Breaking News

ಅಂತರಾಷ್ಟ್ರೀಯ

ನರೇಗಾ ಯೋಜನೆ ಲೇವಡಿ ಪ್ರಧಾನಿ ಮೋದಿಗೆ ರಾಹುಲ್ ಗಾಂಧಿ ತಿರುಗೇಟು

ವಯನಾಡು: ಪ್ರಧಾನಿ ಮೋದಿ ಅವರು, 2014 ರಲ್ಲಿ ಅಧಿಕಾರ ವಹಿಸಿಕೊಂಡಾಗ ನರೇಗಾ ಯೋಜನೆಯನ್ನು ಅಪಹಾಸ್ಯ ಮಾಡಿದ್ದರು. ಯುಪಿಎ ಸರ್ಕಾರವು ಜಾರಿಗೆ ತಂದ ಮಹತ್ವಾಕಾಂಕ್ಷೆಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯು ಕೋವಿಡ್ ಸಮಯದಲ್ಲಿ ದೇಶದ ಜನರ ‘ಸಂರಕ್ಷಕ’ ಪಾತ್ರವನ್ನು ವಹಿಸಿದೆ ಎಂಬುದನ್ನು ಒಪ್ಪಿಕೊಳ್ಳಬೇಕು ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಸೋಮವಾರ ಹೇಳಿದ್ದಾರೆ. ತಮ್ಮ ಕ್ಷೇತ್ರದಲ್ಲಿನ ಪುಥಡಿ ಗ್ರಾಮ ಪಂಚಾಯಿತಿಯಲ್ಲಿ ಕುಟುಂಬಶ್ರೀ ಸಂಗಮಮ್‌ ಗೆ ಚಾಲನೆ ನೀಡಿ ಮಾತನಾಡಿದ ಅವರು, ಕಾಂಗ್ರೆಸ್ …

Read More »

ಜಿ ಎನ್ ಎಸ್ ಶಾಲೆಯ 1998-99 ವಿದ್ಯಾರ್ಥಿಗಳಿಂದ ಗುರುಗಳಿಗೆ ಗುರುಸ್ಮoತಿ ಕಾರ್ಯಕ್ರಮ

ಗೋಕಾಕ: ದೇಶದ ಸಮಸ್ಯೆಯನ್ನು ನಿವಾರಿಸಲು ಯುವ ಶಕ್ತಿಯಿಂದ ಮಾತ್ರ ಸಾಧ್ಯ. ಆರೋಗ್ಯಯುತ ಭಾರತವಾಗಬೇಕು. ಭಾರತೀಯ ಸಂಸ್ಕøತಿಯನ್ನು ಬೆಳೆಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಕಾರ್ಯ ಪ್ರವೃತ್ತರಾಗಬೇಕು ಎಂದು ಕ್ಷೇತ್ರಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ ಹೇಳಿದರು. ಅವರು ರವಿವಾರದಂದು ಇಲ್ಲಿಯ ಶುಭಂ ಗಾರ್ಡನ್‍ನಲ್ಲಿ ಜರುಗಿದ ನಗರದ ಜಿಎನ್‍ಎಸ್ ಶಾಲೆಯ 1998-99 ಸಾಲಿನ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಂದ ಗುರುಗಳಿಗೆ ಗೌರವ ನಮನ ಹಾಗೂ ಸ್ನೇಹಿತರ ಪುನರ್ ಮಿಲನ ಹಾಗೂ ಗುರುಸ್ಮøತಿ ಹಾಗೂ ಅಪೂರ್ವ ಸ್ನೇಹ ಸಂಗಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ …

Read More »

