ಕೇರಳದ ಪ್ರಸ್ತಾಪಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ – ಷರತ್ತುಗಳೊಂದಿಗೆ ಅನುಮತಿ ನೀಡಿದ ಕೇರಳ – ಕೆಂಪು ವಲಯದಲ್ಲಿ ಮೇ 3ರವರೆಗೆ ಲಾಕ್‍ಡೌನ್ ಮುಂದುವರಿಕೆ ತಿರುವನಂತಪುರಂ: ಮಹತ್ವದ ನಿರ್ಧಾರವೊಂದರಲ್ಲಿ ಕೇರಳ ಸರ್ಕಾರ ರಾಜ್ಯದಲ್ಲಿ ಹೋಟೆಲ್, ರೆಸ್ಟೋರೆಂಟ್‍ಗಳ ಓಪನ್‍ಗೆ ಅನುಮತಿ ನೀಡುವುದರ ಜೊತೆಗೆ ಬಸ್‍ಗಳ ಓಡಾಟಕ್ಕೂ ಲಾಕ್‍ಡೌನ್‍ನಿಂದ ವಿನಾಯಿತಿ ನೀಡಿದೆ. ಈ ಮೂಲಕ ನಾಳೆಯಿಂದ ಕೇರಳದ 14 ಜಿಲ್ಲೆಗಳಲ್ಲಿ ಜನ ಜೀವನ ಸಹಜ ಸ್ಥಿತಿಗೆ ಬರಲಿದೆ. 21 ದಿನಗಳ ಲಾಕ್‍ಡೌನ್ ಬಳಿಕ ವಿನಾಯ್ತಿ …
Read More »ಸರ್ಕಾರದ ಮುಂದಿನ ಆದೇಶದವರೆಗೂ ಖಾಸಗಿ ಶಾಲೆಗಳು ಶುಲ್ಕ ವಸೂಲಿ ಮಾಡುವಂತಿಲ್ಲ
ಬೆಂಗಳೂರು,ಏ.18- ಖಾಸಗಿ ಶಾಲೆಗಳಲ್ಲಿ 2020-21ನೇ ಸಾಲಿನ ದಾಖಲಾತಿ ಪ್ರಕ್ರಿಯೆ ಮತ್ತು ಶುಲ್ಕ ವಸೂಲಿ ಮಾಡುವುದನ್ನು ಮುಂದಿನ ಆದೇಶದವರೆಗೆ ಮುಂದೂಡುವಂತೆ ಸರ್ಕಾರ ಸುತ್ತೋಲೆ ಹೊರಡಿಸಿದೆ. 2019-20ನೇ ಸಾಲಿನಲ್ಲಿ ವ್ಯಾಸಂಗ ಮಾಡಿ ತೇರ್ಗಡೆಗೊಂಡು ಅದೇ ಶಾಲೆಯಲ್ಲಿ ಮುಂದಿನ ತರಗತಿಗೆ ದಾಖಲಾಗುವ ವಿದ್ಯಾರ್ಥಿಗಳಿಂದ ಖಾಸಗಿ ಶಾಲೆಗಳು ಆನ್‍ಲೈನ್ ಮೂಲಕ ಬೋಧನಾ ಶುಲ್ಕ ಪಡೆಯುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದ್ದು ಮುಂದಿನ ಆದೇಶದವರೆಗೆ ಯಾವುದೇ ಪ್ರಕ್ರಿಯೆ ನಡೆಸದಂತೆ ಸರ್ಕಾರ ಸುತ್ತೋಲೆ ಹೊರಡಿಸಿದೆ. ಖಾಸಗಿ ಶಾಲೆಗಳವರು ಆನ್‍ಲೈನ್ ಮೂಲಕ …
Read More »ಕೂಲಿ ಕಾರ್ಮಿಕರ ಮಗಳ ಹುಟ್ಟುಹಬ್ಬ ಆಚರಿಸಿದ ಪೊಲೀಸ್……..
