ಗದಗ: ಗುತ್ತಿಗೆದಾರರೊಬ್ಬರಿಂದ ಲಂಚ ಪಡೆಯುತ್ತಿದ್ದ ಗದಗ -ಬೆಟಗೇರಿ ನಗರಸಭೆ ಸಹಾಯಕ ಕಾರ್ಯಪಾಲಕ ಅಭಿಯಂತರ ವರ್ಧಮಾನ ಎಸ್. ಹುದ್ದಾರ ಬುಧವಾರ ಎಸಿಬಿ ಬಲೆಗೆ ಬಿದ್ದಿದ್ದಾರೆ. ನಗರಸಭೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ವರ್ಧಮಾನ ಎಸ್. ಹುದ್ದಾರ ಅವರು ಸಿಕ್ಕಿಬಿದ್ದಿದ್ದಾರೆ. ಘನತ್ಯಾಜ್ಯ ವಿಲೇವಾರಿಗೆ ಗುತ್ತಿಗೆ ಪಡೆದಿದ್ದ ಗುತ್ತಿಗೆದಾರನಿಗೆ ಅನುದಾನ ಬಿಡುಗಡೆ ಮಾಡಲು 25 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಗುತ್ತಿಗೆದಾರ ಅಬ್ದುಲ್ ಸಲಾಂ ಮನಿಯಾರ್ ಎಂಬುವವರು ಎಸಿಬಿ ಅಧಿಕಾರಿಳಿಗೆ ದೂರು …
Read More »ನಮ್ಮೊಂದಿಗೆ ದೇವರಿದ್ದಾನೆ, ನಮಗೆ ಲಸಿಕೆ ಬೇಡ: ಕೊರೋನಾ ಲಸಿಕೆ ಪಡೆಯಲು ಗದಗದ ಜನರ ವಿರೋಧ
ಗದಗ: ಗಾಢ ನಂಬಿಕೆಗಳು ಕೂಡ ಕೆಲವೊಮ್ಮೆ ಜನರನ್ನು ಅಪಾಯಕ್ಕೆ ಸಿಲುಕಿಸಿಬಿಡುತ್ತವೆ. ದೇವರ ಮೇಲೆ ಗಾಢ ನಂಬಿಕೆ ಇಟ್ಟಿರುವ ಗದಗ ಜಿಲ್ಲೆಯ ದಾವಲ್ ಮಲ್ಲಿಕ್ ಗ್ರಾಮಸ್ಥರು ಕೊರೋನಾ ಲಸಿಕೆ ಪಡೆಯಲು ವಿರೋಧ ವ್ಯಕ್ತಪಡಿಸಿದ್ದಾರೆ. ಲಸಿಕೆ ಬಗ್ಗೆ ಅನುಮಾನ ಬೇಡ. ಧೈರ್ಯವಾಗಿ ಲಸಿಕೆಯನ್ನು ಪಡೆಯಬಹುದು ಎಂದು ವೈದ್ಯರು ಈ ಬಗ್ಗೆ ಸ್ಪಷ್ಟಪಡಿಸಿದ್ದರೂ ಗ್ರಾಮಸ್ಥರು ಈ ಬಗ್ಗೆ ನಂಬಿಕೆ ಇಲ್ಲದಂತೆ ವರ್ತಿಸುತ್ತಿದ್ದಾರೆ. ಗದಗ ತಾಲೂಕಿನ ಮುಳಗುಂದದ ದಾವಲ್ ಮಲ್ಲಿಕ್ ದರ್ಗಾ ಬಳಿಯ ವ್ಯಾಪಾರಿಗಳು ಲಸಿಕೆ …
Read More »ಮುಖಂಡನ ಸಾವು: ಅಂತ್ಯ ಸಂಸ್ಕಾರದಲ್ಲಿ ಭಾಗಿಯಾದವರ ಮೇಲೆ ದೂರು ದಾಖಲು
ಗದಗ: ಕಾಂಗ್ರೆಸ್ ಯುವ ಮುಖಂಡ ಮಹಾಂತೇಶ ಬೆಳಧಡಿ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಬಂದವರ ಮೇಲೆ ಪೊಲೀಸರು ದೂರು ದಾಖಲು ಮಾಡಿದ್ದಾರೆ. ಕೋವಿಡ್ ನಿಯಮ ಉಲ್ಲಂಘನೆ ಮಾಡಿದ 25 ಕ್ಕೂ ಹೆಚ್ಚು