ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಹಾನಗಲ್ ಹಾಗೂ ಸಿಂದಗಿ ಉಪಚುನಾವಣೆಯಲ್ಲಿ ಪ್ರಚಾರ ತಾರಕ್ಕಕೇರಿದ್ದು, ನಾಯಕರ ನಡುವಿನ ವಾಕ್ ಸಮರ ವೈಯುಕ್ತಿಕ ಹಂತದವರೆಗೂ ನಡೆದಿದೆ. ಈ ನಡುವೆ ಚಾಮರಾಜಪೇಟೆ ಶಾಸಕ, ಸಿದ್ದರಾಮಯ್ಯ ಅವರ ಆಪ್ತ ಜಮೀರ್ ಅಹ್ಮದ್ ಅವರು ದಳಪತಿಗಳ ವಿರುದ್ಧ ವೈಯುಕ್ತಿಕ ನಿಂದನೆಯನ್ನು ಮಾಡಿದ್ದಾರೆ. ಆದರೆ ಜಮೀರ್ ಅವರ ನಡೆ ಸ್ವಪಕ್ಷೀಯ ನಾಯಕರಿಗೂ ಕೂಡ ಮುಜುಗರ ಮೂಡಿಸಿದ್ದು, ಈ ಬಗ್ಗೆ ಹಲವು ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂಬ ಮಾತು ಕೇಳಿ ಬಂದಿದೆ. …
Read More »1-5ನೇ ತರಗತಿ ಮಕ್ಕಳಿಗೆ ಭೌತಿಕ ತರಗತಿಗಳು (ಅ.25) ಆರಂಭ ಮಾರ್ಗಸೂಚಿಗಳೇನು?
ಬೆಂಗಳೂರು: ಕೋವಿಡ್‌ದಿಂದಾಗಿ ಒಂದೂವರೆ ವರ್ಷದಿಂದ ಬಾಕಿಯಾಗಿದ್ದ 1-5ನೇ ತರಗತಿ ಮಕ್ಕಳಿಗೆ ಭೌತಿಕ ತರಗತಿಗಳು ಸೋಮವಾರ (ಅ.25) ಆರಂಭವಾಗುತ್ತಿವೆ. ಮಕ್ಕಳು ಕೋವಿಡ್ ಸುರಕ್ಷಾಕ್ರಮಗಳನ್ನು ಪಾಲಿಸುವಂತೆ ನೋಡಿಕೊಳ್ಳಲು ಶಿಕ್ಷಣ ಇಲಾಖೆಯ ಜಿಲ್ಲಾ ಉಪ ನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಶಿಕ್ಷಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಮಕ್ಕಳಲ್ಲಿ ಕೋವಿಡ್ ಕುರಿತು ಜಾಗೃತಿ ಮೂಡಿಸಲು ಕೋವಿಡ್ ಸೋಂಕಿನ ಕುರಿತು ತರಗತಿ ಅವಧಿಯಲ್ಲಿ ಮಾಹಿತಿ ನೀಡಬೇಕು ಎಂದು ನಿರ್ದೇಶನ ನೀಡಲಾಗಿದೆ. ಮಾರ್ಗಸೂಚಿಗಳೇನು? ಭೌತಿಕ ಹಾಜರಾತಿ ಕಡ್ಡಾಯವಲ್ಲ. ಆದರೆ, ಹಾಜರಾಗುವವರು ಪಾಲಕರಿಂದ …
Read More »#INDvPAK ಟೀಂ ಇಂಡಿಯಾ ವಿರುದ್ಧ ವಿಕೆಟ್ ನಷ್ಟವಿಲ್ಲದೇ ಹಾಫ್ ಸೆಂಚುರಿ ಗಳಿಸಿದ ಪಾಕ್
