ಹುಬ್ಬಳ್ಳಿ: ನಗರದಾದ್ಯಂತ ಬುಧವಾರ ರಾತ್ರಿಯವರೆಗೂ ಸುರಿದ ಭಾರೀ ಮಳೆಗೆ ಚರಂಡಿಯಲ್ಲಿ ಕೊಚ್ಚಿ ಹೋಗಿದ್ದ ಬೈಕ್ ಸವಾರನ ಮೃತದೇಹ ಪತ್ತೆಯಾಗಿದೆ. ನಗರದ ಬೀರಬಂದ ನಗರದ ನಿವಾಸಿ ಹುಸೇನ್‌ಸಾಬ್ ಕಳಸ (58) ಕೊಚ್ಚಿಹೋಗಿದ್ದ ವ್ಯಕ್ತಿ. ಹುಸೇನಸಾಬ್ ಮತ್ತು ಇನ್ನೊಬ್ಬ ಸೇರಿ ಜಮೀನಿನ ಕೆಲಸ ಮುಗಿಸಿಕೊಂಡು ಬೈಕ್‌ನಲ್ಲಿ ರಾತ್ರಿ 10.30ರ ಸುಮಾರಿಗೆ ನೇಕಾರನಗರಕ್ಕೆ ಮರಳುತ್ತಿದ್ದರು. ನೇಕಾರನಗರದ ಸೇತುವೆ ಬಳಿ ಜೋರಾಗಿ ಹರಿಯುತ್ತಿದ್ದ ಮಳೆ ನೀರಲ್ಲಿ ಕೆಲವರು ದಾಟಿ ಮುಂದೆ ಸಾಗಿದ್ದಾರೆ. ಇದನ್ನು ನೋಡಿದ ಹುಸೇನ್ ಸಾಬ್ …
Read More »ಹುಬ್ಬಳ್ಳಿ- ರಾಮೇಶ್ವರಂ- ಹುಬ್ಬಳ್ಳಿ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲಿನ ಅವಧಿ ವಿಸ್ತರಣೆ:
ಹುಬ್ಬಳ್ಳಿ: ಕಾರ್ಯಾಚರಣೆಯ ನಿರ್ಬಂಧಗಳನ್ನು ಗಮನದಲ್ಲಿಟ್ಟುಕೊಂಡು, ರೈಲ್ವೆ ಮಂಡಳಿಯು 07355/07356 ಸಂಖ್ಯೆಯ ಎಸ್ಎಸ್ಎಸ್ ಹುಬ್ಬಳ್ಳಿ – ರಾಮೇಶ್ವರಂ – ಎಸ್ಎಸ್ಎಸ್ ಹುಬ್ಬಳ್ಳಿ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲಿನ ಸಂಚಾರ ಅವಧಿಯನ್ನು ವಿಸ್ತರಿಸಲು ಅನುಮೋದನೆ ನೀಡಿದೆ. ಈ ರೈಲು ಇನ್ನು ಮುಂದೆ ರಾಮೇಶ್ವರಂ ಬದಲಿಗೆ ರಾಮನಾಥಪುರಂನಲ್ಲಿ ತನ್ನ ಪ್ರಯಾಣ ಕೊನೆಗೊಳಿಲಿದೆ. ಈ ಹಿಂದೆ ರಾಮೇಶ್ವರಂನಲ್ಲಿ ಕೊನೆಗೊಳ್ಳುತ್ತಿದ್ದ 07355 ಸಂಖ್ಯೆಯ ಎಸ್ಎಸ್ಎಸ್ ಹುಬ್ಬಳ್ಳಿ – ರಾಮೇಶ್ವರಂ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲು ಈಗ ರಾಮನಾಥಪುರಂನಲ್ಲಿ ಕೊನೆಗೊಳ್ಳಲಿದೆ. …
Read More »ಕಡಿಮೆ ಬಡ್ಡಿ ದರದಲ್ಲಿ ಸಾಲ ಕೊಡುವುದಾಗಿ ನಕಲಿ ನೋಟುಗಳನ್ನು ಕೊಟ್ಟ ಕಿರಾತಕನ ಬಂಧನ
