಣಿಗೆ ವೀಕ್ಷಿಸುತ್ತಿದ್ದೀವಿ ಎಂದರು. ಡ್ರಗ್ಸ್ ವಿಚಾರ ನಮ್ಮ ರಂಗಕ್ಕೆ …
Read More »ಆಲಮಟ್ಟಿ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಸಿಎಂ ಯಡಿಯೂರಪ್ಪ
ಬಾಗಲಕೋಟೆ: ರಾಜ್ಯದ ಅತೀ ದೊಡ್ಡ ಜಲಾಶಯ ಎಂದೇ ಖ್ಯಾತಿ ಪಡೆದ ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿಯ ಲಾಲಬಹಾದ್ದೂರ ಶಾಸ್ತ್ರಿ ಜಲಾಶಯಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬಾಗಿನ ಅರ್ಪಿಸಿದರು. ಬೆಳಗಾವಿ, ಬಾಗಲಕೋಟೆ, ಗದಗ ಜಿಲ್ಲೆಯಗಳಲ್ಲಿ ಪ್ರವಾಹದಿಂದ ಆದ ಹಾನಿಯ ಕುರಿತು ವೈಜ್ಞಾನಿಕ ಸಮೀಕ್ಷೆಯ ಬಳಿಕ ಮಧ್ಯಾಹ್ನ ಆಲಮಟ್ಟಿಗೆ ಬಂದಿಳಿದರು. ನಂತರ ಆಲಮಟ್ಟಿ ಜಲಾಶಯಕ್ಕೆ ತೆರಳಿ, ಜಲ ಸಂಪನ್ಮೂಲ ಸಚಿವ ರಮೇಶ ಜಾರಕಿಹೋಳಿ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕಂದಾಯ ಸಚಿವ ಆರ್. …
Read More »