ಬೆಳಗಾವಿ: ತಾಲ್ಲೂಕಿನ ಕೊಂಡಸಕೊಪ್ಪ ಗ್ರಾಮದಲ್ಲಿ ಗುರುವಾರ ನಿವೇಶನ ವಿಚಾರಕ್ಕೆ ನಡೆದ ಜಗಳದಲ್ಲಿ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸೇರಿ ನಾಲ್ವರ ಮೇಲೆ ಹಲ್ಲೆ ಮಾಡಲಾಗಿದೆ. ಬಸ್ತವಾಡ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ವಿಠ್ಠಲ ಸಾಂಬ್ರೇಕರ್ ಅವರ ತಲೆಗೆ ತೀವ್ರ ಗಾಯವಾಗಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಇವರ ಮೂವರು ಸ್ನೇಹಿತರು ಚಿಕಿತ್ಸೆ ಪಡೆದು ಮರಳಿದ್ದಾರೆ. ಕೊಂಡಸಕೊಪ್ಪದವರಾದ ಪುಂಡಲೀಕ ಕುಡಚೇಕರ, ಭೀಮಾ ದೇಮನ್ನವರ, ನಾಗಪ್ಪ ವಾಳಕೆ, ಗಜು ಡೋಂಗ್ರೆ, ಮೋನಪ್ಪ ಗುಜರಾನಟ್ಟಿ, ಶಂಕರ ಪಾಟೀಲ ಆರೋಪಿಗಳು. ಈಗಾಗಲೇ …
Read More »ಸತ್ತವರ ಹೆಸರಿನಲ್ಲಿನ ನೂರು ಕೋಟಿ ಆಸ್ತಿಯನ್ನು BSY ಕೈಯಲ್ಲಿ HDK ಡಿನೋಟಿಫೈ: ಕೃಷ್ಣ ಭೈರೇಗೌಡ ಗಂಭೀರ ಆರೋಪ
ಬೆಂಗಳೂರು: ಸತ್ತವರ ಹೆಸರಿನಲ್ಲಿ ನೂರು ಕೋಟಿ ಬೆಳೆಬಾಳುವ ಆಸ್ತಿಯನ್ನು ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪನವರ ಕೈಯಲ್ಲಿ ಡಿ ನೋಟಿಫೈ ಮಾಡಿಸಿದ ಹೆಚ್ ಡಿ ಕುಮಾರಸ್ವಾಮಿ ಎಂಬುದಾಗಿ ಸಚಿವ ಕೃಷ್ಣಭೈರೇಗೌಡ ಗಂಭೀರ ಆರೋಪ ಮಾಡಿದ್ದಾರೆ. ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಅವರು, ಅಕ್ರಮದಲ್ಲಿ ಕುಮಾರಸ್ವಾಮಿ-ಯಡಿಯೂರಪ್ಪ ಜಂಟಿಯಾಗಿ ಬಾಗಿಯಾಗಿದ್ದಾರೆ. ಕುಮಾರಸ್ವಾಮಿ ಆದೇಶ ಯಡಿಯೂರಪ್ಪ ಅವಧಿಯಲ್ಲಿ ಡಿನೋಟಿಫೈ ಮಾಡಲಾಗಿದೆ. ಈ ಮೂಲಕ ನೂರಾರು ಕೋಟಿ ಆಸ್ತಿ ಕುಮಾರಸ್ವಾಮಿ ಬಾಮೈದನ ಪಾಲಾಗಿದೆ ಎಂಬುದಾಗಿ ಆರೋಪಿಸಿದರು. ಬಡವರ ನಿವೇಶನಗಳಿಗೆ ಹಂಚಿಕೆಯಾಗಿದ್ದ …
Read More »ಶಾಸಕ ಮುನಿರತ್ನ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಕಾಂಗ್ರೆಸ್ ಆಗ್ರಹ
ಬೆಂಗಳೂರು,ಸೆ.19- ಬಿಜೆಪಿ ಶಾಸಕ ಮುನಿರತ್ನ ಅವರನ್ನು ಅಮಾನತುಗೊಳಿಸಬೇಕು ಹಾಗೂ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರು ಕೆಪಿಸಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಚಂದ್ರಶೇಖರ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಮುನಿರತ್ನ ವಿರುದ್ಧ ಘೋಷಣೆಗಳನ್ನು ಕೂಗಲಾಯಿತು. ಮುನಿರತ್ನ ಕಾಮುಕನಾಗಿದ್ದು, ಅತ್ಯಾಚಾರಿ, ಹನಿಟ್ರ್ಯಾಪ್‌ನ ರೂವಾರಿಯಾಗಿದ್ದಾನೆ. ಗುತ್ತಿಗೆದಾರರನ್ನು ಶೋಷಣೆ ಮಾಡಿದ್ದು, ಹಣ ವಸೂಲಿ ಮಾಡಿದ್ದಾನೆ. ಗುತ್ತಿಗೆದಾರರ ಜೊತೆ ಸಂಭಾಷಣೆಯಲ್ಲಿ ಹೆಣ್ಣುಮಕ್ಕಳ ವಿಷಯವಾಗಿ, ಪರಿಶಿಷ್ಟರ ಬಗ್ಗೆ ಅಸಭ್ಯವಾಗಿ …
Read More »ಶಾಸಕ ಮುನಿರತ್ನ ವಿರುದ್ಧ ‘ಹನಿ ಟ್ರಾಪ್’ ಆರೋಪ, FIRನಲ್ಲಿವೆ ಶಾಕಿಂಗ್ ಸಂಗತಿಗಳು..!
