Breaking News

ರಾಜಕೀಯ

ಬಾಲಕಿಯನ್ನು ಅಪಹರಿಸಿ ಅತ್ಯಾಚಾರ; ಅಪರಾಧಿಗೆ 10 ವರ್ಷ ಕಠಿನ ಕಾರಾಗೃಹ ಶಿಕ್ಷೆ

ಮಂಗಳೂರು: ನಗರದ ಅತ್ತಾವರದ ವಸತಿಗೃಹವೊಂದರ ಬಳಿಯಿಂದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರವೆಸಗಿದ ಅಪರಾಧಿ ಬಸವರಾಜ್‌ ಅಲ್ಲಪ್ಪ ಮಡಿವಾಳರ್‌ಗೆ ಮಂಗಳೂರಿನ ನ್ಯಾಯಾಲಯ 10 ವರ್ಷ ಕಠಿನ ಕಾರಾಗೃಹ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. 2022ರ ಡಿ.13ರಂದು ಬಸವರಾಜ್‌ ಬಾಲಕಿಯನ್ನು ಪುಸಲಾಯಿಸಿ ಧರ್ಮಸ್ಥಳಕ್ಕೆ ಕರೆಯಿಸಿ ಅಲ್ಲಿಂದ ಬಸ್‌ನಲ್ಲಿ ಬಿಜಾಪುರಕ್ಕೆ ಕರೆದೊಯ್ದಿದ್ದ.ಅಲ್ಲಿಂದ ತಿರುಪತಿಗೆ ಕರೆದೊಯ್ದು ಡಾಬಾವೊಂದರಲ್ಲಿ ಕೆಲಸಕ್ಕೆ ಸೇರಿಸಿ ರೂಮ್‌ನಲ್ಲಿ ವಾಸವಿದ್ದ. ಈ ಸಂದರ್ಭ ಆಕೆಯ ಇಚ್ಛೆಗೆ ವಿರುದ್ಧವಾಗಿ ಹಲವು ಬಾರಿ ಅತ್ಯಾಚಾರ ನಡೆಸಿ ಜೀವ …

Read More »

ಏಪ್ರಿಲ್‌ 26ರಂದು ಮೈಸೂರು ಅರಮನೆ ವೀಕ್ಷಣೆಗೆ ಪ್ಲ್ಯಾನ್‌ ಮಾಡಿದ್ದೀರಾ? ಮತ ಹಾಕದೇ ಬಂದರೆ ನೋ ಎಂಟ್ರಿ!

2024: ಮತ ಹಾಕದೆ ಮೈಸೂರು ಅರಮನೆ ನೋಡಲು ಬಂದವರಿಗೆ ನೋ ಎಂಟ್ರಿ ಬೋರ್ಡ್‌ ಅನ್ನು ನೇತುಹಾಕಲಾಗುವುದು. ಏ. 26ರ ಮತದಾನದ ದಿನಕ್ಕೆ ಮಾತ್ರ ಈ ನಿರ್ಬಂಧ ಅನ್ವಯವಾಗಲಿದೆ. 14 ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಮತದಾರರಿಗೆ ಇದು ಅನ್ವಯವಾಗಲಿದೆ. ಮತ ಹಾಕದೆ ಅರಮನೆ ನೋಡಲು ಬಂದರೆ ಪ್ರವೇಶ ನಿರಾಕರಿಸಲು ಚಿಂತನೆ ನಡೆಸಲಾಗಿದೆ.ಇಂದು ಸಂಜೆಯೊಳಗೆ ಅಧಿಕೃತ ಆದೇಶ ಹೊರಬೀಳಲಿದೆ ಎಂದು ಮೈಸೂರು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಹೇಳಿದ್ದಾರೆ.

Read More »

