Breaking News

ರಾಷ್ಟ್ರೀಯ

ಉಪಚುನಾವಣೆ ಹಿನ್ನೆಲೆ : ಕಾಂಗ್ರೆಸ್ ಕಾರ್ಯಕರ್ತನಿಂದ ಬಿಜೆಪಿ ಯುವ ಕಾರ್ಯಕರ್ತರನ ಮೇಲೆ ಹಲ್ಲೆ

ಸಿಂದಗಿ: ಉಪಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಕಾರ್ಯಕರ್ತ ತನ್ನ ಸಹಚರನೊಂದಿಗೆ ಬಿಜೆಪಿ ಯುವ ಕಾರ್ಯಕರ್ತರನ ಮೇಲೆ ಹಲ್ಲೆ ಮಾಡಿದ ಘಟನೆ ತಾಲೂಕಿನ ರಾಂಪುರ ಪಿ.ಎ. ಗ್ರಾಮದ ಪೆಟ್ರೋಲ್ ಪಂಪ್ ಬಳಿ ಮಂಗಳವಾರ ನಡೆದಿದೆ. ತಾಲೂಕಿನ ನಾಗರಹಳ್ಳಿ ಗ್ರಾಮದ ಬಿಜೆಪಿ ಕಾರ್ಯಕರ್ತ ಪ್ರಮೋದ ಬಾಗೇವಾಡಿ ಅವರ ಮೇಲೆ ಬಬಲೇಶ್ವರ ಗ್ರಾಮದ ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆ ಮಾಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಅಶೋಕ ಮನಗೂಳಿ ಅವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಬಾರದು ಎಂದು ಅವರು …

Read More »

100 ಲಕ್ಷ ಕೋಟಿ ರೂ. ಮೊತ್ತದ ‘ಪಿಎಂ ಗತಿ ಶಕ್ತಿ ಯೋಜನೆ’ಗೆ ಇಂದು ಚಾಲನೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಗತಿ ಶಕ್ತಿ ಯೋಜನೆಯನ್ನು (PM Gati Shakti Yojana) ಜಾರಿಗೆ ತರಲು ಮುಂದಾಗಿದ್ದು, ಇಂದು ಈ ಯೋಜನೆಗೆ ಚಾಲನೆ ನೀಡಲಿದ್ದಾರೆ. ಈ ಯೋಜನೆ ಬರೋಬ್ಬರಿ ₹100 ಲಕ್ಷ ಕೋಟಿ ಮೊತ್ತದ್ದಾಗಿದೆ. ಇನ್ನು ಈ ಯೋಜನೆಯಿಂದ ದೇಶದಲ್ಲಿ ಉದ್ಯೋಗಾವಕಾಶ ಸುಧಾರಿಸಲಿವೆ. ಗತಿ ಶಕ್ತಿ ಯೋಜನೆಯು ದೇಶದ ಮಾಸ್ಟರ್ ಪ್ಲಾನ್ ಮತ್ತು ಮೂಲಸೌಕರ್ಯಕ್ಕೆ ಅಡಿಪಾಯ ಹಾಕುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ. 100 ಲಕ್ಷ ಕೋಟಿ ರೂಪಾಯಿ ಮೊತ್ತದ ಈ …

Read More »

BIG ENCOUNTER ಕಣಿವೆ ನಾಡಿನಲ್ಲಿ 5 ಭಯೋತ್ಪಾದಕರು ಉಡೀಸ್

ನವದೆಹಲಿ: ಲಷ್ಕರ್-ಎ-ತೊಯ್ಬಾ -ರೆಸಿಸ್ಟೆನ್ಸ್ ಫ್ರಂಟ್ ನೊಂದಿಗೆ ಸಂಪರ್ಕ ಹೊಂದಿದ ಒಟ್ಟು ಐದು ಭಯೋತ್ಪಾದಕರು ನಿನ್ನೆ ಜಮ್ಮು & ಕಾಶ್ಮೀರದ ಶೋಪಿಯಾನ್‌ನಲ್ಲಿ ನಡೆದ ಎರಡು ಪ್ರತ್ಯೇಕ ಎನ್‌ಕೌಂಟರ್‌ಗಳಲ್ಲಿ ಹತ್ಯೆಗೀಡಾಗಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ತಲ್ರಾನ್ ಗ್ರಾಮದಲ್ಲಿ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ ಬೆನ್ನಲ್ಲೆ ಉಗ್ರರ ಎನ್‌ಕೌಂಟರ್ ನಡೆದಿದೆ. ಇನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ಪೊಲೀಸರು ಮತ್ತು ಸೇನೆಯ ಜಂಟಿ ಶೋಧ ಕಾರ್ಯಾಚರಣೆಯನ್ನು ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮತ್ತೊಂದು …