ಮಂದಿ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಲು ಬಂದಿದ್ದರು. ಈ ಹಿನ್ನೆಲೆಯಲ್ಲಿ ದೂರು ದಾಖಲಿಸಲಾಗಿದೆ. ಗದಗ ನಗರದ ಗಂಗಾಪೂರ ನಿವಾಸಿಯಾದ ಮಹಾಂತೇಶ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ತೀವ್ರವಾದ ಉಸಿರಾಟದ ತೊಂದರೆಯಿಂದ ಮೃತಪಟ್ಟಿದ್ದಾರೆ. ಜೂನ್ 5 ರಂದು ಗದಗದಲ್ಲಿ ಅವರ ಅಂತ್ಯ ಸಂಸ್ಕಾರ …
Read More »ರಸ್ತೆ ಅಪಘಾತದ ಪರಿಹಾರ ನೀಡುವಲ್ಲಿ ವಿಳಂಬ- KSRTC ಕಚೇರಿ ವಸ್ತುಗಳು ಜಪ್ತಿ
ಗದಗ: ಅಪಘಾತದಿಂದ ಮೃತಪಟ್ಟಿದ್ದ ಬಾಲಕನ ಕುಟುಂಬಕ್ಕೆ ಪರಿಹಾರ ನೀಡುವಲ್ಲಿ ವಿಳಂಬ ಮಾಡಿದಕ್ಕೆ ವಾಯುವ್ಯ ಸಾರಿಗೆ ವಿಭಾಗೀಯ ಕಚೇರಿಯ ವಸ್ತುಗಳನ್ನು ಜಪ್ತಿ ಮಾಡಿದ ಘಟನೆ ನಗರದಲ್ಲಿ ನಡೆದಿದೆ. ನಗರದ ಮುಳಗುಂದ ನಾಕಾ ಬಳಿ ಇರುವ ವಾಯುವ್ಯ ಸಾರಿಗೆ ವಿಭಾಗೀಯ ಕಚೇರಿಯಲ್ಲಿನ ಕಂಪ್ಯೂಟರ್, ಮಾನಿಟರ್, ಸಿಪಿಯು ಸೇರಿದಂತೆ ಹಲವಾರು ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರಾಜಶೇಖರ್ ಪಾಟೀಲ್ ಅವರ ಆದೇಶದ ಮೇರೆಗೆ ಜಪ್ತಿ ಮಾಡಲಾಗಿದೆ. ಏನಿದು ಪ್ರಕರಣ? 2009ರಲ್ಲಿ …
Read More »ಬಸ್ ಬ್ರೇಕ್ ಫೇಲ್: ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿದ ದುರಂತ
ಗದಗ: ಸಾರಿಗೆ ಸಂಸ್ಥೆಯ ಬಸ್ ನ ಬ್ರೇಕ್ ವೈಫಲ್ಯವಾದರೂ, ಚಾಲಕನ ಸಮಯ ಪ್ರಜ್ಞೆಯಿಂದ ನಡೆಯಬಹುದಾಗಿದ್ದ ಭಾರಿ ಅಪಾಯವೊಂದು ತಪ್ಪಿದ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಶಿರಹಟ್ಟಿಯಿಂದ ಮುಂಡರಗಿ ಪಟ್ಟಣಕ್ಕೆ ತೆರಳುತ್ತಿದ್ದ ಸಾರಿಗೆ ಸಂಸ್ಥೆಯ ಬಸ್ ನಲ್ಲಿ 30ಕ್ಕೂ ಹೆಚ್ಚು ಮಂದಿ ಪ್ರಯಾಣಿಸುತ್ತಿದ್ದರು. ಆದರೆ ಬಾಗೇವಾಡಿ ಗ್ರಾಮದ ಬಳಿ ಬಸ್ ಬ್ರೇಕ್ ವೈಫಲ್ಯವಾಗಿತ್ತು. ತಕ್ಷಣ ಎಚ್ವೆತ್ತುಕೊಂಡ ಬಸ್ ಚಾಲಕ ಸಿದ್ದಪ್ಪ ಗುದ್ದಿನ್, ರಸ್ತೆಗೆ ಹೊಂದಿಕೊಂಡಿರುವ ಗುಡ್ಡಕ್ಕೆ ಬಸ್ ಏರಿಸಿದ್ದಾರೆ. ಇದರಿಂದ …
