Breaking News

ಹುಬ್ಬಳ್ಳಿ

ಹುಬ್ಬಳ್ಳಿ ನಗರಕ್ಕೆ ಬರುವ ಪ್ರಯಾಣಿಕರು NWKRTCಯಿಂದ ಹೈರಾಣ

ಹುಬ್ಬಳ್ಳಿ: ಹಾವೇರಿ, ದಾವಣಗೆರೆ‌, ಉತ್ತರ ಕನ್ನಡ, ಗದಗ, ಕೊಪ್ಪಳ ಸೇರಿದಂತೆ ಉತ್ತರ ಕರ್ನಾಟಕ ಭಾಗದ ಬಹುತೇಕ ಜಿಲ್ಲೆಗಳಿಂದ ಉದ್ಯೋಗ, ವ್ಯಾಪಾರ, ಆಸ್ಪತ್ರೆಗಳಿಗಾಗಿ ಹುಬ್ಬಳ್ಳಿ ನಗರಕ್ಕೆ ಬರುವವರ ಸಂಖ್ಯೆ ಹೆಚ್ಚಿದೆ. ನಿತ್ಯ ಸಾವಿರಾರು ಮಂದಿ ವಾಯವ್ಯ ಸಾರಿಗೆ ಸಂಸ್ಥೆಯ (NWKRTC) ಬಸ್‌ಗಳಲ್ಲಿ ನಗರಕ್ಕೆ ಬಂದು, ಎಲ್ಲಿ ಇಳಿಯಬೇಕು ಎಂದು ಗೊತ್ತಾಗದೆ ಪರದಾಡುವುದು ಸಾಮಾನ್ಯವಾಗಿದೆ.   ನಗರದಲ್ಲಿ ನಿಗದಿತ ಸ್ಥಳಗಳಲ್ಲಿ ತಾತ್ಕಾಲಿಕ ಬಸ್ ನಿಲುಗಡೆ ವ್ಯವಸ್ಥೆ ಇಲ್ಲ. ಒಂದೇ ನಿಲ್ದಾಣಕ್ಕೆ ಮೂರು, ನಾಲ್ಕು …

Read More »

ಹುಬ್ಬಳ್ಳಿ: ಹಜರತ್ ಖಾದ್ರಿ ದರ್ಗಾ ತೆರವು ಕಾರ್ಯಾಚರಣೆ, 200ಕ್ಕೂ ಹೆಚ್ಚು ಪೊಲೀಸರ ನಿಯೋಜನೆ

ಹುಬ್ಬಳ್ಳಿ:ಇಲ್ಲಿಯ ಭೈರಿದೇವರಕೊಪ್ಪದ ಸಾರ್ವಜನಿಕ ಸ್ಥಳದಲ್ಲಿರುವ ಹಜರತ್ ಸೈಯದ್ ಮಹಮ್ಮುದ್ ಶಾ ಖಾದ್ರಿ ದರ್ಗಾದ ಒಂದು ಭಾಗ ಹಾಗೂ ವಾಣಿಜ್ಯ ಮಳಿಗೆಗಳ ತೆರವು ಕಾರ್ಯಚರಣೆ ಬುಧವಾರ ಬೆಳಿಗ್ಗೆ ಆರಂಭವಾಗಿದೆ. ದರ್ಗಾದ ಸುತ್ತಮುತ್ತ ಪೊಲೀಸ್‌ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಹುಬ್ಬಳ್ಳಿ-ಧಾರವಾಡ ಸೇರಿದಂತೆ ಉತ್ತರ ಕನ್ನಡ, ಹಾವೇರಿ, ಗದಗ ಹಾಗೂ ಧಾರವಾಡ ಜಿಲ್ಲೆಗಳಿಂದ 200 ಕ್ಕೂ ಹೆಚ್ಚು ಪೊಲೀಸ್‌ ಸಿಬ್ಬಂದಿಯನ್ನು ನೀಯೋಜಿಸಿ ಸೂಕ್ತ ಭದ್ರತೆ ನೀಡಲಾಗಿದೆ. ಮೂರು ಜೆಸಿಬಿ ಕಾರ್ಯಚರಣೆ ನಡೆಸಿದ್ದು, ಈಗಾಗಲೇ ದರ್ಗಾದ ಸುತ್ತಮುತ್ತಲಿನ …

Read More »