ಭಾರತ-ಇಂಗ್ಲೆಂಡ್ ನಡುವಿನ 4 ಪಂದ್ಯಗಳ ಸರಣಿಯ ಕೊನೆಯ 2 ಟೆಸ್ಟ್ ಪಂದ್ಯಗಳ ಆತಿಥ್ಯಕ್ಕೆ ಸಜ್ಜು

ಅಹಮದಾಬಾದ್: ನವೀಕೃತ ಗೊಂಡಿರುವ ವಿಶ್ವದ ಅತ್ಯಂತ ದೊಡ್ಡ ಕ್ರಿಕೆಟ್ ಕ್ರೀಡಾಂಗಣ ಮೊಟೆರಾದ ಸರ್ದಾರ್ ಪಟೇಲ್ ಸ್ಟೇಡಿಯಂ ಭಾರತ-ಇಂಗ್ಲೆಂಡ್ ನಡುವಿನ 4 ಪಂದ್ಯಗಳ ಸರಣಿಯ ಕೊನೆಯ 2 ಟೆಸ್ಟ್ ಪಂದ್ಯಗಳ ಆತಿಥ್ಯಕ್ಕೆ ಸಜ್ಜಾಗಿದೆ. ಮೂರನೇ ಟೆಸ್ಟ್ ಪಂದ್ಯವು ಹಗಲು- ರಾತ್ರಿ ನಡೆಯಲಿದ್ದು, ವೈಮಾನಿಕ ಚೆಂಡುಗಳನ್ನು ಗುರುತಿಸಲು ಸುಲಭವಾಗು ವಂತೆ, ನೆರಳನ್ನು ನಿವಾರಿಸಲು ಸ್ಟೇಡಿಯಂನಲ್ಲಿ ಹೊಸದಾಗಿ ಎಲ್‌ಇಡಿ ಫ್ಲಡ್‌ಲೈಟ್‌ಗಳನ್ನು ಅಳವಡಿಸಲಾಗಿದೆ. ಕ್ರೀಡಾಂಗಣದಲ್ಲಿ 11 ಸೆಂಟರ್ ಸ್ಟ್ರಿಪ್‌ಗಳಿದ್ದು, ಇದು ಅನನ್ಯವಾದುದು. ಆಟಗಾರರಿಗೆ 4 ಡ್ರೆಸ್ಸಿಂಗ್ …

Read More »

ಮನುವಾದಿಗಳಿಗೆ ಸೆಡ್ಡು ಹೊಡೆದು ಬದುಕುತ್ತೇವೆ : ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಸ್ಮಶಾನ ಭೂಮಿಯಲ್ಲಿ ಅಭಿಮಾನಿಯ ಹೊಸ ಕಾರಿಗೆ ಶಾಸಕ ಚಾಲನೆ

ಬೆಳಗಾವಿ : ‘ ಮನುವಾದಿಗಳಿಗೆ ಹೆದರಿ ಜೀವನ ಮಾಡುವವರು ನಾವಲ್ಲ. ಅವರಿಗೆ ಸೆಡ್ಡು ಹೊಡೆದು ಬದುಕುತ್ತೇವೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ , ಶಾಸಕ ಸತೀಶ್ ಜಾರಕಿಹೊಳಿ ಹೇಳಿದರು. ಇಲ್ಲಿನ ಸದಾಶಿವನಗರದ ಸ್ಮಶಾನ ಭೂಮಿಯಲ್ಲಿ ಶನಿವಾರ ಅಭಿಮಾನಿಯ ಹೊಸ ಕಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ‘ಮೂಢನಂಬಿಕೆಯ ವಿರುದ್ಧ ಜನರಲ್ಲಿ ನಿರಂತರ ಜಾಗೃತಿ ಮೂಡಿಸುತ್ತಿದ್ದೇವೆ. ಅದರ ಒಂದು ಭಾಗ ನೂತನ ಕಾರಿಗೆ ಇಂದು ಚಾಲನೆ ನೀಡಲಾಗುತ್ತಿದೆ ಎಂದರು. ‘ಸಂಕೇಶ್ವರದ ವಿಕ್ರಂ ಎಂಬುವವರು …

Read More »

‘ಗೋಕಾಕ್ ಕ್ಷೇತ್ರ ಟಾರ್ಗೆಟ್ ಮಾಡ್ತೀನಿ’ ಎಂದ ಹೆಬ್ಬಾಳ್ಕರ್​​ಗೆ ಸತೀಶ್ ಜಾರಕಿಹೊಳಿ ಮಾಸ್ಟರ್​​ ಸ್ಟ್ರೋಕ್

ನನಗೆ ಉತ್ತರ ಕೊಡಲು ಜಾಸ್ತಿ ಹೊತ್ತು ಬೇಕಿಲ್ಲ. 2023ರಲ್ಲಿ ಜನರಿಂದ ಉತ್ತರ ಕೊಡಿಸಲು ಕಾಯುತ್ತಿದ್ದೇನೆ. ಸರ್ಕಾರವನ್ನು ಬೀಳಿಸಿದವರಿಗೆ ಗ್ರಾಪಂ ಯಾವ ಲೆಕ್ಕ. ಎಂಎಲ್ಎಗಳನ್ನೇ ಎಸ್ಕೇಪ್ ಮಾಡಿದ್ದಾರೆ. ಇವರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ? ಕಾಲಾಯ ತಸ್ಮೈ ನಮಃ. ನಾನು ಗೋಕಾಕ್ ಅನ್ನು ಮುಂದಿನ ಚುನಾವಣೆಯಲ್ಲಿ ಟಾರ್ಗೆಟ್ ಮಾಡುತ್ತೇನೆ. ಲಕ್ಷ್ಮಿ ಹೆಬ್ಬಾಳ್ಕರ್‌, ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಮೊನ್ನೆ ಲಕ್ಷ್ಮಿ ಹೆಬ್ಬಾಳ್ಕರ್‌ ಹೇಳಿದ ಈ ಒಂದು ಮಾತು ಬೆಳಗಾವಿಯಲ್ಲಿ ಹೊಸ ಚರ್ಚೆ ಹುಟ್ಟು …

