ಸವದತ್ತಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಸ್ಪರ್ಧೆ ಬಗ್ಗೆ ಹೇಳಲು ಆಗಲ್ಲ. ಜನವರಿ ನಂತರ ಯಾರು ಸ್ಪರ್ಧೆ ಮಾಡುತ್ತಾರೆ ಎಂಬುದು ಸ್ಪಷ್ಟವಾಗಲಿದೆ. ಜನವರಿ ನಂತರ ರಾಜ್ಯದಲ್ಲಿ ಬದಲಾವಣೆ ಪರ್ವ ಆರಂಭವಾಗಲಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೊಸ ಬಾಂಬ್ ಸಿಡಿಸಿದ್ದಾರೆ. ಬೆಳಗಾವಿಯ ಡಿಸಿ ಕಚೇರಿ ಬಳಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಸತೀಶ ಜಾರಕಿಹೊಳಿ ಸವದತ್ತಿಯಲ್ಲಿ ಯಾವುದೇ ಗೊಂದಲ ಇಲ್ಲ, ಎಲ್ಲಾ ಕ್ಲಿಯರ್ ಇದೆ. ಸವದತ್ತಿಯಲ್ಲಿ ಗ್ರೌಂಡ್ ಸಿದ್ಧಪಡಿಸುತ್ತಿದ್ದೇವೆ. ಸ್ಥಳೀಯರು ಮತ್ತು …
Read More »ಡಾಕ್ಯುಮೆಂಟರಿ ಪೋಸ್ಟರ್‌ನಲ್ಲಿ ಹಿಂದು ದೇವತೆಗೆ ಅಪಮಾನ
ಡಾಕ್ಯುಮೆಂಟರಿ ಚಲನ ಚಿತ್ರದ ಪೋಸ್ಟರ್ ಒಂದರಲ್ಲಿ ಹಿಂದು ದೇವತೆಗಳಿಗೆ ಅಪಮಾನವಾಗಿರುವುದಕ್ಕೆ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭಾರತೀಯ ಚಲನಚಿತ್ರ ನಿರ್ಮಾಪಕಿ ಲೀನಾ ಮಣಿಮೇಕಲೈ ನಿರ್ದೇಶಿಸಿದ ಸಾಕ್ಷ್ಯಚಿತ್ರದ ಪೋಸ್ಟರ್ನಲ್ಲಿ ಕಾಳಿ ದೇವಿಯ ಚಿತ್ರಣದೊಂದಿಗೆ ಹಿಂದೂ ಭಾವನೆಗಳನ್ನು ಘಾಸಿಗೊಳಿಸಿದ್ದಕ್ಕಾಗಿ ಆಕ್ರೋಶವನ್ನು ಹುಟ್ಟುಹಾಕಿದೆ. ಅಗಾ ಖಾನ್ ಮ್ಯೂಸಿಯಂನಲ್ಲಿ ರಿದಮ್ಸ್ ಆಫ್ ಕೆನಡಾದ ಭಾಗವಾಗಿ ತಮ್ಮ ಮುಂಬರುವ ಸಾಕ್ಷ್ಯ ಚಿತ್ರದ ಪೋಸ್ಟರ್ ಒಂದನ್ನು ನಿರ್ದೇಶಕಿ ಮಣಿಮೇಕಲೈ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಈ ಪೋಸ್ಟರ್ ನಲ್ಲಿ …
Read More »ಸಿದ್ದರಾಮೋತ್ಸವ’ಕ್ಕೆ ಮೂಲ ಕಾಂಗ್ರೆಸ್ಸಿಗರಿಂದ ಅಸಮಾಧಾನ
