ಬೆಂಗಳೂರು: ವಿಧಾನಮಂಡಲ ಅಧಿವೇಶನ ಹಿನ್ನೆಲೆಯಲ್ಲಿ ಬೆಂಗಳೂರಿನ ಐಐಎಂನಲ್ಲಿ ಫೆಬ್ರವರಿ 9ರಂದು ಶಾಸಕರಿಗೆ ಕಾರ್ಯಾಗಾರ ಆಯೋಜಿಸಲಾಗಿದೆ. ಬಜೆಟ್ ಅಧಿವೇಶನದ ಸ್ವರೂಪ, ಚರ್ಚೆ ಬಗ್ಗೆ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ಕೊಡಿಸಲಾಗುವುದು ಎಂದು ವಿಧಾನಸಭೆ ಅಧ್ಯಕ್ಷ ಯು.ಟಿ. ಖಾದರ್ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಕಾರ್ಯಾಗಾರಕ್ಕೆ ಚಾಲನೆ ನೀಡಲಿದ್ದಾರೆ. ಫೆಬ್ರವರಿ 12ರಂದು ವಿಧಾನಮಂಡಲ ಅಧಿವೇಶನ ಆರಂಭವಾಗಲಿದೆ. ರಾಜ್ಯಪಾಲರು ಜಂಟಿ ಸದನ ಉದ್ದೇಶಿಸಿ ಭಾಷಣ ಮಾಡಲಿದ್ದು, ಫೆ. 16ರಂದು ಮುಖ್ಯಮಂತ್ರಿಗಳು …
Read More »ಉಚಿತವಾಗಿ ‘ಆಧಾರ್’ ಕಾರ್ಡ್ ಅಪ್ ಡೇಟ್ ಮಾಡಲು ಮಾ.14 ಕೊನೆಯ ದಿನ
ನವದೆಹಲಿ: ಆಧಾರ್ ಕಾರ್ಡ್ ನಲ್ಲಿ ನಿಮ್ಮ ವಿಳಾಸ ಅಥವಾ ಮೊಬೈಲ್ ಸಂಖ್ಯೆಯನ್ನು ಬದಲಾಯಿಸಬೇಕಾದರೆ, ಅಥವಾ ನೀವು ಹೆಸರನ್ನು ಸರಿಪಡಿಸಲು ಬಯಸಿದರೆ, ನೀವು ಮನೆಯಲ್ಲಿ ಕುಳಿತು ನಿಮ್ಮ ಸ್ವಂತ ಮೊಬೈಲ್ನಿಂದ ಆಧಾರ್ ಅನ್ನು ನವೀಕರಿಸಬಹುದು. ಇದಕ್ಕಾಗಿ ಯಾವುದೇ ಶುಲ್ಕ ಇರುವುದಿಲ್ಲ.ನೀವು ಇನ್ನೂ ಕೂಡ ಆಧಾರ್ ಕಾರ್ಡ್ ಅಪ್ ಡೇಟ್ ಮಾಡಿಸಿಲ್ವಾ..? ಹಾಗಾದರೆ ಮಾರ್ಚ್ 14 ರೊಳಗೆ ಈ ಕೆಲಸ ಮಾಡಿ. ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಆಧಾರ್ ಅನ್ನು ಉಚಿತವಾಗಿ ನವೀಕರಿಸುವ …
Read More »ಎಂಕೆ ಹುಬ್ಬಳ್ಳಿ ಧ್ವಜ ತೆರವು: ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದೇ ಗಲಾಟೆಗೆ ಕಾರಣ ಎಂದ ಬೆಳಗಾವಿ ಎಸ್ಪಿ
