ಹಾಸನ: ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ನಗರ ಠಾಣೆಯ ಸಬ್ ಇನ್ಸ್ ಪೆಕ್ಟರ್ -ಪಿಎಸ್ ಐ ಕಿರಣ್ ಕುಮಾರ್ ಅವರು ಇಂದು ಬೆಳಗ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೊಲೆ ಪ್ರಕರಣವೊಂದನ್ನು ನಿನ್ನೆ ಮಧ್ಯ ರಾತ್ರಿಯಷ್ಟೇ ಭೇದಿಸಿದ್ದ ಅವರು, ಆರೋಪಿ ಬಂಧನ ಸಂಬಂಧ ಕಾರ್ಯಪ್ರವೃತ್ತರಾಗಿದ್ದರು. ಕೊಲೆ ಸಂಬಂಧ ಕಾನೂನು ಪ್ರಕ್ರಿಯೆಯನ್ನು ಮುಗಿಸಿ ಬೆಳಿಗ್ಗೆ 9 ಗಂಟೆ ಸುಮಾರಿಗೆ ಮನೆಗೆ ಬಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕಿರಣ್ ಕುಮಾರ್ ಅರಸಿಕೆರೆ ತಾಲ್ಲೂಕಿನ ಗಂಡಸಿ ಹೋಬಳಿಯ …
Read More »ಬಸ್‌ನಲ್ಲಿ ಕಲ್ಲು ತುಂಬಿ ಸಾಗಿಸಿದರು!
ಹುಬ್ಬಳ್ಳಿ: ಕುಂದಗೋಳ-ಹುಬ್ಬಳ್ಳಿ ನಡುವೆ ಸಂಚರಿಸುವ ವಾಯವ್ಯ ಸಾರಿಗೆ ಸಂಸ್ಥೆಯ ಬಸ್‌ನಲ್ಲಿ, ಸಿಬ್ಬಂದಿ ಗುರುವಾರ ಕಲ್ಲು ಸಾಗಿಸಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಹೊಸೂರು ರಸ್ತೆ ಬಳಿ ರಸ್ತೆ ವಿಭಜಕ ಕಾಮಗಾರಿ ನಡೆಯುತ್ತಿದ್ದು, ಮೊದಲು ರಸ್ತೆಗೆ ಹಾಕಲಾಗಿದ್ದ ಕಲ್ಲುಗಳನ್ನು ತೆಗೆಯಲಾಗಿದೆ. ಗೋಕುಲ ರಸ್ತೆಯ ಬಸ್ ಡಿಪೊದಲ್ಲಿ ಉದ್ಯಾನ ಕಾಮಗಾರಿ ನಡೆಯುತ್ತಿರುವುದರಿಂದ, ಅಲ್ಲಿಗೆ ಈ ಕಲ್ಲುಗಳನ್ನು ಸಾಗಿಸಲು ಸಿಬ್ಬಂದಿ ಬಸ್ ಬಳಕೆ ಮಾಡಿಕೊಂಡಿದ್ದಾರೆ. ರಸ್ತೆ ಮೇಲಿದ್ದ ಕಲ್ಲುಗಳನ್ನು ಐದಾರು ಸಿಬ್ಬಂದಿ ಸೇರಿ ಬಸ್‌ಗೆ ತುಂಬಿದ್ದಾರೆ. 50ಕ್ಕಿಂತಲೂ …
Read More »ಸಿಇಟಿ: 1,998 ವಿದ್ಯಾರ್ಥಿಗಳು ಗೈರು
