Breaking News

ರಾಷ್ಟ್ರೀಯ

ಹಾವೇರಿ: ವಂದೇ ಭಾರತ್​ ರೈಲು ಟಿಕೆಟ್​ ಬುಕ್ಕಿಂಗ್‌ಗೆ ಪ್ರಯಾಣಿಕರ ಪರದಾಟ

ಹಾವೇರಿ: ಹಾವೇರಿ ರೈಲು ನಿಲ್ದಾಣದಲ್ಲಿ ವಂದೇ ಭಾರತ್ ರೈಲು ನಿಲುಗಡೆಗೆ ಕೇಂದ್ರ ಸಚಿವ ಸೋಮಣ್ಣ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹಸಿರು ನಿಶಾನೆ ತೋರಿಸಿದ್ದು, ಆರಂಭದಲ್ಲೇ ಟಿಕೆಟ್​ ಬುಕ್ಕಿಂಗ್​ನಲ್ಲಿ ತಾಂತ್ರಿಕ ಸಮಸ್ಯೆಗಳು ಕಾಣಿಸಿಕೊಂಡಿವೆ. ಹಾವೇರಿಗೆ ಆನ್​ಲೈನ್​ನಲ್ಲಿ ಟಿಕೆಟ್​ ಬುಕ್​ ಆಗುತ್ತಿಲ್ಲ. ಹಾವೇರಿಯಲ್ಲಿ ರೈಲು ನಿಲುಗಡೆ ಇದ್ದರೂ, ಹತ್ತಲಾರದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಪ್ರಯಾಣಿಕರು ದೂರಿದ್ದಾರೆ. ಮತ್ತೊಂದೆಡೆ, ಬೆಂಗಳೂರಿನ ಕೆಆರ್​ಎಸ್ ರೈಲು ನಿಲ್ದಾಣದಿಂದ ಹಾವೇರಿಗೂ ಟಿಕೆಟ್​ ಬುಕ್ಕಿಂಗ್​ ಆಗುತ್ತಿಲ್ಲ. ಬದಲಾಗಿ, ಯಶವಂತಪುರದಿಂದ ಹಾವೇರಿಗೆ …

Read More »

ಜಾತಿ ಜನಗಣತಿ ವರದಿ ಸಿದ್ದರಾಮಯ್ಯಗೆ ಮರಣ ಶಾಸನವಾಗಬಹುದು ಎಂದ ಕೇಂದ್ರ ಸಚಿವ ವಿ.ಸೋಮಣ್ಣ

ಬೆಂಗಳೂರು: ಜಾತಿ ಜನಗಣತಿ ವರದಿ ಸಿದ್ದರಾಮಯ್ಯಗೆ ಮರಣ ಶಾಸನವಾಗಬಹುದು. ಹಾಗಾಗಿ, ವರದಿ ತಿರಸ್ಕರಿಸಲಿ ಎಂದು ಕೇಂದ್ರ ಸಚಿವ ವಿ‌.ಸೋಮಣ್ಣ ಆಗ್ರಹಿಸಿದರು. ಬೆಂಗಳೂರಿನಲ್ಲಿಂದು ಮಾತನಾಡಿದ ಅವರು, ಸಿದ್ದರಾಮಯ್ಯರಿಗೆ ಪೂರ್ಣ ಸತ್ಯ ಗೊತ್ತಿದೆ. ಆದ್ರೆ ಅವರು ಕುರ್ಚಿ ಉಳಿಸಿಕೊಳ್ಳಲು ವರದಿ ಜಾರಿಗೆ ಮುಂದಾಗಿದ್ದಾರೆ. ಮೊನ್ನೆ ಮೊನ್ನೆ ಅವರ ಹೈಕಮಾಂಡ್‌ ನಾಯಕರೇ ಕರೆದು ಹೇಳಿದ್ದಾರೆ. ಸಿದ್ದರಾಮಯ್ಯರ ಇವತ್ತಿನ ಪರಿಸ್ಥಿತಿ ನೋಡಿದ್ರೆ, ಈ ಮಟ್ಟಕ್ಕೂ ಅವರು ಬಂದಿದ್ದಾರಾ? ಅನ್ನೋ ನೋವು ನನ್ನನ್ನು ಕಾಡುತ್ತಿದೆ. ಜಾತಿ ಜನಗಣತಿ ವರದಿ …

Read More »

