Breaking News

ರಾಷ್ಟ್ರೀಯ

ದರ್ಶನ್ ನಟನೆಯ ‘ಕಾಟೇರ’ ಬಿಡುಗಡೆಗೆ 1ದಿನ ಮಾತ್ರ ಬಾಕಿ ಅಡ್ವಾನ್ಸ್ ಬುಕ್ಕಿಂಗ್‌ಗೆ ಅದ್ಭುತ ರೆಸ್ಪಾನ್ಸ್

ದರ್ಶನ್ ನಟನೆಯ ‘ಕಾಟೇರ’ ಬಿಡುಗಡೆಗೆ ಇನ್ನೊಂದು ದಿನ ಮಾತ್ರ ಬಾಕಿಯಿದೆ. ಅಭಿಮಾನಿಗಳು ಸಿನಿಮಾ ನೋಡಲು ಥಿಯೇಟರ್‌ಗಳನ್ನು ‘ಕಾಟೇರ’ ದರ್ಶನ್ ಸ್ವಾಗತಕ್ಕೆ ಕಾಯುತ್ತಿದ್ದಾರೆ. ಚಿತ್ರದ ಅಡ್ವಾನ್ಸ್ ಬುಕ್ಕಿಂಗ್‌ಗೆ ಅದ್ಭುತ ರೆಸ್ಪಾನ್ಸ್ ಸಿಕ್ಕಿದೆ. ಕೆಲವೆಡೆ ಮಧ್ಯರಾತ್ರಿಯಿಂದಲೇ ಸಿನಿಮಾ ಪ್ರದರ್ಶನ ಆರಂಭವಾಗಲಿದೆ. ‘ಕಾಟೇರ’ ಚಿತ್ರದ ಟ್ರೈಲರ್, ಸಾಂಗ್ಸ್ ರಿಲೀಸ್ ಆಗಿ ಹಿಟ್ ಆಗಿದೆ. ಚಿತ್ರತಂಡ ಭರ್ಜರಿ ಪ್ರಮೋಷನ್ ಮಾಡ್ತಿದೆ. ನಟ ದರ್ಶನ್ ಕೂಡ ಸಂದರ್ಶನಗಳಲ್ಲಿ ಭಾಗಿಯಾಗಿ ಸಿನಿಮಾ ಬಗ್ಗೆ ಮಾತನಾಡುತ್ತಿದ್ದಾರೆ. ಈ ವೇಳೆ ಸಾಕಷ್ಟು …

Read More »

ರಾಜ್ಯದಲ್ಲಿ ಹೆಚ್ಚುತ್ತಿದೆ ಮಹಾಮಾರಿ ಅಟ್ಟಹಾಸ; 9 ಜನರು ಕೊರೊನಾ ಸೋಂಕಿಗೆ ಬಲಿ

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಒಂದೇ ವಾರದಲ್ಲಿ 9 ಜನರು ಕೋವಿಡ್ ಗೆ ಬಲಿಯಾಗಿದ್ದಾರೆ. ರಾಜ್ಯದಲ್ಲಿ ಕಳೆದ 10 ದಿನಗಳಲ್ಲಿ ಕೋವಿಡ್ ಸಕ್ರಿಯ ಪ್ರಕರಣಗಳ ಸಂಖ್ಯೆ 479ಕ್ಕೆ ಏರಿಕೆಯಾಗಿದೆ. 7 ದಿನದಲ್ಲಿ 9 ಜನರು ಕೋವಿಡ್ ನಿಂದ ಸಾವನ್ನಪ್ಪಿದ್ದಾರೆ. ಕೋವಿಡ್ ನಡುವೆ JN.1 ಸೋಂಕಿನ ಆತಂಕವೂ ಎದುರಾಗಿದೆ. ಮೈ ಕೊರೆಯುವ ಚಳಿ ನಡುವೆ ಕೋವಿಡ್ ಆತಂಕದಲ್ಲಿ ಆಸ್ಪತ್ರೆಗೆ ಬರುವವರ ಸಂಖ್ಯೆಯೂ ಹೆಚ್ಚಿದೆ. ರಾಜಧಾನಿ ಬೆಂಗಳೂರಿನ ಆಸ್ಪತ್ರೆಗಳಲ್ಲಿ ಹೊರರೋಗಿಗಳ …

Read More »

ಕನ್ನಡಪರ ಹೋರಾಟಗಾರರ ಬಿಡುಗಡೆ ಮಾಡದಿದ್ದರೆ ಕ್ರಾಂತಿಕಾರಿ ಹೋರಾಟ: ಕರವೇ ಪ್ರವೀಣ್ ಶೆಟ್ಟಿ ಎಚ್ಚರಿಕೆ

