Breaking News

ರಾಷ್ಟ್ರೀಯ

ಬೇರೆ ಪಕ್ಷದವಧಿಯಲ್ಲಿ ಭದ್ರತಾ ಲೋಪ ಆಗಿದ್ದರೆ ಬಿಜೆಪಿ ಸುಮ್ಮನಿರುತ್ತಿರಲಿಲ್ಲ: ರಾವತ್‌

ನವದೆಹಲಿ: ಒಂದು ವೇಳೆ ಬೇರೆ ಪಕ್ಷ ಅಧಿಕಾರದಲ್ಲಿದ್ದ ವೇಳೆ ಸಂಸತ್‌ ಭದ್ರತಾ ಲೋಪ ನಡೆದಿದ್ದರೆ ಬಿಜೆಪಿ ಪಕ್ಷ ಇಡೀ ದೆಹಲಿಯನ್ನು ಬಂದ್‌ ಮಾಡಿ ಪ್ರತಿಭಟನೆ ನಡೆಸುತ್ತಿತ್ತು ಎಂದು ಶಿವಸೇನಾ ಸಂಸದ ಸಂಜಯ್‌ ರಾವತ್‌ ಕಿಡಿ ಕಾರಿದ್ದಾರೆ. ಈಚೆಗೆ ಸಂಸತ್‌ ಭವನದಲ್ಲಿ ನಡೆದ ಭದ್ರತಾ ಲೋಪದ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿರುವ ಅವರು, “ಕೇಂದ್ರದಲ್ಲಿ ಬೇರೆ ಯಾವುದೇ ಪಕ್ಷ ಅಧಿಕಾರದಲ್ಲಿದ್ದರೆ, ಈ ವಿಷಯದ ಬಗ್ಗೆ ಬಿಜೆಪಿ ಇಡೀ ದೆಹಲಿಯನ್ನು ಬಂದ್ ಮಾಡುತ್ತಿತ್ತು. …

Read More »

ಎರಡು ವರ್ಷದೊಳಗೆ ಎತ್ತಿನಹೊಳೆ ಯೋಜನೆ ಪೂರ್ಣ: ಗೃಹ ಸಚಿವ ಡಾ ಜಿ ಪರಮೇಶ್ವರ್

ಬೆಂಗಳೂರು : ಎತ್ತಿನ ಹೊಳೆ ಯೋಜನೆಗೆ ಕಳೆದ ನಾಲ್ಕು ವರ್ಷದ ಅವಧಿಯಲ್ಲಿ ಬಿಜೆಪಿ ಸರ್ಕಾರ ಅನುದಾನ ನೀಡಿಲ್ಲ. ಹೀಗಾಗಿ ಸ್ಥಗಿತಗೊಂಡಿದ್ದ ಯೋಜನೆ ಕೆಲಸವನ್ನು ನಮ್ಮ ಸರ್ಕಾರ ಆರಂಭಿಸಿದೆ ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ್ ಹೇಳಿದ್ದಾರೆ.   ಬೆಂಗಳೂರಿನ ಸದಾಶಿವನಗರದ ನಿವಾಸದಲ್ಲಿ ಎತ್ತಿನ ಹೊಳೆ ಯೋಜನೆ ಬಗ್ಗೆ ಮಾತನಾಡಿದ ಅವರು, ಎತ್ತಿನ ಹೊಳೆ ಯೋಜನೆಗೆ ಪ್ರಾರಂಭದಲ್ಲಿ ಅಂದಾಜು ವೆಚ್ಚ 13,500 ಸಾವಿರ ಕೋಟಿ ರೂ. ಮಾಡಲಾಗಿತ್ತು. ಈ ಹಿಂದಿನ ಅವಧಿಯಲ್ಲಿ …

Read More »

ಮಹಿಳೆ ಮೇಲಿನ ಅಮಾನವೀಯ ಹಲ್ಲೆ ಮಾಡಿದ ಬೆಳಗಾವಿ ಘಟನೆ ರಾಜ್ಯಸಭೆಯಲ್ಲಿ ಪ್ರತಿಧ್ವನಿಸಿತು.

