ಧಾರವಾಡ ಜಿಲ್ಲೆಯಾದ್ಯಂತ ಚುರುಕುಗೊಂಡ ಕೃಷಿ ಚಟುವಟಿಕೆ… ಮುಂಗಾರು ಬಿತ್ತನೆಗೆ ಮುಂದಾದ ಅನ್ನದಾತರು ಕಳೆದ ಒಂದುವಾರದ ಹಿಂದೆ ಸುರಿದ ಪೀರ್ವ ಮುಂಗಾರಿನಿಂದ ರೈತ ಸಮುದಾಯ ಫುಲ್ ಖುಷ್ ಆಗಿದ್ದು, ಮಳೆ ಬೀಡುವಿನ ಹಿನ್ನೆಲೆಯಲ್ಲಿ ರೈತರು ಈಗ ತಮ್ಮ ತಮ್ಮ ಕೃಷಿ ಭೂಮಿಯಲ್ಲಿ ಬೂಸಿಯಾಗಿದ್ದಾರೆ. ಮುಂಗಾರು ಬಿತ್ತನೆಗೆ ಕೆಲವರು ಪೂರ್ವ ತಯಾರಿ ಮಾಡಿಕೊಳ್ಳುತ್ತಿದ್ದು, ಇನ್ನೂ ಕೆಲವು ರೈತರು ಈಗ ಮಮಗಾರು ಬಿತ್ತನೆಗೆ ನಡೆಸುತ್ತಿದ್ದಾರೆ. ಹೌದು ಧಾರವಾಡ ಜಿಲ್ಲೆಯಾದ್ಯಂತ ಉತ್ತಮ ಪೂರ್ವ ಮುಂಗಾರು ಮಳೆಯಾಗಿದ್ದು, …
Read More »ನೈರುತ್ಯ ರೈಲ್ವೆ ಮಹತ್ವದ ಹೆಜ್ಜೆ
ಹುಬ್ಬಳ್ಳಿ: ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ನೀಡುವ ನೈರುತ್ಯ ರೈಲ್ವೆಯು ಇದೇ ಮೊದಲ ಬಾರಿಗೆ ಕಟ್ಟಡ ಕಾಮಗಾರಿಗಳ ಸ್ಥಳಗಳಲ್ಲಿ ಸುರಕ್ಷತೆ, ಗುಣಮಟ್ಟ ಮತ್ತು ದಕ್ಷತೆ ಸುಧಾರಿಸಲು ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸುತ್ತಿದೆ. ಈ ಮೂಲಕ ಸುರಕ್ಷಿತ ಮತ್ತು ದಕ್ಷ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿಗಾಗಿ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ನೈರುತ್ಯ ರೈಲ್ವೆ ಮಹತ್ವದ ಹೆಜ್ಜೆ ಇಟ್ಟಿದೆ. ನೈರುತ್ಯ ರೈಲ್ವೆ ವ್ಯಾಪ್ತಿಯ ಪ್ರಮುಖವಾದ ಎರಡು ಕಾಮಗಾರಿ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಆಲಮಟ್ಟಿ ಸೇತುವೆ ಸಂಖ್ಯೆ 63ಡಿ …
Read More »ಧಾರವಾಡದಲ್ಲಿ ಬೀದಿಗೆ ಇಳಿದ ನರೇಗಾ ಗುತ್ತಿಗೆ ನೌಕರರು… ಸೇವಾ ಭದ್ರತೆ ಜತೆಗೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ.
