Breaking News
Home / ರಾಷ್ಟ್ರೀಯ (page 790)

ರಾಷ್ಟ್ರೀಯ

ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿಗೆ ಬೆಳಗಾವಿ ಹುಕ್ಕೇರಿ ಹಿರೇಮಠದಿಂದ ಗೌರವ

ಹರಿಹರ (ರಾಜನಹಳ್ಳಿ): ವಾಲ್ಮೀಕಿ ಜಾತ್ರಾ ಮಹೋತ್ಸವವನ್ನು ಯಶಸ್ವಿಯಾಗಿ ಸಂಘಟಿಸುತ್ತಿರುವ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ ಅವರಿಗೆ ಬೆಳಗಾವಿಯ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಸ್ಮರಣಿಕೆ ನೀಡಿ ಸನ್ಮಾನಿಸಿದರು. ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸತೀಶ ಜಾರಕಿಹೊಳಿ ಅವರು ಸ್ವಾಮೀಜಿ ಯವರನ್ನು ಸನ್ಮಾನಿಸಿ ಮಾತನಾಡಿ, “ಬೆಳಗಾವಿ ಹುಕ್ಕೇರಿ ಹಿರೇಮಠ ಎಲ್ಲ ಸಮುದಾಯದೊಂದಿಗೆ ಬೆರೆತು ಕಾರ್ಯವನ್ನು ಮಾಡುತ್ತಿದೆ. ವಾಲ್ಮೀಕಿ ಪೀಠದ ಗುರುಗಳಿಗೆ ಗೌರವಿಸಿದ್ದು ನನಗೆ ಅತೀವ ಸಂತಸ ತಂದಿದೆ” ಎಂದು ಹೇಳಿದರು. ಹುಕ್ಕೇರಿ ಹಿರೇಮಠದ …

Read More »

ನಟ ಸುದೀಪ್ ನೋಡಲು ಮುಗಿಬಿದ್ದ ಅಭಿಮಾನಿಗಳು : ಪೊಲೀಸರಿಂದ ಲಾಠಿ ಪ್ರಹಾರ, ಖುರ್ಚಿ, ಸೋಫಾ ಪೀಸ್​ ಪೀಸ್

ದಾವಣಗೆರೆ : ಜಿಲ್ಲೆ ಹರಿಹರ ತಾಲ್ಲೂಕಿನ ರಾಜನಹಳ್ಳಿಯಲ್ಲಿ ನಡೆದ ವಾಲ್ಮೀಕಿ ಜಾತ್ರೆಯಲ್ಲಿ ಮಂಗಳವಾರ ನಟ ಸುದೀಪ ಅವರಿಗೆ ಪ್ರಸನ್ನಾನಂದ ಸ್ವಾಮೀಜಿ ‘ ವಾಲ್ಮೀಕಿ ರತ್ನ’ ಪ್ರಶಸ್ತಿ ನೀಡಿ ಗೌರವಿಸಿದರು. ಈ ಮೊದಲು ನಟ ಕಿಚ್ಚ ಸುದೀಪ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದಂತೆ ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನ ನೋಡಲು ಹಾಗೂ ಸೆಲ್ಫಿ ತೆಗೆಸಿಕೊಳ್ಳಲು ಜಮಾಯಿಸಿದಾಗ ನೂಕು ನುಗ್ಗಲು ಸಂಭವಿಸಿದೆ. ಪರಿಸ್ಥಿತಿಯನ್ನ ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ. ಈ ವೇಳೆ ಸುದೀಪ್​ …

Read More »

ಪೊಲೀಸ್ ದಾಳಿಗೆ ಹೆದರಿ ನದಿಗೆ ಹಾರಿದ ಯುವಕರ ಮೃತದೇಹ ಪತ್ತೆ!!

