ರಾಷ್ಟ್ರೀಯ

ಮಾಜಿ ಕೇಂದ್ರ ಸಚಿವ ಜಸ್ವಂತ್‌ ಸಿಂಗ್‌ ವಿಧಿವಶರಾಗಿದ್ದಾರೆ.

ನವದೆಹಲಿ : ಮಾಜಿ ಕೇಂದ್ರ ಸಚಿವ ಜಸ್ವಂತ್‌ ಸಿಂಗ್‌ ವಿಧಿವಶರಾಗಿದ್ದಾರೆ. 82 ವರ್ಷದ ಜಸ್ವಂತ್‌ ಸಿಂಗ್‌ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ಸಚಿವ ರಾಜನಾಥ್‌ ಸಿಂಗ್‌ ಸೇರಿದಂತೆ ಹಲವು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ. ಭಾರತೀಯ ಸೇನೆಯಲ್ಲಿ ಕಾರ್ಯ ನಿರ್ವಹಿಸಿದ್ದ ಜಸ್ವಂತ್‌ ಸಿಂಗ್‌ ಬಳಿಕ ರಾಜಕೀಯಕ್ಕೆ ಪ್ರವೇಶಿಸಿ ಸಂಸತ್‌ ಗೆ ಆಯ್ಕೆಯಾಗಿದ್ದರು. ಅಟಲ್‌ ಬಿಹಾರಿ ವಾಜಪೇಯಿ ಸಚಿವ ಸಂಪುಟದಲ್ಲಿ ಹಲವಾರು ಪ್ರಮುಖ ಖಾತೆಗಳನ್ನು ಜಸ್ವಂತ್‌ ಸಿಂಗ್‌ ನಿಭಾಯಿಸಿದ್ದರು.‌ ಜಸ್ವಂತ್‌ ಸಿಂಗ್‌ …

Read More »

ಬೆಳಗಾವಿ: ಆರ್‌ಸಿಯು ಪರೀಕ್ಷೆ ಮುಂದಕ್ಕೆ

ಬೆಳಗಾವಿ: ‘ರೈತ ಸಂಘಟನೆಗಳಿಂದ ಸೆ. 28ರಂದು ಕರ್ನಾಟಕ ಬಂದ್‌ಗೆ ಕರೆ ನೀಡಿರುವುದರಿಂದ ಅಂದು ನಿಗದಿಯಾಗಿದ್ದ ಎಲ್ಲ ವಿಷಯಗಳ ಪರೀಕ್ಷೆಯನ್ನು ಸೆ. 29ಕ್ಕೆ ಮುಂದೂಡಲಾಗಿದೆ’ ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಂ. ರಾಮಚಂದ್ರಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

Read More »

ಬೆಳಗಾವಿ: ಗರ್ಭಿಣಿ ಸೇರಿ ಇಬ್ಬರ ಬರ್ಬರ ಕೊಲೆ

ಬೆಳಗಾವಿ: ತಾಲ್ಲೂಕಿನ ಮಚ್ಚೆ ಗ್ರಾಮದ ಲಕ್ಷ್ಮಿ ನಗರದ ಹೊರವಲಯದಲ್ಲಿ ಶನಿವಾರ ಸಂಜೆ ಐದು ತಿಂಗಳ ಗರ್ಭಿಣಿ ಹಾಗೂ ಮತ್ತೊಬ್ಬ ಮಹಿಳೆಯನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಅದೇ ಗ್ರಾಮದವರಾದ ರೋಹಿಣಿ ಗಂಗಪ್ಪ ಹುಲಿಮನಿ (22) ಹಾಗೂ ರಾಜಶ್ರೀ ರವಿ ಬನ್ನೂರ (21) ಕೊಲೆಯಾದವರು. ‘ಅವರು ವಾಯುವಿಹಾರಕ್ಕೆಂದು ಬ್ರಹ್ಮದೇವರ ದೇವಸ್ಥಾನದ ಕಡೆಗೆ ಹೋಗಿದ್ದಾಗ ಘಟನೆ ನಡೆದಿದೆ. ದ್ವಿಚಕ್ರವಾಹನದಲ್ಲಿ ಬಂದಿದ್ದವರು ಮಹಿಳೆಯರ ಕಣ್ಣಿಗೆ ಖಾರದ ಪುಡಿ ಎರಚಿ, ನಂತರ ಕತ್ತಿಗೆ ಕೊಯ್ದು ಹಾಗೂ ಬೆನ್ನಿಗೆ ಇರಿದು …

