ಹಾವೇರಿ ತಾಲೂಕು ಪಂಚಾಯತಿ ಆವರಣ ಗಬ್ಬು ನಾರುತ್ತಿದೆ. ಇಲ್ಲಿಗೆ ಬರುವ ನೂರಾರು ಜನರಿಗೆ ಮೂಲಭೂತ ಸೌಕರ್ಯ ಇಲ್ಲವಾಗಿದೆ. ಸರ್ಕಾರ ಇನ್ನಾದರೂ ಎಚ್ಚೆತ್ತುಕೊಳ್ಳಬೇಕಿದೆ.ಅದು ಏಲಕ್ಕಿ ಕಂಪಿನ ನಗರದ ಹೃದಯ ಭಾಗ. ನಿತ್ಯ ನೂರಾರು ಜನ ಬಂದು ಹೋಗುವ ಸ್ಥಳ. ಆದರೆ ಆ ಸ್ಥಳ ಇತ್ತೀಚೆಗೆ ಕುಡುಕರಅಡ್ಡೆಯಾಗಿದೆ. ಜೊತೆಗೆ ಪುಂಡಪೋಕರಿಗಳಿಗೆ ಅನೈತಿಕ ಚಟುವಟಿಕೆ (anti social elements) ತಾಣವಾಗಿ ಮಾರ್ಪಟಿದೆ. ಇದನ್ನು ಕಣ್ಣಾರೆ ಕಂಡ ಅಧಿಕಾರಿಗಳು ಕಣ್ಣಿದ್ದು ಕುರುಡರಾಗಿ, ಕಿವಿಯಿದ್ದು ಕಿವುಡರಾಗಿ, ಬಾಯಿ ಇದ್ದು …
Read More »ಅಂಜನಾದ್ರಿಗೆ ಆಗಮಿಸಿದ್ದ ಯುಪಿ ಭಕ್ತರು ಮತ್ತು ಸ್ಥಳೀಯರ ನಡುವೆ ಗಲಾಟೆ,
ಕೊಪ್ಪಳ, ಜ.2: ಆಂಜನೇಯ ದರ್ಶನಕ್ಕಾಗಿ ಅಂಜನಾದ್ರಿಗೆ ಬಂದು ವಾಪಸ್ ಆಗುತ್ತಿದ್ದ ಉತ್ತರ ಪ್ರದೇಶದ ಭಕ್ತರು ಹಾಗೂ ಸ್ಥಳೀಯರ ನಡುವೆ ಗಲಾಟೆ ನಡೆದ ಘಟನೆಕೊಪ್ಪಳ (Koppal)ಜಿಲ್ಲೆಯ ಗಂಗಾವತಿ ತಾಲೂಕಿನ ಕೊರಮ್ಮನ ಕ್ಯಾಂಪ್ ಬಳಿ ನಡೆದಿದೆ. ಗಲಾಟೆ ವೇಳೆ ಬಸ್ಗಳಿಗೆ ಕಲ್ಲು ತೂರಲಾಗಿದ್ದು, ಇಬ್ಬರು ಭಕ್ತರಿಗೆ ಗಾಯಗಳಾಗಿವೆ. ಉತ್ತರ ಪ್ರದೇಶದದಿಂದ ನಾಲ್ಕು ಬಸ್ಗಳಲ್ಲಿ ಹನುಮಂತನ ಭಕ್ತರು ಅಂಜನಾದ್ರಿಗೆ ಆಗಮಿಸಿದ್ದರು. ವಾಪಸ್ ಆಗುತ್ತಿದ್ದಾಗ ಬಸ್ಗಳನ್ನು ತಡೆದ ಸ್ಥಳೀಯರು ಜಗಳ ಎತ್ತಿದ್ದಾರೆ. ವಿದ್ಯುತ್ ವೈಯರ್ ತುಂಡಾಗುವಂತೆ ಬಸ್ …
Read More »5,8,9ನೇ ತರಗತಿಗಳಿಗೆ ಮೌಲ್ಯಾಂಕನ ಪರೀಕ್ಷೆ: ಶಿಕ್ಷಣ ಇಲಾಖೆ ನಡೆಗೆ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟ ವಿರೋಧ
ಬೆಂಗಳೂರು, ಜ.03: ಕಳೆದೊಂದು ವರ್ಷದಿಂದ ಶಿಕ್ಷಣ ಇಲಾಖೆ (Karnataka Education Department) ಮಕ್ಕಳ ಭವಿಷ್ಯಕ್ಕಾಗಿ ಕಲಿಕಾ ಸಾಮರ್ಥ್ಯ ಹೆಚ್ಚಿಸಲು ಐದು ಎಂಟು ಹಾಗು 9ನೇ ತರಗತಿಗೆ ಪಬ್ಲಿಕ್ ಮಾದರಿಯಮೌಲ್ಯಾಂಕನ ಎಕ್ಸಾಂನಡೆಸಲು ಮುಂದಾಗಿದೆ. ಆದರೆ ಈ ಪರೀಕ್ಷೆ ಈಗ ಪ್ರತಿಷ್ಠೆಯ ಕಣವಾಗಿದ್ದು ಶಿಕ್ಷಣ ಇಲಾಖೆ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳು ಹಠಕ್ಕೆ ವಿದ್ಯಾರ್ಥಿಗಳು ಹಾಗೂ ಪೋಷಕರು ಪರದಾಡುವ ಸ್ಥಿತಿ ಎದುರಾಗಿದೆ. ಇನ್ನೂ ಶಿಕ್ಷಣ ಇಲಾಖೆಯ ಮೌಲ್ಯಾಂಕನ ಪರೀಕ್ಷೆಗಳ ಹಠದಲ್ಲಿ ಖಾಸಗಿ ಶಾಲೆಗಳು ಹೊಸ …
Read More »10 ವರ್ಷಗಳಲ್ಲೇ 2023ರಲ್ಲಿ ಅತಿಹೆಚ್ಚು ಮಾರಣಾಂತಿಕ ಅಪಘಾತ
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ (Bengaluru) ಕಳೆದ ವರ್ಷ ಅಂದರೆ 2023ರಲ್ಲಿ 870 ಮಾರಣಾಂತಿಕಅಪಘಾತಗಳು (Accident) ಸಂಭವಿಸಿವೆ. ಇದು ಕಳೆದ 10 ವರ್ಷಗಳಲ್ಲಿ ಸಂಭವಿಸಿದ ಗರಿಷ್ಠ ಅಪಘಾತಗಳ ಸಂಖ್ಯೆಗಿಂತ ಹೆಚ್ಚಾಗಿದೆ ಎಂದು ಸಂಚಾರ ಪೊಲೀಸ್ ಇಲಾಖೆ ಮಂಗಳವಾರ ಹಂಚಿಕೊಂಡ ಅಂಕಿಅಂಶ ತಿಳಿಸಿದೆ. 2013 ರಲ್ಲಿ 733 ಅಪಘಾತಗಳು ಸಂಭವಿಸಿದ್ದವು. 2023ರಲ್ಲಿ 4,959 ಅಪಘಾತಗಳು ಸಂಭವಿಸಿದ್ದು, 899 ಜನರು ಮೃತಪಟ್ಟಿದ್ದಾರೆ. 4,959 ಅಪಘಾತಗಳಲ್ಲಿ, 4,089 ಮಾರಣಾಂತಿಕವಲ್ಲದ ಅಪಘಾತಗಳು ಸಂಭವಿಸಿದ್ದು, ಇದರಲ್ಲಿ 4,176 ಜನರು …
Read More »ಬೆಳಗಾವಿ ಗೂಂಡಾಗಳ ಗುಂಪಿನ ಅಟ್ಟಹಾಸ: ನಾವಗೆ ಗ್ರಾಮ ಸದ್ಯಕ್ಕೆ ಶಾಂತ
ಬೆಳಗಾವಿ: ಕಳೆದ ರಾತ್ರಿ ಶಸ್ತ್ರಧಾರಿ ಗೂಂಡಾಗಳ (armed goondas) ಗುಂಪೊಂದು ಬೆಳಗಾವಿ ತಾಲ್ಲೂಕಿನನಾವಗೆ ಗ್ರಾಮಕ್ಕೆ(Navage village) ನುಗ್ಗಿ ನಾಲ್ಕೈದು ಮನೆಗಳ ಮೇಲೆ ಕಲ್ಲು ತೂರಾಟ ನಡೆಸಿ ಮನೆಗಳ ಮುಂದಿದ್ದ ವಾಹನಗಳನ್ನು ಜಖಂಗೊಳಿರುವ ಘಟನೆ ಗ್ರಾಮಸ್ಥರನ್ನು (residents) ಹೆದರಿಕೆ ಮತ್ತು ಆತಂಕದಿಂದ ತಲ್ಲಣಿಸುವಂತೆ ಮಾಡಿದೆ. ಗ್ರಾಮದ ಈ ಮಹಿಳೆ ಹೇಳುವ ಹಾಗೆ ಸುಮಾರ 25-30 ಸದಸ್ಯರಿದ್ದ ಮುಸಕುಧಾರಿ ಪುಂಡರ ಗುಂಪು ಕೈಗಳಲ್ಲಿ ತಲ್ವಾರ್, ರಾಡ್ ಮತ್ತು ಪಿಸ್ತೂಲುಗಳನ್ನು ಹಿಡಿದು ಪಂಚಾಯಿತಿ ಸದಸ್ಯರು ಮತ್ತು …
Read More »ಬೆಳಗಾವಿಯಲ್ಲಿ ಕಾರು-ಸ್ಕೂಟರ್ ನಡುವೆ ಭೀಕರ ಅಪಘಾತ
