Breaking News

ರಾಷ್ಟ್ರೀಯ

ಶಿರಸಿ: ಶಾಲ್ಮಲಾ ನದಿಯಲ್ಲಿ ಮುಳುಗಿ ಒಂದೇ ಕುಟುಂಬದ ಐವರು ಸಾವು

ಶಿರಸಿ: ರಜೆಯ ದಿನ ಕಳೆಯಲು ತೆರಳಿದ್ದ ಒಂದೇ ಕುಟುಂಬದ ಐವರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಶಾಲ್ಮಲಾ ನದಿಯಲ್ಲಿ ಇಂದು ನಡೆದಿದೆ. ಇತ್ತೀಚೆಗೆ ಶಿರಸಿಯ ಬಂಡಲದಲ್ಲಿ ಸಂಭವಿಸಿದ್ದ ಬಸ್​ ಮತ್ತು ಕಾರು ನಡುವಿನ ಭೀಕರ ಅಪಘಾತದಲ್ಲಿ ಐವರು ಮೃತಪಟ್ಟ ಘಟನೆ ಮಾಸುವ ಮುನ್ನವೇ ಮತ್ತೊಂದು ದುರಂತ ಜರುಗಿದೆ.‌ ಶಿರಸಿಯ ಭೈರುಂಭೆ ಸಮೀಪ ಶಾಲ್ಮಲಾ ನದಿಯಲ್ಲಿ ಘಟನೆ ಸಂಭವಿಸಿದೆ.‌ ಮೃತರೆಲ್ಲರೂ ಶಿರಸಿ ನಗರದವರು. ರಾಮನಬೈಲಿನ ಮೌಲಾನಾ ಅಹಮ್ಮದ್ …

Read More »

ವಂಟಮೂರಿ ಹಲ್ಲೆ ಪ್ರಕರಣ – ಸಂತ್ರಸ್ತ ಭೇಟಿಗೆ ಹೈಕೋರ್ಟ್‌ ನಿರ್ಬಂಧ

ಬೆಳಗಾವಿ : ವಂಟಮೂರಿಯಲ್ಲಿ (Vantamoori) ಮಹಿಳೆಯನ್ನು ಬೆತ್ತಲೆಗೊಳಿಸಿ ಹಲ್ಲೆ (Assault) ನಡೆಸಿದ್ದ ಪ್ರಕರಣದಲ್ಲಿ ಸಂತ್ರಸ್ತ ಮಹಿಳೆಯ ಭೇಟಿಗೆ ಹೈಕೋರ್ಟ್‌ (High court) ನಿರ್ಬಂಧ ವಿಧಿಸಿದೆ. ಶನಿವಾರವಷ್ಟೇ ಬಿಜೆಪಿ (BJP) ಮಹಿಳಾ ನಿಯೋಗ ತಂಡದೊಡನೆ ತೆರಳಿ ಮಹಿಳೆಯೊಡನೆ ಮಾತುಕತೆ ನಡೆಸಿತ್ತು.   ಇನ್ನು ಮುಂದೆ ಮಹಿಳೆಯನ್ನು ಭೇಟಿಯಾಗುವ ಮಾಧ್ಯಮದವರು, ರಾಜಕಾರಣಿಗಳು ಹಾಗೂ ಮಾನವಹಕ್ಕು ಹೋರಾಟಗಾರರಿಗೆ ಹೈಕೋರ್ಟ್‌ ಷರತ್ತುಬದ್ದ ನಿರ್ಬಂಧ ವಿಧಿಸಿದೆ. ಮಹಿಳೆಯನ್ನು ಭೇಟಿಯಾಗಲು ವೈದ್ಯರ ಲಿಖಿತ ಪೂರ್ವಾನುಮತಿ ಅವಶ್ಯ ಎಂದು ಹೈಕೋರ್ಟ್‌ …

Read More »