ಧಾರವಾಡದಲ್ಲಿ ಬೀದಿಗೆ ಇಳಿದ ನರೇಗಾ ಗುತ್ತಿಗೆ ನೌಕರರು… ಸೇವಾ ಭದ್ರತೆ ಜತೆಗೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ. ಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ನರೇಗಾ ನೌಕರರಿಗೆ ಸೇವಾ ಭದ್ರತೆ, ಆರೋಗ್ಯ ವಿಮೆ, ಸಕಾಲಕ್ಕೆ ವೇತನ ಪಾವತಿ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಧಾರವಾಡದಲ್ಲಿ ನರೇಗಾ ಗುತ್ತಿಗೆ ನೌಕರರು ಧರಣಿ ಸತ್ಯಾಗ್ರಹ ನಡೆಸಿ ಸರ್ಕಾರಗಳ ವಿರುದ್ಧ ಆಕ್ರೋಶ ಹೊರಹಾಕಿದರು. ಕರ್ನಾಟಕ ರಾಜ್ಯ ಮಹಾತ್ಮಾ ಗಾಂಧಿ ನರೇಗಾ ನೌಕರರ ಕ್ಷೇಮಾಭಿವೃದ್ಧಿ …
Read More »ಧಾರವಾಡದಲ್ಲಿ ವಿದ್ಯಾರ್ಥಿಗಳ ನೂತನ ವಸತಿ ನಿಲಯ ಉದ್ಘಾಟಿಸಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
ಧಾರವಾಡದಲ್ಲಿ ವಿದ್ಯಾರ್ಥಿಗಳ ನೂತನ ವಸತಿ ನಿಲಯ ಉದ್ಘಾಟಿಸಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಧಾರವಾಡ ನಗರದ ಧಾರವಾಡ ಉದಯ ಹಾಸ್ಟೆಲ್ ಬಳಿ ಹುಬ್ಬಳ್ಳಿ, ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದಲ್ಲಿ ಲೋಕೋಪಯೋಗಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆಯ 2023-24ನೇ ಸಾಲಿನ ಠೇವಣಿ ವಂತಿಗೆ ಅಡಿಯಲ್ಲಿ ದೀನ್ ದಯಾಳ ಉಪಾಧ್ಯಾಯ ಅವರ ಹೆಸರಿನಡಿ ಸೌಹಾರ್ಧ ವಿದ್ಯಾರ್ಥಿ, ವಿದ್ಯಾರ್ಥಿನಿಯರ ಈ ವಸತಿ ನಿಲಯಗಳನ್ನು ನಿರ್ಮಿಸಲಾಗಿದೆ. ವಿಶಾಲವಾದ ಪ್ರದೇಶದಲ್ಲಿ ಒಟ್ಟು ಆರು ಬ್ಲಾಕ್ ಅಡಿ ವಸತಿ …
Read More »ಹುಬ್ಬಳ್ಳಿಯಲ್ಲಿ 11 ತಿಂಗಳ ಮಗುವಿಗೆ ಕೋವಿಡ್
ಧಾರವಾಡ: ಕೊರೊನಾ ವೈರಸ್ ಮತ್ತೆ ಉಲ್ಬಣಗೊಳ್ಳುತ್ತಿರುವ ಬೆನ್ನಲ್ಲೇ ಹುಬ್ಬಳ್ಳಿ ಭೈರಿದೇವರಕೊಪ್ಪದ 11 ತಿಂಗಳ ಮಗುವಿನಲ್ಲಿ ಕೋವಿಡ್ ಪತ್ತೆ ದೃಢಪಟ್ಟಿದೆ. ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮಗುವಿಗೆ ಹೃದಯ ಕಾಯಿಲೆ ಇದ್ದು, ಚಿಕಿತ್ಸೆ ಮುಂದುವರೆದಿದೆ. ಮಗುವಿನ ಆರೋಗ್ಯ ಸ್ಥಿರವಾಗಿದೆ ಎಂದು ಜಿಲ್ಲಾಡಳಿತ ಪ್ರಕಟಣೆಯಯಲ್ಲಿ ತಿಳಿಸಿದೆ. ಮುನ್ನೆಚ್ಚರಿಕೆ ಅಗತ್ಯ: ಸಾಧ್ಯವಾದಷ್ಟು ಜನಸಂದಣಿಯಿಂದ ದೂರ ಇರುವಂತೆ, ಮನೆಯಿಂದ ಹೊರಹೋಗುವಾಗ ಮಾಸ್ಕ್ ಧರಿಸುವಂತೆ ಮತ್ತು ಸಾಮಾಜಿಕ ಅಂತರ ಕಾಪಾಡುವಂತೆ ಹಾಗೂ ಗರ್ಭಿಣಿಯರು, ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ, …