ಕುಡಿಯುವ ನೀರಿಗಾಗಿ ಹಲ್ಲೆ ; ಐಪಿಎಸ್ ಅಧಿಕಾರಿ ಸೇರಿ 14 ಜನರ ಮೇಲೆ ಪ್ರಕರಣ ದಾಖಲು

ಬೆಳಗಾವಿ : ಅಥಣಿ ತಾಲೂಕಿನ ಐಗಳಿ ಗ್ರಾಮದಲ್ಲಿ ಸಾರ್ವಜನಿಕ ಬಾವಿಯ ಕುಡಿಯುವ ನೀರು ಬಳಕೆ ಮಾಡಿರುವ ಕುರಿತಂತೆ ಹಲ್ಲೆ, ಬೇದರಿಕೆಯ ಆರೋಪದ ಮೇಲೆ ಐಪಿಎಸ್ ಅಧಿಕಾರಿ ರವೀಂದ್ರ ಗಡಾದಿ ಸೇರಿದಂತೆ 14 ಜನರ ಮೇಲೆ ಐಗಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಐಗಳಿ ಗ್ರಾಮದ ಸೈದಪ್ಪಾ ಗಡಾದಿ ಕುಟುಂಬದವರು ಸಾರ್ವಜನಿಕರ ಬಾವಿಯ ನೀರನ್ನು ಬಳಕೆ ಮಾಡುತ್ತಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಐಪಿಎಸ್ ಅಧಿಕಾರಿ ರವೀಂದ್ರ ಗಡಾದಿ ಸೇರಿದಂತೆ 14 ಜನರು …

Read More »

ಕಾಂಗ್ರೆಸ್‌ ಚೊಂಬು ವರ್ಸಸ್‌ ಬಿಜೆಪಿ ಚಿಪ್ಪು ಕದನ

ಬೆಂಗಳೂರು: ಕಾಂಗ್ರೆಸಿನ “ಚೊಂಬು’ ಜಾಹೀರಾತಿಗೆ ವಿರುದ್ಧವಾಗಿ ಬಿಜೆಪಿ ಸಾಮಾಜಿಕ ಜಾಲತಾಣದಲ್ಲಿ “ಖಾಲಿ ಚಿಪ್ಪು’ ಅಭಿಯಾನ ಪ್ರಾರಂಭಿಸಿದ್ದು, ಜಾಹೀರಾತು ಸಮರ ಮುಂದುವರಿಸಿದೆ. “ಕನ್ನಡಿಗರ ಕೈಗೆ ಚಿಪ್ಪು ನೀಡಿದ ಕಾಂಗ್ರೆಸ್‌’ ಎಂಬ ಶೀರ್ಷಿಕೆಯೊಂದಿಗೆ ರಾಜ್ಯದಲ್ಲಿ ಕಾಂಗ್ರೆಸ್‌ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಜನರಿಗೆ ಮಾಡಿದೆ ಎನ್ನಲಾದ ಅನ್ಯಾಯವನ್ನು ಎಳೆಎಳೆಯಾಗಿ ಬಿಡಿಸಿಡಲಾಗಿದೆ.ಕಿಸಾನ್‌ ಸಮ್ಮಾನ್‌ ಯೋಜನೆಯಲ್ಲಿ 4,000 ರೂ. ಕಡಿತ ಮಾಡಿ ರೈತರಿಗೆ ಚಿಪ್ಪು, ದಲಿತರ 11,000 ಕೋಟಿ ರೂ. ದುರ್ಬಳಕೆ ಮಾಡಿ ತಳ ಸಮುದಾಯದ ಕೈಗೆ …

Read More »

ಇಂದು, ನಾಳೆ ಬೆಂಗಳೂರಿನಲ್ಲಿ ಅಮಿತ್‌ ಶಾ, ಯೋಗಿ ರೋಡ್‌ ಶೋ

ಬೆಂಗಳೂರು: ಮೊದಲನೇ ಹಂತದ ಚುನಾವಣೆಯ ಬಹಿರಂಗ ಪ್ರಚಾರ ಅಂತ್ಯಕ್ಕೆ ದಿನಗಣನೆ ಪ್ರಾರಂಭವಾಗಿದ್ದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಇಂದು ಮತ್ತು ನಾಳೆ ಬೆಂಗಳೂರಿನಲ್ಲಿ ಭರ್ಜರಿ ರೋಡ್‌ ಶೋ ನಡೆಸಲಿದ್ದಾರೆ. ಅಮಿತ್‌ ಶಾ ಅವರ ಕರ್ನಾಟಕ ಪ್ರವಾಸ ಒಂದು ದಿನ ಮೊಟಕುಗೊಂಡಿದ್ದು, ಮಂಗಳವಾರ ಸಂಜೆ ಬೆಂಗಳೂರಿಗೆ ಆಗಮಿಸಿ ಅಂದೇ ಕೊಚ್ಚಿಗೆ ತೆರಳಲಿದ್ದಾರೆ. ಪೂರ್ವ ನಿಯೋಜಿತ ಕಾರ್ಯಕ್ರಮಗಳ ಸರಣಿ ಹಿನ್ನೆಲೆಯಲ್ಲಿ ತುಮಕೂರಿನಲ್ಲಿ ನಡೆಯುವ ಹಿಂದುಳಿದ …