ಬೆಂಗಳೂರು,ಸೆ.19- ಶಾಸಕ ಮುನಿರತ್ನ ವಿರುದ್ಧ ಮತ್ತಷ್ಟು ಗಂಭೀರ ಆರೋಪಗಳು ಕೇಳಿಬಂದಿದ್ದು, ಮಹಿಳೆಯೊಬ್ಬರು ತಮನ್ನು ಹೆದರಿಸಿ, ಬೆದರಿಸಿ ಅತ್ಯಾಚಾರ ಮಾಡಿರುವುದಾಗಿ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ. ಜೊತೆಗೆ ಎಚ್‌ಐವಿ ಪೀಡಿತ ಮಹಿಳೆಯೊಬ್ಬರನ್ನು ಬಳಸಿ ರಾಜಕೀಯ ಪ್ರತಿಸ್ಪರ್ಧಿಗೆ ಹನಿಟ್ರ್ಯಾಪ್ ಮಾಡಿರುವ ಗಂಭೀರ ಮಾಹಿತಿಯನ್ನು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಯಶವಂತಪುರದ ಸಮಾಜಸೇವಕಿ ಸುಮಾರು 40 ವರ್ಷದ ಮಹಿಳೆ ಯೊಬ್ಬರು ನೀಡಿರುವ ದೂರಿನ ಆಧಾರದ ಮೇರೆಗೆ ರಾಮನಗರ ಜಿಲ್ಲೆಯ ಕಗ್ಗಲೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಐಪಿಸಿ ಸೆಕ್ಷನ್ …
Read More »ಬುರ್ಖಾಧಾರಿ ಮಹಿಳೆಯಿಂದ ಸಲ್ಮಾನ್ ತಂದೆಗೆ ಬೆದರಿಕೆ
ಮುಂಬಯಿ: ಬಾಲಿವುಡ್ ನಟ ಸಲ್ಮಾನ್ ಖಾನ್ (Salman Khan) ಅವರ ತಂದೆ ಸಲೀಂ ಖಾನ್ (Salim Khan) ಅವರಿಗೆ ಬುರ್ಖಾಧಾರಿ ಮಹಿಳೆ ಹಾಗೂ ವ್ಯಕ್ತಿಯೊಬ್ಬನಿಂದ ಜೀವ ಬೆದರಿಕೆ ಬಂದಿರುವ ಘಟನೆ ನಡೆದಿರುವುದು ವರದಿಯಾಗಿದೆ. ಇತ್ತೀಚೆಗಷ್ಟೇ ಸಲ್ಮಾನ್ ಖಾನ್ ಅವರ ನಿವಾಸದ ಮೇಲೆ ಕಿಡಿಗೇಡಿಗಳು ಗುಂಡಿನ ದಾಳಿ ನಡೆಸಿದ್ದರು. ಈ ಘಟನೆ ಕುಖ್ಯಾತ ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯ್‍ಗೆ (Lawrence Bishnoi) ಅವರ ಸೂಚನೆಯ ಮೇರೆಗೆ ನಡೆದಿತ್ತು. ಸಲ್ಮಾನ್ ಖಾನ್ ಅವರ ತಂದೆ …
Read More »ಧರ್ಮಸ್ಥಳ ಸಂಘದಿಂದ ಕಿರುಕುಳ ಆರೋಪ: ಸಾಲದ ಕಂತು ಕಟ್ಟಲಾಗದೇ ರೈತ ಮಹಿಳೆ ಸಾವು
ಮಂಡ್ಯ, ಸೆಪ್ಟೆಂಬರ್ 19: ಸಂಘದ ಸಾಲದ ಕಂತು ಕಟ್ಟಲಾಗದೇ ರೈತ ಮಹಿಳೆ ಸಾವಿಗೆ ಶರಣಾದ ಘಟನೆ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಮಲಿಯೂರು ಗ್ರಾಮದಲ್ಲಿ ನಡೆದಿದೆ. ಮಲಿಯೂರು ಗ್ರಾಮದ ಮಹಾಲಕ್ಷ್ಮೀ (38) ಮೃತ ಮಹಿಳೆ ಎಂದು ಗುರುತಿಸಲಾಗಿದೆ. ಈ ಘಟನೆಯಲ್ಲಿ ಧರ್ಮಸ್ಥಳ ಸಂಘದ ಸಾಲದ ಕಂತು ಕಟ್ಟಲಾಗದೇ ಕಿರುಕುಳ ತಾಳಲಾರದೇ ಮಹಿಳೆ ಸಾವಿಗೆ ಶರಣಾದ ಆರೋಪ ಕೇಳಿಬಂದಿದೆ. ಮಲಿಯೂರು ಗ್ರಾಮದ ಮಹಾಲಕ್ಷ್ಮೀ ಕೆಲವು ಸಮಯದ ಹಿಂದೆ ಧರ್ಮಸ್ಥಳ ಸಂಘದಲ್ಲಿ …