Read More »

ಉತ್ತರ ಕನ್ನಡ: ಗ್ಯಾಸ್ ಟ್ಯಾಂಕರ್ ಸ್ಫೋಟ; ಸುತ್ತಮುತ್ತ 300-400 ಮೀಟರ್ ವ್ಯಾಪಿಸಿರುವ ಬೆಂಕಿ

ಉತ್ತರ ಕನ್ನಡ: ಇಂದು (ಅಕ್ಟೋಬರ್ 13) ಬೆಳಿಗ್ಗೆ 5.30ರ ಸುಮಾರಿಗೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಇಡಗುಂದಿ ಬಳಿ ಗ್ಯಾಸ್ ಟ್ಯಾಂಕರ್ ಸ್ಫೋಟಗೊಂಡಿದೆ. ಸ್ಪೋಟದಿಂದಾಗಿ ಸುತ್ತಮುತ್ತ 300 ರಿಂದ 400 ಮೀಟರ್ ಬೆಂಕಿ ವ್ಯಾಪಿಸಿದೆ. ಸಾಕಷ್ಟು ದೂರ ವ್ಯಾಪ್ತಿಯಲ್ಲಿ ಹಬ್ಬಿಕೊಂಡಿದ್ದ ಬೆಂಕಿಯನ್ನು ನಂದಿಸಲು ಅಗ್ನಿಶಾಮಕದಳದ ಸಿಬ್ಬಂದಿಗಳು ಹರಸಾಹಸ ಪಡಬೇಕಾಯಿತು. ಸದ್ಯ 300 ರಿಂದ 400 ಮೀಟರ್ ದೂರಗಳಷ್ಟು ಸ್ಪೋಟದಿಂದ ಏನಾಗಿದೆ ಎನ್ನುವ ಮಾಹಿತಿ ದೊರೆಯದೆ ಅಧಿಕಾರಿಗಳು ಕಂಗಾಲಾಗಿದ್ದಾರೆ.  

Read More »

ಮಂಗಳೂರು: ಸಂಚಾರ ಪೊಲೀಸರಿಗೆ ಬಾಡಿ ಕ್ಯಾಮರಾ ಅಳವಡಿಕೆ

ಮಂಗಳೂರು, ಅ.11: ಸಾರ್ವಜನಿಕರ ಮೇಲೆ ಪೊಲೀಸರು ಹರಿ ಹಾಯ್ದು ಹೋಗುವುದು ಅಥವಾ ಪೊಲೀಸರ ಜೊತೆ ಸಾರ್ವಜನಿಕರು ಒರಟಾಗಿ ವರ್ತಿಸುವುದನ್ನು ತಪ್ಪಿಸುವ ಸಲುವಾಗಿ ಮಂಗಳೂರು ನಗರ ಸಂಚಾರ ಪೊಲೀಸರು ‘ಬಾಡಿ ಕ್ಯಾಮರಾ’ ಅಳವಡಿಕೆ ಪ್ರಕ್ರಿಯೆ ಆರಂಭಿಸಿದ್ದಾರೆ. ಅಹಿತಕರ ಘಟನೆಗಳ ಸಂದರ್ಭ ಸತ್ಯಾಸತ್ಯತೆಯನ್ನು ಅರಿಯಲು ಇದು ಸಹಕಾರಿ ಎಂದು ಹೇಳಲಾಗುತ್ತಿದೆ. ವಾಹನಗಳ ತಪಾಸಣೆಯ ವೇಳೆ ಪೊಲೀಸರು ಮತ್ತು ಸಾರ್ವ ಜನಿಕರ ಮಧ್ಯೆ ಮಾತಿನ ಚಕಮಕಿ ನಡೆಯುವುದು ಸಾಮಾನ್ಯವಾಗಿದೆ. ಆವಾಗ ‘ಬಾಡಿ ಕ್ಯಾಮರಾ’ ಸೂಕ್ತ …

Read More »