ಸರ್ಕಾರದ ಮೂಗಿನ ನೇರಕ್ಕೆ ಜಾತಿ ಗಣತಿ ವರದಿ ತಯಾರಾಗಿದೆ: ರಂಭಾಪುರಿ ಶ್ರೀ

ಚಿಕ್ಕಮಗಳೂರು: “ಸರ್ಕಾರ ಯಾವುದೋ ಒಂದು ಜಾತಿಯನ್ನು ತುಷ್ಟೀಕರಣ ಮಾಡಲು ಜಾತಿ ಗಣತಿ ವರದಿ ತಯಾರಿಸಿದೆ. ಹತ್ತಾರು ವರ್ಷಗಳಿಂದ ಜಾತಿ ಗಣತಿ ವರದಿ ನೆನೆಗುದಿಗೆ ಬಿದ್ದಿತ್ತು. ಜಾತಿ ಗಣತಿಗೆ ಅಖಿಲ ಭಾರತ ವೀರಶೈವ ಮಹಾಸಭಾ ಸಂಘ ವಿರೋಧಿಸಿದೆ. ಜಾತಿ ಗಣತಿ ವರದಿಯನ್ನು ಪಾರದರ್ಶಕವಾಗಿ ಮಾಡಿಲ್ಲ” ಎಂದು ಬಾಳೆಹೊನ್ನೂರಿನ ರಂಭಾಪುರಿ ಪೀಠದ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ರಂಭಾಪುರಿ ಪೀಠದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ಸರ್ಕಾರದ ಮೂಗಿನ ನೇರಕ್ಕೆ ಜಾತಿ ಗಣತಿ ವರದಿ ತಯಾರಾಗಿದೆ. …

Read More »

ಕೆವಿಎನ್ ಪ್ರಸ್ತುತ ಬೆಂಗಳೂರಿನಲ್ಲಿ ಅನಿರುದ್ಧ್ ಮ್ಯೂಸಿಕ್ ಹಬ್ಬ..60 ನಿಮಿಷದಲ್ಲೇ ಟಿಕೆಟ್ ಸೋಲ್ಡ್ ಔಟ್!* ಭಾರತದಲ್ಲೇ ಮೊದಲ ಬಾರಿಗೆ ಅನಿರುದ್ಧ್ ಹುಕುಂ ಟೂರ್

ಕೆವಿಎನ್ ಪ್ರಸ್ತುತ ಬೆಂಗಳೂರಿನಲ್ಲಿ ಅನಿರುದ್ಧ್ ಮ್ಯೂಸಿಕ್ ಹಬ್ಬ..60 ನಿಮಿಷದಲ್ಲೇ ಟಿಕೆಟ್ ಸೋಲ್ಡ್ ಔಟ್!* ಭಾರತದಲ್ಲೇ ಮೊದಲ ಬಾರಿಗೆ ಅನಿರುದ್ಧ್ ಹುಕುಂ ಟೂರ್ *ಬೆಂಗಳೂರಿನಲ್ಲಿ ಜನನಾಯಗನ್ ಮ್ಯೂಸಿಕ್ ಡೈರೆಕ್ಟರ್ ಕನ್ಸರ್ಟ್..* *60 ನಿಮಿಷ 16 ಸಾವಿರ ಟಿಕೆಟ್ ಸೋಲ್ಡ್ ಔಟ್…ಮೇ.31ಕ್ಕೆ ಕೆವಿಎನ್ ಪ್ರಸ್ತುತ ಬೆಂಗಳೂರಿನಲ್ಲಿ ಅನಿರುದ್ಧ್ ರವಿಚಂದರ್ ಸಂಗೀತ ಸಂಜೆ!* ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಿರ್ಮಾಣ ಸಂಸ್ಥೆ ಕೆವಿಎನ್ ಪ್ರಸ್ತುತಪಡಿಸುತ್ತಿರುವ ಅನಿರುದ್ಧ್ ರವಿಚಂದರ್ ಮ್ಯೂಸಿಕ್ ಹಬ್ಬ ಬೆಂಗಳೂರಿನಲ್ಲಿ ಮೇ 31ರಂದು …

Read More »