Read More »ಒಂದು ದೇಶ, ಒಂದು ಚುನಾವಣೆ’ ವ್ಯವಸ್ಥೆ ಪ್ರಜಾಪ್ರಭುತ್ವ ವಿರೋಧಿಯಾಗಿದೆ : ಸಿಎಂ
ಬೆಂಗಳೂರು : ಒಂದು ದೇಶ ಒಂದು ಚುನಾವಣೆಯ ವ್ಯವಸ್ಥೆ ಪ್ರಜಾಪ್ರಭುತ್ವ ವಿರೋಧಿಯಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಆಡಳಿತಾರೂಢ ಪಕ್ಷದ ಗುಪ್ತ ಅಜೆಂಡಾವನ್ನು ಒಳಗೊಂಡಿರುವ ‘ಒಂದು ದೇಶ ಒಂದು ಚುನಾವಣೆ’ ಪ್ರಸ್ತಾವವನ್ನು ಸಂಸತ್ ನ ಒಳಗೆ ಮತ್ತು ಹೊರಗೆ ನಮ್ಮ ಪಕ್ಷ ಎದುರಿಸಲಿದೆ. ದೇಶದ ಜನಾಭಿಪ್ರಾಯವೂ ”ಒಂದು ದೇಶ ಒಂದು ಚುನಾವಣೆ” ಯ ವ್ಯವಸ್ಥೆಗೆ ವಿರುದ್ಧವಾಗಿದೆ. ಒಂದು ದೇಶ ಒಂದು ಚುನಾವಣೆಯ ವ್ಯವಸ್ಥೆ ಸಂಪೂರ್ಣವಾಗಿ ಪ್ರಜಾಪ್ರಭುತ್ವ ವಿರೋಧಿಯಾಗಿದೆ. ಲೋಕಸಭೆ ಇಲ್ಲವೆ …
Read More »ನಾಡಹಬ್ಬದಲ್ಲಿ ಈ ಬಾರಿಯೂ ಅಧಿಕಾರಿಗಳದ್ದೇ ‘ದರ್ಬಾರ್’
ಮೈಸೂರು: ದಸರಾ ಮಹೋತ್ಸವದ ಕಾರ್ಯಕ್ರಮಗಳನ್ನು ರೂಪಿಸುವಲ್ಲಿ ಈ ಬಾರಿಯೂ ಅಧಿಕಾರಿಗಳದ್ದೇ ‘ದರ್ಬಾರ್’ ನಡೆಯುತ್ತಿದೆ. ಉಪ ಸಮಿತಿಗಳಿಗೆ ಅಧಿಕಾರೇತರರ ನೇಮಕ, ಭಾಗಿದಾರರು ಅಥವಾ ಸಾರ್ವಜನಿಕರ ಸಲಹೆಗಳನ್ನು ಆಲಿಸಿ ಸಹಭಾಗಿತ್ವ ಪಡೆದುಕೊಳ್ಳುವ ಕಾರ್ಯ ಈವರೆಗೂ ನಡೆದಿಲ್ಲ. ಮಹೋತ್ಸವಕ್ಕೆ ಅ.3ರಂದು ಚಾಲನೆ ದೊರೆಯಲಿದ್ದು, ಬಹಳ ದಿನಗಳೇನೂ ಉಳಿದಿಲ್ಲ. ಅದಕ್ಕೆ ಪೂರ್ವಭಾವಿಯಾಗಿ ಎಲ್ಲ ಕಾರ್ಯಕ್ರಮಗಳ ರೂಪರೇಷೆಯ ಸ್ಪಷ್ಟ ಚಿತ್ರಣ ದೊರೆಯಬೇಕು. ಹೊರ ಜಿಲ್ಲೆ, ಹೊರ ರಾಜ್ಯ ಮತ್ತು ವಿದೇಶಗಳ ಪ್ರವಾಸಿಗರನ್ನು ಸೆಳೆಯುವ ನಿಟ್ಟಿನಲ್ಲಿ ನಡೆಯುವ ಉತ್ಸವವನ್ನು ರೂಪಿಸುವಲ್ಲಿ …
Read More »ಗರ್ಭಿಣಿ ಪತ್ನಿಯನ್ನು ಕೊಂದು ಬಾವಿಗೆ ಎಸೆದ ಪಾಪಿ ಪತಿ.!
