Breaking News

ರಾಜಕೀಯ

ನಿಜಾಮುದ್ದೀನ್ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದವರೆಲ್ಲರೂ ಕಡ್ಡಾಯವಾಗಿ ಪಾಸಣೆಗೆ ಒಳಗಾಗಬೇಕು:ಹೆಚ್.ಡಿ.ಕುಮಾರಸ್ವಾಮಿ

ಬೆಂಗಳೂರು,ಏ.2-ದೆಹಲಿಯ ನಿಜಾಮುದ್ದೀನ್ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದವರೆಲ್ಲರೂ ಕಡ್ಡಾಯವಾಗಿ ಸ್ವಯಂಪ್ರೇರಿತರಾಗಿ ವೈದ್ಯಕೀಯ ತಪಾಸಣೆಗೆ ಒಳಗಾಗಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ. ಜೀವಕ್ಕಿಂತ ಯಾವ ಧರ್ಮವೂ ದೊಡ್ಡದಲ್ಲ. ತಪಾಸಣೆ ಮಾಡಲು ಬಂದ ವೈದ್ಯಕೀಯ ಸಿಬ್ಬಂದಿಯ ಮೇಲೆ ಹಲ್ಲೆ ಮಾಡುವುದು, ತಿರುಗಿ ಬೀಳುವುದು ಖಂಡನೀಯ ಎಂದು ಟ್ವಿಟರ್ ನಲ್ಲಿ ತಿಳಿಸಿದ್ದಾರೆ.   ದೇಶದ ಸ್ವಾಸ್ಥ್ಯ ಮತ್ತು ಸಂವಿಧಾನಕ್ಕಿಂತ ಯಾರೂ ದೊಡ್ಡವರಲ್ಲ. ಬೆಂಗಳೂರಿನ ಹೆಗಡೆ‌ನಗರದ ಬಳಿ ಬರುವ ಸಾಧಿಕ್‌ನಗರದಲ್ಲಿ ಆಶಾ ಕಾರ್ಯಕರ್ತೆಯರು ತಪಾಸಣೆ ಮಾಡುವ …

Read More »

ದೆಹಲಿಯ ಜಮಾತ್ ಸಭೆಯಿಂದ ದೇಶಾದ್ಯಂತ ಕೊರೊನಾ ಹರಡಿದ್ದು ಹೇಗೆ?

ತಬ್ಲಿಘಿ ಸಭೆಗೆ ಹಾಜರಾಗಿದ್ದ ತಮಿಳುನಾಡಿನ 264 ಮಂದಿಗೆ ಕೊರೊನಾ ನವದೆಹಲಿ: ದೇಶದ ಒಟ್ಟು ಕೊರೊನಾ ಸೋಂಕಿತರಲ್ಲಿ ಶೇ.20 ರಷ್ಟು ಜನರು ತಬ್ಲಿಘಿ ಜಮಾತ್ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದರವೇ ಆಗಿರುವುದು ಆಂತಕಕ್ಕೆ ಕಾರಣವಾಗಿದೆ. ಅಷ್ಟೇ ಅಲ್ಲದೆ ಜಮಾತ್ ಸಭೆಯಲ್ಲಿ ಭಾಗವಹಿಸಿದ್ದ 19 ಮಂದಿ ವಿವಿಧ ರಾಜ್ಯಗಳಲ್ಲಿ ಸಾವನ್ನಪ್ಪಿದ್ದಾರೆ. ದೆಹಲಿಯ ನಿಜಾಮುದ್ದೀನ್ ಮಸೀದಿಯಲ್ಲಿ ಮಾರ್ಚ್ ಮೊದಲ ವಾರದಿಂದ ನಡೆದ ಸಭೆಯಲ್ಲಿ ಸುಮಾರು 12 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸಿ ಬಳಿಕ ಊರುಗಳಿಗೆ ತೆರಳಿದ್ದರು. …

Read More »

