ಲಾಡ್ ಅವರಿಗೆ ತಮ್ಮ ಕ್ಷೇತ್ರವೇ ಕಾಣೋದಿಲ್ಲ: ಶಾಸಕ ಬೆಲ್ಲದ ತಿರುಗೇಟು. ….ಬಿಜೆಪಿ ಮೋದಿ ವಿರುದ್ಧವೇ ಜನಾಕ್ರೋಶ ಯಾತ್ರೆ ಮಾಡುತ್ತಿದೆ ಎಂದಿದ್ದ ಸಚಿವ ಲಾಡ್‌ಗೆ ಬೆಲ್ಲದ ಟಾಂಗ್… ಬಿಜೆಪಿ ಮೋದಿ ವಿರುದ್ಧವೇ ಜನಾಕ್ರೋಶ ಯಾತ್ರೆ ಮಾಡುತ್ತಿದೆ ಎಂಬ ಸಚಿವ ಸಂತೋಷ ಲಾಡ್ ಹೇಳಿಕೆಗೆ ಪ್ರತಿಕ್ರಿಯೆಪ್ರತಿಕ್ರಿಯೆಯಾಗಿ ನಿಒಡ ಲಾಡ್ ಹೇಳಿಕೆಗೆ, ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಅವರು ಸಚಿವ ಲಾಡ್ ಅವರಿಗೆ ತಿರುಗೇಟು ನೀಡಿದ್ದಾರೆ. ಧಾರವಾಡದಲ್ಲಿ ಮಾತನಾಡಿದ ಅವರು, ಸಂತೋಷ …
Read More »ನಾಳೆ ದ್ವಿತೀಯ ಪಿಯು ಫಲಿತಾಂಶ:
ಬೆಂಗಳೂರು, (ಏಪ್ರಿಲ್ 07): ಪರೀಕ್ಷೆ ಬರೆದು ಫಲಿತಾಂಶಕ್ಕೆ ಕಾತರಿಂದ ಕಾಯುತ್ತಿರುವ ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ( 2nd PUC Students) ಗುಡ್ನ್ಯೂಸ್ ಸಿಕ್ಕಿದೆ. ಮಾರ್ಚ್ 1ರಿಂದ ಮಾರ್ಚ್ 20ರವರೆಗೆ ನಡೆದಿದ್ದ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ (Karnataka 2nd PUC Exam 2025 Result ) ನಾಳೆ ಅಂದರೆ ಏಪ್ರಿಲ್ 08ರಂದು ಪ್ರಕಟವಾಗಲಿದೆ. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಮಂಗಳವಾರ ಮಧ್ಯಾಹ್ನ 12.30ಕ್ಕೆ ಸುದ್ದಿಗೋಷ್ಠಿ ನಡೆಸಿ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಿಸಲಿದ್ದಾರೆ. …
Read More »ಕಾಫಿ, ಟೀ ಬೆಲೆ 3 ರಿಂದ 10 ರೂ ಹೆಚ್ಚಳ
ಬೆಂಗಳೂರು: ರಾಜ್ಯ ಸರ್ಕಾರ ಕೆಲವು ದಿನಗಳ ಹಿಂದೆ ನಂದಿನಿ ಹಾಲಿನ ದರವನ್ನು ಪ್ರತಿ ಲೀಟರ್ಗೆ 4 ರೂಪಾಯಿ ಹೆಚ್ಚಿಸಿತ್ತು. ಏಪ್ರಿಲ್ 1ರಿಂದ ಪರಿಷ್ಕೃತ ದರ ಜಾರಿಗೆ ಬಂದಿದೆ. ಇದರ ಪರಿಣಾಮ, ಅನೇಕ ಹೋಟೆಲ್‌ಗಳು ಕಾಫಿ ಮತ್ತು ಚಹಾ ದರ ಏರಿಸಿವೆ. ಬೆಲೆ ಏರಿಕೆ ಬಿಸಿ ಇದೀಗ ಗ್ರಾಹಕರಿಗೆ ತಟ್ಟಿದೆ. ಬೆಂಗಳೂರಿನ ಬಹುತೇಕ ಹೋಟೆಲ್‌ಗಳು, ಕೆಫೆಗಳು ಮತ್ತು ಟೀ ಸ್ಟಾಲ್‌ಗಳಲ್ಲಿ ಒಂದು ಕಪ್ ಚಹಾ ಮತ್ತು ಕಾಫಿಯ ಬೆಲೆಯನ್ನು 3 ರೂ.ನಿಂದ 10 …