ನನ್ನ ವಿಚಾರಕ್ಕೆ ಬಂದರೆ ಸುಮ್ಮನಿರಲ್ಲ ಜಗದೀಶ್ ಶೆಟ್ಟರ್ ವಾರ್ನ್‌

ಹುಬ್ಬಳ್ಳಿ, ಡಿಸೆಂಬರ್‌, 18: ನಾನು ಯಾರ ಉಸಾಬರಿಗೂ ಹೋಗುವುದಿಲ್ಲ. ನನ್ನ ಬಗ್ಗೆ ಯಾರಾದರೂ ಕೆಣಕಿದರೆ ಸುಮ್ಮನೆ ಬಿಡುವದಿಲ್ಲ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹುಬ್ಬಳ್ಳಿಯಲ್ಲಿ ವಾರ್ನಿಂಗ್ ಕೊಟ್ಟಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿದೆ. ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರ ಹುಟ್ಟು ಹಬ್ಬದ ನಿಮಿತ್ತ ಹುಬ್ಬಳ್ಳಿಯಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಜಗದೀಶ್ ತಮ್ಮ ವಿರೋಧಿಗಳಿಗೆ ವಾರ್ನಿಂಗ್ ಕೊಟ್ಟಿದ್ದಾರೆ. …

Read More »

ಸಭಾಪತಿಗೆ ನನ್ನ ಹೆಸರು ಫೈನಲ್‌: ಬಸವರಾಜ ಹೊರಟ್ಟಿ

ಧಾರವಾಡ: ವಿಧಾನ ಪರಿಷತ್‌ ಸಭಾಪತಿ ಸ್ಥಾನಕ್ಕೆ ಆಡಳಿತರೂಢ ಬಿಜೆಪಿ ಪಕ್ಷದಿಂದ ನನ್ನ ಹೆಸರು ಅಂತಿಮಗೊಂಡಿದೆ ಎಂದು ಬಸವರಾಜ ಹೊರಟ್ಟಿ ತಿಳಿಸಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿದ ಅವರು, ಸಭಾಪತಿ ಸ್ಥಾನದ ಅಭ್ಯರ್ಥಿಯಾದ ಬಗ್ಗೆ ಬಿಜೆಪಿ ಮುಖಂಡರಾದ ರವಿಕುಮಾರ ದೂರವಾಣಿ ಕರೆ ಮಾಡಿ ತಿಳಿಸಿದ್ದಾರೆ. ಶೀಘ್ರ ಅಧಿಕೃತ ಅಭ್ಯರ್ಥಿಯಾಗಿಯೂ ಪ್ರಕಟಣೆ ಹೊರ ಬೀಳಲಿದೆ. ಈ ಸಿಹಿ ಸುದ್ದಿ ನೀಡಿದ ರವಿಕುಮಾರ ಅವರಿಗೆ ಧನ್ಯವಾದ ತಿಳಿಸಿದ್ದೇನೆ. ಉತ್ತರ ಕರ್ನಾಟಕದ ನಮ್ಮ ಸಮಸ್ಯೆಗಳಿಗೆ ಪ್ರತಿಫಲ ಬೇಕಷ್ಟೇ. ಹೀಗಾಗಿ …

Read More »

ಇನ್ನಾದರೂ ಸಮಸ್ಯೆ ಯನ್ನಾ ಬಗೆಹರಿಸಿ ಎಂದು ಹುಟ್ಟು ಹಬ್ಬದ ದಿನವೇ ಶೆಟ್ಟರ್ ಅವರಿಗೆ ಶಾಕ ಕೊಟ್ಟ ಹುಬ್ಬಳಿ ಮಂದಿ

ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹುಟ್ಟುಹಬ್ಬದ ಸಂಭ್ರಮಕ್ಕೆ ಹುಬ್ಬಳ್ಳಿಯ ಜನರು ಶಾಕ್ ನೀಡಿದ್ದಾರೆ. 30 ವರ್ಷ ಅಧಿಕಾರ ಅನುಭವಿಸಿ, ಮುಖ್ಯಮಂತ್ರಿ, ಸಚಿವರಾಗಿದ್ದ ಶೆಟ್ಟರ್ ಅವರಿಗೆ ಹುಬ್ಬಳ್ಳಿ ಸೆಂಟ್ರಲ್ ಕ್ಷೇತ್ರದಲ್ಲಿ ಇರುವ ಸಾಲು ಸಾಲು ಸಮಸ್ಯೆಗೆ ಪರಿಹಾರ ನೀಡುವಂತೆ ಜನತೆ ಒತ್ತಾಯಿಸಿದ್ದಾರೆ. ಹುಟ್ಟು ಹಬ್ಬದ ಶುಭಾಶಯ ಕೋರಿ ತಮ್ಮ ಬೇಡಿಕೆ ಈಡೇರಿಸಿ ಉಡುಗೊರೆ ನೀಡುವಂತೆ ಮನವಿ ಮಾಡಿದ್ದಾರೆ. ಸ್ವ ಹಿತಾಸಕ್ತಿಗೆ ಬಿ.ಆರ್.ಟಿ.ಎಸ್ ಯೋಜನೆ ತಂದು ನಮ್ಮ ಜೀವ ತೆಗೆಯುತ್ತಿದ್ದಾರೆ. ಕಸದ ನಿರ್ವಹಣೆ …