ನವದೆಹಲಿ: ಹೆಮ್ಮಾರಿ ಕೊರೊನಾ ವೈರಸ್‍ನಿಂದಾಗಿ ಭಾರತ ಸೇರಿದಂತೆ ಅನೇಕ ದೇಶಗಳಲ್ಲಿ ಏಕಾಏಕಿ ಲಾಕ್‍ಡೌನ್ ಜಾರಿಗೆ ಬಂದಿದೆ. ಇಂತಹ ಸಮಯದಲ್ಲಿ ಕರ್ತವ್ಯದಲ್ಲಿದ್ದ ಪೊಲೀಸರಿಂದ ಅನೇಕ ಹೃದಯ ಸ್ಪರ್ಶಿಸು ಪ್ರಸಂಗಗಳು ನಡೆದಿವೆ. ಅಂತೆ ಪೊಲೀಸರ ಪುಟ್ಟ ಸಹಾಯದಿಂದ ಶನಿವಾರ ಕೂಲಿ ಕಾರ್ಮಿಕರ ನಾಲ್ಕು ವರ್ಷದ ಬಾಲಕಿಯೊಬ್ಬಳು ತನ್ನ ಜನ್ಮದಿನವನ್ನು ಆಚರಿಸಿಕೊಳ್ಳಲು ಸಾಧ್ಯವಾಯಿತು. ಫತೇಪುರಿ ಬೇರಿಯ ಪೊಲೀಸ್ ಠಾಣೆ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು …
Read More »ಕುಡಿತ ಬಿಟ್ಟು ಇತರರಿಗೂ ಕುಡಿಯಬೇಡಿ ಎನ್ನುತ್ತಿದ್ದಾರಂತೆ ಯಾರು ಗೊತ್ತಾ .ಇವರು..
ಚಿಕ್ಕೋಡಿ: ಮಾಜಿ ಸಿಎಂ ಸಿದ್ದರಾಮಯ್ಯನವರ ಭಾಷಣದ ವೇಳೆ ಕಂಠಪೂರ್ತಿ ಕುಡಿದು ಹೌದೋ ಹುಲಿಯಾ ಎಂದು ಕೂಗಿ ಖ್ಯಾತಿ ಗಳಿಸಿದ್ದ ಪೀರಪ್ಪ ಕಟ್ಟಿಮನಿ ಇದೀಗ ಲಾಕ್‌ಡೌನ್ ಹಿನ್ನೆಲೆ ತಾನೂ ಕುಡಿತ ಬಿಟ್ಟು ಇತರರಿಗೂ ಕುಡಿಯಬೇಡಿ ಎನ್ನುತ್ತಿದ್ದಾರಂತೆ. ಕುಡಿದು ಬಂದ್ರೆ ಕುಟುಂಬದಲ್ಲಿ ಜಗಳವಾಗುತ್ತೆ, ಬಡತನ ಬರುತ್ತೆ, ನಾನು ಬಿಟ್ಟಿದ್ದೀನಿ.. ನೀವೂ ಬಿಡಿ ಅಂತ ಪೀರಪ್ಪ ಹೇಳುತ್ತಿದ್ದಾರಂತೆ. ಅಲ್ಲದೇ, ಸೆಲ್ಫಿ ತೆಗೆದುಕೊಳ್ಳುವವರು ನನಗೆ ಹಣ ನೀಡುತ್ತಿದ್ದರು, ಅದಕ್ಕೆ ನಾನು ಕುಡಿಯುತ್ತಿದ್ದೆ ಅಂತ ಬೆಳಗಾವಿ ಜಿಲ್ಲೆ …
Read More »BIG-BREAKINGಸಾರ್ವಜನಿಕರ ಆಕ್ರೋಶಕ್ಕೆ ತಲೆಬಾಗಿದ ಸರ್ಕಾರ,ಬೈಕ್ ಸಂಚಾರ ಆದೇಶ ವಾಪಸ್,
