ರಾಜಕೀಯ

ಉಪ್ಪಾರ ಸಮಾಜಮೀಸಲಾತಿ ಹೋರಾಟ ಕೇಂದ್ರ ಮಟ್ಟದಲ್ಲಿ ಒತ್ತಡ ಹಾಕುವ ಪ್ರಾಮಾಣಿಕಪ್ರಯತ್ನ:ಬಾಲಚಂದ್ರ ಜಾರಕಿಹೊಳಿ

ಮೂಡಲಗಿ: ಕಳೆದ ಹಲವಾರು ವರ್ಷಗಳಿಂದ ಭಗೀರಥ ಉಪ್ಪಾರ ಸಮಾಜವು ಮೀಸಲಾತಿಗಾಗಿ ಹೋರಾಟ ಮಾಡುತ್ತಿದ್ದು, ಈ ಸಮಾಜಕ್ಕೆ ಸಿಗಬೇಕಿರುವ ಸರ್ಕಾರದ ಮೀಸಲಾತಿಯನ್ನು ದೊರಕಿಸಿಕೊಡುವ ಸಂಬಂಧ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದರೇ ನಾವು ಕೂಡಾ ಕೇಂದ್ರ ಮಟ್ಟದಲ್ಲಿ ಒತ್ತಡ ಹಾಕುವ ಪ್ರಾಮಾಣಿಕವಾದ ಪ್ರಯತ್ನ ಮಾಡುವುದಾಗಿ ಶಾಸಕ ಹಾಗೂ ಬೆಮ್ಯುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು. ಸೋಮವಾರದಂದು ಪಟ್ಟಣದ ಹೊರವಲಯದಲ್ಲಿರುವ ಮೂಡಲಗಿ ಕ್ರಾಸ್‍ನಲ್ಲಿ ನೂತನವಾಗಿ ನಿರ್ಮಿಸಿದ ಮಹರ್ಷಿ ಭಗೀರಥ ಮೂರ್ತಿಯನ್ನು ಅನಾವರಣಗೊಳಿಸಿ …

Read More »

ಹುಲಿ ಅಂತೆ ಹುಲಿ, ʻಡಿಬಾಸ್ʼ ರಿಲೀಸ್‌ ಆಗುವಾಗ ಇವನೇ ಸೆಕ್ಯೂರಿಟಿ ಎಂದು ಎಸಿಪಿ ಚಂದನ್‌ರನ್ನು ಟ್ರೋಲ್‌ ಮಾಡಿದ ಫ್ಯಾನ್ಸ್‌!

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Murder Case) ಜೈಲುಪಾಲಾಗಿರುವನಟ ದರ್ಶನ್‌(Actor Darshan) ಹಾಗೂ ಆತನ ಗ್ಯಾಂಗ್‌ ನ್ಯಾಯಾಂಗ ಬಂಧನದಲ್ಲಿದೆ. ಪ್ರಕರಣದಲ್ಲಿ ದರ್ಶನ್ ಹೆಸರು ಕೇಳಿಬರುತ್ತಿದ್ದಕ್ಕೆ ಬೆಂಗಳೂರಿನ ಪಶ್ಚಿಮ ವಿಭಾಗದ ಡಿಸಿಪಿ ಎಸ್‌. ಗಿರೀಶ್ ಹಾಗೂ ವಿಜಯನಗರದ ಎಸಿಪಿ ಚಂದನ್‌ ಕುಮಾರ್‌ ಕಾರ್ಯಪ್ರವೃತ್ತರಾಗಿದ್ದರು. ಜೂನ್ 11ರಂದು ಬೆಳಗ್ಗೆ ಮೈಸೂರಿನಲ್ಲಿ ಎಸಿಪಿ ಚಂದನ್, ನಟ ದರ್ಶನ್‌ನನ್ನು ವಶಕ್ಕೆ ಪಡೆದರು.ಎಸಿಪಿ ಚಂದನ್ ಕಾರ್ಯದಕ್ಷತೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಆದರೆ ನಟ ದರ್ಶನ್ ಅಭಿಮಾನಿಗಳು …

Read More »