ಬೆಳಗಾವಿ: ಜಿಲ್ಲೆಯ ವಿವಿಧ 29 ಕೇಂದ್ರಗಳಲ್ಲಿ ಶುಕ್ರವಾರ ನಡೆದ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಗೆ 1,998 ವಿದ್ಯಾರ್ಥಿಗಳು ಗೈರು ಹಾಜರಾದರು. ಬೆಳಗಾವಿ ಶೈಕ್ಷಣಿಕ ಜಿಲ್ಲೆ ವ್ಯಾಪ್ತಿಗೆ ಒಳಪಡುವ ನಗರದ 11, ರಾಮದುರ್ಗದ ಸ್ಟೇಟ್ ಪಿಯು ಕಾಲೇಜು, ಸವದತ್ತಿಯ ಎಸ್.ಕೆ. ಪಿಯು ಕಾಲೇಜು ಹಾಗೂ ಬೈಲಹೊಂಗಲದ ಜಿಜಿಡಿ ಪಿಯು ಕಾಲೇಜಿನ ಕೇಂದ್ರಗಳಲ್ಲಿ ಬೆಳಿಗ್ಗೆ ಭೌತವಿಜ್ಞಾನ ಮತ್ತು ಮಧ್ಯಾಹ್ನ ರಸಾಯನವಿಜ್ಞಾನ ವಿಷಯದ ಪರೀಕ್ಷೆಗಳು ನಡೆದವು. ಭೌತವಿಜ್ಞಾನಕ್ಕೆ 5,316 ವಿದ್ಯಾರ್ಥಿಗಳು ನೋಂದಾಯಿಸಿದ್ದರು. ಈ ಪೈಕಿ …
Read More »ಕೋವಿಡ್ ನಿಯಂತ್ರಣಕ್ಕೆ ಬಿಡುಗಡೆಯಾಗಿದ್ದು ಕೇವಲ ₹ 230 ಕೋಟಿ!
ಬೆಳಗಾವಿ: ಕೋವಿಡ್ ರೋಗವನ್ನು ನಿಯಂತ್ರಿಸಲು ರಾಜ್ಯದ ಎಲ್ಲ ಜಿಲ್ಲೆಗಳಿಗೆ ಸರ್ಕಾರ ಇದುವರೆಗೆ ಒಟ್ಟು ₹ 230.73 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಇದರಲ್ಲಿ ಬೆಳಗಾವಿ ಜಿಲ್ಲೆಗೆ ₹ 13.97 ಕೋಟಿ ದೊರೆತಿದೆ. ಮಾಹಿತಿ ಹಕ್ಕು ಕಾರ್ಯಕರ್ತ (ಆರ್‌ಟಿಐ) ಸುರೇಂದ್ರ ಉಗಾರೆ ಅವರು ಮಾಹಿತಿ ಹಕ್ಕಿನಡಿ ಪಡೆದುಕೊಂಡ ಮಾಹಿತಿಯಿಂದ ಇದು ಬೆಳಕಿಗೆ ಬಂದಿದೆ. ‘ರಾಜ್ಯ ಸರ್ಕಾರ ಹೇಳುವಂತೆ ₹ 2,000 ಕೋಟಿ ಬಿಡುಗಡೆಯಾಗಿಲ್ಲ. ಇದಲ್ಲದೇ, ವಿರೋಧ ಪಕ್ಷದವರು ಹೇಳುವಂತೆ ಸಾವಿರಾರು ಕೋಟಿ ರೂಪಾಯಿಯ …
Read More »ಸತ್ಯಂಪೇಟ ಮೇಲಿನ ಪ್ರಕರಣ ರದ್ದುಪಡಿಸಲು ಆಗ್ರಹ
