Breaking News

ರಾಜಕೀಯ

ಕನ್ನಡ ಭಾಷೆಯನ್ನು ಉಳಿಸಬೇಕಾದ ಜನಪ್ರತಿನಿಧಿಗಳೇ ಭಾಷೆ ಮರೆತರೆ ಹೇಗೆ?

ಬೆಳಗಾವಿ : ಕನ್ನಡ ಭಾಷೆಯನ್ನು ಉಳಿಸಬೇಕಾದ ಜನಪ್ರತಿನಿಧಿಗಳೇ ಭಾಷೆ ಮರೆತರೆ ಹೇಗೆ ಎಂಬ ಪ್ರಶ್ನೆ ಮೂಡಿದೆ. ಜಾಹಿರಾತು ಫಲಕದಲ್ಲಿ ಕನ್ನಡವನ್ನು ಶೇಕಡಾ 70 ರಷ್ಟು ಬಳಸಬೇಕಾದ ಕಾನೂನು ಕೇವಲ ಜನಸಾಮಾನ್ಯರಿಗೆ ಮಾತ್ರ ಸೀಮಿತವಾ ಎಂಬ ಪ್ರಶ್ನೆ ಮೂಡಿದೆ. ಹೌದು ಸ್ವಾತಂತ್ರ್ಯ ದಿನದ ಅಂಗವಾಗಿ ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ರಾಜು ಸೇಠ್ ಅವರ ಹೆಸರಿನಲ್ಲಿ ಅಳವಡಿಸಿರುವ ಬ್ಯಾನರ್ ನಲ್ಲಿ ಕನ್ನಡವೇ ಮಾಯವಾಗಿದೆ. ಕೇವಲ ಆಂಗ್ಲ ಭಾಷೆಯಲ್ಲೇ ಅವರು ಶುಭಾಶಯ ತಿಳಿಸಿದ್ದು …

Read More »

ಬೆಳಗಾವಿಯಶ್ರೀಶೈಲ ಮಗದುಮ್ಮಗೆ ಮುಖ್ಯಮಂತ್ರಿ ಪದಕ

ಬೆಳಗಾವಿ : ಜಿಲ್ಲಾ ಪೊಲೀಸ್ ಗಣಕಯಂತ್ರ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀಶೈಲ ಮಗದುಮ್ಮ ಅವರಿಗೆ ಮುಖ್ಯಮಂತ್ರಿ ಪದಕ‌ ಲಭಿಸಿದೆ. ಉಳಿದಂತೆ ಬೆಳಗಾವಿಯ ಆಂತರಿಕಾ ಭದ್ರತಾ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರಶಾಂತ್ ಹಿರೇಮಠ, ಕಂಗ್ರಾಳಿಯ ಕೆಎಸ್ಆರ್ ಪಿ‌ ತರಬೇತಿ ಶಾಲೆಯ ದೇಮಪ್ಪಾ‌ ದಂಡೈನವರ, ಕಾಕತಿ ಪೊಲೀಸ್ ಠಾಣೆ ಸಿಬ್ಬಂದಿ ಸುಭಾಷ್ ಬಿ.ಎಲ್. ಬೆಳಗಾವಿ ಉತ್ತರ ಸಂಚಾರಿ ಪೊಲೀಸ್ ಠಾಣೆ ಸಿಬ್ಬಂದಿ‌ ಕಾಶಿನಾಥ ಈರಗಾರ, ಮಾಳಮಾರುತಿ ಪೊಲೀಸ್ ಠಾಣೆ ಸಹಾಯಕ ಸಬ್ ಇನ್ಸ್ಪೆಕ್ಟರ್ …

Read More »

