ರಾಷ್ಟ್ರೀಯ

ಐವರ ಅಸಹಜ ಸಾವು ಕೇಸ್: ಅಬಕಾರಿ ಅಧಿಕಾರಿಗಳ ಸುಲಿಗೆಗೆ ಇಳಿದಿದ್ದನಂತೆ ಶಂಕರ್..!

ಬೆಂಗಳೂರು: ನಗರದ ಬ್ಯಾಡರಹಳ್ಳಿ ಠಾಣಾ ವ್ಯಾಪ್ತಿಯ ತಿಗಳರಪಾಳ್ಯದಲ್ಲಿ ಒಂದೇ ಕುಟುಂಬದ ಐವರು ಅಸಹಜ ಸಾವು ಕಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನ ಕಳೆದಂತೆ ಸ್ಫೋಟಕ ಮಾಹಿತಿಗಳು ಬಯಲಾಗುತ್ತಿವೆ. ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ ಬೆನ್ನಲ್ಲೇ ಆರೋಪಿ ಶಂಕರ್ ವಿರುದ್ಧ  ಮಾಹಿತಿ ಹಕ್ಕು ಕಾಯ್ದೆ (RTI) ಯನ್ನು ದುರುಪಯೋಗ ಪಡಿಸಿಕೊಂಡು ಹಣ ಪೀಕಿರುವ ಆರೋಪ ಕೇಳಿ ಬಂದಿದೆ. ಅಬಕಾರಿ ಇಲಾಖೆಯಲ್ಲಿ ಗಾರ್ಡ್​ ಆಗಿದ್ದ ಶಂಕರ್..! ರಾಜ್ಯದ ವಿವಿಧ ಅಬಕಾರಿ ಅಧಿಕಾರಿಗಳೇ ಈತನ ಟಾರ್ಗೆಟ್..! ಶಂಕರ್ …

Read More »

ಕೃಷ್ಣಾ ನದಿ ತೀರದಲ್ಲೊಂದು ವಿಸ್ಮಯ – ರಣಭೀಕರ ಪ್ರವಾಹಕ್ಕೂ ನಲುಗದ ಶಿವಲಿಂಗ, ನಂದಿ ವಿಗ್ರಹ

ಚಿಕ್ಕೋಡಿ(ಬೆಳಗಾವಿ): ಕೃಷ್ಣಾ ನದಿ ತೀರದಲ್ಲೊಂದು ವಿಸ್ಮಯವೊಂದು ನಡೆದಿದೆ. ರಣಭೀಕರ ಪ್ರವಾಹಕ್ಕೂ ಶಿವಲಿಂಗ ಹಾಗೂ ನಂದಿ ವಿಗ್ರಹ ನಲುಗದೆ ಜನರಲ್ಲಿ ಅಚ್ಚರಿ ಮೂಡಿಸಿವೆ. ಹೌದು. ಕೃಷ್ಣಾ ನದಿ ತೀರ ಉಕ್ಕಿ ಹರಿದ ಪರಿಣಾಮ 2019 ಹಾಗೂ 2021ರಲ್ಲಿ ರಣ ಭೀಕರ ಪ್ರವಾಹ ಬಂದಿತ್ತು. ರಕ್ಕಸ ಪ್ರವಾಹಕ್ಕೆ ನದಿ ತೀರದ ಜನರ ಬದುಕು ಅಕ್ಷರಶಃ ನಲುಗಿ ಹೋಗುವುದರ ಜೊತೆಗೆ ಜನ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿತ್ತು. ಅಷ್ಟೇ ಅಲ್ಲದೇ ಪ್ರವಾಹಕ್ಕೆ ಸಿಲುಕಿ ಸೇತುವೆಗಳು, ಸಾವಿರಾರು …

Read More »

ತುಮಕೂರಲ್ಲಿ ಕಾಂಡೋಮ್​ ಪತ್ತೆ ಪ್ರಕರಣಕ್ಕೆ ಟ್ವಿಸ್ಟ್​.. ಲಾಡ್ಜ್​ನಲ್ಲಿ ವೇಶ್ಯಾವಾಟಿಕೆ ದಂಧೆ, ಐವರ ಬಂಧನ