ನಾಳೆ ದೇಶವಾಸಿಗಳಿಗಾಗಿ ಮೋದಿ ವಿಡಿಯೋ ಸಂದೇಶ

ಬೆಂಗಳೂರು: ಪ್ರಧಾನಿ ಮೋದಿ ಅವರು ನಾಳೆ ದೇಶದ ಜನತೆಗಾಗಿ ವಿಡಿಯೋ ಸಂದೇಶವೊಂದನ್ನು ಹಂಚಿಕೊಳ್ಳುವುದಾಗಿ ಟ್ವೀಟ್ ಮಾಡಿದ್ದಾರೆ. ಕೊರೊನಾ ವೈರಸ್ ಭೀತಿಯಿಂದ ಈಗಾಗಲೇ ಮೋದಿ ಅವರು, ದೇಶವನ್ನು ಏಪ್ರಿಲ್ 14ರವರೆಗೆ ಲಾಕ್‍ಡೌನ್ ಮಾಡಿದ್ದಾರೆ. ಇಂದು ಕೂಡ ದೇಶದ ಎಲ್ಲಾ ರಾಜ್ಯಗಳ ಸಿಎಂಗಳ ಜೊತೆ ಮೋದಿ ಅವರು ವಿಡಿಯೋ ಕಾನ್ಫೆರೆನ್ಸ್ ಮಾಡಿದ್ದರು. ಇದಾದ ನಂತರ ಅವರು ಟ್ವೀಟ್ ಮಾಡಿದ್ದು, ವಿಡಿಯೋ ಸಂದೇಶ ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ. ಈ ವಿಚಾರವಾಗಿ ಟ್ವೀಟ್ ಮಾಡಿರುವ ಮೋದಿ …

Read More »

ರಾಜ್ಯದಲ್ಲಿ 312 ಸ್ಲೀಪರ್​ ಕೋಚ್ ರೈಲು‌ ಬೋಗಿಗಳನ್ನು ಐಸೋಲೇಷನ್ ವಾರ್ಡ್​ಗಳಾಗಿ ಪರಿವರ್ತನೆ

ಬೆಂಗಳೂರು : ಕೊರೊನಾ ಚಿಕಿತ್ಸೆಗೆ ಐಸೋಲೇಷನ್ ವಾರ್ಡ್​ಗಳ ಕೊರತೆ ನೀಗಿಸಲು ಆರೋಗ್ಯ ಇಲಾಖೆ ಜೊತೆ ರೈಲ್ವೆ ಇಲಾಖೆ ಕೈಜೋಡಿಸಿದ್ದು, ರಾಜ್ಯದಲ್ಲಿ 312 ಸ್ಲೀಪರ್​ ಕೋಚ್ ರೈಲು‌ ಬೋಗಿಗಳನ್ನು ಐಸೋಲೇಷನ್ ವಾರ್ಡ್​ಗಳಾಗಿ ಪರಿವರ್ತಿಸುವ ಕೆಲಸ ಆರಂಭಿಸಲಾಗಿದೆ. ಕೋವಿಡ್ -19 ಮಹಾಮಾರಿಗೆ ಸಿಲುಕಿದವರ ಚಿಕಿತ್ಸೆಗೆ ಅಗತ್ಯವಾದ ಐಸೋಲೇಷನ್ ಕೊರತೆ ನೀಗಿಸಲು ರೈಲ್ವೆ ಇಲಾಖೆ ಮುಂದಾಗಿದ್ದು ದೇಶಾದ್ಯಂತ 5 ಸಾವಿರ ಬೋಗಿಗಳನ್ನು ಐಸೋಲೇಷನ್ ವಾರ್ಡ್​ಗಳಾಗಿ ಪರಿವರ್ತಿಸಲಾಗುತ್ತಿದೆ. ಅದರ ಭಾಗವಾಗಿ ಕೊರೊನಾ ಸೋಂಕಿತರನ್ನು ಇರಿಸಲು ನೈರುತ್ಯ …

Read More »

ಹಲ್ಲೆಗೊಳಗಾದ ಆಶಾ ಕಾರ್ಯಕರ್ತೆಯನ್ನು ಭೇಟಿಮಾಡಿದ ಡಿಸಿಎಂ ಅಶ್ವತ್ಥಾರಾಯಣ……

ಬೆಂಗಳೂರು, ಏ.2-ಜನರ ಆರೋಗ್ಯದ ಪರಿಶೀಲನೆಗೆ ಹೋಗಿದ್ದ ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಉಪ ಮುಖ್ಯಮಂತ್ರಿ ಡಾ.ಸಿ.ಎ್.ಅಶ್ವತ್ಥಾರಾಯಣ ಅವರು ಪೊಲೀಸರಿಗೆ ಸೂಚಿಸಿದ್ದಾರೆ. ದೂರು ಸ್ವೀಕರಿಸದ ಪೊಲೀಸರ ವಿರುದ್ಧ ಕ್ರಮಕ್ಕೆ ಸೂಚನೆ ನೀಡಿದ್ದಾರೆ. ಹಲ್ಲೆಗೊಳಗಾದ ಆಶಾ ಕಾರ್ಯಕರ್ತೆ ಕೃಷ್ಣ ವೇಣಿ ಅವರನ್ನು ಹೆಗಡೆ ನಗರದ ಅವರ ಮನೆಯಲ್ಲಿ ಭೇಟಿ ಮಾಡಿ ಸಾಂತ್ವಾನ ಹೇಳಿದ ನಂತರ ಈ ಸೂಚನೆ ನೀಡಿದ್ದಾರೆ. ಆಶಾ ಕಾರ್ಯರ್ತೆಯರಿಗಾದ ನೋವು ಆಲಿಸಿದ ನಂತರ …

