ನವದೆಹಲಿ : ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ಬ್ಯಾಂಕ್ ರಜಾ ದಿನದ ಪಟ್ಟಿ ಬಿಡುಗಡೆ ಮಾಡಲಾಗಿದೆ . ಭಾರತದಲ್ಲಿ ಬ್ಯಾಂಕ್ ರಜಾ ದಿನಗಳು ಆಯಾ ರಾಜ್ಯಗಳ ಮೇಲೂ ಅವಲಂಬನೆ ಆಗಿರುತ್ತದೆ . ಇನ್ನು ಭಾರತದ ವಿವಿಧ ಭಾಗಗಳಲ್ಲಿ ನಿರ್ಬಂಧಿತ ರಜಾಗಳು ಹಾಗೂ ಗೆಜೆಟೆಡ್ ರಜಾ ದಿನಗಳಿವೆ . ಗೆಜೆಟೆಡ್ ಅಥವಾ ಸಾರ್ವಜನಿಕ ರಜಾ ದಿನಗಳು ದೇಶದಾದ್ಯಂತ ಅನ್ವಯಿಸುತ್ತದೆ. ಬ್ಯಾಂಕ್ ಗಳು ಪ್ರತಿ ತಿಂಗಳ ಎರಡು ಮತ್ತು ನಾಲ್ಕನೇ ಶನಿವಾರ ಹಾಗೂ …
Read More »ಬಿಎಸ್ವೈ ನಿರ್ಗಮನದ ಬೆನ್ನಲ್ಲೇ ಕೇಂದ್ರದಿಂದ ರಾಜ್ಯಕ್ಕೆ ₹629.3 ಕೋಟಿ ಬಿಡುಗಡೆ
ನವದೆಹಲಿ: ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಇಂದು ಬರೋಬ್ಬರಿ 629.03 ಕೋಟಿ ಹಣವನ್ನ ಪ್ರಕೃತಿ ವಿಕೋಪದ ಪರಿಹಾರವಾಗಿ ಬಿಡುಗಡೆ ಮಾಡಿದೆ. ಕಳೆದ ಬಾರಿಯ ಮುಂಗಾರು ಮಳೆ ಸಂದರ್ಭದಲ್ಲಿ ಭಾರೀ ಪ್ರವಾಹ ಉಂಟಾಗಿತ್ತು. ಉತ್ತರ ಕರ್ನಾಟಕವು ಮಹಾಮಳೆಗೆ ನಲುಗಿ ಹೋಗಿತ್ತು. ಮಳೆಯಿಂದ ಪ್ರವಾಹ ಹಾಗೂ ಭೂಕುಸಿತ ಸಂಭವಿಸಿ ಅಪಾರ ಹಾನಿಯುಂಟಾಗಿತ್ತು. ಮಾತ್ರವಲ್ಲ ಮಹಾರಾಷ್ಟದಲ್ಲೂ ತೀವ್ರ ಹಾನಿಯಾಗಿತ್ತು. ಇದೀಗ ಕೇಂದ್ರ ಸರ್ಕಾರ 2020ರಲ್ಲಿ ಸಂಭವಿಸಿದ ಪ್ರಕೃತಿ ವಿಕೋಪಕ್ಕೆ ಪರಿಹಾರವನ್ನ ನೀಡಿದೆ. ಕರ್ನಾಟಕ ಹಾಗೂ ಮಹಾರಾಷ್ಟ್ರ …
Read More »ನೂತನ ಸಿಎಂ ಬೊಮ್ಮಾಯಿ ಅವರಿಗೆ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅಭಿನಂದನೆ
ಗೋಕಾಕ : ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಬಸವರಾಜ ಬೊಮ್ಮಾಯಿ ಅವರಿಗೆ ಕೆಎಂಎಫ್ ಅಧ್ಯಕ್ಷರೂ ಆಗಿರುವ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಅಭಿನಂದನೆ ಸಲ್ಲಿಸಿದ್ದಾರೆ. ಬೊಮ್ಮಾಯಿ ಅವರು ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಸರ್ವಾನುಮತದಿಂದ ಆಯ್ಕೆಯಾಗಿರುವುದರಿಂದ ಸರ್ಕಾರ ಮತ್ತು ಭಾರತೀಯ ಜನತಾ ಪಾರ್ಟಿಯ ಸಂಘಟನೆ ಹೆಚ್ಚು ಬಲಶಾಲಿಯಾಗಲಿದೆ. ಕ್ರಿಯಾಶೀಲ ವ್ಯಕ್ತಿತ್ವದ ಸ್ನೇಹಜೀವಿಯಾಗಿರುವ ಬೊಮ್ಮಾಯಿ ಅವರಿಂದ ರಾಜ್ಯ ಮತ್ತಷ್ಟು ಅಭಿವೃದ್ಧಿ ಕಾಣಲಿದೆ. ಇವರ ಆಯ್ಕೆಯಿಂದ ನಮ್ಮ ಉತ್ತರ ಕರ್ನಾಟಕಕ್ಕೂ ಹೆಚ್ಚಿನ …