Read More »ಹುಬ್ಬಳ್ಳಿ-ಧಾರವಾಡ ತ್ಯಾಜ್ಯ ಸಂಸ್ಕರಣಾ ಘಟಕ ಇನ್ನು ಖಾಸಗಿ ತೆಕ್ಕೆಗೆ
ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಅವಳಿ ನಗರ ಬೆಳೆದಂತೆಲ್ಲ, ಮಹಾನಗರ ಪಾಲಿಕೆಗೆ ಕಸ ಸಂಗ್ರಹಣೆ ಹಾಗೂ ಸಂಸ್ಕರಣೆ ದೊಡ್ಡ ತಲೆನೋವಾಗಿದೆ. ಅವಳಿ ನಗರದಲ್ಲಿ ನಿತ್ಯ ನೂರಾರು ಟನ್ ಕಸ ಸಂಗ್ರಹವಾಗುತ್ತಿದ್ದು, ವಿಲೇವಾರಿ ಮಾಡಲು ಪಾಲಿಕೆ ಹೊಸ ಉಪಾಯಕ್ಕೆ ಕೈ ಹಾಕಿದೆ. ಅಂದಿನ ಕಸ ಅಂದೇ ವಿಲೇವಾರಿ ಮಾಡುವ ಜವಾಬ್ದಾರಿಯನ್ನು ಖಾಸಗಿಯವರಿಗೆ ವಹಿಸಲು ಹು-ಧಾ ಪಾಲಿಕೆ ನಿರ್ಧರಿಸಿದೆ. ಇದು ಮೊದಲ ಪ್ರಯತ್ನವಾಗಿದೆ. ಅವಳಿ ನಗರದಲ್ಲಿ ಕಸ ವಿಲೇವಾರಿ ಸಮರ್ಪಕವಾಗಿಯೇ ಇಲ್ಲ. ಹೀಗಾಗಿ ರಾಶಿ ಕಸದ ಗುಡ್ಡೆ …
Read More »ನಿಂತಿದ್ದ ಲಾರಿಗೆ ಕಾರು ಡಿಕ್ಕಿ; ಮೂವರು ಸ್ಥಳದಲ್ಲೇ ಸಾವು
ನಿಂತಿದ್ದ ಲಾರಿಗೆ ಕಾರು ಡಿಕ್ಕಿ; ಮೂವರು ಸ್ಥಳದಲ್ಲೇ ಸಾವು ಧಾರವಾಡ: ನಿಂತಿದ್ದ ಲಾರಿಗೆ ಕಾರು ಡಿಕ್ಕಿ ಹೊಡೆದು ಮೂವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಅಣ್ಣಿಗೇರಿ ತಾಲೂಕಿನ ಭದ್ರಾಪುರ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ನಡೆದಿದೆ. ಕಾರಿನಲ್ಲಿದ್ದ ಮದನ್, ಸುರೇಶ್ ಮತ್ತು ಎಲ್.ಎನ್.ವೇಣುಗೋಪಾಲ್ ಎಂಬವರು ಮೃತಪಟ್ಟಿದ್ದಾರೆ. ತೋಟ ನೋಡಿಕೊಂಡು ಮುಂಡರಗಿಯಿಂದ ಬೆಂಗಳೂರು ಕಡೆಗೆ ಹೋಗುತ್ತಿದ್ದಾಗ ದುರ್ಘಟನೆ ಸಂಭವಿಸಿದೆ. ಮೃತರು ಮೈಸೂರು ಹಾಗೂ ಬೆಂಗಳೂರಿನವರು ಎಂದು ತಿಳಿದು ಬಂದಿದೆ. ಅಣ್ಣಿಗೇರಿ ಪೊಲೀಸರು ಘಟನಾ ಸ್ಥಳಕ್ಕೆ …
Read More »ಹಳೆ ಹುಬ್ಬಳ್ಳಿಯ ಪೊಲೀಸ್ ಠಾಣೆಯ ಮೇಲೆ ದಾಳಿ ಪೊಲೀಸರ ಮೇಲೆ ಹಲ್ಲೆ ಮಾಡಿದ ಆರೋಪಿಗಳ ಪ್ರಕರಣವನ್ನು ಹಿಂಪಡೆದಿದ್ದ ಸಿಎಂ ಸಿದ್ದರಾಮಯ್ಯ ಸಚಿವ ಸಂಪುಟದ ನಿರ್ಧಾರಕ್ಕೆ ಹೈಕೋರ್ಟ್ ರದ್ದು