Read More »

10 ಲಕ್ಷಕ್ಕೂ ಅಧಿಕ ಜನಸಂಖ್ಯೆ ಇರುವ ಧಾರಾವಿ ಸ್ಲಂ ಮೇಲೆ ಕೊರೊನಾ ಕರಿನೆರಳು

ಮುಂಬೈ: ಸುಮಾರು 10 ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ, ಏಷ್ಯಾದ ಅತಿ ದೊಡ್ಡ ಸ್ಲಂ ಎನಿಸಿಕೊಂಡಿರುವ ಧಾರಾವಿಯಲ್ಲಿ ಎರಡನೇ ಕೊರೊನಾ ಸೋಂಕಿತ ಪ್ರಕರಣ ವರದಿಯಾಗಿದೆ. 52 ವರ್ಷದ ಬಿಎಂಸಿ(ಬೃಹನ್‍ಮುಂಬೈ ಮುನಿಸಿಪಲ್ ಕಾರ್ಪೋರೇಶನ್) ಸ್ಯಾನಿಟೈಸೇಶನ್ ಕೆಲಸಗಾರನಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ. ಈತ ವರ್ಲಿ ಪ್ರದೇಶದ ನಿವಾಸಿಯಾಗಿದ್ದು, ಇತ್ತೀಚೆಗೆ ಧಾರಾವಿಯಲ್ಲಿ ಕೆಲಸ ಮಾಡಲು ವರ್ಗಾಯಿಸಲಾಗಿತ್ತು. ವ್ಯಕ್ತಿಯಲ್ಲಿ ಕೊರೊನಾ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿದ್ದ ಹಿನ್ನೆಲೆ ಬಿಎಂಸಿ ಅಧಿಕಾರಿಗಳು ಆತನಿಗೆ ಪರೀಕ್ಷೆ ಮಾಡಿಸುವಂತೆ …

Read More »

ಹಸಿವಿನಿಂದ ಬಳಲುತಿದ್ದ ಮಂದಿಗೆ 4 ಟನ್ ಆಹಾರ ಸಾಮಗ್ರಿ ವಿತರಿಸಿದ ಕೌನ್ಸಿಲರ್

ಬೆಂಗಳೂರು: ಕೊರೊನಾ ವೈರಸ್ ಭೀತಿಯಿಂದ ದೇಶವೇ ಲಾಕ್‍ಡೌನ್ ಆಗಿದ್ದು, ಸರ್ಕಾರದ ಆದೇಶಕ್ಕೆ ಸ್ಪಂದಿಸಿ ಜನರು ಮನೆಯಲ್ಲಿ ಇದ್ದಾರೆ. ಆದರೆ ಹಸಿವಿನಿಂದ ಪರಿತಪಿಸುತ್ತಿದ್ದ ಬಡಾವಣೆ ಮಂದಿಗೆ ಕೌನ್ಸಿಲರ್ ನರಸಿಂಹ ಮೂರ್ತಿ ಸ್ಪಂದಿಸಿ ಮಾನವೀಯತೆಗೆ ಸಾಕ್ಷಿಯಾಗಿದ್ದಾರೆ. ಬೆಂಗಳೂರು ಹೊರವಲಯ ನೆಲಮಂಗಲದ ರಾಯನ್ ನಗರ ನಿವಾಸಿಗಳಿಗೆ ದಿನ ಬಳಕೆಯ ದಿನಸಿ ಪದಾರ್ಥಗಳನ್ನು ಕೌನ್ಸಿಲರ್ ನರಸಿಂಹ ಮೂರ್ತಿ ಅವರು ವಿತರಣೆ ಮಾಡಿದ್ದಾರೆ. ವಾರ್ಡಿನ ಪ್ರತಿ ಜನರಿಗೆ ದಿನ ಬಳಕೆಯ ದಿನಸಿ ಪದಾರ್ಥಗಳನ್ನು ಮನೆ ಮನೆಗೆ ತೆರಳಿ …

Read More »

ಬೆಳಗಿನಿಂದ ಮಧ್ಯಾಹ್ನದವರೆಗೆ ಕೊರೋನಾಗೆ 7 ರಾಜ್ಯಗಳಲ್ಲಿ 7 ಸಾವು..!