Read More »ಸಂಸದೀಯ ಮಂಡಳಿಯಲ್ಲೇ ಸಿಎಂ ಹೆಸರು ಫೈನಲ್, ನೆಪ ಮಾತ್ರಕ್ಕೆ ಶಾಸಕಾಂಗ ಸಭೆ
ಬೆಂಗಳೂರು, ಜು.27- ಮುಖ್ಯಮಂತ್ರಿ ಅಭ್ಯರ್ಥಿ ಆಯ್ಕೆ ಕಗ್ಗಂಟ್ಟಾಗಿರುವುದರಿಂದ ದೆಹಲಿ ವರಿಷ್ಠರೇ ಪಕ್ಷದ ಸಂಸದೀಯ ಮಂಡಳಿಯಲ್ಲೇ ಒಬ್ಬರನ್ನು ಆಯ್ಕೆ ಮಾಡುವುದು ಖಚಿತವಾಗಿದೆ. ಸಿಎಂ ಸ್ಥಾನ ಅಲಂಕರಿಸಲು ಸುಮಾರು ಒಂದು ಡಜನ್‍ಗೂ ಅಧಿಕ ಆಕಾಂಕ್ಷಿಗಳು ಇರುವುದರಿಂದ ಸಂಸದೀಯ ಮಂಡಳಿಯಲ್ಲೇ ಹೆಸರು ಅಂತಿಮಗೊಳಿಸಿ ನೆಪಮಾತ್ರಕ್ಕೆ ಶಾಸಕಾಂಗ ಸಭೆ ನಡೆಯಲಿದೆ. ವರಿಷ್ಠರ ಸೂಚನೆಯನ್ನು ವಿಧಿಯಿಲ್ಲದೆ ಎಲ್ಲರೂ ಒಪ್ಪಿಕೊಳ್ಳಬೇಕಾಗುತ್ತದೆ. ಶಾಸಕರ ಅಭಿಪ್ರಾಯದಂತೆ ಶಾಸಕಾಂಗ ಪಕ್ಷದ ನಾಯಕನ್ನು ಆಯ್ಕೆ ಮಾಡಲು ಹೋದರೆ ನೂರೆಂಟು ತಾಪತ್ರಯಗಳು ಎದುರಾಗಬಹುದೆಂಬ ಹಿನ್ನೆಲೆಯಲ್ಲಿ ವರಿಷ್ಠರೇ …
Read More »ಮಂಗಳವಾರ ಸಂಜೆ 7 ಘಂಟೆಗೆ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಿಗದಿ
ಬೆಂಗಳೂರು: ಕರ್ನಾಟಕ ರಾಜ್ಯದ ನೂತನ ಮುಖ್ಯಮಂತ್ರಿ ಹುದ್ದೆಗೆ ಹೊಸಬರನ್ನು ನೇಮಿಸುವ ಕುರಿತು ಖಾಸಗಿ ಹೋಟೆಲ್‌ನಲ್ಲಿ ಇಂದು ಸಂಜೆ 7 ಗಂಟೆಗೆ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಿಗದಿಯಾಗಿದ್ದು, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ಸಹ ಉಸ್ತುವಾರಿ ಡಿ.ಕೆ.ಅರುಣ, ಕೇಂದ್ರೀಯ ವೀಕ್ಷಕ ಕಿಶನ್ ರೆಡ್ಡಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಸಭೆಯಲ್ಲಿ ಭಾಗಿಯಾಗಲಿದ್ದಾರೆ ಎಂದು ತಿಳಿದು ಬಂದಿದೆ. ಬೆಂಗಳೂರಿನ ಕ್ಯಾಪಿಟಲ್ ಹೊಟೇಲ್ನಲ್ಲಿ ನಡೆಯಲಿರುವ …
Read More »ಸಂಕಷ್ಟಗಳನ್ನು ಮೆಟ್ಟಿನಿಂತು ಶಿಕ್ಷಕಿಯಾದ ಯುವತಿಗೆ ರಾಜಭವನಕ್ಕೆ ಆಹ್ವಾನಿಸಿದ ರಾಜ್ಯಪಾಲರು..!