ಬೆಳಗಾವಿ, : ಸಾರ್ವಜನಿಕ ಸ್ಥಳಗಳಲ್ಲಿ ಧ್ವಜಕ್ಕೆ ಅವಕಾಶ ಇಲ್ಲ ಎಂದುಬೆಳಗಾವಿ (Belagavi)ಎಸ್ಪಿ ಭೀಮಾಶಂಕರ ಗುಳೇದ್ ಹೇಳಿದ್ದಾರೆ. ಕಿತ್ತೂರು ತಾಲೂಕಿನ ಎಂ.ಕೆ.ಹುಬ್ಬಳ್ಳಿ ಗ್ರಾಮದಲ್ಲಿ ಹನುಮ ಧ್ವಜ ತೆರವು ವಿವಾದ ಸಂಬಂಧ ಮಾತನಾಡಿದ ಅವರು, ಸರ್ಕಾರ, ಅಧಿಕಾರಿಗಳ ತೀರ್ಮಾನದಂತೆ ನಾವು ನಡೆಯುತ್ತೇವೆ ಎಂದರು. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದೇ ಗಲಾಟೆಗೆ ಕಾರಣವಾಗಿರುವ ಹಿನ್ನೆಲೆ ಸಾಮಾಜಿಕ ಜಾಲತಾಣ ಮೇಲೆ ನಿಗಾ ಇಟ್ಟಿದ್ದೇವೆ. ಯಾರೇ ತಪ್ಪು ಮಾಡಿದರೂ ಕಾನೂನು ರೀತಿ ಕ್ರಮ ಕೈಗೊಳ್ಳುತ್ತೇವೆ. ನಮ್ಮ ಗ್ರಾಮದಲ್ಲಿ ಎಲ್ಲರೂ …
Read More »ಕೆರಗೋಡು ಬಳಿಕ ಬೆಳಗಾವಿಯ ಎಂಕೆ ಹುಬ್ಬಳ್ಳಿಯಲ್ಲಿ ಧ್ವಜ ತೆರವು
ಬೆಳಗಾವಿ, : ಮಂಡ್ಯ ತಾಲೂಕಿನಕೆರಗೋಡು ಗ್ರಾಮದಲ್ಲಿಹನುಮ ಧ್ವಜ ತೆರವು ಮಾಡಿದ ಬೆನ್ನಲ್ಲೇ ಬೆಳಗಾವಿಯಲ್ಲೂ (Belagavi) ಧ್ವಜ ತೆರವು ಪ್ರಕರಣ ಸುದ್ದು ಮಾಡುತ್ತಿದೆ. ಕಿತ್ತೂರು ತಾಲೂಕಿನ ಎಂಕೆ ಹುಬ್ಬಳ್ಳಿ (MK Hubballi) ಗ್ರಾಮದಲ್ಲಿ ಪೊಲೀಸರು ಭಗವಾ ಧ್ವಜಗೊಳಿಸಿದ್ದು, ಇದನ್ನು ಖಂಡಿಸಿ ಹಿಂದೂ ಸಂಘಟನೆಗಳು ಬೃಹತ್ ಪಾದಯಾತ್ರೆ ಕೈಗೊಂಡಿದ್ದಾರೆ. ಎಂ.ಕೆ ಹುಬ್ಬಳ್ಳಿ ಗ್ರಾಮದಲ್ಲಿ ಭಗವಾ ಧ್ವಜ ತೆರವುಗೊಳಿಸಿದ್ದು, ಇದನ್ನು ಖಂಡಿಸಿ ಹಿಂದೂ ಸಂಘಟನೆಗಳು ಚಲೋ ಎಂಕೆ ಹುಬ್ಬಳ್ಳಿ ಕೈಗೊಂಡಿದ್ದು, ಬಿಜೆಪಿ ನಾಯಕರು, ಹಿಂದೂ ಪರ ಕಾರ್ಯಕರ್ತರು ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. …
