Breaking News

ಸಿನೆಮಾ

50 ದೇಶಗಳಲ್ಲಿ ವಿಕ್ರಾಂತ್ ರೋಣ ರಿಲೀಸ್; 3ಡಿ ರೂಪದಲ್ಲಿರಲಿದೆ: ಸುದೀಪ್

ಕಿಚ್ಚ ಸುದೀಪ್‌ ನಟನೆಯ ‘ವಿಕ್ರಾಂತ್‌ ರೋಣ’ ಚಿತ್ರದ ಟೀಸರ್‌ ಹಾಗೂ ಕಟೌಟ್‌ ದುಬೈನಲ್ಲಿರುವ ವಿಶ್ವದ ಅತ್ಯಂತ ಎತ್ತರದ ಕಟ್ಟಡ ಬುರ್ಜ್‌ ಖಲೀಫಾ ಮೇಲೆ ರಾರಾಜಿಸಿ ವಿಶ್ವದ ಗಮನಸೆಳೆದಿತ್ತು. ಇದರ ಬೆನ್ನಲ್ಲೇ ಹಲವು ಭಾಷೆಗಳಲ್ಲಿ ತೆರೆಯ ಮೇಲೆ ಬರಲಿರುವ ಈ ಚಿತ್ರವು 3ಡಿ ರೂಪದಲ್ಲಿ ಇರಲಿದೆ ಎಂದು ಸುದೀಪ್‌ ತಿಳಿಸಿದ್ದಾರೆ. ಚಂದನವನದಲ್ಲಿ ಸುದೀಪ್‌ 25 ವಸಂತಗಳನ್ನು ಪೂರೈಸಿದ ಅಂಗವಾಗಿ ವಿಕ್ರಾಂತ್‌ ರೋಣ ಚಿತ್ರತಂಡವು ಆಯೋಜಿಸಿದ್ದ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಸುದೀಪ್‌ ಈ ಕುರಿತು …

Read More »

ನಾಯಕ ನಟನಾಗಿ ಮಿಂಚಲು ಮುಂದಾದ ‘ಪುರುಷೋತ್ತಮ’ ಜಿಮ್ ರವಿ

ಬೆಂಗಳೂರು, ಫೆ.10- ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿರುವ ಬಾಡಿಬಿಲ್ಡರ್ ಜಿಮ್ ರವಿ ಅವರು ಈಗ ನಾಯಕನಟರಾಗಿ ಮಿಂಚಲು ಮುಂದಾಗಿದ್ದಾರೆ. ಈಗಾಗಲೇ ಜಿಮ್ ರವಿ ಅವರು ರಾಜ್ಯ, ರಾಷ್ಟ್ರ ಅಷ್ಟೇ ಏಕೆ ಅಂತ ರಾಷ್ಟ್ರಮಟ್ಟದಲ್ಲೂ ಬಾಡಿ ಬಿಲ್ಡಿಂಗ್‍ನಲ್ಲಿ ಹೆಸರು ಮಾಡಿದ್ದಾರೆ. ಅಲ್ಲದೆ, ಕಿರುತೆರೆ, ಹಿರಿತೆರೆಯಲ್ಲೂ ನಟಿಸಿದ್ದಾರೆ. ಕಳೆದ ಬಾರಿ ಬಿಗ್‍ಬಾಸ್ ರಿಯಾಲಿಟಿ ಶೋನಲ್ಲಿ ಅವರು ಮಿಂಚಿದ್ದರು. ಇದೀಗ ಚಲನಚಿತ್ರದಲ್ಲಿ ನಾಯಕನಾಗಿ ನಟಿಸುವ ಮೂಲಕ ಅಭಿಮಾನಿಗಳ ಮನಗೆಲ್ಲಲು ಸಿದ್ಧರಾಗಿದ್ದಾರೆ. ರವಿ ಅವರು ಕಳೆದ …

Read More »

ಚಿತ್ರಮಂದಿರಕ್ಕೆ ಮಾತ್ರ ಏಕೆ ಶೇ.50ರಷ್ಟು ಪ್ರೇಕ್ಷಕರ ನಿರ್ಬಂಧ ಪುನಿತ್ ರಾಜ್ ಕುಮಾರ್ ರಾಜ್ಯ ಸರ್ಕಾರದ ವಿರುದ್ಧ ಸಿಡಿದೆದ್ದಿದ್ದಾರೆ.