ಕೊಪ್ಪಳ : ಪಾಪಿ ಪತಿಯೋರ್ವ ಗರ್ಭಿಣಿ ಪತ್ನಿಯನ್ನು ಕೊಂದು ಬಾವಿಗೆ ಎಸೆದ ಘಟನೆ ಕೊಪ್ಪಳದ ತಾಳಕನಪೂರದಲ್ಲಿ ನಡೆದಿದೆ. ಸಂಗೀತಾ ಎಂಬ ಮಹಿಳೆ ಕೊಲೆಯಾಗಿದ್ದು, ಪತಿ ಬಾಬು ಎಂಬಾತ ಈ ಕೃತ್ಯ ಎಸಗಿದ್ದಾನೆ. 4 ತಿಂಗಳ ಗರ್ಭಿಣಿಯಾಗಿದ್ದ ಪತ್ನಿ ಸಂಗೀತಾಳನ್ನು ಬಾಬು ಜಮೀನಿಗೆ ಕರೆದೊಯ್ದು ಕೊಲೆ ಮಾಡಿ ನಂತರ ಬಾವಿಗೆ ಎಸೆದಿದ್ದಾನೆ. ಕೊಳೆದ ಸ್ಥಿತಿಯಲ್ಲಿ ಸಂಗೀತಾಳ ಮೃತದೇಹ ಪತ್ತೆಯಾಗಿದೆ. ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದ್ದಾರೆ.
Read More »ಕೊಳ್ಳೇಗಾಲ: ನಕ್ಷತ್ರ ಆಮೆ ಸಾಗಾಟ ಮಾಡುತ್ತಿದ್ದ ಮೂವರ ಬಂಧನ
ಚಾಮರಾಜನಗರ, ಸೆಪ್ಟೆಂಬರ್, 19: ಇತ್ತೀಚೆಗಷ್ಟೇ ಅಳಿವಿನಂಚಿನಲ್ಲಿರುವ ನಕ್ಷತ್ರ ಆಮೆಗಳನ್ನು ಅಕ್ರಮವಾಗಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಮೂವರು ಆರೋಪಿಗಳನ್ನು ಕೊಳ್ಳೇಗಾಲ ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳ ಬಂಧಿಸಿತ್ತು. ಇದೀಗ ಮತ್ತೆ ಮುಡಿಗುಂಡದ ರಾಷ್ಟ್ರೀಯ ಹೆದ್ದಾರಿ ಬಳಿ ಅಕ್ರಮವಾಗಿ ಜೀವಂತ ನಕ್ಷತ್ರ ಆಮೆಗಳನ್ನು ಸಾಗಣೆ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಕೊಳ್ಳೇಗಾಲ ಅರಣ್ಯ ಸಂಚಾರಿ ದಳದ ಪೊಲೀಸರು ಬಂಧಿಸಿದ್ದಾರೆ. ಚಾಮರಾಜನಗರ ತಾಲ್ಲೂಕು ಕುಳ್ಳೂರು ಗ್ರಾಮದ ಮಾದೇಶ್, ತಮಿಳುನಾಡಿನ ಸತ್ತಿ ತಾಲ್ಲೂಕಿನ ಕಾನಗೆರೆ …
Read More »