Breaking News

ಹುಬ್ಬಳ್ಳಿ

ಭಿಕ್ಷುಕರ ನಡುವೆ ಜಗಳ, ಕ್ಷುಲ್ಲಕ ಕಾರಣಕ್ಕೆ ಸ್ನೇಹಿತನನ್ನು ಹೊಡೆದು ಕೊಂದ ಗೆಳೆಯ!

ಹುಬ್ಬಳ್ಳಿ(ಧಾರವಾಡ): ಕ್ಷುಲ್ಲಕ ಕಾರಣಕ್ಕೆ ಹೊಡೆದಾಡಿಕೊಂಡು, ತನ್ನ ಸ್ನೇಹಿತನನ್ನೇ ಹತ್ಯೆ ಮಾಡಿರುವ ಘಟನೆ ಭಾನುವಾರ ತಡರಾತ್ರಿ ಹಳೆ ಹುಬ್ಬಳ್ಳಿಯಲ್ಲಿ ನಡೆದಿದೆ. ಬಿಹಾರ ಮೂಲದ ವಿಶೇಷ ಚೇತನ ವ್ಯಕ್ತಿ ಮಿತಿಲೇಶ್​​ ಕುಮಾರ್​ ಎಂಬಾತನನ್ನು ಆತನ ಸ್ನೇಹಿತ ರಾಜೇಶ್​ ಕುಮಾರ್​​​ ಅಲಿಯಾಸ್​​​​ ನಸೀರ್​​​​ ಖಾನ್​​​ ಹತ್ಯೆ ಮಾಡಿದ್ದಾನೆ. ಭಾನುವಾರ ರಾಜೇಶ್​ ಕುಮಾರ್​​ ಮದ್ಯದ ಅಮಲಿನಲ್ಲಿ ಮಿತಿಲೇಶ್​​ ಕುಮಾರ್ ಜತೆ ತಂಟೆ ತೆಗೆದು ಹೊಡೆದಾಡಿಕೊಂಡಿದ್ದಾರೆ. ಬಳಿಕ ಜಗಳ ವಿಕೋಪಕ್ಕೆ ತಿರುಗಿ ರಾಜೇಶ್ ಮಿತಿಲೇಶನಿಗೆ ಮೈಕ್​ ಸೆಟ್​ನಿಂದ ತಲೆಗೆ ಹೊಡೆದಿದ್ದಾನೆ. …

Read More »

ಧಾರವಾಡ ಐಐಟಿಗೆ ₹2000 ಕೋಟಿ ಹೆಚ್ಚುವರಿ ಅನುದಾನ:ಪ್ರಲ್ಹಾದ ಜೋಶಿ

ಹುಬ್ಬಳ್ಳಿ: ಧಾರವಾಡದ ಐಐಟಿಗೆ ಕೇಂದ್ರ ಸರ್ಕಾರ ₹2000 ಕೋಟಿ ಹೆಚ್ಚುವರಿ ಹಣ ನೀಡುತ್ತಿದೆ. ದೇಶದ ಎಲ್ಲಾ ಐಐಟಿಗಳಂತೆ ಇದೂ ಉನ್ನತ ಅಭಿವೃದ್ಧಿ ಕಾಣುತ್ತದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಹೇಳಿದರು. ಹುಬ್ಬಳ್ಳಿಯ ಬಿವಿಬಿ ಕಾಲೇಜಿನಲ್ಲಿ ಭಾನುವಾರ, ಸರ್ಕಾರಿ ಹಾಗೂ ಅನುದಾನಿತ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕರ ಸಂಘ ಆಯೋಜಿಸಿದ್ದ ‘ಭಾರತದ ಶಿಕ್ಷಣ ಮತ್ತು ಶಿಕ್ಷಕರ ಪಾತ್ರ’ (Indian Education and the True Role …

Read More »