Read More »ರಸ್ತೆಯಲ್ಲಿ ಯುವತಿಗೆ ಲೈಂಗಿಕ ಕಿರುಕುಳ: ಸಿಸಿಟಿವಿಯಲ್ಲಿ ಕಾಮುಕನ ದುಷ್ಕೃತ್ಯ ಸೆರೆ
ಬೆಂಗಳೂರು: ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವತಿಯರನ್ನು ಹಿಂಬಾಲಿಸಿದ ಕಾಮುಕನೊಬ್ಬ ಯುವತಿಯೋರ್ವಳ ಮೇಲೆರಗಿ ಆಕೆಯ ಖಾಸಗಿ ಅಂಗ ಸ್ಪರ್ಶಿಸಿ ಲೈಂಗಿಕ ಕಿರುಕುಳ ನೀಡಿರುವ ಘಟನೆ ಸುದ್ದಗುಂಟೆಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಸುದ್ದಗುಂಟೆಪಾಳ್ಯದ ಭಾರತಿ ಲೇಔಟ್‌ನ 1ನೇ ಕ್ರಾಸ್‌ನಲ್ಲಿ ಏಪ್ರಿಲ್ 3ರಂದು ಮುಂಜಾನೆ ಸುಮಾರು 1.55ಕ್ಕೆ ಘಟನೆ ನಡೆದಿದೆ. ದುಷ್ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನೆ ಸಂಬಂಧ ಸ್ಥಳೀಯ ನಿವಾಸಿ ಲೋಕೇಶ್ ಗೌಡ ಎಂಬುವವರು ನೀಡಿದ ದೂರಿನನ್ವಯ ಸುದ್ದಗುಂಟೆಪಾಳ್ಯ ಠಾಣೆ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. …
Read More »ಬಂಡೀಪುರದಲ್ಲಿ ರಾತ್ರಿ ಸಂಚಾರ ನಿಷೇಧ ಮುಂದುವರೆಸುವಂತೆ ಬೃಹತ್ ಜಾಥಾ
ಚಾಮರಾಜನಗರ: ಗುಂಡ್ಲುಪೇಟೆ ತಾಲೂಕಿನ ಬಂಡೀಪುರದಲ್ಲಿ ರಾತ್ರಿ ಸಂಚಾರ ನಿಷೇಧ ಮುಂದುವರೆಸಬೇಕು, ಯಾವುದೇ ಸಡಿಲಿಕೆ ಇರಬಾರದು ಎಂದು ಆಗ್ರಹಿಸಿ ಪರಿಸರಪ್ರೇಮಿಗಳು ಇಂದು ಬೃಹತ್ ಕಾಲ್ನಡಿಗೆ ಜಾಥಾ ನಡೆಸಿದರು. ಕೇರಳಕ್ಕೆ ಹಾದುಹೋಗುವ ಕಗ್ಗಳದಹುಂಡಿ ಗೇಟ್ನಿಂದ ಮದ್ದೂರು ಚೆಕ್ಪೋಸ್ಟ್ ವರೆಗೆ ಪರಿಸರ ಹೋರಾಟಗಾರರು, ರೈತರು, ಟೆಕ್ಕಿಗಳು, ಕೇರಳದ ಪರಿಸರ ಹೋರಾಟಗಾರರು, ಸ್ಥಳೀಯ ಯುವಕರು ಸೇರಿದಂತೆ ಸಹಸ್ರಾರು ಮಂದಿ ಜಾಥಾದಲ್ಲಿ ಭಾಗಿಯಾದರು. ಕೇರಳದ ವಯನಾಡ್ ಪ್ರಕೃತಿ ಸಂರಕ್ಷಣಾ ಸಮಿತಿಯ ಬಾದೂಷಾ ಮಾತನಾಡಿ, “ನಾವು ಕೂಡ ರಾತ್ರಿ ಸಂಚಾರ …
Read More »ಮೇಕೆದಾಟು ಯೋಜನೆ ಜಾರಿ ಮಾಡುವುದು ರಾಜ್ಯ ಕಾಂಗ್ರೆಸ್ಗೆ 5 ನಿಮಿಷದ ಕೆಲಸ: ಬೊಮ್ಮಾಯಿ