ಬೆಂಗಳೂರು: ‘ಸಿದ್ದರಾಮೋತ್ಸವ’ಕ್ಕೆ ಮೂಲ ಕಾಂಗ್ರೆಸ್ಸಿಗರಿಂದ ಅಸಮಾಧಾನ ಭುಗಿಲೆದ್ದಿದ್ದು, ಸಿದ್ದರಾಮಯ್ಯ ಒಬ್ಬರೇ ನಾಯಕರಲ್ಲ ಇನ್ನೂ ಹಿರಿಯ ನಾಯಕರು ಇದ್ದಾರೆ ಎನ್ನುವ ಅರ್ಥದಲ್ಲಿ ಡಿಕೆಶಿ ಟಾಂಗ್ ಕೊಟ್ಟಿದ್ದಾರೆ. ತಮ್ಮ ಹುಟ್ಟುಹಬ್ಬವನ್ನು ಶಕ್ತಿ ಪ್ರದರ್ಶನದ ರೀತಿಯಲ್ಲಿ ಸಿದ್ದರಾಮಯ್ಯ ಆಚರಣೆ ಮಾಡಿಕೊಳ್ಳುತ್ತಿದ್ದು, ಆಗಸ್ಟ್ 3ರಿಂದ ‘ಸಿದ್ದರಾಮೋತ್ಸವ’ ಕಾರ್ಯಕ್ರಮ ಮಾಡಲು ದೇಶಪಾಂಡೆ ಸಮಿತಿ ನಿರ್ಧಾರ ಮಾಡಿದೆ. ಸುಮಾರು 5 ಲಕ್ಷ ಜನರನ್ನು ಸೇರಿಸಿ ಬೃಹತ್ ಕಾರ್ಯಕ್ರಮ ಮಾಡಲು ಸಮಿತಿ ತೀರ್ಮಾನಿಸಿದೆ. ಕಾಂಗ್ರೆಸ್ ಕಾರ್ಯಕರ್ತರು, ಸಿದ್ದರಾಮಯ್ಯ ಅಭಿಮಾನಿಗಳು ಈ ಕಾರ್ಯಕ್ರಮದಲ್ಲಿ …
Read More »ಜುಲೈ ಅಂತ್ಯದೊಳಗೆ 15,000 ಶಾಲಾ ಶಿಕ್ಷಕರ ನೇಮಕಾತಿ ಆಯ್ಕೆ ಪಟ್ಟಿ ಪ್ರಕಟ – ಸಚಿವ ಬಿ.ಸಿ ನಾಗೇಶ್
ಬೆಂಗಳೂರು: 15,000 ಶಾಲಾ ಶಿಕ್ಷಕರ ನೇಮಕಾತಿ ( Teacher Recruitment 2022 ) ಸಂಬಂಧ ನಡೆದಂತ ಸ್ಪರ್ಧಾತ್ಮಕ ಪರೀಕ್ಷೆಯ ಫಲಿತಾಂಶವನ್ನು ಜುಲೈ ಅಂತ್ಯದೊಳಗೆ ಪ್ರಕಟಿಸಲಾಗುತ್ತದೆ ಎಂಬುದಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, 15 ಸಾವಿರ ಶಿಕ್ಷಕರ ಪರೀಕ್ಷೆಯ ನಂತ್ರ ಮೌಲ್ಯ ಮಾಪನ ಕಾರ್ಯ ನಡೆಯುತ್ತಿದೆ. ಎರಡು ಪತ್ರಿಕೆಯ ಮೌಲ್ಯಮಾಪನ ಮುಗಿದಿದ್ದು, ಜುಲೈ ಕೊನೆಯ ವಾರ ಮೌಲ್ಯಮಾಪನ …
Read More »ಬೆಂಗಳೂರಲ್ಲೇ ಸುಮಾರು 30 ಸಾವಿರಕ್ಕೂ ಹೆಚ್ಚು ಎಕರೆ ಭೂಮಿಯನ್ನು ಭೂಗಳ್ಳರು ಕಬಳಿಸಿದ್ದಾರೆ. : ಹೆಚ್. ಡಿ ಕುಮಾರಸ್ವಾಮಿ
ಬೆಂಗಳೂರು: ರಾಜಕಾಲುವೆಗಳ ಮೇಲೆ ನಿರ್ಮಾಣವಾಗಿರುವ ಮಾಲ್‌ಗಳು, ಅರಮನೆಯಂಥ ಬಂಗಲೆಗಳ ಮೇಲೆ ಬುಲ್ಡೋಜರ್‌ಗಳು ಹೋಗುವುದಿಲ್ಲ. ಆದರೆ, ಬಡವರು ಯಾರಾದರೂ ಸಣ್ಣ ಮನೆ, ಗುಡಿಸಲು ಕಟ್ಟಿಕೊಂಡಿದ್ದರೆ ಅವರ ಮನೆಗಳ ಮೇಲೆ ಬುಲ್ಡೋಜರ್‌ಗಳು ನಿರ್ದಯವಾಗಿ ಹರಿಯುತ್ತವೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್. ಡಿ ಕುಮಾರಸ್ವಾಮಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೆಬ್ಬಾಳ ವಿಧಾನಸಭೆ ಕ್ಷೇತ್ರದ ನಾಗೇನಹಳ್ಳಿಯಲ್ಲಿ ಭಾನುವಾರ ಸಂಜೆ ನಡೆದ ʼಜನತಾಮಿತ್ರʼ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬಡವರಿಗೆ, ಮಧ್ಯಮವರ್ಗದ ಜನರಿಗೆ ಕಡಿಮೆ ದರದಲ್ಲಿ ನಿವೇಶನ, ಮನೆ …