ಬೆಂಗಳೂರು ಟು ಗೋವಾ: ಮಧುಚಂದ್ರಕ್ಕೆ ಕರೆದೊಯ್ದು ಪ್ರೇಯಿಸಿ ಹತ್ಯೆಗೈದ ಪ್ರಿಯಕರ

ಹುಬ್ಬಳ್ಳಿ, ಜೂನ್​ 18: ಇದೊಂದು ವಿಚಿತ್ರ ಪ್ರಕರಣ. ಬೆಂಗಳೂರು (Bengaluru) ಮೂಲದ ಯುವತಿ ಗೋವಾದಲ್ಲಿ (Goa) ಕೊಲೆಯಾಗಿದ್ದಾಳೆ. ಕೊಲೆ ಮಾಡಿದ ಆರೋಪಿ ಕೂಡ ಬೆಂಗಳೂರು ನಿವಾಸಿಯಾಗಿದ್ದಾನೆ. ಆದರೆ, ಆರೋಪಿ ಸಿಕ್ಕಿಬಿದ್ದಿದ್ದು ಹುಬ್ಬಳ್ಳಿಯಲ್ಲಿ (Hubballi). ಪ್ರೀತಿಸಿದ ಹುಡಗಿಯ ಕತ್ತುಸೀಳಿ ಕೊಲೆ ಮಾಡಿದ ಪ್ರಿಯಕರ ಹುಬ್ಬಳ್ಳಿ ಪೊಲೀಸರ ಕೈಯಲ್ಲಿ ಲಾಕ್ ಆಗಿದ್ದಾನೆ. ಬೆಂಗಳೂರಿನ ಲಿಂಗರಾಜಪುರ ಬಡಾವಣೆಯ ಡಾನ್ ಬಾಸ್ಕೋ ಶಾಲೆ ಸಮೀಪ ವಾಸವಾಗಿದ್ದ 22 ವರ್ಷದ ರೋಶನಿ ಗೋವಾದಲ್ಲಿ ಬರ್ಬರವಾಗಿ ಕೊಲೆಯಾಗಿದ್ದಾರೆ. ಗೋವಾ ರಾಜ್ಯದ …

Read More »

ಇಂಗ್ಲಿಷ್ ಕಾಲುವೆಯ 48.3 ಕಿ.ಮೀ ಈಜಿ ಸಾಧನೆ: ಇನ್ಸ್​ಪೆಕ್ಟರ್ ಮುರುಗೇಶ ಚನ್ನಣ್ಣವರ್ ತಂಡದಿಂದ ಮತ್ತೊಂದು ಮೈಲಿಗಲ್ಲು

ಹುಬ್ಬಳ್ಳಿ: ಹುಬ್ಬಳ್ಳಿ ಗ್ರಾಮೀಣ ಠಾಣೆಯ ಪೊಲೀಸ್ ಇನ್ಸ್​​ಪೆಕ್ಟರ್​​ ಮುರುಗೇಶ ಚನ್ನಣ್ಣವರ್​ ಹಾಗೂ ಕೆಎಂಸಿಆರ್‌ಐ ಎಂಬಿಬಿಎಸ್ ವಿದ್ಯಾರ್ಥಿ ಅಮನ್ ಶಾನಭಾಗ್​ ಜತೆಗೂಡಿ ಲಂಡನ್‌ನಲ್ಲಿ ಮತ್ತೊಂದು ಸಾಧನೆ ಮಾಡಿದ್ದಾರೆ. ಭಾರತದ 6 ಜನರ ತಂಡ ಇಂಗ್ಲೆಂಡ್ ಮತ್ತು ಫ್ರಾನ್ಸ್ ಮಧ್ಯದ ವಿಶ್ವದ ಅತಿ ಕ್ಲಿಷ್ಟಕರವಾದ ಇಂಗ್ಲಿಷ್ ಕಾಲುವೆ ಈಜುವ ಮೂಲಕ ಮೈಲಿಗಲ್ಲು ಸಾಧಿಸಿದ್ದಾರೆ. ಸಮುದ್ರದಲ್ಲಿ 13 ಡಿಗ್ರಿ ಸೆಲ್ಸಿಯಸ್ ತಂಪು ವಾತಾವರಣ. ಅತಿಯಾದ ಅಲೆಗಳ ನಡುವೆ 48.3 ಕಿ.ಮೀ. ಅನ್ನು 13.37 ಗಂಟೆಗಳಲ್ಲಿ ಈಜಿ …