ತುಮಕೂರು: ಇಲ್ಲಿನ ರಿಂಗ್ ರಸ್ತೆಯ ಲಾಡ್ಜ್​ವೊಂದರ ಮೇಲೆ ಮೈಸೂರಿನ ಒಡನಾಡಿ ಸಂಸ್ಥೆ ಹಾಗೂ ಪೊಲೀಸರು ದಾಳಿ ನಡೆಸಿದ್ದು, ವೇಶ್ಯಾವಾಟಿಕೆ ನಡೆಸಲು ಕಳ್ಳಮಾರ್ಗವಾಗಿದ್ದ ಸುರಂಗವೊಂದನ್ನು ಪತ್ತೆಹಚ್ಚಿದ್ದಾರೆ. ಈ ಸುರಂಗದಲ್ಲಿ ಅಡಗಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಸುರಂಗದೊಳಗೆ ಇಬ್ಬರು ಮಹಿಳೆ ಹಾಗೂ ಓರ್ವ ದಲ್ಲಾಳಿಯಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಅಡಗಿಕೊಂಡಿದ್ದರು ಎಂದು ತಿಳಿದುಬಂದಿದೆ. ಇತ್ತೀಚೆಗೆ ಈ ಲಾಡ್ಜ್ ಸಮೀಪವಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾಶಿ ರಾಶಿ ಕಾಂಡೋಮ್‌ಗಳು ಪತ್ತೆ ಆಗಿದ್ದವು. ವಿಷಯ ತಿಳಿದು ತನಿಖೆ …

Read More »

ಬೆಂಗಳೂರಿನಲ್ಲಿ ಸೆ. 25ರವರೆಗೂ ಗುಡುಗು ಸಹಿತ ಭಾರೀ ಮಳೆ; ಸಂಜೆ ಬೇಗ ಮನೆ ಸೇರಿಕೊಳ್ಳಿ!

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ (Bangalore Rain) ಒಂದು ಗಂಟೆ ಮಳೆ ಸುರಿದರೂ ಜನಜೀವನ ಅಸ್ತವ್ಯಸ್ತವಾಗಿ ಬಿಡುತ್ತದೆ. ಚರಂಡಿ ವ್ಯವಸ್ಥೆ, ರಾಜಕಾಲುವೆಗಳ ಅವ್ಯವಸ್ಥೆ, ತಗ್ಗು ಪ್ರದೇಶದಲ್ಲಿ ಮನೆಗಳನ್ನು ನಿರ್ಮಾಣ ಮಾಡಿರುವುದು ಹೀಗೆ ನಾನಾ ಕಾರಣಗಳಿಂದ ಮಳೆಗಾಲದಲ್ಲಿ ಬೆಂಗಳೂರಿಗರಿಗೆ ನರಕ ದರ್ಶನವಾಗುತ್ತಲೇ ಇರುತ್ತದೆ. ಇಂದಿನಿಂದ ಸೆ. 25ರವರೆಗೂ ಬೆಂಗಳೂರಿನಲ್ಲಿ ಮತ್ತೆ ಮಳೆ (Heavy Rain in Bengaluru) ಜೋರಾಗಲಿದ್ದು, ಇಂದಿನಿಂದ 5 ದಿನ ಗುಡುಗು- ಮಿಂಚು (Bengaluru Rains) ಸಹಿತ ಭಾರೀ ಮಳೆಯಾಗಲಿದೆ. …

Read More »

ಬೆಳಗಾವಿಯಲ್ಲಿ ಎಂಇಎಸ್‌ನಿಂದ ದಿನಕ್ಕೊಂದು ನಾಟಕ; ಭಾಷಾ ರಾಜಕಾರಣದ ಹೆಸರಲ್ಲಿ ವಿಷಬೀಜ ಬಿತ್ತಲು ಪ್ರಯತ್ನ

ಬೆಳಗಾವಿ: ಜಿಲ್ಲೆಯಲ್ಲಿ ಎಂಇಎಸ್‌ನಿಂದ (Maharashtra Ekikaran Samiti -MES) ದಿನಕ್ಕೊಂದು ವಿಚಾರದಲ್ಲಿ ಗೊಂದಲ ಸೃಷ್ಟಿಯಾಗುತ್ತಿದೆ. ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಹೀನಾಯವಾಗಿ ಸೋತ ಬಳಿಕವೂ ಪದೇಪದೇ ಸಾಮಾಜದ ಸ್ವಾತ್ಯವನ್ನು ಹಾಳು ಮಾಡುವ ಪ್ರಯತ್ನಗಳು ನಡೆಯುತ್ತಿದೆ ಎಂದು ಆರೋಪಗಳು ಕೇಳಿ ಬಂದಿವೆ. ಭಾಷಾ ರಾಜಕಾರಣದ ಹೆಸರಲ್ಲಿ ವಿಷಬೀಜ ಬಿತ್ತಲು ಪ್ರಯತ್ನ ಗಣೇಶ ವಿಸರ್ಜನೆ ವೇದಿಕೆ ಮೇಲೆ ಕನ್ನಡ ನಾಮಫಲಕವಷ್ಟೇ ಇದ್ದಿದ್ದಕ್ಕೆ ಎಂಇಎಸ್ ಖ್ಯಾತೆ ತೆಗೆದಿದೆ. ಇಷ್ಟೇ ಅಲ್ಲದೆ ಎಂಇಎಸ್ ಪುಂಡರ ವಿರುದ್ಧ …