Read More »

ರಾಜ್ಯ ಸರ್ಕಾರದಿಂದ ಅನುದಾನ ರಹಿತ ಶಿಕ್ಷಕರಿಗೆ ಭರ್ಜರಿ ಸಿಹಿಸುದ್ದಿ

ಬೆಂಗಳೂರು : ಕೊರೊನಾದಿಂದ ಸಂಕಷ್ಟದಲ್ಲಿರುವ ಅನುದಾನ ರಹಿತ ಶಿಕ್ಷಕರಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದ್ದು, ಅನುದಾನ ರಹಿತ ಶಿಕ್ಷಕರಿಗೆ ಶೀಘ್ರವೇ ನೆರವು ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಮಾಧುಸ್ವಾಮಿ ಭರವಸೆ ನೀಡಿದ್ದಾರೆ. ಕರ್ನಾಟಕ ಧನವಿನಿಯೋಗ ವಿಧೇಯಕ 2020 ಮಂಡಿಸಿದ ಬಳಕ ಜೆಡಿಎಸ್ ನ ಬಸವರಾಜ ಹೊರಟ್ಟಿ, ಕೊರೊನಾ ಸಂಕಷ್ಟದಲ್ಲಿ ಸರ್ಕಾರ ಎಲ್ಲಾ ವರ್ಗದ ಜನರಿಗೂ ನೆರವು ಘೋಷಿಸಿದೆ. ಆದರೆ, ಅನುದಾನ ರಹಿತ ಶಿಕ್ಷಕರಿಗೆ ಸಹಾಯಧನ ನೀಡಿಲ್ಲ. ಹೀಗಾಗಿ ಅನುದಾನ …

Read More »

ಇಂದಿನ ರಾಶಿ ಭವಿಷ್ಯ ಮತ್ತು ಪಂಚಾಂಗ (27-09-2020-ಭಾನುವಾರ)

ನಿತ್ಯ ನೀತಿ: ಹಿಂ ಸೆ ಮತ್ತು ದ್ವೇಷದಿಂದ ಏನನ್ನೂ ಸಾಧಿಸಲಾಗುವುದಿಲ್ಲ. ಅಹಿಂಸೆ ಮತ್ತು ಪ್ರೀತಿಯಿಂದಲೋಕವನ್ನೇ ಜಯಿಸಬಹುದು. -ಡಾ.ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ # ಪಂಚಾಂಗ :ಭಾನುವಾರ, 27.09.2020 ಸೂರ್ಯ ಉದಯ ಬೆ.06.09 / ಸೂರ್ಯ ಅಸ್ತ ಸಂ.06.12 ಚಂದ್ರ ಉದಯ ಬೆ.03.37 / ಚಂದ್ರ ಅಸ್ತ ರಾ.03.11 ಶಾರ್ವರಿ ಸಂವತ್ಸರ / ದಕ್ಷಿಣಾಯಣ / ಶರತ್ ಋತು / ಅಧಿಕ ಆಶ್ವಯುಜ ಮಾಸ / ಶುಕ್ಲ ಪಕ್ಷ / ತಿಥಿ: ಏಕಾದಶಿ(ರಾ.07.47) ನಕ್ಷತ್ರ: …

Read More »

