Breaking News

ಹುಬ್ಬಳ್ಳಿ

ಬಸ್ ಪ್ರಯಾಣಿಕರಿಗೆ ಶಾಕಿಂಗ್ ನ್ಯೂಸ್: ಇಂಧನ ಬೆಲೆ ಏರಿಕೆ ಹಿನ್ನಲೆ ಇಂದಿನಿಂದ ಬಸ್ ಪ್ರಯಾಣ ದರ ಪರಿಷ್ಕರಣೆ

ಹುಬ್ಬಳ್ಳಿ: ಸರ್ಕಾರ ಲಾಕ್‌ಡೌನ್ ಅನ್ನು ಮತ್ತಷ್ಟು ಸಡಿಲಿಕೆ ಮಾಡಿರುವುದರಿಂದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಸೋಮವಾರದಿಂದ ಪೂರ್ಣ ಪ್ರಮಾಣದಲ್ಲಿ ಆಸನಗಳ ಭರ್ತಿಯೊಂದಿಗೆ ಕಾರ್ಯಾಚರಣೆ ನಡೆಸಲಿದೆ. ‘ಲಾಕ್‌ಡೌನ್‌ನಿಂದಾಗಿ ಸೇವೆ ಸ್ಥಗಿತಗೊಳಿಸಿದ್ದ ಸಂಸ್ಥೆಯು ಭಾಗಶಃ ಅನ್‌ಲಾಕ್‌ ಬಳಿಕ, ಜೂನ್ 21ರಿಂದ ಶೇ 50ರಷ್ಟು ಆಸನಗಳ ಭರ್ತಿಯೊಂದಿಗೆ ಸೇವೆ ಆರಂಭಿಸಿತ್ತು. ಇದೀಗ ಆಸನಗಳ ಭರ್ತಿಗೆ ಯಾವುದೇ ಮಿತಿ ಇಲ್ಲ. ವ್ಯಾಪಾರ ವಹಿವಾಟು ಸೇರಿದಂತೆ ಎಲ್ಲಾ ಚಟುವಟಿಕೆಗಳಿಗೂ ಅವಕಾಶ ನೀಡಿರುವುದರಿಂದ, ಜನರ ಓಡಾಟ ಹೆಚ್ಚಾಗಲಿದ್ದು …

Read More »

ನೌಕರಿ ತೊರೆದು ಸಾವಯವ ರೈತರಾದ ಎಂಜಿನಿಯರಿಂಗ್‌ ಕಾಲೇಜು ಪ್ರಾಚಾರ್ಯ

ಹುಬ್ಬಳ್ಳಿ: ಸಾವಯವ ಕೃಷಿಯಲ್ಲಿ ಅಪಾರ ಆಸಕ್ತಿ ಹೊಂದಿದ್ದ ಪತ್ನಿಯ ಉತ್ಸಾಹದಿಂದ ಪ್ರೇರಣೆ ಪಡೆದ ಎಂಜಿನಿಯರಿಂಗ್‌ ಕಾಲೇಜಿನ ಪ್ರಾಂಶುಪಾಲರೊಬ್ಬರು ಸಾವ ಯವ ಕೃಷಿಕರಾಗಿ ಯಶಸ್ವಿ ಹೆಜ್ಜೆಗಳನ್ನಿರಿಸಿದ್ದಾರೆ. ಸಾವಯವ ಪದ್ಧತಿಯಲ್ಲಿ ಬೆಳೆದ ತರಕಾರಿ ಇನ್ನಿತರ ಉತ್ಪನ್ನಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುತ್ತಿದ್ದಾರೆ. ಇಲ್ಲಿನ ಬಿ.ವಿ. ಭೂಮರಡ್ಡಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದ, ಗದುಗಿನ ತೋಂಟದಾರ್ಯ ಎಂಜಿನಿಯರಿಂಗ್‌ ಕಾಲೇಜಿನ ಪ್ರಾಚಾರ್ಯರಾಗಿ ಕಾರ್ಯನಿರ್ವಹಿಸುತ್ತಿದ್ದ ಡಾ| ಪ್ರಕಾಶ ಹುಬ್ಬಳ್ಳಿ ಅವರು ಹುದ್ದೆ ತೊರೆದು ಕೃಷಿಯಲ್ಲಿ ತೊಡಗಿ ಸಾವಯವ ಕೃಷಿಯ …