ಬೆಳಗಾವಿ: ‘ಕಲಬುರ್ಗಿ ಜಿಲ್ಲೆಯ ಶಹಾಪುರದ ಶರಣ ಸಾಹಿತಿ ವಿಶ್ವರಾಧ್ಯ ಸತ್ಯಂಪೇಟ ಅವರ ಮೇಲೆ ದಾಖಲಿಸಲಾದ ಪ್ರಕರಣವನ್ನು ತಕ್ಷಣ ರದ್ದುಪಡಿಸಬೇಕು’ ಎಂದು ಆಗ್ರಹಿಸಿ ಜಾಗತಿಕ ಲಿಂಗಾಯತ ಮಹಾಸಭೆ, ರಾಷ್ಟ್ರೀಯ ಬಸವ ಸೇನೆ ಹಾಗೂ ಬಸವಪರ ಸಂಘಟನೆಗಳ ಮುಖಂಡರು ಜಿಲ್ಲಾಧಿಕಾರಿಗೆ ಶುಕ್ರವಾರ ಮನವಿ ಸಲ್ಲಿಸಿದರು. ಬಸವ ಪ್ರತಿಷ್ಠಾನದ ಅಧ್ಯಕ್ಷ ಬಸವರಾಜ ರೊಟ್ಟಿ ಮಾತನಾಡಿ, ‘ಅನುಭವಿ ಪತ್ರಕರ್ತ, ವೈಚಾರಿಕ ಚಿಂತಕ ಹಾಗೂ ಶರಣ ಸಾಹಿತಿ ವಿಶ್ವರಾಧ್ಯ ಅವರ ಮೇಲೆ ದುರುದ್ದೇಶದಿಂದ ದಾವಣಗೆರೆ ಜಿಲ್ಲೆಯ ಹೊನ್ನಾಳಿ ಪೊಲೀಸ್ …
Read More »ಸ್ಮಾರ್ಟ್ ಇಂಡಿಯಾ ಹ್ಯಾಕ್‌ಥಾನ್ ಫಿನಾಲೆಗೆ ಆಯ್ಕೆ
ಚಿಕ್ಕೋಡಿ: ನಿಪ್ಪಾಣಿ ವಿ.ಎಸ್.ಎಂ. ಸೋಮಶೇಖರ್ ಆರ್. ಕೋಠಿವಾಲೆ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಸಿದ್ಧಪಡಿಸಿದ ಎರಡು ಯೋಜನೆಗಳು ಸ್ಮಾರ್ಟ್ ಇಂಡಿಯಾ ಹ್ಯಾಕ್‌ಥಾನ್ 2020ರ ಗ್ರ್ಯಾಂಡ್ ಫಿನಾಲೆಗೆ ಆಯ್ಕೆಯಾಗಿವೆ. ಭಾರತ ಸರಕಾರ, ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಹಾಗೂ ಹೊಸ ದೆಹಲಿಯ ಎಐಸಿಟಿಇ ಸಂಯಕ್ತಾಶ್ರಯದಲ್ಲಿ ಹಮ್ಮಿಕೊಂಡಿರುವ ಸಸ ಸ ಸ ಸಸಾಫ್ಟ್‌ವೇರ್‌ನ ವಿಶ್ವದ ಅತಿ ದೊಡ್ಡ ಮುಕ್ತ ನಾವಿನ್ಯತೆ ಮಾದರಿ ಸ್ಪರ್ಧೆಯಲ್ಲಿ ವಿಎಸ್‌ಎಂಎಸರ್ ಆರ್‌ಕೆಐಟಿ ವಿದ್ಯಾರ್ಥಿಗಳು ಅತ್ಯುನ್ನತ ಸಾಧನೆಗೈದ್ದಾರೆ. ಪ್ರೊ| ಮಹಾದೇವ ಹರಕುಡೆ ಮಾರ್ಗದರ್ಶನದಲ್ಲಿ ಮೆಕ್ಯಾನಿಕಲ್ ವಿಭಾಗದ ವಿದ್ಯಾರ್ಥಿಗಳಾದ …
Read More »ಬೆಳಗಾವಿ: ಕೊರೋನಾ ಸೋಂಕಿತರ ಅಂತ್ಯಕ್ರಿಯೆ ವೇಳೆ ಕಣ್ಣೀರು ಹಾಕಿದ ಪಾಲಿಕೆ ಅಧಿಕಾರಿ!