Read More »

ಸಿಎಂ ಬದಲಾವಣೆ ಪ್ರಸ್ತಾಪ ಆಗೇ ಇಲ್ಲಾ : ಶಾಸಕ ಪ್ರಸಾದ ಅಬ್ಬಯ್ಯ

ಹುಬ್ಬಳ್ಳಿ : ಸಿಎಂ ಬದಲಾವಣೆ ಪ್ರಸ್ತಾಪ ಆಗೇ ಇಲ್ಲಾ : ಶಾಸಕ ಪ್ರಸಾದ ಅಬ್ಬಯ್ಯ ಸಿಎಂ ಬದಲಾವಣೆ ಪ್ರಸ್ತಾಪ ಆಗೇ ಇಲ್ಲಾ. ಸುಮ್ಮನೆ ಬೇರೆ ಬೇರೆಯವರು ಏನೇನೋ ಮಾತಾಡ್ತಾರೆ. ಏನೇ ಇದ್ರು ನಿರ್ಧಾರ ಹೈಕಮಾಂಡ್ ಗೆ ಬಿಟ್ಟಿದ್ದು ಸಚಿವ ಸಂಪುಟ ಪುನರ್ ರಚನೆ ಆದ್ರೆ ನಾವು ಕೂಡ ಸಚಿವ ಆಕಾಂಕ್ಷಿ ಇದ್ದೇನೆ ಎಂದು ಶಾಸಕ ಪ್ರಸಾದ ಅಬ್ಬಯ್ಯ ಹೇಳಿದರು. ನಗರದಲ್ಲಿಂದು ಮಾತನಾಡಿದ ಅವರು ನಾನು ಮೂರು ಬಾರಿ ನನ್ನ ಕ್ಷೇತ್ರದ …

Read More »

ಧಾರವಾಡದಲ್ಲಿ ಭಾರಿ ಮಳೆಯಿಂದ ನೆನೆದ ಮನೆಗೋಡೆ ಕುಸಿತ…

ಧಾರವಾಡದಲ್ಲಿ ಭಾರಿ ಮಳೆಯಿಂದ ನೆನೆದ ಮನೆಗೋಡೆ ಕುಸಿತ… ತಪ್ಪಿದ ಭಾರಿ ಅನಾಹುತ. ಧಾರವಾಡ ಸೈದಾಪುರದಲ್ಲಿ ಘಟನೆ.. ಧಾರವಾಡದಲ್ಲಿ ಇತ್ತಿಚ್ಚೆಗೆ ಸುರಿದ ಭಾರಿ ಮಳೆಯಿಂದ ಮನೆಗೋಡೆ ನೆನೆದು ಕುಸಿದು ಬಿದ್ದಿದ್ದು, ಬಾರಿ ಅನಾಹುತವೊಂದು ತಪ್ಪಿದಂತಾಗಿದೆ. ಹೌದು ಧಾರವಾಡದ ಸೈದಾಪುರ ಬಡಾವಣೆಯಲ್ಲಿ ಈ ಘಟನೆ ನಡೆದಿದೆ. ರಾಮಣ್ಣ ಅಗಡಿ ಎಂಬುವವರಿಗೆ ಸೇರಿದ ಮನೆಯೆ ಗೋಡೆಯೇ ಕುಸಿದು ಬಿದ್ದಿದೆ. ನಿರಂತರ ಸುರಿದ ಮಳೆಗೆ ಮನೆಯ ಗೋಡೆ ನೆನೆದಿತ್ತು. ಇದ್ದಕ್ಕಿದ್ದಂತೆ ಗೋಡೆ ಕುಸಿದು ಬಿದ್ದಿದೆ. ಗೋಡೆ …