Read More »

ಮೈಸೂರು ರಾಜಮನೆತನದ ಆನೆಗಳನ್ನು ಗುಜರಾತ್​ಗೆ ಕಳುಹಿಸಲು ನಿರ್ಧಾರ; ಕಾರಣ ಇಲ್ಲಿದೆ

ಮೈಸೂರು: ರಾಜಮನೆತನದ ಆನೆಗಳನ್ನು (Elephants) ಗುಜರಾತ್​ಗೆ ಕಳುಹಿಸಲು ಸಿದ್ಧತೆ ನಡೆಯುತ್ತಿದೆ. ಅರಮನೆಯಲ್ಲಿರುವ ಪ್ರತಿ ಆನೆಗಳನ್ನು ನಿರ್ವಹಣೆ ಮಾಡಲು ದಿನಕ್ಕೆ 10 ಸಾವಿರ ರೂ. ಖರ್ಚಾಗುತ್ತಿದೆ. ತಿಂಗಳಿಗೆ 6 ಆನೆಗಳ ನಿರ್ವಹಣೆಗೆ ಸುಮಾರು 18 ಲಕ್ಷ ರೂ. ವೆಚ್ಚವಾಗುತ್ತಿದೆ. ಹೀಗಾಗಿ ನಾಲ್ಕು ಆನೆಗಳನ್ನು ಗುಜರಾತ್​ಗೆ ಕಳುಹಿಸಲು ಸಿದ್ಧತೆ ನಡೆಯುತ್ತಿದೆ. ಸದ್ಯ ಆರು ಆನೆಗಳಿದ್ದು, ಇದರಲ್ಲಿ ನಾಲ್ಕು ಆನೆಗಳು ಗುಜರಾತ್​ಗೆ ಕಳುಹಿಸಲಾಗುತ್ತದೆ. ಇನ್ನುಳಿದ ಎರಡು ಆನೆಗಳು ಅರಮನೆಯಲ್ಲೇ ಉಳಿದುಕೊಳ್ಳಲಿವೆ. ಅರಮನೆ ಆನೆಗಳು ದಸರಾ …

Read More »

ಕಾರ್ಮಿಕ ಇಲಾಖೆ ಫುಡ್ ಕಿಟ್ ವಿತರಣೆಯಲ್ಲಿ ಅವ್ಯವಹಾರ, ಬಿಜೆಪಿ ಕಾರ್ಯಕರ್ತರ ವಿರುದ್ಧ ಎಫ್ಐಆರ್

ಬೆಳಗಾವಿ: ಕಾರ್ಮಿಕ ಇಲಾಖೆ ಫುಡ್ ಕಿಟ್ ಅಕ್ರಮ ದಾಸ್ತಾನು ಆರೋಪ ಕೇಳಿ ಬಂದಿದೆ. ಫುಡ್ ಕಿಟ್ಗಳನ್ನು ಹಳೆ ಬೆಳಗಾವಿಯ ಸಾಯಿ ಭವನದಲ್ಲಿ ಅಕ್ರಮವಾಗಿ ದಾಸ್ತಾನು ಮಾಡಲಾಗುತ್ತಿದ್ದು ಲಾಕ್‌ಡೌನ್ ವೇಳೆ ಕಾರ್ಮಿಕರಿಗೆ ನೀಡಬೇಕಿದ್ದ ಫುಡ್ ಕಿಟ್ಗಳನ್ನು ಬಿಜೆಪಿ ಕಾರ್ಯಕರ್ತರ ಮನೆಗೆ ರವಾನೆ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಇನ್ನು ಅವಧಿ ಮುಗಿದ ಫುಡ್ ಕಿಟ್ ವಿತರಣೆ ಪ್ರಶ್ನಿಸಿದ್ದಕ್ಕೆ ಹಲ್ಲೆಗೆ ಯತ್ನಿಸಿದ್ದಾರೆ ಎಂದು ಕಾಂಗ್ರೆಸ್ ಕಾರ್ಯಕರ್ತೆ ಸರಳಾ ಸಾತಪೂತೆ ಬೆಳಗಾವಿಯ ಶಹಾಪುರ …

Read More »

ಕಲಬುರಗಿ ಪಾಲಿಕೆ; JDS ಜತೆ ಮೈತ್ರಿ ಮಾತುಕತೆಗೆ ಸಿದ್ದರಾಮಯ್ಯನೇ ಬರಲೀ ಎಂದು HDK ಪಟ್ಟು ಹಿಡಿದಿದ್ಯಾಕೆ?

ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಪೂರ್ಣ ಬಹುಮತ ಸಿಗದೆ ಅತಂತ್ರವಾಗಿದೆ. ಕಾಂಗ್ರೆಸ್, ಬಿಜೆಪಿ ಯಾರೇ ಅಧಿಕಾರಕ್ಕೆ ಬರಬೇಕಾದರೂ ಜೆಡಿಎಸ್ ಬೆಂಬಲ ಅತ್ಯಗತ್ಯ. ಆದರೆ, ಜೆಡಿಎಸ್ (JDS) ಮೇಯರ್ ಸ್ಥಾನವನ್ನು ಯಾರು ಬಿಟ್ಟುಕೊಡುತ್ತಾರೋ ಅವರಿಗೆ ನಮ್ಮ ಬೆಂಬಲ ಎಂದು ಪಟ್ಟು ಹಿಡಿದಿದೆ. ಇನ್ನು ಜೆಡಿಎಸ್ನೊಂದಿಗೆ ಯಾವುದೇ ಕಾರಣಕ್ಕೂ ಮೈತ್ರಿ ಬೇಡ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಸಿದ್ದರಾಮಯ್ಯ ಹೇಳಿಕೆ ಹಿಂದೆಯೂ ಕೆಲವು ಲೆಕ್ಕಾಚಾರ ಇರುವುದನ್ನು ಅಲ್ಲಗಳೆಯುವಂತಿಲ್ಲ. ಕಲಬುರ್ಗಿ ಮಹಾನಗರ ಪಾಲಿಕೆಯಲ್ಲಿ …

Read More »

ಮೊದಲು ರೊಟ್ಟಿ ಮಾಡೋದು ಕಲಿತುಕೋ, ಆಮೇಲೆ ಪ್ರತಿಭಟನೆ ಮಾಡುವಿಯಂತೆ;: ಬಾಗಲಕೋಟೆ D.C.

ಬಾಗಲಕೋಟೆ: ಪ್ರತಿಭಟನಾನಿರತ ವಿದ್ಯಾರ್ಥಿನಿಯೊಬ್ಬಳಿಗೆ ‘ಮೊದಲು ರೊಟ್ಟಿ ಮಾಡೋದು ಕಲಿತುಕೋ, ಆಮೇಲೆ ಪ್ರತಿಭಟನೆ ಮಾಡುವಿಯಂತೆ’ ಎಂದು ಜಿಲ್ಲಾಧಿಕಾರಿಯೊಬ್ಬರು ಮಾತಿನಲ್ಲೇ ಕುಟುಕಿದ ಪ್ರಸಂಗವೊಂದು ನಡೆದಿದೆ. ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗ ದಳದ ಕಾರ್ಯಕರ್ತರು ಮೈಸೂರಿನಲ್ಲಿನ ದೇಗುಲ ತೆರವು ಖಂಡಿಸಿ ಬಾಗಲಕೋಟೆಯಲ್ಲಿ ನಡೆಸಿದ್ದ ಪ್ರತಿಭಟನೆ ವೇಳೆ ಈ ಸನ್ನಿವೇಶ ಕಂಡುಬಂದಿದೆ. ಬಾಗಲಕೋಟೆ ಜಿಲ್ಲಾಡಳಿತ ಭವನದ ಮುಂದೆ ಪ್ರತಿಭಟನೆ ನಡೆಸಿದವರು ಬಳಿಕ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಲು ಹೋಗಿದ್ದಾರೆ. ಪ್ರತಿಭಟನಾಕಾರರು ಮನವಿ ಸಲ್ಲಿಸಿ ಮರಳುವ ಸಂದರ್ಭದಲ್ಲಿ …

Read More »

ಜನ ಕಲ್ಯಾಣಕ್ಕಾಗಿ ನವ ಚಂಡಿಕಾ ಹೋಮ ನೆರವೇರಿಸಿದ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

  ಗೋಕಾಕ : ಕ್ಷೇತ್ರದ ಜನರು, ಕೆಎಂಎಫ್ ಸಂಸ್ಥೆಯ ಪ್ರಗತಿ ಹಾಗೂ ಕುಟುಂಬಸ್ಥರ ಏಳ್ಗೆಗಾಗಿ ಕೆಎಂಎಫ್ ಅಧ್ಯಕ್ಷ ಮತ್ತು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ತೆರಳಿ ನವ ಚಂಡಿಕಾ ಹೋಮ ನೆರವೇರಿಸಿದರು.   ಕಳೆದ ಭಾನುವಾರ ಮತ್ತು ಸೋಮವಾರದಂದು ಎರಡು ದಿನಗಳವರೆಗೆ ಉಡುಪಿ ಜಿಲ್ಲೆಯ ನಾಡಿನ ಸುಪ್ರಸಿದ್ಧ ದೇವಸ್ಥಾನವಾಗಿರುವ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ವಿಶೇಷ ಪೂಜೆ ಮತ್ತು ಹೋಮ-ಹವನ ನೆರವೇರಿಸಿದರು.   ಕಳೆದ ಎರಡು …

Read More »