Breaking News

ಚಿತ್ರದುರ್ಗ

ಡಿಸಿ, ಎಡಿಸಿ ಸಹಿ ದುರುಪಯೋಗ ಮಾಡಿ 15 ಲಕ್ಷದ ನಕಲಿ ಬಿಲ್ ಸೃಷ್ಟಿ – ಐವರು ಅರೆಸ್ಟ್

ಚಿತ್ರದುರ್ಗ: ಜಿಲ್ಲಾಧಿಕಾರಿ ಹಾಗೂ ಎಡಿಸಿಯವರ ಡಿಜಿಟಲ್ ಸಹಿ ದುರುಪಯೋಗಪಡಿಸಿಕೊಂಡು 15 ಲಕ್ಷ ರೂ. ಮೌಲ್ಯದ ನಕಲಿ ಬಿಲ್ ಸೃಷ್ಟಿಸಿದ್ದ ಐವರು ನೌಕರರನ್ನು ಬಂಧಿಸಿರುವ ಘಟನೆ ಚಿತ್ರದುರ್ಗದಲ್ಲಿ (Chitradurga) ಬೆಳಕಿಗೆ ಬಂದಿದೆ. ನಗರಾಭಿವೃದ್ಧಿ ವಿಭಾಗದಲ್ಲಿ ಹೊರಗುತ್ತಿಗೆ ನೌಕರ ಸೈಯದ್ ಸಾದಿಕ್, ವಿನಯ್ ಶರ್ಮಾ, ವಿಜಯ್ ಕುಮಾರ್, ಬಸವರಾಜ, ಮಹೆಬೂಬ್ ಭಾಷಾ ಹಾಗೂ ವೆಂಕಟೇಶ್ ಎಂಬ ಆರು ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಸದ್ಯ ಎ1 ಆರೋಪಿ ಸೈಯದ್ ಪರಾರಿಯಾಗಿದ್ದು, ಇನ್ನುಳಿದ ಐವರನ್ನು …

Read More »

ಜಗಳ ಬಿಡಿಸಲು ಮುಂದಾದ ವ್ಯಕ್ತಿಗೆ ಮಚ್ಚಿನಿಂದ ಹಲ್ಲೆ; ಗಂಡ – ಹೆಂಡತಿ ಜಗಳದಲಿ ಅಮಾಯಕ ಬಲಿ

ಚಿತ್ರದುರ್ಗ: ಅಪ್ಪ-ಅಮ್ಮ ಜಗಳದಲ್ಲಿ ಕೂಸು ಬಡವಾಯ್ತು ಎಂಬ ಮಾತಿದೆ. ಅಂತೆಯೇ ಗಂಡ – ಹೆಂಡತಿಯ ಜಗಳ ( ಬಿಡಿಸಲು ಮುಂದಾದ ವ್ಯಕ್ತಿಗೆ ಮಚ್ಚಿನಿಂದ ಹಲ್ಲೆಯಾದ ಪರಿಣಾಮ ವ್ಯಕ್ತಿಯೋರ್ವ ಬಲಿಯಾದ ಪ್ರಕರಣ ಚಿತ್ರದುರ್ಗದ  ಬುದ್ಧ ವೃತ್ತದಲ್ಲಿ ನಡೆದಿದೆ. ಕೌಟುಂಬಿಕ ಕಲಹದ ಹಿನ್ನೆಲೆ ಸ್ಟೇಡಿಯಂ ರಸ್ತೆಯಲ್ಲಿನ ಬುದ್ಧ ವೃತ್ತದಲ್ಲಿ ಸಾಧಿಕ್‌ವುಲ್ಲಾ ತನ್ನ ಪತ್ನಿಯೊಂದಿಗೆ ನಡುರಸ್ತೆಯಲ್ಲಿ ಜಗಳವಾಡುತ್ತಿದ್ದ. ಈ ವೇಳೆ ದಂಪತಿ ಜಗಳ ಬಿಡಿಸಲು ಮುಂದಾದ ತಾಜ್‌ಪೀರ್ (42) ಮೇಲೆ ಸಾಧಿಕ್‌ವುಲ್ಲಾ ಮಚ್ಚಿನಿಂದ ಹಲ್ಲೆ …

Read More »