ಕಡಿಮೆ ಬಡ್ಡಿ ದರದಲ್ಲಿ ಸಾಲ ಕೊಡುವುದಾಗಿ ನಕಲಿ ನೋಟುಗಳನ್ನು ಕೊಟ್ಟ ಕಿರಾತಕನ ಬಂಧನ ವ್ಯವಹಾರವೊಂದಕ್ಕೆ ಕಡಿಮೆ ಬಡ್ಡಿದರದಲ್ಲಿ ಹಣ ಕೊಡಿಸುವುದಾಗಿ ನಂಬಿಸಿದ್ದ ಆರೋಪಿಯೋರ್ವನಿಂದ ಬರೋಬ್ಬರಿ 1,87,45,000 ನಕಲಿ ನೋಟುಗಳನ್ನು ಜಪ್ತಿ ಮಾಡುವಲ್ಲಿ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರೇಟ್ ಯಶಸ್ವಿಯಾಗಿದೆ. ಈ ಕುರಿತು ನಗರದಲ್ಲಿಂದು ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರ್ ಎನ್. ಶಶಿಕುಮಾರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಡಿಮೆ ಬಡ್ಡಿದರದಲ್ಲಿ ಸಾಲ ಕೊಡುವುದಾಗಿ ಹೇಳಿ ಸಾಲದ ರೂಪದಲ್ಲಿ ನಕಲಿ ನೋಟುಗಳನ್ನು ನೀಡಿ ವಂಚಿಸಿರುವ ಪ್ರಕರಣಕ್ಕೆ …
Read More »ಧಾರವಾಡದ ಕ್ಯಾರಕೊಪ್ಪದಲ್ಲಿ ಶಿಕ್ಷಕರ ಮನೆಗೆ ಕನ್ನ…. 70 ಗ್ರಾಂ ಚಿನ್ನಾಭರಣ, ನಗದು ಲೂಟಿ
ಧಾರವಾಡದ ಕ್ಯಾರಕೊಪ್ಪದಲ್ಲಿ ಶಿಕ್ಷಕರ ಮನೆಗೆ ಕನ್ನ…. 70 ಗ್ರಾಂ ಚಿನ್ನಾಭರಣ, ನಗದು ಲೂಟಿ ರಜೆ ಮೇಲೆ ಬೇರೆ ಊರಿಗೆ ತೆರಳಿದ್ದ ಇಬ್ಬರು ಶಿಕ್ಷಕರ ಮನೆಗಳಿಗೆ ಕನ್ನ ಹಾಕಿದ ಚಾಲಾಕಿ ಖದೀಮ ಕಳ್ಳರು, ಮನೆಯಲ್ಲಿದ್ದ ಚಿನ್ನ ಹಾಗೂ ನಗದು ದೋಚಿಕೊಂಡು ಪರಾರಿಯಾದ ಘಟನೆ ಧಾರವಾಡದ ಕ್ಯಾರಕೊಪ್ಪ ಗ್ರಾಮದ ಬಳಿ ನಡೆದಿದೆ. ಧಾರವಾಡ ತಾಲೂಕಿನ ಕ್ಯಾರಕೊಪ್ಪ ಗ್ರಾಮದ ರಸ್ತೆಯಲ್ಲಿರುವ ಲೋಕನಾಥ್ ಮತ್ತು ಸೋಮನಗೌಡ ಪಾಟೀಲ್ ಎನ್ನುವವರ ಮನೆಯಲ್ಲೇ ಕಳ್ಳತನವಾಗಿದೆ. ಇಬ್ಬರು ವೃತಿಯಲ್ಲಿ ಶಿಕ್ಷಕರಾಗಿದ್ದು, …
Read More »ಹುಬ್ಬಳ್ಳಿ: ಫಿಶ್ ಮಾರ್ಕೆಟ್ ತೆರವಿಗೆ ವ್ಯಾಪಾರಸ್ಥರ ವಿರೋಧ
ಹುಬ್ಬಳ್ಳಿ: ಫಿಶ್ ಮಾರ್ಕೆಟ್ ತೆರವಿಗೆ ವ್ಯಾಪಾರಸ್ಥರ ವಿರೋಧ ಬೆಳ್ಳಂ ಬೆಳಗ್ಗೆ ಹುಬ್ಬಳ್ಳಿಯ ಗಣೇಶಪೇಟ್ ಫಿಶ್ ಮಾರ್ಕೆಟ್‌ದಲ್ಲಿ ಪಾಲಿಕೆ ಜೆಸಿಬಿ ಸದ್ದು ಮಾಡಿದೆ. ಹಲವಾರು ದಿನಗಳಿಂದ ನೋಟಿಸ್ ನೀಡಿದ್ರೂ ಕೂಡ ವ್ಯಾಪಾರಸ್ಥರ ಅಂಗಡಿಗಳನ್ನು ತೆಗೆದುಕೊಂಡಿರಲಿಲ್ಲ. ಅದಕ್ಕಾಗಿ ಇಂದು ಪಾಲಿಕೆ ಅಧಿಕಾರಿಗಳು ಫೀಲ್ಡ್‌ಗೆ ಇಳಿದು, ಫಿಶ್ ಮಾರ್ಕೆಟ್ ತೆರವಿಗೆ ನಿಂತಿದ್ದಾರೆ. ಅದಕ್ಕೆ ವ್ಯಾಪಾರಸ್ಥರು ವಿರೋಧ ಮಾಡುತ್ತಿದ್ದಾರೆ. ಸ್ಮಾರ್ಟ್ ಸಿಟಿ ಅಡಿಯಲ್ಲಿ ಹೊಸದಾಗಿ ಫೀಶ್ ಮಾರ್ಕೆಟ್ ನಿರ್ಮಾಣ ಮಾಡಿದ್ದಾರೆ. ಆದ್ರೆ ಈ ಎಲ್ಲ ವ್ಯಾಪಾರಸ್ಥರು …