Read More »ಅವರು BJP ಗೆ ಕರೆಯುತ್ತಿದ್ದಾರೆ, ನಾನು ಹೋಗಲ್ಲ: ಕೇಜ್ರಿವಾಲ್
ಹೊಸದಿಲ್ಲಿ: “ನಾನು ಬಿಜೆಪಿಗೆ ಸೇರಬೇಕು ಎಂದು ಆಹ್ವಾನ ನೀಡುತ್ತಿದ್ದಾರೆ. ಆದರೆ ನಾನು ಹೋಗುವುದೇ ಇಲ್ಲ’ ಹೀಗೆಂದು ದಿಲ್ಲಿ ಸಿಎಂ ಮತ್ತು ಆಪ್ ಸಂಚಾಲಕ ಅರವಿಂದ ಕೇಜ್ರಿವಾಲ್ ಬಿಜೆಪಿಗೆ ಸವಾಲು ಹಾಕಿದ್ದಾರೆ. ಪಕ್ಷದ ಶಾಸಕರನ್ನು ಖರೀದಿ ಮಾಡಲು ಬಿಜೆಪಿ ಪ್ರಯತ್ನ ಮಾಡುತ್ತಿದೆ ಎಂದು ಆರೋಪಿಸಿರುವಂತೆಯೇ ಅವರು ಈ ಮಾತುಗಳನ್ನಾಡಿದ್ದಾರೆ. ಹೊಸದಿಲ್ಲಿಯ ಕಿರಾರಿ ಎಂಬಲ್ಲಿ ಶಾಲೆಗಳ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿದ ಬಳಿಕ ಕೇಜ್ರಿವಾಲ್ ಮಾತನಾಡಿದರು. “ಅವರು (ಬಿಜೆಪಿ) ನನ್ನ ವಿರುದ್ಧ ಏನೂ …
Read More »ದಿಲ್ಲಿ ಹೋರಾಟಕ್ಕೆ ಕಾಂಗ್ರೆಸ್ ತಯಾರಿ
ಬೆಂಗಳೂರು: ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಅನ್ಯಾಯ ಆಗಿದೆ ಎಂದು ಆರೋಪಿಸಿ ದಿಲ್ಲಿಯಲ್ಲಿ ಹೋರಾಟ ಕ್ಕಿಳಿಯಲು ನಿರ್ಧರಿಸಿರುವ ರಾಜ್ಯ ಕಾಂಗ್ರೆಸ್ ಫೆ. 7ರಂದು ಸಂಸತ್ ಭವನದ ಎದುರು ಪ್ರತಿಭಟನೆಗೆ ಸಿದ್ಧತೆ ನಡೆಸುತ್ತಿದೆ. ಜತೆಗೆ, “ನನ್ನ ತೆರಿಗೆ ನನ್ನ ಹಕ್ಕು” ಅಭಿಯಾನಕ್ಕೂ ಬೆಂಬಲ ಸೂಚಿಸಿದೆ. ದಕ್ಷಿಣ ಭಾರತ ಪ್ರತ್ಯೇಕ ರಾಷ್ಟ್ರದ ಕೂಗೆಬ್ಬಿಸಿದ ಸಂಸದ ಡಿ.ಕೆ. ಸುರೇಶ್ ವಿರುದ್ಧ ಜನಾಕ್ರೋಶ ವ್ಯಕ್ತವಾಗುತ್ತಿದ್ದು, ಇದರಿಂದ ಪಕ್ಷಕ್ಕಾಗಿರುವ ಮುಜುಗರವನ್ನೂ ತಪ್ಪಿಸಬೇಕಾದ ಅನಿವಾರ್ಯಕ್ಕೆ ಕಾಂಗ್ರೆಸ್ ಸಿಲುಕಿದೆ. ಅಲ್ಲದೆ ಲೋಕ ಸಭೆ …
Read More »42 ಸಿಮ್‌ಕಾರ್ಡ್‌ಅಕ್ರಮವಾಗಿ ಖರೀದಿಸಿ ಸಿಕ್ಕಿಬಿದ್ದ ಯುವಕರು
