Breaking News

ರಾಷ್ಟ್ರೀಯ

ಅರವಿಂದ್‌ ಕೇಜ್ರಿವಾಲ್‌ಗೆ ಅಧಿಕಾರದ ಅಮಲು ಹತ್ತಿದೆ ಎಂದ ಅಣ್ಣ ಹಜಾರೆ

ನವದೆಹಲಿ, ಆಗಸ್ಟ್‌ 30: ಹಿರಿಯ ಗಾಂಧಿವಾದಿ ಮತ್ತು ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಅಣ್ಣಾ ಹಜಾರೆ ಅವರು ಮಂಗಳವಾರ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಪತ್ರ ಬರೆದು ದೆಹಲಿಯ ಮದ್ಯ ನೀತಿಯನ್ನು ಟೀಕಿಸಿ ನಿಮಗೆ ಅಧಿಕಾರದ ಅಮಲು ಹತ್ತಿದೆ ಎಂದು ತೀವ್ರ ತರಾಟೆ ತೆಗೆದುಕೊಂಡಿದ್ದಾರೆ.   ಹಜಾರೆ ತಮ್ಮ ಪತ್ರದಲ್ಲಿ ಹಳ್ಳಿಗಳಲ್ಲಿನ ಮದ್ಯದ ವ್ಯಸನದ ಸಮಸ್ಯೆ ಮತ್ತು ಅದರ ಪರಿಹಾರಗಳ ಬಗ್ಗೆ ವ್ಯವಹರಿಸುವ ಕೇಜ್ರಿವಾಲ್ ಅವರದೇ ಸ್ವರಾಜ್‌ ಪುಸ್ತಕದ ಸಾಲುಗಳನ್ನು …

Read More »

ಮುಂಬೈನ ಈ ಶ್ರೀಮಂತ ಗಣೇಶನಿಗೆ 316 ಕೋಟಿ ರೂ. ವಿಮೆ!

ಗಣೇಶೋತ್ಸವಕ್ಕೆ ಇಡೀ ದೇಶದಲ್ಲೇ ಮುಂಬೈ ಹೆಚ್ಚು ಖ್ಯಾತಿ ಪಡೆದಿದೆ. ಇಲ್ಲಿನ ಗಣೇಶ ಶ್ರೀಮಂತ ಕೂಡ. ಅಂತಹ ಶ್ರೀಮಂತ ಗಣೇಶನಿಗೆ ಈ ಬಾರಿ 316.40 ಕೋಟಿ ರೂ. ವಿಮೆ ಮಾಡಿಸಲಾಗಿದೆ. ಮುಂಬೈನ ಗಣೇಶ ಮಂಡಲ್‌ ನ ಗಣೇಶನಿಗೆ ಈ ಬಾರಿ ಗಣೇಶ ಚತುರ್ಥಿ ವೇಳೆ 316.40 ಕೋಟಿ ರೂ. ವಿಮೆ ಮಾಡಿಸಲಾಗಿದೆ. ಇದರಲ್ಲಿ 31.97 ಕೋಟಿ ರೂ. ಚಿನ್ನ, ಬೆಳ್ಳಿ ಹಾಗೂ ಇನ್ನಿತರ ವಸ್ತುಗಳು ಸೇರಿದ್ದರೆ, 263 ಕೋಟಿ ರೂ. ವೈಯಕ್ತಿಕ …

Read More »

ಅಮಿತ್ ಶಾ ಮನೆ ಬಳಿ ಪ್ರತಿಭಟನೆ ಮಾಡಲು ಹೋಗಿದ್ದೆ. ಎನ್ನುತ್ತಲೇ ಕರ್ನಾಟಕ ಪೊಲೀಸರ ವಿರುದ್ಧ ಕಿಡಿಕಾರಿದ ನವ್ಯಶ್ರೀ!

ದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮನೆ ಮುಂದೆ ಮೌನ ಪ್ರತಿಭಟನೆ ನಡೆಸಲು ಮುಂದಾದ ಚನ್ನಪಟ್ಟಣ ಮೂಲದ ಕಾಂಗ್ರೆಸ್​ ಮುಖಂಡೆ ನವ್ಯಶ್ರೀ ರಾವ್​ಗೆ ಅವಕಾಶ ಸಿಕ್ಕಿಲ್ಲ. ಈ ಕುರಿತು ಸುದ್ದಿಗಾರರೊಂದಿಗೆ ನವ್ಯಶ್ರೀ ಅಸಮಾಧಾನ ಹೊರಹಾಕಿದ್ದಾರೆ.   ‘ಶುಕ್ರವಾರ ಸಂಜೆ ದೆಹಲಿಗೆ ಬಂದ್ವಿ. ಶನಿವಾರ ಅಮಿತ್​ ಶಾ ಅವರ ಮನೆ ಮುಂದೆ ಪ್ರತಿಭಟನೆ ನಡೆಸಬೇಕು ಎಂದು ಹೋದ್ವಿ. ಅಮಿತ್​ ಶಾ ಅವರು ಮನೆಯಲ್ಲಿದ್ದರೂ ನಮಗೆ ಅವಕಾಶ ಸಿಗಲಿಲ್ಲ. ಆ.15 ರಂದು …