ಬುರ್ಖಾ ಧರಿಸಿ ಭಿಕ್ಷೆ ಬೇಡುತ್ತಿದ್ದ ಯುವಕ; ಸ್ಥಳೀಯರಿಂದ ಬಿದ್ದ ಗೂಸಾ

ಚಿಕ್ಕಮಗಳೂರು: ಭಿಕ್ಷೆ ಬೇಡಲು ಬುರ್ಖಾ ಧರಿಸಿ ನಗರಕ್ಕೆ ಬಂದ ಯುವಕನಿಗೆ ಸ್ಥಳೀಯರು ಸಖತ್ ಗೂಸಾ ಕೊಟ್ಟಿರುವ ಘಟನೆ ಮಂಗಳವಾರ (ಆ.13) ನಡೆದಿದೆ. ಬೆರಳಿಗೆ ನೈಲ್ ಪಾಲಿಶ್ ಹಚ್ಚಿಕೊಂಡು ಶೃಂಗಾರ ಮಾಡಿಕೊಂಡು ಚಾಕು ಇಟ್ಟುಕೊಂಡ ಯುವಕನ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದಿದ್ದಾನೆ. ಬುರ್ಖಾ ತೊಟ್ಟು ನಗರದ ಮಲ್ಲಂದೂರು ರಸ್ತೆಯಲ್ಲಿ ಯುವಕನ ಓಡಾಟ ನಡೆಸುವಾಗ ಅನುಮಾನಗೊಂಡು ಜನರು ಹಿಡಿದಿದ್ದಾರೆ. ಹರೀಶ್ ಎಂಬ ಯುವಕನ ಕೈ ಬೆರಳು ಕಾಲು ನೋಡಿ ಅನುಮಾನಗೊಂಡ ಸ್ಥಳೀಯರು ಹಿಡಿದು ವಿಚಾರಿಸಿದ್ದಾರೆ. …

Read More »

ಸೆಪ್ಟಂಬರ್‌ನಲ್ಲಿ ಸಂಪುಟ ಸರ್ಜರಿ?

ಬೆಂಗಳೂರು: ಮುಡಾ ನಿವೇಶನ ಹಂಚಿಕೆ ಹಗರಣಕ್ಕೆ ಸಂಬಂಧಿಸಿ ಸಿಎಂ ವಿರುದ್ಧ ಅಭಿಯೋಜನೆಗೆ ರಾಜ್ಯಪಾಲರು ಅನುಮತಿ ನೀಡದೆ ಇದ್ದರೆ ಸೆಪ್ಟಂಬರ್‌ ತಿಂಗಳಿನಲ್ಲಿ ಸಚಿವ ಸಂಪುಟ ಸಣ್ಣ ಮಟ್ಟಿಗೆ ಪುನಾರಚನೆ ಆಗುವ ಸಾಧ್ಯತೆ ಇದೆ. ಈಗಿರುವ ಸಂಪುಟದಿಂದ ಐದಾರು ಸಚಿವರನ್ನು ಕೈಬಿಟ್ಟು, ಬೇರೆಯವರಿಗೆ ಅವಕಾಶ ಕಲ್ಪಿಸುವ ಬಗ್ಗೆ ಪಕ್ಷದಲ್ಲಿ ಗಂಭೀರ ಚಿಂತನೆ ನಡೆದಿದೆ. ಈಚೆಗೆ ಮುಡಾ ಹಗರಣ ವಿಷಯವಾಗಿ ವಿಪಕ್ಷಗಳ ಪಾದಯಾತ್ರೆ ಸಂದರ್ಭದಲ್ಲೇ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಸಚಿವರಿಗೆ ರಾಜ್ಯ ಉಸ್ತುವಾರಿ …

Read More »

ಆನ್‌ಲೈನ್‌ ವಂಚಕರಿಗೆ ಉದ್ಯಮ, ಉದ್ಯಮಿಗಳೇ ಟಾರ್ಗೆಟ್‌?

ಉಡುಪಿ: ಆನ್‌ಲೈನ್‌ ವಂಚಕರು ವಿವಿಧ ಮಾದರಿಯಲ್ಲಿ ಸಾರ್ವಜನಿಕರ ಹಣಕ್ಕೆ ಕನ್ನ ಹಾಕುತ್ತಿದ್ದು, ಭಿನ್ನ-ವಿಭಿನ್ನ ಪ್ರಕರಣಗಳು ವರದಿಯಾಗುತ್ತಿರುವ ನಡುವೆಯೇ ಈಗ ಉದ್ಯಮಿಗಳನ್ನು ಗುರಿಯಾಗಿಸಿ ಕೊಂಡು ವಂಚಕರು ಹೊಸ ಷಡ್ಯಂತ್ರ ಹೆಣೆಯುತ್ತಿದ್ದಾರೆ. ಉಡುಪಿಯ ಹೊಟೇಲ್‌ವೊಂದರ ಮಾಲಕರಿಗೆ “ನಾಳೆ ಮಧ್ಯಾಹ್ನ 12 ಗಂಟೆಗೆ ಇಂತಿಷ್ಟು ಪ್ಲೇಟ್‌ ತಿಂಡಿ ಬೇಕು’ ಎಂದು ಕರೆ ಮಾಡಿದ ವ್ಯಕ್ತಿಯೊಬ್ಬರು ದರ ವಿಚಾರಿಸಿದ್ದಾರೆ. ಬಳಿಕ ಮುಂಗಡ ಹಣ ಎಷ್ಟು ಪಾವತಿಸಬೇಕು ಎಂದು ಸೂಚಿಸಿದ ಮೇರೆಗೆ ಹೊಟೇಲ್‌ ಮಾಲಕರು 1 ಸಾವಿರ …