Read More »

ಹುಬ್ಬಳ್ಳಿಯಲ್ಲಿ ಸಹೋದರನ ಮೇಲೆ ಮಚ್ಚಿನಿಂದ ಮಾರಣಾಂತಿಕ ಹಲ್ಲೆ

ಹುಬ್ಬಳ್ಳಿ: ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬನ ಮೇಲೆ ಆತನ ಚಿಕ್ಕಪ್ಪನ ಮಗನೇ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ಮಾಡಿದ ಘಟನೆ ಇಲ್ಲಿನ ಗಾರ್ಡನ್ ಪೇಟೆಯಲ್ಲಿ ಇಂದು ರಾತ್ರಿ ( ಜುಲೈ.2) ನಡೆದಿದೆ. ಇಲ್ಲಿನ ಗಾರ್ಡನ್ ಪೇಟೆಯಲ್ಲಿ ಕೌಟುಂಬಿಕ ವಿಷಯವಾಗಿ ಚಿಕ್ಕಪ್ಪನ ಮಗನು ಮಚ್ಚಿನಿಂದ ಮನಬಂದಂತೆ ಹಲ್ಲೆ ಮಾಡಿದ್ದಾನೆ. ಗಂಭೀರ ಗಾಯಗೊಂಡಿರುವ ಗಾಯಾಳುವನ್ನು ಕಿಮ್ಸ್ ಗೆ ದಾಖಲಿಸಲಾಗಿದೆ. ಸಾದೀಕ್ ಬೆಕ್ಕಿನಬಾಯಿ ಎಂಬುವನಿಗೆ ಅವರ ಚಿಕ್ಕಪ್ಪ ನ ಮಗ ಸೈಯದ್ ‌ಬೆಕ್ಕಿನಬಾಯಿ ಮಚ್ಚಿನಿಂದ ತಲೆಗೆ …

Read More »

18 ಮೀ. ಆಳಕ್ಕೆ ಕುಸಿದ ಮಣ್ಣು; ತಪ್ಪಿದ ಅವಘಡ

ಹುಬ್ಬಳ್ಳಿ: ಕೋರ್ಟ್‌ ವೃತ್ತದ ಸಾಯಿ ಮಂದಿರದ ಎದುರು ನಿರ್ಮಾಣ ಹಂತದಲ್ಲಿರುವ ಬಹುಮಹಡಿ ಕಾರ್‌ ಪಾರ್ಕಿಂಗ್‌ ಕಟ್ಟಡದ ನಿರ್ಮಾಣ ಹಂತದ ತಡೆಗೋಡೆ ಮೇಲೆ ಗುರುವಾರ ರಾತ್ರಿ 18 ಮೀಟರ್‌ ಎತ್ತರದಿಂದ ಮಣ್ಣು ಕುಸಿದಿದ್ದು, ಅವಘಡವೊಂದು ತಪ್ಪಿದಂತಾಗಿದೆ. ಮಣ್ಣು ಕುಸಿಯದಂತೆ 50 ಮೀಟರ್‌ ಅಗಲ ಪ್ಲಾಸ್ಟರ್‌ ಮಾಡಲಾಗಿತ್ತು. 30 ಮೀಟರ್‌ ಅಗಲದ ಪ್ಲಾಸ್ಟರ್‌ ಸಮೇತ ಮಣ್ಣು ತಡೆಗೋಡೆ ಮೇಲೆ ಬಿದ್ದಿದೆ. ಮಧ್ಯರಾತ್ರಿ ಘಟನೆ ನಡೆದಿರುವುದರಿಂದ ಯಾವುದೇ ಪ್ರಾಣಾಪಾಯವಾಗಿಲ್ಲ. ಶುಕ್ರವಾರ ಬೆಳಿಗ್ಗೆ ಸ್ಮಾರ್ಟ್‌ ಸಿಟಿ …