ರಾಮದುರ್ಗ: ಜೂಟಾಟ ವೇಳೆ ಪೊಲೀಸರು ದಾಳಿ  ನಡೆಸಿದ ವೇಳೆ ಹೆದರಿ ಮಲಪ್ರಭಾ ನದಿಗೆ ಹಾರಿದ ಇಬ್ಬರ ಮೃತದೇಹ    ಪತ್ತೆಯಾಗಿವೆ. ಮಂಜು ಬಂಡಿವಡ್ಡರ್(30), ಸಮೀರ್ ಬಟಕುರ್ಕಿ(22) ಮೃತರು. ಮಲಪ್ರಭಾ ನದಿ ದಡದಲ್ಲಿ ಜೂಜಾಡುತ್ತಿದ್ದ ಯುವಕರ ಗುಂಪಿನ ಮೇಲೆ ರಾಮದುರ್ಗ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ ಬಂಧನ ಭೀತಿಯಿಂದ ಆರು ಜನರು ಮಲಪ್ರಭಾ ನದಿಗೆ ಹಾರಿದ್ದರು. ಈ ವೇಳೆ ನಾಲ್ವರು ಈಜಿ ದಡ ಸೇರಿದ್ರೆ ಇಬ್ಬರು ಯುವಕರು ನಾಪತ್ತೆಯಾಗಿದ್ದರು. ಬೆಳಗ್ಗೆಯಿಂದ …

Read More »

ವಾಲ್ಮೀಕಿ ಜಾತ್ರೆಯಲ್ಲಿ ಪ್ರಿಯಾಂಕ.. ಪುತ್ರಿಗೆ ರಾಜಕೀಯ ತರಬೇತಿ ನೀಡುತ್ತಿದ್ದಾರಾ ಸತೀಶ್ ಜಾರಕಿಹೊಳಿ?

ದಾವಣಗೆರೆ : ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ತಮ್ಮ ಮಗಳಿಗೆ ರಾಜಕೀಯ ತರಬೇತಿ ನೀಡುತ್ತಿದ್ದಾರಾ ಎಂಬ ಅನುಮಾನ ಕಾಡುತ್ತಿದೆ. ವಾಲ್ಮೀಕಿ ಜಾತ್ರೆಯಲ್ಲಿ ಪ್ರಿಯಾಂಕ ಜಾರಕಿಹೊಳಿ.. ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿ ವಾಲ್ಮೀಕಿ ಮಠದಲ್ಲಿ ನಡೆಯುತ್ತಿರುವ 3ನೇ ಮಹರ್ಷಿ ವಾಲ್ಮೀಕಿ ಜಾತ್ರೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಮಗಳು ಪ್ರಿಯಾಂಕ ಅವರು ಆಗಮಿಸಿ, ವಾಲ್ಮೀಕಿ ಮಠದ ಪ್ರಸನ್ನಾನಂದಪುರಿ ಸ್ವಾಮೀಜಿ ಜೊತೆ ವೇದಿಕೆ ಹಂಚಿಕೊಂಡಿದ್ದಾರೆ. ಕೆಲವು ದಿನಗಳಿಂದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಸಹ ಹೆಚ್ಚು …

Read More »

ಮಾರುಕಟ್ಟೆಗೆ ಬರಲಿದೆ ಜಾಗ್ವಾರ್ ಐ ಪೇಸ್

ನವ ದೆಹಲಿ : ಜಾಗ್ವಾರ್ ಲ್ಯಾಂಡ್ ರೋವರ್ ನ, ಜಾಗ್ವಾರ್ ಐ ಪೇಸ್ ಎಲೆಕ್ಟ್ರಿಕ್ ಎಸ್ ಯು ವಿ ಕಾರು ಭಾರತದ ಮಾರುಕಟ್ಟೆಯನ್ನು ಪ್ರವೇಶಿಸುತ್ತಿದೆ ಎಂಬ ಸುದ್ದಿಯನ್ನು ಕಂಪೆನಿ ಈಗ ಬಹಿರಂಗ ಪಡಿಸಿದೆ., ಹೌದು, ಬರುವ ಮಾರ್ಚ್ 9ರಂದು ಭಾರತದಲ್ಲಿ ಬಿಡುಗಡೆಗೊಳ್ಳಲಿದೆ ಜಾಗ್ವಾರ್ ಐ ಪೇಸ್. ಜಾಗ್ವಾರ್ ಐ ಪೇಸ್ ಎಲೆಕ್ಟ್ರಿಕ್ ಎಸ್ ಯು ವಿ ನ ಪ್ರಾಥಮಿಕ ಮಾಡೆಲ್ ಜನವರಿಯಲ್ಲಿ ಭಾರತಕ್ಕೆ ಬಿಡುಗಡೆಗೊಂಡಿತ್ತು. ಮಾತ್ರವಲ್ಲದೇ, ದೇಶದ ಮೊದಲ ಎಲೆಕ್ಟ್ರಿಕ್ …