ಬೆಳಗಾವಿ: ಕೊರೋನಾ ಸೋಂಕಿನಿಂದ ಮೃತಪಟ್ಟ ಇಬ್ಬರು ವ್ಯಕ್ತಿಗಳ ಮೃತದೇಹದ ಅಂತ್ಯಕ್ರಿಯೆ ಪ್ರಕ್ರಿಯೆ ವೇಳೆ ಬೆಳಗಾವಿ ಮಹಾನಗರ ಪಾಲಿಕೆಯ ಆರೋಗ್ಯಾಧಿಕಾರಿ ಡಾ. ಬಸವರಾಜ ದಬಾಡೆ ಕಣ್ಣೀರು ಹಾಕಿದ ಪ್ರಸಂಗ ಇಲ್ಲಿನ ಸದಾಶಿವ ನಗರದ ಸ್ಮಶಾನಭೂಮಿಯಲ್ಲಿ ಗುರುವಾರ ನಡೆದಿದೆ. ಯಾವ ಜನ್ಮದ ಋುಣವೂ ಇಲ್ಲದ ಮೃತರ ಅಂತ್ಯಕ್ರಿಯೆಯನ್ನು ನೆನಪಿಸಿಕೊಂಡು ಕಣ್ಣೀರು ಹಾಕಿದ್ದು, ಎಲ್ಲರ ಮನಕಲಕುವಂತಿದೆ. ಮೃತರ ಕುಟುಂಬಸ್ಥರು ಪಾಲಿಕೆ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಅಂತ್ಯಕ್ರಿಯೆ ಮಾಡುವಂತೆ ಮನವಿ ಮಾಡಿದ್ದರು. ಬೆಳಗಾವಿ: ಕೊರೋನಾ ವಾರಿಯರ್ಸ್‌ಗೂ …
Read More »ಕೊರೊನಾ ನಿಯಂತ್ರಣಕ್ಕೆ ಜಿಲ್ಲಾವಾರು ಬಿಡುಗಡೆಯಾದ ಹಣದ ಲೆಕ್ಕ ಕೊಟ್ಟ ಸರ್ಕಾರ
ಬೆಳಗಾವಿ: ಕೊರೊನಾ ನಿಯಂತ್ರಣಕ್ಕಾಗಿ ಜಿಲ್ಲಾವಾರು ಬಿಡುಗಡೆ ಮಾಡಲಾದ ಹಣದ ಲೆಕ್ಕವನ್ನು ಸರ್ಕಾರ ಇಂದು ಬಹಿರಂಗಪಡಿಸಿದೆ. ನ್ಯಾಯವಾದಿ ಸುರೇಂದ್ರ ಉಗಾರೆ ಕೊರೊನಾ ಸಂದರ್ಭದಲ್ಲಿ ಖರ್ಚಾದ ಹಣದ ಕುರಿತು ಮಾಹಿತಿ ಕೇಳಿದ್ದರು. ಕೊರೊನಾ ಸಾಮಗ್ರಿ ಖರೀದಿಯಲ್ಲಿ ಸಾವಿರಾರು ಕೋಟಿ ರೂಪಾಯಿ ಅವ್ಯವಹಾರ ನಡೆದಿದೆ ಎಂದು ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ಆರೋಪ ಮಾಡಿದ್ದವು. ಈ ಹಿನ್ನೆಲೆ ಸರ್ಕಾರ ಇಂದು ಜಿಲ್ಲಾವಾರು ಬಿಡುಗಡೆ ಮಾಡಲಾದ ಹಣದ ಲೆಕ್ಕ ಕೊಟ್ಟಿದೆ. ಇದುವರೆಗೆ ಸರ್ಕಾರದಿಂದ ಕೊರೊನಾ ನಿಯಂತ್ರಣಕ್ಕಾಗಿ ಎಲ್ಲಾ …
Read More »ಕೊರೊನಾ ಮಹಾಮಾರಿಗೆ ಬಲಿಯಾದ ವ್ಯಕ್ತಿಗಳ ಅಂತಿಮ ಸಂಸ್ಕಾರವನ್ನು ಅವರ ಧರ್ಮದ ವಿಧಿ ವಿಧಾನಗಳಂತೆ ನೆರೆವೇರಿಸಿದರು.