Read More »

ಹಾವೇರಿಯ 86ನೇ ಕನ್ನಡ ಸಾಹಿತ್ಯ ಸಮ್ಮೇಳನ ಮುಂದೂಡಿಕೆ.!!!

ಹಾವೇರಿ : ಯಾಲಕ್ಕಿ ನಗರಿ ಹಾವೇರಿಯಲ್ಲಿ ಇದೇ ಫೆ.26ರಿಂದ 28ರವರೆಗೆ ನಡೆಯಬೇಕಿದ್ದ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮುಂದೂಡಿಕೆಯಾಗುವ ಸಾಧ್ಯತೆ ದಟ್ಟವಾಗಿದೆ. ಕೊರೊನಾ ಆತಂಕದ ನಡುವೆ ವಿವಿಧ ಸಿದ್ಧತೆಗಳನ್ನು ಕನ್ನಡ ಸಾಹಿತ್ಯ ಪರಿಷತ್ತು ಮಾಡಿಕೊಳ್ಳುತ್ತಿದೆ. ಆದರೆ, ಸರ್ಕಾರದಿಂದ ಅನುದಾನ ಮಂಜೂರಾಗದಿರುವುದು, ಸಿದ್ಧತೆಗೆ ಸಮಯ ಕಡಿಮೆ ಇರುವುದರಿಂದಾಗಿ ನಿರ್ಧಾರಿತ ದಿನಾಂಕದಂದು ಸಾಹಿತ್ಯ ಸಮ್ಮೇಳನ ನಡೆಸುವುದು ಅಸಾಧ್ಯ ಎಂದು ಹೇಳಲಾಗುತ್ತಿದೆ. ರಾಜ್ಯ ಸರ್ಕಾರ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಇನ್ನೇನು 20 …

Read More »

ರೈಲಿಗೆ ತಲೆ ಕೊಟ್ಟು ಬೆಳಗಾವಿಯಲ್ಲಿ ದಂಪತಿ ಆತ್ಮಹತ್ಯೆಗೆ ಯತ್ನ..ಪತಿ ಸಾವು..ಪತ್ನಿಗೆ ಗಾಯ

ರೈಲಿಗೆ ತಲೆಕೊಟ್ಟು ದಂಪತಿ ಆತ್ಮಹತ್ಯೆಗೆ ಯತ್ನ ಮಾಡಿದ್ದು ಘಟನೆಯಲ್ಲಿ ಪತಿ ಸಾವನ್ನಪ್ಪಿ, ಪತ್ನಿಗೆ ಗಾಯವಾಗಿರುವ ಘಟನೆ ಬೆಳಗಾವಿ ನಗರದ ಒಂದನೇ ರೇಲ್ವೆ ಗೇಟ್ ಬಳಿ ನಡೆದಿದೆ.ಬೆಳಗಾವಿ ತಾಲೂಕಿನ ಹಿಂಡಲಗಾ ನಿವಾಸಿ ರಾಕೇಶ್ ಪಾಟೀಲ್ ಮೃತ ದುರ್ದೈವಿ ಆಗಿದ್ದು, ಪತ್ನಿಗೆ ಗಂಭೀರ ಗಾಯವಾಗಿರುವ ಹಿನ್ನೆಲೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಳಿಗ್ಗೆ ಗೂಡ್ಸ್ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಈ ದಂಪತಿ ಯತ್ನಿಸಿದೆ. ಸ್ಥಳಕ್ಕೆ ಬೆಳಗಾವಿ ರೇಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. …

Read More »