ಮೇಕೆದಾಟು ಯೋಜನೆ ಜಾರಿ ಮಾಡುವುದು ರಾಜ್ಯ ಕಾಂಗ್ರೆಸ್ಗೆ 5 ನಿಮಿಷದ ಕೆಲಸ: ಬೊಮ್ಮಾಯಿ ಹಾವೇರಿ: “ಮೇಕೆದಾಟು ಯೋಜನೆ ಜಾರಿ ಮಾಡುವುದು ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಕೇವಲ ಐದು ನಿಮಿಷದ ಕೆಲಸ. ಆದರೆ ಅದನ್ನು ಜಾರಿ ಮಾಡುವ ಇಚ್ಛಾಶಕ್ತಿ ರಾಜ್ಯ ಸರ್ಕಾರಕ್ಕೆ ಇಲ್ಲ” ಎಂದು ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದರು. ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದೆ. ತಮಿಳುನಾಡಿನಲ್ಲಿ ಇವರದೇ ಮಿತ್ರ ಪಕ್ಷ ಡಿಎಂಕೆ ಅಡಳಿತದಲ್ಲಿದೆ. ಇವರು ಮನಸ್ಸು ಮಾಡಿದರೆ …
Read More »ಯತ್ನಾಳ ಹೊಸ ಪಕ್ಷ ಕಟ್ಟಲ್ಲ, ಕಟ್ಟಿದರೂ ನಾವು ಹೋಗಲ್ಲ: ಶಾಸಕ ಬಿ ಪಿ ಹರೀಶ್
ದಾವಣಗೆರೆ: ಉಚ್ಚಾಟಿತ ಶಾಸಕ ಯತ್ನಾಳ್ ಹೊಸ ಪಕ್ಷ ಕಟ್ಟಲು ಬಿಡಲ್ಲ, ಈಗಲೂ ಅವರು ನಮ್ಮ ನಾಯಕರು. ಪಕ್ಷ ಕಟ್ಟಿದರೆ ನಾವು ಹೋಗಲ್ಲ ಎಂದು ಹರಿಹರ ಶಾಸಕ ಬಿ ಪಿ ಹರೀಶ್ ಹೇಳಿದ್ದಾರೆ. ದಾವಣಗೆರೆಯಲ್ಲಿ ಮಾತನಾಡಿದ ಶಾಸಕ ಹರೀಶ್, ನಾವು ಬಿಜೆಪಿಯಲ್ಲೇ ಇರುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ. ಯತ್ನಾಳ್ ನಮ್ಮ ನಾಯಕರು ಹಿಂದೂ ಹುಲಿ ಎಂದು ಪ್ರಸಿದ್ದಿಯಾಗಿದ್ದಾರೆ ಅವರನ್ನು ಪಕ್ಷ ಉಚ್ಚಾಟನೆ ಮಾಡಿದೆ. ನಮ್ಮ ತಂಡ ಅವರನ್ನು ಪಕ್ಷದಲ್ಲಿ ಉಳಿಸಿಕೊಳ್ಳಬೇಕು ಎಂದು ಹೋರಾಟ ನಡೆಸುತ್ತಿದೆ …
Read More »ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಆಸ್ತಿ ತೆರಿಗೆ ಹೆಚ್ಚಳಕ್ಕೆ ವಿರೋಧ…
ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಆಸ್ತಿ ತೆರಿಗೆ ಹೆಚ್ಚಳಕ್ಕೆ ವಿರೋಧ… ಜನರಿಗೆ ಹೊರೆಯಾಗದಂತೆ ಕೇವಲ ಶೇ. 