Read More »

ರಮೇಶ ಜಾರಕಿಹೊಳಿ ಸರಕಾರಕ್ಕೆ ಮುಜುಗರ ತರುವ ಕೆಲಸ ಮಾಡುತ್ತಿಲ್ಲ : ಭೈರತಿ ಬಸವರಾಜ್

ಹುಬ್ಬಳ್ಳಿ: ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರು ಸರಕಾರಕ್ಕೆ ಮುಜುಗರ ತರುವ ಕೆಲಸ ಮಾಡುತ್ತಿಲ್ಲ. ಬೇಸರ ಹಾಗೂ ಉದ್ವೇಗದಿಂದ ರಾಜೀನಾಮೆ ಸಲ್ಲಿಸುವುದಾಗಿ ಹೇಳಿದ್ದರು. ಅವರ ಸಹೋದರರೆಲ್ಲಾ ಸಮಾಧಾನ ಮಾಡಿದ್ದಾರೆ. ಯಾವುದೋ ಒಂದು ಪ್ರಕರಣವಿದೆ. ಅದು ಇತ್ಯರ್ಥವಾದ ನಂತರ ಸಚಿವರಾಗುತ್ತಾರೆ. ನಾವೆಲ್ಲರೂ ಅವರೊಂದಿಗೆ ಇದ್ದೇವೆ ಎಂದು ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜ್ ತಿಳಿಸಿದರು. ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ಅವರ ಜೊತೆಗೆ ಇದ್ದೇವೆ. ಇಂದು ನಿನ್ನೆಯ ಸ್ನೇಹವಲ್ಲ. ಯುವ ಕಾಂಗ್ರೆಸ್ ಹಂತದಿಂದಲೇ …

Read More »

ನಾಲ್ಕು ದಿನಗಳ ಕಾಲ ಅರಣ್ಯದಲ್ಲಿ ನಾಪತ್ತೆಯಾಗಿದ್ದ 110 ವರ್ಷದ ವೃದ್ಧ ಇಂದು ಪತ್ತೆ

ಧಾರವಾಡ: ನಾಲ್ಕು ದಿನಗಳ ಕಾಲ ಅರಣ್ಯದಲ್ಲಿ ನಾಪತ್ತೆಯಾಗಿದ್ದ 110 ವರ್ಷದ ವೃದ್ಧ ಇಂದು ಪತ್ತೆಯಾಗಿದ್ದಾರೆ.   ಜಿಲ್ಲೆಯ ಬೈಚವಾಡ್ ಗ್ರಾಮದ ವೃದ್ಧ ಜನ್ನು ಪಾಂಡ್ರಾಮೀಸೆ 4 ದಿನಗಳ ಕಾಲ ಅರಣ್ಯದಲ್ಲಿದ್ದು, ಇಂದು ಸಿಕ್ಕಿದ್ದಾರೆ. ನಾಲ್ಕು ದಿನಗಳ ಹಿಂದೆ ತಮ್ಮ ಮಗಳ ಮನೆಗೆ ಹೋಗಿ ಬೈಚವಾಡ್ ಗ್ರಾಮಕ್ಕೆ ವಾಪಸ್ ಬರುವಾಗ ಅರಣ್ಯದಲ್ಲಿ ತಪ್ಪಿಸಿಕೊಂಡಿದ್ದರು. ನಂತರ ಗ್ರಾಮಸ್ಥರು ಸಾಕಷ್ಟು ಹುಡುಕಾಟ ನಡೆಸಿ, ಅರಣ್ಯ ಇಲಾಖೆಗೆ ಸಹ ಮಾಹಿತಿ ನೀಡಿದ್ದರು. ಇಂದು ಬೆಳಗಿನ ಜಾವ …

Read More »