ಬೆಂಗಳೂರು:ಕೂಡಲೇ ಹೋರಾಟಗಾರರನ್ನು ಬಿಡುಗಡೆ ಮಾಡನಬೇಕು ಎಂದು ಆಗ್ರಹಿಸಿದ್ದಾರೆ. ಇಲ್ಲವಾದರೆ, ಕ್ರಾಂತಿಕಾರಕ ಹೋರಾಟವನ್ನು ಸರ್ಕಾರ ಎದುರಿಸಬೇಕಾಗಲಿದೆ.ಇಲ್ಲವಾದರೆ ರಾಜಧಾನಿ ಬೆಂಗಳೂರಿನಲ್ಲಿ ದೊಡ್ಡಮಟ್ಟದ ಕ್ರಾಂತಿಕಾರಿ ಹೋರಾಟ ಮಾಡಬೇಕಾಗುತ್ತದೆ ಎಂದು ಕನ್ನಡ ಪರ ಹೋರಾಟಗಾರ ಪ್ರವೀಣ್ ಕುಮಾರ್ ಶೆಟ್ಟಿ ಎಚ್ಚರಿಕೆ ನೀಡಿದ್ದಾರೆ.   ನಿನ್ನೆ ಬೆಂಗಳೂರಿನ ವಿವಿಧ ರಸ್ತೆಗಳಲ್ಲಿ ಪ್ರತಿಭಟನೆ ಮೆರವಣಿಗೆ ಮಾಡಿದ್ದ ಕರವೇ ಕಾರ್ಯಕರ್ತರು ಇಂಗ್ಲಿಷ್ ಬರಹ ಇದ್ದ ಬೋರ್ಡ್ ಗಳನ್ನು ಹರಿದು ಹಾಕಿದ್ದರು.ಪ್ರತಿಭಟನೆ ಜೋರಾಗಿ ಕಲ್ಲು ತೂರಾಟ ನಡೆದಿತ್ತು.ಹಾಗಾಗಿ ಕರವೇ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದರು. …

Read More »

KSRTC ಅಪಘಾತ ಪರಿಹಾರ 3 ಲಕ್ಷ ದಿಂದ 10 ಲಕ್ಷ ರೂ. ಗೆ ಹೆಚ್ಚಳ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಅಪಘಾತ ಪರಿಹಾರ ನಿಧಿ ಟ್ರಸ್ಟ್ ನೀಡುವ ಪರಿಹಾರವನ್ನು ಜನವರಿ 1, 2024 ರಿಂದ ಜಾರಿಗೆ ಬರುವಂತೆ 3 ಲಕ್ಷದಿಂದ 10 ಲಕ್ಷಕ್ಕೆ ಹೆಚ್ಚಿಸಿದೆ. ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಅಪಘಾತ ಪರಿಹಾರ ನಿಧಿ ಟ್ರಸ್ಟ್ ನೀಡುವ ಪರಿಹಾರವನ್ನು ಜನವರಿ 1, 2024 ರಿಂದ ಜಾರಿಗೆ ಬರುವಂತೆ 3 ಲಕ್ಷದಿಂದ 10 ಲಕ್ಷಕ್ಕೆ ಹೆಚ್ಚಿಸಿದೆ. ಅಪಘಾತಕ್ಕೀಡಾದವರ ಅವಲಂಬಿತರಿಗೆ ಹೆಚ್ಚುವರಿ ಪರಿಹಾರ ನೀಡಲು, …

Read More »

ಬಿಸಿಯೂಟ ಸೇವಿಸಿ 60ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

ಬಿಸಿಯೂಟ ಸೇವಿಸಿ 60ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥರಾಗಿರುವ ಘಟನೆ ತಾಲೂಕಿನ ಬೀರಾವರ ಗ್ರಾಮದಲ್ಲಿ ನಡೆದಿದೆ. ಮಕ್ಕಳಲ್ಲಿ ವಾಂತಿ, ಭೇದಿ ಕಾಣಿಸಿಕೊಂಡಿದ್ದರಿಂದ ತೀವ್ರ ಸುಸ್ತಾಗಿದ್ದರು. ಹೀಗಾಗಿ ಅವರನ್ನು ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಚಿತ್ರದುರ್ಗ: ಬಿಸಿಯೂಟ ಸೇವಿಸಿ 60ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥರಾಗಿರುವ ಘಟನೆ ತಾಲೂಕಿನ ಬೀರಾವರ ಗ್ರಾಮದಲ್ಲಿ ನಡೆದಿದೆ. ಮಕ್ಕಳಲ್ಲಿ ವಾಂತಿ, ಭೇದಿ ಕಾಣಿಸಿಕೊಂಡಿದ್ದರಿಂದ ತೀವ್ರ ಸುಸ್ತಾಗಿದ್ದರು. ಹೀಗಾಗಿ ಅವರನ್ನು ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಬೀರಾವರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ …

Read More »

51 ಕೋಟಿ ರೂ. ತೆರಿಗೆ ಬಾಕಿ: ಬೆಂಗಳೂರಿನ ಪ್ರತಿಷ್ಠಿತ ಮಂತ್ರಿ ಮಾಲ್​ಗೆ ಮತ್ತೆ ಬೀಗ

ಬೆಂಗಳೂರು: ಬಾಕಿ ಉಳಿದಿರುವ ತೆರಿಗೆ ಬಾಕಿಯನ್ನು ಪಾವತಿಸದ ಹಿನ್ನೆಲೆಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮಂತ್ರಿ ಸ್ಕ್ವೇರ್ ಮಾಲ್ಗೆ ಮತ್ತೊಮ್ಮೆ ಬೀಗ ಜಡಿದಿದೆ. ಮಲ್ಲೇಶ್ವರಂನಲ್ಲಿರುವ ಮಾಲ್ನ ತೆರಿಗೆ ಬಾಕಿಯನ್ನು ಪಾವತಿಸುವಂತೆ ಬಿಬಿಎಂಪಿ ಆಡಳಿತ ಮಂಡಳಿಗೆ ಸೂಚಿಸಿತ್ತು. ಆಡಳಿತ ಮಂಡಳಿಯಿಂದ ಬಾಕಿ ಪಾವತಿಯಾಗದ ಕಾರಣ ಬಿಬಿಎಂಪಿ ಕಂದಾಯ ವಿಭಾಗದ ಸಿಬ್ಬಂದಿ ಬುಧವಾರ ಸ್ಥಳಕ್ಕೆ ಮಾಲ್ಗೆ ಬೀಗ ಜಡಿದಿದ್ದಾರೆ. ಒಟ್ಟಾರೆಯಾಗಿ, ಮಂತ್ರಿ ಸ್ಕ್ವೇರ್ ಬಿಬಿಎಂಪಿಗೆ 51 ಕೋಟಿ ತೆರಿಗೆ ಬಾಕಿ ಪಾವತಿಸಬೇಕಿದೆ. …

Read More »

4 ಸಾವಿರ ಕೋಟಿ ಹಗರಣ ಎಂದು ಕೊಂಡಿದ್ದೆವು: ಯತ್ನಾಳ್ ಮಾಹಿತಿಯಿಂದ ನೆರವಾಗಿದೆ; ಜಿ. ಪರಮೇಶ್ವರ

ಕಲಬುರಗಿ: ಕೋವಿಡ್ ಸಂದರ್ಭದಲ್ಲಿ 4 ಸಾವಿರ ಕೋಟಿ ರೂ.ಗಳ ಹಗರಣವಾಗಿರಬಹುದು ಎಂದು ನಾವು ಭಾವಿಸಿದ್ದೆವು. ಈಗ ನಮ್ಮ ಮಾಹಿತಿ ತಪ್ಪು ಎಂದು ಸ್ಪಷ್ಟವಾಗಿದೆ. ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು 4 ಸಾವಿರ ಕೋಟಿ ಅಲ್ಲ, 40 ಸಾವಿರ ಕೋಟಿ ಎಂದು ಹೇಳುವ ಮೂಲಕ ತನಿಖೆಗೆ ನೆರವಾಗಿದ್ದಾರೆ ಎಂದು ಗೃಹ ಪರಮೇಶ್ವರ್ ತಿಳಿಸಿದ್ದಾರೆ. ಕಲಬುರಗಿಯಲ್ಲಿ ಮಾತನಾಡಿದ ಅವರು, ಹೈಕೋರ್ಟ್ ನಿವೃತ್ತ ನ್ಯಾಯಾಧೀಶರು ಹಗರಣದ ತನಿಖೆ ನಡೆಸಲಿದ್ದಾರೆ. ಇದು 4,000 …

Read More »