ಲಾರಿಗೆ ಡಿಕ್ಕಿ ಹೊಡೆದ ಕಾರು: ಮೂವರು ಸಾವು

ನಿಂತಿದ್ದ ಲಾರಿಗೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಹಿರೆಹಳ್ಳಿ ಸಮೀಪ ಈ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಮೃತರನ್ನು ಗುಬ್ಬಿ ತಾಲೂಕಿನ ಹೊಸಕೆರೆ ಗ್ರಾಮದ ನರಸಿಂಹ ಮೂರ್ತಿ (38), ಗಂಗಾಧರ್ (35) ಮತ್ತು ಲೋಹಿತ್ (40) ಎಂದು ಗುರುತಿಸಲಾಗಿದೆ. ತುಮಕೂರು ಜಿಲ್ಲೆಯ ಕುಣಿಗಲ್ ಮೂಲದ ಐವರು ಕಾರಿನಲ್ಲಿ ಮಂತ್ರಾಲಯಕ್ಕೆ ತೆರಳಿ ರಾಯರ ದರ್ಶನ …

Read More »

ಚಿತ್ರದುರ್ಗ ರೈತರಿಗೆ 12.40 ಕೋಟಿ ರೂ. ಬೆಳೆ ವಿಮಾ ಪರಿಹಾರ ಬಿಡುಗಡೆ ಮಾಡಿದ ಕೇಂದ್ರ

ನವದೆಹಲಿ: ಚಿತ್ರದುರ್ಗ  ಜಿಲ್ಲೆಯ ರೈತರು 2025ರ ಖರೀಫ್ ಹಂಗಾಮಿನಲ್ಲಿ ಪ್ರಕೃತಿ ವಿಕೋಪಗಳಿಂದ ಬೆಳೆ ಹಾನಿಗೊಳಗಾಗಿದ್ದರು. ಈ ಸಂಕಷ್ಟದ ಸಮಯದಲ್ಲಿ ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಫಸಲ್ ಭಿಮಾ ಯೋಜನೆ  ಅಡಿಯಲ್ಲಿ ಸುಮಾರು 7,880 ರೈತರಿಗೆ ಒಟ್ಟು 12.40 ಕೋಟಿ ರೂ. ಮೊತ್ತದ ಬೆಳೆ ವಿಮಾ ಪರಿಹಾರವನ್ನು  ಬಿಡುಗಡೆ ಮಾಡಲಾಗಿದೆ. ಸಂಸದ ಗೋವಿಂದ ಕಾರಜೋಳ (ಅವರು ಲೋಕಸಭೆಯಲ್ಲಿ ಕೇಳಿದ ಚುಕ್ಕೆರಹಿತ ಪ್ರಶ್ನೆಗೆ ಉತ್ತರಿಸಿರುವ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಸಚಿವ …

Read More »

ಎಸೆಸೆಲ್ಸಿ ಪರೀಕ್ಷೆ ನಕಲಿಗೆ ಸಹಕಾರ: ನಾಲ್ವರು ಸಹ ಶಿಕ್ಷಕರ ಅಮಾನತು

ಚಿತ್ರದುರ್ಗ: ಎಸೆಸೆಲ್ಸಿ ವಿಜ್ಞಾನ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳಿಗೆ ನಕಲು ಮಾಡಲು ಸಹಕರಿಸಿದ ಆರೋಪದಲ್ಲಿ ನಾಲ್ವರು ಸಹ ಶಿಕ್ಷಕರನ್ನು ಅಮಾನತು ಮಾಡಿ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ರವಿಶಂಕರ್‌ ರೆಡ್ಡಿ ಆದೇಶ ಹೊರಡಿಸಿದ್ದಾರೆ. ಚಳ್ಳಕೆರೆ ತಾಲೂಕು ಪರಶುರಾಂಪುರ ಕರ್ನಾಟಕ ಪಬ್ಲಿಕ್‌ ಶಾಲೆಯಲ್ಲಿ ಕೊಠಡಿ ಮೇಲ್ವಿಚಾರಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಚಳ್ಳಕೆರೆ ತಾಲೂಕು ಪಿ.ಈಬನಹಳ್ಳಿ ಶಾಲೆಯ ಚಂದ್ರಶೇಖರ್‌, ಕೊರ್ಲಕುಂಟೆ ಶಾಲೆಯ ಪ್ರಕಾಶ್‌, ಗೋಸಿಕೆರೆ ರಾಧಾಕೃಷ್ಣ ಶಾಲೆಯ ರಾಘವೇಂದ್ರ ಹಾಗೂ ಮಂಜರಿ ಹಿರಿಯ ಪ್ರಾಥಮಿಕ ಶಾಲೆಯ ರೇವಣ್ಣ ಅಮಾನತುಗೊಂಡ …

Read More »