Read More »

ಕಲಬುರಗಿ: ಪಕ್ಷೇತರರಾಗಿ ಸ್ಪರ್ಧೆಗಿಳಿದ ದಂಪತಿ

ಕಲಬುರಗಿ: ಕಲಬುರಗಿ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಗಳಾಗಿ ಪತಿ ಹಾಗೂ ಪತ್ನಿ ಪಕ್ಷೇತರರಾಗಿ ಕಣದಲ್ಲಿದ್ದು, ವಿಭಿನ್ನ ವಿಚಾರಗಳನ್ನು ಹೇಳುತ್ತಾ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಕಲಬುರಗಿ ತಾಲ್ಲೂಕಿನ ಕೇರೂರ ಗ್ರಾಮದ ರಮೇಶ ಭೀಮಸಿಂಗ್ ಚವ್ಹಾಣ (39) ಹಾಗೂ ಅವರ ಪತ್ನಿ ಜ್ಯೋತಿ ರಮೇಶ ಚವ್ಹಾಣ (33) ಚುನಾವಣಾ ಕಣದಲ್ಲಿದ್ದಾರೆ.ನಾಮಪತ್ರ ವಾಪಸ್ ಪಡೆಯಲು ಸೋಮವಾರ ಕೊನೆಯ ದಿನವಾಗಿದ್ದರೂ ಇಬ್ಬರೂ ಕಣದಲ್ಲಿ ಉಳಿಯುವ ನಿರ್ಧಾರ ಮಾಡಿದ್ದಾರೆ. ‌   ಮಾಹಿತಿ ಹಕ್ಕು ಕಾರ್ಯಕರ್ತರಾಗಿರುವ ರಮೇಶ …

Read More »

ನೇಹಾ ಹತ್ಯೆ ಪ್ರಕರಣದ ತನಿಖೆ ಸಿಐಡಿಗೆ, 12 ದಿನದೊಳಗೆ ತನಿಖೆಯ ವರದಿ ಸಲ್ಲಿಸುವಂತೆ ಸೂಚನೆ : ಜಿ.ಪರಮೇಶ್ವರ್

ತುಮಕೂರು: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಕಾರ್ಪೋರೆಟರ್ ಪುತ್ರಿ‌ ನೇಹಾ ಹಿರೇಮಠ ಹತ್ಯೆ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿಂದು ಮಾತನಾಡಿದ ಅವರು, “ಸಿಐಡಿ ತಂಡ ಹುಬ್ಬಳ್ಳಿಗೆ ಹೋಗಿ ಸ್ಥಳೀಯ ಪೋಲೀಸರು ಈವರೆಗೂ ನಡೆಸಿರುವ ತನಿಖೆಯ ಮಾಹಿತಿಯನ್ನು ಸಂಗ್ರಹಿಸಲಿದ್ದಾರೆ.ಕೊಲೆಯ ಹಿಂದೆ ಇನ್ನು ನಾಲ್ವರು ಇದ್ದಾರೆ ಎಂದು ಯುವತಿಯ ತಂದೆ ಆರೋಪಿಸಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, 12 ದಿನದೊಳಗೆ ಪ್ರಕರಣದ ತನಿಖೆಯ ವರದಿ …

Read More »

ಹುಕ್ಕೇರಿ ಹಿರೇಮಠಕ್ಕೆ ರಾಹುಲ್ ಜಾರಕಿಹೊಳಿ ಭೇಟಿ

ಹುಕ್ಕೇರಿ: ಪಟ್ಟಣದ ಗುರುಶಾಂತೇಶ್ವರ ಸಂಸ್ಥಾನ ಹಿರೇಮಠಕ್ಕೆ ಸಚಿವ ಸತೀಶ ಜಾರಕಿಹೊಳಿ ಪುತ್ರ, ಕಾಂಗ್ರೆಸ್ ಯುವ ಮುಖಂಡ ರಾಹುಲ್ ಜಾರಕಿಹೊಳಿ ಭೇಟಿ ನೀಡಿ ಗುರುಶಾಂತೇಶ್ವರ ಗದ್ದುಗೆಗೆ ಪೂಜೆ ಸಲ್ಲಿಸಿ ಮಠಾಧಿಪತಿ ಚಂದ್ರಶೇಖರ ಸ್ವಾಮೀಜಿ ಆಶೀರ್ವಾದ ಪಡೆದರು. ಸಹೋದರಿ, ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಅವರಿಗೆ ಮತ ಚಲಾಯಿಸುವಂತೆ ಸಂತೆಯಲ್ಲಿ ಮತದಾರರಲ್ಲಿ ವಿನಂತಿಸಿದರು. ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಧುರೀಣ ರಿಷಭ ಪಾಟೀಲ್, ಶಾನೂಲ್ ತಹಸೀಲ್ದಾರ್, ಮಹೇಶ ಗುಮಚಿ, ವಿರೂಪಾಕ್ಷಿ ಮರೆನ್ನವರ, ಬಸವರಾಜ …