ಮುಖ್ಯಮಂತ್ರಿಯಿದ್ದ ಹೆಲಿಕಾಪ್ಟರ್ ಲ್ಯಾಂಡಿಂಗ್ ನಲ್ಲಿ ಗೊಂದಲ

ಗದಗ: ಮುಖ್ಯಮಂತ್ರಿ (CM) ಸಿದ್ದರಾಮಯ್ಯ (siddaramaiah) ಅವರ ಹೆಲಿಕಾಪ್ಟರ್ ಲ್ಯಾಂಡಿಂಗ್ (helicopter landing) ವೇಳೆ ಗೊಂದಲವಾದ ಘಟನೆ ಗದಗದಲ್ಲಿ (gadag) ಭಾನುವಾರ ನಡೆದಿದೆ. ಬಾಲಕಿಯರ ಬಾಲ ಮಂದಿರ ಉದ್ಘಾಟನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೆಲಿಕಾಪ್ಟರ್ ನಲ್ಲಿ ಆಗಮಿಸಿದ್ದರು. ಈ ವೇಳೆ ಎರಡು ಹೆಲಿಕಾಪ್ಟರ್ ಗಳಿದ್ದು, ಲ್ಯಾಂಡಿಂಗ್ ವೇಳೆ ಪೈಲೆಟ್ ಗಳಲ್ಲಿ ಗೊಂದಲ ಉಂಟಾಗಿತ್ತು. ಹೆಲಿಪ್ಯಾಡ್ ಗೆ ಮೊದಲು ಆಗಮಿಸಿದ ಒಂದು ಹೆಲಿಕಾಪ್ಟರ್ ಅರ್ಧ ಇಳಿಸಿ ಮತ್ತೆ ಮೇಲೆ ಹಾರಿತು. ಬಳಿಕ …

Read More »

ಲೋಕಸಭೆ ಚುನಾವಣೆ: ಶೆಟ್ಟರ್‌ಗೆ ಕಾಂಗ್ರೆಸ್ ಟಿಕೆಟ್?

ಹುಬ್ಬಳ್ಳಿ: “ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಸಂಬಂಧ ಜಗದೀಶ್ ಶೆಟ್ಟರ್ ಅವರ ಅಭಿಪ್ರಾಯ ಕೇಳ್ತಿದ್ದೀವಿ. ಅವರೂ ಆಕಾಂಕ್ಷಿ ಅಂತ ಅಂದುಕೊಂಡಿದ್ದೀವಿ” ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಶೆಟ್ಟರ್ ನಿವಾಸದಲ್ಲಿಂದು ಮಾತನಾಡಿದ ಅವರು, “ನಮ್ಮ ಶಾಸಕರು, ಕಾರ್ಯಕರ್ತರು ಹಾಗೂ ಈ ಹಿಂದೆ ಸ್ಪರ್ಧಿಸಿದ್ದ ಅಭ್ಯರ್ಥಿಗಳು ಯಾರಿಗೆ ಟಿಕೆಟ್​ ಕೊಡಬೇಕು ಎಂದು ಹೇಳ್ತಾರೋ ಅವರಿಗೆ ಟಿಕೆಟ್ ಕೊಡುತ್ತೇವೆ” ಎಂದರು. ಮುಂದುವರಿದು ಮಾತನಾಡಿದ ಸಿಎಂ, “ಪ್ರತಿ ಜಿಲ್ಲೆಯಲ್ಲೂ ಕೂಡ ಒಬ್ಬೊಬ್ಬ ಸಚಿವರನ್ನು ವೀಕ್ಷಕರನ್ನಾಗಿ ನೇಮಕ ಮಾಡಿದ್ದೇವೆ. ಅವರು …

Read More »

ಸದ್ದಿಲ್ಲದೆ ನಡೆಯುತ್ತಿದೆ ‌ಬಾಲ್ಯ ವಿವಾಹ; 2023 ರಲ್ಲಿ ದಾಖಲಾದ ಪ್ರಕರಣಗಳೆಷ್ಟು ಗೊತ್ತಾ?

ಬಾಗಲಕೋಟೆ, ಡಿ.16: ಜಿಲ್ಲೆಯು ಒಂದು ಕಾಲದಲ್ಲಿ ಹೆಚ್​​ಐವಿ(HIV)ಯಲ್ಲಿ ರಾಜ್ಯದಲ್ಲೇ ನಂಬರ್ ಒನ್ ಸ್ಥಾನದಲ್ಲಿತ್ತು. ಇದೀಗ ಕಾಲ ಕ್ರಮೇಣ ಆ ನಂಬರ್​ನಿಂದ ಮುಕ್ತವಾಗಿದೆ. ಆದರೆ, ಸದ್ಯ ಜಿಲ್ಲೆಯಲ್ಲಿ ಸದ್ದಿಲ್ಲದೆ ‌ಬಾಲ್ಯ ವಿವಾಹ (Child marriage) ಪ್ರಕರಣಗಳು ಹೆಚ್ಚುತ್ತಾ ಸಾಗುತ್ತಿವೆ.ಬಡ ಮಧ್ಯಮವರ್ಗ, ಹಿಂದುಳಿ ವರ್ಗ ಹಾಗೂ ಎಸ್ ಸಿ ಸಮುದಾಯದಲ್ಲೇ ಅತಿ ಹೆಚ್ಚು ಬಾಲ್ಯ ವಿವಾಹಗಳು ಕಂಡು ಬರುತ್ತಿವೆ. ಮಹಿಳಾ‌ ಮತ್ತು ಮಕ್ಕಳ‌ ಕಲ್ಯಾಣ ಇಲಾಖೆ ಇದನ್ನು ತಡೆಯುವುದಕ್ಕೆ‌ ಜಾಗೃತಿ ಜೊತೆಗೆ ಕಠಿಣ ಕಾನೂನು …

