ಟೀಂ ಇಂಡಿಯಾದ ಯುವ ಕ್ರಿಕೆಟಿಗ ರಿಂಕು ಸಿಂಗ್ (Rinku Singh) ಇತ್ತೀಚಿನ ದಿನಗಳಲ್ಲಿ ತಮ್ಮ ವೈಯಕ್ತಿಕ ಬದುಕಿನಿಂದ ಸುದ್ದಿಯಲ್ಲಿದ್ದಾರೆ. ಕೆಲವು ದಿನಗಳ ಹಿಂದೆ ಉತ್ತರ ಪ್ರದೇಶದ ಜೌನ್‌ಪುರದ ಮಚ್ಲಿಶಹರ್ ಲೋಕಸಭಾ ಕ್ಷೇತ್ರದ ಸಮಾಜವಾದಿ ಪಕ್ಷದ ಸಂಸದೆ ಪ್ರಿಯಾ ಸರೋಜ್ (Priya Saroj) ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಮುಂದಿನ ನವೆಂಬರ್ ತಿಂಗಳಲ್ಲಿ ರಿಂಕು ಹಾಗೂ ಪ್ರಿಯಾ ಅವರ ವಿವಾಹ ನಡೆಯಬೇಕಿತ್ತು. ಆದರೆ ರಿಂಕು ಅವರ ಬಿಡುವಿಲ್ಲದ ಕ್ರಿಕೆಟ್ ವೇಳಾಪಟ್ಟಿಯಿಂದಾಗಿ ವಿವಾಹ …
Read More »45 ಕೋಟಿ ಮೌಲ್ಯದ 4 ಸಾವಿರ ಕೆ.ಜಿ ಡ್ರಗ್ಸ್ ನಾಶ, ದಂಧೆಯಲ್ಲಿದ್ದ 200ಕ್ಕೂ ಹೆಚ್ಚು ವಿದೇಶಿಗರ ಗಡಿಪಾರು: ಗೃಹ ಸಚಿವ ಜಿ.ಪರಮೇಶ್ವರ್
ಬೆಂಗಳೂರು: ಕಳೆದೊಂದು ವರ್ಷದಲ್ಲಿ 4 ಸಾವಿರ ಕೆ.ಜಿ. ಗಾಂಜಾ ಸೇರಿದಂತೆ 45 ಕೋಟಿ ರೂ. ಮೌಲ್ಯದ ವಿವಿಧ ಬಗೆಯ ಮಾದಕ ವಸ್ತುಗಳನ್ನ ವಶಪಡಿಸಿಕೊಳ್ಳಲಾಗಿದೆ. ವಿದೇಶಿ ವಿದ್ಯಾರ್ಥಿಗಳು ಡ್ರಗ್ಸ್ ದಂಧೆಯಲ್ಲಿ ತೊಡಗುತ್ತಿದ್ದು, 200ಕ್ಕೂ ಹೆಚ್ಚು ವಿದೇಶಿಗರನ್ನು ಗಡಿಪಾರು ಮಾಡಲಾಗಿದೆ ಎಂದು ಗೃಹ ಸಚಿವ ಪರಮೇಶ್ವರ್ ತಿಳಿಸಿದರು. ಬೆಂಗಳೂರು ನಗರ ಪೊಲೀಸ್ ವತಿಯಿಂದ ನಗರದ ಕಂಠೀರವ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ‘ಅಂತಾರಾಷ್ಟ್ರೀಯ ಮಾದಕ ವ್ಯಸನ ಮತ್ತು ಅಕ್ರಮ ಕಳ್ಳ ಸಾಗಾಣಿಕೆ ವಿರೋಧಿ ದಿನಕ್ಕೆ ಚಾಲನೆ ನೀಡಿ …
Read More »4 ಹುಲಿಗಳ ಅಸಹಜ ಸಾವು
4 ಹುಲಿಗಳ ಅಸಹಜ ಸಾವು ಬೆಂಗಳೂರು/ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಮಹದೇಶ್ವರ ಬೆಟ್ಟದ ಅರಣ್ಯ ಪ್ರದೇಶದಲ್ಲಿ ಒಂದು ಹುಲಿ ಮತ್ತು ಮೂರು ಮರಿಗಳು ಸಾವನ್ನಪ್ಪಿವೆ. ಹಲಿ ಮತ್ತು ಮರಿಗಳ ಈ ಅಸಹಜ ಸಾವಿನ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಅರಣ್ಯ ಸಚಿವ ಈಶ್ವರ್ ಖಂಡ್ರೆ, ಪಿಸಿಸಿಎಫ್ ನೇತೃತ್ವದ ತಂಡದ ತನಿಖೆಗೆ ಆದೇಶ ನೀಡಿದ್ದಾರೆ. ಈ ಸಂಬಂಧ ಅಪರ ಮುಖ್ಯ ಕಾರ್ಯದರ್ಶಿ ಮತ್ತು ಮುಖ್ಯ ವನ್ಯಜೀವಿ ಪರಿಪಾಲಕರಿಗೆ ಲಿಖಿತ ಸೂಚನೆ ನೀಡಿರುವ ಸಚಿವರು, ಕಾನನದಲ್ಲಿ 4 …