ಬೆಂಗಳೂರು : ಖಾಸಗಿ ಸಮಾರಂಭಕ್ಕೆ, ಕಾರ್ಯಗಾರಕ್ಕೆ, ಸಾರ್ವಜನಿಕ ಪ್ರಯಾಣಕ್ಕೆ, ಮಾರ್ಕೆಟ್, ಪ್ರವಾಸಿ ಸ್ಥಳಗಳಲ್ಲಿ ಜನಸಾಮಾನ್ಯರ ಓಡಾಟಕ್ಕೆ ಅವಕಾಶ ನೀಡಲಾಗಿದೆ. ಆದ್ರೇ ಚಿತ್ರಮಂದಿರದಲ್ಲಿ ಚಿತ್ರವೀಕ್ಷಿಸಲು ಏಕೆ 50ರಷ್ಟು ಪ್ರೇಕ್ಷಕರಿಗೆ ಮಾತ್ರವೇ ಅವಕಾಶದ ನಿರ್ಬಂಧ ಎಂಬುದಾಗಿ ನಟ ಪುನಿತ್ ರಾಜ್ ಕುಮಾರ್ ರಾಜ್ಯ ಸರ್ಕಾರದ ವಿರುದ್ಧ ಸಿಡಿದೆದ್ದಿದ್ದಾರೆ. ಈ ಕುರಿತಂತೆ ನಟ ಧೃವ ಸರ್ಜಾ ಅವರ ಬೆಂಬಲಕ್ಕೆ ನಿಂತು ಟ್ವಿಟ್ ಮಾಡಿರುವಂತ ನಟ ಪುನಿತ್ ರಾಜ್ ಕುಮಾರ್, ಖಾಸಗಿ ಸಮಾರಂಭಗಳು, ಪೂಜಾ ಸ್ಥಳಗಳು, …

Read More »

ಪ್ರಪಂಚದ ಅತಿ ಎತ್ತರದ ಕಟ್ಟಡ ಬುರ್ಜ್ ಖಲೀಫಾ ಮೇಲೆ ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾದ ಟೈಟಲ್

ಪ್ರಪಂಚದ ಅತಿ ಎತ್ತರದ ಕಟ್ಟಡ ಬುರ್ಜ್ ಖಲೀಫಾ ಮೇಲೆ ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾದ ಟೈಟಲ್ ಲೋಗೋ ಬಿಡುಗಡೆಯಾಗಿದೆ. ಬಣ್ಣದ ಲೋಕಕ್ಕೆ ಕಾಲಿಟ್ಟು 25 ವರ್ಷಗಳನ್ನು ಪೂರೈಸಿರುವ ಕಿಚ್ಚ ಸುದೀಪ್, 25 ವರ್ಷದ ಪಯಣವನ್ನು ವಿಶ್ವದ ಅತೀ ಎತ್ತರದ ಕಟ್ಟಡ ಬುರ್ಜ್ ಖಲೀಫಾ ಮೇಲೆ ನೋಡಿ ಸಂಭ್ರಮಿಸಿದ್ದಾರೆ. ಸುದೀಪ್ ನಟಿಸಿದ ಚಿತ್ರಗಳ ಝಲಕ್, ಕ್ರಿಕೆಟ್, ಗಾಯನ ಸೇರಿದಂತೆ ಕಿಚ್ಚ ನಡೆದು ಬಂದ ಹಾದಿಯನ್ನು ಟೀಸರ್ ಮೂಲಕ ಬಿತ್ತರಿಸಲಾಯಿತು. …

Read More »

ರಾಜಮೌಳಿಯ RRR ಚಿತ್ರಕ್ಕೆ ಎದುರಾಗಿ ಅಜಯ್ ದೇವಗನ್ ಸಿನಿಮಾ?

ಎಸ್ ಎಸ್ ರಾಜಮೌಳಿ ನಿರ್ದೇಶನದಲ್ಲಿ ತಯಾರಾಗುತ್ತಿರುವ ಆರ್ ಆರ್ ಆರ್ ಸಿನಿಮಾ ಅಕ್ಟೋಬರ್ 13, 2021 ರಂದು ತೆರೆಗೆ ಬರ್ತಿದೆ. ಜೂನಿಯರ್ ಎನ್‌ ಟಿ ಆರ್ ಹಾಗೂ ರಾಮ್ ಚರಣ್ ತೇಜ ಒಟ್ಟಿಗೆ ನಟಿಸುತ್ತಿರುವ ಈ ಸಿನಿಮಾದ ಮೇಲೆ ಎಲ್ಲ ಚಿತ್ರರಂಗದ ಕಣ್ಣಿದೆ. ‘ಬಾಹುಬಲಿ’ ಸರಣಿ ಬಳಿಕ ರಾಜಮೌಳಿ ಕೈಗೆತ್ತಿಕೊಂಡಿರುವ ಸಿನಿಮಾ ಇದಾಗಿದ್ದು, ಸ್ವಾತಂತ್ರ್ಯ ವೀರರ ಜೀವನದ ಕಥೆಯನ್ನು ಹೇಳುತ್ತಿದ್ದಾರೆ. ಭಾರಿ ಬಜೆಟ್ ಹಾಗೂ ಅದ್ಧೂರಿ ದೃಶ್ಯ ವೈಭವದೊಂದಿಗೆ ಸಿದ್ಧವಾಗುತ್ತಿರುವ …