ತವರುಮನೆಯ ಜಾತ್ರೆಯಲ್ಲಿ ಪಾಲ್ಗೊಂಡ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ತವರುಮನೆಯ ಜಾತ್ರೆಯಲ್ಲಿ ಪಾಲ್ಗೊಂಡ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಶನಿವಾರ ತವರು ಮನೆಯ ಆರಾಧ್ಯದೈವ ಚಿಕ್ಕಹಟ್ಟಿಹೊಳಿಯ ಶ್ರೀ ವೀರಭದ್ರ ದೇವರ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡರು. ಕುಟುಂಬದ ಸದಸ್ಯರೊಂದಿಗೆ ದೇವಸ್ಥಾನಕ್ಕೆ ಭೇಟಿ ನೀಡಿ, ವೀರಭದ್ರ ದೇವರಿಗೆ ವಿಶೇಷ ಪೂಜೆ ಕೈಗೊಂಡು, ಪ್ರಾರ್ಥನೆ ಸಲ್ಲಿಸಿದರು. ಜೊತೆಗೆ, ಕುಟುಂಬದ ಪರಂಪರೆಯಂತೆ ಚಿಕ್ಕಹಟ್ಟಿಹೊಳಿ ಹಾಗೂ ಜಿಕನೂರ್ ಗ್ರಾಮದ ಜನತೆಗೆ ಹೋಳಿಗೆ ಊಟದ ಸೇವೆಯನ್ನು ನೀಡಿದರು. ವಿಧಾನ …

Read More »

ಜಾತಿ ಗಣತಿ ವರದಿ ಆಂಕಿ ಅಂಶ ವರದಿ ಬಿಡುಗಡೆ. ಈಗತಾನೇ ಒಪನ್ ಆಗಿದೆ. ಈಗ ಒಂದು ಕಾಪಿಯನ್ನು ನನಗೆ ಕಳುಹಿಸಿದ್ದಾರೆ. ನಾವೇಲ್ಲ ನೋಡ್ತಿವಿ‌, ಆತುರದ ಕ್ರಮ ಇಲ್ಲ.

ಬೆಳಗಾವಿಯಲ್ಲಿ ಡಿಸಿಎಂ‌ ಡಿ ಕೆ ಶಿವಕುಮಾರ್ ಹೇಳಿಕೆ. ಜಾತಿ ಗಣತಿ ವರದಿ ಆಂಕಿ ಅಂಶ ವರದಿ ಬಿಡುಗಡೆ. ಈಗತಾನೇ ಒಪನ್ ಆಗಿದೆ. ಈಗ ಒಂದು ಕಾಪಿಯನ್ನು ನನಗೆ ಕಳುಹಿಸಿದ್ದಾರೆ. ನಾವೇಲ್ಲ ನೋಡ್ತಿವಿ‌, ಆತುರದ ಕ್ರಮ ಇಲ್ಲ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕ್ರಮ ಕೈಗೊಳ್ಳುತ್ತೇವೆ. ಏನಾದ್ರು ಲೋಪದೋಷ ಇದ್ರೆ ಅದನ್ನು ಸರಿ ಮಾಡುತ್ತೇವೆ. ನಮ್ಮ ಪಕ್ಷದ ಮೂಲ ಸಿದ್ಧಾಂತ ಎಲ್ಲರಿಗೂ ಸಮಪಾಲು, ಸಮಬಾಳು. ನಮ್ಮದು ಬಸವಣ್ಣನ ತತ್ವನ ಮೇಲೆ ಕೆಲಸ ಮಾಡ್ತಿವಿ. …

Read More »

ಕೊಪ್ಪಳದಲ್ಲಿ ಬಿರುಗಾಳಿ ಸಹಿತ ಮಳೆ: ಸಿಡಿಲು ಬಡಿದು ಇಬ್ಬರು ಸಾವು

ಕೊಪ್ಪಳ: ತಾಲೂಕಿನ ಹಲವೆಡೆ ಗುರುವಾರ ಸಂಜೆ ಧಾರಾಕಾರ ಮಳೆಯಾಗಿದ್ದು, ಸಿಡಿಲು ಬಡಿದು ಇಬ್ಬರು ಸಾವನ್ನಪ್ಪಿರುವ ಘಟನೆ ಚುಕ್ಕನಕಲ್ ಬಳಿ ತೋಟದ ಮನೆಯಲ್ಲಿ ಜರುಗಿದೆ. ಕೊಪ್ಪಳದ ಗೌರಿ ಅಂಗಳದ ನಿವಾಸಿಗಳಾದ ಮಂಜುನಾಥ ಗಾಳಿ (48) ಹಾಗೂ ಗೋವಿಂದಪ್ಪ ಮ್ಯಾಗಲಮನಿ (62) ಸಾವನ್ನಪ್ಪಿದ ದುರ್ದೈವಿಗಳು. ಮಳೆ ಬರುವ ಸಂದರ್ಭದಲ್ಲಿ ತೋಟದ ಮನೆಯ ಕಿಟಕಿ ಬಾಗಿಲು ಹಾಕಲು ಹೋದಾಗ ಸಿಡಿಲು ಬಡಿದು ಇಬ್ಬರೂ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.ಮುದ್ದಾಬಳ್ಳಿಯಲ್ಲಿ …