ಹಳೆ ಹುಬ್ಬಳ್ಳಿಯ ಪೊಲೀಸ್ ಠಾಣೆಯ ಮೇಲೆ ದಾಳಿ ಪೊಲೀಸರ ಮೇಲೆ ಹಲ್ಲೆ ಮಾಡಿದ ಆರೋಪಿಗಳ ಪ್ರಕರಣವನ್ನು ಹಿಂಪಡೆದಿದ್ದ ಸಿಎಂ ಸಿದ್ದರಾಮಯ್ಯ ಸಚಿವ ಸಂಪುಟದ ನಿರ್ಧಾರಕ್ಕೆ ಹೈಕೋರ್ಟ್ ರದ್ದು ಮಾಡಿರುವುದು ಸಿದ್ದರಾಮಯ್ಯನವರಿಗೆ ಮುಖಭಂಗವಾಗಿದೆ ಎಂದು ಮಾಜಿ ಸಿಎಂ, ಸಂಸದ ಜಗದೀಶ್ ಶೆಟ್ಟರ್ ಹೇಳಿದರು. ಗುರುವಾರ ಬೆಳಗಾವಿಯ ಕಾಡಾ ಕಾರ್ಯಾಲಯದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಳೆ ಹುಬ್ಬಳ್ಳಿಯ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳಿಗೆ ಈ ಹಿಂದಿನ ಸರಕಾರ ಹಾಗೂ ಅಂದಿನ ಅಧಿಕಾರಿಗಳು ಕಠಿಣ ಕಾನೂನು …
Read More »ಧಾರವಾಡದಲ್ಲಿ ಸಂಚಾರಿ ಆರೋಗ್ಯ ವಾಹನಕ್ಕೆ ಚಾಲನೆ ನೀಡಿದ ಸಚಿವ ಲಾಡ್
ಧಾರವಾಡದಲ್ಲಿ ಸಂಚಾರಿ ಆರೋಗ್ಯ ವಾಹನಕ್ಕೆ ಚಾಲನೆ ನೀಡಿದ ಸಚಿವ ಲಾಡ್… . ಉಸ್ತುವಾರಿ ಸಚಿವ ಲಾಡ್, ವಿರೋಧ ಪಕ್ಷದ ಉಪನಾಯಕ ಬೆಲ್ಲದ, ನವಲಗುಂದ ಎಂಎಲ್ಎ ಕೊನರೆಡ್ಡಿ ಭಾಗಿ.. ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಹಾಗೂ ಅವರ ಅವಲಂಬಿತರ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸೆ ಒದಗಿಸುವ ಸಂಬಂಧ ಉಚಿತ ಆರೋಗ್ಯ ತಪಾಸಣೆ ಸಂಚಾರಿ ಆರೋಗ್ಯ ವಾಹನಕ್ಕೆ ಕಾರ್ಮಿಕ ಸಚಿವ ಸಂತೋಷ ಲಾಡ್ ಮಂಗಳವಾರದಂದು ಚಾಲನೆ ನೀಡಿದರು. ಕಾರ್ಮಿಕ ಇಲಾಖೆಯಿಂದಲೇ …
Read More »ಧಾರವಾಡದ ನವಲೂರು ಬಳಿ ಹೆಚ್‌ಡಿ ಬಿಆರ್‌ಟಿಎಸ್ ಸೇತುವೆ ಮೇಲೆ ಸರಣಿ ಅಪಘಾತ, ತಪ್ಪಿದ ಅನಾಹುತ…… ಎರಡು ಕಾರ್‌ಗಳ ಮುಂಭಾಗ ಜಖಂ.
ಧಾರವಾಡದ ನವಲೂರು ಬಳಿ ಹೆಚ್‌ಡಿ ಬಿಆರ್‌ಟಿಎಸ್ ಸೇತುವೆ ಮೇಲೆ ಸರಣಿ ಅಪಘಾತ, ತಪ್ಪಿದ ಅನಾಹುತ…… ಎರಡು ಕಾರ್‌ಗಳ ಮುಂಭಾಗ ಜಖಂ. ಮುಂದೆ ನಿರ್ಲಕ್ಷ್ಯದಿಂದ ಬೈಕ್ ಚಾಲನೆ ಮಾಡಿಕೊಂಡು ಹೊರಟ್ಟಿದವನ ತಪ್ಪಿಸಲು ಹೋಗಿ ಗೂಡ್ಸ್ ವಾಹನ ಚಾಲಕ ಏಕಾಎಕಿ ಬ್ರೇಕ್ ಹಾಕಿದ ಪರಿಣಾಮ ಸರಣಿ ಅಪಘಾತ ನಡೆದ ಘಟನೆ ಧಾರವಾಡದ ನವಲೂರು ಬಳಿಯ ಹೆಚ್‌ಡಿ ಬಿಆರ್‌ಟಿಎಸ್ ಸೇತುವೆಯ ಮೇಲೆ ನಡೆದಿದೆ. ಧಾರವಾಡದಿಂದ ಹುಬ್ಬಳ್ಳಿಗೆ ತೆರಳುವ ಮಾರ್ಗದ ಹೆಚ್ ಡಿ ಬಿಆರ್‌ಟಿಎಸ್ ರಸ್ತೆಯಲ್ಲಿ …
Read More »
Laxmi News 24×7