3 ರಷ್ಟು ಹೆಚ್ಚಿಸುವಂತೆ ಶಾಸಕ-ಸದಸ್ಯರಿಂದ ಸಲಹೆ ಬೆಳಗಾವಿ ಮಹಾನಗರದಲ್ಲಿ ಆಸ್ತಿ ತೆರಿಗೆಯನ್ನು ಅತಿಯಾಗಿ ಹೆಚ್ಚಳ ಮಾಡದಂತೆ ಮತ್ತು ಸರ್ಕಾರಕ್ಕೆ ಮನವರಿಕೆ ಮಾಡಿ ಜನರಿಗೆ ಹೊರೆಯಾಗದ ರೀತಿಯಲ್ಲಿ ಹೆಚ್ಚಿಸಬೇಕೆಂದು ಶಾಸಕ ಅಭಯ್ ಪಾಟೀಲ್ ಅವರು ಸಲಹೆ ನೀಡಿದರು. ಇಂದು ಬೆಳಗಾವಿ ಮಹಾನಗರ ಪಾಲಿಕೆಯ ಕೌನ್ಸಿಲ್’ ಸಭೆಯಲ್ಲಿ, ಶಾಸಕ ಅಭಯ್ ಪಾಟೀಲ್ ಅವರು ಸರ್ಕಾರ ಆಸ್ತಿ ತೆರಿಗೆಯನ್ನು …
Read More »ಕಲ್ಬುರ್ಗಿಯಲ್ಲಿ ಭೀಕರ ಅಪಘಾತ ಐವರ ದುರ್ಮರಣ ಮೃತರ ಕುಟುಂಬಸ್ಥರಿಗೆ ತಲಾ 2 ಲಕ್ಷ ಪರಿಹಾರ; ಜಿಲ್ಲಾ ಉಸ್ತುವಾರಿ ಸಚಿವ ತಿಮ್ಮಾಪೂರ
ಕಲ್ಬುರ್ಗಿಯಲ್ಲಿ ಭೀಕರ ಅಪಘಾತ ಐವರ ದುರ್ಮರಣ ಮೃತರ ಕುಟುಂಬಸ್ಥರಿಗೆ ತಲಾ 2 ಲಕ್ಷ ಪರಿಹಾರ; ಜಿಲ್ಲಾ ಉಸ್ತುವಾರಿ ಸಚಿವ ತಿಮ್ಮಾಪೂರ ಭೀಕರವಾದ ಅಪಘಾತ ಸಂಭವಿಸಿ, ಸ್ಥಳದಲ್ಲೇ ಐವರು ಮೃತಪಟ್ಟು, ಹನ್ನೊಂದು ಜನರಿಗೆ ಗಂಭೀರ ಗಾಯಗಳಾಗಿರುವ ಘಟನೆ ಕಲಬುರಗಿ ಜಿಲ್ಲೆಯ ಸೊನ್ನ ಕ್ರಾಸ್ ಹತ್ತಿರ ಶುಕ್ರವಾರ ತಡರಾತ್ರಿ ನಡೆದಿದೆ. ಮೃತರ ಕುಟುಂಬಸ್ಥರಿಗೆ ತಲಾ 2 ಲಕ್ಷ ರೂಪಾಯಿ ಪರಿಹಾರವನ್ನು ಸಿಎಂ ಘೋಷಣೆ ಮಾಡಿದ್ದಾರೆ. ಕಲ್ಬುರ್ಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಸೊನ್ನ ಕ್ರಾಸ್ …
Read More »ಕೇಂದ್ರ ಸಚಿವ ಅಮೀತ ಶಾ ಹಾಗೂ ಸಂಸದ ತೇಜಸ್ವಿ ಸೂರ್ಯ ಮೇಲೆ ಸಚಿವ ಎಂ.ಬಿ.ಪಾಟೀಲ ಅಸಮಾಧಾನ
ಕೇಂದ್ರ ಸಚಿವ ಅಮೀತ ಶಾ ಹಾಗೂ ಸಂಸದ ತೇಜಸ್ವಿ ಸೂರ್ಯ ಮೇಲೆ ಸಚಿವ ಎಂ.ಬಿ.ಪಾಟೀಲ ಅಸಮಾಧಾನ ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ ಯತ್ನಾಳರು ಹೊಸ ಪಕ್ಷ ಕಟ್ಟುವ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಎಂ.ಬಿ.ಪಾಟೀಲ ಪ್ರತಿಕ್ರಿಯೆ ನೀಡಿ ವಿಜಯಪುರದಲ್ಲಿ ಸಮಾವೇಶ ಜೋರಾಗಿ ಮಾಡಲಿ. ಹೊಸ ಪಕ್ಷ ಕಟ್ಟುವುದು ಒಳ್ಳೆಯದು. ರಾಜ್ಯಾದ್ಯಂತ ಅವರನ್ನು ಮೀರಿಸಲಿ ಎಂದು, ಹೊಸ ಪಕ್ಷ ಕಟ್ಟುವುದಕ್ಕೆ ಶುಭ ಹಾರೈಸಿದರು. ಯತ್ನಾಳ್ ಹೊಸ ಪಕ್ಷ ಕಟ್ಟುವುದರಿಂದ ಕಾಂಗ್ರೆಸ್ ಗೆ …
Read More »