ಹುಬ್ಬಳ್ಳಿ: ಇಲ್ಲಿನ ಕಿತ್ತೂರು ಚನ್ನಮ್ಮವೃತ್ತದ ಬಳಿಯ ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಮೂರು ದಿನ ಗಣೇಶೋತ್ಸವ ಆಚರಿಸಲು ಅನುಮತಿ ಪಡೆದಿರುವ ರಾಣಿ ಚನ್ಮಮ್ಮ ಮೈದಾನ ಗಜಾನನ ಉತ್ಸವ ಮಹಾಮಂಡಳಿಯವರು, ಪೊಲೀಸರ ವಿರೋಧದ ಮಧ್ಯೆಯೇ ಪೆಂಡಾಲ್ ಎದುರಿನ ದ್ವಾರದಲ್ಲಿ ವಿ.ಡಿ. ಸಾವರ್ಕರ್, ಭಗತ್ ಸಿಂಗ್, ಶಿವಾಜಿ ಭಾವಚಿತ್ರವಿರುವ ಫ್ಲೆಕ್ಸ್ ಅಳವಡಿಸಿದರು. ಇದರೊಂದಿಗೆ ಅನುಮತಿ ನೀಡುವಾಗ ಪಾಲಿಕೆ ನೀಡಿದ್ದ ಷರತ್ತನ್ನು ಮಹಾಮಂಡಳಿ ಉಲ್ಲಂಘಿಸಿದೆ ಎಂಬ ಆರೋಪ ಕೇಳಿಬಂದಿದೆ. ಇದಕ್ಕೂ ಮುಂಚೆ ಸಾವರ್ಕರ್ …
Read More »ಈದ್ಗಾ ಮೈದಾನದಲ್ಲಿ ಗಣೇಶ; ಚುನಾವಣೆಗಾಗಿಯೇ ಎಂದು ಒಪ್ಪುವುದಿಲ್ಲ: ಜೋಶಿ
ಹುಬ್ಬಳ್ಳಿ: ”ಚುನಾವಣೆ ಬಂದಾಗ ಸಾಕಷ್ಟು ವಿಚಾರಗಳು ಮುನ್ನೆಲೆಗೆ ಬರುತ್ತವೆ. ಹೋರಾಟಗಳು ಕೂಡ ಹೆಚ್ಚಾಗುತ್ತವೆ. ಈ ನಿಟ್ಟಿನಲ್ಲಿ ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆ ವಿಚಾರ ಇರಬಹುದೇನೋ ಗೊತ್ತಿಲ್ಲ. ಆದರೆ ಇದು ಚುನಾವಣೆಗಾಗಿಯೇ ಎದ್ದಿದೆ ಎಂದು ನಾನು ಒಪ್ಪುವುದಿಲ್ಲ” ಎಂದು ಕೇಂದ್ರ ಸಂಸದೀಯ ವ್ಯವಹಾರಗಳು, ಗಣಿ ಹಾಗೂ ಕಲ್ಲಿದ್ದಲು ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ. ಸೋಮವಾರ ಇಲ್ಲಿನ ಭವಾನಿ ನಗರದ ಅವರ ನಿವಾಸಕ್ಕೆ ಭೇಟಿ ನೀಡಿದ ಪಾಲಿಕೆ ಮೇಯರ್ ಹಾಗೂ ಸದಸ್ಯರ ಸಭೆ …
Read More »ಮಾಧ್ಯಮಗಳಲ್ಲಿ ಮುರುಘಾ ಶ್ರೀಗಳ ಬಂಧನದ ಕುರಿತು ಮಾಹಿತಿ ಬರುತ್ತಿವೆ. ಬಂಧನವಾಗಿದ್ದರೆ ನನಗೆ ಮಾಹಿತಿ ದೊರೆಯುತ್ತಿತ್ತು.:
ಹುಬ್ಬಳ್ಳಿ: ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರ ವಿರುದ್ಧ ದಾಖಲಾಗಿರುವ ಪೊಕ್ಸೊ ಪ್ರಕರಣದ ಅಡಿಯಲ್ಲಿ ಎಲ್ಲ ಆಯಾಮಗಳಲ್ಲೂ ತನಿಖೆ ನಡೆಯುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರಿಂದಲೂ ಒತ್ತಡ ಬಂದಿಲ್ಲ ಎಂದು ಅಪರಾಧ ಮತ್ತು ಕಾನೂನು