ಇನ್ನೂ 20 ವರ್ಷ ಕಾಂಗ್ರೆಸ್‍ನ್ನು ವಿಪಕ್ಷ ಸ್ಥಾನದಲ್ಲೇ ಕೂರಿಸುತ್ತೇನೆ : ಬಿಎಸ್ವೈ ಚಾಲೆಂಜ್

ಬೆಂಗಳೂರು,  ಮುಂದಿನ ವಿಧಾನಸಭೆ ಚುನಾವಣೆಯಲ್ಲಿ 145ರಿಂದ 150 ಸ್ಥಾನ ಗೆದ್ದು ಇನ್ನೂ 20 ವರ್ಷ ಕಾಂಗ್ರೆಸ್ ವಿರೋಧ ಪಕ್ಷದಲ್ಲೇ ಕೂರುವಂತೆ ಮಾಡುವುದು ನನ್ನ ಗುರಿ. ಅದನ್ನು ಮಾಡುತ್ತೇನೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಸವಾಲು ಹಾಕಿದರು. ಕಾಂಗ್ರೆಸ್ ವಿಧಾನಸಭೆಯಲ್ಲಿ ಮಂಡಿಸಿದ ಅವಿಶ್ವಾಸ ನಿರ್ಣಯದ ಮೇಲೆ ನಡೆದ ಚರ್ಚೆಗೆ ಉತ್ತರ ನೀಡಿದ ಅವರು, ಬಿಡಿಎ ವಸತಿ ಯೋಜನೆಯಲ್ಲಿ ನೀವು ಮಾಡಿರುವ ಆರೋಪ ಕುರಿತು ನೀವು ಸಿಬಿಐಗಾದರೂ ಹೋಗಿ, ಹೈಕೋರ್ಟ್‍ಗಾದರೂ ಹೋಗಿ, ಲೋಕಾಯುಕ್ತಕ್ಕಾದರೂ ಹೋಗಿ, …

Read More »

ಸಂಖ್ಯಾಬಲದ ಕೊರತೆಯಿಂದ ಬಿದ್ದುಹೋಯ್ತು ಕಾಂಗ್ರೆಸ್ ಮಂಡಿಸಿದ್ದ ಅವಿಶ್ವಾಸ ನಿರ್ಣಯ

ಬೆಂಗಳೂರು,   ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಅವರ ಸಂಪುಟ ಮೇಲೆ ವಿಶ್ವಾಸವಿಲ್ಲ ಎಂದು ಕಾಂಗ್ರೆಸ್ ವಿಧಾನಸಭೆಯಲ್ಲಿ ಮಂಡಿಸಿದ್ದ ಅವಿಶ್ವಾಸ ನಿರ್ಣಯ ಸಂಖ್ಯಾಬಲದ ಕೊರತೆಯಿಂದ ಬಿದ್ದು ಹೋಗಿದೆ. ಅವಿಶ್ವಾಸ ನಿರ್ಣಯದ ಬಗ್ಗೆ ಎರಡನೇ ಪ್ರತಿಪಕ್ಷ ಜೆಡಿಎಸ್‍ ತಟಸ್ಥ ನಿಲುವು ಅನುಸರಿಸಿತ್ತು. ಅವಿಶ್ವಾಸವನ್ನು ವಿಭಜನೆಯ ಮತಕ್ಕೆ ಹಾಕುವುದಾದರೆ ಕೊರೊನಾ ಸೋಂಕಿಗೆ ಸಿಲುಕಿ ಚಿಕಿತ್ಸೆ ಪಡೆಯುತ್ತಿರುವ ಶಾಸಕರನ್ನು ಪಿಪಿಇ ಕಿಟ್‍ ಹಾಕಿಸಿ ವಿಧಾನಸಭೆಗೆ ಕರೆ ತರುವುದಾಗಿ ಬಿಜೆಪಿ ಹೇಳಿತ್ತು. ಈ ಕುರಿತಂತೆ ಬೆಳಗ್ಗೆ ನಡೆದ ಚರ್ಚೆಯಲ್ಲಿ …

Read More »

ಸಾಲಬಾಧೆ: ಅಂಜುಟಗಿಯಲ್ಲಿ ಯುವಕ ಆತ್ಮಹತ್ಯೆ

ವಿಜಯಪುರ: ಸಾಲಬಾಧೆ ಹಿನ್ನೆಲೆಯಲ್ಲಿ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂಡಿ ತಾಲೂಕಿನ ಅಂಜುಟಗಿ ಗ್ರಾಮದಲ್ಲಿ ನಡೆದಿದೆ. ಪುಂಡಲೀಕ ಹಂಜಗಿ(23) ನೇಣುಬಿಗಿದುಕೊಂಡ ಯುವಕ. ಅನಾರೋಗ್ಯ ಪೀಡಿತ ತಾಯಿಗೆ ಚಿಕಿತ್ಸೆ ಕೊಡಿಸಲು ಪುಂಡಲೀಕ ಸಾಲಮಾಡಿದ್ದ. ಸಾಲ ಮರುಪಾವತಿಸಲು ಸಾಧ್ಯವಾಗದ ಕಾರಣ ಮನನೊಂದು ನೇಣಿಗೆ ಶರಣಾಗಿದ್ದಾನೆ. ಈತ ಯುವ ರೈತನೂ ಆಗಿದ್ದ. ಆದರೆ ತಪ್ಪು ನಿರ್ಧಾರದಿಂದ ತಮ್ಮವರನ್ನು ಬಿಟ್ಟು ಹೊರಟಿದ್ದಾನೆ. ಝಳಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Read More »