Read More »ಏಕನಾಥ್ ಶಿಂದೆಗೆ ಇಂದು ‘ಬಹುಮತ’ ಪರೀಕ್ಷೆ;
ಮುಂಬೈ (ಮಹಾರಾಷ್ಟ್ರ): ಉದ್ಧವ್ ಠಾಕ್ರೆ ವಿರುದ್ಧ ಬಂಡೆದ್ದು ಬಿಜೆಪಿಯ ಬೆಂಬಲದಿಂದ ಮಹಾರಾಷ್ಟ್ರದ ಮುಖ್ಯಮಂತ್ರಿ ಆಗಿರುವ ಏಕನಾಥ್ ಶಿಂದೆ ಇಂದು ವಿಶ್ವಾಸಮತದ ಅಗ್ನಿಪರೀಕ್ಷೆ ಎದುರಿಸುವರು. ನಿನ್ನೆಯಿಂದ ಆರಂಭವಾಗಿರುವ ವಿಶೇಷ ಅಧಿವೇಶನದ ಮೊದಲ ದಿನ ಸ್ಪೀಕರ್ ಆಯ್ಕೆಯಲ್ಲಿ ಗೆದ್ದಿದ್ದ ಶಿಂದೆ ಇಂದಿನ ಪರೀಕ್ಷೆಯಲ್ಲೂ ಸಲೀಸಾಗಿ ಜಯಿಸಲಿದ್ದಾರೆ. ವಿಶ್ವಾಸಮತವನ್ನು ಗೆಲ್ಲಲು ಬಿಜೆಪಿ ಮತ್ತು ಶಿವಸೇನೆ ಬಂಡಾಯ ಶಾಸಕರು ಸಭೆ ನಡೆಸಿ ರಣತಂತ್ರ ರೂಪಿಸಿದ್ದಾರೆ. ಏಕನಾಥ್ ಶಿಂದೆ ಸರ್ಕಾರಕ್ಕೆ ಅಗತ್ಯ ಬಹುಮತ ಇರುವ ಕಾರಣ ಇಂದಿನ ವಿಶ್ವಾಸಮತ …
Read More »ಮುಂದಿನ 30-40 ವರ್ಷಗಳು ಬಿಜೆಪಿ ಯುಗವಾಗಿರಲಿದೆ: ಅಮಿತ್ ಶಾ
ಹೈದರಾಬಾದ್: ಮುಂದಿನ 30 ರಿಂದ 40 ವರ್ಷಗಳು ಭಾರತೀಯ ಜನತಾ ಪಕ್ಷದ ಯುಗವಾಗಿರಲಿದೆ. ಅಲ್ಲದೆ ಭಾರತವು ಈ ಸಮಯದಲ್ಲಿ ವಿಶ್ವಗುರುವಾಗಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು. ಹೈದರಾಬಾದ್ ನಲ್ಲಿ ನಡೆಯುತ್ತಿರುವ ಪಕ್ಷದ ರಾಷ್ಟ್ರೀಯ ಕಾರ್ಯಕಾರಣಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಕುಟುಂಬದ ರಾಜಕೀಯ, ಜಾತಿವಾದ ಮತ್ತು ತುಷ್ಟೀಕರಣದ ರಾಜಕೀಯಗಳು “ಮಹಾನ್ ಪಾಪಗಳು” ಮತ್ತು ವರ್ಷಗಳಿಂದ ದೇಶವು ಅನುಭವಿಸುತ್ತಿರುವ ನೋವುಗಳ ಹಿಂದಿನ ಕಾರಣ ಎಂದು ಶಾ ಹೇಳಿದರು. …
Read More »ರಜೆಯೂ ಇಲ್ಲ, ಭತ್ಯೆಯೂ ಸಿಗ್ತಿಲ್ಲ!; ಪೊಲೀಸ್ ಕಾನ್ಸ್ಟೇಬಲ್ಗಳಿಗೆ ಗೋಳು, ಠಾಣಾಧಿಕಾರಿಗೆ ಇಕ್ಕಟ್ಟು..