Read More »ಗರ್ಭಿಣಿಯರಿಗೆ ಉಡಿ ತುಂಬಿ, ಆರತಿ ಬೆಳಗಿದ ಧಾರವಾಡ ಜಿಲ್ಲಾಧಿಕಾರಿ ದಿವ್ಯ ಪ್ರಭು…
ಗರ್ಭಿಣಿಯರಿಗೆ ಉಡಿ ತುಂಬಿ, ಆರತಿ ಬೆಳಗಿದ ಧಾರವಾಡ ಜಿಲ್ಲಾಧಿಕಾರಿ ದಿವ್ಯ ಪ್ರಭು…. ಪೋಷಣ ಅಭಿಯಾನದ ಸಮುದಾಯ ಆಧಾರಿತ ಚಟುವಟಿಕೆ ಪ್ರಯುಕ್ತ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಆರೋಗ್ಯ ಇಲಾಖೆ ವತಿಯಿಂದ ರಾಜೀವಗಾಂಧಿ ನಗರದ ಸಮುದಾಯ ಭವನದಲ್ಲಿ ಪೌಷ್ಟಿಕ ಆಹಾರ ಪದಾರ್ಥಗಳ ಪ್ರದರ್ಶನ ಮತ್ತು ಗರ್ಭಿಣಿಯರಿಗೆ ಉಡಿ ತುಂಬುವ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಭಾಗಿಯಾದ ಡಿಸಿಯವರು ಗರ್ಭಿಣಿ ಮಹಿಳೆಯರಿಗೆ ಉಡಿತುಂಬಿ ಶುಭ …
Read More »ಮಾದಕ ವಸ್ತು ಮುಕ್ತ ಸಮಾಜ ನಿರ್ಮಿಸಲು ಕೈಜೋಡಿಸಿ; ಶಶಿಧರ ಕುರೇರ್
ಮಾದಕ ವಸ್ತು ಮುಕ್ತ ಸಮಾಜ ನಿರ್ಮಿಸಲು ಕೈಜೋಡಿಸಿ; ಶಶಿಧರ ಕುರೇರ್ ಇಂದು ಇಂಟರ್’ನ್ಯಾಷನಲ್ ಡ್ರಗ್ ಅಬ್ಯೂಸ್ ಡೇ ಹಿನ್ನೆಲೆ ಬಾಗಲಕೋಟೆ ಜಿಲ್ಲೆಯಾದ್ಯಂತ ಪ್ರತಿಜ್ಞಾ ವಿಧಿ ಬೋಧನೆ ಮಾಡಲಾಯಿತು. ಇಂದು ಬಾಗಲಕೋಟೆ ಜಿಲ್ಲೆಯಾದ್ಯಂತ ವಿಶ್ವ ಮಾದಕ ವಸ್ತು ವಿರೋಧಿ ದಿನದ ಹಿನ್ನೆಲೆ ಜಿಲ್ಲೆಯ ಒಟ್ಟು 4 ಲಕ್ಷ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧನೆ ಮಾಡಲಾಯಿತು. ಈ ವೇಳೆ 1600 ಪೊಲೀಸ್, ಶಿಕ್ಷಣ ಇಲಾಖೆ, ಅರೋಗ್ಯ ಇಲಾಖೆ ಸಿಬ್ಬಂದಿ ಪ್ರತಿಜ್ಞಾ …
Read More »ಬಿರುಗಾಳಿಗೆ ಹಾರಿಹೋದ ಶಾಲೆಯ ಮೇಲ್ಚಾವಣಿ