Read More »

ಬರಿದಾದ ಕೃಷ್ಣೆ ಒಡಲು: ನೀರಿನಿಂದ ಹೊರಬಿದ್ದ ಮೀನುಗಾರರ ಬದುಕು

ಬರಿದಾದ ಕೃಷ್ಣೆ ಒಡಲು: ನೀರಿನಿಂದ ಹೊರಬಿದ್ದ ಮೀನುಗಾರರ ಬದುಕು ಚಿಕ್ಕೋಡಿ: ಭೀಕರ ಬರದಿಂದ ಕೃಷ್ಣಾ ಹಾಗೂ ಅದರ ಉಪನದಿಗಳಲ್ಲಿ ನೀರಿನ ಪ್ರಮಾಣ ಕುಸಿದಿದೆ. ನದಿ ದಡದಲ್ಲಿ ಎಲ್ಲಿ ನೋಡಿದರೂ ಸತ್ತ ಮೀನುಗಳ ರಾಶಿ ಕಾಣುತ್ತದೆ. ಬರದಿಂದ ಜಲಚರಗಳ ಮಾರಣಹೋಮವೇ ಆಗಿದೆ. ಮೀನುಗಾರಿಕೆ ನೆಚ್ಚಿಕೊಂಡ ನದಿ ತೀರದ ಗ್ರಾಮಸ್ಥರ ಬದುಕಿಗೂ ಬರೆ ಬಿದ್ದಿದೆ. ಇನ್ನೊಂದೆಡೆ ಮೀನಿನ ಆಹಾರ ‍ಪ್ರಿಯರಿಗೆ ಕೊರತೆ ಉಂಟಾಗಿದೆ. ಚಿಕ್ಕೋಡಿ ಉಪವಿಭಾಗ ವ್ಯಾಪ್ತಿಯಲ್ಲಿ ಹರಿಯುವ ಕೃಷ್ಣಾ ಮಳೆಗಾಲದಲ್ಲಿ ಸಮುದ್ರದಂತೆ …

Read More »

ನೇಹಾ ಹಾಗೂ ಫಯಾಜ್ ಪ್ರೀತಿ ಮಾಡಿದ್ದು ಸತ್ಯ.! ಸಚಿವ ಆರ್.ಬಿ. ತಿಮ್ಮಾಪುರ

ಬಾಗಲಕೋಟೆ: ನೇಹಾ ಹಿರೇಮಠ ಹತ್ಯೆ ಪ್ರಕರಣ ಇಡೀ ರಾಜ್ಯವನ್ನು ಬೆಚ್ಚಿಬೀಳಿಸಿದ್ದು, ಸದ್ಯ ಈ ಪ್ರಕರಣ ಇದೀಗ ರಾಜಕೀಯ ತಿರುವು ಪಡೆದುಕೊಳ್ಳುತ್ತಿದೆ. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಬಾಗಲಕೋಟೆಯಲ್ಲಿ ಸಚಿವ ಆರ್.ಬಿ. ತಿಮ್ಮಾಪುರ ಮಾತನಾಡಿದ್ದು, ಇದೇ ರೀತಿ ನಮ್ಮ ಸಹೋದರಿಗೆ ಆದ್ರೆ ನಾವು ಸುಮ್ಮನಿರ್ತೀವಾ? ಅವನು ಯಾವನೇ ಆಗಿರಲಿ ಶಿಕ್ಷೆಯಾಗಬೇಕು ಎಂದರು. ಮಾತು ಮುಂದುವರಿಸಿದ ಸಚಿವರು, ನಮ್ಮ ನಾಡಿನಲ್ಲಿ ಕಾನೂನಿದೆ. ಇವರು ಅಧಿಕಾರದಲ್ಲಿ ಇದ್ದಾಗ ಇಂತ ಎಷ್ಟೋ ಪ್ರಕರಣ ಆಗಿವೆ. ಗುಜರಾತ್​ನಲ್ಲಿ ಒಂದೇ …

Read More »