Read More »

ರಕ್ತದಲ್ಲಿ ನಾನು ಪತ್ರ ಬರೆದಿದ್ದಕ್ಕೇ ಮಹದಾಯಿ ಪ್ರಾರಂಭ: ಸಿಎಂ ಬೊಮ್ಮಾಯಿ

ಹುಬ್ಬಳ್ಳಿ: ‘ಮಹದಾಯಿ ಬಗ್ಗೆ ಮಾತನಾಡಲು ಕಾಂಗ್ರೆಸ್‌ಗೆ ನೈತಿಕ ಹಕ್ಕಿಲ್ಲ. ಮಹದಾಯಿ ನೀರನ್ನು ಕರ್ನಾಟಕಕ್ಕೆ ತರುವ ಕಾಲುವೆಗೆ ಗೋಡೆ ಕಟ್ಟಿರುವುದೇ ಕಾಂಗ್ರೆಸ್‌ನ ದೊಡ್ಡ ಸಾಧನೆ. ರಕ್ತದಲ್ಲಿ ನಾನು ಪತ್ರ ಬರೆದಿದ್ದಕ್ಕೇ ಮಹದಾಯಿ ಕಾಮಗಾರಿ ಪ್ರಾರಂಭವಾಗಿದ್ದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.   ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿ, ‘ನಾನು ನೀರಾವರಿ ಸಚಿವನಾಗಿದ್ದಾಗ 5.5 ಮೀಟರ್‌ಗಳಷ್ಟು ಕಾಲುವೆ ನಿರ್ಮಾಣವಾಯಿತು. ಆದರೆ, ಕಾಂಗ್ರೆಸ್‌ ಪುಣ್ಯಾತ್ಮರು ಏನು ಮಾಡಿದರು? ಸೋನಿಯಾ ಗಾಂಧಿ ಅವರು ಗೋವಾದಲ್ಲಿ …

Read More »

ಧಾರವಾಡ ರಂಗಾಯಣದಿಂದ ಕಿತ್ತೂರು ಚನ್ನಮ್ಮ ನಾಟಕ: ವೇದಿಕೆ ಮೇಲೆ ಆನೆ, ಒಂಟೆ, ಕುದುರೆ

ಧಾರವಾಡ: ಬ್ರಿಟಿಷರ ವಿರುದ್ಧ ರಣಕಹಳೆ ಮೊಳಗಿಸಿದ ವೀರ ರಾಣಿ ಕಿತ್ತೂರು ಚನ್ನಮ್ಮ ಅವರ ಜೀವನ ಆಧಾರಿತ ನಾಟಕವನ್ನು ಧಾರವಾಡ ರಂಗಾಯಣ ಸಿದ್ಧಪಡಿಸಿದ್ದು, ಡಿ.24ರಿಂದ ಪ್ರದರ್ಶನಗೊಳ್ಳುತ್ತಿದೆ. ಸುಮಾರು ಮೂರೂವರೆ ತಾಸು ಸುದೀರ್ಘ ನಾಟಕದಲ್ಲಿ ಸುಮಾರು 150 ಕಲಾವಿದರು ನಟಿಸುತ್ತಿರುವುದು ಹಾಗೂ ಆನೆ, ಒಂಟೆ, ಕುದುರೆ, ಹಸುಗಳ ಬಳಕೆ ಮೂಲಕ ಬೃಹತ್ ರಂಗ ಸಜ್ಜಿಕೆಯ ನಾಟಕ ಈಗಾಗಲೇ ಸಾಕಷ್ಟು ಚರ್ಚೆಯಲ್ಲಿದೆ. ರಂಗ ತಾಲೀಮು ಭರದಿಂದ ನಡೆಯುತ್ತಿದ್ದು 250ಕ್ಕೂ ಹೆಚ್ಚು ಜನ ಇದರಲ್ಲಿ ಭಾಗಿಯಾಗಿದ್ದಾರೆ. …

Read More »