ಕುಟುಂಬದ ವಿವಿಧ ವ್ಯಕ್ತಿಗಳ ಹೆಸರಿನಲ್ಲಿ 42 ಸಿಮ್‌ಕಾರ್ಡ್‌ಗಳನ್ನು ಸಂಗ್ರಹಿಸಿಕೊಂಡು ಬೆಂಗಳೂರು ಕಡೆ ಪ್ರಯಾಣಿಸುತ್ತಿದ್ದ ಐವರನ್ನು ಧರ್ಮಸ್ಥಳ ಪೊಲೀಸರು ರವಿವಾರ ಪತ್ತೆಹಚ್ಚಿದ್ದಾರೆ. ನಾಲ್ವರನ್ನು ವಶಕ್ಕೆ ಪಡೆಯಲಾಗಿದೆ. ಓರ್ವ ಅಪ್ರಾಪ್ತ ವಯಸ್ಕನಾಗಿದ್ದಾನೆ. ಇಷ್ಟು ಸಂಖ್ಯೆಯ ಸಿಮ್ ಪಡೆದುಕೊಂಡಿರುವುದರ ಹಿಂದೆ ದುರುದ್ದೇಶವಿದೆಯೇ ಎಂಬುದು ತನಿಖೆಯಿಂದ ತಿಳಿದು ಬರಬೇಕಿದೆ. ವೃತ್ತಿಯಲ್ಲಿ ದುಬಾೖಯಲ್ಲಿ ಟ್ರೇಡಿಂಗ್ ಕೆಲಸ ಮಾಡುತ್ತಿದ್ದ ಬಿಕಾಂ ಪದವೀಧರ ಬಂಟ್ವಾಳ ತಾಲೂಕಿನ ಬಡಗಕಜೆಕಾರು ಗ್ರಾಮದ ಅಕ್ಬರ್ ಆಲಿ (24), ಬೆಳ್ತಂಗಡಿಯ ಬಟ್ಟೆ ಅಂಗಡಿಯಲ್ಲಿ ಸೇಲ್ಸ್‌ಮನ್ ಆಗಿದ್ದ …
Read More »ನನ್ನ ರಾಮನನ್ನು ಬಿಜೆಪಿಗೆ ಬಿಟ್ಟುಕೊಡುವುದಿಲ್ಲ. ಶಶಿ ತರೂರ್
ನವದೆಹಲಿ: ರಾಮ ಮಂದಿರದ ಸಮರ್ಪಣಾ ಸಮಾರಂಭದಲ್ಲಿ ಕಾಂಗ್ರೆಸ್ ನಾಯಕರು ಭಾಗವಹಿಸದಿರುವ ಬಗ್ಗೆ ಕಾಂಗ್ರೆಸ್ ಸಂಸದ ಶಶಿ ತರೂರ್ ಪ್ರತಿಕ್ರಿಯಿಸಿದ್ದಾರೆ. ಸಮಾರಂಭದಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂದರೆ ಕಾಂಗ್ರೆಸ್ ದೇವರನ್ನು ಕೈಬಿಡುತ್ತಿದೆ ಎಂದರ್ಥವಲ್ಲ ಎಂದು ತರೂರ್ ಹೇಳಿದ್ದಾರೆ. ಇಂಡಿಯಾ ಟುಡೆ ಟಿವಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ತರೂರ್, “ಬಾಲ್ಯದಿಂದಲೂ ರಾಮನನ್ನು ಪ್ರಾರ್ಥಿಸುತ್ತಿರುವವನಾಗಿ ನಾನು ನನ್ನ ರಾಮನನ್ನು ಬಿಜೆಪಿಗೆ ಒಪ್ಪಿಸಲು ಹೋಗುವುದಿಲ್ಲ. ಬಿಜೆಪಿಯು ರಾಮನ ಮೇಲೆ ಯಾವುದೇ ಹಕ್ಕುಸ್ವಾಮ್ಯವನ್ನು ಹೊಂದಿದೆ ಅಥವಾ ದೈವಿಕತೆಯ ಯಾವುದೇ ಅಭಿವ್ಯಕ್ತಿಯನ್ನು …