ನವದೆಹಲಿ: ಮಹಿಳೆ ಮೇಲಿನ ಅಮಾನವೀಯ ಹಲ್ಲೆ ಮಾಡಿದ ಬೆಳಗಾವಿ ಘಟನೆ ರಾಜ್ಯಸಭೆಯಲ್ಲಿ ಪ್ರತಿಧ್ವನಿಸಿತು. ಈ ಅಮಾನವೀಯ ಪ್ರಕರಣದ ಬಗ್ಗೆ ಉತ್ತರಪ್ರದೇಶದ ಬಿಜೆಪಿ ಸಂಸದೆ ಕಾಂತಾ ಕರ್​ದಮ್​ ಅವರು ಸದನಕ್ಕೆ ಗಮನಕ್ಕೆ ತಂದರು. ಕರ್ನಾಟಕದಲ್ಲಿ ಮಹಿಳೆಯನ್ನು ಬೆತ್ತಲೆ ಮಾಡಿ ಮೆರವಣಿಗೆ ಮಾಡಲಾಗಿದೆ. ರಕ್ಷಣೆ ನೀಡಬೇಕಾದ ಪೊಲೀಸರೇ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ದೂರಿದರು. ಇದಕ್ಕೆ ಸದನದಲ್ಲಿ ವಿಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿ ಗದ್ದಲ ಶುರು ಮಾಡಿದರು. ಇದರ ಮಧ್ಯೆಯೂ ಸಂಸದೆ ಮಹಿಳೆಯ ಪರವಾಗಿ ಮಾತನಾಡಿ, ಮಹಿಳೆಯ …

Read More »

ಮಲ್ಟಿ ಬ್ರ್ಯಾಂಡ್ ಕೃಷಿ ಉತ್ಪನ್ನಗಳ ಮಾರಾಟ ಮಳಿಗೆಗೆ ಸಚಿವ ಚಲುವರಾಯಸ್ವಾಮಿ ಚಾಲನೆ

ಬಾಗಲಕೋಟೆ: ಜಿಲ್ಲೆಯ ಜಮಖಂಡಿ ನಗರದಲ್ಲಿ ನೂತನವಾಗಿ ಪ್ರಾರಂಭಿಸಲಾದ ಮಲ್ಟಿ ಬ್ರ್ಯಾಂಡ್ ಕೃಷಿ ಉತ್ಪನ್ನಗಳ ಮಾರಾಟ ಮಳಿಗೆಗೆ ಕೃಷಿ ಸಚಿವರಾದ ಎನ್. ಚಲುವರಾಯಸ್ವಾಮಿ ಬುಧವಾರ ಚಾಲನೆ ನೀಡಿದರು. ಕೃಷಿ ಉತ್ಪನ್ನಗಳ ಮಳಿಗೆ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸಾರ್ವಜನಿಕರಿಗೆ ದಿನ ನಿತ್ಯ ಬಳಕೆಗೆ ಬೇಕಾಗುವ ವಸ್ತುಗಳು ಒಂದೇ ಕಡೆ ಸಿಗಲು ಮಾಡಿರುವಂತ ಸೂಪರ್ ಮಾರ್ಕೆಟ್ ತರಹ ಕೃಷಿ ಮಾರ್ಕೆಟ್​ ರೈತರಿಗೆ ಉಪಯೋಗವಾಗಲಿದೆ. ಈ ತರಹದ ಮಳಿಗೆಯನ್ನು ರಾಜ್ಯದಲ್ಲಿ 150 ಕ್ಕೂ ಹೆಚ್ಚು …

Read More »

ಹುಕ್ಕೇರಿ: ಸಮಾಜದ ಮುಖ್ಯ ವಾಹಿನಿಗೆ ಬರಲು ಮಹಿಳೆಯರಿಗೆ ಸಲಹೆ

ಹುಕ್ಕೇರಿ: ಧರ್ಮಸ್ಥಳ ಮಾತೃಶ್ರೀ ಹೇಮಾವತಿ ಅಮ್ಮನವರ ಕನಸಿನ ಕೂಸಾದ ಜ್ಞಾನ ವಿಕಾಸ ಕಾರ್ಯಕ್ರಮ ಅರಿತುಕೊಂಡು ಮಹಿಳೆಯರು ಸಮಾಜದ ಮುಖ್ಯ ವಾಹಿನಿಗೆ ಬರುವಂತೆ ಧಾರವಾಡ ಪ್ರಾದೇಶಿಕ ನಿರ್ದೇಶಕ ವಸಂತ ಸಾಲ್ಯಾನ್ ಅಭಿಮತ ವ್ಯಕ್ತಪಡಿಸಿದರು. ತಾಲ್ಲೂಕಿನ ಸಂಕೇಶ್ವರದಲ್ಲಿ ಶನಿವಾರ ಹಮ್ಮಿಕೊಂಡ ಮಹಿಳಾ ಸಮಾವೇಶ ಮತ್ತು ವಿಚಾರಗೋಷ್ಟಿ ಸಮಾರಂಭದಲ್ಲಿ ಅತಿಥಿಯಾಗಿ ಮಾತನಾಡಿದರು.   ಯೋಜನೆಯ ಪರಿಣಾಮ ಮತ್ತು ಅನುಷ್ಠಾನ ಕುರಿತು ಮಾಹಿತಿ ಮತ್ತು ಕುಟುಂಬ ನಿರ್ವಹಣೆಯಲ್ಲಿ ಮಹಿಳೆಯರ ಪಾತ್ರ, ಸ್ವ ಉದ್ಯೋಗಗಳಿಗೆ ಪೂರಕವಾಗಿ ಯೋಜನೆಯಲ್ಲಿ ಇರುವಂತಹ …