ಬೈಕ್ ತಪ್ಪಿಸಲು ಹೋಗಿ ಸಿಎಂ ಎಸ್ಕಾರ್ಟ್ ವಾಹನ ಪಲ್ಟಿ; ಹಲವು ಪೊಲೀಸರಿಗೆ ಗಾಯ

ಚಿತ್ರದುರ್ಗ: ಜಿಲ್ಲೆಗೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಎಸ್ಕಾರ್ಟ್ ವಾಹನ ಪಲ್ಟಿಯಾದ ಘಟನೆ ಹಿರಿಯೂರು ನಗರದಲ್ಲಿ ನಡೆದಿದೆ. ಹಿರಿಯೂರು ತಾಲೂಕು ಕಚೇರಿ ಬಳಿ ದುರ್ಘಟನೆ ನಡೆದಿದ್ದು, ಕೆಲವು ಪೊಲೀಸರು ಗಾಯಗೊಂಡಿದ್ದಾರೆ. ವಾಹನ ತಾಗಿ ಪಾದಾಚಾರಿಗಳಿಬ್ಬರೂ ಗಾಯಗೊಂಡಿದ್ದಾರೆ. ವಾಣಿವಿಲಾಸ ಡ್ಯಾಂನಿಂದ ಹಿರಿಯೂರು ಪಟ್ಟಣದ ನೆಹರು ಮೈದಾನಕ್ಕೆ ಬರುವ ವೇಳೆ ಘಟನೆ ನಡೆದಿದೆ. ಮುಂದಿನಿಂದ ಅಡ್ಡ ಬಂದ ಬೈಕ್ ತಪ್ಪಿಸಲು ಬ್ರೇಕ್ ಹಾಕಿದ ಕಾರಣದಿಂದ ಸಿಇಎನ್ ಸಿಪಿಐ ರಮಾಕಾಂತ್ ಇದ್ದ …

Read More »

ಚಿತ್ರದುರ್ಗ ಮಠದ ಮಾಜಿ ಆಡಳಿತಾಧಿಕಾರಿಗೆ ನ್ಯಾಯಾಂಗ ಬಂಧನ

ಚಿತ್ರದುರ್ಗ: ಮುರುಘಾ ಮಠದ ಶಿವಮೂರ್ತಿ ಶರಣರ ವಿರುದ್ಧ ಸುಳ್ಳು ಹೇಳಿಕೆ ನೀಡುವಂತೆ ಪೋಕ್ಸೊ ಸಂತ್ರಸ್ತ ವಿದ್ಯಾರ್ಥಿನಿಯರಿಗೆ ಕುಮ್ಮಕ್ಕು ನೀಡಿದ ಆರೋಪದಡಿ ಬಂಧಿತರಾಗಿರುವ ಮಠದ ಮಾಜಿ ಆಡಳಿತಾಧಿಕಾರಿ ಎಸ್.ಕೆ.ಬಸವರಾಜನ್ ಹಾಗೂ ಶಿಕ್ಷಕ ಬಸವರಾಜೇಂದ್ರ ಅವರಿಗೆ ಜಿಲ್ಲಾ ನ್ಯಾಯಾಲಯ ನ.28ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.   ಪೊಲೀಸ್ ಕಸ್ಟಡಿ ಅವಧಿ ಮುಗಿದ ಪರಿಣಾಮ ತನಿಖಾ ತಂಡ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಸೋಮವಾರ ಹಾಜರುಪಡಿಸಿತು. ಪೊಲೀಸ್ ವಿಚಾರಣೆ ಪೂರ್ಣಗೊಂಡಿದ್ದರಿಂದ ಇಬ್ಬರು …

Read More »

ಮುರುಘಾ ಶ್ರೀ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ: ಸ್ಪೋಟಕ ಸಂಗತಿಗಳು ಬಹಿರಂಗ

ಚಿತ್ರದುರ್ಗದ ಮುರುಘಾ ಶ್ರೀ ವಿರುದ್ಧ ಫೋಕ್ಸೋ ಪ್ರಕರಣ ದಾಖಲಾಗಿದೆ. ಡಿವೈಎಸ್ಪಿ ಅನಿಲ್‌ ನೇತೃತ್ವದಲ್ಲಿ ಪ್ರಕರಣದ ತನಿಖೆ ನಡೆಯುತ್ತಿದ್ದು, 2ನೇ ಅಪರ ಜಿಲ್ಲಾ & ಸತ್ರ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ. 347 ಪುಟಗಳ 2ಸೆಟ್ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗಿದೆ. A1ಮುರುಘಾ ಸ್ವಾಮಿ, A2 ಲೇಡಿ ವಾರ್ಡನ್ (ರಶ್ಮಿ), A 4 ಕಾರ್ಯದರ್ಶಿ ಪರಮಶಿವಯ್ಯ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆಯಾಗಿದ್ದು, A 3 ಮಠದ ಉತ್ತರಾಧಿಕಾರಿ, A 5 ವಕೀಲ …