Read More »

ದುಬೈಗೆ ಬಂದಿಳಿದ ಅಭಿನಯ ಚಕ್ರವರ್ತಿ ಸುದೀಪ್‌ಗೆ ಭರ್ಜರಿ ಸ್ವಾಗತ

ಅಭಿನಯದ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಇಂದು (ಜನವರಿ 27) ದುಬೈ ತಲುಪಿದ್ದಾರೆ. ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಸುದೀಪ್ ಅವರನ್ನು ದುಬೈ ಸಂಸ್ಕೃತಿಯಂತೆ ಸ್ವಾಗತ ಕೋರಿ ಬರಮಾಡಿಕೊಂಡಿದ್ದಾರೆ. ಕಿಚ್ಚ ಸುದೀಪ್ ದುಬೈ ವಿಮಾನ ನಿಲ್ದಾಣಕ್ಕೆ ಬಂದಿಳಿದಿರುವ ವಿಡಿಯೋ ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸುದೀಪ್ ಅವರು ವಿಮಾನ ಇಳಿದು ಬರುತ್ತಿದ್ದಂತೆ ಹೂವಿನ ಮಾಲೆ ಹಾಕಿ, ಹೂಗುಚ್ಛ ನೀಡಿ ಹಾಗೂ ವಿಶೇಷವಾದ ಉಡುಗೊರೆಯನ್ನು ನೀಡಿ ಸ್ವಾಗತ …

Read More »

ಬಿಗ್ ಬಾಸ್ ಖ್ಯಾತಿಯ ಜಯಶ್ರೀ ರಾಮಯ್ಯ ನೇಣಿಗೆ ಶರಣು !

ಬೆಂಗಳೂರು : ಬಿಗ್ ಬಾಸ್ ಖ್ಯಾತಿಯ ಜಯಶ್ರೀ ರಾಮಯ್ಯ ನಿನ್ನೆ ರಾತ್ರಿ ಮಾಗಡಿ ರಸ್ತೆಯ ಪ್ರಗತಿ ಲೇಔಟ್ ನಲ್ಲಿರುವಂತ ಸಂಧ್ಯಾಕಿರಣ ವೃದ್ಧಾಶ್ರಮದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.   ಈ ಹಿಂದೆ ಫೇಸ್​ಬುಕ್​ ಪೋಸ್ಟ್​ ನಲ್ಲಿಯೂ ನಟಿ ಜಯಶ್ರೀ ರಾಮಯ್ಯ ತಮಗೆ ದಯಾಮರಣ ಕೊಡಿ ಅಂತಾ ಹಾಕಿಕೊಂಡಿದ್ದರು. ಆ ವೇಳೆಯೇ ಜಯಶ್ರೀ ರಾಮಯ್ಯ ಎಷ್ಟರ ಮಟ್ಟಿಗೆ ಅವರು ಖಿನ್ನತೆಗೆ ಒಳಗಾಗಿದ್ದಾರೆ ಅನ್ನೋದು ಭಾರೀ ಚರ್ಚೆಗೆ ಕಾರಣವಾಗಿತ್ತು.   ತಮ್ಮ ಫೇಸ್​​ಬುಕ್​​ನಲ್ಲಿ …

Read More »

ರಾಮ ಮಂದಿರ ನಿರ್ಮಾಣಕ್ಕೆ ಭಾರಿ ಮೊತ್ತ ದೇಣಿಗೆ ನೀಡಿದ ಅಮೂಲ್ಯ ದಂಪತಿ

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಈಗಾಗಲೇ ಚಾಲನೆ ದೊರೆತಿದ್ದು. ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹಿಸುವ ಕಾರ್ಯ ದೇಶದಾದ್ಯಂತ ನಡೆಯುತ್ತಿದೆ. ಸಮರ್ಪಣಾ ಅಭಿಯಾನದ ಹೆಸರಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹಣೆ ನಡೆಯುತ್ತಿದ್ದು, ಹಲವಾರು ರಾಜಕಾರಣಿಗಳು, ಸಿನಿಮಾ ಸೆಲೆಬ್ರಿಟಿಗಳು, ಕ್ರೀಡಾಪಟುಗಳು ಸೇರಿದಂತೆ ಹಲವಾರು ಮಂದಿ ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡುತ್ತಿದ್ದಾರೆ. ಕನ್ನಡದ ನಟಿ ಅಮೂಲ್ಯಾ ಹಾಗೂ ಪತಿ ಜಗದೀಶ್ ಸಹ ರಾಮ ಮಂದಿರ ನಿರ್ಮಾಣಕ್ಕೆ ದೊಡ್ಡ ಮೊತ್ತದ ಹಣವನ್ನೇ …

Read More »

ಪೊಗರು ಸಿನಿಮಾ 1000ಕ್ಕಿಂತ ಹೆಚ್ಚು ಥಿಯೇಟರ್‌ನಲ್ಲಿ ಪ್ರದರ್ಶನವಾಗಲಿದೆ.