Read More »

ರಾಜಕೀಯದಲ್ಲಿ ಇರದಿದ್ರೆ.ಬಿಜೆಪಿಯವರ ನಾಲಿಗೆ ಸೀಳುತ್ತಿದ್ದೆ: ಮಮತಾ ಬ್ಯಾನರ್ಜಿ

ಕೋಲ್ಕತಾ: ಪ್ರತಿಯೊಬ್ಬರನ್ನು ಕಳ್ಳರು ಎಂಬಂತೆ ಬಿಂಬಿಸುತ್ತಿರುವ ಭಾರತೀಯ ಜನತಾ ಪಕ್ಷದ ವಿರುದ್ಧ ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋಮವಾರ (ಆಗಸ್ಟ್ 29) ವಾಗ್ದಾಳಿ ನಡೆಸಿದ್ದು, ಒಂದು ವೇಳೆ ರಾಜಕೀಯದಲ್ಲಿ ಇಲ್ಲದಿರುತ್ತಿದ್ದರೆ, ಬಿಜೆಪಿಯವರ ನಾಲಿಗೆ ಸೀಳಿ ಬಿಡುತ್ತಿದ್ದೆ ಎಂದು ಹೇಳಿದ್ದಾರೆ. ತೃಣಮೂಲ ಕಾಂಗ್ರೆಸ್ ಪಕ್ಷದ ವಿದ್ಯಾರ್ಥಿ ಘಟಕದ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಮಮತಾ ಬ್ಯಾನರ್ಜಿ, ಕೇಸರಿ ಪಕ್ಷವನ್ನು ವಿರೋಧಿಸುತ್ತಿರುವ ರಾಜಕೀಯ ಪಕ್ಷಗಳನ್ನು ಮತ್ತು ಚುನಾಯಿತ ರಾಜ್ಯ ಸರ್ಕಾರವನ್ನು ಕಿತ್ತೊಗೆಯಲು ಕೇಂದ್ರ ತನಿಖಾ …

Read More »

ಪ್ರಮುಖ ನಗರಗಳಲ್ಲಿ 5G ಸೇವೆ ಪ್ರಾರಂಭಿಸಲು ನಿರ್ಧರಿಸಲಾಗಿದೆ ಎಂದ ಅಂಬಾನಿ

ಮುಂಬೈ(ಮಹಾರಾಷ್ಟ್ರ): ದೇಶದಲ್ಲಿ ಈಗಾಗಲೇ 5G ತರಂಗಾಂತರ ಹರಾಜು ಪ್ರಕ್ರಿಯೆ ಪೂರ್ಣಗೊಂಡಿದೆ. ಮುಖೇಶ್ ಅಂಬಾನಿ ಒಡೆತನದ ಜಿಯೋ ಸಂಸ್ಥೆ 7,864 ಕೋಟಿ ರೂಪಾಯಿ ವ್ಯಯಿಸಿ ಹೆಚ್ಚಿನ ಸ್ಪೆಕ್ಟ್ರಮ್‌ ಖರೀದಿಸಿದೆ. ಇದರ ಬೆನ್ನಲ್ಲೇ ಇಂದು ಅಂಬಾನಿ ಮಹತ್ವದ ಘೋಷಣೆ ಮಾಡಿದ್ದಾರೆ. ರಿಲಯನ್ಸ್​ ಇಂಡಸ್ಟ್ರೀಸ್​​ನ 45ನೇ ವಾರ್ಷಿಕ ಸಭೆಯ ಉದ್ದೇಶಿಸಿ ಮಾತನಾಡಿರುವ ಮುಖೇಶ್ ಅಂಬಾನಿ, ಗ್ರಾಹಕರಿಗೆ ದೀಪಾವಳಿ ಗಿಫ್ಟ್​ ನೀಡಿದ್ದಾರೆ. ವಿಶ್ವದ ಅತ್ಯಂತ ವೇಗದ 5ಜಿ ರೋಲ್​​ಔಟ್‌ಗೆ ಸಿದ್ಧಗೊಂಡಿದೆ. ದೀಪಾವಳಿ ಹೊತ್ತಿಗೆ ದೆಹಲಿ, ಮುಂಬೈ, ಚೆನ್ನೈ …