ದುಬೈನಲ್ಲಿ ನಡೆಯುತ್ತಿರುವ ಟಿ20 ವರ್ಲ್ಡ್ಕಪ್ನಲ್ಲಿ ಟೀಂ ಇಂಡಿಯಾ ಹಾಗೂ ಪಾಕ್ ಟೀಂ ಮುಖಾಮುಖಿಯಾಗಿದ್ದು ಹೈವೋಲ್ಟೇಜ್ ಮ್ಯಾಚ್ ಚಾಲ್ತಿಯಲ್ಲಿದೆ. ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಪಾಕ್ ಟೀಂ ಇಂಡಿಯಾವನ್ನ ಬ್ಯಾಟಿಂಗ್ಗೆ ಆಹ್ವಾನಿಸಿತು. ಆರಂಭಿಕ ಆಘಾತ ಅನುಭವಿಸಿದ ಟೀಂ ಇಂಡಿಯಾ 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 151 ರನ್ ಗಳಿಸಿತು. 152 ರನ್ಗಳ ಗುರಿ ಬೆನ್ನು ಹತ್ತಿದ ಪಾಕ್ ಟೀಂ ಆರಂಭದಲ್ಲಿ ಉತ್ತಮ ಪ್ರದರ್ಶನವನ್ನೇ ನೀಡಿದೆ. ಆರಂಭಿಕ ಬ್ಯಾಟ್ಸ್ಮನ್ಗಳಾಗಿ ಫೀಲ್ಡಿಗಿಳಿದ …
Read More »ಕಲ್ಲಿದ್ದಲು ಆಮದು ನಿಲ್ಲಿಸಲು ತೀರ್ಮಾನ: ಸಚಿವ ಪ್ರಲ್ಹಾದ ಜೋಶಿ
ಬೆಳಗಾವಿ: ‘ದೇಶದಲ್ಲಿ ಕಲ್ಲಿದ್ದಲು ಕೊರತೆ ಆಗಿದ್ದು ನಿಜ. ಇದನ್ನು ನಾವು ಅವಕಾಶವಾಗಿ ಬಳಸಿಕೊಂಡಿದ್ದೇವೆ. ದೇಶದಲ್ಲಿ ಲಭ್ಯವಿರುವ ಕಲ್ಲಿದ್ದಲನ್ನೇ ಅಪಾರ ಪ್ರಮಾಣದಲ್ಲಿ ಪೂರೈಸಲಾಗುತ್ತಿದೆ’ ಎಂದು ಕೇಂದ್ರ ಸಂಸದೀಯ ವ್ಯವಹಾರಗಳು, ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಲ್ಹಾದ ಜೋಶಿ ಪ್ರತಿಕ್ರಿಯಿಸಿದರು. ಕಿತ್ತೂರಿನಲ್ಲಿ ಪತ್ರಕರ್ತರೊಂದಿಗೆ ಶನಿವಾರ ಮಾತನಾಡಿದ ಅವರು, ‘ತೀವ್ರ ಮಳೆ ಹಾಗೂ ಕಲ್ಲಿದ್ದಲಿನ ಆಮದು ದರ ಹೆಚ್ಚಾಗಿದ್ದಕ್ಕೆ ದೇಶದಲ್ಲಿ ಕಲ್ಲಿದ್ದಲು ಕೊರತೆ ಆಗಿತ್ತು. ಸ್ವದೇಶಿ ಕಲ್ಲಿದ್ದಲನ್ನೆ ಅಪಾರ ಪ್ರಮಾಣದಲ್ಲಿ ಒದಗಿಸಲಾಗುತ್ತಿದೆ. ಇದರಿಂದಾಗಿ ಕಲ್ಲಿದ್ದಲು ಆಮದನ್ನು …
Read More »ಮಕ್ಕಳ ಜೊತೆ ಶಿಲ್ಪಾ ಶೆಟ್ಟಿ ಸುತ್ತಾಟ- ರಾಜ್ ಕುಂದ್ರಾ ಮಿಸ್ಸಿಂಗ್
ಮುಂಬೈ: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ, ಪತಿ ರಾಜ್ ಕುಂದ್ರಾ ಬಿಡುಗಡೆಯಾಗುತ್ತಿದ್ದಂತೆ ಸೋಶಿಯಲ್ ಮೀಡಿಯಾ ಸೇರಿದಂತೆ ತಮ್ಮ ದಿನ ನಿತ್ಯದ ಚಟುವಟಿಕೆಯಲ್ಲಿ ಸಖತ್ ಆ್ಯಕ್ಟಿವ್ ಆಗಿದ್ದಾರೆ. ಇದೀಗ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಆದರೆ ರಾಜ್ ಕುಂದ್ರಾ ಕಾಣಿಸದೇ ಇರುವುದರ ಕುರಿತಾಗಿ ಅಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದಾರೆ. ಈ ವೀಕೆಂಡ್‌ನಲ್ಲಿ ಶಿಲ್ಪಾ ಶೆಟ್ಟಿ ತಮ್ಮ ಮಕ್ಕಳಾದ ವಿಯಾನ್, ಸಮಿಷಾ ಹಾಗೂ ತಾಯಿ ಸುನಂದಾ ಶೆಟ್ಟಿ ಜೊತೆಯಲ್ಲಿ ಆಲಿಬಾಗ್‍ಗೆ ಹೋಗಿದ್ದಾರೆ. ಶಿಲ್ಪಾ ಶೆಟ್ಟಿ ತೆರಳುವಾಗ ನಗುಮೊಗದಿಂದಲೇ …
Read More »ಚಿಕ್ಕಬಳ್ಳಾಪುರ: ನೀರಲ್ಲಿ ಕೊಚ್ಚಿ ಹೋಗುತ್ತಿದ್ದ ಯುವಕನ ರಕ್ಷಣೆ
ಚಿಕ್ಕಬಳ್ಳಾಪುರ: ಭಾರೀ ಮಳೆಗೆ ತುಂಬಿ ಹರಿಯುತ್ತಿದ್ದ ರಸ್ತೆ ದಾಟಲು ಹೋಗಿ ಕೊಚ್ಚಿ ಹೋದ ಯುವಕ ಪ್ರಾಣಾಪಯದಿಂದ ಪಾರಾಗಿರುವ ಘಟನೆ ಜಿಲ್ಲೆಯ ಕಮ್ಮಗುಟ್ಟನಹಳ್ಳಿ ವ್ಯಾಪ್ತಿಯ ನವಿಲುಗುರ್ಕಿಯಲ್ಲಿ ಈ ಘಟನೆ ನಡೆದಿದೆ. ಭಾರೀ ಮಳೆ ಕಾರಣ ರಸ್ತೆ ಮೇಲೆ ರಭಸವಾಗಿ ನೀರು ಹರಿಯುತ್ತಿತ್ತು. ಈ ವೇಳೆ ಬೈಕ್ ಮೂಲಕ ಯುವಕ ರಸ್ತೆ ದಾಟಲು ಮುಂದಾಗಿದ್ದು ಈ ವೇಳೆ ಕೊಚ್ಚಿ ಹೋಗುತ್ತಿದ್ದ ಯುವಕನನ್ನ ಸ್ಥಳೀಯರು ಟ್ರ್ಯಾಕ್ಟರ್ ಮೂಲಕ ರಕ್ಷಣೆ ಮಾಡಿದ್ದಾರೆ. ಮಳೆಗೆ ತುಂಬಿ ಹರಿಯುತ್ತಿದ್ದ ರಸ್ತೆಯಲ್ಲಿ …
Read More »ನಾನು ಸಚಿವನಾಗಲು, ಸಿಎಂ ಆಗಲು ಯಡಿಯೂರಪ್ಪ ಕಾರಣ : ಬಸವರಾಜ ಬೊಮ್ಮಾಯಿ
ಹಾವೇರಿ: ‘ನಾನು ಬಿಜೆಪಿಗೆ ಬರಲು, ಶಾಸಕನಾಗಲು, ಸಚಿವನಾಗಲು ಮತ್ತು ಮುಖ್ಯಮಂತ್ರಿಯಾಗಲು ಯಡಿಯೂರಪ್ಪ ಅವರು ಕಾರಣ’ ಎಂದು ಸಿಎಂ ಬಸವರಾಜ ಬೊಮ್ಮಾಯಿ ಶುಕ್ರವಾರ ಹೇಳಿಕೆ ನೀಡಿದ್ದಾರೆ. ಬೊಮ್ಮನಹಳ್ಳಿಯಲ್ಲಿ ಏರ್ಪಡಿಸಿದ್ದ ಪ್ರಚಾರ ಸಭೆಯಲ್ಲಿ ಮಾತನಾಡಿದ ಸಿಎಂ , ‘ನಮ್ಮ ನಾಯಕ ಯಡಿಯೂರಪ್ಪ ಅವರು ಇಲ್ಲಿಗೆ ನೂರು ಬಾರಿ ಬಂದಿದ್ದಾರೆ, ಅವರು ಹಾಗೂ ಸಿಎಂ ಉದಾಸಿ ಅವರ ಚಿಂತನೆಯನ್ನು ಇಡಿ ನಾಡು ನೋಡಿದೆ. ರೈತರ ವಿಚಾರದಲ್ಲಿ ಯಡಿಯೂರಪ್ಪ ಎಂದು ರಾಜಿ ಮಾಡಿಕೊಂಡಿಲ್ಲ. ಬಿಜೆಪಿ ಮಾಡಿರುವ ಯೋಜನೆಗಳು …
Read More »ಆರ್ಯನ್ ಭೇಟಿ ಮಾಡಿದ ಶಾರುಖ್ ಖಾನ್ ತೆಗೆದುಕೊಂಡ್ರು ಕಠಿಣ ನಿರ್ಧಾರ; ಪರಿಣಾಮ ಯಾರ ಮೇಲೆ?