ಕೃಷ್ಣಾ ನದಿಯಲ್ಲಿ ವ್ಯಕ್ತಿ ಶವ ಪತ್ತೆ

ಬೆಳಗಾವಿ: ತಾಲ್ಲೂಕಿನ ಬಾವನ ಸವದತ್ತಿ ಗ್ರಾಮದ ಬಾಬುರಾವ್‌ ಸಂಜೀವ ಬಾಪಕರ (40) ಎಂಬ ವ್ಯಕ್ತಿ ಶವ, ಚಿಕ್ಕೋಡಿ ತಾಲ್ಲೂಕಿನ ಅಂಕಲಿ ಗ್ರಾಮದ ಬಳಿ ಕೃಷ್ಣಾ ನದಿಯಲ್ಲಿ ಶನಿವಾರ ಪತ್ತೆಯಾಗಿದೆ. ಬಾಬುರಾವ್‌ ಅವರು ಕಾಗವಾಡ ಸಕ್ಕರೆ ಕಾರ್ಖಾನೆಯಲ್ಲಿ ಲ್ಯಾಬ್ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದರು. ಗುರುವಾರ ಬೆಳಿಗ್ಗೆ ಮನೆಯಿಂದ ಹೋದವರು ಮತ್ತೆ ಬಂದಿರಲಿಲ್ಲ. ಅಂಕಲಿ ಸೇತುವೆ ಬಳಿ ಅವರ ಶವ ಪತ್ತೆಯಾಗಿದೆ. ಸಾವಿಗೆ ನಿಖರ ಕಾರಣ ಇನ್ನೂ ಗೊತ್ತಾಗಿಲ್ಲ ಎಂದು ಅಂಕಲಿ …

Read More »

ಕಟ್ಕೊಂಡ್ ಹೆಂಡ್ತಿಗೆ ಥಳಿಸಿದ ಪೊಲೀಸ್…?

ಬೆಳಗಾವಿ : ಈತ ಸಮಾಜದಲ್ಲಿ ನಡೆಯುವ ತಪ್ಪುಗಳನ್ನು ತಡೆದು ಬೆಂಡೆತ್ತುವ ಪವಿತ್ರ ಖಾಕಿ ತೊಟ್ಟ ಪೊಲೀಸಪ್ಪ. ಆದರೆ ಕಟ್ಕೊಂಡ ಹೆಂಡ್ತಿಯನ್ನು ಅಮಾನುಷವಾಗಿ ಹೊಡೆದು ಕ್ರೌರ್ಯ ಮೆರೆದಿದ್ದಾನೆ. ಕಳೆದ ಎಂಟು ವರ್ಷಗಳಿಂದಲೂ ಇತನ ಮನಸ್ಥಿತಿ ಇನ್ನೂ ಮುಂದುವರೆದಿದ್ದು ವಿಪರ್ಯಾಸ. ಪಿಎಸ್‌ಐನಿಂದ ಹೆಂಡತಿ ಮೇಲೆ ಮನಸೋ ಇಚ್ಛೆ ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ. ತೀವ್ರ ಹಲ್ಲೆಗೊಳಗಾದ ಪತ್ನಿ ಬಿಮ್ಸ್ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕಕ್ಕೆ ದಾಖಲು ಮಾಡಿದ್ದಾರೆ. ಪಿಎಸ್‌ಐ ಉದ್ದಪ್ಪ ಕಟ್ಟಿಕಾರ್ …

Read More »

ಕೆಎಸ್‌ಆರ್ ಟಿಸಿ ಬಸ್ ಅಡಿ ಸಿಲುಕಿ ಬೈಕ್ ಸವಾರ ಸಾವು

ತುಮಕೂರು: ನಗರದ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ವೃತ್ತದಲ್ಲಿ ಬೈಕ್ ಸವಾರ ಬಸ್ ಗೆ ಸಿಲುಕಿ ಮೃತಪಟ್ಟಿರುವ ಘಟನೆ ಸೋಮವಾರ ನಡೆದಿದೆ. ಮೃತ ವ್ಯಕ್ತಿ ತುಮಕೂರು ನಗರದ ಚೇತನ ಬಡಾವಣೆ ನಿವಾಸಿ ಚಂದ್ರಶೇಖರ್ (49) ಎಂದು ಗುರುತಿಸಲಾಗಿದೆ. ಚಂದ್ರಶೇಖರ್ ಅವರು ಬಟವಾಡಿ ಕಡೆಯಿಂದ ಮಹಾತ್ಮ ಗಾಂಧಿ ಸ್ಟೇಡಿಯಂ ಕಡೆಗೆ ಹೋಗುತ್ತಿದ್ದ ವೇಳೆ ಬಸ್‌ಗೆ ಡಿಕ್ಕಿಯಾಗಿ ಅದರಡಿ ಸಿಲುಕಿ ಗಂಭೀರ ಗಾಯಗೊಂಡಿದ್ದರು.   ಗಾಯಗೊಂಡ ಚಂದ್ರಶೇಖರ್‌ ರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಬಳಿಕ …

Read More »