ಬೆಂಗಳೂರು: ಏಪ್ರಿಲ್ 20ರ ನಂತರ ಬೈಕ್ ಸಂಚಾರಕ್ಕೆ ನೀಡಿದ್ದ ಅವಕಾಶವನ್ನು ಸರ್ಕಾರ ವಾಪಸ್ ತೆಗೆದುಕೊಂಡಿದೆ. ಸಾರ್ವಜನಿಕರ ಆಕ್ರೋಶಕ್ಕೆ ಸರ್ಕಾರ ಕೊನೆಗೂ ತಲೆಬಾಗಿದೆ. ಈ ಕುರಿತು ಅಧಿಕೃತ ಪ್ರಕಟನೆ ಹೊರಡಿಸಿರುವ ಸರ್ಕಾರ ತನ್ನ ನಿರ್ಧಾರವನ್ನು ವಿಮರ್ಶಿಸಿಕೊಂಡಿದೆ. ಜನಾಭಿಪ್ರಾಯದ ಹಿನ್ನೆಲೆಯಲ್ಲಿ, ಸರ್ಕಾರದ ಹಿರಿಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ, ಈ ಕೆಳಕಂಡ ನಿರ್ಣಯಗಳನ್ನು ಪುನರ್ ವಿಮರ್ಶೆ ಮಾಡಿ ಸರ್ಕಾರ ಈ ತೀರ್ಮಾನಗಳನ್ನು ತೆಗೆದುಕೊಳ್ಳಲಾಗಿದೆ. 1. ದ್ವಿ-ಚಕ್ರ ವಾಹನಗಳ (Two-Wheeler) ಮುಕ್ತ ಸಂಚಾರಕ್ಕೆ ಅವಕಾಶ ಕೊಡುತ್ತೇವೆಂಬ …
Read More »ಪುತ್ತೂರು ಮಹಾಲಿಂಗೇಶ್ವರನ ಸನ್ನಿಧಿಯಲ್ಲಿ 8 ಅಡಿ ಆಳದಿಂದ ಚಿಮ್ಮಿದ ಜಲಧಾರೆ- ಪವಾಡ ಎಂದ ಭಕ್ತರು
ಮಂಗಳೂರು: ದೇಶವೇ ಕೊರೊನಾ ಭೀತಿಯಿಂದ ಲಾಕ್‍ಡೌನ್ ಆಗಿದೆ. ಆದರೆ ಈ ನಡುವೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಮಹಾಲಿಂಗೇಶ್ವರ ಆವರಣದಲ್ಲಿ ಕೇವಲ 8 ಅಡಿಯಲ್ಲಿ ನೀರು ಸಿಕ್ಕಿ ಅಚ್ಚರಿ ಘಟನೆ ನಡೆದಿದೆ. ಪುತ್ತೂರು ಮಹಾಲಿಂಗೇಶ್ವರನ ಜಾತ್ರೆ ಅಂದ್ರೆ ಜಿಲ್ಲೆಯ ದೊಡ್ಡ ಜಾತ್ರೆ. ಆದರೆ ಈ ಬಾರಿ ಕೊರೊನಾ ಲಾಕ್‍ಡೌನ್‍ನಿಂದ ಭಕ್ತರಿಗೆ ಪ್ರವೇಶ ಇಲ್ಲದೆ ಶಾಸ್ತ್ರೋಕ್ತವಾಗಿ ಜಾತ್ರೆ ನಡೆಯುತ್ತಿದೆ. ಜಾತ್ರಾ ಸಂದರ್ಭದ ದೇಗುಲದ ಆವರಣದ ಅಯ್ಯಪ್ಪಸ್ವಾಮಿ ಗುಡಿ ಬಳಿ, ದೇವರ ಅವಭೃತ …