Read More »ಧಾರವಾಡ ಜಿಲ್ಲೆಯಾದ್ಯಂತ ಚುರುಕುಗೊಂಡ ಕೃಷಿ ಚಟುವಟಿಕೆ… ಮುಂಗಾರು ಬಿತ್ತನೆಗೆ ಮುಂದಾದ ಅನ್ನದಾತರು
ಧಾರವಾಡ ಜಿಲ್ಲೆಯಾದ್ಯಂತ ಚುರುಕುಗೊಂಡ ಕೃಷಿ ಚಟುವಟಿಕೆ… ಮುಂಗಾರು ಬಿತ್ತನೆಗೆ ಮುಂದಾದ ಅನ್ನದಾತರು ಕಳೆದ ಒಂದುವಾರದ ಹಿಂದೆ ಸುರಿದ ಪೀರ್ವ ಮುಂಗಾರಿನಿಂದ ರೈತ ಸಮುದಾಯ ಫುಲ್ ಖುಷ್ ಆಗಿದ್ದು, ಮಳೆ ಬೀಡುವಿನ ಹಿನ್ನೆಲೆಯಲ್ಲಿ ರೈತರು ಈಗ ತಮ್ಮ ತಮ್ಮ ಕೃಷಿ ಭೂಮಿಯಲ್ಲಿ ಬೂಸಿಯಾಗಿದ್ದಾರೆ. ಮುಂಗಾರು ಬಿತ್ತನೆಗೆ ಕೆಲವರು ಪೂರ್ವ ತಯಾರಿ ಮಾಡಿಕೊಳ್ಳುತ್ತಿದ್ದು, ಇನ್ನೂ ಕೆಲವು ರೈತರು ಈಗ ಮಮಗಾರು ಬಿತ್ತನೆಗೆ ನಡೆಸುತ್ತಿದ್ದಾರೆ. ಹೌದು ಧಾರವಾಡ ಜಿಲ್ಲೆಯಾದ್ಯಂತ ಉತ್ತಮ ಪೂರ್ವ ಮುಂಗಾರು ಮಳೆಯಾಗಿದ್ದು, …
Read More »ನೈರುತ್ಯ ರೈಲ್ವೆ ಮಹತ್ವದ ಹೆಜ್ಜೆ
ಹುಬ್ಬಳ್ಳಿ: ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ನೀಡುವ ನೈರುತ್ಯ ರೈಲ್ವೆಯು ಇದೇ ಮೊದಲ ಬಾರಿಗೆ ಕಟ್ಟಡ ಕಾಮಗಾರಿಗಳ ಸ್ಥಳಗಳಲ್ಲಿ ಸುರಕ್ಷತೆ, ಗುಣಮಟ್ಟ ಮತ್ತು ದಕ್ಷತೆ ಸುಧಾರಿಸಲು ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸುತ್ತಿದೆ. ಈ ಮೂಲಕ ಸುರಕ್ಷಿತ ಮತ್ತು ದಕ್ಷ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿಗಾಗಿ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ನೈರುತ್ಯ ರೈಲ್ವೆ ಮಹತ್ವದ ಹೆಜ್ಜೆ ಇಟ್ಟಿದೆ. ನೈರುತ್ಯ ರೈಲ್ವೆ ವ್ಯಾಪ್ತಿಯ ಪ್ರಮುಖವಾದ ಎರಡು ಕಾಮಗಾರಿ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಆಲಮಟ್ಟಿ ಸೇತುವೆ ಸಂಖ್ಯೆ 63ಡಿ …
Read More »ಧಾರವಾಡದಲ್ಲಿ ಬೀದಿಗೆ ಇಳಿದ ನರೇಗಾ ಗುತ್ತಿಗೆ ನೌಕರರು… ಸೇವಾ ಭದ್ರತೆ ಜತೆಗೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ.