ನಾನು ಸೋತಿದ್ದೇನೆ, ಸತ್ತಿಲ್ಲ.: ಫ್ಯಾನ್ಸ್‌ಗೆ ಅಕ್ಷಯ್‌ ತಿರುಗೇಟು

ಬಾಲಿವುಡ್‌ನ‌ ಖ್ಯಾತ ನಟ ಅಕ್ಷಯ್‌ ಕುಮಾರ್‌ಗೆ (Akshay Kumar) ಅರಗಿಸಿಕೊಳ್ಳಲಾಗದ ಸಂಕಟ ಎದುರಾಗಿದೆ. ಇತ್ತೀಚೆಗೆ ಬಿಡುಗಡೆಗೊಂಡ ಅವರ ಹಲವು ಸಿನಿಮಾಗಳು ಫ್ಲಾಪ್‌ ಆಗಿದ್ದು, ಸದ್ಯ ಅವರ ಅಭಿಮಾನಿಗಳು ಅಕ್ಷಯ್‌ಗೆ ಸ್ವಾಂತನ ಹೇಳಿ “ಕಂ ಬ್ಯಾಕ್‌’ ಮಾಡಲು ಪ್ರೇರೆಪಿಸುತ್ತಿದ್ದಾರೆ. ಆದರೆ, ಅಕ್ಷಯ್‌ ಮಾತ್ರ ಇದಕ್ಕೆ ಗರಂ ಆಗಿದ್ದು, ಫ್ಯಾನ್ಸ್‌ಗೆ, “ನಾನು ಸೋತಿದ್ದೇನೆ, ಸತ್ತಿಲ್ಲ’ ಎಂದು ತಿರುಗೇಟು ನೀಡಿದ್ದಾರೆ. ಸೋಲಿನ ಸುಳಿವಿನಲ್ಲಿ ಸಿಲುಕಿರುವ ಅಕ್ಷಯ್‌ಗೆ ಅಭಿಮಾನಿಗಳು ಸಂತಾಪ ಸೂಚಿಸಿದ್ದು, “ಸೋಲಿನ ಬಗ್ಗೆ ನಾನು …

Read More »

ಪಾದಯಾತ್ರೆಯಲ್ಲಿ ಜೆಡಿಎಸ್‌ ಕಾರ್ಯಕರ್ತೆ ಹೃದಾಯಘಾತದಿಂದ ಸಾವು

ರಾಮನಗರ: ಮುಡಾ ಹಗರಣ ವಿರೋಧಿಸಿ ಜೆಡಿಎಸ್- ಬಿಜೆಪಿ ನಡೆಸುತ್ತಿರುವ ಜಂಟಿ ಪಾದಯಾತ್ರೆಯಲ್ಲಿ ಜೆಡಿಎಸ್ ಕಾರ್ಯಕರ್ತೆಯೊಬ್ಬರು ಹೃದಾಯಘಾತದಿಂದ ಸಾವನ್ನಪ್ಪಿದ್ದಾರೆ. ಬೆಂಗಳೂರು ಮೂಲದ ಗೌರಮ್ಮ ಎಂಬಾಕೆ ಪಾದಯಾತ್ರೆ ವೇಳೆ ಮೃತಪಟ್ಟವರು. ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿದ್ದ ಮೃತರ ಅಂತಿಮ‌ ದರ್ಶನವನ್ನು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಪಡೆದುಕೊಂಡಿದ್ದಾರೆ.   ಇದೇ ವೇಳೆ ಮತ್ತೊಬ್ಬ ಪಾದಯಾತ್ರಿ ಸಹ ವಾಂತಿ ಮಾಡಿಕೊಂಡು ಆಸ್ವಸ್ಥರಾಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Read More »

ಸಿಬಿಐ ಬಂಧನ ಪ್ರಶ್ನಿಸಿದ್ದ ಕೇಜ್ರಿವಾಲ್‌ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್