Read More »

BREAKING NEWS: ಸ್ವಾಮೀಜಿಗಳಾಯ್ತು ಈಗ ಶಾಸಕರ ಸರದಿ; ಚಿತ್ರದುರ್ಗ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿಗೆ ಹನಿಟ್ರ್ಯಾಪ್ ಗೆ ಯತ್ನ!

ಚಿತ್ರದುರ್ಗ: ಇತ್ತೀಚಿನ ದಿನಗಳಲ್ಲಿ ಹನಿಟ್ರ್ಯಾಪ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈಗಾಗಲೇ ಬಸವಲಿಂಗ ಸ್ವಾಮೀಜಿ ಪ್ರಕರಣ ಬೆನ್ನಲ್ಲೆ ರಾಜ್ಯದ ಮತ್ತೋರ್ವ ರಾಜಕಾರಣಿಗೆ ಹನಿಟ್ರ್ಯಾಪ್ ಯತ್ನಿಸಲಾಗಿದೆ. ಹನಿಟ್ರ್ಯಾಪ್‍ಗೆ ಯತ್ನ ಸಂಬಂಧ ಈಗಾಗಲೇ ಶಾಸಕರು ಸೈಬರ್ ಪೊಲೀಸರಿಗೆ ದೂರು ನೀಡಿದ್ದಾರೆ. ಹೌದು ಚಿತ್ರದುರ್ಗದ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಗೆ ಹನಿಟ್ರ್ಯಾಪ್‍ಗೆ ಯತ್ನ ನಡೆದಿದೆ. ಮೊಬೈಲ್ ನಂಬರ್ ಒಂದರಿಂದ ವೀಡಿಯೋ ಕಾಲ್ ಮೂಲಕ ಶಾಸಕರನ್ನು ಸಿಲುಕಿಸುವ ಯತ್ನ ಮಾಡಲಾಗಿದೆ. ಬೆತ್ತಲೆಯಾಗಿದ್ದ ಯುವತಿಯೊಬ್ಬಳು ಶಾಸಕರಿಗೆ ವೀಡಿಯೋ ಕಾಲ್ …

Read More »

ಭಗತ್ ಸಿಂಗ್ ಪಾತ್ರದ ಅಭ್ಯಾಸ ಮಾಡಲು ಹೋಗಿ ಜೀವ ಕಳೆದುಕೊಂಡ 7ನೇ ತರಗತಿ ಬಾಲಕ

ಚಿತ್ರದುರ್ಗ : ಕರ್ನಾಟಕ ರಾಜ್ಯೋತ್ಸವದ ದಿನದಂದು ಭಗತ್ ಸಿಂಗ್ ಪಾತ್ರ ನಿರ್ವಹಿಸಲು ಅಭ್ಯಾಸ ನಡೆಸುತ್ತಿದ್ದ ವೇಳೆ ಅವಘಡ ಸಂಭವಿಸಿ ಏಳನೇ ತರಗತಿಯ ಬಾಲಕ ಸಾವನ್ನಪ್ಪಿದ ಘಟನೆ ನಡೆದಿದೆ. ಚಿತ್ರದುರ್ಗದ ಕೆಳಗೋಟೆ ಬಡಾವಣೆಯ ಸಂಜಯ್ ಗೌಡ(12) ಮೃತ ದುರ್ದೈವಿ. ಸಂಜಯ್ ನವೆಂಬರ್ 1 ರಂದು ಕರ್ನಾಟಕ ರಾಜ್ಯೋತ್ಸವ ದಿನದಂದು ಭಗತ್ ಸಿಂಗ್ ಪಾತ್ರ ನಿರ್ವಹಿಸಲು ನಿರ್ಧರಿಸಿದ್ದಾನೆ ಅದರಂತೆ ಶನಿವಾರ ಮನೆಯಲ್ಲಿ ಅಭ್ಯಾಸ ನಡೆಸುತ್ತಿದ್ದ ಎನ್ನಲಾಗಿದೆ. ಈ ವೇಳೆ ಮನೆಯಲ್ಲಿ ಯಾರೂ ಇರಲಿಲ್ಲ, ಮನೆಯೊಳಗೇ …

Read More »