ನವದೆಹಲಿ/ಮುಂಬೈ, ಏ.2-ದೇಶದಲ್ಲಿ ಕೊರೊನಾ ವೈರಸ್ ಸೋಂಕಿನ ಸಾವಿನ ಪ್ರಕರಣಗಳು ಹೆಚ್ಚುತ್ತಲೇ ಇದೆ. ಇಂದು ಬೆಳಗಿನಿಂದ ಮಧಾಹ್ಯದವರೆಗೆ ಒಟ್ಟು ಏಳು ರಾಜ್ಯಗಳಲ್ಲಿ ಏಳು ಸಾವು ಸಂಭವಿಸಿದ್ದು, ಹೊಸ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಹರಿಯಾಣ, ಪಂಜಾಬ್, ಮಹಾರಾಷ್ಟ್ರ, ಗುಜರಾತ್, ಅರುಣಾಚಲ ಪ್ರದೇಶ, ಮಧ್ಯಪ್ರದೇಶ ಹಾಗೂ ರಾಜಸ್ತಾನ ರಾಜ್ಯಗಳಲ್ಲಿ ಈ ಸಾವುಗಳು ವರದಿಯಾಗಿವೆ. ಹರಿಯಾಣದಲ್ಲಿ ಪ್ರಥಮ ಕೋವಿಡ್-19 ಸಾವು ಸಂಭವಿಸಿದೆ. ಸಂಬಾಲ ಪ್ರದೇಶದ 67 ವರ್ಷದ ವೃದ್ದರೊಬ್ಬರನ್ನು ಹೆಮ್ಮಾರಿ ಬಲಿ ಪಡೆದಿದೆ. ಹರಿಯಾಣಗೆ ಹೊಂದಿಕೊಂಡಿರುವ …

Read More »

ಬೆಂಗಳೂರು :7, 8 ಮತ್ತು 9ನೇ ತರಗತಿಯ ವಾರ್ಷಿಕ ಪರೀಕ್ಷೆಗಳು ರದ್ದು..!

ಬೆಂಗಳೂರು : ಕೊರೊನಾ ಸೋಂಕಿನ ವೈರಸ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿ ಏಳು, ಎಂಟು ಮತ್ತು ಒಂಭತ್ತನೇ ತರಗತಿಯ ವಾರ್ಷಿಕ ಪರೀಕ್ಷೆಗಳನ್ನ ರದ್ದು ಮಾಡಲಾಗಿದ್ದು,ಈ ಮೂರು ವರ್ಗದ ಎಲ್ಲ ವಿದ್ಯಾರ್ಥಿಗಳನ್ನು ಉತ್ತೀರ್ಣ (ಪಾಸ್) ಮಾಡಲು ಶಿಕ್ಷಣ ಇಲಾಖೆ ನಿರ್ಧಾರ ಮಾಡಿದೆ. ‌ ಗುರುವಾರ ತಮ್ಮ ಫೇಸ್ ಬುಕ್ ಲೈವ್ ನಲ್ಲಿ ಈ ವಿಷಯವನ್ನು ಸ್ಪಷ್ಟಪಡಿಸಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ,‌ಎಸ್.ಸುರೇಶ್ ಕುಮಾರ್ ಈ ಹಿಂದೆ …

Read More »

ಮೋದಿ ಎರಡನೇ ಬಾರಿ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ವಿಡಿಯೋ ಕಾನ್ಸರೆನ್ಸ್ ಲಾಕ್‍ಡೌನ್ ಅನ್ನು ಗಂಭೀರವಾಗಿ ಪರಿಗಣಿಸಿ

ನವದೆಹಲಿ: ಕೊರೊನಾ ವೈರಸ್ ನಿಯಂತ್ರಿಸುವ ಸಲುವಾಗಿ ಪ್ರಧಾನಿ ಮೋದಿ ಎರಡನೇ ಬಾರಿ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ವಿಡಿಯೋ ಕಾನ್ಸರೆನ್ಸ್ ಮಾಡಿ ಮಾತನಾಡಿದ್ದು ಲಾಕ್‍ಡೌನ್ ಅನ್ನು ಗಂಭೀರವಾಗಿ ಪರಿಗಣಿಸಿ ಎಂದು ಸೂಚಿಸಿದ್ದಾರೆ. ಈ ಸಂದರ್ಭದಲ್ಲಿ ಏಪ್ರಿಲ್ 14ರ ನಂತರ ಲಾಕ್‍ಡೌನ್ ಇರುತ್ತಾ ಇಲ್ಲವೋ ಎನ್ನುವುದರ ಬಗ್ಗೆ ಸ್ಪಷ್ಟವಾಗಿ ಏನು ತಿಳಿಸಿಲ್ಲ. ಈ ವೇಳೆ ಮುಂದಿನ ವಾರವೂ ಕೊರೊನಾ ಪರೀಕ್ಷೆ, ಸೋಂಕಿತರ ಸಂಪರ್ಕಕ್ಕೆ ಬಂದವರನ್ನು ಕ್ವಾರಂಟೈನ್ ಮಾಡಬೇಕು. ಮೆಡಿಕಲ್ ಉತ್ಪನ್ನಗಳು ಯಾವುದೇ …

Read More »