Read More »

ಕಣ್ವ ಸೌಹಾರ್ದ ಪತ್ತಿನ ಸಂಘದ ಅವ್ಯವಹಾರ;ಸಿಬಿಐ ತನಿಖೆಗೆ ನೀಡಲು ಸರ್ಕಾರದ ಚಿಂತನೆ

ಬೆಳಗಾವಿಬೆಂಗಳೂರಿನ ಕಣ್ವ ಸೌಹಾರ್ದ ಪತ್ತಿನ ಸಹಕಾರ ಸಂಘದ ವಿರುದ್ಧ ಕೇಳಿಬಂದಿರುವ ಅವ್ಯವಹಾರವನ್ನು ಸಿಬಿಐಗೆ ಒಪ್ಪಿಸುವ ಚಿಂತನೆ ಇದೆ ಎಂದು ಸಹಕಾರ ಸಚಿವ ರಾಜಣ್ಣ ತಿಳಿಸಿದ್ದಾರೆ. ವಿಧಾನಸಭೆಯಲ್ಲಿ ಶಾಸಕ ರವಿಸುಬ್ರಮಣ್ಯ ಅವರ ಗಮನ ಸೆಳೆಯುವ ಸೂಚನೆಗೆ ಉತ್ತರಿಸಿದ ಅವರು, ಕಣ್ವ ಸೌಹಾರ್ದ ಪತ್ತಿನ ಸಹಕಾರ ಸಂಘದಲ್ಲಿ 800 ಕೋಟಿ ರೂ.ನಷ್ಟು ಅವ್ಯವಹಾರವಾಗಿದೆ. ಇದು ಸೌಹಾರ್ದ ಕಾಯ್ದೆ ಅಡಿಯಲ್ಲಿ ಬರುತ್ತಿದ್ದು, ಸಹಕಾರ ಇಲಾಖೆ ವ್ಯಾಪ್ತಿಯಲ್ಲಿ ಬರುವುದಿಲ್ಲ. ಠೇವಣಿದಾರರ ಹಿತ ದೃಷ್ಟಿಯಿಂದ ಸದನ ಒಪ್ಪಿಗೆ …

Read More »

ಕ್ಷುಲ್ಲಕ ಕಾರಣಕ್ಕೆ ಯುವಕನ ಕೊಲೆ: ಸ್ನೇಹಿತರಿಬ್ಬರ ಬಂಧನ

ರಾಯಚೂರು : ಕ್ಷುಲ್ಲಕ ಕಾರಣಕ್ಕೆ ಯುವಕನನ್ನು ಕೊಲೆ ಮಾಡಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಲಿಂಗಸುಗೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಲಿಂಗಸುಗೂರು ತಾಲೂಕಿನ ಗುಡದನಾಳ ಗ್ರಾಮದ ಶಿವಪುತ್ರ ಅಲಿಯಾಸ್ ಶಿವು, ಅಭಿಷೇಕ ಅಲಿಯಾಸ್ ಅಭಿ ಎಂಬುವರು ಸ್ನೇಹಿತ ಶರಣಬಸವ (21) ನನ್ನು ಕೊಲೆ ಮಾಡಿದ್ದರು.   ಪ್ರಕರಣದ ಹಿನ್ನೆಲೆ : ಶರಣಬಸವ, ಅಭಿಷೇಕ, ಶಿವಪುತ್ರ ಈ ಮೂವರು ಸ್ನೇಹಿತರಾಗಿದ್ದರು. ಇವರು ಆಗಾಗ ಜೂಜಾಟ ಆಡುತ್ತಿದ್ದರು. ಹಣ ಕಳೆದುಕೊಂಡಾಗ ಮತ್ತು ಗೆದ್ದಾಗ ಪರಸ್ಪರ ಜಗಳವಾಡುತ್ತಿದ್ದರು. ಮೊಹರಂ ಹಾಗೂ …

Read More »