ಜೀವಂತವಿದೆ ಭ್ರೂಣ ಹತ್ಯೆ; ಭ್ರೂಣ ಲಿಂಗ ಪತ್ತೆ, ಹತ್ಯೆಗೆ ಬಂದಿದ್ದ ದಂಪತಿ ಪೊಲೀಸರ ವಶ

ಮಂಡ್ಯ: ಭ್ರೂಣ ಲಿಂಗ ಪತ್ತೆ, ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ದಂಪತಿಯನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ. ಈ ಸಂಬಂಧ ಖಚಿತ ಮಾಹಿತಿ ಆಧರಿಸಿ ಮಂಡ್ಯದ ವಿವೇಕಾನಂದ ಜೋಡಿ ರಸ್ತೆಯಲ್ಲಿರುವ ನಮ್ಮ ಮನೆ ಪಾಲಿ ಕ್ಲಿನಿಕ್ ಮೇಲೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಧನಂಜಯ್ ದಾಳಿ ಮಾಡಿದ್ದಾರೆ. ಈ ವೇಳೆ ದಂಪತಿ ಭ್ರೂಣ ಲಿಂಗ ಪತ್ತೆಗೆ ಬಂದಿರುವುದಾಗಿ ತಪ್ಪೊಪ್ಪಿಕ್ಕೊಂಡಿದ್ದಾರೆ. ರಾಮನಗರ ಜಿಲ್ಲೆಯ ಚನ್ನಪಟ್ಟಣ ಮೂಲದ ದಂಪತಿಗೆ ಈಗಾಗಲೇ ಇಬ್ಬರು ಹೆಣ್ಣು …

Read More »

ಪ್ರಧಾನಿ ತಮ್ಮ ಹೆಸರನ್ನು ಮೌನೇಂದ್ರ ಮೋದಿ ಅಂತ ಬದಲಾಯಿಸಿಕೊಂಡರೆ ಒಳ್ಳೆಯದು: ರಾಮಲಿಂಗಾರೆಡ್ಡಿ

ಅ.11: ಕೋವಿಡ್ ಸಂದರ್ಭದಲ್ಲಿ ಸಾಕಷ್ಟು ಜನ ಮೃತಪಟ್ಟರು. ಅದರ ಬಗ್ಗೆ ಬಿಜೆಪಿ ಧ್ವನಿ ಎತ್ತಲಿಲ್ಲ. ರೈತರ ಹತ್ಯೆಯಾಗಿದೆ, ಆಗಲೂ ಧ್ವನಿಯೆತ್ತಿಲ್ಲ. ಪ್ರಧಾನಿ ನರೇಂದ್ರ ಮೋದಿಯಿಂದ ರೈತರಿಗೂ ನ್ಯಾಯ ಸಿಗಲ್ಲ. ಸಾಮಾನ್ಯ ಜನರಿಗೂ ನ್ಯಾಯ ಸಿಗಲ್ಲ. ಹಾಗಾಗಿ ಅವರು ತಮ್ಮ ಹೆಸರನ್ನು ಮೌನೇಂದ್ರ ಮೋದಿ ಅಂತ ಬದಲಾಯಿಸಿಕೊಂಡರೆ ಒಳ್ಳೆಯದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಕಿಡಿಗಾರಿದರು. ಸೋಮವಾರ ನಗರದ ರೇಸ್‍ಕೋರ್ಸ್ ರಸ್ತೆಯಲ್ಲಿರುವ ಕಾಂಗ್ರೆಸ್ ಭವನದ ಆವರಣದಲ್ಲಿ ರೈತ ವಿರೋಧಿ ಕೃಷಿ ಕಾನೂನುಗಳು …

Read More »

ಪೊಲೀಸ್​​ ಅಧಿಕಾರಿಗಳ ಮುಂದೆಯೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ರೈತ ಮಹಿಳೆ; ಯಾಕೆ?

ಹಾವೇರಿ: ಪೊಲೀಸ್​​​ ಅಧಿಕಾರಿಗಳ ಮುಂದೆಯೇ ವಿಷ ಸೇವಿಸಿ ಮಹಿಳೆಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಹಾವೇರಿಯಲ್ಲಿ ನಡೆದಿದೆ. ಸಿಎಂ ಬಸವರಾಜ್​​ ಬೊಮ್ಮಾಯಿ ಸ್ವಕ್ಷೇತ್ರ ಶಿಗ್ಗಾವಿ ತಾಲೂಕು ಗಡಿ ಭಾಗದ ತರ್ಲಘಟ್ಟ ಗ್ರಾಮದಲ್ಲಿ ರೈತ ಮಹಿಳೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ರೈತರು ಭೂಮಿಯಲ್ಲಿ ಸಾಗುವಳಿ ಮಾಡಲು ಮುಂದಾದ ವಿಷಯ ತಿಳಿದು ದುಂಡಸಿ ಅರಣ್ಯ ಇಲಾಖೆಯ ಅಧಿಕಾರಿ ಸ್ಥಳಕ್ಕೆ ಭೇಟಿ ನೀಡಿದ್ದರು. ತಡಸ ಠಾಣೆಯ ಪೊಲೀಸ್​​ ಸಬ್​​ ಇನ್ಸ್​ಪೆಕ್ಟರ್​​​ ಕೂಡ ಸ್ಥಳಕ್ಕೆ ಹೋಗಿ …