ಕಾರವಾರ(ಉತ್ತರ ಕನ್ನಡ): ಜೋಯಿಡಾ ತಾಲೂಕಿನಲ್ಲಿ ಬುಧವಾರ ಬಿರುಗಾಳಿ ಸಹಿತ ಮಳೆ ಸುರಿಯಿತು. ಅಖೇತಿ ಗ್ರಾಮ ಪಂಚಾಯತಿ ಪ್ರದೇಶದ ಕರಂಬಳನಲ್ಲಿರುವ ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆಯ ಕಟ್ಟಡದ ಮೇಲ್ಛಾವಣಿ (ಶೀಟ್) ಹಾರಿಹೋಗಿದೆ. 1ರಿಂದ 5ನೇ ತರಗತಿಯವರೆಗಿನ ಶಾಲೆ ಇದಾಗಿದ್ದು, ರಜೆ ನೀಡಿದ್ದರಿಂದ ಸಂಭಾವ್ಯ ಅನಾಹುತ ತಪ್ಪಿದೆ. ಸಾಮಾನ್ಯವಾಗಿ ಶಾಲಾ ಸಮಯದಲ್ಲಿ ಶಾಲೆಯ ಹೊರಗೆ ಮತ್ತು ಅಂಗಳದಲ್ಲಿ ವಿದ್ಯಾರ್ಥಿಗಳ ಜನಸಂದಣಿ ಇರುತ್ತದೆ. ಪಕ್ಕದಲ್ಲೇ ಅಂಗನವಾಡಿ ಕೇಂದ್ರವೂ ಇದೆ. ಭಾರೀ ಮಳೆಯಿಂದಾಗಿ ಜಿಲ್ಲಾಡಳಿತ ಮಂಗಳವಾರ ರಾತ್ರಿಯೇ …
Read More »ವೃದ್ಧಾಶ್ರಮದಲ್ಲಿ ಆತ್ಮಹತ್ಯೆಗೆ ಶರಣಾದ ದಂಪತಿ
ಬೆಂಗಳೂರು: ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ದಂಪತಿ ವೃದ್ದಾಶ್ರಮದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದಲ್ಲಿ ಮಂಗಳವಾರ ಬೆಳಗ್ಗೆ ಬೆಳಕಿಗೆ ಬಂದಿದೆ. ಕೃಷ್ಣಮೂರ್ತಿ (81) ಹಾಗೂ ಇವರ ಪತ್ನಿ ರಾಧಾ (74) ಆತ್ಮಹತ್ಯೆಗೆ ಶರಣಾದವರು. ತಲಘಟ್ಟಪುರ ಠಾಣೆ ಪೊಲೀಸರು ಅಸ್ವಾಭಾವಿಕ ಸಾವಿನಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.ವಿವರ: ಪುತ್ರ ವಿಜಯ್ ಮನೆಯಲ್ಲಿ ಮೊದಲು ವೃದ್ಧ ದಂಪತಿ ವಾಸವಿದ್ದರು. ಸೊಸೆ ಮಾಡುವ ಅಡುಗೆ ಇಷ್ಟವಿಲ್ಲ ಎಂದು ಆಗಾಗ್ಗೆ ಗಲಾಟೆ ನಡೆಯುತ್ತಿತ್ತು. ಈ ಕುರಿತು ಮಗನ ಬಳಿ ದೂರು …
Read More »ಅಂಜನಾದ್ರಿಯ ದೇವಸ್ಥಾನದ ಹುಂಡಿಯಲ್ಲಿ ಥಾಯ್ಲೆಂಡ್, ಅಮೆರಿಕದ ಕರೆನ್ಸಿ
ಗಂಗಾವತಿ: ತಾಲೂಕಿನ ಪ್ರಮುಖ ಧಾರ್ಮಿಕ ತಾಣವಾಗಿರುವ ಚಿಕ್ಕರಾಂಪೂರದ ಬಳಿ ಇರುವ ಅಂಜನಾದ್ರಿಯ ದೇಗುಲದಲ್ಲಿ ಇರಿಸಲಾಗಿದ್ದ ಕಾಣಿಕೆ ಪೆಟ್ಟಿಗೆಗಳನ್ನು ಬುಧವಾರ ಎಣಿಕೆ ಮಾಡಲಾಗಿದ್ದು, ಥಾಯ್ಲೆಂಡಿನ 20 ಬಾತ್ ಮತ್ತು ಅಮೆರಿಕದ ಒಂದು ಡಾಲರ್ ಕರೆನ್ಸಿ ಪತ್ತೆಯಾಗಿವೆ. ಅಂಜನಾದ್ರಿಯ ಹನುಮಪ್ಪನ ಸನ್ನಿಧಾನದಲ್ಲಿ ಇರಿಸುವ ಕಾಣಿಕೆ ಹುಂಡಿ ಎಣಿಕೆ ಮಾಡಿದ ಪ್ರತಿ ಬಾರಿ ವಿದೇಶಿ ನೋಟು, ನಾಣ್ಯಗಳು ಪತ್ತೆಯಾಗುವುದು ಸಹಜವಾಗಿ ಆಂಜನೇಯನ ಭಕ್ತರು ಸಪ್ತ ಸಾಗರದಾಚೆಗೂ ಹರಡಿರುವುದು ಖಚಿತವಾಗುತ್ತಿದೆ. 63.10 ಲಕ್ಷ ರೂಪಾಯಿ ನಗದು ಸಂಗ್ರಹ: ಈ …