ಕುಮಿಲಿ: ಅನೇಕ ಸಂಕಷ್ಟಗಳನ್ನು ಮೆಟ್ಟಿ ನಿಂತು ಹೈಸ್ಕೂಲ್ ಶಿಕ್ಷಕಿಯಾದ ಕೇರಳದ ಛೋಟ್ಟುಪರಾ ನಿವಾಸಿ ಸೆಲ್ವಮರಿಯನ್ನು ರಾಜ್ಯಪಾಲ ಆರೀಫ್ ಮೊಹಮ್ಮದ್ ಖಾನ್ ಅಭಿನಂದಿಸಿದ್ದು, ರಾಜಭವನಕ್ಕೆ ಆಹ್ವಾನಿಸಿದ್ದಾರೆ. ಬಾಲ್ಯದ ದಿನಗಳಿಂದಲೂ ಸೆಲ್ವಮರಿ ಅನೇಕ ಸಮಸ್ಯೆಗಳನ್ನು ಎದುರಿಸಿದ್ದಾರೆ. ರಜಾದಿನಗಳಲ್ಲಿ ತಮ್ಮ ತಾಯಿಯ ಜತೆ ಏಲಕ್ಕಿ ತೋಟದಲ್ಲಿ ಕೆಲಸ ಮಾಡಿಕೊಂಡು ಕುಟುಂಬಕ್ಕೆ ಆಧಾರವಾಗಿ ನಿಲ್ಲುತ್ತಿದ್ದ ಸೆಲ್ವಮರಿ, ಕೆಲಸದ ನಡುವೆಯೂ ಓದಿನಲ್ಲೂ ಶ್ರಮವಹಿಸಿ ಇಂದು ಹೈಸ್ಕೂಲ್ ಶಿಕ್ಷಕಿಯಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಕುಟುಂಬದ ಸಂಕಷ್ಟಗಳನ್ನು ಇನ್ನಷ್ಟು ದೂರ …
Read More »ಕಾಲು ಜಾರಿ ನೀರಿಗೆ ಬಿದ್ದು ನಾಲ್ವರು ಮಕ್ಕಳು ಸಾವು
ವಿಶಾಖಪಟ್ಟಣ: ಮಳೆಗೆ ತುಂಬಿ ಹರಿಯುತಿದ್ದ ಹೊಳೆಯೊಳಗೆ ಜಾರಿ ಬಿದ್ದು ನಾಲ್ವರು ಮಕ್ಕಳು ದುರಂತ ಸಾವಿಗೀಡಾಗಿರುವ ಘಟನೆ ಸೋಮವಾರ ಸಂಜೆ ನಡೆದಿದೆ. ವಿಶಾಖಪಟ್ಟಣ ಜಿಲ್ಲೆಯ ವಿ. ಮಡುಗುಲಾ ಮಂಡಲ್ ಜಮ್ಮದೇವಿಪೇಟಾ ಗ್ರಾಮದಲ್ಲಿ ಘಟನೆ ನಡೆದಿದ್ದು ಮೃತ ಮಕ್ಕಳನ್ನು ಜಾಹ್ನವಿ (11) ಝಾನ್ಸಿ (8), ಶರ್ಮಿಳಾ (7) ಮತ್ತು ಮಹೀಂದರ್ (7) ಎಂದು ಗುರುತಿಸಲಾಗಿದೆ. ಸೋಮವಾರ ಮಧ್ಯಾಹ್ನ ಪಾಲಕರು ಬಟ್ಟೆ ಹೊಗೆಯಲು ಹೋಗಿದ್ದರು. ಮಕ್ಕಳು ಸಹ ಜತೆಯಲ್ಲಿ ತೆರಳಿದ್ದರು. ಈ ವೇಳೆ ನೀರಿನ …
Read More »ಎಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸಲಿದೆಯೇ ಒಲಾ ಸ್ಕೂಟರ್ ?
ಬೆಂಗಳೂರು ದೇಶದಲ್ಲಿ ಪೆಟ್ರೋಲ್ ಬೆಲೆ ಏರಿಕೆ ಆಗಿರುವ ಈ ಸಮಯದಲ್ಲಿ ಜನರು ಹೆಚ್ಚಾಗಿ ಎಲೆಕ್ಟ್ರಿಕ್ ವಾಹನಗಳ ಕಡೆಗೆ ದೃಷ್ಟಿ ಹಾಯಿಸುತಿದ್ದಾರೆ. ಇದೀಗ ದೇಶದ ಪ್ರಮುಖ ಆನ್ ಲೈನ್ ಕಾರು ಬುಕಿಂಗ್ ಸಂಸ್ಥೆ ಓಲಾ ಬೆಂಗಳೂರು ಸಮೀಪದ ಹೊಸೂರಿನಲ್ಲಿ ತನ್ನ ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದಣಾ ಘಟಕವನ್ನು ಆರಂಬಿಸಿದ್ದು ಇನ್ನೆರಡು ತಿಂಗಳಿನಲ್ಲಿ ಸ್ಕೂಟರ್ ಗಳು ರಸ್ತೆಗಿಳಿಯಲಿವೆ. ಈ ಸ್ಕೂಟರ್ ಒಂದು ಛಾರ್ಜಿಗೆ 240 ಕಿಲೋ ಮೀಟರ್ ಮೈಲೇಜ್ ಕೊಡುತ್ತದೆ ಎಂದು ತಿಳಿದು ಬಂದಿದ್ದು …
Read More »ಬಿ.ಎಲ್.ಸಂತೋಷ್ ರಾಜ್ಯದ ಮುಂದಿನ ಮುಖ್ಯಮಂತ್ರಿ: ಬಿಜೆಪಿ ಮೂಲಗಳು.?