ಜುಲೈನಲ್ಲಿ ದೊಡ್ಡ ಮಟ್ಟದ ಲಸಿಕೆ ಅಭಿಯಾನ: ಸಚಿವ ಪ್ರಹ್ಲಾದ ಜೋಶಿ

ಹುಬ್ಬಳ್ಳಿ: ‘ಜುಲೈ ತಿಂಗಳಿನಲ್ಲಿ ದೊಡ್ಡ ಮಟ್ಟದಲ್ಲಿ ಕೋವಿಡ್ ಲಸಿಕೆ ಅಭಿಯಾನ ನಡೆಯಲಿದೆ. ವಿಶ್ವದಲ್ಲೇ ಅತ್ಯಂತ ವೇಗವಾಗಿ ಲಸಿಕೆ ಅಭಿಯಾನ ನಡೆಯುತ್ತಿರುವ ದೇಶ ಭಾರತವಾಗಿದ್ದು, ಇದುವರೆಗೆ 32 ಕೋಟಿ ಲಸಿಕೆ ನೀಡಲಾಗಿದೆ’ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು. ನೈಸರ್ಗಿಕ ವಿಕೋಪದಿಂದ ಮೃತಪಟ್ಟ ಎಂಟು ಜನರ ಕುಟುಂಬದವರಿಗೆ ಸೋಮವಾರ ಪರಿಹಾರ ಚೆಕ್ ವಿತರಿಸಿ ಮಾತನಾಡಿದ ಅವರು, ‘ತಯಾರಕರು ಉತ್ಪಾದನೆಗೆ ಅನುಗುಣವಾಗಿ ಲಸಿಕೆ ಪೂರೈಕೆ ಮಾಡುತ್ತಿದ್ದಾರೆ. ಹಾಗಾಗಿ, ಆದ್ಯತಾ ವಲಯಗಳನ್ನು ಗುರುತಿಸಿ …

Read More »

ಹುಬ್ಬಳ್ಳಿಯಿಂದ ವಿಮಾನಯಾನ ಸೇವೆ ಮತ್ತೆ ಆರಂಭ

ಹುಬ್ಬಳ್ಳಿ: ಲಾಕ್ ಡೌನ್ ವೇಳೆ ಹುಬ್ಬಳ್ಳಿಯಿಂದ ವಿವಿಧ ಮಹಾನಗರಗಳಿಗೆ ಸಂಪರ್ಕಿಸುವ ವಿಮಾನಯಾನ ಸೇವೆಯನ್ನ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದ ಇಂಡಿಗೋ ಸಂಸ್ಥೆ ಜುಲೈ 1 ರಿಂದ ಮತ್ತೆ ವಿಮಾನಯಾನ ಸೇವೆ ಪುನರಾರಂಭ ಮಾಡುವುದಾಗಿ ತಿಳಿಸಿದೆ. ಹುಬ್ಬಳ್ಳಿಯಿಂದ ಮುಂಬೈ, ಚೆನೈ, ಬೆಂಗಳೂರು, ಕಣ್ಣೂರು, ಕೊಚ್ಚಿ ಮಹಾನಗರಗಳಿಗೆ ವಿಮಾನಯಾನ ಸಂಪರ್ಕ ಸೇವೆ ಮತ್ತೆ ಆರಂಭಗೊಳ್ಳಲಿದೆ. ಜುಲೈ 9 ರಿಂದ ಹುಬ್ಬಳ್ಳಿ- ಹೈದ್ರಾಬಾದ್ ಅಲಯನ್ಸ್ ಏರ್ ವಿಮಾನ ಸೇವೆ ಆರಂಭವಾಗಲಿದೆ. ಅಗಸ್ಟ್ 2 ರಿಂದ ಹುಬ್ಬಳ್ಳಿ – …

Read More »

ಹುಬ್ಬಳ್ಳಿಯಲ್ಲಿ 10 ಜನರ ಕಣ್ಣು ಕಿತ್ತುಕೊಂಡ ಬ್ಲ್ಯಾಕ್ ಫಂಗಸ್- ಒಟ್ಟು 46 ಮಂದಿಗೆ ದೃಷ್ಟಿ ದೋಷ