Read More »

ಅಂಚೆ ಕಚೇರಿಯಲ್ಲಿ ಬಂದಿದೆ ಭರ್ಜರಿ ಲಾಭ ತರುವ ಹೊಸ ಸ್ಕೀಮ್ : ಯಾವುದದು.?

ಅಂಚೆ ಕಛೇರಿಯ ಮೂಲಕ ನಿಮ್ಮ ಹಣವನ್ನು ಸುರಕ್ಷಿತವಾಗಿರಿಸಲು ಉತ್ತಮ ಮಾರ್ಗವಾಗಿದೆ. ಇಲ್ಲಿ ಹಲವಾರು ರೀತಿಯ ಸಣ್ಣ ಉಳಿತಾಯ ಯೋಜನೆಗಳು ಮತ್ತು FD ಗಳನ್ನು ಹೊಂದಿದೆ. ಮುಖ್ಯವಾಗಿ ಎಸ್‌ಬಿಐಗಿಂತ ಹೆಚ್ಚಿನ ಬಡ್ಡಿಯನ್ನು ನೀಡುವ ಪೋಸ್ಟ್ ಆಫೀಸ್ ಟೈಮ್ ಡೆಪಾಸಿಟ್ ಸ್ಕೀಮ್ ಅಂತಹ ಒಂದು ಯೋಜನೆ ಇದೆ. ಇಲ್ಲಿ ಹೂಡಿಕೆದಾರರು ಈ ಯೋಜನೆಯಲ್ಲಿ 1 ವರ್ಷ, 2 ವರ್ಷ, 3 ವರ್ಷ ಮತ್ತು 5 ವರ್ಷಗಳವರೆಗೆ ಹಣವನ್ನು ಠೇವಣಿ ಮಾಡಬಹುದು. ಪೋಸ್ಟ್ ಆಫೀಸ್ …

Read More »

ಕನ್ನಡಿಗರಿಂದ 4 ಲಕ್ಷ ಕೋಟಿ ತೆರಿಗೆ, ಕೇಂದ್ರದಿಂದ ಕೇವಲ 50 ಸಾವಿರ ಕೋಟಿ ಮಾತ್ರ ವಾಪಸ್ : ಸಿಎಂ

ಹುಬ್ಬಳ್ಳಿ:, ರಾಜ್ಯದ ಜನರು 4 ಲಕ್ಷ ಕೋಟಿ ತೆರಿಗೆ ಪಾವತಿಸುತ್ತಿದ್ದರೂ ಕರ್ನಾಟಕಕ್ಕೆ ಕೇಂದ್ರದಿಂದ ಕೇವಲ 50,000 ಕೋಟಿ ರೂ. ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ (ಎನ್ಡಿಆರ್‌ಎಫ್) ಕೇಂದ್ರ ಸರ್ಕಾರದ ಹಣವಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ನಮ್ಮ ರಾಜ್ಯದಿಂದ 4 ಲಕ್ಷ ಕೋಟಿ ತೆರಿಗೆ ಸಂಗ್ರಹವಾಗಿದೆ. ಅದರಲ್ಲಿ ನಾವು 37,000 ಕೋಟಿ ರೂ.ಗಳ ತೆರಿಗೆ ಪಾಲನ್ನು ಪಡೆಯುತ್ತಿದ್ದೇವೆ ಮತ್ತು ಕೇಂದ್ರ ಪ್ರಾಯೋಜಿತ ಯೋಜನೆಗೆ 13,000 ಕೋಟಿ ರೂ. ಇದು …

Read More »