ಸುವ್ಯವಸ್ಥೆ ಎಡಿಜಿಪಿ ಅಲೋಕ್ ಕುಮಾರ್ ಹೇಳಿದರು. ಸೋಮವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಪ್ರಕರಣಕ್ಕೆ ಸಂಬಂಧಿಸಿದಂತೆ ಮಕ್ಕಳನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಅವರ ಪೋಷಕರನ್ನು ಸಹ ಸಂಪರ್ಕಿಸಿದ್ದು, ಮಾಹಿತಿಯನ್ನು ಸಂಗ್ರಹಿಸಲು ಮುಂದಾಗಿದ್ದೇವೆ. ಪೊಕ್ಸೊ …
Read More »ಕೈ ದುರಹಂಕಾರಕ್ಕೆ ಹಿರಿಯರು ಪಕ್ಷ ತೊರೆದಿದ್ದಾರೆ : ಸಚಿವ ಜೋಶಿ ವ್ಯಂಗ್ಯ
ಧಾರವಾಡ : ಕಾಂಗ್ರೆಸ್ ಪಕ್ಷದಲ್ಲಿನ ನಾಯಕತ್ವದ ದುರಹಂಕಾರ ಮತ್ತು ಭೌದ್ದಿಕ ದಿವಾಳಿಕೋರತನದಿಂದಲೇ ಹಿರಿಯರು ಪಕ್ಷ ತೊರೆಯುವಂತಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು. ತಾಲೂಕಿನ ಮುಗದ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಲ್ಲಿ ಒಬ್ಬರಾಗಿದ್ದ ಗುಲಾಬ್ ನಬೀ ಅಜಾದ್ ಈಗ ಪಕ್ಷ ತೊರೆದಿದ್ದಾರೆ. ಈ ಹಿಂದೆಯೂ ಸಾಕಷ್ಟು ಹಿರಿಯ ನಾಯಕರು ಪಕ್ಷದ ದುರಾಡಳಿತದಿಂದ ಮನನೊಂದು ಹೊರ ಬಂದಿದ್ದಾರೆ ಎಂದರು. ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಅನುಭವಿಸಿ …
Read More »ಗಣೇಶ ಪ್ರತಿಷ್ಠಾಪನೆ ವಿರೋಧಿಸಿದರೆ ಜೋಕೆ
ಹುಬ್ಬಳ್ಳಿ: ಚನ್ನಮ್ಮ ವೃತ್ತ ಬಳಿಯ ಈದ್ಗಾ ಮೈದಾನದಲ್ಲಿ ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಅನುಮತಿ ನೀಡಲು ಪಾಲಿಕೆ ಹಾಗೂ ಸ್ಥಳೀಯ ಶಾಸಕರು ವಿರೋಧ ಮಾಡಿದರೆ, ತೊಂದರೆ ಕೊಟ್ಟರೆ ಮುಂಬರುವ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಮತ ನೀಡುವಂತೆ ಗಣೇಶ ಮೂರ್ತಿ ಹಿಡಿದು ಮನೆ ಮನೆಗೆ ತೆರಳಿ ತಿಳಿವಳಿಕೆಯ ಅಭಿಯಾನ ಆರಂಭಿಸಬೇಕಾಗುತ್ತದೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಸಂಬಂಧಿಸಿದಂತೆ ಪಾಲಿಕೆ …
Read More »ಬಿರಿಯಾನಿ ತಿನ್ನೋಕೆ ಬಂದವರು ಜೈಲು ಪಾಲಾದ್ರು;