Read More »“ಕಿತ್ತೂರು ಕೋಟೆ’ಯತ್ತ ನಿರ್ಲಕ್ಷ್ಯ
ಕಿತ್ತೂರು: ಬ್ರಿಟಿಷರ ವಿರುದ್ಧ ಹೋರಾಡಿದ ವೀರ ಮಹಿಳೆ ವೀರರಾಣಿ ಚನ್ನಮ್ಮಳ ಕೋಟೆ ಅಭಿವೃದ್ಧಿ ಹೆಚ್ಚಿನ ಸಂಖ್ಯೆಯ ಪ್ರವಾಸಿಗರನ್ನು ಆಕರ್ಷಿಸುವಲ್ಲಿ ವಿಫಲವಾಗಿದೆ. ಕೋಟೆ ಪ್ರವೇಶಿಸುತ್ತಿದ್ದಂತೆ ಸಹಿಸಲಾಗದಷ್ಟು ಕೊಳೆತು ನಾರುವ ಕಸದ ವಾಸನೆ ಮೂಗಿಗೆ ಬಡಿಯುತ್ತದೆ. ಸಾರ್ವಜನಿಕರು, ಅಂಗಡಿಕಾರರು ತಾಜ್ಯ ವಸ್ತುಗಳನ್ನು ಕೋಟೆ ಮುಂಭಾಗ ಎಸೆಯುತ್ತಿರುವ ಪರಿಣಾಮ ಗಬ್ಬೆದ್ದು ನಾರುತ್ತಿದೆ. ಇತಿಹಾಸ ಸಾರುವ ಕಂದಕಗಳು ಕಸ ಕಡ್ಡಿ, ಸಾರಾಯಿ ಬಾಟಲಿಗಳಿಂದ ತುಂಬಿ ತುಳುಕುತ್ತಿವೆ. ನನೆಗುದಿಗೆ ಬಿದ್ದ ಧ್ವನಿ-ಬೆಳಕು: 2011ರಲ್ಲಿ ಕೋಟೆಯ ಆವರಣದಲ್ಲಿ ಎರಡು ಕೋಟಿ ರೂ. …
Read More »ಚನ್ಮಮ್ಮನ ಕಿತ್ತೂರು ಶಕ್ತಿ ಕೇಂದ್ರವಾಗಲಿ: ಶ್ರೀಬಸವ ಜಯ ಮೃತ್ಯುಂಜಯ ಸ್ವಾಮಿ
ಕಿತ್ತೂರು: ಐತಿಹಾಸಿಕ ಚನ್ಮಮ್ಮನ ಕಿತ್ತೂರು ಕರ್ನಾಟಕದ ಶಕ್ತಿ ಕೇಂದ್ರವಾಗಬೇಕು. ರಾಣಿ ಕಿತ್ತೂರು ಚನ್ನಮ್ಮನ ಲಿಂಗೈಕ್ಯ ಜ್ಯೋತಿಯು ಕೇವಲ ಲಿಂಗಾಯತ ಸಮಾಜದ ಜ್ಯೋತಿಯಾಗಬಾರದು, ಇಡಿ ರಾಜ್ಯದ 7 ಕೋಟಿ ಕನ್ನಡಿಗರ ಜ್ಯೋತಿಯಾಗಬೇಕು ಎಂದು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಬಸವ ಜಯ ಮೃತ್ಯುಂಜಯ ಸ್ವಾಮಿಗಳು ಹೇಳಿದರು. ವೀರ ಮಹಿಳೆ ಕಿತ್ತೂರ ರಾಣಿ ಚನ್ನಮ್ಮನವರ 195 ನೇ ಪುಣ್ಯಸ್ಮರಣೋತ್ಸವದ ನಿಮಿತ್ತ ರಾಣಿ ಚನ್ನಮ್ಮನವರ ತವರು ಮನೆ ಕಾಕತಿಯಿಂದ ಆಗಮಿಸಿದ ಲಿಂಗೈಕ್ಯ ಜ್ಯೋತಿಯನ್ನು …
Read More »
Laxmi News 24×7