ಹಗಲು ಹೊತ್ತಿನಲ್ಲಿ ಬೈಕ್​ ಕಳ್ಳತನ ಮಾಡುತ್ತಿದ್ದ ಇಬ್ಬರು ಖದೀಮರ ಬಂಧನ

ಹಾವೇರಿ : ಸಾರ್ವಜನಿಕ ಸ್ಥಳಗಳಲ್ಲಿ ನಿಲ್ಲಿಸಿದ ಬೈಕ್‌ಗಳನ್ನು ಹಗಲು ಹೊತ್ತಿನಲ್ಲಿ ಹೊಂಚು ಹಾಕಿ ಕದಿಯುತ್ತಿದ್ದ ಇಬ್ಬರು ಆರೋಪಿಗಳನ್ನು ಹಾವೇರಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಹಾವೇರಿ ತಾಲೂಕು ಹೊಸರಿತ್ತಿ ಗ್ರಾಮದ ಸಚಿನ್ ಸಂಕ್ಲಿಪುರ (24) ಮತ್ತು ಉಡಚಪ್ಪ ದಿಪಾಳಿ (25) ಎಂದು ಗುರುತಿಸಲಾಗಿದೆ. ಸುಮಾರು 4,65,000 ಲಕ್ಷ ಮೌಲ್ಯದ 13 ಬೈಕ್​ಗಳ ಜಪ್ತಿ ಮಾಡಿ, ವಶಕ್ಕೆ ಪಡೆಯಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ನಿಲ್ಲಿಸಿದ ಬೈಕ್‌ಗಳನ್ನು ಟಾರ್ಗೆಟ್ ಮಾಡಿಕೊಂಡು ಬಸ್ ನಿಲ್ದಾಣ, ಹೋಟೆಲ್, ಹಾಗೂ …

Read More »

ಪತ್ನಿಯ ಕೊಲೆಗೈದು ಆತ್ಮಹತ್ಯೆ ಎಂದು ಬಿಂಬಿಸಲು ಯತ್ನಿಸಿದ ಪತಿ ಬಂಧನ

ರಾಯಚೂರು: ಪತ್ನಿಯ ಕೊಲೆಗೈದು ಆತ್ಮಹತ್ಯೆ ಎಂದು ಬಿಂಬಿಸಲು ಯತ್ನಿಸಿದ್ದ ಪತಿಯನ್ನು ಬಂಧಿಸಿರುವುದಾಗಿ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ನಿಖಿಲ್.ಬಿ.ತಿಳಿಸಿದರು. ಸೋನಿ ಕೊಲೆಯಾದ ಮಹಿಳೆ. ಅವಿನಾಶ್ ಹಂತಕ. ಎಸ್​ಪಿ​ ನಿಖಿಲ್.ಬಿ. ಮಾತನಾಡಿ, “ರಾಯಚೂರಿನ ಪಶ್ಚಿಮ​ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಡಿ.13ರಂದು ಕೊಲೆ ನಡೆದಿತ್ತು. ಅವಿನಾಶ್​ ಎಂಬಾತ ತನ್ನ ಪತ್ನಿ ಸೋನಿ ಅವರನ್ನು ವೇಲ್‌ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದ. ಇವರು ಒಂದು ವರ್ಷದ ಹಿಂದೆ ಮದುವೆಯಾಗಿದ್ದರು. ದಂಪತಿಗೆ ಒಂದು ತಿಂಗಳ ಮಗು ಇದೆ. ಮಗು …

Read More »

ಹಿಂದೂ ರಾಷ್ಟ್ರ ಎನ್ನುವುದು ಬಿಜೆಪಿಯ ಸ್ಲೋಗನ್ ಇಲ್ಲಿ ಮುಸ್ಲಿಂ, ಕ್ರಿಶ್ಚಿಯನ್, ದಲಿತರು ಹೀಗೆ ಅನೇಕ ಜಾತಿ, ಜನಾಂಗದವರಿದ್ದಾರೆ:C.M.

ಗದಗ: ಭಾರತ ಕೇವಲ ಹಿಂದೂಗಳ ದೇಶ ಮಾತ್ರವಲ್ಲ. ಇಲ್ಲಿ ಮುಸ್ಲಿಂ, ಕ್ರಿಶ್ಚಿಯನ್, ದಲಿತರು ಹೀಗೆ ಅನೇಕ ಜಾತಿ, ಜನಾಂಗದವರಿದ್ದಾರೆ. ಇದು ಬಹುತ್ವದ ದೇಶ. ಹಿಂದೂ ರಾಷ್ಟ್ರ ಎನ್ನುವುದು ಬಿಜೆಪಿಯ ಸ್ಲೋಗನ್ ಅಷ್ಟೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ನಗರದಲ್ಲಿಂದು ಸರಕಾರಿ ಬಾಲಕಿಯರ ಬಾಲಮಂದಿರ ಉದ್ಘಾಟಿಸಿದ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. 1950ರಲ್ಲಿ ಜನಸಂಘ ಸ್ಥಾಪನೆಯಾಯಿತು. ಅಂದಿನಿಂದ ಇಂದಿನವರೆಗೆ ಭಾರತವನ್ನು ಹಿಂದೂ ರಾಷ್ಟ್ರ ಮಾಡುತ್ತೇವೆ ಎಂದು ಹೇಳುತ್ತಾ ಬಂದಿದ್ದಾರೆ. ಭಾರತ …

Read More »