ಫೆಬ್ರವರಿ 19 ರಂದು ಧ್ರುವ ಸರ್ಜಾ ನಟನೆಯ ಪೊಗರು ಸಿನಿಮಾ ತೆರೆಕಾಣುತ್ತಿದೆ. ಕನ್ನಡ, ತೆಲುಗು ಹಾಗೂ ತಮಿಳು ಭಾಷೆಯಲ್ಲಿ ಪೊಗರು ಬಿಡುಗಡೆಯಾಗುತ್ತಿದೆ. ವಿಶೇಷ ಅಂದ್ರೆ ಪೊಗರು ಸಿನಿಮಾ 1000ಕ್ಕಿಂತ ಹೆಚ್ಚು ಥಿಯೇಟರ್‌ನಲ್ಲಿ ಪ್ರದರ್ಶನವಾಗಲಿದೆ. ಬುಧವಾರ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ಆಯೋಜಿಸಿದ್ದ ಪೊಗರು ಚಿತ್ರತಂಡ ಈ ಕುರಿತು ಮಾಹಿತಿ ಹಂಚಿಕೊಂಡಿದೆ. ಪೊಗರು ಚಿತ್ರದಲ್ಲಿ ಧ್ರುವ ಸರ್ಜಾ ಬಾಡಿ ಟ್ರಾನ್ಸ್‌ಫರ್‌ಮೇಶನ್‌ಗೆ ಹೆಚ್ಚು ಒತ್ತು ನೀಡಿದ್ದು, ಹಾಗಾಗಿ, ಸಿನಿಮಾ ವಿಳಂಬವಾಗಿದೆ ಎಂದು ತಿಳಿಸಿದ್ದಾರೆ. ಪೊಗರು ಚಿತ್ರದಲ್ಲಿ …

Read More »

ಶಾರುಖ್ ಖಾನ್ ಅಭಿನಯದ ಬಿಗ್ ಬಜೆಟ್ ಸಿನಿಮಾ ನಿರ್ದೇಶಿಸುತ್ತಿರುವ ಹಿಟ್ ನಿರ್ದೇಶಕನಿಗೆ ಸೆಟ್‌ನಲ್ಲಿಯೇ ಸಹಾಯಕನೊಬ್ಬ ಕಪಾಳಕ್ಕೆ ಹೊಡೆದಿದ್ದಾನೆ.

ಶಾರುಖ್ ಖಾನ್ ಅಭಿನಯದ ಬಿಗ್ ಬಜೆಟ್ ಸಿನಿಮಾ ನಿರ್ದೇಶಿಸುತ್ತಿರುವ ಹಿಟ್ ನಿರ್ದೇಶಕನಿಗೆ ಸೆಟ್‌ನಲ್ಲಿಯೇ ಸಹಾಯಕನೊಬ್ಬ ಕಪಾಳಕ್ಕೆ ಹೊಡೆದಿದ್ದಾನೆ. ಶಾರುಖ್ ಖಾನ್ ಅಭಿನಯದ ‘ಪಠಾಣ್’ ಸಿನಿಮಾದ ನಿರ್ದೇಶಕ ಸಿದ್ಧಾರ್ಥ್ ಆನಂದ್ ಗೆ ಸಹಾಯಕ ನಿರ್ದೇಶಕನೊಬ್ಬ ಕಪಾಳಕ್ಕೆ ಹೊಡೆದಿದ್ದಾನೆ ಎಂದು ಬಾಲಿವುಡ್ ಹಂಗಾಮ ಹಾಗೂ ಇನ್ನೂ ಕೆಲವು ಬಾಲಿವುಡ್ ಪತ್ರಿಕೆಗಳು ವರದಿ ಮಾಡಿವೆ. ಸಿದ್ಧಾರ್ಥ್ ಆನಂದ್ ತುಸು ಸಿಟ್ಟಿನ ವ್ಯಕ್ತಿಯಾಗಿದ್ದು, ಸೆಟ್‌ನಲ್ಲಿ ತಮ್ಮ ಸಹಾಯಕನೊಬ್ಬ ಸೂಕ್ತವಾಗಿ ಕೆಲಸ ಮಾಡಿಲ್ಲವೆಂಬ ಕಾರಣಕ್ಕೆ ಸಹಾಯಕನ ಕಪಾಳಕ್ಕೆ …

Read More »