Read More »

ರಾಜ್‌ಪಾಲ್ ಯಾದವ್ ರ ಕೋಟ್ಯಂತರ ರೂ. ಮೌಲ್ಯದ ಆಸ್ತಿ ಜಪ್ತಿ

ಮುಂಬಯಿ: ಖ್ಯಾತ ಬಾಲಿವುಡ್ ಹಾಸ್ಯ ನಟ ರಾಜ್‌ಪಾಲ್ ಯಾದವ್ ಅವರ ತವರು ಪಟ್ಟಣವಾದ ಶಹಜಹಾನ್‌ಪುರದಲ್ಲಿರುವ ಕೋಟ್ಯಂತರ ರೂ. ಮೌಲ್ಯದ ಆಸ್ತಿಯನ್ನು ಬ್ಯಾಂಕ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಮುಂಬೈನ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ಅಧಿಕಾರಿಗಳು ಉತ್ತರ ಪ್ರದೇಶದ ಶಹಜಹಾನ್‌ಪುರಕ್ಕೆ ಆಗಮಿಸಿ ಭಾನುವಾರ ಆಸ್ತಿಯ ಮೇಲೆ ಬ್ಯಾನರ್ ಹಾಕಿದ್ದಾರೆ. ಆಸ್ತಿಯು ಮುಂಬೈನ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾಗೆ ಸೇರಿದ್ದು, ಯಾವುದೇ ರೀತಿಯ ಖರೀದಿ ಅಥವಾ ಮಾರಾಟವನ್ನು ಮಾಡಲು ಸಾಧ್ಯವಿಲ್ಲ ಎಂದು …

Read More »

ಅಭಿವೃದ್ಧಿ ಕಾರ್ಯಗಳು ನಿಂತಿಲ್ಲ : ಎಂ.ಬಿ.ಪಾಟೀಲ್

ವಿಜಯಪುರ: ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳು ನಮ್ಮ ಬದ್ಧತೆ. ಸರ್ಕಾರ ಇರುವವರೆಗೂ ಈ ಯೋಜನೆಗಳು ಇರುತ್ತವೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲ ಸೌಕರ್ಯ ಅಭಿವೃದ್ಧಿ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ.ಪಾಟೀಲ್ ತಿಳಿಸಿದರು. ಜಿಲ್ಲೆಯ ತಿಕೋಟಾ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ‘ಗ್ಯಾರಂಟಿ ಯೋಜನೆಗಳು ಯಾವ ಕಾಲಕ್ಕೂ ನಿಲ್ಲುವುದಿಲ್ಲ. ಅವುಗಳನ್ನು ಮುಂದುವರಿಸಿಕೊಂಡು ಹೋಗುತ್ತೇವೆ. ಆದಾಗ್ಯೂ, ಅಭಿವೃದ್ಧಿಗೆ ಹಣ ಏನು ಶೇಖರಣೆ ಮಾಡಬೇಕು, ಮಾಡುತ್ತೇವೆ’ ಎಂದರು. ನಮ್ಮ …

Read More »

ದ್ವಿಚಕ್ರ ವಾಹನಗಳು ಮುಖಾಮುಖಿ ಡಿಕ್ಕಿ; ಸ್ಥಳದಲ್ಲೇ ವ್ಯಕ್ತಿ ಸಾವು

ಪಾವಗಡ: ಆಂಧ್ರಪ್ರದೇಶದ ರೊದ್ದಂ ನಿಂದ ಕರ್ನಾಟಕದ ಕೊಡುಮಡುಗು ಗ್ರಾಮದ ಕಡೆಗೆ ಬರುತ್ತಿದ್ದ ಬೈಕ್ ಮತ್ತು ಕೊಡಮಡುಗು ಗ್ರಾಮದಿಂದ ಆಂಧ್ರ ಕಡೆ ಹೋಗುತ್ತಿದ್ದ ಬೈಕುಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲೇ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಆ.14ರ ಬುಧವಾರ ನಡೆದಿದೆ. ಆಂಧ್ರಪ್ರದೇಶದ ಪೆದ್ದಗುವ್ವಲಪಲ್ಲಿ ಗ್ರಾಮದ ರಾಮಾಂಜನೇಯಲು (56) ಮೃತಪಟ್ಟ ವ್ಯಕ್ತಿ. ಆ.14ರ ಬುಧವಾರ ಮಧ್ಯಾಹ್ನ ಸುಮಾರು 1 ಗಂಟೆಯ ಸಂದರ್ಭದಲ್ಲಿ ಪಾವಗಡ ತಾಲೂಕಿನ ಕೊಡುಮಡುಗು ಗ್ರಾಮದ ಹೊರವಲಯದ ಬೈರಪುರದ ಗೇಟ್ ಬಳಿ ಆಂಧ್ರ ಮತ್ತು …