Read More »

ಕೊಲೆಗಾರನ ಕಾಲಿಗೆ ಪೊಲೀಸ್​ ಗುಂಡೇಟು

ವಿಜಯನಗರ: ಹಳೆ ದ್ವೇಷದ ಹಿನ್ನೆಲೆಯಲ್ಲಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿದ ಆರೋಪಿ, ಸ್ಥಳ ಪಂಚನಾಮೆ ವೇಳೆ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದು, ಈ ವೇಳೆ ಆತನ ಬಲಗಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀ ಹರಿಬಾಬು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಹೊನ್ನೂರ ಅಲಿಯಾಸ್ ಹೊನ್ನೂರ ಸ್ವಾಮಿ (28) ಎನ್ನುವವನನ್ನು ಕೊಲೆ ಮಾಡಿರುವ ಘಟನೆ ಹೊಸಪೇಟೆ ನಗರದ ಜಂಬುನಾಥ ರಸ್ತೆಯ ಅಂಬೇಡ್ಕರ್ ನಗರದ …

Read More »

ಪುತ್ರಿಯೊಂದಿಗೆ ತಾಯಿಯೂ ಪಿಯುಸಿ ಪಾಸ್!

ಬಂಟ್ವಾಳ: ಪುತ್ರಿಯೊಂದಿಗೆ ತಾಯಿಯೂ ಪಾಸ್ ಆದ ವಿಶೇಷವೊಂದು ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮದ ಮಾಣಿಮಜಲು ಎಂಬಲ್ಲಿ ನಡೆದಿದೆ. ಪುತ್ರಿ ತ್ರಿಶಾರೊಂದಿಗೆ ಪಿಯುಸಿ ಉತ್ತೀರ್ಣರಾದ ತಾಯಿಯ ಹೆಸರು ರವಿಕಲಾ. ತ್ರಿಶಾ ಪುತ್ತೂರು ವಿವೇಕಾನಂದ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿಯಾಗಿದ್ದು, 584 ಅಂಕಗಳನ್ನು ಪಡೆದು ವಿಶೇಷ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದಾರೆ. ರವಿಕಲಾ ಅವರು ಆರ್ಟ್ಸ್ ತೆಗೆದುಕೊಂಡು ಖಾಸಗಿಯಾಗಿ ಪರೀಕ್ಷೆ ಬರೆದು 275 ಅಂಕಗಳನ್ನು ಪಡೆದು ಪಾಸ್ ಆಗಿದ್ದಾರೆ. ರವಿಕಲಾ ಖಾಸಗಿಯಾಗಿ ಪರೀಕ್ಷೆ ಬರೆದಿರುವುದರಿಂದ ಸಾಮಾನ್ಯ …

Read More »

ಸರ್ವೇ, ನಕ್ಷೆ ಕೆಲಸವನ್ನು ರೋವರ್ 10 ನಿಮಿಷದಲ್ಲೇ ಮುಗಿಸಲಿದೆ: ಸಚಿವ ಕೃಷ್ಣ ಬೈರೇಗೌಡ

ಬೆಂಗಳೂರು : ಕಂದಾಯ ಇಲಾಖೆ ಎಲ್ಲಾ ನೌಕರರ ಸಹಕಾರದಿಂದ ಜನಪರವಾಗುತ್ತಿದೆ. ಪರಿವರ್ತನೆಯ ಹಾದಿಯಲ್ಲಿದೆ ಹಾಗೂ ಹೊಸ ಆಧುನಿಕ ತಂತ್ರಜ್ಞಾನಕ್ಕೂ ಒಗ್ಗಿಕೊಳ್ಳುತ್ತಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅಭಿಪ್ರಾಯಪಟ್ಟರು. ವಿಧಾನಸೌಧದ ಮೆಟ್ಟಿಲುಗಳ ಮೇಲೆ ಇಂದು ನಡೆದ ಭೂಮಾಪನ, ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆ ಹಾಗೂ ಇಲಾಖೆಯ ನೌಕರರ ಸಂಘಗಳ 36ನೇ ರಾಷ್ಟ್ರೀಯ ಭೂಮಾಪನಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ”ಸರ್ವೇ ಇಲಾಖೆ ಇಡೀ ಸರ್ಕಾರಕ್ಕೆ ಮೂಲ ಇಲಾಖೆ. ಯಾವುದೇ ಭೂಮಿಗೆ ದಾಖಲೆಗಳ …

Read More »