Read More »

ಕೊಲೆ ಮಾಡಿದ್ದಕ್ಕೆ ಸುಳಿವು ಸಿಗಲ್ಲ ಅಂದುಕೊಂಡು ಹೆಂಡತಿಯನ್ನು ಹಾವಿನಿಂದ ಕಚ್ಚಿಸಿ ಸಾಯಿಸಿದ!; ಕೊನೆಗೂ ಆರೋಪ ಸಾಬೀತು..

ತಿರುವನಂತಪುರ: ಕೊಲೆಗಡುಕರು ಸುಳಿವೇ ಸಿಗದಂತೆ ಹತ್ಯೆ ಮಾಡಲು ನಾನಾ ಅಡ್ಡದಾರಿ ಕಂಡುಕೊಳ್ಳುತ್ತಾರೆ. ಅಂಥವರ ಪೈಕಿ ಇಲ್ಲೊಬ್ಬ ಕೊಲೆ ಮಾಡಿದ್ದು ಸುಲಭದಲ್ಲಿ ಗೊತ್ತಾಗಬಾರದು ಎಂಬ ಅಂದಾಜಿನಲ್ಲಿ ಹೆಂಡತಿಯನ್ನು ಹಾವಿನಿಂದ ಕಚ್ಚಿಸಿ ಸಾಯಿಸಿದ್ದಾನೆ. ಹೀಗೆ ಅತ್ಯಂತ ವಿಚಿತ್ರ ರೀತಿಯಲ್ಲಿ ಹೆಂಡತಿಯನ್ನು ಕೊಲೆ ಮಾಡಿದ್ದ ವ್ಯಕ್ತಿಯ ಅಪರಾಧ ಕೊನೆಗೂ ಸಾಬೀತಾಗಿದ್ದು, ನ್ಯಾಯಾಲಯ ಬುಧವಾರ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಲಿದೆ. ಕೊಲ್ಲಮ್​ನ ಹೆಚ್ಚುವರಿ ಸೆಷನ್ಸ್​ ಕೋರ್ಟ್​ ಈ ತೀರ್ಪನ್ನು ಪ್ರಕಟಿಸಿದೆ. ಈ ಪ್ರಕರಣದಲ್ಲಿ ಸೂರಜ್​ ಎಂಬಾತನೇ ಅಪರಾಧಿಯಾಗಿದ್ದು, …

Read More »

ರಾಜ್ಯಕ್ಕೆ ಕಲ್ಲಿದ್ದಲು ಸಿಕ್ಕಿದೆ, ವಿದ್ಯುತ್ ಅಭಾವ ಸೃಷ್ಟಿಯಾಗದು: ಸಚಿವ ಸುನಿಲ್ ಕುಮಾರ್

ಬೆಂಗಳೂರು : ರಾಜ್ಯದಲ್ಲಿ ಕಲ್ಲಿದ್ದಲು ಕೊರತೆಯಾಗದು ಮತ್ತು ವಿದ್ಯುತ್ ಅಭಾವ ಸೃಷ್ಟಿಯಾಗದು ಎಂದು ಇಂಧನ ಸಚಿವ ಸುನಿಲ್ ಕುಮಾರ್ ಅವರು ಸೋಮವಾರ ಹೇಳಿಕೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರ ಮುತುವರ್ಜಿಯಿಂದ ರಾಜ್ಯಕ್ಕೆ ಹಂಚಿಕೆಯಾಗಬೇಕಿದ್ದ ಕಲ್ಲಿದ್ದಲು ಸಿಕ್ಕಿದೆ ಎಂದರು. ದೇಶದಲ್ಲಿ ವಿದ್ಯುತ್‌ ಪೂರೈಕೆ ಸರಾಗವಾಗಿದ್ದು, ಕೊರತೆ ಉಂಟಾಗುವ ಯಾವುದೇ ಸ್ಥಿತಿಯಿಲ್ಲ. ಕೋಲ್‌ ಇಂಡಿಯಾ ಲಿ.ನಲ್ಲಿ ಸಾಕಷ್ಟು ಕಲ್ಲಿದ್ದಲು ದಾಸ್ತಾನು …

Read More »