Read More »

ದರ್ಶನ್‌ & ಗ್ಯಾಂಗ್‌ ನ್ಯಾಯಾಂಗ ಬಂಧನದಅವಧಿ ಆ.28ರವರೆಗೆ ವಿಸ್ತರಣೆ

ಬೆಂಗಳೂರು: ರೇಣುಕಾಸ್ವಾಮಿ ಪ್ರಕರಣದಲ್ಲಿ(Renukaswamy Case) ಸಂಬಂಧ ಜೈಲಿನಲ್ಲಿರುವ ನಟ ದರ್ಶನ್‌(Darshan) ಹಾಗೂ ಇತರೆ ಆರೋಪಿಗಳ ನ್ಯಾಯಾಂಗ ಬಂಧನದ ಅವಧಿಯನ್ನು ಬುಧವಾರ(ಆ.14ರಂದು) ಮತ್ತೆ ವಿಸ್ತರಣೆ ಮಾಡಲಾಗಿದೆ. ‌ಪರಪ್ಪನ ಅಗ್ರಹಾರ ಜೈಲಿನಿಂದ 13 ಮಂದಿ , ತುಮಕೂರು ಜೈಲಿನಿಂದ 4 ಆರೋಪಿಗಳನ್ನು ವಿಡಿಯೋ ಕಾನ್ಫರೆನ್ಸ್‌ ಮೂಲಕ ಕೋರ್ಟಿಗೆ ಹಾಜರುಪಡಿಸಲಾಗಿತ್ತು.   ಬೆಂಗಳೂರಿನ 24ನೇ ಎಸಿಎಂಎಂ ಕೋರ್ಟಿನಲ್ಲಿ ವಿಚಾರಣೆ ನಡೆಸಿ ನ್ಯಾಯಾಧೀಶ ವಿಶ್ವನಾಥ್‌ ಸಿ ಗೌಡರ್ ಅವರು ಆ.28ರವರೆಗೆ ಎಲ್ಲಾ ಆರೋಪಿಗಳ ನ್ಯಾಯಾಂಗ ಬಂಧನದ ಅವಧಿಯನ್ನು …

Read More »

ಕುರಿ ಸಾಕಾಣಿಕೆ ಘಟಕದಲ್ಲಿ ಶಾರ್ಟ್ ಸರ್ಕ್ಯೂಟ್. 78 ಕುರಿಗಳು ಸಜೀವ ದಹನ

ಮುಂಡಗೋಡ: ಪಟ್ಟಣದ ಹೊರವಲಯದ ತೋಟವೊಂದರಲ್ಲಿ ಕುರಿ ಸಾಕಾಣಿಕೆ ಘಟಕಕ್ಕೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ತಗುಲಿ 78 ಕುರಿಗಳು ಸಜೀವ ದಹನಗೊಂಡ ಘಟನೆ ಬುಧವಾರ(ಆಗಸ್ಟ್ 14) ನಡೆದಿದೆ. ಕಲಘಟಗಿ ರಸ್ತೆಯಲ್ಲಿರುವ ನಜೀರ ಅಹ್ಮದ ದರ್ಗಾವಾಲೆ ಎಂಬುವವರಿಗೆ ಸೇರಿದ ತೋಟ ಇದಾಗಿದ್ದು. ಇವರು ತಮ್ಮ ತೋಟದಲ್ಲಿ ಕುರಿ ಸಾಕಾಣಿಕೆ ಮಾಡಿದ್ದರು. ಬೆಳಿಗ್ಗೆಯಿಂದ ತೋಟದಲ್ಲಿ ಇದ್ದು ಮಧ್ಯಾಹ್ನದ ವೇಳೆ ಊಟಕ್ಕೆಂದು ಮನೆಯ ಕಡೆ ಹೋಗಿದ್ದಾರೆ. ಈ ವೇಳೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ …

Read More »