ನವದೆಹಲಿ: ಅಬಕಾರಿ ನೀತಿ ಹಗರಣದ ಪ್ರಕರಣದಲ್ಲಿ ಸಿಬಿಐ(CBI) ತನ್ನನ್ನು ಬಂಧಿಸಿರುವುದನ್ನು ಪ್ರಶ್ನಿಸಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಸಲ್ಲಿಸಿರುವ ಅರ್ಜಿಯನ್ನು ಸೋಮವಾರ (ಆಗಸ್ಟ್‌ 05) ದೆಹಲಿ ಹೈಕೋರ್ಟ್‌ ವಜಾಗೊಳಿಸಿದೆ. ಹೈಕೋರ್ಟ್‌ ಜಸ್ಟೀಸ್‌ ನೀನಾ ಬನ್ಸಾಲ್‌ ಕೃಷ್ಣ ಅವರು ಈ ಆದೇಶವನ್ನು ನೀಡಿದ್ದು, ಈ ಸಂದರ್ಭದಲ್ಲಿ ಕೇಜ್ರಿವಾಲ್‌ ಜಾಮೀನು ಅರ್ಜಿಯನ್ನು ತಿರಸ್ಕರಿಸಿ, ಜಾಮೀನಿಗಾಗಿ ವಿಚಾರಣಾ ಕೋರ್ಟ್‌ ಮೆಟ್ಟಿಲೇರುವಂತೆ ತಿಳಿಸಿರುವುದಾಗಿ ವರದಿಯಾಗಿದೆ.   ಅಬಕಾರಿ ನೀತಿ ಹಗರಣದ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಮಾರ್ಚ್‌ 21ರಂದು …

Read More »

ಬಿಜೆಪಿ ವಿರುದ್ದ ಕಾನೂನು ಮತ್ತು ರಾಜಕೀಯ ಹೋರಾಟಕ್ಕೆ ಸಿದ್ದ: ಸಿಎಂ

ಬಿಜೆಪಿ ವಿರುದ್ದ ಕಾನೂನು ಮತ್ತು ರಾಜಕೀಯ ಹೋರಾಟಕ್ಕೆ ಸಿದ್ದ: ಸಿಎಂ ಬೆಳಗಾವಿ: ಮುಡಾ ಪ್ರಕರಣದಲ್ಲಿ ಬಿಜೆಪಿ ಮಾಡಿರುವ ಆರೋಪಕ್ಕೆ ಪ್ರತಿಯಾಗಿ ನಾವು ಕಾನೂನು ಮತ್ತು ರಾಜಕೀಯವಾಗಿ ಹೋರಾಟ ಮಾಡಲು ಸಿದ್ದರಾಗಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟವಾಗಿ ಹೇಳಿದರು. ಬೆಳಗಾವಿಯಲ್ಲಿ ಸೋಮವಾರ (ಆ.05) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾ ಪ್ರಕರಣ ವಿಷಯದಲ್ಲಿ ತಮ್ಮ ವಿರುದ್ಧದ ಶೋಕಾಸ್ ನೋಟೀಸ್ ವಾಪಸ್ ತೆಗೆದುಕೊಳ್ಳಬೇಕು. ಅಬ್ರಾಹಂ ಸಲ್ಲಿಸಿರುವ ಅರ್ಜಿಯನ್ನು ತಿರಸ್ಕರಿಸಬೇಕು ಎಂದು ಮನವಿ ಮಾಡಿದ್ದೇವೆ ಎಂದರು. …

Read More »

ಮನೆ ಸಂಪೂರ್ಣ ಹಾಳಾಗಿದ್ದರೆ ಪರಿಹಾರ: ಸಚಿವ ಮಹದೇವಪ್ಪ

ತಿ.ನರಸೀಪುರ: ಜಲಪ್ರವಾಹದಿಂದ ಮನೆ ಸಂಪೂರ್ಣವಾಗಿ ಹಾನಿಗೊಳಗಾಗಿದ್ದರೆ ಸಂತ್ರಸ್ತರಿಗೆ ಸೂರು ಕಲ್ಪಿಸಲು ರಾಜೀವ್‌ ಗಾಂಧಿ ವಸತಿ ನಿಗಮದಿಂದ 1.20 ಲಕ್ಷ ರೂ. ವೆಚ್ಚದ ವಸತಿ ಯೋಜನೆಯನ್ನು ಪರಿಹಾರವಾಗಿ ನೀಡಲಾಗುವುದು ಎಂದು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ| ಎಚ್‌.ಸಿ. ಮಹದೇವಪ್ಪ ಹೇಳಿದರು. ಅವರು ಪಟ್ಟಣದ ಹಳೇ ತಿರುಮಕೂಡಲು ಹಾಗೂ ತಾಲೂಕಿನ ಮಾಲಂಗಿ ಗ್ರಾಮದಲ್ಲಿ ನೆರೆಯಿಂದ ಹಾನಿಗೊಳಗಾದ ಪ್ರದೇಶಗಳನ್ನು ವಿಧಾನ ಪರಿಷತ್‌ ಸದಸ್ಯ ಡಾ| ಯತೀಂದ್ರ ಸಿದ್ದರಾಮಯ್ಯ ಅವರೊಂದಿಗೆ ಪರಿಶೀಲಿಸಿ ಮಾತನಾಡಿದರು. …

Read More »