ಶಿಕ್ಷಣ ಸಚಿವ ಮಧು ಬಂಗಾರಪ್ಪ ಸಂಚರಿಸುತ್ತಿದ್ದ ಕಾರು ಅಪಘಾತ

ತುಮಕೂರು: ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಪ್ರಯಾಣಿಸುತ್ತಿದ್ದ ಕಾರು ಅಪಘಾತವಾಗಿದ್ದು, ಸಚಿವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. (Education minister Madhu Bangarappa) ತುಮಕೂರಿನ ನಂದಿಹಳ್ಳಿಯ ಹೆದ್ದಾರಿಯಲ್ಲಿ ನಿನ್ನೆ ಬುಧವಾರ ಮಧ್ಯರಾತ್ರಿ ಸುಮಾರಿಗೆ ಅಪಘಾತವಾಗಿದೆ. ಚಲಿಸುತ್ತಿದ್ದ ಲಾರಿಗೆ ಕಾರು ಹಿಂಭಾಗದಿಂದ ಗುದ್ದಿದ್ದು, ಪರಿಣಾಮ ಕಾರಿನ ಮುಂಭಾಗ ಸಂಪೂರ್ಣ ಜಖಂ ಆಗಿದೆ. ಕಾರಿನಲ್ಲಿ ಸಚಿವರು ಸೇರಿ ಮೂವರು ಪ್ರಯಾಣಿಸುತ್ತಿದ್ದು, ಎಲ್ಲರೂ ಬಚಾವ್ ಆಗಿದ್ದಾರೆ. ಶಿವಮೊಗ್ಗದಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದಾಗ ಮಾರ್ಗ ಮಧ್ಯೆ ಈ ದುರಂತ …

Read More »

ಯತ್ನಾಳ್ ಗೆ ಬಿಜೆಪಿ ಖಡಕ್ ವಾರ್ನಿಂಗ್

ಇತ್ತೀಚಿನ ಕೆಲವು ಬೆಳವಣಿಗೆಗಳನ್ನು ಪಕ್ಷ ಗಂಭೀರವಾಗಿ ಪರಿಗಣಿಸಿದೆ ಮತ್ತು ಪಕ್ಷದ ಘನತೆಗೆ ಧಕ್ಕೆ ತರುವ ಯಾವುದೇ ಚಟುವಟಿಕೆಗಳನ್ನು ಸಹಿಸುವುದಿಲ್ಲ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ ರಾಜೀವ್ ಬುಧವಾರ ಪರೋಕ್ಷವಾಗಿ… ಬೆಂಗಳೂರು: ಇತ್ತೀಚಿನ ಕೆಲವು ಬೆಳವಣಿಗೆಗಳನ್ನು ಪಕ್ಷ ಗಂಭೀರವಾಗಿ ಪರಿಗಣಿಸಿದೆ ಮತ್ತು ಪಕ್ಷದ ಘನತೆಗೆ ಧಕ್ಕೆ ತರುವ ಯಾವುದೇ ಚಟುವಟಿಕೆಗಳನ್ನು ಸಹಿಸುವುದಿಲ್ಲ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ ರಾಜೀವ್ ಬುಧವಾರ ಪರೋಕ್ಷವಾಗಿ ಶಾಸಕ ಬಸನಗೌಡ ಪಾಟೀಲ್ …

Read More »

ಪ್ರತಾಪ್ ಸಿಂಹಗೆ ಮತ್ತೆ ಸಂಕಷ್ಟ

ಬೆಂಗಳೂರು, ಡಿಸೆಂಬರ್ 28: ಲೋಕಸಭೆ ಭದ್ರತಾ ಲೋಪ ಪ್ರಕರಣದ ಬಳಿಕ ಮೈಸೂರು ಬಿಜೆಪಿ ಸಂಸದ ಪ್ರತಾಪ್ ಸಿಂಹಗೆ (Pratap Simha) ಸಾಲು ಸಾಲು ಸಂಕಷ್ಟಗಳು ಎದುರಾಗುತ್ತಿವೆ. ಸಿಎಂ ಸಿದ್ದರಾಮಯ್ಯ ವಿರುದ್ಧ ಅವಹೇಳನಕಾರಿ ಹೇಳಿಕೆ ವಿಚಾರವಾಗಿ ಎಫ್‌ಐಆರ್ ಸೇರಿದಂತೆ ಹಲವು ಸಮಸ್ಯೆಗಳನ್ನು ಅವರು ಎದುರಿಸುತ್ತಿದ್ದಾರೆ. ಈ ಮಧ್ಯೆ ಇದೀಗ ಅವರು ಪ್ರತಿನಿಧಿಸುವ ಮೈಸೂರು ಲೋಕಸಭಾ ಕ್ಷೇತ್ರವನ್ನು (Mysuru Lok Sabha Constituency) ಜೆಡಿಎಸ್ ಸೆಳೆಯುವ ಅಪಾಯ ಎದುರಾಗಿದೆ. ಲೋಕಸಭೆ ಚುನಾವಣೆಗೆ ಬಿಜೆಪಿಯೊಂದಿಗೆ ಜೆಡಿಎಸ್ ಸೀಟು ಹಂಚಿಕೆ ಒಪ್ಪಂದದ ಮಾತುಕತೆ ಪ್ರಕ್ರಿಯೆ …

Read More »