ಹುಬ್ಬಳ್ಳಿ ತಾಲ್ಲೂಕಿನ ಬೈರೀದೇವರಕೊಪ್ಪದಲ್ಲಿ ನಮ್ಮ ಕ್ಲಿನಿಕ್ ಉದ್ಘಾಟಿಸಿದ ಸಿಎಂ ಬೊಮ್ಮಾಯಿ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಧಾರವಾಡ ಜಿಲ್ಲೆ, ಹುಬ್ಬಳ್ಳಿ ತಾಲ್ಲೂಕಿನ ಬೈರೀದೇವರಕೊಪ್ಪದಲ್ಲಿ ನಮ್ಮ ಕ್ಲಿನಿಕ್ ಉದ್ಘಾಟಿಸಿದರು. ಆರೋಗ್ಯ ಸಚಿವ ಡಾ: ಕೆ.ಸುಧಾಕರ್, ಸಚಿವರಾದ ಹಾಲಪ್ಪ ಆಚಾರ್, ಸಿ.ಸಿ.ಪಾಟೀಲ್ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಶಾಸಕ ಅರವಿಂದ ಬೆಲ್ಲದ್ ಹಾಗೂ ಆರೋಗ್ಯ ಇಲಾಖೆ ಹಿರಿಯ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Read More »

ಬಿಜೆಪಿಯವರಿಗೆ ಧಮ್ ತಾಕತ್ತಿದ್ದರೆ ಅಧಿವೇಶನದಲ್ಲಿ ಮಹಿಳಾ ಮೀಸಲಾತಿ ಮಸೂದೆ ಮಂಡಿಸಿ: ಡಾ.ಪುಷ್ಪಾ ಅಮರನಾಥ

ಹುಬ್ಬಳ್ಳಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೋದಲ್ಲಿ ಬಂದಲ್ಲಿ ತಾಕತ್ತಿದ್ದರೆ, ಧಮ್ ಇದ್ದರೆ ಎನ್ನುತ್ತಾರೆ. ಬಿಜೆಪಿಯವರಿಗೆ ಧಮ್ -ತಾಕತ್ತಿದ್ದರೆ ಸಂಸತ್ತು ಚಳಿಗಾಲ ಅಧಿವೇಶನದಲ್ಲಿ ಮಹಿಳಾ ಮೀಸಲಾತಿ ಮಸೂದೆ ಮಂಡಿಸಿ ಅಂಗೀಕಾರಗೊಳ್ಳುವಂತೆ ಮಾಡಲಿ ಎಂದು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಡಾ.ಪುಷ್ಪಾ ಅಮರನಾಥ ಸವಾಲು ಹಾಕಿದರು.   ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. 2014ರಲ್ಲಿ ಲೋಕಸಭೆ, ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33 ರಷ್ಟು ಮೀಸಲಾತಿ ನೀಡುವುದಾಗಿ ಬಿಜೆಪಿ ಪ್ರಣಾಳಿಕೆಯಲ್ಲಿ ತಿಳಿಸಿತ್ತು. ಇದುವರೆಗೂ ಆಗಿಲ್ಲ ಎಂದರು. ವಿಧಾನಸಭೆ ಚುನಾವಣೆಗೆ …

Read More »

ಧಾರವಾಡದ ಕರ್ನಾಟಕ ವಿಶ್ವ ವಿದ್ಯಾಲಯದಿಂದ ಯಡವಟ್ಟು, ಬಿಕಾಂ ವಿದ್ಯಾರ್ಥಿಗಳಿಗೆ ಆಪತ್ತು

ಧಾರವಾಡ, ಡಿಸೆಂಬರ್‌, 09: ಧಾರವಾಡದ ಪ್ರತಿಷ್ಠಿತ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸದಾ ಒಂದಿಲ್ಲೊಂದು ಯಡವಟ್ಟು ಆಗುತ್ತಲೇ ಇರುತ್ತದೆ. ಇದೀಗ ಯುಜಿ ಪರೀಕ್ಷೆಯ ಅಂಕಪಟ್ಟಿಯಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ದೊಡ್ಡ ಯಡವಟ್ಟು ಮಾಡಿಕೊಂಡಿದೆ. ಬಿಕಾಂ ಕೋರ್ಸ್‌ನ ಅಂತಿಮ ವರ್ಷದ ಪರೀಕ್ಷಾ ಫಲಿತಾಂಶದ ಅಂಕಪಟ್ಟಿಯಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಯಡವಟ್ಟು ಮಾಡಿಕೊಂಡಿದ್ದು, ಇದೀಗ ಅದನ್ನು ಸರಿಪಡಿಸಿಕೊಳ್ಳಲು ಮುಂದಾಗಿದೆ.   ಕೋರ್ಸ್‌ ವಿಷಯ ಅಲ್ಲದ ಅಂಕಗಳ ಸೇರ್ಪಡೆ ಬಿಕಾಂ ವಿದ್ಯಾರ್ಥಿಗಳ ಅಂತಿಮ ವರ್ಷದ ಒಟ್ಟಾರೆ ಪರೀಕ್ಷಾ ಫಲಿತಾಂಶಕ್ಕೆ ಕೋರ್ಸ್‌ …

Read More »