ಗೋಕಾಕ: ನಗರದ ಅಂಬಿಗೇರ ಗಲ್ಲಿಯ ನಿವೃತ ಮುಖ್ಯೋಪಾದ್ಯರೊಬ್ಬರು ಕೊರೊನಾ ಮಹಾಮಾರಿಗೆ ಗುರುವಾರ ಬಲಿಯಾಗಿದ್ದು ,ಅವರ ಅಂತ್ಯ ಸಂಸ್ಕಾರವನ್ನು ನಗರಸಭೆ ಸಿಬ್ಬಂದ್ದಿ ಮತ್ತು ಪಾಪ್ಯೂಲರ್ ಫ್ರಂಟ್ ಆಫ್ ಇಂಡಿಯಾ ಕಾರ್ಯಕರ್ತರು ನೆರೆವೇರಿಸಿದರು. ಕೊರೊನಾ ಮಹಾಮಾರಿಗೆ ಬಲಿಯಾದ ಮುಖ್ಯೋಪಾದ್ಯಯರ ಅಂತಿಮ ಸಂಸ್ಕಾರವನ್ನು ಅವರ ಧರ್ಮದ ವಿಧಿ ವಿಧಾನಗಳಂತೆ ನೆರೆವೇರಿಸಿದರು. ಪಿಏಫ್ಐ ಕಾರ್ಯಕರ್ತರು ಸ್ವಯಂ ಪ್ರೇರಣೆಯಿಂದ ಮುಖ್ಯೋಪಾದ್ಯಯವರ ಅಂತ್ಯ ಸಂಸ್ಕಾರ ನೆರೆವೇರಿಸಲು ನಗರಸಭೆ ಸಿಬ್ಬಂದ್ದಿಯೊಂದಿಗೆ ಮುಂದೆ ಬಂದು ಅಂತ್ಯ ಸಂಸ್ಕಾರ ಮಾಡಿರುವುದರಿಂದ ಪಿಎಫ್ಐ ಕಾರ್ಯಕರ್ತರು …
Read More »ಕೊವಾಕ್ಸಿನ್‌ನ ಕ್ಲಿನಿಕಲ್ ಟ್ರಯಲ್ ಬೆಳಗಾವಿ ಆಸ್ಪತ್ರೆಯಲ್ಲಿ ಆರಂಭ
ಬೆಳಗಾವಿ, ಜುಲೈ 30: ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಆಯ್ಕೆ ಮಾಡಿದ 12 ಕೇಂದ್ರಗಳಲ್ಲಿ ಒಂದಾದ ಬೆಳಗಾವಿ ಮೂಲದ ಜೀವನ್ ರೇಖಾ ಆಸ್ಪತ್ರೆಯಲ್ಲಿ ಬಿಬಿವಿ 152 ಕೋವಿಡ್ -19 ಲಸಿಕೆ ಅಥವಾ ಕೊವಾಕ್ಸಿನ್‌ನ ಮಾನವ ಕ್ಲಿನಿಕಲ್ ಪ್ರಯೋಗ ಪ್ರಾರಂಭವಾಗಿದೆ. ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಕೋವಿಡ್ ಲಸಿಕೆಯಾದ ಕೊವಾಕ್ಸಿನ್‌ನ ಕ್ಲಿನಿಕಲ್ ಪರೀಕ್ಷೆಗಳು ಈಗಾಗಲೇ ಏಮ್ಸ್ ಸೇರಿದಂತೆ 12 ಕೇಂದ್ರಗಳಲ್ಲಿ ಪ್ರಾರಂಭವಾಗಿವೆ. ಜೀವನ್ ರೇಖಾ ನಿರ್ದೇಶಕ ಟಿ.ಎನ್.ಐ.ಇ ಅವರೊಂದಿಗೆ ಮಾತನಾಡಿದ ಡಾ.ಅಮಿತ್ ಭಾಟೆ, …
Read More »