Read More »

ಹುಕ್ಕೇರಿ ನೂತನ ತಹಶೀಲ್ದಾರ್ ಡಿ.ಎಚ್. ಹೂಗಾರ ಅಧಿಕಾರ ಸ್ವೀಕಾರ

ಹುಕ್ಕೇರಿ: ತಾಲೂಕಿನ ನೂತನ ತಹಶೀಲ್ದಾರ ಆಗಿ ಡಿ.ಎಚ್. ಹೂಗಾರ ಅಧಿಕಾರ ಸ್ವೀಕರಿಸಿದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಶಾಸಕ ಸತೀಶ ಜಾರಕಿಹೊಳಿ ಅವರು ನೂತನ ತಹಶೀಲ್ದಾರರನ್ನು ಸ್ವಾಗತಿಸಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ತಹಶೀಲ್ದಾರ್ ಹೂಗಾರ ಅವರು ಶಾಸಕ ಸತೀಶ ಜಾರಕಿಹೊಳಿ ಅವರನ್ನು ಸತ್ಕರಿಸಿದರು.

Read More »

ಭಗವಾನ್ ಮುಖಕ್ಕೆ ಮಸಿ ಬಳಿದ ವಕೀಲೆ ಮೀರಾ ರಾಘವೇಂದ್ರ ಗಡಿಪಾರಿಗೆ ಆಗ್ರಹ

  ರಾಮನಗರ : ಹಿರಿಯ ಸಾಹಿತಿ, ವಿಚಾರವಾದಿ ಪ್ರೊ.ಕೆ.ಎಸ್.ಭಗವಾನ್ ಮುಖಕ್ಕೆ ಮಸಿ ಬಳಿದ ಘಟನೆ ಖಂಡಿಸಿ ಪ್ರಗತಿಪರ ಹಾಗೂ ದಲಿತ ಸಮಾನ ಮನಸ್ಕರ ಒಕ್ಕೂಟದಿಂದ ಸೋಮವಾರ ಪ್ರತಿಭಟನೆ ನಡೆಸಿದರು. ವಕೀಲೆ ಮೀರಾ ರಾಘವೇಂದ್ರ ಅವರ ಗಡಿಪಾರಿಗೆ ಆಗ್ರಹಿಸಿದರು. ಇಲ್ಲಿನ ಕುವೆಂಪು ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪ್ರತಿಭಟನೆ ಪ್ರಾರಂಭಿಸಿದರು.ಪ್ರೊ. ಕೆ. ಎಸ್. ಭಗವಾನ್ ಮುಖಕ್ಕೆ ಮಸಿ‌ ಬಳಿದ ವಕೀಲೆ ವೀರಾ ರಾಘುವೇಂದ್ರ‌ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶವನ್ನು ವ್ಯಕ್ತಪಡಿಸಿದರು. ದೇಶದ ಸಂವಿಧಾನದ …

Read More »