Read More »

ಭಾರತ-ಪಾಕಿಸ್ತಾನ ಹೈವೋಲ್ಟೇಜ್ ಪಂದ್ಯದ ಕೊನೆಯ ಓವರ್​ ಹೇಗಿತ್ತು?: ವಿಡಿಯೋ

Hardik Pandya: ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಬೌಲಿಂಗ್​ನಲ್ಲಿ ಭುವನೇಶ್ವರ್ ಕುಮಾರ್ ಹಾಗೂ ಹಾರ್ದಿಕ್ ಪಾಂಡ್ಯ ಮಿಂಚಿದರೆ, ಬ್ಯಾಟಿಂಗ್​ನಲ್ಲಿ ಕೂಡ ಹಾರ್ದಿಕ್ ಸ್ಫೋಟಕ ಆಟವಾಡಿದರು. ರವೀಂದ್ರ ಜಡೇಜಾ ಹಾಗೂ ವಿರಾಟ್ ಕೊಹ್ಲಿ ಕೂಡ ಉಪಯುಕ್ತ ಕಾಣಿಕೆ ನೀಡಿದರು.   What a win for our #TeamIndia in this nail biting match against arch rivals!! Congratulations for a flying start in Asia cup. #INDvsPAK …

Read More »

ಒಂದು ಕಿಮೀ ರಸ್ತೆಯನ್ನು ಸುಧಾರಣೆ ಮಾಡಲು ಮುಂದಾದ ಶಾಸಕ ಬಾಲಚಂದ್ರ ಜಾರಕಿಹೊಳಿ

  *ಮೂಡಲಗಿ* ಇಲ್ಲಿಯ ಅಂಬೇಡ್ಕರ್ ವೃತ್ತದಿಂದ ಟಿಪ್ಪು ಸುಲ್ತಾನ್ ವೃತ್ತದವರೆಗೆ ರಸ್ತೆ ಸುಧಾರಣೆ ಕಾಮಗಾರಿಗೆ ಬರುವ ಸೋಮವಾರದಂದು ಗುದ್ದಲಿ ಪೂಜೆ ಜರುಗಲಿದೆ. ಗುರುವಾರದಂದು ಹದಿಗೆಟ್ಟ ರಸ್ತೆಯನ್ನು ಪರಿಶೀಲನೆ ಮಾಡಿದ ಪುರಸಭೆ ಅಧ್ಯಕ್ಷ ಹನಮಂತ ಗುಡ್ಲಮನಿ ಅವರು, ಶಾಸಕ ಬಾಲಚಂದ್ರ ಜಾರಕಿಕೊಳಿ ಅವರು ತಮ್ಮ ಸ್ವಂತ ವೆಚ್ಚದಲ್ಲಿ ಸುಮಾರು 1.ಕಿ.ಮೀ. ರಸ್ತೆಯನ್ನು ಅಭಿವೃದ್ಧಿ ಮಾಡುವರು. ಇದಕ್ಕಾಗಿ ಸೋಮವಾರವೇ ರಸ್ತೆ ಕಾಮಗಾರಿಗೆ ಮುಹೂರ್ತ ಫಿಕ್ಸ್ ಆಗಿದೆ ಎಂದು ಹೇಳಿದರು. ಮೂಡಲಗಿ ಪಟ್ಟಣದ ಸಾರ್ವಜನಿಕರು …

Read More »