ಬೆಳಗಾವಿ, ಜ.02: ಬೆಳಗಾವಿಯ ಮಜಗಾವಿ ಬಳಿ ವೇಗವಾಗಿ ಬಂದ ಕಾರೊಂದು ಹಿಂಬದಿಯಿಂದ ಸ್ಕೂಟಿಗೆ ಡಿಕ್ಕಿ ಹೊಡೆದ ಘಟನೆ ನಡೆದಿದೆ. ಕಾರು ಡಿಕ್ಕಿಯ(Accident) ರಭಸಕ್ಕೆ ಯುವತಿ ಬರೊಬ್ಬರಿಐವತ್ತು ಮೀಟರ್ಹಾರಿ ಬಿದ್ದಿದ್ದಾರೆ. ಬ್ರಹ್ಮನಗರದ ನಿವಾಸಿ ದಿವ್ಯಾ ಪಾಟೀಲ್ ಎಂಬುವವರಿಗೆ ಗಂಭೀರ ಗಾಯವಾಗಿದ್ದು, ಕೂಡಲೇ ಸಾರ್ವಜನಿಕರು ಸ್ಥಳೀಯ ಆಸ್ಪತ್ರೆಗೆ ರವಾನಿಸಿದ್ದಾರೆ. ಅಷ್ಟೆ ಅಲ್ಲ, ಸ್ಕೂಟಿಗೆ ಗುದ್ದಿದ ಬಳಿಕ ಎದರಿದ್ದ ಕಾರಿಗೂ ಡಿಕ್ಕಿ ಹೊಡೆದಿದೆ. ಈ ಘಟನೆ ಬೆಳಗಾವಿ ದಕ್ಷಿಣ ಸಂಚಾರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
Read More »ಕಾಶಿಯಲ್ಲೂ ಮಸೀದಿ ಒಡೆದು ಹಾಕಿ ಮಂದಿರ ಕಟ್ಟುತ್ತೇವೆ: ಕೆ.ಎಸ್.ಈಶ್ವರಪ್ಪ
ಶಿವಮೊಗ್ಗ: ಅಯೋಧ್ಯೆಯಲ್ಲಿ ರಾಮ ಮಂದಿರ ಆಗಬೇಕೆಂಬ ತೀರ್ಮಾನವಾಗುತ್ತಿದ್ದಂತೆ ಕಾಶಿ ಮಥುರಾದಲ್ಲಿ ಸರ್ವೇಗೆ ಆದೇಶವಾಗಿದೆ. ನಮ್ಮ ಪರವಾಗಿ ತೀರ್ಪು ಬರುತ್ತದೆ. ಕಾಶಿಯಲ್ಲೂ ಮಸೀದಿ ಒಡೆದು ಹಾಕಿ ಕಾಶಿ ಮಂದಿರ ಕಟ್ಟುತ್ತೇವೆ. ಮಥುರಾದಲ್ಲು ಶ್ರೀ ಕೃಷ್ಣನ ದೇವಸ್ಥಾನ ಕಟ್ಟಿಯೇ ಕಟ್ಟುತ್ತೇವೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹೇಳಿದರು. ಶಿವಮೊಗ್ಗದಲ್ಲಿ ಮಾತನಾಡಿದ ಅವರು, 496 ವರ್ಷದ ಕೆಳಗೆ ಅಯೋಧ್ಯೆಯಲ್ಲಿ ರಾಮ ಮಂದಿರ ಧ್ವಂಸ ಮಾಡಿದ್ದರು. ಮಸೀದಿ ಕಟ್ಟಿ ಬಾಬರ್ ಮಸೀದಿ ಕಟ್ಟಿದ್ದರು. ಗುಲಾಮಗಿರಿ …
Read More »Ram Mandir ಲೋಕಾರ್ಪಣೆಗೆ ನನಗೂ ಆಹ್ವಾನವಿಲ್ಲ: ಕೇಂದ್ರ ಸಚಿವ ಪ್ರಹ್ಲಾದ ಜೋಶಿ
ವಿಜಯಪುರ: ಅಯೋಧ್ಯಾ ರಾಮ ಮಂದಿರ ಲೋಕಾರ್ಪಣೆಗೆ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತ್ರವಲ್ಲ ದೇಶದಲ್ಲಿ ಬಿಜೆಪಿ ಆಡಳಿತ ಇರುವ ಮುಖ್ಯಮಂತ್ರಿಗಳಿಗೂ ಆಹ್ವಾನ ನೀಡಿಲ್ಲ. ಭಾರತ ಸರ್ಕಾರದ ಸಚಿವನಾಗಿರುವ ನನಗೂ ಆಹ್ವಾನವಿಲ್ಲ. ನನ್ನನ್ನು ಕರೆಯುವ ಮಾತಿರಲಿ, ಬರಬೇಡವೆಂದೂ ಹೇಳಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಪ್ರತಿಕ್ರಿಯಿಸಿದ್ದಾರೆ. ಬುಧವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ರಾಮ ಮಂದಿರ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಯಾರನ್ನು ಆಹ್ವಾನಿಸಬೇಕು ಎಂಬುದನ್ನು ರಾಮ ಮಂದಿರ ಸಮಿತಿ ನಿರ್ಧರಿಸುತ್ತದೆ. ಈ …
Read More »ನೀನು ಕುಟುಂಬದಿಂದ ದೂರನೇ ಇರಬೇಕು.. Bigg Boss ಮನೆಯಲ್ಲಿ ಪ್ರತಾಪ್ ಭವಿಷ್ಯ ನುಡಿದ ಗುರೂಜಿ
ಬೆಂಗಳೂರು: ಬಿಗ್ ಬಾಸ್ ಸೀಸನ್ -10 ಶುರುವಾಗಿ 80 ದಿನ ಮೇಲಾಗಿದೆ. ಫಿನಾಲೆ ವಾರದತ್ತ ಮನೆಯ ಆಟ ಸಾಗುತ್ತಿದ್ದಂತೆ ಸ್ಪರ್ಧಿಗಳ ಆಟವೂ ಕಾವು ಪಡೆದುಕೊಳ್ಳುತ್ತಿದೆ. ಈ ವಾರ ಪ್ರತಾಪ್, ಮೈಕಲ್, ಕಾರ್ತಿಕ್ , ತುಕಾಲಿ ಸಂತೋಷ್, ವರ್ತೂರು ಸಂತೋಷ್ ನಾಮಿನೇಟ್ ಆಗಿದ್ದಾರೆ. ಇವರಲ್ಲಿ ಒಬ್ಬರು ಮನೆ ಬಿಟ್ಟು ಹೋಗುತ್ತಾರೋ ಅಥವಾ ಎಲಿನೇಷನ್ ನಲ್ಲಿ ಏನಾದರೂ ಟ್ವಿಸ್ಟ್ & ಟರ್ನ್ ಇರಲಿದೆಯೋ ಎನ್ನುವುದನ್ನು ಕಾದುನೋಡಬೇಕಿದೆ. ಇನ್ನೊಂದೆಡೆ ಬಿಗ್ ಬಾಸ್ ಮನೆಗೆ ಶ್ರೀವಿದ್ಯಾಶಂಕರಾನಂದ ಸರಸ್ವತಿ …
Read More »806 ಕೋಟಿ ರೂಪಾಯಿ ಬಾಕಿ ಪಾವತಿಸಿ: ಮಹಾರಾಷ್ಟ್ರ ಎಲ್ ಐಸಿಗೆ ಜಿಎಸ್ ಟಿ ನೋಟಿಸ್
ಮುಂಬೈ: ಸಾರ್ವಜನಿಕ ವಲಯದ ಪ್ರಮುಖ ಇನ್ಸೂರೆನ್ಸ್ (ಎಲ್ ಐಸಿ) ಕಂಪನಿಗೆ ಸರಕು ಮತ್ತು ಸೇವಾ ತೆರಿಗೆ (GST) ಅಧಿಕಾರಿಗಳು 806 ಕೋಟಿ ರೂಪಾಯಿ ತೆರಿಗೆ ಪಾವತಿಸುವಂತೆ ನೋಟಿಸ್ ಜಾರಿಗೊಳಿಸಿರುವುದಾಗಿ ವರದಿ ತಿಳಿಸಿದೆ. ಮಹಾರಾಷ್ಟ್ರದ ಜಿಎಸ್ ಟಿ ಅಧಿಕಾರಿಗಳು ಈ ನೋಟಿಸ್ ಜಾರಿಗೊಳಿಸಿದ್ದಾರೆ. 2017-18ನೇ ಸಾಲಿನ ಜಿಎಸ್ ಟಿ ಪಾವತಿಯಲ್ಲಿನ ತೆರಿಗೆ ಪಾವತಿಗೆ ಸಂಬಂಧಿಸಿದ ನೋಟಿಸ್ ಅನ್ನು 2024ರ ಜನವರಿ 1ರಂದು ಜಾರಿಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 2017-18ನೇ ಸಾಲಿನ ಬಾಕಿ …
Read More »