ಪೊಲೀಸ್ ದಾಳಿಗೆ ಹೆದರಿ ಜೂಜಾಟದಲ್ಲಿ ತೊಡಗಿದ್ದ ಇಬ್ಬರು ನೀರು ಪಾಲು

ರಾಮದುರ್ಗ: ಯುವಕರ ಗುಂಪು ಜೂಜಾಟದಲ್ಲಿ ತೊಡಗಿದ್ದು, ಪೊಲೀಸ್ ದಾಳಿ ನಡೆಸಿದ್ದರಿಂದ ಇಬ್ಬರು ಮಲಪ್ರಭಾ ನದಿಗೆ ಹಾರಿದ ಘಟನೆ ನಡೆದಿದೆ. ನದಿಯ ಪಕ್ಕದ ಪೊದೆಯ ಬಳಿ ಗುಂಪು ಪೊಲೀಸರು ಬಂದಿದ್ದರಿಂದ ಹೆದರಿ ಓಡಿಹೋಗಿದ್ದಾರೆ. ಈ ವೇಳೆ ಇಬ್ಬರು ನದಿ ನೀರಿಗೆ ಹಾರಿದ್ದಾರೆ. ಅವರ ಪತ್ತೆಗಾಗಿ ಕಾರ್ಯಾಚರಣೆ ನಡೆದಿದೆ.ಪೊಲೀಸರು, ಅಗ್ನಿಶಾಮಕ ದಳದವರು ಹಾಗೂ ಈಜು ತಜ್ಞರು ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಮಂಜುನಾಥ ಲಕ್ಷ್ಮಣ ಬಂಡಿವಡ್ಡರ (28) ಹಾಗೂ ಸಮೀರ ಮಹಮದಸಾಬ ಬಟಕುರ್ಕಿ (23) ನದಿಗೆ …

Read More »

ಬೆಳಗಾವಿ ಲೋಕಸಭೆ ಉಪಚುನಾವಣೆ: ಮತಗಟ್ಟೆಗಳ ತಯಾರಿ ನಡೆಸಿರುವ ಅಧಿಕಾರಿಗಳು

ಬೆಳಗಾವಿ: ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಗಾಗಿ ಮತಗಟ್ಟೆಗಳನ್ನು ತಯಾರಿಸುವ ಕಾರ್ಯವನ್ನು ಜಿಲ್ಲಾಡಳಿತ ಆರಂಭಿಸಿದೆ. ಚುನಾವಣಾ ದಿನಾಂಕ ಘೋಷಣೆಗೆ ಕ್ಷಣಗಣನೆ ಆರಂಭವಾಗಿದೆ ಎನ್ನಲಾಗುತ್ತಿದ್ದು, ಚುನಾವಣಾ ಆಯೋಗದ ಸೂಚನೆಯಂತೆ ಅಧಿಕಾರಿಗಳು, ವಿವಿಧ ಸರ್ಕಾರಿ ಶಾಲೆಗಳಿಗೆ ಭಾನುವಾರ ಭೇಟಿ ನೀಡಿ ಅಲ್ಲಿನ ಮೂಲ ಸೌಲಭ್ಯಗಳು ಮತ್ತು ಮತಗಟ್ಟೆಯಾಗಿ ಪರಿವರ್ತಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮಾಹಿತಿ ಸಂಗ್ರಹಿಸಿದರು. ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದ ಸುರೇಶ ಅಂಗಡಿ ಅವರು ಸೆ. 23ರಂದು ಕೋವಿಡ್‌ನಿಂದಾಗಿ …

Read More »

ವಾಲ್ಮೀಕಿ ಜಾತ್ರೆಯಲ್ಲಿ ಮೀಸಲಾತಿ ಹೆಚ್ಚಳ ಕುರಿತು ಚರ್ಚೆ : ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ

ಗೋಕಾಕ : ವಾಲ್ಮೀಕಿ ಸಮಾಜಕ್ಕೆ ಮೀಸಲಾತಿ ಹೆಚ್ಚಳ ಮಾಡಬೇಕು ಎಂಬ ಒತ್ತಾಯ ಹಲವು ವರ್ಷಗಳಿಂದಲೂ ಇದೆ. ಆ ವಿಷಯವಾಗಿ ವಾಲ್ಮೀಕಿ ಜಾತ್ರೆಯಲ್ಲಿ ಚರ್ಚೆ ನಡೆಯಲಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು. ಇಲ್ಲಿನ ಹಿಲ್ ಗಾರ್ಡನ್ ಕಚೇರಿಯಲ್ಲಿ ಮಾತನಾಡಿದ ಅವರು, ಪ್ರತಿ ವರ್ಷದಂತೆ ಈ ಬಾರಿಯೂ ಸಹ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕು ರಾಜನಹಳ್ಳಿ ಗ್ರಾಮದಲ್ಲಿರುವ ವಾಲ್ಮೀಕಿ ಗುರುಪೀಠದಲ್ಲಿ ಫೆಬ್ರವರಿ 8 ಮತ್ತು 9 ರಂದು ಮಹರ್ಷಿ ವಾಲ್ಮೀಕಿ …

Read More »