Read More »ಗ್ರೀನ್ ಝೋನ್‍ನಲ್ಲಿದ್ದರೂ ರಾಯಚೂರಿನ ಬಡಾವಣೆಗಳೆಲ್ಲ ಸೀಲ್‍ಡೌನ್
ರಾಯಚೂರು: ಕೊರೊನಾ ವೈರಸ್ ಸೋಂಕು ತಡೆಗಟ್ಟುವ ಹಿನ್ನೆಲೆ ರಾಯಚೂರು ಜಿಲ್ಲೆಯಾದ್ಯಂತ ಲಾಕ್‍ಡೌನ್ ಬಿಗಿಗೊಳಿಸಲಾಗಿದೆ. ಒಂದು ಬಡಾವಣೆಯಿಂದ ಇನ್ನೊಂದು ಬಡಾವಣೆಗೆ ಹೋಗದಂತೆ ಜಿಲ್ಲೆಯ ನಗರ, ಪಟ್ಟಣ ಪ್ರದೇಶಗಳಲ್ಲಿ ಒಟ್ಟು 4000 ಕಡೆ ಬ್ಯಾರಿಕೇಡ್ ಗಳನ್ನು ಅಳವಡಿಸಲಾಗಿದೆ. ಈ ಮೂಲಕ ಅನಾವಶ್ಯಕವಾಗಿ ಜನ ಒಂದೆಡೆಯಿಂದ ಇನ್ನೊಂದೆಡೆಗೆ ತಿರುಗಾಡದಂತೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಆಸ್ಪತ್ರೆಗಳಿಗೆ ಮತ್ತು ಸರ್ಕಾರಿ ಕೆಲಸಕ್ಕೆ ಹೋಗುವವರು ಪಾಸ್ ತೋರಿಸಿದಲ್ಲಿ ಮಾತ್ರ ಬಿಡಲಾಗುತ್ತಿದೆ. ಈಗಾಗಲೇ ಜಿಲ್ಲೆಯಲ್ಲಿ ಅನೇಕ ಮುನ್ನೆಚ್ಚರಿಕೆ ಕ್ರಮಗಳನ್ನು …
Read More »ಹುಬ್ಬಳ್ಳಿ ಮಂದಿಗೆ ಶುರುವಾಯ್ತು ಹೊಸ ಆತಂಕ..!
ಹುಬ್ಬಳ್ಳಿ : ಹುಬ್ಬಳ್ಳಿಯ ಮಂದಿಗೆ ಇಂದು ಆತಂಕ ಮತ್ತಷ್ಟು ಜಾಸ್ತಿಯಾಗಿದೆ. ಕಾರಣ ಹುಬ್ಬಳ್ಳಿಯ ವಿವಿಧ ಕಡೆ ರೋಗಿ ನಂಬರ್ 236 ಆಹಾರ ಧಾನ್ಯ ಕಿಟ್ ಹಂಚಿದ್ದ…! ಆತನಿಂದ ಸ್ಮಶಾನ ಕಾವಲುಗಾರನಾಗಿರೊನಿಗೋ ಸೋಂಕು ತಗುಲಿ ಇದೀಗ ರೋಗಿ ನಂಬರ್ 363. ಎಂದು ಗುರುತಿಸಲಾಗಿದೆ. ಆತನೊಂದಿಗೆ ಆಹಾರ ಧಾನ್ಯ ಹಂಚಿದ ಹಿನ್ನಲೆ ಇತನಿಗೂ ಕೊರೊನಾ ವಕ್ಕರಿಸಿದೆ. ಮಾಚ್9 27 ರಂದು ಹುಬ್ಬಳ್ಳಿಯ ಡಾಕಪ್ಪ ವೃತ್ತದಿಂದ ಕಾಳಮ್ಮನ ಅಗಸಿಯವರೆಗೆ ಆಹಾರ ದಾನ್ಯ ಹಂಚಿದ್ರು ಪುಣ್ಯಾತ್ಮರು…! …
Read More »ಏ. 20ರ ನಂತರ ದ್ವಿಚಕ್ರ ವಾಹನಕ್ಕೆ ರಿಲ್ಯಾಕ್ಸ್ ನೀಡಿದ್ದು ಸರಿಯಲ್ಲ: ಹೊರಟ್ಟಿ