Read More »ಜಾನಪದ ಕಲೆಯ ಮೂಲಕ ಶ್ರೀ ಕೃಷ್ಣ ಪಾರಿಜಾತ ಬಯಲಾಟ
ಮೂಡಲಗಿ(ಕೌಜಲಗಿ): ಜಾನಪದ ಕಲೆಯ ಮೂಲಕ ಶ್ರೀ ಕೃಷ್ಣ ಪಾರಿಜಾತ ಬಯಲಾಟವನ್ನು ಜನಪ್ರಿಯಗೊಳಿಸಿದ ಕೌಜಲಗಿ ನಿಂಗಮ್ಮ, ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ಪ್ರೊ. ಕೆ.ಜಿ ಕುಂದನಗಾರ ಮತ್ತು ಕೌಜಲಗಿಯನ್ನು ಕಟ್ಟುವಲ್ಲಿ ಪ್ರರಿಶ್ರಮ ಮಾಡಿದ ಅಂದಿನ ಕೆ.ಎಲ್,ಇ ಸಂಸ್ಥೆಯ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಬಿ.ಜಿ ದೇಸಾಯಿ ಇಂತಹ ಅತಿರಥ ಮಹಾರಥರಿಗೆ ಜನ್ಮ ನೀಡಿದ ಕೌಜಲಗಿ ಗ್ರಾಮದಲ್ಲಿ ಜನರು ದೈವ ಭಕ್ತಿಯ ಪರಂಪರೆಯನ್ನು ಕೂಡಾ ಹೊಂದಿದವರಾಗಿದ್ದು ಯಲ್ಲಮ್ಮದೇವಿ ದೇವಸ್ಥಾನ ಸೇರಿದಂತೆ ಹಲವಾರು …
Read More »ಹಾಲು ಉತ್ಪಾದಕರ ಸಂಘಗಳ ಸದಸ್ಯರನ್ನು ಸೇರಿಸಿ ನಂದಿನಿ ಸೊಸೈಟಿ ಆರಂಭಿಸಿರುವುದಕ್ಕೆ ಬೆಮುಲ್ ಅಧ್ಯಕ್ಷ , ಶಾಸಕ ಬಾಲಚಂದ್ರ ಜಾರಕಿಹೊಳಿ ಹರ್ಷ
ಹಾಲು ಉತ್ಪಾದಕರ ಸಂಘಗಳ ಸದಸ್ಯರನ್ನು ಸೇರಿಸಿ ನಂದಿನಿ ಸೊಸೈಟಿ ಆರಂಭಿಸಿರುವುದಕ್ಕೆ ಬೆಮುಲ್ ಅಧ್ಯಕ್ಷ , ಶಾಸಕ ಬಾಲಚಂದ್ರ ಜಾರಕಿಹೊಳಿ ಹರ್ಷ ರೈತರ ಕಲ್ಯಾಣಕ್ಕಾಗಿ ಕೆಎಂಎಫ್ ನಿಂದ ಹಲವಾರು ಯೋಜನೆಗಳ ಜಾರಿ, ಅವುಗಳ ಸದ್ಭಳಕೆಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಕರೆ ರಾಮದುರ್ಗ – ತಾಲ್ಲೂಕಿನಲ್ಲಿರುವ ಎಲ್ಲ ಹಾಲು ಉತ್ಪಾದಕರ ಸಹಕಾರ ಸಂಘಗಳನ್ನು ಸೇರಿಸಿ ರೈತರ ಆರ್ಥಿಕ ಅಭಿವೃದ್ಧಿಗೆ ನಂದಿನಿ ಅರ್ಬನ್ ಸೊಸೈಟಿಯನ್ನು ಸ್ಥಾಪಿಸಿರುವುದು ಶ್ಲಾಘನೀಯವಾಗಿದೆ. ರೈತರ ಸಹಕಾರದೊಂದಿಗೆ ಸಂಸ್ಥೆಯು ಉತ್ತರೊತ್ತರವಾಗಿ ಬೆಳೆದು …
Read More »
Laxmi News 24×7