Read More »

ಶಕ್ತಿ ಯೋಜನೆ ಹೊರೆಯ ನಡುವೆಯೂ ಲಾಭದತ್ತ KSRTC

ಹುಬ್ಬಳ್ಳಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಇತರೆ ಮೂಲಗಳಿಂದ ಸಂಗ್ರಹಿಸುವ ಆದಾಯ ಪ್ರಮಾಣ ಏರಿಕೆ ಆಗಿದೆ. ಶಕ್ತಿ ಯೋಜನೆಯ ಹೊರತಾಗಿಯೂ ಸಂಸ್ಥೆ ತನ್ನ ಕಾಲ ಮೇಲೆ ತಾನು ನಿಲ್ಲುವಷ್ಟರ ಮಟ್ಟಿಗೆ ಸಶಕ್ತವಾಗುವತ್ತ ಸಾಗಿದೆ. ಹೌದು, ಶಕ್ತಿ ಯೋಜನೆ ಆರಂಭವಾದಾಗಿನಿಂದ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದೆ. ಇದು ಸಾರಿಗೆ ಸಂಸ್ಥೆಯ ಲಾಭದತ್ತ ಸಾಗಲು ಮುನ್ನುಡಿ ಬರೆದಿದೆ. 2023–24 ಹಣಕಾಸು ವರ್ಷದಲ್ಲಿ ಸಾರಿಗೆಯಿಂದ ₹2,069 ಕೋಟಿ ಮತ್ತು ಸರಕು ಸಾಗಣೆ, ಬಾಡಿಗೆ …

Read More »

ಮಳೆಗಾಲ ವೇಳೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಜನ ಜೀವಹಾನಿ ಉಂಟಾದರೆ ಅವರ ವಿರುದ್ಧ ಕ್ರಮ- ಸಚಿವ ಲಾಡ್‌

ಮಳೆಗಾಲ ವೇಳೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಜನ ಜೀವಹಾನಿ ಉಂಟಾದರೆ ಅವರ ವಿರುದ್ಧ ಕ್ರಮ- ಸಚಿವ ಲಾಡ್‌ ಧಾರವಾಡ: ಮಳೆಗಾಲದ ಸಂಕಷ್ಟ ಸಂದರ್ಭದಲ್ಲಿಯೂ ಅಧಿಕಾರಿಗಳು ತಮ್ಮ ಕರ್ತವ್ಯವನ್ನು ಸಾರ್ವಜನಿಕ ಸ್ನೇಹಿಯಾಗಿ ನಿರ್ವಹಿಸಬೇಕು. ನಿಮ್ಮ ಇಲಾಖೆ ಕರ್ತವ್ಯಗಳಿಂದ ವಿಮುಖರಾಗಬೇಡಿ. ಯಾವುದೇ ಅಧಿಕಾರಿ, ಸಿಬ್ಬಂದಿ ಕರ್ತವ್ಯ ನಿರ್ಲಕ್ಷ್ಯದಿಂದ ಜೀವ ಹಾನಿ ಉಂಟಾದರೆ, ಆಯಾ ಅಧಿಕಾರಿಯನ್ನು ಜವಾಬ್ದಾರಗೊಳಿಸಿವುದರ ಜತೆಗೆ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಖಡಕ್ ಎಚ್ಚರಿಕೆ ನೀಡಿದ್ದಾರೆ. …

Read More »

ಹುಬ್ಬಳ್ಳಿ: ಪಾಲಿಕೆಯ ನಿರ್ಲಕ್ಷ್ಯಕ್ಕೆ ಹಾವು ಕಡಿದು ವ್ಯಕ್ತಿ ಸಾವು: ಕಣ್ಣೀರನಲ್ಲಿಯೇ ಆಡಳಿತ ವ್ಯವಸ್ಥೆ ವಿರುದ್ಧ ಆರೋಪ..!