ಹುಬ್ಬಳ್ಳಿ: ಇನ್ನೇನು ಹುಬ್ಬಳ್ಳಿ (Hubballi) ಶಾಂತವಾಯಿತು ಅನ್ನುವಷ್ಷರೊಳಗಾಗಿ ಏನಾದರೂ ಒಂದು ಘಟನೆಗಳು ನಡೆಯುತ್ತಲೇ ಇವೆ. ಗುರಾಯಿಸಿ ನೋಡಿದ ಅಂತ ಗ್ಯಾಂಗ್ವೊಂದು ಯುವಕನ (Youth Assault) ಮೇಲೆ ಮಾರಣಾಂತಿಕ ಹಲ್ಲೆ ಮಾಡಿದೆ. ಬಿರಿಯಾನಿ (Biryani) ತಿನ್ನೋಕೆ ಹೋದವರು ಹಲ್ಲೆ ಮಾಡಿ ಈಗ ಕಂಬಿ ಎಣಿಸುತ್ತಿದ್ದಾರೆ. ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಪುಡಿ ರೌಡಿಗಳ ಅಟ್ಟಹಾಸ ಮುಂದುವರಿದಿದೆ. ಕ್ಷುಲ್ಲಕ ಕಾರಣಕ್ಕೆ ಯುವಕನೊಬ್ಬನ ಮೇಲೆ ಚಾಕು ಮತ್ತು ಬಾಟಲಿಯಿಂದ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಹುಬ್ಬಳ್ಳಿಯ ನ್ಯೂ …
Read More »ಧಾರವಾಡ| ಬಸ್, ಲಾರಿ ನಡುವೆ ಅಪಘಾತ: ವ್ಯಕ್ತಿ ಸಾವು
ಧಾರವಾಡ: ನಗರದ ಹೊರವಲಯದ ಬೈಪಾಸ್ನಲ್ಲಿ ಖಾಸಗಿ ಬಸ್ ಮತ್ತು ಲಾರಿ ನಡುವೆ ಗುರುವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟು, ನಾಲ್ವರು ಪ್ರಯಾಣಿಕರು ಗಾಯಗೊಂಡಿದ್ದಾರೆ. ಬೀದರ್ ಜಿಲ್ಲೆಯ ಬಾಲ್ಕಿಯ ಮುರುದಾ ಖಾನ್ ಗಲ್ಲಿಯ ನಿವಾಸಿ ಶ್ಯಾಮ ವಿದ್ಯಾವಾನ ಪಾಟೀಲ (35) ಮೃತಪಟ್ಟವರು. ಶ್ಯಾಮ ಅವರು ಅಪಘಾತಕ್ಕೀಡಾದ ಎಸ್ಆರ್ಎಸ್ ಬಸ್ನ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದರು. ಮಹಾರಾಷ್ಟ್ರದ ರತ್ನಪುರದ ನಿವಾಸಿ ವಿನಾಯಕ ದೋಗಡೆ (34) ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಇಲ್ಲಿನ ಕಿಮ್ಸ್ಗೆ ದಾಖಲಿಸಲಾಗಿದೆ. …
Read More »ರಾಜಕಾರಣದ ಸೋಂಕನ್ನು ಅಂಟಿಸಿಕೊಳ್ಳದ ಮಠಾಧೀಶ ಅಮ್ಮಿನಬಾವಿಯ ಶ್ರೀಶಾಂತಲಿಂಗ ಶಿವಾಚಾರ್ಯರು
ಧಾರವಾಡ : ತಮ್ಮ 89 ವರ್ಷಗಳ ಸುದೀರ್ಘ ಸನ್ಯಾಸದ ಬದುಕಿಗೆ ರಾಜಕಾರಣದ ಸೋಂಕನ್ನು ಅಂಟಿಸಿಕೊಳ್ಳದೇ ತಮ್ಮೊಳಗಿನ ತಪೋಬಲದಿಂದ ಸದಾಕಾಲವೂ ಭಕ್ತರ ಒಳಿತನ್ನೇ ಬಯಸಿರುವ ಅಮ್ಮಿನಬಾವಿಯ ಶ್ರೀಶಾಂತಲಿಂಗ ಶಿವಾಚಾರ್ಯರು ಓರ್ವ ಆದರ್ಶ ಮಠಾಧೀಶರೆನಿಸಿದ್ದಾರೆ ಎಂದು ಬೆಳಗಾವಿ ಜಿಲ್ಲೆ ಸವದತ್ತಿ ಮೂಲಿಮಠದ ಶ್ರೀಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಬಣ್ಣಿಸಿದರು. ಅವರು ತಾಲೂಕಿನ ಅಮ್ಮಿನಬಾವಿ ಪಂಚಗೃಹ ಹಿರೇಮಠದ ಹಿರಿಯ ಶ್ರೀಗಳಾದ ಶ್ರೀಶಾಂತಲಿಂಗ ಶಿವಾಚಾರ್ಯ ಸ್ವಾಮಿಗಳ 89ನೆಯ ವರ್ಧಂತಿ ಉತ್ಸವವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಧರ್ಮ ಜಾಗೃತಿಗೆ ಮತ್ತು ಸಂಸ್ಕೃತಿ-ಸಂಸ್ಕಾರದ …
Read More »ನೀವು ಸುಟ್ಟಿದ್ದು ಭಾವಚಿತ್ರವಲ್ಲ ಭಾರತ ಮಾತೆಯನ್ನು.. ಮುತಾಲಿಕ್ ಆಕ್ರೋಶ
ಧಾರವಾಡ : ಧಾರವಾಡದಲ್ಲಿ ಸಾವರ್ಕರ್ ಫೋಟೋ ಸುಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಪ್ರತಿಕ್ರಿಯಿಸಿದ್ದಾರೆ. ಸಾವರ್ಕರ್ ಭಾವಚಿತ್ರ ಸುಟ್ಟು ಹಾಕಿದ್ದು ಹೇಯ ಕೃತ್ಯ, ಇದು ದೇಶದ್ರೋಹಿ ಕೃತ್ಯ. ನೀವು ಸುಟ್ಟಿದ್ದು ಭಾವಚಿತ್ರವಲ್ಲ, ಭಾರತ ಮಾತೆಯನ್ನು ಸುಡುತ್ತಿದ್ದೀರಿ ಎಂದು ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದರು. ಈ ಕುರಿತು ಮಾತನಾಡಿದ ಅವರು, ಸಾವರ್ಕರ್ ಅರ್ಧ ಜೀವನ ಜೈಲಿನಲ್ಲಿ ಕಳೆದವರು ನಿಮಗೆ ದೇಶಭಕ್ತಿ ಇಲ್ಲ. ನಿಮಗೆ ಸಿದ್ದರಾಮಯ್ಯ ಬೇಕು. ನಿಮ್ಮ ಉದ್ದೇಶ ಏನು? ಎಂದು …
Read More »ಹುಬ್ಬಳ್ಳಿಯಲ್ಲಿ ಜೋರಾಯ್ತು ʻಸಾವರ್ಕರ್ ಕಿಚ್ಚುʼ : ಬಿಜೆಪಿ ಕಾರ್ಯಕರ್ತರಿಂದ ʻ ಎಂ.ಬಿ.ಪಾಟೀಲ್ ಕಾರಿಗೆ ಮುತ್ತಿಗೆ ʼ
ಹುಬ್ಬಳ್ಳಿ : ರಾಜ್ಯದಲ್ಲಿ ಮತ್ತಷ್ಟು ಜೋರಾಯ್ತು ಸಾವರ್ಕರ್ ಕಿಚ್ಚು ಹೆಚ್ಚಾಗಿದ್ದು. ನಿನ್ನೆ ಕಾಂಗ್ರೆಸ್ ಕಾರ್ಯಕರ್ತರು ಸಾವರ್ಕರ್ ಫೋಟೋಗೆ ಬೆಂಕಿ ಹಾಕಿ ದಹನ ಮಾಡಿದ್ದಾರೆ. ಈ ಹಿನ್ನೆಲೆ ಇಂದು ಹುಬ್ಬಳ್ಳಿ ಕಾಂಗ್ರೆಸ್ ಕಚೇರಿ ಬಳಿ ಬಿಜೆಪಿ ಕಾರ್ಯಕರ್ತರು ಜಮಾವಣೆಗೊಂಡು ಎಂ.ಬಿ.ಪಾಟೀಲ್ ಕಾರಿಗೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ತಡೆಯಲು ಹರಸಾಹಸ ಪಟ್ಟಿದ್ದಾರೆ. ಸಾವರ್ಕರ್ ಫೋಟೋ ಹಿಡಿದು ಕಾರ್ಯಕರ್ತರ ಪ್ರತಿಭಟನೆ ತೀವ್ರಗೊಂಡಿದೆ.
Read More »