Read More »ಹಕ್ಕು ಪತ್ರಗಳ ವಿತರಣೆ ವಿಳಂಬ : ತಲೆಯ ಮೇಲೆ ಕಲ್ಲು ಹೊತ್ತುಕೊಂಡು ಪ್ರತಿಭಟನೆ
ಗದಗ,ಮಾ.10(ಹಿ.ಸ): ಮಲಪ್ರಭಾ ನದಿ ಹಾಗೂ ಬೆಣ್ಣೆಹಳ್ಳ ಪ್ರವಾಹಕ್ಕೆ ಮನೆ ಕಳೆದುಕೊಂಡ ಕುಟುಂಬಗಳು ಸರ್ಕಾರದ ಆಸರೆ ಮನೆಗಳ ಹಕ್ಕು ಪತ್ರ ನೀಡುವಂತೆ ಆಗ್ರಹಿಸಿ ಗದಗ ಜಿಲ್ಲೆ ರೋಣ ತಹಶಿಲ್ದಾರ ಕಚೇರಿ ಎದುರು ಬುಧವಾರ ವಿನೂತನ ಪ್ರತಿಭಟನೆ ಮಾಡಿದರು. ರೋಣ ತಹಶಿಲ್ದಾರ್ ಕಚೇರಿ ಬಳಿ ಗಾಡಗೋಳಿ ಗ್ರಾಮದ ನೆರೆ ಸಂತ್ರಸ್ತರು ತಲೆಯ ಮೇಲೆ ಕಲ್ಲು ಹೊತ್ತುಕೊಂಡು ವಿನೂತನ ಹೋರಾಟ ಮಾಡಿದರು. ಮಲಪ್ರಭಾ ನದಿ ಹಾಗೂ ಬೆಣ್ಣೆಹಳ್ಳ ಪ್ರವಾಹ ಸಂದರ್ಭದಲ್ಲಿ ನೂರಾರು ಕುಟುಂಬಗಳು ಮನೆ …
Read More »ಕುಡಿಯುವ ನೀರಿಗಾಗಿ ಗದಗನ ಪಶುವೈದ್ಯಕೀಯ ಮಹಾವಿದ್ಯಾಲಯದ ವಿದ್ಯಾರ್ಥಿಗಳ ಪರದಾಟ
ಗದಗ : ಕುಡಿಯುವ ನೀರಿನ ಸಮಸ್ಯೆಯಿಂದ ಸಾಕಷ್ಟು ಸಮಸ್ಯೆ ಎದುರಿಸುತ್ತಿರುವ ಪಶುವೈದ್ಯಕೀಯ ಮಹಾವಿದ್ಯಾಲಯ ವಿದ್ಯಾರ್ಥಿಗಳು ಇಂದು ನಗರದ ಲೋಕೋಪಯೋಗಿ ಇಲಾಖೆಗೆ ಮುತ್ತಿಗೆ ಹಾಕಿ ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿದರು. ನಗರದ ಹೊಂಬಳ ಗ್ರಾಮದ ರಸ್ತೆಯಲ್ಲಿರುವ ಪಶುವೈದ್ಯಕೀಯ ಮಹಾವಿದ್ಯಾಲಯದಲ್ಲಿ ನೀರಿನ ಅಭಾವ ಉಂಟಾಗಿದೆ. ಜಿಲ್ಲೆಯ ಮಹತ್ವದ ಯೋಜನೆಯಾಗಿರುವ 24/7 ಕುಡಿಯುವ ನೀರು ಸರಬರಾಜುವಿನ ಪೈಪ್‌ಲೈನ್ ಅಳವಡಿಕೆ ಕಾಮಗಾರಿ ಪೂರ್ಣಗೊಂಡಿದ್ದರೂ, ಎರಡು ವರ್ಷಗಳಿಂದ ಕಾಲೇಜಿಗೆ ನದಿ ನೀರು ಒಂದು ಹನಿ ಸಹಿತ ನೀರು ಪೂರೈಕೆ …
Read More »ಜಿಮ್ಸ್ ಆಸ್ಪತ್ರೆಯಲ್ಲಿ ಮತ್ತೊಂದು ಅಮಾನವೀಯ ಘಟನೆ