ಧಾರವಾಡದಲ್ಲಿ ಬೀದಿಗೆ ಇಳಿದ ನರೇಗಾ ಗುತ್ತಿಗೆ ನೌಕರರು… ಸೇವಾ ಭದ್ರತೆ ಜತೆಗೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ. ಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ನರೇಗಾ ನೌಕರರಿಗೆ ಸೇವಾ ಭದ್ರತೆ, ಆರೋಗ್ಯ ವಿಮೆ, ಸಕಾಲಕ್ಕೆ ವೇತನ ಪಾವತಿ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಧಾರವಾಡದಲ್ಲಿ ನರೇಗಾ ಗುತ್ತಿಗೆ ನೌಕರರು ಧರಣಿ ಸತ್ಯಾಗ್ರಹ ನಡೆಸಿ ಸರ್ಕಾರಗಳ ವಿರುದ್ಧ ಆಕ್ರೋಶ ಹೊರಹಾಕಿದರು. ಕರ್ನಾಟಕ ರಾಜ್ಯ ಮಹಾತ್ಮಾ ಗಾಂಧಿ ನರೇಗಾ ನೌಕರರ ಕ್ಷೇಮಾಭಿವೃದ್ಧಿ …
Read More »ಧಾರವಾಡದಲ್ಲಿ ವಿದ್ಯಾರ್ಥಿಗಳ ನೂತನ ವಸತಿ ನಿಲಯ ಉದ್ಘಾಟಿಸಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
ಧಾರವಾಡದಲ್ಲಿ ವಿದ್ಯಾರ್ಥಿಗಳ ನೂತನ ವಸತಿ ನಿಲಯ ಉದ್ಘಾಟಿಸಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಧಾರವಾಡ ನಗರದ ಧಾರವಾಡ ಉದಯ ಹಾಸ್ಟೆಲ್ ಬಳಿ ಹುಬ್ಬಳ್ಳಿ, ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದಲ್ಲಿ ಲೋಕೋಪಯೋಗಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆಯ 2023-24ನೇ ಸಾಲಿನ ಠೇವಣಿ ವಂತಿಗೆ ಅಡಿಯಲ್ಲಿ ದೀನ್ ದಯಾಳ ಉಪಾಧ್ಯಾಯ ಅವರ ಹೆಸರಿನಡಿ ಸೌಹಾರ್ಧ ವಿದ್ಯಾರ್ಥಿ, ವಿದ್ಯಾರ್ಥಿನಿಯರ ಈ ವಸತಿ ನಿಲಯಗಳನ್ನು ನಿರ್ಮಿಸಲಾಗಿದೆ. ವಿಶಾಲವಾದ ಪ್ರದೇಶದಲ್ಲಿ ಒಟ್ಟು ಆರು ಬ್ಲಾಕ್ ಅಡಿ ವಸತಿ …
Read More »ಹುಬ್ಬಳ್ಳಿಯಲ್ಲಿ 11 ತಿಂಗಳ ಮಗುವಿಗೆ ಕೋವಿಡ್
ಧಾರವಾಡ: ಕೊರೊನಾ ವೈರಸ್ ಮತ್ತೆ ಉಲ್ಬಣಗೊಳ್ಳುತ್ತಿರುವ ಬೆನ್ನಲ್ಲೇ ಹುಬ್ಬಳ್ಳಿ ಭೈರಿದೇವರಕೊಪ್ಪದ 11 ತಿಂಗಳ ಮಗುವಿನಲ್ಲಿ ಕೋವಿಡ್ ಪತ್ತೆ ದೃಢಪಟ್ಟಿದೆ. ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮಗುವಿಗೆ ಹೃದಯ ಕಾಯಿಲೆ ಇದ್ದು, ಚಿಕಿತ್ಸೆ ಮುಂದುವರೆದಿದೆ. ಮಗುವಿನ ಆರೋಗ್ಯ ಸ್ಥಿರವಾಗಿದೆ ಎಂದು ಜಿಲ್ಲಾಡಳಿತ ಪ್ರಕಟಣೆಯಯಲ್ಲಿ ತಿಳಿಸಿದೆ. ಮುನ್ನೆಚ್ಚರಿಕೆ ಅಗತ್ಯ: ಸಾಧ್ಯವಾದಷ್ಟು ಜನಸಂದಣಿಯಿಂದ ದೂರ ಇರುವಂತೆ, ಮನೆಯಿಂದ ಹೊರಹೋಗುವಾಗ ಮಾಸ್ಕ್ ಧರಿಸುವಂತೆ ಮತ್ತು ಸಾಮಾಜಿಕ ಅಂತರ ಕಾಪಾಡುವಂತೆ ಹಾಗೂ ಗರ್ಭಿಣಿಯರು, ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ, …
Read More »