ಬೆಂಗಳೂರು; ಬಿ.ಎಸ್.ಯಡಿಯೂರಪ್ಪ ರಾಜೀನಾಮೆ ನೀಡಿದ ಬೆನ್ನಲ್ಲೇ ರಾಜ್ಯದ ಮುಂದಿನ ಮುಖ್ಯಮಂತ್ರಿ ಯಾರು ಎಂಬ ಕುತೂಹಲ ತೀವ್ರಗೊಂಡಿದೆ. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದಂತೆಯೇ ರಾಜ್ಯ ಬಿಜೆಪಿಯಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿವೆ. ಈ ನಡುವೆ ಮುಂದಿನ ಮುಖ್ಯಮಂತ್ರಿ ಯಾರನ್ನ ಮಾಡಬೇಕೆಂಬ ಲೆಕ್ಕಾಚಾರದಲ್ಲಿ ಬಿಜೆಪಿ ಹೈಕಮಾಂಡ್ ಇದ್ದು, ಇದಕ್ಕಾಗಿ ಧರ್ಮೇಂದ್ರ ಪ್ರಧಾನ್, ಕರ್ನಾಟಕ ಸಿಎಂ ಆಯ್ಕೆಯ ವೀಕ್ಷಕರಾಗಿ ನೇಮಕ ಮಾಡಲಾಗಿದೆ. ಆದರೆ, ವೀಕ್ಷಕರ ತಂಡ ರಾಜ್ಯಕ್ಕೆ ಆಗಮಿಸುವ ಮೊದಲೇ ಬಿಎಲ್ ಸಂತೋಷ್ …
Read More »ಇಂದು ಯಾವುದೇ ಕಾರ್ಯಕ್ರಮ ನಿಗದಿ ಮಾಡಿಕೊಳ್ಳದ ಹಂಗಾಮಿ ಸಿಎಂ ಯಡಿಯೂರಪ್ಪ; ಗುಪ್ತಚರ ಇಲಾಖೆ ಮುಖ್ಯಸ್ಥರ ಭೇಟಿ
ಬೆಂಗಳೂರು: ಮುಖ್ಯಮಂತ್ರಿ ಪದವಿಗೆ ರಾಜೀನಾಮೆ ನೀಡಿ ಹಂಗಾಮಿ ಸಿಎಂ ಆಗಿ ಮುಂದುವರೆದಿರುವ ಬಿ.ಎಸ್.ಯಡಿಯೂರಪ್ಪ (BS Yediyurappa) ಇಂದು ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕಾವೇರಿಯಲ್ಲೇ ಉಳಿದುಕೊಂಡಿದ್ದಾರೆ. ಯಾವುದೇ ಸಭೆ, ಸಮಾರಂಭ, ಆಡಳಿತ ಸಂಬಂಧ ಕಾರ್ಯಕ್ರಮಗಳನ್ನು ನಿಗದಿಪಡಿಸಿಕೊಳ್ಳದ ಯಡಿಯೂರಪ್ಪ ರಾಜೀನಾಮೆ (Resign) ಬೆನ್ನಲ್ಲೇ ಮೌನವಾಗಿ ನಿವಾಸದಲ್ಲೇ ಉಳಿದಿದ್ದಾರೆ. ಏತನ್ಮಧ್ಯೆ, ಸಿಎಂ ಅಧಿಕೃತ ನಿವಾಸ ಕಾವೇರಿಗೆ ಗುಪ್ತಚರ ಇಲಾಖೆಯ ಮುಖ್ಯಸ್ಥ ದಯಾನಂದ್ ಭೇಟಿ ನೀಡಿ ಕೆಲಕಾಲ ಇದ್ದು ವಾಪಾಸ್ಸಾಗಿದ್ದಾರೆ. ಹಂಗಾಮಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭೇಟಿಗೆ …
Read More »
Laxmi News 24×7