ಹುಬ್ಬಳ್ಳಿ: ಲಾಕ್‍ಡೌನ್ ಹಿನ್ನೆಲೆಯಲ್ಲಿ ಏಪ್ರಿಲ್ 20ರ ನಂತರ ದ್ವಿಚಕ್ರ ವಾಹನ ಸವಾರರಿಗೆ ರಿಲಾಕ್ಸ್ ನೀಡಿದ್ದಕ್ಕೆ ವಿಧಾನ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ವಿರೋಧ ವ್ಯಕ್ತಪಡಿಸಿದ್ದಾರೆ. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಲ್ಲಿಯತನಕ ರಾಜ್ಯ ಸರ್ಕಾರ ಒಳ್ಳೆಯ ನಿರ್ಧಾರ ತೆಗೆದುಕೊಂಡಿತ್ತು. ಆದರೆ ಸದ್ಯ ರಾಜ್ಯ ಸರ್ಕಾರ ಲಾಕ್‍ಡೌನ್‍ನಲ್ಲಿ ವಿನಾಯಿತಿ ನೀಡಿದ್ದು, ನನಗೆ ಸರಿ ಅನ್ನಿಸುತ್ತಿಲ್ಲ ಎಂದರು. ಇಲ್ಲಿಯವರೆಗೆ ಗ್ರಾಮೀಣ ಭಾಗದಲ್ಲಿ ಕೊರೊನಾ ಸೋಂಕು ಇಲ್ಲ. ಆದರೆ ದ್ವಿಚಕ್ರ ವಾಹನ ಸವಾರರಿಗೆ ರಿಲ್ಯಾಕ್ಸ್ …
Read More »ಹುಬ್ಬಳ್ಳಿ:ಜಗದೀಶ್ ಶೆಟ್ಟರ್ ಪುತ್ರನಿಂದ ಆಹಾರ ಕಿಟ್ ವಿತರಣೆ……
ಹುಬ್ಬಳ್ಳಿ: ಕೊರೊನಾ ವೈರಸ್ ಲಾಕ್‍ಡೌನ್ ನಡುವೆ ಸಚಿವ ಜಗದೀಶ್ ಶೆಟ್ಟರ್ ಅವರ ಮಗ ಸರ್ಕಾರದ ಆಹಾರ ಕಿಟ್ ವಿತರಣೆ ಮಾಡಿರುವುದು ತೀವ್ರ ಚರ್ಚೆಗೆ ಎಡೆಮಾಡಿಕೊಟ್ಟಿದೆ. ಹೌದು, ಯಾವುದೇ ಚುನಾಯಿತ ಪ್ರತಿನಿಧಿ ಅಲ್ಲದಿದ್ದರು ಕೂಡ ಜಗದೀಶ್ ಶೆಟ್ಟರ್ ಅವರ ಪುತ್ರ ಸಂಕಲ್ಪ ಶೆಟ್ಟರ್ ಕಾರ್ಮಿಕ ಇಲಾಖೆಯ ವತಿಯಿಂದ ವಿತರಿಸಲಾಗುತ್ತಿರುವ ಆಹಾರ ಕಿಟ್ ವಿತರಣೆ ಮಾಡಿ ಫೇಸ್‍ಬುಕ್ ಪೋಸ್ಟ್ ಹಾಕಿರುವುದು ಟೀಕೆಗೆ ಗುರಿಯಾಗಿದೆ. ಅಲ್ಲದೇ ಯಾವುದೇ ಚುನಾಯಿತ ವ್ಯಕ್ತಿ ಆಗಿಲ್ಲದಿದ್ದರು ಕೂಡ ತಂದೆಯ …
Read More »
Laxmi News 24×7