ಹಿಂದೂ ಕಾರ್ಯಕರ್ತರ ನೆರವಿಗೆ ಬೆಂಗಳೂರಿನಲ್ಲಿ ಕಚೇರಿ ಆರಂಭ: ಯತ್ನಾಳ್

ವಿಜಯಪುರ: ರಾಜ್ಯದಲ್ಲಿ ಬಿಜೆಪಿ ಹಾಗೂ ಹಿಂದೂ ಸಂಘಟನೆಗಳ ಕಾರ್ಯಕರ್ತರ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ. ಹೀಗಾಗಿ ಸಂತ್ರಸ್ತರಿಗೆ ಕಾನೂನು ನೆರವು ನೀಡುವುದಕ್ಕಾಗಿ ಶೀಘ್ರದಲ್ಲೇ ಬೆಂಗಳೂರಿನಲ್ಲಿ ಕಛೇರಿ ತೆರೆಯುತ್ತೇನೆ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಭರವಸೆ ನೀಡಿದ್ದಾರೆ.   ಶನಿವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯ ಹಂಚಿಕೊಂಡರೂ ಪೊಲೀಸರು ಪ್ರಕರಣ ದಾಖಲಿಸುವ, ಠಾಣೆಗೆ ಕರೆದೊಯ್ದು ಮುಚ್ಚಳಿಕೆ ಬರೆಸಿಕೊಳ್ಳುವ ಮೂಲಕ ದೌರ್ಜನ್ಯ ನಡೆಸುತ್ತಿದ್ದಾರೆ. …

Read More »

ಇಂದಿನಿಂದ ʻKPSCʼ ಗ್ರೂಪ್ ಸಿ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ : ಅಭ್ಯರ್ಥಿಗಳಿಗೆ ಇಲ್ಲಿದೆ ಮುಖ್ಯ ಮಾಹಿತಿ

ಬೆಂಗಳೂರು :ಡಿಸೆಂಬರ್ 16 ರ ಇಂದು 17 ರ ನಾಳೆ ಕೆಪಿಎಸ್‍ಸಿ ವತಿಯಿಂದ ವಿವಿಧ ಇಲಾಖೆಗಳಲ್ಲಿನ ಗ್ರೂಪ್-ಸಿ ಹುದ್ದೆಗಳಿಗೆ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಯ ಹಿನ್ನಲೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರಗಳ ಸುತ್ತ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶ ಹೊರಡಿಸಲಾಗಿದೆ.   ಪರೀಕ್ಷೆಯಲ್ಲಿ ಭಾಗವಹಿಸಲಿರುವ ಎಲ್ಲಾ ಪರೀಕ್ಷಾರ್ಥಿಗಳು ಪರೀಕ್ಷಾ ಕೇಂದ್ರದೊಳಗೆ ಸ್ಮಾರ್ಟ್ ವಾಚ್, ಮೊಬೈಲ್, ಕ್ಯಾಲ್ಕ್ಯುಲೇಟರ್ ಸೇರಿದಂತೆ ಯಾವುದೇ ಎಲೆಕ್ಟ್ರಾನಿಕ್ಸ್ ಉಪಕರಣಗಳನ್ನು ಪರೀಕ್ಷಾ ಕೇಂದ್ರದೊಳಗೆ ಕೊಂಡೊಯ್ಯುವುದನ್ನು ಕಡ್ಡಾಯವಾಗಿ ನಿಷೇಧಿಸಿದೆ. ಪರೀಕ್ಷೆಗಳು …

Read More »

ಶಬರಿಮಲೆಯಲ್ಲಿ ಭಾರೀ ಜನದಟ್ಟಣೆ: ಅವ್ಯವಸ್ಥೆ ವಿರುದ್ಧ ಸಿಡಿದ ಭಕ್ತರಿಂದ ಪ್ರತಿಭಟನೆ

ತಿರುವನಂತಪುರಂ (ಕೇರಳ) : ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಭಾರೀ ಸಂಖ್ಯೆಯಲ್ಲಿ ಶಬರಿಮಲೆಗೆ ಭಕ್ತರು ಧಾವಿಸಿದ್ದು, ಅದನ್ನು ನಿಯಂತ್ರಿಸಲು ಕೇರಳ ಸರ್ಕಾರ ವಿಫಲವಾಗಿದೆ. ಗಂಟೆಗಟ್ಟಲೆ ಸರದಿ ಸಾಲಿನಲ್ಲಿ ನಿಂತ ಪರಿಣಾಮ ಬಾಲಕಿಯೊಬ್ಬಳು ಮೃತಪಟ್ಟರೆ, ಇನ್ನೊಂದು ಅವಘಡದಲ್ಲಿ ಯಾತ್ರಿಕನೊಬ್ಬ ಅಸುನೀಗಿದ ಘಟನೆ ನಡೆದಿದೆ. ಬುಧವಾರ ಬೆಳಗ್ಗೆ ಭಾರೀ ಜನದಟ್ಟಣೆಯಿಂದ ಬೇಸತ್ತ ಭಕ್ತರು ಪ್ರತಿಭಟನೆ ಕೂಡ ನಡೆಸಿದರು. ಈ ಮಧ್ಯೆ ಭಕ್ತರಿಗೆ ದರ್ಶನ ವ್ಯವಸ್ಥೆ ಮಾಡಿಕೊಡಲಾಗುವುದು ಎಂದು ಸರ್ಕಾರ ತಿಳಿಸಿದೆ.     ಸರದಿಯಲ್ಲಿ ನಿಂತಿದ್ದ …

Read More »