ಹುಬ್ಬಳ್ಳಿ: ಪಾಲಿಕೆಯ ನಿರ್ಲಕ್ಷ್ಯಕ್ಕೆ ಹಾವು ಕಡಿದು ವ್ಯಕ್ತಿ ಸಾವು: ಕಣ್ಣೀರನಲ್ಲಿಯೇ ಆಡಳಿತ ವ್ಯವಸ್ಥೆ ವಿರುದ್ಧ ಆರೋಪ..! ಹುಬ್ಬಳ್ಳಿ ಧಾರವಾಡ ಅವಳಿನಗರದಲ್ಲಿ ಅದೆಷ್ಟೋ ಸಮಸ್ಯೆಗಳಿದ್ದರೂ ಪಾಲಿಕೆ ಮಾತ್ರ ಸಾಕಷ್ಟು ನಿರ್ಲಕ್ಷ್ಯ ವಹಿಸುತ್ತಿದೆ. ಈಗ ಪಾಲಿಕೆಯ ನಿರ್ಲಕ್ಷ್ಯದಿಂದ ವ್ಯಕ್ತಿಯೊಬ್ಬ ಜೀವ ಕಳೆದುಕೊಂಡಿರುವ ಆರೋಪ ಈಗ ಸಾರ್ವಜನಿಕ ವಲಯದಲ್ಲಿ ಆಕ್ರೋಶ ಹುಟ್ಟು ಹಾಕಿದೆ. ಸುಮಾರು ಬಾರಿ ಮನವಿ ಸಲ್ಲಿಸಿದರೂ ಕೂಡ ಪಾಲಿಕೆ ಕ್ರಮ ಕೈಗೊಳ್ಳದೇ ಇರುವುದು ವ್ಯಕ್ತಿ ಸಾವಿಗೆ ಕಾರಣವೆಂದು ಕುಟುಂಬಸ್ಥರು ಕಣ್ಣೀರು ಹಾಕುತ್ತಿದ್ದಾರೆ. …

Read More »

ಪ್ರೀತಿಸಿ ಮದುವೆಯಾದ ನನ್ನ ಹೆಂಡತಿ ಜೊತೆ ಬದುಕಲು ಬಿಡುತ್ತಿಲ್ಲ ಗಂಡನ ಅಳಲು

ಪ್ರೀತಿಸಿ ಮದುವೆಯಾದ ನನ್ನ ಹೆಂಡತಿ ಜೊತೆ ಬದುಕಲು ಬಿಡುತ್ತಿಲ್ಲ ಗಂಡನ ಅಳಲು ಹುಬ್ಬಳ್ಳಿಯಲ್ಲಿ ಯುವಕನೊಬ್ಬ ಪ್ರೀತಿಸಿ ಮದುವೆಯಾದ ಹೆಂಡತಿ ಜೊತೆ ಹೆಂಡತಿ ಮನೆಯವರು ಬಿಡುತ್ತಿಲ್ಲ ಎಂದು ನಿರಂಜನ್ ಎಂಬ ಯುವಕನ ತನ್ನ ಅಳಲನ್ನು ತೋಡಿಕೊಂಡಿದ್ದಾನೆ. ಮಾದ್ಯಮ ಮುಂದೆ ಮಾತನಾಡಿದ ಗಂಡ ನಿರಂಜನ. ನನ್ನ ಹೆಂಡತಿಯನ್ನು ಪ್ರೀತಿಸಿ ಮದುವೆಯಾಗಿದ್ದ. ನನ್ನ ಹೆಂಡತಿ ತಾಯಿಗೆ ಆರೋಗ್ಯ ಸರಿಯಿಲ್ಲ ಎಂದು ಮೊದಲು ಕರೆದುಕೊಂಡು ಹೋಗಿದ್ದರು. ಆದರೆ ನನ್ನ ಹೆಂಡತಿ ಮರಳಿ ಬಂದಿರಲ್ಲಿಲ್ಲ. ಕಳೆದ ಎರಡು …

Read More »