ಹುಬ್ಬಳ್ಳಿ: ಕೊರೊನಾ ಎರಡನೇ ಅಲೆಯಲ್ಲಿ ಸಾಕಷ್ಟು ಜನರನ್ನು ಬಲಿ ತೆಗೆದುಕೊಂಡಿರುವ ಸೋಂಕಿನ ತೀವ್ರತೆ ಕಡಿಮೆಯಾಗುವ ಮೊದಲೇ ಕರಿ ಮಾರಿ ಬ್ಲ್ಯಾಕ್​ ಫಂಗಸ್​ ತನ್ನ ಕರಾಳತೆಯನ್ನು ತೋರುತ್ತಿದ್ದು, ಜಿಲ್ಲೆಯಲ್ಲಿ ಇದುವರೆಗೂ 10 ಮಂದಿ ಫಂಗಸ್​​ನಿಂದ ಸಂಪೂರ್ಣ ದೃಷ್ಟಿಯನ್ನೇ ಕಳೆದುಕೊಂಡಿದ್ದಾರೆ. ಹುಬ್ಬಳ್ಳಿಯ ಕಿಮ್ಸ್‌ನಲ್ಲಿ 46 ಜನರಿಗೆ ದೃಷ್ಟಿ ದೋಷ ಕಂಡು ಬಂದಿತ್ತು. ಕೊರೊನಾದಿಂದ ಗುಣಮುಖರಾದ ವ್ಯಕ್ತಿಗಳಲ್ಲಿ ಬ್ಲ್ಯಾಕ್ ಫಂಗಸ್ ಸೋಂಕು ಕಂಡು ಬರುತ್ತಿದ್ದು, ಹಲವರಿಗೆ ಮೂಗಿನ ಮೂಲಕವೂ ಬ್ಲ್ಯಾಕ್ ಹಬ್ಬಿ, ಕಣ್ಣಿನ ನರಗಳಿಗೆ …

Read More »

ಧಾರವಾಡದಿಂದ ಬೆಂಗಳೂರಿಗೆ ಯಕೃತ್ತು ರವಾನೆ:ಏರ್ ಪೋರ್ಟ್ ವರೆಗೆ ಜಿರೋಟ್ರಾಫಿಕ್ ಮಾಡಿದ ಪೊಲೀಸರು

ಹುಬ್ಬಳ್ಳಿ: ಧಾರವಾಡ ಸಮೀಪದ ಎಸ್‌ಡಿಎಂ ಆಸ್ಪತ್ರೆಯಿಂದ ಲಿವರ್ (ಯಕೃತ್ತು) ಅನ್ನು ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಸಾಗಿಸಲು ಸುಮಾರು 16 ಕಿ.ಮೀ ದೂರದ ಮಾರ್ಗವನ್ನು ಪೊಲೀಸರು ಹಸಿರು ಕಾರಿಡಾರ್ ಮೂಲಕ ಅಂಬ್ಯುಲೆನ್ಸ್ ತ್ವರಿತ ತಲುಪಲು ಅನುವು ಮಾಡಿಕೊಟ್ಟರು. ಜಿರೋ ಟ್ರಾಫಿಕ್ ನಲ್ಲಿ ಯಕೃತ್ ಇದ್ದ ಅಂಬ್ಯುಲೆನ್ಸ್ ನಿಗದಿಪಡಿಸಿದ ಸಮಯಕ್ಕೆ ವಿಮಾನ ನಿಲ್ದಾಣ ತಲುಪಿತಲ್ಲದೆ, ಯಕೃತ್ ನ್ನು ವಿಮಾನದಲ್ಲಿ ಬೆಂಗಳೂರಿಗೆ ಕಳುಹಿಸಲಾಯಿತು. ಮೃತ ಮಹಿಳೆಯೊಬ್ಬರ ಕಣ್ಣು, ಕಿಡ್ನಿ ಮತ್ತು ಲಿವರ್ ಸೇರಿದಂತೆ ವಿವಿಧ …

Read More »