ಪ್ರಿಯಾಂಕಾ ಗಾಂಧಿ ಭದ್ರತಾ ವಾಹನಗಳು ಡಿಕ್ಕಿ

ಲಕ್ನೋ: ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರ ಭದ್ರತಾ ವಾಹನಗಳು ಅಪಘಾತಕ್ಕೀಡಾಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಉತ್ತರ ಪ್ರದೇಶದ ಹಾಪುರದಲ್ಲಿ ಭದ್ರತಾ ವಾಹನಗಳು ಡಿಕ್ಕಿಯಾಗಿದ್ದು. ಅದೃಷ್ಟವಶಾತ್ ಭದ್ರತಾ ಸಿಬ್ಬಂದಿಗಳು ಅಪಾಯದಿಂದ ಪಾರಾಗಿದ್ದಾರೆ. ಉತ್ತರಪ್ರದೇಶದ ರಾಮ್ ಪುರಕ್ಕೆ ತೆರಳುತ್ತಿದ್ದಾಗ ಈ ಅವಘಡ ಸಂಭವಿಸಿದೆ.

Read More »

ಏರೋ‌ ಇಂಡಿಯಾ 2021 ಚಾಲನೆಗೆ ಕ್ಷಣಗಣನೆ : ಟ್ರಾಫಿಕ್ ದಟ್ಟಣೆ

ಬೆಂಗಳೂರು    ಐತಿಹಾಸಿಕ‌ 13ನೇ ಆವೃತ್ತಿಯ ಏರೋ ಇಂಡಿಯಾ 2021ಗೆ ಕ್ಷಣಗಣನೆ ಆರಂಭವಾಗಿದ್ದು, ರಕ್ಷಣಾ ಸಚಿವ ರಾಜ್‌ನಾಥ್ ಸಿಂಗ್‌ ಏರೋ‌ ಇಂಡಿಯಾ 2021 ಉದ್ಘಾಟಿಸಲಿದ್ದಾರೆ.. ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೇರಿದಂತೆ‌ ಹಲವಾರು ಗಣ್ಯರು ಭಾಗಿಯಾಗಲಿದ್ದಾರೆ. ಫೆ.3ರಿಂದ 5ರ ತನಕ ಏರ್​​ ಶೋ ನಡೆಯಲಿದೆ. ಏರ್ ಶೋ ವೀಕ್ಷಿಸಲು ಸಾರ್ವಜನಿಕರಿಗೂ ಅವಕಾಶವಿದ್ದು, ಬೆಳ್ಳಂಬೆಳಗ್ಗೆಯೇ ಹೆಬ್ಬಾಳದ ಎಸ್ಟೀಮ್ ಮಾಲ್‌ ಬಳಿಯಿಂದಲೇ ಟ್ರಾಫಿಕ್ ಜಾಮ್‌ ಶುರುವಾಗಿದೆ. ಸಾರ್ವಜನಿಕರು ಏರ್ ಶೋ ವೀಕ್ಷಿಸಲು …

Read More »

ರಾಜ್ಯಸಭಾ ಕಲಾಪ ನಾಳೆಗೆ ಮುಂದೂಡಿಕೆ

ಹೊಸದಿಲ್ಲಿ: ಕೇಂದ್ರ ಸರ್ಕಾರದ ವಿವಾದಿತ ಕೃಷಿ ಕಾನೂನುಗಳು ಮತ್ತು ರೈತರ ಹೋರಾಟ ಸಂಸತ್ ನಲ್ಲಿ ಪ್ರತಿಧ್ವನಿಸಿದ್ದು, ಕಲಾಪವನ್ನು ನಾಳೆಗೆ ಮುಂದೂಡಲಾಗಿದೆ.   ಕೃಷಿ ಕಾನೂನು ಮತ್ತು ರೈತರ ಪ್ರತಿಭಟನೆ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರದ ನಡೆಯನ್ನು ವಿರೋಧಿಸಿ ರಾಜ್ಯಸಭೆಯಲ್ಲಿ ವಿಪಕ್ಷಗಳು ಸಭಾತ್ಯಾಗ ಮಾಡಿದವು. ರೈತರ ಪ್ರತಿಭಟನೆ ಕುರಿತು ಚರ್ಚಿಸಲು ಅವಕಾಶ ನೀಡುವಂತೆ ಒತ್ತಾಯಿಸಿ ವಿರೋಧ ಪಕ್ಷಗಳು ಗದ್ದಲ, ಕೋಲಾಹಲ ಎಬ್ಬಿಸಿದ್ದರಿಂದ ಕಲಾಪವನ್ನು ನಾಳೆಗೆ ಮುಂದೂಡಲಾಗಿದೆ.   ಬಜೆಟ್ ಮಂಡನೆಯ ಮರುದಿನವಾದ ಇಂದು …

Read More »