ಆರ್ಯನ್ ಖಾನ್ ಪ್ರಕರಣ ದಿನ ಕಳೆದಂತೆ ಜಟಿಲವಾಗುತ್ತಲೇ ಇದೆ. ಎನ್ಸಿಬಿ ನಿತ್ಯ ಹೊಸಹೊಸ ಸಾಕ್ಷ್ಯಗಳೊಂದಿಗೆ ಕೋರ್ಟ್ ಮುಂದೆ ಹಾಜರಿ ಹಾಕುತ್ತಿದೆ. ಆರ್ಯನ್ಗಿಂತಲೂ ಬಲವಾಗಿ ಎನ್ಸಿಬಿ ಪರ ವಕೀಲರು ವಾದ ಮಂಡಿಸುತ್ತಿದ್ದಾರೆ. ಶಾರುಖ್ ಖಾನ್ ಕಳೆದ ಅರ್ಧ ತಿಂಗಳಿಂದ ಚಿಂತೆಗೆ ಒಳಗಾಗಿದ್ದಾರೆ. ಆರ್ಯನ್ ಖಾನ್ ಬಂಧನದ ನಂತರದಲ್ಲಿ ಅವರು ಸಂಪೂರ್ಣವಾಗಿ ಚಿಂತೆಗೆ ಒಳಗಾಗಿದ್ದಾರೆ. ಆರ್ಯನ್ ಖಾನ್ ಅವರನ್ನು ಹೇಗೆ ಜೈಲಿನಿಂದ ಹೊರಗೆ ತರಬೇಕು ಎನ್ನುವ ಚಿಂತೆ ಬಿಟ್ಟೂ ಬಿಡದೇ ಕಾಡುತ್ತಿದೆ. ಅವರು ಸಾರ್ವಜನಿಕವಾಗಿ …
Read More »ಕಲಘಟಗಿ ಸಾಂಸ್ಕೃತಿಕ ಭವನ ಕಟ್ಟಡ ನಿರ್ಮಿಸುವ ಹೆಸರಲ್ಲಿ ಮರಗಳಿಗೆ ಕೊಡಲಿ ಪೆಟ್ಟು :ಪರಿಸರ ಪ್ರೇಮಿಗಳ ವಿರೋಧ
ಕಲಘಟಗಿ:ತಾಲೂಕ ಸರ್ಕಾರಿ ನೌಕರರ ಸಾಂಸ್ಕೃತಿಕ ಭವನ ಕಟ್ಟಡ ನಿರ್ಮಿಸುವ ಹೆಸರನಲ್ಲಿ ಅನೇಕ ಮರಗಳ ಮಾರಣಹೋಮ ನಡೆದಿದೆ ವಿಷಯ ತಿಳಿದ ಪರಿಸರ ಪ್ರೇಮಿಗಳು ಮತ್ತು ಪಟ್ಟಣದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದಿದ್ದಾರೆ ಪಟ್ಟಣದ ಸರ್ಕಾರಿ ನೌಕರ ಭವನದ ಆವರಣದಲ್ಲಿರುವ 30 ರಿಂದ 50 ವರ್ಷದಿಂದ ಹೆಮ್ಮರವಾಗಿ ಬೆಳೆದು ಉತ್ತಮ ಗಾಳಿ, ಪರಿಸರ ನೀಡುವ ಮರಗಳಿಗೆ ಕೊಡಲಿ ಪೆಟ್ಟು ಹಾಕಿ ಕಡಿಯಲು ಹೊರಟಿರುವದು ಯಾವ ನ್ಯಾಯ ಎಂದು ಪ್ರಶ್ನಿಸಿದ್ದಾರೆ ತಾಲ್ಲೂಕ ನೌಕರರ …
Read More »ಬಿಜೆಪಿ ಮತ್ತು ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದ ದಲಿತ ಮುಖಂಡ ಶ್ರೀನಾಥ್ ಪೂಜಾರಿ
ಸಿಂದಗಿಯಲ್ಲಿ ಪಾಕ್ ಧ್ವಜ ಹಾರಿಸಿದ ಆರೋಪಿಗಳಿಗೆ ಜಾಮೀನು ನೀಡಲು ಸಹಕರಿಸಿದ ಹಾಗೂ ನೂತನ ಕ್ರೀಡಾಂಗಣದಲ್ಲಿರುವ ಮಸೀದಿಯನ್ನು ಇಂದಿನ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿರುವ ರಮೇಶ್ ಭೂಸನೂರರವರು ತೆರವುಗೊಳಿಸುವಾಗ ಇಂದಿನ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಅಶೋಕ್ ಮನಗೂಳಿಯವರು ಯಾವುದೇ ರೀತಿಯ ಪ್ರತಿಭಟನೆ ಮಾಡದೇ ಮೌನ ಸಮ್ಮತಿ ಸೂಚಿಸಿರುವುದು ಮನುವಾದಿ ಮನಸ್ಥಿತಿ ತೋರುತ್ತದೆ. ಪ್ರಸ್ತುತ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಅಶೋಕ್ ಮನಗೂಳಿ ಅವರಿಗೆ ಮುಸ್ಲಿಂ ಮತ ಕೇಳಲು ನಾಚಿಕೆ ಆಗುವುದಿಲ್ಲವೇ..? RSS ಗರಡಿಯಲ್ಲಿ …
Read More »
Laxmi News 24×7