ಬೆಂಗಳೂರು :ವರಿಷ್ಠಾಧಿಕಾರಿಗಳ ಆದೇಶ ಒಂದೆಡೆ…, ಹಿರಿಯ ಅಧಿಕಾರಿಗಳ ಒತ್ತಡ ಇನ್ನೊಂದೆಡೆ. ಆದರೆ, ನಲುಗುತ್ತಿರುವವರು ಮಾತ್ರ ಕಾನ್ಸ್ಟೇಬಲ್ಗಳು…. ಆರಕ್ಷಕರಿಗೆ ದಿನದ ಹದಿಮೂರು ತಾಸು ಕೆಲಸ ಮಾಡಿದರೂ ಸಿಗಬೇಕಾದ ಸೌಲಭ್ಯ ಸಿಗುತ್ತಿಲ್ಲ. ರಜೆಯೂ ಇಲ್ಲ; ಕೆಲಸ ಮಾಡಿದರೆ ಭತ್ಯೆಯೂ ದೊರೆಯದ ಅತಂತ್ರ ಸ್ಥಿತಿ ಅವರದ್ದಾಗಿದೆ. ಹೀಗಾಗಿ ಕಡ್ಡಾಯವಾಗಿ ವಾರದ ರಜೆ ಹಾಗೂ ರಜೆ ಬದಲಿಗೆ ಭತ್ಯೆ ಕೊಡುವ ವಿಚಾರದಲ್ಲಿ ಪೊಲೀಸ್ ಅಧಿಕಾರಿಗಳು ‘ಕಳ್ಳಾಟ’ ಆಡುತ್ತಿರುವ ಆರೋಪ ಕೇಳಿಬಂದಿದೆ. ಕಡ್ಡಾಯವಾಗಿ ವಾರದ ರಜೆ ಕೊಡಬೇಕು …
Read More »`PSI’ ನೇಮಕಾತಿ ಹಗರಣ : ನಂ.1 ಆರೋಪಿ ಜಾಗೃತ್ ಅರೆಸ್ಟ್
ಬೆಂಗಳೂರು : ಪಿಎಸ್ ಐ ನೇಮಕಾತಿಯಲ್ಲಿ ಅಕ್ರಮ ಪ್ರಕರಣ ಸಂಬಂಧ ಪ್ರಕರಣದ ಪ್ರಮುಖ ಆರೋಪಿ ಎಸ್.ಜಾಗೃತ್ ನನ್ನು ಸಿಐಡಿ ಅಧಿಕಾರಿಗಳು ಕೊನೆಗೂ ಬಂಧಿಸಿದ್ದಾರೆ. ಎಸ್. ಜಾಗೃತ್ ಪಿಎಸ್ ಐ ಪರೀಕ್ಷೆಯಲ್ಲಿ 4 ನೇ ರ್ಯಾಂಕ್ ಬಂದಿದ್ದನ್ನು. ಎಸ್. ಜಾಗೃತ್ ವಿರುದ್ಧ ಹೈಗ್ರೌಂಡ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪಿಎಸ್ ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಎಫ್ ಐಆರ್ ಹಾಕಿರುವುದನ್ನು ರದ್ದುಪಡಿಸಬೇಕೆಂದು ಹೈಕೋರ್ಟ್ ಮೆಟ್ಟಿಲೇರಿದ್ದ ನಾಲ್ವರು ಅಭ್ಯರ್ಥಿಗಳಲ್ಲಿ ಜಾಗೃತ್ ಒಬ್ಬನಾಗಿದ್ದ. ಬಳಿಕ ಪ್ರಕರಣದ …
Read More »ಕಾರು-ಕಂಟೇನರ್ ಮುಖಾಮುಖಿ ಡಿಕ್ಕಿ: ಕಾರು ಚಾಲಕ ಸಹಿತ ಸ್ಥಳದಲ್ಲೇ ಇಬ್ಬರ ಸಾವು, ನಾಲ್ವರಿಗೆ ಗಂಭೀರ ಗಾಯ
ಖಾನಾಪುರ: ಖಾನಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ನಾಗರಾಳಿ ಬಳಿ ಕಾರು-ಕಂಟೇನರ್ ಮುಖಾಮುಖಿ ಡಿಕ್ಕಿಯಾಗಿ ಕಾರು ಚಾಲಕ ಸಹಿತ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು ನಾಲ್ವರು ಗಂಭೀರ ಗಾಯಗೊಂಡಿದ್ದಾರೆ. ಧಾರವಾಡ ಜಿಲ್ಲೆಯ ಅಳ್ನಾವರ ಪಟ್ಟಣದ ಕಾರು ಚಾಲಕ ಸಾಗರ ಬಿಡಕರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತಪಟ್ಟ ಇನ್ನೊಬ್ಬ ಬಾಲಕನಾಗಿದ್ದು ಹೆಸರು ತಿಳಿದುಬರಬೇಕಿದೆ. ಅಳ್ನಾವರದ ಗಿರೀಶ್ ನಾಂದೋಲ್ಕರ್, ವೀರಣ್ಣ ಕೋಟಾರಶೆಟ್ಟಿ, ರೇಮಾಕಾಂತ ಪಾಲ್ಕರ್, ವಿಠ್ಠಲ ಕಾಕಡೆ ಅವರಿಗೆ ಗಂಭೀರ ಗಾಯಗಳಾಗಿವೆ. …
Read More »
Laxmi News 24×7