ಕುಡಿದ ಮತ್ತಿನಲ್ಲಿ ತುಂಬಿ ಹರಿಯುತ್ತಿದ್ದ ನದಿಗೆ ಹಾರಿದ ಕುಡುಕ.. ಮುಂದೇನಾಯ್ತು?

ಬೆಳಗಾವಿ: ತುಂಬಿ ಹರಿಯುತ್ತಿರುವ ನದಿಗೆ ಹಾರಿ ಕುಡುಕ ಹುಚ್ಚಾಟ ಮೆರೆದಿರುವ ಘಟನೆ ಮೂಡಲಗಿ ತಾಲೂಕಿನ ಢವಳೇಶ್ವರ ಬಳಿಯ ಘಟಪ್ರಭಾ ನದಿ ಬಳಿ ನಡೆದಿದೆ. ಢವಳೇಶ್ವರ ಗ್ರಾಮದ ನಿವಾಸಿ ಹಾಲಪ್ಪ ಕುಡಿದ ಮತ್ತಿನಲ್ಲಿ ಉಕ್ಕಿ ಹರಿಯುತ್ತಿರುವ ಘಟಪ್ರಭಾ ನದಿಗೆ ಹಾರಿ ಹುಚ್ಚಾಟ ಪ್ರದರ್ಶಿಸಿದ್ದಾನೆ. ನದಿಗೆ ಹಾರಿದ ಬಳಿಕ ಈಜಲು ಆಗದೆ ಸೇತುವೆ ಕೆಳಭಾಗದಲ್ಲಿ ತೆಲಿ ಹೋಗಿದ್ದಾನೆ. ಸೇತುವೆ ದಾಟಿ ಮತ್ತೆ ನದಿ ನೀರಿನಲ್ಲಿ ಮೇಲೆದಿದ್ದಾನೆ. ನೂರು ಮೀಟರ್ ನಷ್ಟು ಮುಂದೆ ಸಾಗಿ ಈಜಿ …

Read More »

ರಾಜ್ಯ ಸರ್ಕಾರದಿಂದ `ಶುಶ್ರೂಷಕಿಯರಿಗೆ’ ಶುಭಸುದ್ದಿ : ಮಾಸಿಕ 5 ಸಾವಿರ ರೂ. ಪ್ರೋತ್ಸಾಹ ಧನ

ಬೆಂಗಳೂರು : ರಾಜ್ಯ ಸರ್ಕಾರವು ಶುಶ್ರೂಷಕರಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದು, ಆರೋಗ್ಯ ಇಲಾಖೆಯ ವ್ಯಾಪ್ತಿಗೆ ಬರುವ ಎಲ್ಲಾ ಆರೋಗ್ಯ ಮಾದರಿಯ ಕೇಂದ್ರಗಳಲ್ಲಿ ವೈಯಕ್ತಿಕ ಸುರಕ್ಷಾ ಸಾಧನೆ ಕಿಟ್ ಧರಿಸಿ ಕಾರ್ಯನಿರ್ವಹಿಸುತ್ತಿರುವ ಶುಶ್ರೂಷಕರಿಗೆ ಮಾಸಿಕ 5 ಸಾವಿರ ರೂ. ಕೋವಿಡ್ ರಿಸ್ಕ್ ಪ್ರೋತ್ಸಾಹ ಧನ ನೀಡಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ರಾಜ್ಯ ಸರ್ಕಾರವು ಶುಶ್ರೂಷಕರಿಗೆ ಮುಂದಿನ ಆರು ತಿಂಗಳ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ ಪ್ರೋತ್ಸಾಹಧನ ನೀಡಬೇಕಿದೆ. ಪ್ರೋತ್ಸಹ ಧನವು …

Read More »
Sahifa Theme License is not validated, Go to the theme options page to validate the license, You need a single license for each domain name.