ಬೆಳಗಾವಿಯ 12 ಪೌರಕಾರ್ಮಿಕರಿಗೆ ಮನೆ ವಿತರಿಸಿದ್ದೇವೆ: ಎಂ.ಶಿವಣ್ಣ ಕೋಟೆ

ಖಾಯಂ ಪೌರಕಾರ್ಮಿಕರಿಗೆ ಎಲ್ಲಾ ರೀತಿಯ ಸೌಲಭ್ಯಗಳು ಸಿಗುತ್ತಿವೆ. ಆದರೆ ನೇರಪಾವತಿ ಅವರಿಗೆ ಜಾಗ, ಮನೆಗಳು ಸಿಗುತ್ತಿಲ್ಲ. ಹೀಗಾಗಿ ಅವರಿಗೂ ಎಲ್ಲೆಲ್ಲಿ ಅವಕಾಶ ಇದೆ, ಅಲ್ಲಿ ಸೌಲಭ್ಯಗಳನ್ನು ನೀಡುವ ಕೆಲಸ ಮಾಡಲಾಗುವುದು ಎಂದು ಕರ್ನಾಟಕ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷರಾದ ಎಂ.ಶಿವಣ್ಣ ಕೋಟೆ ತಿಳಿಸಿದರು. ಬೆಳಗಾವಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಆಯೋಗದ ಅಧ್ಯಕ್ಷರಾದ ಎಂ.ಶಿವಣ್ಣ ಕೋಟೆ ನಿನ್ನೆ ಮಧ್ಯಾಹ್ನ 4 ಗಂಟೆ ಸುಮಾರಿಗೆ ಸುವರ್ಣವಿಧಾನಸೌಧಲ್ಲಿ ಬೆಳಗಾವಿ ಜಿಲ್ಲೆಯಲ್ಲಿ …

Read More »

ಚಿರತೆ ಬಂದೈತಿ, ಓಡಲೇ….ಓಡಲೇ… ಓಡಲೇ…!

ಬೆಳಗಾವಿ-ಬೆಳಗಾವಿ ಮಹಾನಗರದಲ್ಲಿ ಚಿರತೆ ಪತ್ತೆ ಕಾರ್ಯಾಚರಣೆ ಜೋರಾಗಿ ನಡೆಯುತ್ತಿದೆ.ಇಂದು ಮಧ್ಯಾಹ್ನ 3-00 ಗಂಟೆ ಸುಮಾರಿಗೆ ಹಿಂಡಲಗಾ ಗಣಪತಿ ಮಂದಿರದ ಬಳಿ ಇರುವ ಮಿಲಿಟರಿ ಕ್ವಾಟರ್ಸ್ ಹತ್ತಿರ ಚಿರತೆ ಕಾಣಿಸಿಕೊಂಡಿದೆ.   ಹಿಂಡಲಗಾ ಗಣಪತಿ ಮಂದಿರದ ಹತ್ತಿರದಲ್ಲೇ ಇರುವ ಹನುಮಾನ ನಗರದ ಡಬಲ್ ರಸ್ತೆಯಲ್ಲಿರುವ ಮಿಲಿಟರಿ ಕ್ವಾಟರ್ಸ್ ಗೇಟ್ ಬಳಿ ಚಿರತೆ ಕಾಣಿಸಿಕೊಂಡು ಮತ್ತೆ ಗಾಲ್ಫ್ ಮೈದಾನದಲ್ಲಿ ಪರಾರಿಯಾಗಿದೆ.   ಗಾಲ್ಫ್ ಮೈದಾನದಲ್ಲಿ ಚಿರತೆ ಪತ್ತೆಗೆ ಜಿಸಿಬಿಯಿಂದ ಕಾರ್ಯಾಚರಣೆ ನಡೆಯುತ್ತಿರುವಾಗ,ಗಿಡಗಂಟೆಯಲ್ಲಿ ಅಡಗಿ …

Read More »

ಲಾರಿ ಹಾಗೂ ಟೆಂಪೋ ಟ್ರ್ಯಾಕ್ಸ್ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಈ‌ ಅಪಘಾತದಲ್ಲಿ 9 ಜನರು ಸಾವನ್ನಪ್ಪಿದ್ದು 14ಕ್ಕೂ ಹೆಚ್ಚು ಜನರಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ.

ತುಮಕೂರು: ತುಮಕೂರು ಜಿಲ್ಲೆ‌ ಶಿರಾ ತಾಲ್ಲೂಕಿನ ಕಳ್ಳಂಬೆಳ್ಳ ಬಳಿಯ ಬಾಲೆನಹಳ್ಳಿ ಗೇಟ್ ಬಳಿ ಗುರುವಾರ ನಸುಕಿನಲ್ಲಿ ಲಾರಿ ಹಾಗೂ ಟೆಂಪೋ ಟ್ರ್ಯಾಕ್ಸ್ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಈ‌ ಅಪಘಾತದಲ್ಲಿ 9 ಜನರು ಸಾವನ್ನಪ್ಪಿದ್ದು 14ಕ್ಕೂ ಹೆಚ್ಚು ಜನರಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ. ಬೆಳಗಿನ ಜಾವ ಸರಿಸುಮಾರು 4 . 30ಕ್ಕೆ ಈ ದುರಂತ ಸಂಭವಿಸಿದೆ.   ಟೆಂಪೋ ಟ್ರ್ಯಾಕ್ಸ್ ರಾಯಚೂರು ಕಡೆಯಿಂದ ಬೆಂಗಳೂರು ಕಡೆಗೆ ತೆರಳುತ್ತಿತ್ತು. ಲಾರಿ …

Read More »