ಗದಗ: ಜಿಮ್ಸ್ ಆಸ್ಪತ್ರೆಯಲ್ಲಿ ಮತ್ತೊಂದು ಅಮಾನವೀಯ ಘಟನೆ ನಡೆದಿದೆ. ಬೆಡ್ನಿಂದ ರೋಗಿಯೊಬ್ಬ ಕೆಳಗೆ ಬಿದ್ದರೂ ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯವಹಿಸಿರುವುದು ಕಂಡು ಬಂದಿದೆ. ತುರ್ತು ಚಿಕಿತ್ಸಾ ಘಟಕದ ವಾರ್ಡ್ನಲ್ಲೇ ರೋಗಿ ನರಳಾಡ್ತಿದ್ದಾರೆ. ಆದರೆ ವೈದ್ಯರು, ಸಿಬ್ಬಂದಿ ಅಲ್ಲೇ ಓಡಾಡುತ್ತಿದ್ರೂ ಕ್ಯಾರೆ ಎಂದಿಲ್ಲ. ವೈದ್ಯರ ಮೇಲೆ ನಂಬಿಕೆ ಇಟ್ಟು ರೋಗಿಗಳು ಆಸ್ಪತ್ರೆಗೆ ಹೋಗ್ತಾರೆ. ಆದರೆ ಅಲ್ಲಿ ವೈದ್ಯರ ನಿರ್ಲಕ್ಷ್ಯಕ್ಕೆ ಆಗಬಾರದ ಅನಾಹುತ ಸಂಭವಿಸುತ್ತೆ. ನಿನ್ನೆ ಕೂಡ ಜಿಮ್ಸ್ ಆಸ್ಪತ್ರೆ ಸಿಬ್ಬಂದಿ ತಾಯಿ ಮಗುವಿಗೆ …
Read More »ರಸ್ತೆ ಪಕ್ಕದಲ್ಲಿ ಹುಲ್ಲಿಗೆ ಹಚ್ಚಿದ್ದ ಬೆಂಕಿಯಿಂದ ಸುಟ್ಟು ಕರಕಲಾಯಿತು ಬೈಕ್
ಗದಗ: ರಸ್ತೆ ಪಕ್ಕದ ಒಣ ಹುಲ್ಲಿಗೆ ಬೆಂಕಿ ಹಚ್ಚಿದ್ದರಿಂದ ದಟ್ಟವಾದ ಹೊಗೆಯಲ್ಲಿ ದಾರಿ ಕಾಣದೆ ಬೈಕ್ ಸವಾರ ಸೇರಿ ಕುಟುಂಬದ ಮೂವರು ಬೆಂಕಿನಲ್ಲಿ ಬಿದ್ದ ಘಟನೆ ಜಿಲ್ಲೆಯ ರೋಣ ಪಟ್ಟಣದ ಬಳಿ ನಡೆದಿದೆ. ರೋಣ ಹಾಗೂ ಜಕ್ಕಲಿ ನಡುವೆ ಘಟನೆ ಸಂಭವಿಸಿದೆ. ಬೆಂಕಿ ದುರಂತದಲ್ಲಿ ಬೈಕ್ ಸವಾರ, ಹಿಂಬದಿ ಕುಳಿತ ತಾಯಿ ಮಗುವಿಗೆ ಗಂಭೀರ ಗಾಯಗಳಾಗಿವೆ. ಬೈಕ್ ಸವಾರ 29 ವರ್ಷದ ನಾಗರಾಜ್ ರ್ಯಾವಣಕಿ, 2 ವರ್ಷದ ಮಗು ಲಲಿತಾ …
Read More »ಅಕ್ರಮ ಗಾಂಜಾ ವಶ
ಗದಗ : ಗದಗ ಜಿಲ್ಲೆಯ ಹುಲಕೋಟಿ ಗ್ರಾಮದಲ್ಲಿ ಅಕ್ರಮವಾಗಿ ಗಾಂಜಾ ಮಾರುತ್ತಿದ್ದ ಮಹಿಳೆಯ ಮನೆಯ ಮೇಲೆ ಗದಗ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದಾರೆ. ದೇವಕ್ಕ ನಾರಾಯಣ ಬೆಳ್ಳಿಕೊಪ್ಪ ಗಾಂಜಾ ಮಾರಾಟ ಮಾಡುತ್ತಿದ್ದ ಮಹಿಳೆಯಾಗಿದ್ದಾಳೆ. ಮನೆಯಲ್ಲಿ 80 ಸಾವಿರ ಮೌಲ್ಯದ ಸುಮಾರು ೪ ಕೆಜಿ ಒಣ ಗಾಂಜಾವನ್ನು ಅಬಕಾರಿ ನಿರೀಕ್ಷಕ ಮಲ್ಲಿಕಾರ್ಜುನ ರೆಡ್ಡಿ ವಶಪಡಿಸಿಕೊಂಡಿದ್ದಾರೆ ಆರೋಪಿ ದೇವಕ್ಕ ಬೆಳ್ಳಿಕೊಪ್ಪ ಪರಾರಿಯಾಗಿದ್ದಾರೆ. ಗದಗ ಅಬಕಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read More »